All posts by nagaraj11081993

ದಾಖಲೆ ಬಜೆಟ್, ಮಿತಿಮೀರದ ಸಾಲ, ವಿತ್ತೀಯ ಶಿಸ್ತು: ಸರ್ಕಾರದ ಸಾಧನೆ ಹೇಳಿದ ಸಿದ್ದರಾಮಯ್ಯ

ದಾಖಲೆ ಬಜೆಟ್, ಮಿತಿಮೀರದ ಸಾಲ, ವಿತ್ತೀಯ ಶಿಸ್ತು: ಸರ್ಕಾರದ ಸಾಧನೆ ಹೇಳಿದ ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 6: ದಾಖಲೆಯ 4.48 ಲಕ್ಷ ಕೋಟಿ ರೂ ಗಾತ್ರದ ಬಜೆಟ್ (Karnataka Budget 2026) ಮಂಡನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಾಲ, ಜಿಡಿಪಿ ವೃದ್ಧಿ, ವಿತ್ತೀಯ ಕೊರತೆ, ಹಣಕಾಸು ಶಿಸ್ತು ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಸಾಲ, ಜಿಎಸ್​ಟಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಹೇಗೆ ಅನ್ಯಾಯ ಆಗುತ್ತಿದೆ ಎಂದು ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಸಾಲದ ಮೇಲೆ ಸಾಲ ಮಾಡುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪವನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಸಾಲ ಮಾಡುವುದು ಅನಿವಾರ್ಯ ಎಂಬ ಸಂಗತಿಯನ್ನು ತಿಳಿಸಿರುವ ಅವರು ಇತಿಮಿತಿಯಲ್ಲೇ ಸಾಲ ಮಾಡಲಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಸಾಲ 212 ಲಕ್ಷ ಕೋಟಿ ರೂಗೆ ಏರುವ ಅಂದಾಜು ಇದೆ. ಅದು ಜಿಡಿಪಿಯ ಶೇ. 55ಕ್ಕಿಂತ ಹೆಚ್ಚು. ತಾವು ಪರಿಮಿತಿಯಲ್ಲೇ ಸಾಲ ಮಾಡಿದ್ದೇವೆ ಎಂದಿದ್ದಾರೆ.

ನಾವು ಅಧಿಕಾರಕ್ಕೆ ಬಂದಾಗ ಸಾಲ 5.54 ಲಕ್ಷ ಕೋಟಿ ರೂ ಸಾಲ ಇತ್ತು. ಈಗ ಸಾಲ 8.14 ಲಕ್ಷ ಕೋಟಿ ರೂ ಆಗುತ್ತದೆ. ಫಿಸ್ಕಲ್ ರೆಸ್ಪಾನ್ಸಿಬಲ್ ಆ್ಯಕ್ಟ್ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ. 3ರ ಒಳಗೆ ಇರಬೇಕು. ಸಾಲವು ಶೇ. 25ರ ಒಳಗೆ ಇರಬೇಕು. ಕರ್ನಾಟಕದ ಜಿಡಿಇಪಿ ಮುಂಂದಿನ ವರ್ಷ 33 ಲಕ್ಷ ಕೋಟಿ ರೂ ಆಗುತ್ತದೆ. ಹೀಗಾಗಿ, ಕಾಯ್ದೆ ವಿಧಿಸಿರುವ ಮಿತಿಯೊಳಗೆಯೇ ಸಾಲ ಮಾಡಲಾಗದೆ ಎಂದು ಸಿದ್ದರಾಮಯ್ಯ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: karnataka budget 2026: ಈ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹೊಸ ಕಾರ್ಯಕ್ರಮಗಳು

ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಈ ವೇಳೆ ಸಿದ್ದರಾಮಯ್ಯ ಮತ್ತೆ ಆರೋಪ ಮಾಡದ್ದಾರೆ. ಜಿಎಸ್​ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಆದರೆ, ಕರ್ನಾಟಕಕ್ಕೆ ಜಿಎಸ್​ಟಿ ಪಾಲು ನ್ಯಾಯಯುತವಾಗಿ ಸಿಕ್ಕಿಲ್ಲ. ಈ ವರ್ಷ ನಮಗೆ ಜಿಎಸ್​ಟಿ ಹಂಚಿಕೆಯಲ್ಲಿ 10,000 ಕೋಟಿ ರೂ ಕೊರತೆಯಾಗಿದೆ. ಮುಂದಿನ ವರ್ಷ 15,000 ಕೋಟಿ ರೂ ಕಡಿಮೆ ಆಗುವ ಅಂದಾಜು ಇದೆ. ಕಡಿಮೆ ಜಿಎಸ್​ಟಿ ಸಿಕ್ಕಿದ್ದರಿಂದ ಕರ್ನಾಟಕದ ಬೆಳವಣಿಗೆ ಶೇ. 4 ಕಡಿಮೆ ಆಯಿತು. ಆದರೂ ಕೂಡ ಜಿಡಿಪಿ ಬೆಳವಣಿಗೆ ಶೇ. 8.10 ಇದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಫೈನಲ್ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ? ಐಸಿಸಿ ನಿಯಮ ಏನು ಹೇಳುತ್ತದೆ?

