PBKS vs MI: 7ನೇ ಕ್ಯಾಚ್ ಬಿಟ್ಟ ನಮನ್; ಹೀಗಾದ್ರೆ ಮುಂಬೈ ಗೆಲ್ಲುವುದಾದರೂ ಹೇಗೆ? – Kannada News | IPL 2026: Mumbai Indians’ Poor Fielding and Naman Dhir’s Dropped Catches Costly

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಘಟನಾಘಟಿ ಆಟಗಾರರೇ ಇದ್ದರೂ ಗೆಲುವು ಮಾತ್ರ ಮರಿಚಿಕೆಯಾಗಿಯೇ ಉಳಿಯಿತು. ಈ ಆವೃತ್ತಿಯಲ್ಲಿ ತಂಡದ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಕಳಪೆಯಾಗಿತ್ತು. ಇದರ ಜೊತೆಗೆ ಫಿಲ್ಡಿಂಗ್ ಕೂಡ ಅತ್ಯಂತ ಕಳಪೆಯಾಗಿತ್ತು. ಹೀಗಾಗಿಯೇ ಮುಂಬೈ ಇಂಡಿಯನ್ಸ್​ಗೆ ಗೆಲುವುಗಿಂತ ಸೋಲೆ ಹೆಚ್ಚು ಎದುರಾಯಿತು. ಇದಕ್ಕೆ ಉದಾಹರಣೆಯಾಗಿ ಇಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ 58 ನೇ ಪಂದ್ಯದಲ್ಲೂ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ, ಸ್ಲಿಪ್​ನಲ್ಲಿ ನಿಂತಿದ್ದ ನಮನ್ ಧೀರ್, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸರಳ ಕ್ಯಾಚ್ ಕೈಬಿಟ್ಟರು. ನಮನ್ ಧೀರ್ (Naman Dhir) ಇಡೀ ಆವೃತ್ತಿಯಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್‌ ಮೂಲಕ ಮುಂಬೈ ಇಂಡಿಯನ್ಸ್‌ ತಂಡಕ್ಕೆ ದೊಡ್ಡ ತಲೆನೋವಾಗಿದ್ದಾರೆ.

ಸುಲಭವಾದ ಕ್ಯಾಚ್ ಬಿಟ್ಟ ನಮನ್

ಪಂಜಾಬ್ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿಯೇ ನಮನ್ ಧೀರ್ ಸುಲಭ ಕ್ಯಾಚ್ ಕೈಚೆಲ್ಲಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಸ್ಲಿಪ್‌ನಲ್ಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ ಅಲ್ಲಿ ನಿಂತಿದ್ದ ನಮನ್ ಧೀರ್ ಅದನ್ನು ಹಿಡಿಯಲು ವಿಫಲರಾದರು. ಇತ್ತ ಜಸ್ಪ್ರೀತ್ ಬುಮ್ರಾ ಕೂಡ ನಮನ್ ಅವರ ಕಳಪೆ ಫೀಲ್ಡಿಂಗ್​ನಿಂದ ನಿರಾಶೆಗೊಂಡಂತೆ ಕಂಡುಬಂದರು.  ಈ ಜೀವದಾನದ ಲಾಭ ಪಡೆದ ಪ್ರಭ್ಸಿಮ್ರಾನ್ 57 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಈ ಆವೃತ್ತಿಯಲ್ಲಿ ನಮನ್ ಧೀರ್ ಒಟ್ಟು ಏಳು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಇಡೀ ಆವೃತ್ತಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ನಮನ್ ಈ ಹಿಂದೆ ಹಲವಾರು ಪಂದ್ಯಗಳಲ್ಲಿ ಇದೇ ರೀತಿಯ ಕಳಪೆ ಫೀಲ್ಡಿಂಗ್ ಮಾಡಿ ತಂಡಕ್ಕೆ ಹೊರಯಾಗಿದ್ದಾರೆ. ನಮನ್ ಮಾತ್ರವಲ್ಲ, ಈ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್‌ನ ಫೀಲ್ಡಿಂಗ್ ಸರಾಸರಿಯಾಗಿತ್ತು. ಹಲವಾರು ಆಟಗಾರರು ಕ್ಯಾಚ್‌ಗಳನ್ನು ಬಿಡುವುದರ ಜೊತೆಗೆ ಹೆಚ್ಚುವರಿ ರನ್​ಗೆ ಅವಕಾಶ ಮಾಡಿಕೊಟ್ಟರು. ಇದು ಪಂದ್ಯದ ಫಲಿತಾಂಶಗಳ ಮೇಲೆ ನೇರವಾಗಿ ಪರಿಣಾಮ ಬೀರಿತು. ಪ್ಲೇಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ಗೆ ತಂಡದ ಫೀಲ್ಡಿಂಗ್ ಸುಧಾರಿಸುವುದು ಈಗ ಪ್ರಮುಖ ಸವಾಲಾಗಿದೆ.

PBKS vs MI IPL 2026 Live Score: ಪಂಜಾಬ್ 4ನೇ ವಿಕೆಟ್ ಪತನ

ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇಲ್ಲಿಯವರೆಗೆ ಒಟ್ಟು 11 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರನ್ನು ಮಾತ್ರ ಗೆದ್ದಿದೆ, ಇದರ ಪರಿಣಾಮವಾಗಿ ಪ್ಲೇಆಫ್ ಸ್ಪರ್ಧೆಯಿಂದ ಬೇಗನೆ ಹೊರಬಿದ್ದಿದೆ. ಆದ್ದರಿಂದ, ಮುಂದಿನ ಸೀಸನ್​ಗೂ ಮೊದಲು ತಂಡವು ಬಲವಾದ ಪುನರಾಗಮನ ಮಾಡಲು ತಮ್ಮ ಫೀಲ್ಡಿಂಗ್‌ನಲ್ಲಿ ಗಮನಾರ್ಹವಾಗಿ ಕೆಲಸ ಮಾಡಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *