Headlines

nagaraj11081993

ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ – Kannada News | Haveri: Malatesha idol desecrated in Gundenahalli village; locals demand action

ಹಾವೇರಿ, ಡಿಸೆಂಬರ್​ 19: ಕಲ್ಲಿನಿಂದ ಜಜ್ಜಿ ಮಾಲತೇಶ ದೇವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವಂತಹ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಮಾಲತೇಶ ದೇವರ ಮೂರ್ತಿಯ ಮುಖ ಮತ್ತು ಕಣ್ಣಿನ ಭಾಗಕ್ಕೆ ಕಲ್ಲಿನಿಂದ ಜಜ್ಜಲಾಗಿದೆ. ಸದ್ಯ ದುಷ್ಕರ್ಮಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಣ್ಣಪ್ಪ ಬಾರ್ಕಿ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More

ನೀವು ಗರ್ಭಿಣಿಯಾಗಿದ್ದು ವಾಯುಮಾಲಿನ್ಯದಿಂದಾಗುವ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ಈ ಸಲಹೆಗಳನ್ನು ಪಾಲಿಸಿ – Kannada News | Pollution’s Hidden Impact: Risks to Baby’s Cognitive Health

ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಏರುತ್ತಿದೆ. ಅದರ ಜೊತೆ ಚಳಿಯೂ ಹೆಚ್ಚಾಗುತ್ತಿದ್ದು ಅನೇಕ ಪ್ರದೇಶಗಳಲ್ಲಿ ಮಂಜು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ನಿಮಗೆ ಗೊತ್ತಾ, ಈ ಮಾಲಿನ್ಯ (Air Pollution) ಮತ್ತು ಮಂಜು (Smog) ಗಂಭೀರ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ. ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ, ಅದರಲ್ಲಿಯೂ ಇದು ಹುಟ್ಟಲಿರುವ ಶಿಶುಗಳಿಗೆ ಹಾನಿ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಹೌದು, ಇಂತಹ ವಿಷಯಗಳ ಬಗ್ಗೆ ಕೆಲವರು ಗಮನ ಹರಿಸದಿರಬಹುದು ಆದರೆ ಇದು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೂ…

Read More

Tax Collections: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ – Kannada News | Govt gets Rs 17 lakh crore net direct taxes this FY, 8pc more than last year

ನವದೆಹಲಿ, ಡಿಸೆಂಬರ್ 19: ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (2025ರ ಏಪ್ರಿಲ್ 1ರಿಂದ) ಭಾರತದಲ್ಲಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಆಗಿರುವುದು ಕಂಡು ಬಂದಿದೆ. ಸರ್ಕರವೇ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಈ ವರ್ಷ ಇಲ್ಲಿಯವರೆಗೆ (ಡಿ. 17) ಸಂಗ್ರಹವಾದ ನಿವ್ವಳ ನೇರ ತೆರಿಗೆಯು (Net Direct Taxes) 17.04 ಲಕ್ಷ ಕೋಟಿ ರೂಗಿಂತಲೂ ಅಧಿಕ ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಿಕ್ಕಿದುದಕ್ಕಿಂತಲೂ ಶೇ. 8ರಷ್ಟು ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಈ ವರ್ಷದ…

Read More

SMAT 2025: ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಾರ್ಖಂಡ್ – Kannada News | Ishan Kishan’s Century Powers Jharkhand to Maiden Syed Mushtaq Ali Trophy Win

ಇಶಾನ್ ಕಿಶನ್ (Ishan Kishan) ನಾಯಕತ್ವದ ಜಾರ್ಖಂಡ್ ಕ್ರಿಕೆಟ್ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ, ಜಾರ್ಖಂಡ್ ತಂಡವು ಹರಿಯಾಣವನ್ನು 69 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ, ಜಾರ್ಖಂಡ್ ಮೊದಲ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಇಶಾನ್ ಕಿಶನ್…

Read More

ಬೈದಿದ್ದಕ್ಕೆ ಕ್ರಿಮಿನಾಶಕ ಸೇವಿಸಿ ಬಾಲಕ ಆತ್ಮಹತ್ಯೆ: ಹೆತ್ತವರು ಬುದ್ಧಿವಾದ ಹೇಳೋದೇ ತಪ್ಪಾ? – Kannada News | Hubballi: Son suicide after parents warn him excessive mobile phone use, urge focus on studies

ಹುಬ್ಬಳ್ಳಿ, ಡಿಸೆಂಬರ್​​ 19: ಮೊಬೈಲ್ (mobile)​ ಬಿಟ್ಟು ಓದಿನ ಕಡೆ ಗಮನಹರಿಸು ಎಂದಿದ್ದಕ್ಕೆ 16 ವರ್ಷದ ಮಗ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಅರುಣಗೌಡ ಮೃತ ಯುವಕ. ಮೃತ ಅರುಣಗೌಡ ಪ್ರಥಮ ಪಿಯುಸಿ ಓದುತ್ತಿದ್ದ. ಸದ್ಯ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಅರುಣಗೌಡ ಪೋಷಕರು ಮೊಬೈಲ್ ಬಿಟ್ಟು ಓದಿನ ಕಡೆ ಗಮನಹರಿಸಲು ಹೇಳಿದ್ದಾರೆ. ಹೆತ್ತವರು ಬುದ್ಧಿವಾದ ಹೇಳಿದ್ದಕ್ಕೆ ಆತ ಡಿಸೆಂಬರ್ 16ರಂದು ಕ್ರಿಮಿನಾಶಕ ಸೇವಿಸಿದ್ದ. ಬಳಿಕ…

Read More

ಪ್ರೇಮ ವಿವಾಹ ವಿಚಾರದಲ್ಲಿ ಜಗಳ, ಕೋಪದಲ್ಲಿ ವ್ಯಕ್ತಿಯ ಮೂಗು ಕತ್ತರಿಸಿದ ಜನ – Kannada News | Family Clash Over Love Marriage Turns Violent in Rajasthan

ಬಾರ್ಮರ್, ಡಿಸೆಂಬರ್ 19: ಪ್ರೇಮ ವಿವಾಹ(Love Marriage)ದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿರುವ ಘಟನೆ ರಾಜಸ್ಥಾನದ ಬಾರ್ಮರ್​ನಲ್ಲಿ ನಡೆದಿದೆ. ಘಟನೆಯಲ್ಲಿ ವರನ ಅಣ್ಣನ ಮೂಗನ್ನು ಹುಡುಗಿಯ ಮನೆಯವರು ಕತ್ತರಿಸಿರುವ ಅಮಾನವೀಯ ಘಟನೆ ಎದುರಾಗಿದೆ. ಮಹಿಳೆಯ ಕಡೆಯವರು ಮೊದಲು ಹಲ್ಲೆ ನಡೆಸಿದ್ದರು. ಆ ವ್ಯಕ್ತಿಯ ಅಣ್ಣನ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹಾಕಿದರು. ಇದಕ್ಕೆ ಪ್ರತೀಕಾರವಾಗಿ, ಆ ವ್ಯಕ್ತಿಯ ಸಂಬಂಧಿಕರು ಮಹಿಳೆಯ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿ ಅವರ ಕಾಲು ಮುರಿದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ….

Read More

ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ನುಗ್ಗೆಕಾಯಿ ಹತ್ತಿರಕ್ಕೂ ಹೋಗಬೇಡಿ – Kannada News | Drumstick Consumption: Who Should Be Cautious and Why

ನುಗ್ಗೆಕಾಯಿ (Drumstick) ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಈ ತರಕಾರಿ ಬಹುತೇಕ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು ಇದರ ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಂದಾಗಿ, ಇದನ್ನು ಕರಿ, ಸೂಪ್ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳಲ್ಲಿಯೂ ಬಳಸಲಾಗುತ್ತದೆ. ಇದರ ಎಲೆಗಳು ಕೂಡ ನೈಸರ್ಗಿಕವಾಗಿ ಪ್ರೋಟೀನ್ ಅನ್ನು ಹೊಂದಿರುತ್ತವೆ. ನುಗ್ಗೆಕಾಯಿ ಕೂಡ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಉರಿಯೂತದ ಸಮಸ್ಯೆಗಳಿಗೆ…

Read More

ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್​​ ಹಿನ್ನೆಲೆ ರಸ್ತೆಗಿಳಿಯಲಿವೆ ಹೆಚ್ಚುವರಿ KSRTC ಬಸ್​​ಗಳು – Kannada News | KSRTC to Operate 1,000 Special Buses on the Occasion of Christmas

ಬೆಂಗಳೂರು, ಡಿಸೆಂಬರ್​​ 19: ಕ್ರಿಸ್ಮಸ್​​ ಹಿನ್ನೆಲೆ ಊರುಗಳಿಗೆ, ಪ್ರವಾಸಕ್ಕೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಗುಡ್​​ನ್ಯೂಸ್​​ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.19, 20 ಮತ್ತು 24ರಂದು ಹೆಚ್ಚುವರಿಯಾಗಿ 1,000 ಬಸ್​​ಗಳು ಸಂಚಾರ ನಡೆಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ವಿಶೇಷ ಬಸ್‌ಗಳ ಸಂಚಾರ ನಡೆಯಲಿದ್ದು, ಸಾಮಾನ್ಯ ಸಾರಿಗೆ, ಐರಾವತ ಹಾಗೂ ಸ್ಲೀಪರ್ ಕೋಚ್ ಸೇರಿದಂತೆ ಎಲ್ಲಾ ಐಷಾರಾಮಿ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬ ಮುಗಿದ ಬಳಿಕವೂ ವಿಶೇಷ…

Read More

ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ

ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಮೊದಲ ದಿನ ಮೊದಲ ಶೋನ ದರ್ಶನ್ ಪತ್ನಿ ವಿಜಯಲಕ್​ಷ್ಮೀ ಹಾಗೂ ಮಗ ವಿನೀಶ್ ವೀಕ್ಷಣೆ ಮಾಡಿದ್ದರು. ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ ಮೀನಾ ತೂಗುದೀಪ್ ಅವರು ಸಿನಿಮಾ ನೋಡಿದ್ದಾರೆ. ಮೈಸೂರಿನ ಡಿಆರ್​ಸಿ ಚಿತ್ರಮಂದಿರದಲ್ಲಿ ‘ಡೆವಿಲ್’ ವೀಕ್ಷಿಸಿದರು. ಅಭಿಮಾನಿಗಳು, ಸ್ನೇಹಿತರ ಜೊತೆ ಸಿನಿಮಾ ನೋಡಿದ್ದು ವಿಶೇಷ. ಸಿನಿಮಾ ನೋಡಿದ ಬಳಿಕ ಅವರು ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ….

Read More

ಎಕ್ಸ್​ನಲ್ಲಿ ಮೋದಿಗೆ ಇಲ್ಲ ಸರಿಸಾಟಿ; ಒಂದು ತಿಂಗಳ ಅತಿ ಮೆಚ್ಚಿನ 10 ಟ್ವೀಟ್​ಗಳಲ್ಲಿ ಮೋದಿಯದ್ದೇ 8 – Kannada News | Narendra Modi’s 8 posts among the top 10 most liked tweets in last month

ನವದೆಹಲಿ, ಡಿಸೆಂಬರ್ 19: ಎಕ್ಸ್ ಸದ್ಯ ವಿಶ್ವದ ಅತಿ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯ ಕಿರು ಸಾಮಾಜಿಕ ಮಾಧ್ಯಮ ಎನಿಸಿದೆ. ಬಹಳ ಸುದ್ದಿಗಳು ಈ ಪ್ಲಾಟ್​ಫಾರ್ಮ್​ನಲ್ಲೇ ಸ್ಫೋಟಗೊಳ್ಳುತ್ತವೆ. ವಿಶ್ವದ ಬಹುತೇಕ ಸೆಲಬ್ರಿಟಿಗಳು ಎಕ್ಸ್​ನಲ್ಲಿ ಉಪಸ್ಥಿತಿ ಹೊಂದಿದ್ದಾರೆ. ಎಕ್ಸ್​ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ರಾಜಕಾರಣಿಗಳಲ್ಲಿ ನರೇಂದ್ರ ಮೋದಿಯೂ (Narendra Modi) ಒಬ್ಬರು. ಇವರು ಹಾಕುವ ಪೋಸ್ಟ್​ಗಳಿಗೆ ಸಿಗುವ ಲೈಕ್​ಗಳೇ ಇವರ ಜನಪ್ರಿಯತೆಗೆ ಅಳತೆಗೋಲೆನಿಸುತ್ತವೆ. ಕಳೆದ ಒಂದು ತಿಂಗಳಲ್ಲಿ ಎಕ್ಸ್​ನಲ್ಲಿ ಅತಿಹೆಚ್ಚು ಲೈಕ್ ಪಡೆದ ಪೋಸ್ಟ್​ಗಳಲ್ಲಿ ಹೆಚ್ಚಿನವು…

Read More