2026 ರ ಟಿ20 ವಿಶ್ವಕಪ್‌ನ ಫೈನಲ್ ( T20 World Cup Final 2026) ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ನಡೆಯಲಿದೆ. ಒಂದೆಡೆ ಕಿವೀಸ್, ದಕ್ಷಿಣ ಆಫ್ರಿಕಾ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಫೈನಲ್​ಗೇರಿದ್ದರೆ, ಮತ್ತೊಂದೆಡೆ ಆತಿಥೇಯ ಭಾರತ, ಇಂಗ್ಲೆಂಡ್ ತಂಡವನ್ನು ರೋಚಕ ಪಂದ್ಯದಲ್ಲಿ ಸೋಲಿಸಿ ಫೈನಲ್ ಟಿಕೆಟ್ ಪಡೆದುಕೊಂಡಿದೆ. ಟಿ20 ವಿಶ್ವಕಪ್ ಫೈನಲ್​ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಈ ಎರಡು ಬಲಿಷ್ಠ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತವೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಆದರೆ ಒಂದು ದೊಡ್ಡ ಪ್ರಶ್ನೆಯೆಂದರೆ: ಮಳೆಯಿಂದಾಗಿ ಅಥವಾ ಇನ್ನಿತರೆ ಕಾರಣದಿಂದಾಗಿ ಪಂದ್ಯ ರದ್ದಾದರೆ, ಯಾರಿಗೆ ಚಾಂಪಿಯನ್ ಪಟ್ಟ ಸಿಗಲಿದೆ? ಭಾರತ ಚಾಂಪಿಯನ್ ಆಗುತ್ತದೆಯೇ ಅಥವಾ ನ್ಯೂಜಿಲೆಂಡ್ ಆಗುತ್ತದೆಯೇ? ಎಂಬುದಾಗಿದೆ. ಹಾಗಿದ್ದರೆ, ಈ ಬಗ್ಗೆ ಐಸಿಸಿ ನಿಯಮ ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ…

ಪಂದ್ಯ ರದ್ದಾದರೆ, ಯಾರು ಚಾಂಪಿಯನ್?

ಇದು ಪ್ರಶಸ್ತಿ ಸುತ್ತಿನ ಪಂದ್ಯ ಆಗಿರುವುದರಿಂದ ಐಸಿಸಿ ಫಲಿತಾಂಶವನ್ನು ಎದುರು ನೋಡುತ್ತಿದೆ. ಪರಿಣಾಮವಾಗಿ, ಐಸಿಸಿ ಈ ಪಂದ್ಯಕ್ಕಾಗಿ ಮೀಸಲು ದಿನವನ್ನು ಕಾಯ್ದಿರಿಸಿದೆ. ಪಂದ್ಯದ ದಿನದಂದು ಪಂದ್ಯ ಪ್ರಾರಂಭವಾಗಲು ಸಾಧ್ಯವಾಗದಿದ್ದರೆ ಅಥವಾ ಮಳೆಯಿಂದಾಗಿ ಅಪೂರ್ಣವಾಗಿ ಉಳಿದರೆ, ಪಂದ್ಯವನ್ನು ಮರುದಿನ (ಮಾರ್ಚ್ 9) ಅಂದರೆ ಮೀಸಲು ದಿನದಂದು ಆಡಲಾಗುತ್ತದೆ. ಪಂದ್ಯವು ಈಗಾಗಲೇ ಮಾರ್ಚ್ 8 ರಂದು ಪ್ರಾರಂಭವಾದರೂ ಮಳೆಯಿಂದಾಗಿ ನಿಲ್ಲಿಸಲ್ಪಟ್ಟರೆ, ಮಾರ್ಚ್ 9 ರಂದು ಅದೇ ಹಂತದಿಂದ ಅದು ಮುಂದುವರಿಯುತ್ತದೆ. ಇದರ ಜೊತೆಗೆ ಫೈನಲ್‌ಗಾಗಿ, ಎರಡೂ ದಿನಗಳಲ್ಲಿ 120 ನಿಮಿಷಗಳ ಹೆಚ್ಚುವರಿ ಸಮಯವನ್ನು ಸಹ ಮೀಸಲಿಡಲಾಗಿದೆ. ಓವರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿಯಾದರೂ ಪಂದ್ಯವನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದಾಗ್ಯೂ ಫಲಿತಾಂಶವನ್ನು ನಿರ್ಧರಿಸಬೇಕೆಂದರೆ ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಬೇಕು.

2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ

ಜಂಟಿ ವಿಜೇತರು ಎಂದು ಘೋಷಣೆ

ಆದಾಗ್ಯೂ ಮಾರ್ಚ್ 8 ಮತ್ತು 9 ರಂದು ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಅಥವಾ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಇದರರ್ಥ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಾವಳಿಯ ಜಂಟಿ ಚಾಂಪಿಯನ್ ಆಗಿರುತ್ತವೆ. ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯಾಗಿ ಜಂಟಿ ವಿಜೇತರನ್ನು ಘೋಷಿಸಿರುವುದು ತೀರ ವಿರಳ. ಆದರೆ ಈ ವಿರಳ ಘಟನೆಗೆ ಟೀಂ ಇಂಡಿಯಾ ಸಾಕ್ಷಿಯಾಗಿದೆ. 2003 ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಬೇಕಾಯಿತು. ಹೀಗಾಗಿ ಭಾರತ ಮತ್ತು ಶ್ರೀಲಂಕಾ ಎರಡು ತಂಡಗಳು ಚಾಂಪಿಯನ್ಸ್ ಟ್ರೋಫಿಯನ್ನು ಹಂಚಿಕೊಂಡಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು, ಕಲಬುರಗಿ ಮಾರ್ಗದ ರೈಲುಗಳು ಸೇರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಮಯದಲ್ಲಿ ಬದಲಾವಣೆ

ಬೆಂಗಳೂರು, ಮಾರ್ಚ್​ 06: ನೈಋತ್ಯ ರೈಲ್ವೆ ಇಲಾಖೆ (South Western Railway) ಕೆಲವು ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಕಾಚಿಗುಡ–ಯಶವಂತಪುರ–ಕಾಚಿಗುಡ ಹಾಗೂ ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಈ ಹೊಸ ವೇಳಾಪಟ್ಟಿ ಮಾರ್ಚ್ 15ರಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಯಾವೆಲ್ಲಾ ರೈಲುಗಳ ಸಮಯ ಬದಲಾವಣೆ

ರೈಲು ಸಂಖ್ಯೆ 20704 ಯಶವಂತಪುರ ಟು ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಹಿಂದೂಪುರ ನಿಲ್ದಾಣದಲ್ಲಿ ಈಗಿರುವ 15.48/15.50 ಸಮಯದ ಬದಲು ಪರಿಷ್ಕೃತವಾಗಿ 15.55 ರಿಂದ 15.57ಕ್ಕೆ ಆಗಮಿಸಿ ನಿರ್ಗಮಿಸಲಿದೆ.

ಇದನ್ನೂ ಓದಿ: ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್​​​ ನ್ಯೂಸ್​​ ನೀಡಿದ ರೈಲ್ವೆ ಇಲಾಖೆ

ಕಾಚಿಗುಡ ಟು ಯಶವಂತಪುರ

ಅದೇ ರೀತಿಯಲ್ಲಿ ರೈಲು ಸಂಖ್ಯೆ 20703 ಕಾಚಿಗುಡ ಟು ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್​ ಹಿಂದೂಪುರ ನಿಲ್ದಾಣದಲ್ಲಿ ಈಗಿರುವ 12.08/12.10 ಸಮಯದ ಬದಲು 12.17ರಿಂದ 12.19ಕ್ಕೆ ಆಗಮಿಸಿ ನಿರ್ಗಮಿಸಲಿದೆ.

ಕಲಬುರಗಿ ಟು ಎಸ್‌ಎಂವಿಟಿ ಬೆಂಗಳೂರು

ರೈಲು ಸಂಖ್ಯೆ 22231 ಕಲಬುರಗಿ ಟು ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ ಈಗಿರುವ 11/11.02 ಸಮಯದ ಬದಲು 11.13/11.15ಕ್ಕೆ ಆಗಮಿಸಲಿದೆ. ಅದೇ ರೈಲು ಯಲಹಂಕ ನಿಲ್ದಾಣದಲ್ಲಿ 12.28/12.30 ಸಮಯದ ಬದಲು 12.58/ 01 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.

ಎಸ್‌ಎಂವಿಟಿ ಬೆಂಗಳೂರು ಟು ಕಲಬುರಗಿ

ಇನ್ನು ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು ಟು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲು ಯಲಹಂಕ ನಿಲ್ದಾಣದಲ್ಲಿ ಈಗಿರುವ 15.05/15.07 ಸಮಯದ ಬದಲು 15.09/15.11ಕ್ಕೆ ಆಗಮಿಸಿ ನಿರ್ಗಮಿಸಲಿದೆ. ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ ಈಗಿರುವ 16.23/16.25 ಸಮಯದ ಬದಲು 16.45/16.47ಕ್ಕೆ ಆಗಮಿಸಿ ನಿರ್ಗಮಿಸಲಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ನಿಲ್ಲದ ವಂದೇ ಭಾರತ್ ರೈಲು​​: ನಿಂತು ಟಾಟಾ ಮಾತ್ರ ಮಾಡ್ಬೇಕಾ ಎಂದು ಕರಾವಳಿಗರು ಆಕ್ರೋಶ

ಪ್ರಯಾಣಿಕರು ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲುಗಳ ಈ ಬದಲಾವಣೆಗೊಂಡ ವೇಳಾಪಟ್ಟಿಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನನ್ನ ಬಳಿ ಅತ್ಯಾಧುನಿಕ ಕ್ಷಿಪಣಿಗಳು ಇದ್ರೂ ಯಾರೂ ಯುದ್ಧಕ್ಕೆ ಕರೆಯುತ್ತಿಲ್ಲವಲ್ಲ: ಟ್ರಂಪ್​ ಮಾಮ ಪ್ಲೀಸ್​​ ಒನ್ ಚಾನ್ಸ್​​​​​

ಇಡೀ ಜಗತ್ತು ಅಮೆರಿಕ, ಇರಾನ್​​, ಇಸ್ರೇಲ್​​ ಯುದ್ಧ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್​​​​ಗೆ ಬೇರೆಯೇ ಚಿಂತೆ ಇದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ಗಳು ವೈರಲ್​ ಆಗುತ್ತಿದೆ. ಕಿಮ್ ಜಾಂಗ್ ಉನ್ ಸರ್ವಾಧಿಕಾರಿ, ತುಂಬಾ ಕಟ್ಟುನಿಟ್ಟಿನ ನಿಮಯಗಳನ್ನು ಮಾಡುವ ಅಧ್ಯಕ್ಷ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಯುದ್ಧ ಮಾಡುವ ಮೂಡು ಬಂದಿದೆ. ಅದು ಅಮೆರಿಕ, ಇರಾನ್​​, ಇಸ್ರೇಲ್ ಸಂಘರ್ಷ ನೋಡಿ ಎಂದು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲಿಗರು ಹೇಳುತ್ತಿದ್ದಾರೆಎ. ಈ ಬಗ್ಗೆ ಸೋಶಿಯಲ್​ ಮೀಡಿಯಾಲ್ಲಿ ಸಖತ್​​ ಮೀಮ್ಸ್​​ಘಲು ವೈರಲ್​​ ಆಗುತ್ತಿದೆ. ಅಣ್ವಸ್ತ್ರ ಮತ್ತು ಕ್ಷಿಪಣಿ ಪರೀಕ್ಷೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಕಿಮ್, ಈ ಮಹಾಯುದ್ಧದಂತಹ ಪರಿಸ್ಥಿತಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ನೆಟ್ಟಿಗರು ಅವರನ್ನು “ನೋ ಇನ್ವಿಟೇಶನ್” (ಆಹ್ವಾನವಿಲ್ಲದ ಅತಿಥಿ) ಎಂದು ಕಿಚಾಯಿಸುತ್ತಿದ್ದಾರೆ.

ಯುದ್ಧದ ಮಾಡುವ ಆಸಕ್ತಿ ಇದ್ದರು, ಅತ್ಯಾಧುನಿಕ ಕ್ಷಿಪಣಿಗಳು ಇದೆ. ಅದ್ರೂ ಯಾರೂ ಈ ಯುದ್ಧಕ್ಕೆ ಕರೆಯುತ್ತಿಲ್ಲವಲ್ಲ ಎಂದು ಕಿಮ್ ಬೇಸರಗೊಂಡಿದ್ದಾರೆ ಎಂಬಂತೆ ಬಿಂಬಿಸುವ ಮೀಮ್‌ಗಳು ಹರಿದಾಡುತ್ತಿವೆ. ದೂರದರ್ಶಕದ (Binoculars) ಮೂಲಕ ಕಿಮ್ ಯುದ್ಧವನ್ನು ನೋಡುತ್ತಿರುವ ಫೋಟೋಗಳಿಗೆ “ಸಾರ್, ನಮ್ಮ ಕಡೆಗೆ ಇನ್ನೂ ಯಾವುದೇ ಕ್ಷಿಪಣಿ ಬರುತ್ತಿಲ್ಲ” ಎಂಬಂತಹ ಹಾಸ್ಯಭರಿತ ಕ್ಯಾಪ್ಷನ್‌ಗಳನ್ನು ನೀಡಲಾಗುತ್ತಿದೆ. ಇನ್ನು ಕೆಲವರು ಟ್ರಂಪ್​​ ಹಾಗೂ ಕಿಮ್ ಜಾಂಗ್ ಉನ್ ತಮಾಷೆಯ ಮೀಮ್ಸ್​​ಗಳನ್ನು ಹಂಚಿಕೊಂಡಿದ್ದಾರೆ. ಸರ್​​​ ನನಗೂ ಒಂದು ಅವಕಾಶ ನೀಡಿ ಎಂದು ಹೇಳುವ ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ : ಬ್ರೋ ಕೋಡ್’ ಸಂಸ್ಕೃತಿ ವೈರಲ್

