All posts by nagaraj11081993

IND vs NZ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಟಿ20 ವಿಶ್ವಕಪ್ ಫೈನಲ್

Source link

ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ; ಶಾಕಿಂಗ್ ವಿಡಿಯೋ ನೋಡಿ

ಚೆನ್ನೈ, ಮಾರ್ಚ್ 6: ತಮಿಳುನಾಡಿನಲ್ಲಿ ಪ್ರಾಣಿ ಪ್ರಿಯರನ್ನು ಆಘಾತಕ್ಕೀಡು ಮಾಡಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನಾಯಿಗಳ (Dog Video) ಮೇಲೆ ತನ್ನ ಕೋಪವನ್ನು ಹೊರಹಾಕುವ ಭರದಲ್ಲಿ ಅವುಗಳ ಜೀವದ ಜೊತೆ ಆಟವಾಡಿದ್ದಾಳೆ. ತನ್ನ ಮನೆಯ ಮುಂದೆ ನಿಂತಿದ್ದ ಆಟೋದ ಕೆಳಗೆ ಹೋಗಿದ್ದ ಪುಟ್ಟ ನಾಯಿಮರಿಗಳನ್ನು ಎತ್ತಿ ಆಕೆ ಕಾಂಪೌಂಡ್​ ಗೋಡೆಗೆ ಬಡಿದಿದ್ದಾಳೆ. ಇದರಿಂದ ಚೀರಾಡುತ್ತಾ ಆ ನಾಯಿಮರಿಗಳು ಕೆಳಗೆ ಬಿದ್ದಿವೆ. ಇನ್ನೆರಡು ನಾಯಿಗಳನ್ನು ಕುತ್ತಿಗೆಗೆ ಹಗ್ಗ ಹಾಕಿ ನೇತು ಹಾಕಿದ್ದಾಳೆ. ಅವುಗಳಲ್ಲಿ ಎರಡು ಮರಿಗಳು ಸತ್ತುಹೋಗಿವೆ. ನಾಯಿ ಮರಿಗಳ ಮೇಲಿನ ಈ ಕ್ರೌರ್ಯವನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಯುವತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರಕ್ಕೆ ಮಾತ್ರ ಯುದ್ಧದ ಬಿಸಿ: ‘ಧುರಂಧರ್ 2’ ಸಿನಿಮಾಗೆ ಚಿಂತೆ ಇಲ್ಲ ಯಾಕೆ?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀತಿ ಭಾರತೀಯ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಕನ್ನಡದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಅದೇ ದಿನ ರಿಲೀಸ್ ಆಗಲು ಸಜ್ಜಾಗಿರುವ ಬಾಲಿವುಡ್‌ನ ‘ಧುರಂಧರ್ 2’ ಮಾತ್ರ ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿಲ್ಲ. ಯಾಕೆಂದರೆ, ‘ಧುರಂಧರ್ 2’ (Dhurandhar 2) ಚಿತ್ರಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಬಿಸಿ ತಟ್ಟುವುದಿಲ್ಲ.

ಬಿಡುಗಡೆಗೆ ಕೇವಲ ಎರಡು ವಾರ ಬಾಕಿ ಇರುವಾಗ ‘ಟಾಕ್ಸಿಕ್’ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿತು. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಅನಿಶ್ಚಿತತೆ ಮೂಡಿದೆ. ಭಾರತೀಯ ಸಿನಿಮಾಗಳಿಗೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರವನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಇರಾನ್ ಕೂಡ ಅಮೆರಿಕ ಮತ್ತು ಇಸ್ರೇಲ್ ನೆಲೆಗಳ ಮೇಲೆ ದಾಳಿ ಮಾಡಿದೆ. ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ನಿಲ್ದಾಣಗಳು ಬಂದ್ ಆಗಿದ್ದು, ಪ್ರವಾಸಿಗರನ್ನು ಸ್ಥಳಾಂತರಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂಬುದು ತಜ್ಞರ ಅಭಿಪ್ರಾಯ.

ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಹಿಂದೆ ಸರಿದಿದ್ದರೂ ‘ಧುರಂಧರ್ 2’ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ಮಾಣ ಸಂಸ್ಥೆ ‘ಜಿಯೋ ಸ್ಟುಡಿಯೋಸ್’ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣ ಕೂಡ ಇದೆ. ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆ ಆಗುತ್ತಿಲ್ಲ. ಕಳೆದ ವರ್ಷ ತೆರೆಕಂಡಿದ್ದ ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಣ ಎಂದು ಬಿಂಬಿಸಿದ್ದರಿಂದ ಯುಎಇ, ಸೌದಿ ಅರೇಬಿಯಾ, ಖತಾರ್ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳು ಚಿತ್ರಕ್ಕೆ ನಿಷೇಧ ಹೇರಿದ್ದವು.

ಇದನ್ನೂ ಓದಿ: ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶುರು ಆಗಲಿದೆ ಅಡ್ವಾನ್ಸ್ ಬುಕಿಂಗ್

ಸೀಕ್ವೆಲ್ ಮೇಲೂ ನಿಷೇಧ ಹೇರಲಾಗಿದೆ. ‘ಧುರಂಧರ್ 2’ ಕೂಡ ಮೊದಲ ಭಾಗದ ಕಥೆಯ ಮುಂದುವರಿದ ಭಾಗವಾಗಿದ್ದು, ಪಾಕಿಸ್ತಾನದ ಕುರಿತಾದ ಕಠಿಣ ನಿಲುವು ಹೊಂದಿರುವುದರಿಂದ ಇದು ಕೂಡ ಗಲ್ಫ್‌ನಲ್ಲಿ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಅಲ್ಲಿನ ಯುದ್ಧದ ಪರಿಸ್ಥಿತಿ ಈ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ‘ಧುರಂಧರ್ 2’ ಸಿನಿಮಾ ಯಾವುದೇ ಭೀತಿ ಇಲ್ಲದೇ ಮಾರ್ಚ್ 19ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ದೇಶಕ್ಕಿಂತ ಆರ್​ಸಿಬಿ ತಂಡ ಮುಖ್ಯವೇ? ಆರ್​ಸಿಬಿ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ

2026 ರ ಟಿ20 ವಿಶ್ವಕಪ್‌ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 7 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ (India vs England) ಫೈನಲ್​ಗೇರಿತು. ರನ್​ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಬೌಲರ್​ಗಳು ಹೈರಾಣಾದರೆ ಬ್ಯಾಟ್ಸ್​ಮನ್​ಗಳು ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಅದರಲ್ಲೂ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿದ್ದ ಕಾರಣ, ಟೀಂ ಇಂಡಿಯಾದ ಬ್ಯಾಟಿಂಗ್‌ ವೇಳೆ ಇಡೀ ಕ್ರೀಡಾಂಗಣವೇ ಜೈಕಾರಗಳಿಂದ ತುಂಬಿ ತುಳುಕಿತ್ತು. ಇತ್ತ ಇಂಗ್ಲೆಂಡ್ ಬ್ಯಾಟಿಂಗ್‌ ವೇಳೆ ಆಂಗ್ಲ ಆಭಿಮಾನಿಗಳು ಕಡಿಮೆ ಇದ್ದ ಕಾರಣ, ಇಂಗ್ಲೆಂಡ್ ಬ್ಯಾಟ್ಸ್‌ಮನ್​ಗಳು ಬೌಂಡರಿ, ಸಿಕ್ಸರ್ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ನಿಶ್ಯಬ್ದವಾಗಿತ್ತು. ಆದಾಗ್ಯೂ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ವೇಳೆ ಆರ್​ಸಿಬಿ ಅಭಿಮಾನಿಗಳ (RCB Fans) ಅತಿರೇಕ ಇತರ ಅಭಿಮಾನಿಗಳನ್ನು ಅಸಮಾಧಾನಗೊಳ್ಳುವಂತೆ ಮಾಡಿತು. ಇದೀಗ ಆರ್​ಸಿಬಿ ಫ್ಯಾನ್ಸ್ ಅಂಧಾಭಿಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಆರ್​ಸಿಬಿ ಫ್ಯಾನ್ಸ್ ಅಂಧಾಭಿಮಾನ

ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 253 ರನ್ ಕಲೆಹಾಕಿತು. ಗುರಿ ದೊಡ್ಡದಿದ್ದರಿಂದ ಟೀಂ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯವರೆಗೂ ಸೋಲೊಪ್ಪಿಕೊಳ್ಳದ ಇಂಗ್ಲೆಂಡ್ ಆಟಗಾರರು ಪಂದ್ಯವನ್ನು ಕೊನೆಯವರೆಗೂ ರೋಚಕಗೊಳಿಸಿದರು. ಇದರಿಂದ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕೊನೆಯ ಓವರ್​ವರೆಗೂ ಆತಂಕ ಮನೆಮಾಡಿತ್ತು. ಆದರೆ ಆರ್​ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ವರ್ತಿಸಿದ ರೀತಿ ನಿಜಕ್ಕೂ ಟೀಂ ಇಂಡಿಯಾ ಅಭಿಮಾನಿಗಳನ್ನು ಬೇಸರಗೊಳಿಸಿದಲ್ಲದೆ, ಕೋಪಗೊಳ್ಳುವಂತೆ ಮಾಡಿತು.

ಅಷ್ಟಕ್ಕೂ ಆರ್​ಸಿಬಿ ಫ್ಯಾನ್ಸ್ ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ… ಇಂಗ್ಲೆಂಡ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಜೆಕಬ್ ಬೆಥೆಲ್ ಸ್ಫೋಟಕ ಶತಕ ಸಿಡಿಸುವುದರ ಜೊತೆಗೆ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯುವ ಕೆಲಸ ಮಾಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 48 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಬಾರಿಸಿದರು. ಹೀಗೆ ಬೆಥೆಲ್ ಭಾರತದ ಬೌಲರ್​ಗಳನ್ನು ದಂಡಿಸುತ್ತಿದ್ದರೆ ಒಂದೆಡೆ ಟೀಂ ಇಂಡಿಯಾ ಅಭಿಮಾನಿಗಳು ಬೇಸರದಿಂದ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಆದರೆ ಕ್ರೀಡಾಂಗಣದಲ್ಲಿದ್ದ ಕೆಲವು ಆರ್​ಸಿಬಿ ಫ್ಯಾನ್ಸ್, ಬೆಥೆಲ್ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಂತೆ ಆರ್​ಸಿಬಿ, ಆರ್​ಸಿಬಿ ಎಂದು ಕೂಗಲು ಶುರು ಮಾಡುತ್ತಿದ್ದರು.

ದೇಶಕ್ಕಿಂತ ಆರ್​ಸಿಬಿ ತಂಡ ಮುಖ್ಯವೇ?

ಏಕೆಂದರೆ ಬೆಥೆಲ್ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಾರೆ. ಹೀಗಾಗಿ ಕೆಲವು ಆರ್​ಸಿಬಿ ಅಭಿಮಾನಿಗಳು ಬೆಥೆಲ್​, ಭಾರತದ ಬೌಲರ್​ಗಳನ್ನು ದಂಡಿಸುತ್ತಿದ್ದಾಗ ಆರ್​ಸಿಬಿ, ಆರ್​ಸಿಬಿ ಎಂದು ಕೂಗಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಇರಿಸು ಮುರಿಸು ಉಂಟುಮಾಡಿದರು. ಆರ್​ಸಿಬಿ ಅಭಿಮಾನಿಗಳ ಈ ಅತಿರೇಕ ಎಲ್ಲರನ್ನು ಅಸಮಾಧಾನಗೊಳಿಸಿದೆ. ಅಂತರರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ದೇಶವನ್ನು ಬೆಂಬಲಿಸುವ ಬದಲು ಫ್ರಾಂಚೈಸ್ ಕ್ರಿಕೆಟ್​ನಲ್ಲಿ ಒಂದು ತಂಡವನ್ನು ಪ್ರತಿನಿಧಿಸುವ ಆಟಗಾರನನ್ನು ಬೆಂಬಲಿಸುವುದು ಎಷ್ಟು ಸರಿ ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

T20 World Cup 2026: ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ? ಐಸಿಸಿ ನಿಯಮ ಏನು ಹೇಳುತ್ತದೆ?

ಆರ್​ಸಿಬಿ ಅಭಿಮಾನಿಗಳ ಈ ಅಂಧಾಭಿಮಾನ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟೀಂ ಇಂಡಿಯಾ ಅಭಿಮಾನಿಗಳ ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಜರಿದಿದ್ದಾರೆ. ದೇಶದ ತಂಡವು ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುತ್ತಿರುವಾಗ ಫ್ರಾಂಚೈಸಿ ನಿಷ್ಠೆಯನ್ನು ತೋರಿಸುವುದು ತಪ್ಪು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ‘ಫ್ರಾಂಚೈಸಿ ಕ್ರಿಕೆಟ್​ಗಿಂತ ದೇಶವೇ ಮೊದಲು, ಐಪಿಎಲ್ ಅಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು: ಬೆಂಕಿ ಅವಘಡಕ್ಕೆ 700 ಕುರಿಗಳ ಸಮೇತ ಶೆಡ್ ಸುಟ್ಟು ಭಸ್ಮ; ಗರ್ಭದಲ್ಲೇ ಮರಿಗಳ ಮಾರಣ ಹೋಮ

ರಾಯಚೂರು, ಮಾರ್ಚ್​ 06: ಅದು ರಣಭೀಕರ ಅಗ್ನಿ (fire) ಅವಘಡ. ರಾತ್ರೋರಾತ್ರಿ ಕುರಿಗಳ ಶೆಡ್​ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇಡೀ ಕುರಿ (sheep) ಶೆಡ್ ಬೆಂಕಿಗಾಹುತಿಯಾಗಿದ್ದು, ಸುಮಾರು 700 ಕುರಿಗಳು ಸುಟ್ಟು ಕರಕಲಾಗಿವೆ‌‌. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ.

1 ಕೋಟಿ ರೂ ವೆಚ್ಚದ ಕುರಿ ಶೆಡ್ ಬೆಂಕಿಗಾಹುತಿ

ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಕುರಿಗಳ ಶೆಡ್ ನಿರ್ಮಿಸಿದ್ದರು. ಕಳೆದ ಮೂರು ವರ್ಷಗಳಿಂದ ನೂರಾರು ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಶೆಡ್​ನ ಬಂಡವಾಳದ ಹಣದಲ್ಲಿ ಕೇಂದ್ರ ಸರ್ಕಾರಿಂದ 47 ಲಕ್ಷ ರೂ ಸಬ್ಸಿಡಿ ಹೇಮಲತಾಗೆ ಬಂದಿತ್ತು. ಉಳಿದ ಹಣವನ್ನ ಸಾಲ ಸೋಲ‌ ಮಾಡಿ ಶೆಡ್ ನಿರ್ಮಿಸಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ

ಶೆಡ್​ನಲ್ಲಿ ಸುಮಾರು 700ಕ್ಕೂ ಹೆಚ್ಚು ಕುರಿಗಳನ್ನ ಸಾಕಾಣಿಕೆ ಮಾಡಲಾಗುತ್ತಿತ್ತು. ಈ ಕುರಿಗಳನ್ನ ನೋಡಿಕೊಳ್ಳುವುದಕ್ಕೆ 6 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ‌ 2.30ರ ಸುಮಾರಿಗೆ ಕುರಿ ಶೆಡ್​ಗೆ ಬೆಂಕಿ ತಗುಲಿದೆ. ಇತ್ತ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದ ಹಿನ್ನೆಲೆ ತಡವಾಗಿ ವಿಷಯ ಗೊತ್ತಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬರುವಷ್ಟರಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ.

ತಡ ರಾತ್ರಿ ಘಟನೆ ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಇಡೀ ಕುರಿ ಶೆಡ್ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸುಮಾರು‌ 700 ಕುರಿಗಳು ಸುಟ್ಟು ಭಸ್ಮವಾಗಿವೆ. ಈ ಪೈಕಿ 100ಕ್ಕೂ ಹೆಚ್ಚು ಕುರಿಗಳು ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದವು.

ಸೂಕ್ತ ಪರಿಹಾರಕ್ಕೆ ಸರ್ಕಾರ ಒತ್ತಾಯ

ಇತ್ತ ಶೆಡ್​ನಲ್ಲಿ 700ಕ್ಕೂ ಹೆಚ್ಚು ಕುರಿಗಳ ಪೈಕಿ 525 ಕುರಿಗಳಿಗೆ ವಿಮೆ ಇದೆ. ಈ ಬಗ್ಗೆ ಈಗಾಗಲೇ ವಿಮೆ ಕಂಪನಿಗೂ ಮಾಹಿತಿ ನೀಡಲಾಗಿದೆ. ಘಟನೆಯಿಂದ ಸುಮಾರು 2 ಕೋಟಿ ರೂ ವರೆಗೆ ನಷ್ಟವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಅಂತ ಶೆಡ್ ಮಾಲೀಕರ ಸಂಬಂಧಿ ಪದ್ಮಾನಾಯ್ಡು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ಸದ್ಯ ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಯೋಧ್ಯೆಯಲ್ಲಿ ಮತ್ತಷ್ಟು ಆಸ್ತಿ ಖರೀದಿಸಿದ ಅಮಿತಾಬ್ ಬಚ್ಚನ್: ಬೆಲೆ ಎಷ್ಟು?

ಅಮಿತಾಬ್ ಬಚ್ಚನ್ (Amitabh Bachchan) ಭಾರತದ ಲಿಜೆಂಡರಿ ನಟ, ಅವರು ಅದ್ಭುತ ನಟ ಆಗಿರುವ ಜೊತೆಗೆ ಒಳ್ಳೆಯ ಹೂಡಿಕೆದಾರ ಸಹ ಹೌದು. ಅದರಲ್ಲೂ ರಿಯಲ್ ಎಸ್ಟೇಟ್, ಅಮಿತಾಬ್ ಬಚ್ಚನ್ ಅವರ ಬಹಳ ಮೆಚ್ಚಿನ ಹೂಡಿಕೆ. ಅಮಿತಾಬ್ ಬಚ್ಚನ್ ಅವರು ಮುಂಬೈ, ಪುಣೆ, ಅಹಮದಾಬಾದ್ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ಹೂಡಿಕೆ ಮಾಡಿರುವ ಜೊತೆಗೆ ತಮ್ಮ ಮಕ್ಕಳಿಗೂ ಹೂಡಿಕೆಯ ಪಾಠ ಹೇಳಿಕೊಟ್ಟಿದ್ದಾರೆ. ಈಗಲೂ ಸಹ ವರ್ಷಕ್ಕೆ ಒಂದು ಅಥವಾ ಎರಡು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಬಚ್ಚನ್ ಹೂಡಿಕೆ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ಅಯೋಧ್ಯೆಯಲ್ಲಿ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

‘ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯಿಂದ ಕೆಲ ವರ್ಷಗಳ ಹಿಂದೆಯೇ ಅಮಿತಾಬ್ ಬಚ್ಚನ್ ಅವರು ಆಸ್ತಿ ಖರೀದಿ ಮಾಡಿದ್ದರು. ಈ ವಿಷಯವನ್ನು ಕಳೆದ ವರ್ಷ ರಿಯಲ್ ಎಸ್ಟೇಟ್​​ ಉದ್ಯಮದ ಪ್ರಮುಖ ಸಂಸ್ಥೆಯಾಗಿರುವ ಲೋಧಾದ ಮುಖ್ಯಸ್ಥರು ಹೇಳಿಕೊಂಡಿದ್ದರು. ತಾವು ಅಯೋಧ್ಯೆಗೆ ಭೇಟಿ ನೀಡುವ ಮುಂಚೆ ಅದರ ನಾಗರೀಕರಾಗಬೇಕು ಎಂಬ ಆಸೆಯಿಂದ ತಾವು ಅಲ್ಲಿ ಜಮೀನು ಖರೀದಿ ಮಾಡಿದ್ದರು. ಇದೀಗ ಆ ಹೂಡಿಕೆಯನ್ನು ಅಮಿತಾಬ್ ಬಚ್ಚನ್ ಅವರು ಮತ್ತಷ್ಟು ವಿಸ್ತರಣೆ ಮಾಡಿದ್ದಾರೆ. ಅಯೋಧ್ಯೆಯ ರಾಮ ಮಂದಿರದ ಸಮೀಪ 2.67 ಎಕರೆ ಭೂಮಿಯನ್ನು 35 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ.

ಇದು ಅಯೋಧ್ಯೆಯಲ್ಲಿ ಅವರ ನಾಲ್ಕನೇ ಹೂಡಿಕೆ ಎನ್ನಲಾಗುತ್ತಿದೆ. ಈ ಪ್ರದೇಶದ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅಯೋಧ್ಯೆ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ರಾಮ ಮಂದಿರ ಈಗಾಗಲೇ ಉದ್ಘಾಟನೆಗೊಂಡಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯೂ ಏರುತ್ತಲೇ ಇದೆ. ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳ ಕಾರ್ಯವೂ ಹೆಚ್ಚುತ್ತಿದೆ ಹಾಗಾಗಿ ಬಚ್ಚನ್ ಅವರು ಇಲ್ಲಿ ಹೂಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಹೂಡಿಕೆ ಮಾಡುವ ವಿಧಾನ ತಿಳಿಸಿದ ಅಭಿಷೇಕ್ ಬಚ್ಚನ್

ಅಮಿತಾಬ್ ಬಚ್ಚನ್ ಅವರು ದೇಶ ಮತ್ತು ವಿದೇಶಗಳಲ್ಲಿಯೂ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳನ್ನು ಹೊಂದಿದ್ದಾರೆ. ಮುಂಬೈನ ಜುಹುನಲ್ಲಿರುವ ಅವರ ಪ್ರಮುಖ ನಿವಾಸ ಜಲ್ಸಾ. ಇದರ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಆಗಿರಬಹುದು. ಮುಂಬೈನ ಪ್ರತೀಕ್ಷಾ ಇದು ಅವರ ಮೊದಲ ಬಂಗಲೆ, ಭಾವನಾತ್ಮಕವಾಗಿ ಅವರಿಗೆ ಬಹಳ ಹತ್ತಿರವಾದುದು. ಇದನ್ನು ಇತ್ತೀಚೆಗೆ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅದರ ಮೌಲ್ಯವೂ ಸಹ ಸುಮಾರು 200 ಕೋಟಿ ರೂಪಾಯಿಗಳಿರಬಹುದು.

ಇವುಗಳ ಹೊರತಾಗಿ ಮುಂಬೈನಲ್ಲಿಯೇ ಜನಕ್ ಹೆಸರಿನ ಪ್ರಾಪರ್ಟಿ ಬಚ್ಚನ್ ಅವರಿಗಿದ್ದು ಅವರ ಕುಟುಂಬದ ಕಚೇರಿಯಾಗಿ ಕಾರ್ಯನಿರ್ವಹಿಸುವ ಈ ಬಂಗಲೆ ಜಲ್ಸಾ ಸಮೀಪದಲ್ಲಿದೆ. ವತ್ಸ ಹೆಸರಿನ ಪ್ರಾಪರ್ಟಿ ಜುಹುನಲ್ಲಿರುವ ಮತ್ತೊಂದು ಆಸ್ತಿ, ಇದನ್ನು ಬ್ಯಾಂಕ್‌ಗೆ ಬಾಡಿಗೆಗೆ ನೀಡಲಾಗಿದೆ. ಅಲಿಬಾಗ್ ನಲ್ಲಿ ಸಹ ಆಸ್ತಿ ಹೊಂದಿದ್ದಾರೆ. ಅಲ್ಲದೆ ಕೆಲವು ಐಶಾರಾಮಿ ಅಪಾರ್ಟ್​​​ಮೆಂಟ್​​ಗಳಲ್ಲಿ ಫ್ಲ್ಯಾಟ್​​ಗಳನ್ನು ಸಹ ಖರೀದಿ ಮಾಡಿ ಬಾಡಿಗೆಗೆ ಬಿಟ್ಟಿದ್ದಾರೆ. ದುಬೈನ ಎಮಿರೇಟ್ಸ್ ಹಿಲ್ಸ್‌ನಲ್ಲಿ ಐಷಾರಾಮಿ ವಿಲ್ಲಾ ಮತ್ತು ಪ್ಯಾರಿಸ್‌ನಲ್ಲಿ ಒಂದು ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇತ್ತೀಚಿಗೆ ಸಹ ಮುಂಬೈನ ಮುಲುಂಡ್‌ನಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ 10 ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ.

