All posts by nagaraj11081993

ಖೈಬರ್ ಪಖ್ತುಂಖ್ವಾದಲ್ಲಿ ಭಾರಿ ಉಗ್ರ ದಾಳಿ: ಪಾಕಿಸ್ತಾನದ 18 ಮಂದಿ ಭದ್ರತಾ ಸಿಬ್ಬಂದಿ ಸಾವು – Kannada News | 18 Pakistan Security Personnel Killed in Coordinated TTP Terror Attacks in Khyber Pakhtunkhwa

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಇಸ್ಲಾಮಾಬಾದ್, ಮೇ 15: ಪಾಕಿಸ್ತಾನದ (Pakistan) ವಾಯವ್ಯ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದಲ್ಲಿ (Khyber Pakhtunkhwa) ಉಗ್ರರು ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ 18 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ನಿಷೇಧಿತ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಉಗ್ರರು ಸೇನಾ ಶಿಬಿರಗಳು ಮತ್ತು ಪೊಲೀಸ್ ಚೌಕಿಗಳನ್ನು ಗುರಿಯಾಗಿಸಿಕೊಂಡು ಈ ಭೀಕರ ದಾಳಿ ನಡೆಸಿದ್ದಾರೆ.

ಮುಖ್ಯಾಂಶಗಳು

  • ಬಜೌರ್ ಜಿಲ್ಲೆಯ ಸೇನಾ ಶಿಬಿರದ ಮೇಲೆ ಆತ್ಮಹತ್ಯಾ ದಾಳಿ.
  • ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ 9 ಉಗ್ರರ ಸಾವು.
  • ಪ್ರಾಂತ್ಯದ ಇತರ ಭಾಗಗಳಲ್ಲಿ ನಡೆದ ದಾಳಿಗಳಲ್ಲಿ ನಾಲ್ವರು ಪೊಲೀಸರ ಸಾವು.

ಘಟನೆಯ ವಿವರ

ಪಾಕಿಸ್ತಾನದ ಬಜೌರ್ ಜಿಲ್ಲೆಯ ದಮಂಗಿ ಸ್ಕೌಟ್ಸ್ ಕ್ಯಾಂಪ್‌ನ ಮುಖ್ಯ ದ್ವಾರದ ಬಳಿ ಉಗ್ರನೊಬ್ಬ ಆತ್ಮಹತ್ಯಾ ಸ್ಫೋಟ ನಡೆಸುವ ಮೂಲಕ ದಾಳಿಯನ್ನು ಆರಂಭಿಸಿದ್ದಾನೆ. ಸ್ಫೋಟದ ಬೆನ್ನಲ್ಲೇ ಸುಮಾರು 20ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಉಗ್ರರು ಶಿಬಿರಕ್ಕೆ ನುಗ್ಗಿ ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ. ಈ ಗುಂಡಿನ ಕಾಳಗದಲ್ಲಿ 14 ಸಿಬ್ಬಂದಿ ಹತರಾಗಿದ್ದಾರೆ. ಇದೇ ವೇಳೆ ಐನಾಯಿ ಕಿಲೆ ಮತ್ತು ಮಾಮಂಡ್ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಘಟನಾ ಸ್ಥಳವನ್ನು ಸೇನೆಯು ಸುತ್ತುವರೆದಿದೆ. ಅಡಗಿಕೊಂಡಿರುವ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಪಾಕಿಸ್ತಾನದಲ್ಲಿ ಆಗಾಗ್ಗೆ ನಡೆಯುತ್ತಿರುವ ಈ ದಾಳಿಗಳು ಅಲ್ಲಿನ ಭದ್ರತಾ ಲೋಪಗಳನ್ನು ಬಹಿರಂಗಪಡಿಸಿವೆ. ಆಗಾಗ್ಗೆ ಸಂಭವಿಸುವ ಸ್ಫೋಟಗಳಿಂದಾಗಿ ಸೇನೆ ಮತ್ತು ನಾಗರಿಕರು ತೀವ್ರ ಆತಂಕದಲ್ಲಿ ದಿನಕಳೆಯುವಂತಾಗಿದೆ.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ಕಳೆದ ಮಂಗಳವಾರವಷ್ಟೇ ಖೈಬರ್ ಪಖ್ತುಂಖ್ವಾದ ನೌರಂಗ್ ಬಜಾರ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಉಗ್ರರ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಘಟನಾ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hantavirus Cases: ಮನುಷ್ಯರಿಂದ ಮನುಷ್ಯರಿಗೆ ಹರಡುವ ‘ಆಂಡಿಸ್ ವೈರಸ್’ ಸೋಂಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ! – Kannada News | WHO Warns of Andes Virus Spread on MV Hondius: Hantavirus Transmits Human to Human

ಜಿನಿವಾ, ಮೇ.15: ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ MV Hondius ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಹಂಟಾವೈರಸ್ ಸೋಂಕು ಈಗ ಹೊಸ ರೂಪ ಪಡೆದುಕೊಂಡಿದೆ. ಸೋಂಕಿತರಲ್ಲಿ ಎಂಟು ಮಂದಿಗೆ ‘ಆಂಡಿಸ್ ವೈರಸ್’ ತಗುಲಿರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ಹಂಟಾವೈರಸ್‌ನ ಅತ್ಯಂತ ಅಪಾಯಕಾರಿ ತಳಿಯಾಗಿದ್ದು, ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯ ಹೊಂದಿದೆ.