ಇತ್ತೀಚಿನ ‘ಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾದ ನಂತರ ಸಂಘರ್ಷ ತಾರಕಕ್ಕೇರಿದೆ. ಇಂತಹ ದೊಡ್ಡ ಮಟ್ಟದ ಜಾಗತಿಕ ವಿದ್ಯಮಾನದಲ್ಲಿ ಕಿಮ್ ಅಪ್ರಸ್ತುತವಾಗಿರುವುದು ಮೀಮ್ ಕ್ರಿಯೇಟರ್‌ಗಳಿಗೆ ಆಹಾರವಾಗಿದೆ. ಫೆಬ್ರವರಿ 28, 2026 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದವು. ಈ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿತ್ತು. ಇರಾನ್ ಸಹ ಪ್ರತಿ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಚ್ಚಾಟ ಅತಿಯಾದ್ರೆ ಪ್ರಾಣವೇ ಹೋಗುವುದು: ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು

ಶಾಪಿಂಗ್ ಮಾಲ್‌ನ ಕಾರಿಡಾರ್‌ನಲ್ಲಿ ಮೋಜು ಮಾಡಲು ಹೋಗಿ ಇಬ್ಬರು ಸ್ನೇಹಿತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ವೈರಲ್ ವಿಡಿಯೋದ ಪ್ರಕಾರ, ಇಬ್ಬರು ಸ್ನೇಹಿತರು ಮಾಲ್‌ನ ಮೇಲಿನ ಅಂತಸ್ತಿನ ಕಾರಿಡಾರ್‌ನಲ್ಲಿ ನಡೆದು ಹೋಗುತ್ತಿರುತ್ತಾರೆ. ಈ ವೇಳೆ ಒಬ್ಬ ಸ್ನೇಹಿತ ಮತ್ತೊಬ್ಬನ ಹೆಗಲ ಮೇಲೆ ಹತ್ತಿ ಕುಳಿತುಕೊಳ್ಳುತ್ತಾನೆ. ಈ ರೀತಿ ಮೋಜು ಮಾಡುತ್ತಾ ಸಾಗುವಾಗ, ಕಾರಿಡಾರ್‌ನ ರೇಲಿಂಗ್ (Railing) ಬಳಿ ಹೋದಾಗ ಮೇಲೆ ಕುಳಿತಿದ್ದ ವ್ಯಕ್ತಿ ಆಯತಪ್ಪಿ ರೇಲಿಂಗ್ ಮೇಲೆ ಬೀಳುತ್ತಾನೆ. ಅವನನ್ನು ಹಿಡಿಯಲು ಹೋದ ಕೆಳಗಿದ್ದ ಸ್ನೇಹಿತನೂ ನಿಯಂತ್ರಣ ಕಳೆದುಕೊಂಡು, ಇಬ್ಬರೂ ರೇಲಿಂಗ್‌ನಿಂದ ನೇರವಾಗಿ ಮಾಲ್‌ನ ನೆಲ ಅಂತಸ್ತಿಗೆ ಬಿದ್ದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

karnataka budget 2026: ಈ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹೊಸ ಕಾರ್ಯಕ್ರಮಗಳು

ಬೆಂಗಳೂರು, (ಮಾರ್ಚ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ (ಮಾರ್ಚ್ 6) ವಿಧಾನಸಭೆಯಲ್ಲಿ ಕರ್ನಾಟಕ ಬಜೆಟ್ 2026-27  (Karnataka Budget 2026) ಮಂಡಿಸಿದರು. ಹಲವು ಜಿಲ್ಲೆಗಳ ಮೂಲಸೌಕರ್ಯ, ಆರೋಗ್ಯ, ನೀರಾವರಿ, ಸಾರಿಗೆ, ವಾಣಿಜ್ಯ ಕ್ಷೇತ್ರಗಳ ನಾನು ಯೋಜನೆಗೆ ಅನುದಾನ ನೀಡಿದ್ದಾರೆ. ಇನ್ನು ಈ ಬಜೆಟ್‌ನಲ್ಲಿ 7 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳು ಇಂತಿವೆ

1.ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: ಕೃಷಿ ಸಂಸ್ಕರಣೆ, ಕೃಷಿ ತ್ಯಾಜ್ಯಗಳ ಮರುಬಳಕೆ, ಮಾರುಕಟ್ಟೆ ಸಂಪರ್ಕ ಬಲಪಡಿಸಲು ಹೊಸ ಕಾರ್ಯಕ್ರಮ ಘೋಷಿಸಿದ್ದಾರೆ. ರೈತರ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲ ರಚಿಸಲು ಈ ಯೋಜನೆ ಪೂರಕವಾಗಿದೆ. ಈ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಇದನ್ನೂ ಓದಿ: Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

2.ವಸುಧಾಮೃತ ಕಾರ್ಯಕ್ರಮ: ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮುಂದಿನ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ.

3.ಸಸ್ಯ ಸಂಜೀವಿನಿ ಯೋಜನೆ: ಪರಿಸರ ಸ್ನೇಹಿ ಜೈವಿಕ ಪೀಡನಾಶಕ, ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳಿಗಾಗಿ ಈ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿ ಮಾಡುವ ಉದ್ದೇಶವಿದೆ.

4.ಫಲಧಾರೆ ಕಾರ್ಯಕ್ರಮ: ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ ಈ ಕಾರ್ಯಕ್ರಮದಡಿ ಶಿಬಿರಗಳ ಆಯೋಜನೆ ಮಾಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ 1000 ಗ್ರಾಮ ಪಂಚಾಯತಿಗಳಲ್ಲಿ “ಫಲಧಾರೆ” ಎಂಬ ಹೆಸರಿನಲ್ಲಿ ಶಿಬಿರ ನಡೆಸಲಾಗುವುದು.

5.ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ: 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 11 ಪಾಲಿಟೆಕ್ನಿಕ್ ಕಾಲೇಜುಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ 2,500 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

6.ಕೇರಳ ಮಾದರಿಯ ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ಗೃಹಾಧಾರಿತ ಉಪಶಮನ ಆರೈಕೆ:
ಮನೆಗಳಲ್ಲೇ ಚಿಕಿತ್ಸಾ ಸೇವೆ, ಗಂಭೀರ ದೀರ್ಘಕಾಲೀನ, ಮಾರಣಾಂತಿಕ ಕಾಯಿಲೆಗಳಿರುವ ರೋಗಿಗಳಿಗೆ ಈ ಯೋಜನೆಯಡಿ ಆರೈಕೆ ಮಾಡಲಾಗುವುದು. Palliym India ಸಂಸ್ಥೆಯ ಸಹಯೋಗದೊಂದಿಗೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

7.ಮುಖ್ಯಮಂತ್ರಿ ಸೌರ ಕೃಷಿ ಯೋಜನೆ: ಈ ಯೋಜನೆಯಡಿ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಮಾಡಲಾಗುವುದು. ಅಂದಾಜು 10,500 ಕೋಟಿ ರೂ. ವೆಚ್ಚದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳ ಆರಂಭಗೊಳಿಸಲು ನಿರ್ಧರಿಸಲಾಗಿದೆ.

ಹೀಗೆ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್​​ನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದು, ಇವುಗಳಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್​​ನಲ್ಲಿರುವ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ

ಟೆಹ್ರಾನ್, ಮಾರ್ಚ್ 6: ಕುವೈತ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲಿನ ಇರಾನ್ ದಾಳಿ ಮುಂದುವರೆದಿದೆ. ಕುವೈತ್ ವಾಯುನೆಲೆಗಳ ಮೇಲಿನ ದಾಳಿಗೆ ಇರಾನ್ (Iran) ಶಹೀದ್-136 ಡ್ರೋನ್‌ಗಳ ಜೊತೆಗೆ ಅಡ್ವಾನ್ಸ್ಡ್ ಅರಾಶ್-2 ಡ್ರೋನ್‌ಗಳನ್ನು ಬಳಸಿದೆ. ಅರಾಶ್-2 150 ಕೆಜಿ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು. ಕಿಯಾನ್-2 ಡ್ರೋನ್‌ನ ನವೀಕರಿಸಿದ ಆವೃತ್ತಿಯಾದ ಇದು 2,000 ಕಿಮೀ ದಾಳಿಯ ವ್ಯಾಪ್ತಿಯನ್ನು ಹೊಂದಿದೆ. ಈ ಡ್ರೋನ್‌ಗಳು ನಿಖರವಾದ ದಾಳಿಗಳು ಮತ್ತು ಸಮೂಹ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಟಿ20 ವಿಶ್ವಕಪ್ ಫೈನಲ್; ಅಹಮದಾಬಾದ್‌ನಲ್ಲಿ 10 ಸಾವಿರದಿಂದ ಮುಕ್ಕಾಲು ಲಕ್ಷಕ್ಕೇರಿದ ರೂಮ್​ ಬೆಲೆ

2023 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮತ್ತೊಂದು ಐಸಿಸಿ ಈವೆಂಟ್​ನ ಫೈನಲ್ ಆಡಲು ಸಜ್ಜಾಗಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ 2026 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣ ಫೈನಲ್ ಕಾಳಗಕ್ಕೆ ತಯಾರಾಗಿ ನಿಂತಿದೆ. ಅದರಲ್ಲೂ ಆತಿಥೇಯ ಭಾರತ ಫೈನಲ್​ ಪ್ರವೇಶಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದಂತ್ತಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದಂಡು ಅಹಮದಾಬಾದ್​ನ ಪ್ರಯಾಣ ಬೆಳೆಸಲು ಶುರುಮಾಡಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಅಹಮದಾಬಾದ್​ನ ಹೋಟೆಲ್​ಗಳು ರೂಮ್ ಬಾಡಿಗೆಯನ್ನು ಐದು ಪಟ್ಟು ಹೆಚ್ಚಳ ಮಾಡಿವೆ.

10 ರಿಂದ 75 ಸಾವಿರಕ್ಕೆ ಏರಿಕೆ

ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ಮಾರ್ಚ್ 8 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಅಭಿಮಾನಿಗಳು ಅಹಮದಾಬಾದ್​ನತ್ತ ಬರುವುದನ್ನು ಖಚಿತವಾಗಿರುವುದರಿಂದ ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ಕೂಡ ಹೆಚ್ಚಾಗಿದೆ. ಮಾರ್ಚ್ 7 ಮತ್ತು 8 ರಂದು ಹೋಟೆಲ್​ನ ರೂಮ್​ನ ಬಾಡಿಗೆಗಳು ರೂ. 75 ಸಾವಿರ ತಲುಪಿವೆ. ಈ ಮೊದಲು 10 ಸಾವಿರಕ್ಕೆ ಲಭ್ಯವಿರುವ ಕೋಣೆಯ ಬಾಡಿಗೆ 40 ಸಾವಿರದಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಹಯಾತ್ ರೀಜೆನ್ಸಿ ಮತ್ತು ಹೋಟೆಲ್ ಸೇರಿದಂತೆ ಹಲವು ಹೋಟೆಲ್‌ಗಳ ಬಾಡಿಗೆ ಹೆಚ್ಚಾಗಿದೆ. ಮ್ಯಾರಿಯಟ್, ಐಟಿಸಿ ಮತ್ತು ಫಾರ್ಚೂನ್ ಹೋಟೆಲ್‌ಗಳ ಬಾಡಿಗೆಯೂ ಹೆಚ್ಚಾಗಿದೆ.

2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ

ಐದು ಪಟ್ಟು ಹೆಚ್ಚಳ

ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಹೋಟೆಲ್ ರೂಮ್ ಬೆಲೆ ಹೆಚ್ಚಾಗುವ ನಿರೀಕ್ಷೆ ಮುಂಚೆಯೇ ಇತ್ತು. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ಫೈನಲ್​ಗೇರಿದ ಬಳಿಕ ಅಹಮದಾಬಾದ್‌ಗೆ ಬರುವ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಾಳವಾಗಿದೆ. ಹೀಗಾಗಿ ಕೊಠಡಿ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೂ ಮೊದಲು, 2023 ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಸಮಯದಲ್ಲಿ ಹೋಟೆಲ್ ಬೆಲೆಗಳು ಗಗನಕ್ಕೇರಿದ್ದವು. ಹೋಟೆಲ್​ ರೂಮ್​ ಬೆಲೆಗಳು ಹೆಚ್ಚಾಗುವುದರ ಜೊತೆಗೆ ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್​ಗೆ ತೆರಳುವ ವಿಮಾನಗಳ ದರಗಳು ಸಹ ಹೆಚ್ಚಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ನಂತರ ಎರಡನೇ ಐಟಿ ಹಬ್ ಆಗಿ ಮೈಸೂರು? ತಮ್ಮೂರಿಗೆ ಉಡುಗೊರೆ ಕೊಟ್ಟ ಸಿದ್ದು