ಅಮಿತಾಭ್ ಮತ್ತು ಜಯಾ ಬಚ್ಚನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1,578 ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಅಮಿತಾಭ್ ಬಚ್ಚನ್ ಅವರು ಸುಮಾರು 350 ಕೋಟಿ ರೂ ಆದಾಯ ಗಳಿಸಿದ್ದು, 120 ಕೋಟಿ ರೂ. ತೆರಿಗೆ ಪಾವತಿಸುವ ಮೂಲಕ ಭಾರತದ ಅತಿ ಹೆಚ್ಚು ತೆರಿಗೆ ಪಾವತಿಸುವ ನಟರಾಗಿದ್ದಾರೆ. ಬಚ್ಚನ್ ಅವರ ಬಳಿ ಬೆಂಟ್ಲಿ, ರೇಂಜ್ ರೋವರ್ ಮತ್ತು ಮರ್ಸಿಡಿಸ್ ಬೆಂಜ್ ಸೇರಿದಂತೆ ಸುಮಾರು 16ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಅಂತರರಾಷ್ಟ್ರೀಯ ಖ್ಯಾತಿಯ ಮೋಟಿವೇಶನಲ್ ಸ್ಪೀಕರ್ ಹಾಗೂ ಶಿಕ್ಷಣತಜ್ಞರಾದ ಮುನಾವರ್ ಜಮಾ (Munawar Zama) ಅವರು ಕಲಬುರಗಿಯ ಯುನೈಟೆಡ್ ಕಾಲೇಜ್ ಆಫ್ ಫಿಸಿಯೊಥೆರಪಿ ಮಹತ್ವದ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಉದ್ದೇಶಿಸಿ ಮೌಲ್ಯಾಧಾರಿತ ಮತ್ತು ಜೀವನೋನ್ನತಿ ಸಂದೇಶಗಳನ್ನು ನೀಡಿದರು. ಈ ಶಿಕ್ಷಣ ಸಂಸ್ಥೆಯು ಡಾ. ವಿಕ್ರಂ ಸಿದ್ದರೆಡ್ಡಿ (Dr Vikram Sidda Reddy) ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹಾಗೂ ನೈತಿಕ ಆರೋಗ್ಯ ಸೇವಾ ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿದೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ದೇಶದ ಖ್ಯಾತ ಫಿಸಿಯೊಥೆರಪಿಸ್ಟ್ ಹಾಗೂ ಕೈರೋಪ್ರಾಕ್ಟರ್‌ಗಳಲ್ಲೊಬ್ಬರಾದ (chiropractors) ಡಾ. ಅಬ್ದುಲ್ ಹಕೀಮ್ (Dr Abdul Hakeem). ಅವರು ಕಾಲೇಜಿನ ಅಧಿಷ್ಠಾತೃರಾಗಿದ್ದು, ಕಲಬುರಗಿಯಲ್ಲಿ ತಮ್ಮ ಸ್ವಂತ ಆರೈಕೆ ಕೇಂದ್ರವನ್ನು (ಕೇರ್ ಸೆಂಟರ್) ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಪರಿಮಿತಿ ಮೀರಿ ಜೀವನಮುಖಿ ಮಾರ್ಗದರ್ಶನ ದೊರಕಬೇಕು ಎಂಬ ಉದ್ದೇಶದಿಂದ ಅವರು ಮುನಾವರ್ ಜಮಾ ಅವರನ್ನು ಆಹ್ವಾನಿಸಿದ್ದರು.

ಈ ಸಂದರ್ಭದಲ್ಲಿ ಡಾ. ಅಬ್ದುಲ್ ಹಕೀಮ್ ಅವರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು. 2020ರಲ್ಲಿ ನಡೆದ ಒಂದು ತಿಂಗಳ ವ್ಯಕ್ತಿತ್ವ ವಿಕಾಸ ತರಬೇತಿಯಲ್ಲಿ ಭಾಗವಹಿಸಿದ್ದುದರಿಂದ ತಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಸಂಭವಿಸಿತು ಎಂದು ಅವರು ಹೇಳಿದರು. ಆತ್ಮವಿಶ್ವಾಸ, ಸ್ಪಷ್ಟ ಚಿಂತನೆ, ಪರಿಣಾಮಕಾರಿ ಸಂವಹನ ಹಾಗೂ ಗುರಿಮುಖಿ ಚಟುವಟಿಕೆಗಳ ಮೂಲಕ ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮುನಾವರ್ ಜಮಾ, ಯಾವುದೇ ಆರೋಗ್ಯ ವೃತ್ತಿಯ ಯಶಸ್ಸಿಗೆ ವಿಷಯದಲ್ಲಿ ಆಳವಾದ ಜ್ಞಾನ ಅತ್ಯವಶ್ಯಕ ಎಂದು ತಿಳಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಿರುವುದರಿಂದ, ವಿದ್ಯಾರ್ಥಿಗಳು ಸದಾ ಅಧ್ಯಯನದಲ್ಲಿ ತೊಡಗಿಸಿಕೊಂಡು ತಮ್ಮ ಪರಿಣತಿಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೇವಾಭಾವ ಮತ್ತು ಮಾನವೀಯತೆ ಫಿಸಿಯೊಥೆರಪಿ ವೃತ್ತಿಯ ಮೂಲಭೂತ ಅಂಶಗಳೆಂದು ಅವರು ಒತ್ತಿಹೇಳಿದರು. ರೋಗಿಗಳತ್ತ ಕರುಣೆ ಮತ್ತು ಸಹಾನುಭೂತಿ ತೋರಿಸುವುದು ಚಿಕಿತ್ಸೆ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ಸತ್ಯನಿಷ್ಠೆ ಹಾಗೂ ಸಮರ್ಪಣೆಯಿಂದ ಕಾರ್ಯನಿರ್ವಹಿಸಿದರೆ ಗೌರವ ಮತ್ತು ಯಶಸ್ಸು ಸಹಜವಾಗಿಯೇ ದೊರೆಯುತ್ತದೆ ಎಂದು ಹೇಳಿದರು.