ಏಪ್ರಿಲ್ 1 ರಂದು ಅರ್ಜೆಂಟೀನಾದಿಂದ ಹೊರಟಿದ್ದ ಈ ಹಡಗಿನಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರಿಗೆ ಆಂಡಿಸ್ ವೈರಸ್ ಇರುವುದು ದೃಢಪಟ್ಟಿದ್ದರೆ, ಮತ್ತೊಬ್ಬರ ಸಾವು ಕೂಡ ಇದೇ ಸೋಂಕಿನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಎಂಟು ಮಂದಿಯಲ್ಲಿ ಸೋಂಕು ಖಚಿತವಾಗಿದ್ದು, ಇಬ್ಬರಲ್ಲಿ ಸೋಂಕಿನ ಲಕ್ಷಣಗಳು ಹೆಚ್ಚಿದೆ ಎಂದು ಹೇಳಲಾಗಿದೆ. ಇನ್ನು ಈ ಸೋಂಕಿಗೆ ಸಂಬಂಧಿಸಿದಂತೆ ಅಮೆರಿಕದ ಪ್ರಯಾಣಿಕರೊಬ್ಬರಿಗೆ ಈ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಇದೀಗ ಆರೋಗ್ಯ ಇಲಾಖೆ ನೀಡಿದ ವರದಿಯಲ್ಲಿ ಹಲವು ಗೊಂದಲಗಳು ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

ಸಾಮಾನ್ಯವಾಗಿ ಹಂಟಾವೈರಸ್ ಸೋಂಕು ಇಲಿಗಳ ಮೂತ್ರ, ಮಲ ಮತ್ತು ಜೊಲ್ಲಿನ ಮೂಲಕ ಹರಡುತ್ತದೆ. ಆದರೆ ಆಂಡಿಸ್ ವೈರಸ್ ಮನುಷ್ಯರ ನಡುವಿನ ನಿಕಟ ಸಂಪರ್ಕದಿಂದಲೂ ಹರಡಬಲ್ಲದು. ತನಿಖೆಯ ಪ್ರಕಾರ, ಮೊದಲು ಸೋಂಕಿಗೆ ಒಳಗಾದ ಪ್ರಯಾಣಿಕರು ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಪ್ರವಾಸ ಮಾಡುವಾಗ ಸೋಂಕಿತ ಇಲಿಗಳ ಸಂಪರ್ಕಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಮ್ಮಿ ಆಟಗಾರರಿಗೆ ದೊಡ್ಡ ಶಾಕ್! ಗೇಮ್ಸ್‌ಕ್ರಾಫ್ಟ್‌ನಿಂದ 526 ಕೋಟಿ ರೂ. ವಂಚನೆ? ಇಡಿಯಿಂದ ಮೂವರು ಬಿಗ್ ಬಾಸ್‌ಗಳ ಬಂಧನ

ವಿಶ್ವ ಆರೋಗ್ಯ ಸಂಸ್ಥೆಯು ಈ ಸೋಂಕಿನ ಅಪಾಯದ ಮಟ್ಟವನ್ನು ಹಡಗಿನಲ್ಲಿದ್ದವರಿಗೆ ‘ಮಧ್ಯಮ’ (Moderate) ಮತ್ತು ಉಳಿದ ಜಗತ್ತಿಗೆ ‘ಕಡಿಮೆ’ (Low) ಎಂದು ವರ್ಗೀಕರಿಸಿದೆ. ಹಡಗು ಈಗ ನೆದರ್ಲ್ಯಾಂಡ್ಸ್‌ನತ್ತ ಸಾಗುತ್ತಿದ್ದು, ಸಂಪೂರ್ಣವಾಗಿ ಸೋಂಕುಮುಕ್ತಗೊಳಿಸುವ (Disinfection) ಪ್ರಕ್ರಿಯೆ ನಡೆಯಲಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:10 am, Fri, 15 May 26

Source link

ಪ್ರಧಾನಿ ಮೋದಿ ಪಂಚರಾಷ್ಟ್ರಗಳ ಪ್ರವಾಸ: ಯುದ್ಧದ ಭೀತಿಯ ನಡುವೆ ಭಾರತದ ಬಲಿಷ್ಠ ರಾಜತಾಂತ್ರಿಕ ನಡೆ! – Kannada News | PM Modi’s 5 Nation Tour: UAE Visit and India Nordic Summit to Boost Global Ties

ಪ್ರಧಾನಿ ಮೋದಿ ಪಂಚರಾಷ್ಟ್ರಗಳ ಪ್ರವಾಸ ಇಂದಿನಿಂದ ಆರಂಭ

ನವದೆಹಲಿ, ಮೇ 15: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದಿನಿಂದ ಐದು ದೇಶಗಳ ಐತಿಹಾಸಿಕ ರಾಜತಾಂತ್ರಿಕ ಪ್ರವಾಸವನ್ನು ಆರಂಭಿಸಲಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಮೋದಿಯ ಈ ಭೇಟಿ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ರವಾಸದ ಮೊದಲ ಹಂತವಾಗಿ ಇಂದು ಯುಎಇಗೆ (UAE) ಭೇಟಿ ನೀಡಲಿರುವ ಅವರು, ನಂತರ ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ತೆರಳಲಿದ್ದಾರೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ ಅವರಿಂದ ಯುಎಇ ಮತ್ತು ನಾಲ್ಕು ಯುರೋಪ್ ರಾಷ್ಟ್ರಗಳ ಐತಿಹಾಸಿಕ ಪ್ರವಾಸ.
  •  ನಾರ್ವೆಯಲ್ಲಿ ನಡೆಯಲಿರುವ ಮೂರನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ.
  • ಇಂಧನ ಭದ್ರತೆ, ರಕ್ಷಣೆ ಮತ್ತು ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಆದ್ಯತೆ.

ಯುಎಇ ಭೇಟಿ, ಯಾವುದರ ಕುರಿತು ಚರ್ಚೆ?

ಇಂದು ಯುಎಇ ತಲುಪಲಿರುವ ಮೋದಿ, ಯುಎಇಯ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲಿದ್ದಾರೆ. ಇತ್ತೀಚೆಗೆ ಫುಜೈರಾದ ಪೆಟ್ರೋಲಿಯಂ ಸಂಕೀರ್ಣದ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯರು ಗಾಯಗೊಂಡಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದಿದೆ. ಯುಎಇ ಒಪೆಕ್‌ನಿಂದ (OPEC) ಹೊರಬಂದಿರುವ ಹಿನ್ನೆಲೆಯಲ್ಲಿ, ಭಾರತಕ್ಕೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ.

ಯುರೋಪ್ ರಾಷ್ಟ್ರಗಳ ಪ್ರವಾಸದ ಮುಖ್ಯಾಂಶಗಳು

  • ನೆದರ್ಲ್ಯಾಂಡ್ಸ್ (ಮೇ 15-17): ಪ್ರಧಾನಿ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿನ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ (FTA) ಬಗ್ಗೆ ಚರ್ಚೆ ನಡೆಯಲಿದೆ.
  • ಸ್ವೀಡನ್ (ಮೇ 17): ಗೋಥೆನ್‌ಬರ್ಗ್‌ನಲ್ಲಿ ಸ್ವೀಡನ್ ಪ್ರಧಾನಿಯವರೊಂದಿಗೆ ವ್ಯಾಪಾರ, ಹಸಿರು ತಂತ್ರಜ್ಞಾನ ಮತ್ತು ಎಐ (AI) ಕುರಿತು ಮೋದಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ‘ಯುರೋಪಿಯನ್ ರೌಂಡ್‌ಟೇಬಲ್ ಫಾರ್ ಇಂಡಸ್ಟ್ರಿ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
  • ನಾರ್ವೆ (ಮೇ 18-19): ಕಳೆದ ನಾಲ್ಕು ದಶಕಗಳಲ್ಲಿ ನಾರ್ವೆಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಓಸ್ಲೋದಲ್ಲಿ ನಡೆಯಲಿರುವ 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಬ್ಲೂ ಎಕಾನಮಿ (ಸಮುದ್ರ ಚಟುವಟಿಕೆಗಳ ಕುರಿತ ಆರ್ಥಿಕತೆ) ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಇಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.
  • ಇಟಲಿ (ಮೇ 19-20): ಪ್ರವಾಸದ ಅಂತಿಮ ಹಂತವಾಗಿ ರೋಮ್‌ಗೆ ಭೇಟಿ ನೀಡಲಿರುವ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಪ್ರಧಾನ ಕಚೇರಿಗೂ ಅವರು ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ ಮೋದಿ ಅವರ ಯುಎಇ-ಯೂರೋಪ್ ಪ್ರವಾಸ; 70 ಬಿಲಿಯನ್ ಡಾಲರ್ ವ್ಯಾಪಾರ ಪುಷ್ಟಿ ನಿರೀಕ್ಷೆ

ವ್ಯಾಪಾರ ಮತ್ತು ರಕ್ಷಣೆ

ಈ ಇಡೀ ಪ್ರವಾಸದ ಪ್ರಮುಖ ಉದ್ದೇಶ ರಕ್ಷಣೆ, ತಂತ್ರಜ್ಞಾನ ಮತ್ತು ಇಂಧನ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುವುದಾಗಿದೆ. 2025ರಲ್ಲಿ ಸಹಿ ಹಾಕಲಾದ ಭಾರತ-EFTA TEPA ಒಪ್ಪಂದದ ನಂತರ ನಡೆಯುತ್ತಿರುವ ಈ ಭೇಟಿಯು ಭಾರತದ ಆರ್ಥಿಕತೆಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:57 am, Fri, 15 May 26

Source link

ನೀಟ್ ಆಕಾಂಕ್ಷಿಗಳಿಗೆ ಬಿಗ್ ಅಪ್‌ಡೇಟ್: ಜೂನ್ 21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ! – Kannada News | NEET UG 2026 Re Exam Date Announced: Medical Entrance Test to be Held on 21 June 2026

ದೆಹಲಿ, ಮೇ.15: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ (ಮೇ,14) ತಡರಾತ್ರಿ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಸಿಬಿಐ (CBI) ತನಿಖೆಯು ಚುರುಕುಗೊಂಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಒಳಗಿನವರ ಕೈವಾಡದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದೀಗ ಇದರ ಜತೆಗೆ ಮಹತ್ವದ ಘೋಷಣೆಯನ್ನು ಕೂಡ ಮಾಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿಗೆ ಹೊಸ ಪರೀಕ್ಷಾ ದಿನಾಂಕಗಳನ್ನು ಘೋಷಿಸಲಾಗಿದೆ.  ಜೂನ್ 21 ರಂದು ನಡೆಯಲಿದೆ.