ಬೆಂಗಳೂರು, ಮಾರ್ಚ್ 6: ಸಿದ್ದರಾಮಯ್ಯ ಅವರ ದಾಖಲೆಯ 2026ರ ಬಜೆಟ್​ನಲ್ಲಿ ಪ್ರಮುಖಾಂಶಗಳಲ್ಲಿ ಮೈಸೂರನ್ನು ಐಟಿ ಹಬ್ ಆಗಿ ರೂಪಿಸಲು ಯೋಜನೆಯೂ ಒಂದು. ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಮತ್ತು ವಿಕೇಂದ್ರೀಕೃತ ಆರ್ಥಿಕತೆಗೆ ಉತ್ತೇಜನ ನೀಡಲು ಮೈಸೂರನ್ನು ರಾಜ್ಯದ ಎರಡನೇ ಐಟಿ ಹಬ್ ಆಗಿ ರೂಪಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಬೆಂಗಳೂರಿನಿಂದ ದಕ್ಷಿಣಕ್ಕೆ ಮೈಸೂರು 140 ಕಿಮೀ ದೂರದಲ್ಲಿದೆ. ಈಗಾಗಲೇ ಮೈಸೂರಿನಲ್ಲಿ ಸಾಕಷ್ಟು ಕೈಗಾರಿಕೆಗಳು ನೆಲಸಿವೆ. ಐಟಿ ಕಂಪನಿಗಳೂ ಬಹಳಷ್ಟಿವೆ. ಕಾಗ್ನೈಜೆಂಟ್ ಟೆಕ್ನಾಲಜೀಸ್, ಇನ್ಫೋಸಿಸ್ ಇತ್ಯಾದಿ 180-200 ಟೆಕ್ ಕಂಪನಿಗಳಿದ್ದು 30,000 ಜನರು ಕೆಲಸ ಮಾಡುತ್ತಿದ್ದಾರೆ.

ಈಗ ಮೈಸೂರಿಗೆ ಮತ್ತಷ್ಟು ಟೆಕ್ ಸ್ಪರ್ಶ ನೀಡಲು ವಿವಿಧ ಯೋಜನೆಗಳನ್ನು ಹಾಕಲಾಗಿದೆ. ಅರಮನೆನಗರಿಯಲ್ಲಿ ಎಐ ಲ್ಯಾಬ್​ಗಳು, ಸ್ಟಾರ್ಟಪ್ ಸ್ಪೇಸ್​ಗಳು ಮತ್ತಿತರೆಯನ್ನು ಘೋಷಿಸಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಗೆ ಭರ್ಜರಿ ಕಾಣಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

ಬಜೆಟ್​ನಲ್ಲಿ ಮೈಸೂರಿಗೆ ಸಿಕ್ಕ ಕೊಡುಗೆಗಳಿವು…

  • ಮೈಸೂರಿನ ತಾಂಡವಪುರದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಐದು ಹೊಸ ಸಿಲ್ಕ್ ಪಾರ್ಕ್​ಗಳಲ್ಲಿ ಇದೂ ಒಂದಾಗಿರುತ್ತದೆ.
  • ಮೈಸೂರು ಮತ್ತು ಕಲಬುರಗಿಯಲ್ಲಿ ತಲಾ 16 ಕೋಟಿ ರೂ. ವೆಚ್ಚದಲ್ಲಿ ಷ್ನೈಡರ್ ಎಲೆಕ್ಟ್ರಿಕ್ (Schneider Electric) ಯೂತ್ ಇಂಪ್ಯಾಕ್ಟ್ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ.
  • ಮೈಸೂರು ಏರ್ಪೋರ್ಟ್ ಸಮೀಪ ಕೆಐಎಡಿಬಿ ವತಿಯಿಂದ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿ
  • ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು.
  • ಮೈಸೂರು ಮೃಗಾಲಯ ಅಭಿವೃದ್ಧಿಗಾಗಿ ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರದ ಸ್ಥಾಪನೆ
  • ಮೈಸೂರು ಫಿಲಂ ಸಿಟಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪಿಪಿಪಿ ಮಾದರಿಯಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್, ರೆಸ್ಟೋರೆಂಟ್​ಗಳ ನಿರ್ಮಾಣ.
  • ಮೈಸೂರು ನಗರದಲ್ಲಿ ಇ-ಕೋರ್ಟ್ ಅನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗುವುದು.
  • ಮೈಸೂರಿನ ಬಂಬೂ ಬಜಾರ್ ಕೇಂದ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ.
  • ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
  • ಮೈಸೂರಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನಡೆಸಲಾಗುವುದು.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ ನೋಡಿ

ದಿ ಕೇರಳ ಸ್ಟೋರಿ 2’ (The Kerala Story) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆಗೆ ಮುಂಚೆ ಸಾಕಷ್ಟು ವಿವಾದಗಳಿಗೆ ಸಹ ಕಾರಣವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ದಿ ಕೇರಳ ಸ್ಟೋರಿ 2 ಚಿತ್ರದ ಉಚಿತ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ವಿದ್ಯಾರ್ಥಿನಿಯರಿಗೆ ಸಿನಿಮಾವನ್ನು ಉಚಿತವಾಗಿ ತೋರಿಸಲಾಗುತ್ತಿದೆ. ಆದರೆ ಸಿನಿಮಾ ನೋಡಲು ಹೋದ ಕೆಲ ಯುವತಿಯರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಆಯೋಕರು ಆರೋಪಿಸಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link