ಪರಿಣಾಮಕಾರಿ ಸಂವಹನ ಕೌಶಲ್ಯದ ಅಗತ್ಯತೆಯನ್ನು ವಿವರಿಸಿದ ಅವರು, ಸ್ಪಷ್ಟ ಮತ್ತು ಗೌರವಯುತ ಮಾತುಕತೆ ರೋಗಿಗಳ ವಿಶ್ವಾಸವನ್ನು ಹೆಚ್ಚಿಸಿ ಚಿಕಿತ್ಸೆ ಫಲಿತಾಂಶಗಳನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದರು. ವೈದ್ಯ ಮತ್ತು ರೋಗಿಯ ನಡುವೆ ಬಲವಾದ ನಂಬಿಕೆಯ ಬಾಂಧವ್ಯ ನಿರ್ಮಾಣವಾಗುವುದು ಉತ್ತಮ ಆರೋಗ್ಯ ಸೇವೆಯ ಲಕ್ಷಣವೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಡಾ. ವಿಕ್ರಂ ಸಿದ್ದರೆಡ್ಡಿ ಅವರ ಮಾನವೀಯ ಸೇವೆಯನ್ನು ಮುನಾವರ್ ಜಮಾ ಪ್ರಶಂಸಿಸಿದರು. ಅನೇಕ ಅಗತ್ಯವಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿರುವುದು ಸಮಾಜದತ್ತ ಅವರ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು. ಭವಿಷ್ಯದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಕುರಿತು ಚಿಂತನೆ ನಡೆಸುವಂತೆ ಅವರು ಪ್ರೋತ್ಸಾಹಿಸಿದರು. ಇದರಿಂದ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಿತು. ಜ್ಞಾನ, ಕರುಣೆ ಮತ್ತು ಉತ್ತಮ ಗುಣಗಳೊಂದಿಗೆ ವೃತ್ತಿಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅವರು ಪ್ರೇರೇಪಿತರಾದರು. ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕರು ಮುನಾವರ್ ಜಮಾ ಅವರಿಗೆ ಕೃತಜ್ಞತೆ ಸಲ್ಲಿಸಿ, ಈ ಕಾರ್ಯಕ್ರಮವನ್ನು ಆಯೋಜಿಸಲು ಶ್ರಮಿಸಿದ ಡಾ. ಅಬ್ದುಲ್ ಹಕೀಮ್ ಅವರ ಪ್ರಯತ್ನವನ್ನು ಮೆಚ್ಚಿದರು.

ಯುವ ಸಬಲೀಕರಣ ಕ್ಷೇತ್ರದಲ್ಲಿ ಕೊಡುಗೆ ನೀಡಿದಕ್ಕಾಗಿ ಮುನಾವರ್ ಜಮಾ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ‘ಭಾರತ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ. ಅಲ್ಲದೆ, ‘ಮುಸ್ಲಿಂ ಮಿರರ್’ ಸಂಸ್ಥೆ ಪ್ರಕಟಿಸಿದ ದೇಶದ ನೂರು ಅತ್ಯಂತ ಪ್ರಭಾವಶಾಲಿ ಭಾರತೀಯ ಮುಸ್ಲಿಮರ ಪಟ್ಟಿಯಲ್ಲಿ ಕೂಡ ಅವರು ಸ್ಥಾನ ಪಡೆದಿದ್ದಾರೆ.

(ಇದು ಪ್ರಾಯೋಜಿತ ಬರಹ)

Source link

ನೇಪಾಳ ಚುನಾವಣೆಯಲ್ಲಿ ಭರ್ಜರಿ ಗೆಲುವಿನತ್ತ ಬಾಲೆನ್ ಶಾ ನೇತೃತ್ವದ ಆರ್​ಎಸ್​ಪಿ

ನವದೆಹಲಿ, ಮಾರ್ಚ್ 6: ಮಾಜಿ ರ‍್ಯಾಪರ್ ಬಾಲೇಂದ್ರ ಶಾ (Balen Shah) ನೇತೃತ್ವದ ಹೊಸ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ನೇಪಾಳದ ಸಂಸತ್ತಿನ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಆರಂಭಿಕ ಮತ ಎಣಿಕೆಯಲ್ಲಿ ನೇಪಾಳ ದೇಶಾದ್ಯಂತ 94 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ದೇಶಾದ್ಯಂತ ಒಟ್ಟು 67 ರಾಜಕೀಯ ಪಕ್ಷಗಳು 165 ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ. ಮತ ಎಣಿಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.

ದಿ ಹಿಮಾಲಯನ್ ಟೈಮ್ಸ್ ಪ್ರಕಾರ, ಬಾಲೆನ್ ಶಾ ನೇತೃತ್ವದ ಆರ್‌ಎಸ್‌ಪಿ ಕಠ್ಮಂಡು ಕಣಿವೆಯ ಕ್ಷೇತ್ರಗಳ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ನೇಪಾಳದ ಪ್ರಧಾನಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿ ಬಾಲೆನ್ ಶಾ ಹೊರಹೊಮ್ಮಿದ್ದಾರೆ. ಕಠ್ಮಂಡುವಿನ ಮಾಜಿ ಮೇಯರ್ ಆಗಿರುವ 35 ವರ್ಷದ ಬಾಲೆನ್ ಶಾ, ಯುವಕರ ನೇತೃತ್ವದ ದಂಗೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ.