ನಿನ್ನೆ (ಮೇ.14) ರಾತ್ರಿ ನೀಟ್​ ಪರೀಕ್ಷೆ ನಡೆಸುವ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯು ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿತು. ಈ ಸಭೆಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಎನ್‌ಟಿಎ ಮಹಾನಿರ್ದೇಶಕರು ಮತ್ತು ಸಿಬಿಎಸ್‌ಇ ಅಧ್ಯಕ್ಷರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿದೆ ನೋಡಿ ಪೋಸ್ಟ್​​:

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಐವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದು, ಇನ್ನೂ ಇಬ್ಬರು ಶಂಕಿತರನ್ನು ಬಂಧಿಸಿದೆ. ಇದೊಂದು “ಸಂಘಟಿತ ಗ್ಯಾಂಗ್” ನಡೆಸುತ್ತಿರುವ ದಂಧೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ರಾಜಸ್ಥಾನದ ಸೀಕರ್ ಜಿಲ್ಲೆಯ ಕೋಚಿಂಗ್ ಸೆಂಟರ್‌ಗಳಿಗೆ ಈ ಸೋರಿಕೆಯಾದ ಪತ್ರಿಕೆ ತಲುಪಿದ್ದು, ಪ್ರತಿ ವಿದ್ಯಾರ್ಥಿಯಿಂದ 2 ರಿಂದ 5 ಲಕ್ಷ ರೂ. ಪಡೆಯಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಇದನ್ನೂ ಓದಿ: ರಮ್ಮಿ ಆಟಗಾರರಿಗೆ ದೊಡ್ಡ ಶಾಕ್! ಗೇಮ್ಸ್‌ಕ್ರಾಫ್ಟ್‌ನಿಂದ 526 ಕೋಟಿ ರೂ. ವಂಚನೆ? ಇಡಿಯಿಂದ ಮೂವರು ಬಿಗ್ ಬಾಸ್‌ಗಳ ಬಂಧನ

ದೆಹಲಿ, ಅಹಮದಾಬಾದ್ ಸೇರಿದಂತೆ ಹಲವು ಕಡೆ ವಿದ್ಯಾರ್ಥಿ ಸಂಘಟನೆಗಳು ಎನ್‌ಟಿಎ ರದ್ದುಪಡಿಸಲು ಮತ್ತು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬ ಪರೀಕ್ಷೆ ರದ್ದಾದ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಸತಿ ವೈದ್ಯರ ಸಂಘದ ಒಕ್ಕೂಟ (FORDA) ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ನೀಟ್ ಪರೀಕ್ಷೆಯನ್ನು ಪೆನ್-ಪೇಪರ್ ಬದಲಿಗೆ ಐಐಟಿ-ಜೆಇಇ ಮಾದರಿಯಲ್ಲಿ ಕಂಪ್ಯೂಟರ್ ಆಧಾರಿತವಾಗಿ ನಡೆಸುವಂತೆ ಒತ್ತಾಯಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:49 am, Fri, 15 May 26

Source link

Gold Rate: ಸತತ ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ – Kannada News | Gold Price Today on 15th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 15: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಇಳಿದಿವೆ. ನಿನ್ನೆ ಗುರುವಾರ ಗ್ರಾಮ್​ಗೆ 500 ರೂಗೂ ಅಧಿಕ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Rates) ಶುಕ್ರವಾರ 205 ರೂನಷ್ಟು ತಗ್ಗಿದೆ. ಎರಡು ದಿನದಲ್ಲಿ 700ಕ್ಕೂ ಹೆಚ್ಚು ರೂಗಳಷ್ಟು ಬೆಲೆ ಕಡಿಮೆಗೊಂಡಿದೆ. ವಿದೇಶಗಳಲ್ಲೂ ಬೆಲೆ ಅಲ್ಪ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ 10 ರೂ ಇಳಿದಿದೆ. ಎರಡು ದಿನದಲ್ಲಿ 20 ರೂ ಕಡಿಮೆಗೊಂಡಿದೆ. ಮತ್ತೊಮ್ಮೆ ಅದರ ಬೆಲೆ 300 ರೂ ಗಡಿಯೊಳಗೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,60,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,009 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,675 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,007 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,009 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,675 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,675 ರೂ
  • ಚೆನ್ನೈ: 14,950 ರೂ
  • ಮುಂಬೈ: 14,675 ರೂ
  • ದೆಹಲಿ: 14,690 ರೂ
  • ಕೋಲ್ಕತಾ: 14,675 ರೂ
  • ಕೇರಳ: 14,675 ರೂ
  • ಅಹ್ಮದಾಬಾದ್: 14,680 ರೂ
  • ಜೈಪುರ್: 14,690 ರೂ
  • ಲಕ್ನೋ: 14,690 ರೂ
  • ಭುವನೇಶ್ವರ್: 14,675 ರೂ

