ವೇಣುಗೋಪಾಲ್ ಕೈತಪ್ಪಿದ ಕೇರಳ ಸಿಎಂ ಪಟ್ಟ: ಹೈಕಮಾಂಡ್ನಿಂದ ಸಿಕ್ಕಿದ್ಯಾ ಬಿಗ್ ಆಫರ್? – Kannada News | KC Venugopal Offered AICC President Post, Steps Back from Kerala CM Race
ತಿರುವನಂತಪುರಂ, ಮೇ 14: ಕೇರಳ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದ ಕೆ.ಸಿ. ವೇಣುಗೋಪಾಲ್‌ಗೆ ಒಂದು ವರ್ಷದ ಬಳಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಗಿದ ನಂತರ ವೇಣುಗೋಪಾಲ್‌ಗೆ ಈ ಪಟ್ಟ ನೀಡಲು ಚಿಂತನೆ ನಡೆಸಲಾಗುತ್ತಿದೆ. ಈ ಭರವಸೆಯ ಹಿನ್ನೆಲೆಯಲ್ಲಿ ವೇಣುಗೋಪಾಲ್ ಕೇರಳ ಸಿಎಂ ಆಗುವುದರಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಖ್ಯಮಂತ್ರಿಯಾಗಿ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಸತೀಶನ್…