ಇದನ್ನೂ ಓದಿ: Nepal Elections: ಇಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ, ಜೆನ್​ ಝಿ ಚಳವಳಿ ಬಳಿಕ ಮೊದಲ ಬಾರಿಗೆ ಮತದಾನ

ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಮೇಯರ್ ಬಾಲೇಂದ್ರ ಶಾ ಬಾಲೆನ್ ಎಂದು ಜನಪ್ರಿಯವಾಗಿದ್ದಾರೆ. ಬಾಲೆನ್ ನೇಪಾಳ ಕಮ್ಯುನಿಸ್ಟ್ ಪಕ್ಷದ (ಏಕೀಕೃತ ಮಾರ್ಕ್ಸ್ವಾದಿ-ಲೆನಿನಿಸ್ಟ್) ಅಧ್ಯಕ್ಷರಾಗಿರುವ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಜನರಲ್ ಝಡ್ ಅಶಾಂತಿಯ ನಂತರ ಕೆಪಿ ಶರ್ಮಾ ಓಲಿ ಕಳೆದ ವರ್ಷ ನೇಪಾಳದ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಾಲೆನ್ ಶಾ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ವಿಟಿಯು ಹಳೆಯ ವಿದ್ಯಾರ್ಥಿಯಾಗಿರುವ ಅವರು 2016 ಮತ್ತು 2018ರ ನಡುವೆ ತಮ್ಮ ಸ್ನಾತಕೋತ್ತರ ಪದವಿ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಬಾಲೆನ್ ಶಾ 1990ರಲ್ಲಿ ಕಠ್ಮಂಡುವಿನಲ್ಲಿ ಮೈಥಿಲ್ ಮಾಧೇಸಿ ಮೂಲದ ನೇವರ್ ಬೌದ್ಧ ಕುಟುಂಬದಲ್ಲಿ ಜನಿಸಿದರು. ನೇಪಾಳದ ಜನಪ್ರಿಯ ರ್ಯಾಪರ್ ಕೂಡ ಆಗಿರುವ ಅವರ ಸಾಹಿತ್ಯವು ಭ್ರಷ್ಟಾಚಾರ, ಅಸಮಾನತೆ ಮತ್ತು ದೇಶದಲ್ಲಿನ ಬದಲಾವಣೆಗಳ ಬೇಡಿಕೆಯ ಸುತ್ತ ಸುತ್ತುತ್ತದೆ.

ಇದನ್ನೂ ಓದಿ: ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕ

ಅವರು ನೇಪಾಳದಲ್ಲಿ ಸಿವಿಲ್ ಎಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಿದರು. ನಂತರ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ಸ್ಟ್ರಕ್ಷರಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 2022ರಲ್ಲಿ ಅವರು ಕಠ್ಮಂಡುವಿನ ಮೇಯರ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾದರು. ಇತರ ಹಳೆಯ ಪಕ್ಷಗಳ ಸ್ಪರ್ಧಿಗಳನ್ನು ಸೋಲಿಸಿ 61,000ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 2’ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶುರು ಆಗಲಿದೆ ಅಡ್ವಾನ್ಸ್ ಬುಕಿಂಗ್

ಭಾರಿ ನಿರೀಕ್ಷೆ ಮೂಡಿಸಿರುವ ‘ಧುರಂಧರ್ 2: ದಿ ರಿವೇಂಜ್’ (Dhurandhar 2: The Revenge) ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಯುಗಾದಿ ಮತ್ತು ಈದ್ ಹಬ್ಬದ ಪ್ರಯುಕ್ತ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಕುರಿತು ಇದೀಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಭಾರತದಲ್ಲಿ ‘ಧುರಂಧರ್ 2’ ಚಿತ್ರದ ಅಡ್ವಾನ್ಸ್ ಬುಕಿಂಗ್ (Dhurandhar 2 Advance Booking) ಮಾರ್ಚ್ 7ರಂದು ಆರಂಭವಾಗಲಿದೆ. ಇದೇ ದಿನ ಟ್ರೇಲರ್ ಬಿಡುಗಡೆ ಆಗಲಿದ್ದು, ಆ ಬಳಿಕ ಪ್ರಮುಖ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಟಿಕೆಟ್ ಮಾರಾಟ ಶುರುವಾಗಲಿದೆ.

ಈಗಾಗಲೇ ವಿದೇಶದಲ್ಲಿ ‘ಧುರಂಧರ್ 2’ ಸಿನಿಮಾದ ಬುಕ್ಕಿಂಗ್ ಆರಂಭ ಆಗಿದೆ. ಅಲ್ಲಿ ಭರ್ಜರಿ ಪ್ರಮಾಣದಲ್ಲಿ ಟಿಕೆಟ್ ಬುಕಿಂಗ್ ಆಗುತ್ತಿದೆ. ಭಾರತದಲ್ಲಿ ಅದಕ್ಕಿಂತಲೂ ಒಳ್ಳೆಯ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಗಮನಿಸಿ ಮಲ್ಟಿಪ್ಲೆಕ್ಸ್​ಗಳು ಟಿಕೆಟ್ ದರ ಹೆಚ್ಚಳ ಮಾಡಲಿವೆ.

ಸಾಮಾನ್ಯವಾಗಿ ದೊಡ್ಡ ಚಿತ್ರಗಳಿಗೆ ಶೇ.10ರಿಂದ 25ರಷ್ಟು ದರ ಹೆಚ್ಚಿರುತ್ತದೆ. ಆದರೆ ‘ಧುರಂಧರ್ 2’ ಚಿತ್ರದ ಅವಧಿ ಸುಮಾರು 4 ಗಂಟೆಗಳ ಕಾಲ ಇರುವುದರಿಂದ ಮತ್ತು ವಿಪರೀತ ಬೇಡಿಕೆ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ದರ ಏರಿಸಲು ತೀರ್ಮಾನಿಸಲಾಗಿದೆ. ಅದರಿಂದಾಗಿ ಮೊದಲ ದಿನವೇ ಅಂದಾಜು 85 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ.

ಈ ಬಾರಿ ‘ಧುರಂಧರ್ 2’ ಕೇವಲ ಹಿಂದಿಗೆ ಸೀಮಿತವಾಗದೆ, ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಏಕಕಾಲಕ್ಕೆ ತೆರೆಕಾಣುತ್ತಿದೆ. ಹಿಂದಿಯೇತರ ಮಾರುಕಟ್ಟೆಯಲ್ಲಿ ರಣವೀರ್ ಸಿಂಗ್ ಅವರ ಈ ಸಿನಿಮಾ ಯಾವ ರೀತಿ ಮೋಡಿ ಮಾಡಲಿದೆ ಎಂಬ ಕುತೂಹಲ ಸಿನಿರಸಿಕರಲ್ಲಿ ಮನೆಮಾಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಎದುರು ರಿಲೀಸ್ ಆಗಲಿದೆ ಪವನ್ ಕಲ್ಯಾಣ್ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’

‘ಧುರಂಧರ್ 2’ ಬಗ್ಗೆ ಜನರಿಗೆ ಇರುವ ನಿರೀಕ್ಷೆಯನ್ನು ಗಮನಿಸಿದರೆ, ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮುಂಗಡ ಬುಕಿಂಗ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಲಕ್ಷಣಗಳಿವೆ. ಈವರೆಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಅತಿ ಹೆಚ್ಚು ಟಿಕೆಟ್ (ಸುಮಾರು 6.5 ಲಕ್ಷ) ಮಾರಾಟವಾದ ದಾಖಲೆ ‘ಬಾಹುಬಲಿ 2: ದಿ ಕನ್​ಕ್ಲೂಷನ್’ ಚಿತ್ರದ ಹೆಸರಿನಲ್ಲಿದೆ. ‘ಧುರಂಧರ್ 2’ ಬಿಡುಗಡೆಗೆ ಮುನ್ನವೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಕ್ಷಿಣದ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್ ಸಿನಿಮಾ

ಬಾಲಿವುಡ್ (Bollywood) ನಟರಿಗೆ ದಕ್ಷಿಣದ ಸಿನಿಮಾ ನಿರ್ದೇಶಕರುಗಳ ಮೇಲೆ ವಿಶೇಷ ಪ್ರೀತಿ ಬಂದಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಟೈಗರ್ ಶ್ರಾಫ್ ಇನ್ನೂ ಹಲವರು ದಕ್ಷಿಣದ ನಿರ್ದೇಶಕರುಗಳನ್ನೇ ಬಯಸಿ ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅಂತೂ ದೊಡ್ಡ ಯಶಸ್ಸನ್ನೂ ಗಳಿಸಿದ್ದಾರೆ. ಆದರೆ ಸಲ್ಲು ಭಾಯ್ ಸೋತಿದ್ದಾರೆ. ಆಮಿರ್ ಖಾನ್ ಇನ್ನಷ್ಟೆ ಸಿನಿಮಾ ಶುರು ಮಾಡಬೇಕಿದೆ. ಈ ನಡುವೆ ಹೃತಿಕ್ ರೋಷನ್ ಸಹ ಈ ಪಟ್ಟಿಗೆ ಸೇರ್ಪಡೆ ಆಗಿದ್ದು, ದಕ್ಷಿಣದ ನಿರ್ದೇಶಕರ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ತೆಲುಗಿನ ಖ್ಯಾತ ಚಿತ್ರಕಥೆಗಾರ ಕೋನಾ ವೆಂಕಟ್ ಮತ್ತು ನಿರ್ದೇಶಕ ಬಾಬಿ ಕೊಲ್ಲಿ (ಇತ್ತೀಚೆಗೆ ‘ಡಾಕು ಮಹಾರಾಜ್’ ಸಿನಿಮಾ ನಿರ್ದೇಶಕ) ಹೃತಿಕ್ ರೋಷನ್ ಅವರನ್ನು ಭೇಟಿಯಾಗಿ ಒಂದು ದೊಡ್ಡ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದಾರೆ. ಹೃತಿಕ್ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ ಮತ್ತು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೋನಾ ವೆಂಕಟ್ ತಿಳಿಸಿದ್ದಾರೆ. ಶೀಘ್ರವೇ ಸಿನಿಮಾದ ಘೋಷಣೆ ಸಹ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದಕ್ಕೆ; ಮತ್ತೊಬ್ಬ ಬಾಲಿವುಡ್ ಹೀರೋಗೆ ಚಿಂತೆ ಶುರು

ಹೃತಿಕ್ ರೋಷನ್ ಅವರು ಈಗಾಗಲೇ ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಜೊತೆ ಒಂದು ದೊಡ್ಡ ಬಜೆಟ್ ಚಿತ್ರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಬಾಬಿ ಮತ್ತು ಕೋನಾ ವೆಂಕಟ್ ಹೇಳುತ್ತಿರುವ ಸಿನಿಮಾ ಇದೇ ಇರಬಹುದೇ ಎಂಬ ಕುತೂಹಲವೂ ಇದೆ. ಪ್ರಸ್ತುತ ಹೃತಿಕ್ ರೋಷನ್ ಅವರು ತಮ್ಮದೇ ನಿರ್ದೇಶನದ ‘ಕೃಷ್ 4’ ಸಿನಿಮಾದ ತಯಾರಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ಯಶ್ ರಾಜ್ ಫಿಲಮ್ಸ್ ಜೊತೆಗೆ ಹೊಸ ಸಿನಿಮಾ ಒಂದನ್ನು ಸಹ ಅವರು ಸಹಿ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಶಾರುಖ್ ಖಾನ್ ಅವರು ಅಟ್ಲಿ ಜೊತೆಗೆ ‘ಜವಾನ್’ ಸಿನಿಮಾ ಮಾಡಿ ಭಾರಿ ಯಶಸ್ಸು ಗಳಿಸಿದರು. ಇನ್ನು ಸಲ್ಮಾನ್ ಖಾನ್, ತಮಿಳಿನ ಮುರುಗದಾಸ್ ಜೊತೆಗೆ ಇತ್ತೀಚೆಗೆ ‘ಸಿಖಂಧರ್’ ಸಿನಿಮಾ ಮಾಡಿದರು ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಇದೀಗ ಮತ್ತೊಬ್ಬ ದಕ್ಷಿಣದ ನಿರ್ದೇಶಕನ ಸಿನಿಮಾ ಎಸ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆಮಿರ್ ಖಾನ್ ಅವರು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಮುಂದಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಈಗ ಹೃತಿಕ್ ರೋಷನ್ ಸಹ ಇದೇ ಪಟ್ಟಿ ಸೇರಿಕೊಂಡಿದ್ದಾರೆ. ಹೃತಿಕ್​​ಗೆ ಜಯ ಸಿಗುತ್ತದೆಯೇ ಇಲ್ಲವೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link