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 560 ರಿಂಗಿಟ್ (13,612 ರುಪಾಯಿ)
  • ದುಬೈ: 522 ಡಿರಾಮ್ (13,634 ರುಪಾಯಿ)
  • ಅಮೆರಿಕ: 146.50 ಡಾಲರ್ (14,054 ರುಪಾಯಿ)
  • ಸಿಂಗಾಪುರ: 183.80 ಸಿಂಗಾಪುರ್ ಡಾಲರ್ (13,805 ರುಪಾಯಿ)
  • ಕತಾರ್: 519.50 ಕತಾರಿ ರಿಯಾಲ್ (13,672 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,574 ರುಪಾಯಿ)
  • ಓಮನ್: 55.30 ಒಮಾನಿ ರಿಯಾಲ್ (13,778 ರುಪಾಯಿ)
  • ಕುವೇತ್: 42.85 ಕುವೇತಿ ದಿನಾರ್ (13,418 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 290 ರೂ
  • ಚೆನ್ನೈ: 305 ರೂ
  • ಮುಂಬೈ: 290 ರೂ
  • ದೆಹಲಿ: 290 ರೂ
  • ಕೋಲ್ಕತಾ: 290 ರೂ
  • ಕೇರಳ: 305 ರೂ
  • ಅಹ್ಮದಾಬಾದ್: 290 ರೂ
  • ಜೈಪುರ್: 290 ರೂ
  • ಲಕ್ನೋ: 290 ರೂ
  • ಭುವನೇಶ್ವರ್: 305 ರೂ
  • ಪುಣೆ: 290

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

International Day of Families 2026: ಮೇ 15 ರಂದೇ ಅಂತಾರಾಷ್ಟ್ರೀಯ ಕುಟುಂಬ ದಿನ ಆಚರಿಸುವುದು ಏಕೆ? – Kannada News | International Day of Families 2026: What are the History and significance of International Day of Families

ಅಂತಾರಾಷ್ಟ್ರೀಯ ಕುಟುಂಬ ದಿನImage Credit source: Pinterest

ಮನೆಯೇ ಮೊದಲ ಪಾಠ ಶಾಲೆ. ಕುಟುಂಬವಿಲ್ಲದೇ ವ್ಯಕ್ತಿಯಿಲ್ಲ. ಕುಟುಂಬ’ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಮನೆ ಮಂದಿ ಹಾಗೂ ತನ್ನ ಕುಟುಂಬದಿಂದಲೇ ಜೀವನಕ್ಕೆ ಬೇಕಾದ ಪಾಠವನ್ನು ಕಲಿಯುತ್ತಾನೆ. ಇಲ್ಲಿ ನೋವಿರಲಿ, ನಲಿವಿರಲಿ ಕುಟುಂಬದ ಸದಸ್ಯರು ಸದಾ ಜತೆಗೆ ನಿಲ್ಲುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ವಿಭಿಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕುಟುಂಬದ ಮಹತ್ವವನ್ನು ಸಾರುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕುಟುಂಬ ದಿನವನ್ನು (International Day of Families) ಮೇ 15 ರಂದು ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಕುಟುಂಬ ದಿನದ ಇತಿಹಾಸವೇನು?

ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ಪ್ರಪಂಚದಾದಂತ್ಯ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: National Technology Day 2026: ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಅಪಾರ

ಅಂತಾರಾಷ್ಟ್ರೀಯ ಕುಟುಂಬ ದಿನದ ಮಹತ್ವವೇನು?

ಕುಟುಂಬ ಹಾಗೂ ಸದಸ್ಯರಿಲ್ಲದೇ ಒಬ್ಬಂಟಿಯಾಗಿ ಬದುಕಲು ಅಸಾಧ್ಯ. ಕುಟುಂಬಗಳ ಮೌಲ್ಯ ಹಾಗೂ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೋವಾ ಕಾಂಗ್ರೆಸ್‌ನ ಭರವಸೆಯ ನಾಯಕ ಕೇತನ್ ಭಾಟಿಕರ್ ನಿಧನ: ದಾಂಡೇಲಿಗೆ ತೆರಳುತ್ತಿದ್ದಾಗ ಹಾವು ಕಚ್ಚಿ ಘೋರ ದುರಂತ – Kannada News | Goa Congress Leader Ketan Bhatikar Dies of Snakebite Near Karnataka Border

ಕೇತನ್ ಭಾಟಿಕರ್ (ಚಿತ್ರ: ಕೇತನ್ ಭಾಟಿಕರ್ ಅವರ ಫೇಸ್​​ಬುಕ್ ಖಾತೆಯಿಂದ)Image Credit source: Facebook

ಪಣಜಿ, ಮೇ 15: ಗೋವಾ ಕಾಂಗ್ರೆಸ್ (Congress) ನಾಯಕ ಕೇತನ್ ಭಾಟಿಕರ್ (38) (Ketan Bhatikar) ಹಾವಿನ ಕಡಿತದಿಂದ ಮೃತಪಟ್ಟಿದ್ದಾರೆ. ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಕರ್ಮಲ್ ಘಾಟ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಕೇತನ್ ಭಾಟಿಕರ್ ದಾಂಡೇಲಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪಕ್ಷದ ಉದಯೋನ್ಮುಖ ನಾಯಕನ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಗೋವಾ-ಕರ್ನಾಟಕ ಗಡಿಯ ಕರ್ಮಲ್ ಘಾಟ್ ಬಳಿ ಹಾವಿನ ಕಡಿತಕ್ಕೊಳಗಾಗಿ ಕೇತನ್ ಭಾಟಿಕರ್ ಸಾವು.
  • ಕರ್ನಾಟಕದ ದಾಂಡೇಲಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ.
  • ಇತ್ತೀಚೆಗೆ ರದ್ದಾದ ಫೋಂಡಾ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಭಾಟಿಕರ್.

ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ರಾತ್ರಿ ಕೇತನ್ ಭಾಟಿಕರ್ ಅವರು ಕರ್ನಾಟಕದ ದಾಂಡೇಲಿ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಗೋವಾ-ಕರ್ನಾಟಕ ಗಡಿಯಲ್ಲಿರುವ ಕರ್ಮಲ್ ಘಾಟ್ ಬಳಿ ಯಾವುದೋ ಕಾರಣಕ್ಕಾಗಿ ವಾಹನದಿಂದ ಕೆಳಗಿಳಿದಾಗ ಹಾವೊಂದು ಕಡಿದಿದೆ. ತಕ್ಷಣ ಅವರನ್ನು ಗೋವಾದ ಧಾರವಾಡೋರಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಕೇತನ್ ಭಾಟಿಕರ್ ಅವರು ಗೋವಾ ಕಾಂಗ್ರೆಸ್‌ನ ಭರವಸೆಯ ನಾಯಕರಾಗಿದ್ದರು. ಫೋಂಡಾ ಉಪಚುನಾವಣೆಗೆ ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಹೈಕೋರ್ಟ್ ತೀರ್ಪಿನಿಂದಾಗಿ ಉಪಚುನಾವಣೆ ರದ್ದಾಗಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ಇದನ್ನೂ ಓದಿ: ದೆಹಲಿ-ಗೋವಾ ಆಕಾಶ ಏರ್​ ವಿಮಾನದ ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ

ಕೇತನ್ ಭಾಟಿಕರ್ ನಿಧನಕ್ಕೆ ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕೇತನ್ ಅವರ ಸಾರ್ವಜನಿಕ ಸೇವೆ ಮತ್ತು ಬದ್ಧತೆಯನ್ನು ನೆನೆಯುತ್ತಾ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಾಂಗ್ರೆಸ್ ಪಕ್ಷ ಪ್ರಾರ್ಥಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kedarnath Yatra: ಕೇದಾರನಾಥದಲ್ಲಿ 5 ಲಕ್ಷ ದಾಟಿದ ಭಕ್ತರ ಸಂಖ್ಯೆ; ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್! – Kannada News | Kedarnath Yatra: Record 5 Lakh Pilgrims Spark Health Alert and Safety Measures

ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಗಳಲ್ಲಿ ಒಂದಾದ ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಈ ಬಾರಿ ದಾಖಲೆ ಮಟ್ಟಕ್ಕೆ ತಲುಪಿದೆ. ಪ್ರಸ್ತುತ ಯಾತ್ರಾ ಋತುವಿನಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಈಗಾಗಲೇ 5 ಲಕ್ಷದ ಗಡಿ ದಾಟಿದೆ. ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗುತ್ತಿರುವ ಬೆನ್ನಲ್ಲೇ, ರುದ್ರಪ್ರಯಾಗ ಜಿಲ್ಲಾ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ‘ಹೈ ಅಲರ್ಟ್’ ಘೋಷಿಸಿದೆ.

ದಾಖಲೆ ಬರೆದ ಭಕ್ತರ ಸಾಗರ:

ಹಿಮಾಲಯದ ಮಡಿಲಲ್ಲಿರುವ ಕೇದಾರನಾಥಕ್ಕೆ ಈ ವರ್ಷ ದೇಶದ ವಿವಿಧ ಮೂಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಈ ಮಟ್ಟದ ಸಂಖ್ಯೆ ದಾಖಲಾಗಿರುವುದು ಪ್ರವಾಸೋದ್ಯಮ ಇಲಾಖೆಗೂ ಅಚ್ಚರಿ ಮೂಡಿಸಿದೆ. ಆದರೆ, ಭಕ್ತರ ದಟ್ಟಣೆಯು ಸ್ಥಳೀಯ ಆಡಳಿತ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿದೆ.

ಆರೋಗ್ಯ ಇಲಾಖೆಯ ಸನ್ನದ್ಧತೆ ಮತ್ತು ಕ್ರಮಗಳು:

ಯಾತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆಯು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

ವೈದ್ಯಕೀಯ ತಪಾಸಣೆ:

ಯಾತ್ರಾ ಮಾರ್ಗದುದ್ದಕ್ಕೂ ಸುಮಾರು 52,000ಕ್ಕೂ ಹೆಚ್ಚು ಭಕ್ತರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈವರೆಗೆ 62,000 ಜನರು ಒಪಿಡಿ (OPD) ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಗಂಭೀರ ಅನಾರೋಗ್ಯಕ್ಕೆ ಒಳಗಾದ 26 ಯಾತ್ರಿಕರನ್ನು ಹೆಲಿಕಾಪ್ಟರ್ ಮೂಲಕ ತುರ್ತಾಗಿ ಏರ್‌ಲಿಫ್ಟ್ ಮಾಡಿ ಉನ್ನತ ಚಿಕಿತ್ಸೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಶಿವಲಿಂಗ ತ್ರಿಕೋನ ಆಕಾರದಲ್ಲಿ ಯಾಕಿದೆ ಗೊತ್ತಾ? ಇಲ್ಲಿದೆ ಪೌರಾಣಿಕ ರಹಸ್ಯ!

ಇಸಿಜಿ ತಪಾಸಣೆ:

ಎತ್ತರದ ಪ್ರದೇಶಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚಿರುವುದರಿಂದ, ಈ ಬಾರಿ ಇಸಿಜಿ (ECG) ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ. ಇತ್ತೀಚೆಗೆ 8 ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

ಮುಖ್ಯ ವೈದ್ಯಕೀಯ ಅಧಿಕಾರಿ ಮನವಿ:

“ಎತ್ತರದ ಪ್ರದೇಶಗಳಲ್ಲಿನ ಹವಾಮಾನ ವೈಪರೀತ್ಯವು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಆದ್ದರಿಂದ, ಶ್ವಾಸಕೋಶದ ಕಾಯಿಲೆ ಇರುವವರು ಮತ್ತು ಸಣ್ಣ ಮಕ್ಕಳನ್ನು ಈ ಕಠಿಣ ಯಾತ್ರೆಗೆ ಕರೆತರಬೇಡಿ,” ಎಂದು ರುದ್ರಪ್ರಯಾಗದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಾಮ್ ಪ್ರಕಾಶ್ ಮನವಿ ಮಾಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಮರ್ಡರ್ ಮಿಸ್ಟರಿ ಸಿನಿಮಾ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗ್ತೀರಾ; ಕನ್ನಡದಲ್ಲೂ ಲಭ್ಯ – Kannada News | Bharathanatyam 2: Mohiniyattam Netflix Review – Malayalam Dark Comedy Thriller, Kannada Dubbed

ಮಲಯಾಳಂ (Malayalam Movie) ಚಿತ್ರರಂಗವು ಸದಾ ವಿಭಿನ್ನ ಪ್ರಯೋಗಗಳಿಗೆ ಹೆಸರುವಾಸಿ. ಈ ಸಾಲಿಗೆ ಹೊಸ ಸೇರ್ಪಡೆ ‘ಭರತನಾಟ್ಯಂ 2: ಮೋಹಿನಿಯಾಟಂ’. ಕಳೆದ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಈ ಸಿನಿಮಾ, ಇದೀಗ ಮೇ 8ರಿಂದ ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

ಇದು 2024ರಲ್ಲಿ ತೆರೆಕಂಡಿದ್ದ ‘ಭರತನಾಟ್ಯಂ’ ಚಿತ್ರದ ಮುಂದುವರಿದ ಭಾಗ. ಹೀಗಾಗಿ, ಮೊದಲ ಭಾಗ ನೋಡಿ ಎರಡನೇ ಭಾಗ ನೋಡಿದರೆ ಸಿನಿಮಾ ಮತ್ತಷ್ಟು ಆಪ್ತವಾಗುತ್ತದೆ. ಮೊದಲ ಭಾಗವು ಕುಟುಂಬದೊಳಗಿನ ಸಣ್ಣಪುಟ್ಟ ಹಾಸ್ಯದ ಮೇಲೆ ಕೇಂದ್ರೀಕರಿಸಿದ್ದರೆ, ಈ ಎರಡನೇ ಭಾಗವು ಡಾರ್ಕ್ ಕಾಮಿಡಿ ಕ್ರೈಮ್ ಥ್ರಿಲ್ಲರ್ ಮಾದರಿಯಲ್ಲಿದೆ.

ಮೃತ ಭರತನ್ ನಾಯರ್ ಎರಡನೇ ಹೆಂಡತಿ ಮತ್ತು ಆಕೆಯ ಮಗನನ್ನು ಊರಿನಲ್ಲಿ ನೆಲೆಸುವಂತೆ ಮಾಡಲು ಹೊರಡುವ ಶಶಿ (ಸೈಜು ಕುರುಪ್) ಮತ್ತು ಆತನ ಕುಟುಂಬದ ಕಥೆ ಇದಾಗಿದೆ. ಆದರೆ, ತಂದೆಯ ಹಳೆಯ ಹಗರಣವೊಂದು ಹೊರಬಂದಾಗ ಕುಟುಂಬವು ಒಂದು ಕೊಲೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತದೆ. ಆ ಕಷ್ಟದಿಂದ ಪಾರಾಗಲು ಅವರು ಮಾಡುವ ಹರಸಾಹಸವೇ ಚಿತ್ರದ ಜೀವಾಳ.

ಮೂಲತಃ ಮಲಯಾಳಂ ಸಿನಿಮಾವಾದರೂ, ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರವು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿ ಲಭ್ಯವಿದೆ. ಭಾಷೆಯ ಅಡೆತಡೆಯಿಲ್ಲದೆ ಕನ್ನಡದ ಪ್ರೇಕ್ಷಕರು ಈ ಚಿತ್ರವನ್ನು ಆನಂದಿಸಬಹುದಾಗಿದೆ.

ಇದನ್ನೂ ಓದಿ: ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಕೃಷ್ಣದಾಸ್ ಮುರಳಿ ನಿರ್ದೇಶನದ ಈ ಚಿತ್ರದಲ್ಲಿ ಸೈಜು ಕುರುಪ್, ಸೂರಜ್ ವೆಂಜಾರಮೂಡು, ಜಗದೀಶ್ ಮತ್ತು ವಿನಯ್ ಫೋರ್ಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ ಸೂರಜ್ ಅವರ ವಿಲನ್ ಪಾತ್ರ ಮತ್ತು ಮಲಯಾಳಂ ಶೈಲಿಯ ‘ಡಾರ್ಕ್ ಹ್ಯೂಮರ್’ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ಸಿನಿಮಾದ ಹೆಚ್ಚುಗಾರಿಕೆ. ವಾರಾಂತ್ಯದಲ್ಲಿ ನೀವು ಒಳ್ಳೆಯ ಸಸ್ಪೆನ್ಸ್ ಮತ್ತು ಕಾಮಿಡಿ ಸಿನಿಮಾವನ್ನು ನೋಡಲು ಬಯಸಿದರೆ, ನೆಟ್‌ಫ್ಲಿಕ್ಸ್‌ನಲ್ಲಿರುವ ‘ಭರತನಾಟ್ಯಂ 2: ಮೋಹಿನಿಯಾಟಂ’ ಖಂಡಿತವಾಗಿಯೂ ಉತ್ತಮ ಆಯ್ಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ! – Kannada News | Karnataka Liquor Price Drop: Beer and Premium Scotch Get Cheaper Under New AiB Policy

ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ

ಬೆಂಗಳೂರು, ಮೇ 15: ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯು ಸಿಹಿ ಸುದ್ದಿ ಕೊಟ್ಟಿದೆ. ರಾಜ್ಯ ಸರ್ಕಾರವು ಮೇ 11 ರಿಂದ ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯನ್ನು ಜಾರಿಗೊಳಿಸಿದ್ದು, ಇದರಿಂದ ಪ್ರೀಮಿಯಂ ಬಿಯರ್ (Beer) ಹಾಗೂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆದರೆ ಸಾಮಾನ್ಯ ಜನರು ಬಳಸುವ ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ.

ಮುಖ್ಯಾಂಶಗಳು

  • ನೂತನ ಅಬಕಾರಿ ನೀತಿಯಿಂದ ಬಿಯರ್ ದರದಲ್ಲಿ ಶೇ 25 ರಷ್ಟು ಇಳಿಕೆ.
  •  ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆ ಬಾಟಲಿಗೆ ಸಾವಿರ ರೂಪಾಯಿಗಳಷ್ಟು ಕಡಿತವಾಗಿದೆ.
  •  ಕಡಿಮೆ ದರದ ಮದ್ಯದ ಬೆಲೆ ಏರಿಕೆ, 16 ತೆರಿಗೆ ಸ್ಲ್ಯಾಬ್‌ಗಳು ಎಂಟಕ್ಕೆ ಇಳಿಕೆ.

ಬಿಯರ್ ದರದಲ್ಲಿ 20-25% ಇಳಿಕೆ

ಹೊಸ ನೀತಿಯನ್ವಯ ಶೇ 5ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಶೇ 20 ರಿಂದ 25 ರಷ್ಟು ಇಳಿಕೆಯಾಗಿದೆ. ಕಿಂಗ್‌ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಮೇಲೆ ಸುಮಾರು 75 ರೂ. ಇಳಿಕೆಯಾಗಿದ್ದರೆ, ಹೈನೆಕೆನ್ ಮೇಲೆ 70 ರೂ., ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂ. ಹಾಗೂ ಬಡ್‌ವೈಸರ್ ಪ್ರೀಮಿಯಂ ಮೇಲೆ 20 ರೂ.ಗಳವರೆಗೆ ರಿಯಾಯಿತಿ ಸಿಗಲಿದೆ.

ಪ್ರೀಮಿಯಂ ಸ್ಕಾಚ್ ಮತ್ತು ವಿಸ್ಕಿ ಅಗ್ಗ

ಬಿಯರ್ ಮಾತ್ರವಲ್ಲದೆ, ವಿದೇಶಿ ಬ್ರಾಂಡ್‌ನ ಸ್ಕಾಚ್ ವಿಸ್ಕಿಗಳ ಬೆಲೆಯೂ ಶೇ. 20 ರಷ್ಟು ಕಡಿಮೆಯಾಗಿದೆ. ಉದಾಹರಣೆಗೆ, ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್‌ನ 750 ಎಂಎಲ್ ಬಾಟಲಿಯ ಬೆಲೆ 5,190 ರೂ.ಗಳಿಂದ 4,100 ರೂ.ಗೆ ಇಳಿದಿದೆ. ಇದು ಶ್ರೀಮಂತ ವರ್ಗದ ಮದ್ಯಪ್ರಿಯರಿಗೆ ದೊಡ್ಡ ಸಮಾಧಾನ ತಂದಿದೆ.

ಇದನ್ನೂ ಓದಿ ‘ಎಣ್ಣೆ’ ಪ್ರಿಯರ ಕಿಕ್ ಏರಿಸಿದ ಸರ್ಕಾರ! ಇನ್ನು ಶ್ರೀಮಂತರ ಮದ್ಯ ಅಗ್ಗ, ಬಡವರ ಮದಿರೆ ದುಬಾರಿ

ಹೊಸ ನೀತಿಯ ವಿಶೇಷತೆ

ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಈ AiB ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ 16 ತೆರಿಗೆ ಸ್ಲ್ಯಾಬ್‌ಗಳನ್ನು ಈಗ 8ಕ್ಕೆ ಇಳಿಸಲಾಗಿದೆ. ಅರವತ್ತು ವರ್ಷಗಳ ಹಳೆಯ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link