Headlines

ಭಾರತದಲ್ಲಿ ಬೇಸ್‌ಬಾಲ್ ಕ್ರಾಂತಿ; ರಾಯಭಾರಿಯಾಗಿ ಕ್ರಿಕೆಟಿಗ ಸೂರ್ಯಕುಮಾರ್​ ನೇಮಕ – Kannada News | Suryakumar Yadav Becomes MLB India Ambassador: Baseball’s Big Push with JioCinema

ವಿಶ್ವದ ದೊಡ್ಡಣ್ಣ ಅಮೆರಿಕದ ಜನಪ್ರಿಯ ಕ್ರೀಡೆಯಾದ ಮೇಜರ್ ಲೀಗ್ ಬೇಸ್‌ಬಾಲ್ ಇದೀಗ ಕ್ರಿಕೆಟ್​ನ ದೊಡ್ಡಣ್ಣನಾದ ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ ಈಗಷ್ಟೇ ಬೆಳೆಯುತ್ತಿರುವ ಬೇಸ್ಬಾಲ್ ಕ್ರೀಡೆಯ ಬೆಳವಣಿಗೆಗೆ ನೆರವಾಗಲು ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಈ ಕ್ರೀಡೆಯಲ್ಲಿ ಭಾರತೀಯರನ್ನು ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಸೂರ್ಯಕುಮಾರ್ ಬೇಸ್ಬಾಲ್ ಕ್ರೀಡೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಪೀಳಿಗೆಗೆ ಸ್ಫೂರ್ತಿ ನೀಡಲಿದ್ದಾರೆ. ಇದಕ್ಕೆ ಪೂರಕವಾಗಿ ಎಎಲ್ಬಿ ಭಾರತದ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾದ ಜಿಯೋಸ್ಟಾರ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಭಾರತದಲ್ಲಿ ಬೇಸ್‌ಬಾಲ್ ಕ್ರಾಂತಿಗೆ ಮುನ್ನಡಿ ಬರೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಮೇಜರ್ ಲೀಗ್ ಬೇಸ್‌ಬಾಲ್ನ ಗ್ಲೋಬಲ್ ಆಪರೇಷನ್ಸ್ ಮತ್ತು ಈವೆಂಟ್‌ಗಳ ಹಿರಿಯ ಉಪಾಧ್ಯಕ್ಷ ಜೆರೆಮಿಯಾ ಯೋಲ್ಕುಟ್, ‘ಭಾರತವು ವಿಶ್ವದ ಅತ್ಯಂತ ರೋಮಾಂಚಕ ಕ್ರೀಡಾ ಸಂಸ್ಕೃತಿಯೊಂದರ ತವರು ನೆಲೆಯಾಗಿದೆ. ಹೀಗಾಗಿ ಸೂರ್ಯಕುಮಾರ್ ಜೊತೆಗಿನ ಒಪ್ಪಂದ ನಮಗೆ ಅಭಿಮಾನಿಗಳೊಂದಿಗೆ ಅರ್ಥಪೂರ್ಣ ರೀತಿಯಲ್ಲಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಸೂರ್ಯಕುಮಾರ್ ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು. ಅಲ್ಲದೆ ದೇಶಾದ್ಯಂತ ಲಕ್ಷಾಂತರ ಕ್ರೀಡಾ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜಿಯೋಸ್ಟಾರ್‌ ಜೊತೆಗಿನ ನಮ್ಮ ಹೊಸ ಪಾಲುದಾರಿಕೆಯೊಂದಿಗೆ, ದೇಶಾದ್ಯಂತ ಬೇಸ್‌ಬಾಲ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ನಾವು ಪ್ರಬಲ ಅಡಿಪಾಯವನ್ನು ನಿರ್ಮಿಸುತ್ತಿದ್ದೇವೆ’ ಎಂದಿದ್ದಾರೆ.

ಈ ಪಾಲುದಾರಿಕೆಯ ಕುರಿತು ಮಾತನಾಡುತ್ತಾ ಸೂರ್ಯಕುಮಾರ್ ಯಾದವ್, ‘ಕ್ರೀಡೆಯ ಅತ್ಯುತ್ತಮ ವಿಷಯವೆಂದರೆ, ಅದು ಜನರು ಎಲ್ಲಿಂದಲೇ ಬಂದಿದ್ದರೂ ಅವರನ್ನು ಒಗ್ಗೂಡಿಸುತ್ತದೆ. ‘ಮೇಜರ್ ಲೀಗ್ ಬೇಸ್‌ಬಾಲ್’ (ಎಂಎಲ್ಬಿ) ಜೊತೆ ಕೈಜೋಡಿಸಲು ಮತ್ತು ಭಾರತದಲ್ಲಿ ಅದರ ಪಯಣದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ. ಈ ಆಟದ ಬಗ್ಗೆ ಸ್ವತಃ ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಬೇಸ್‌ಬಾಲ್ ಆಟವನ್ನು ವಿಶಿಷ್ಟವಾಗಿಸುವ ಅದರ ಶಕ್ತಿ, ಉತ್ಸಾಹ ಮತ್ತು ಸಂಸ್ಕೃತಿಯನ್ನು ಹೆಚ್ಚಿನ ಕ್ರೀಡಾ ಅಭಿಮಾನಿಗಳು ಕಂಡುಕೊಳ್ಳಲು ಸಹಾಯ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಈ ಪಾಲುದಾರಿಕೆಯ ಮೂಲಕ ಸೂರ್ಯಕುಮಾರ್ ಅವರು ಭಾರತ ಮತ್ತು ಅಮೆರಿಕ ಎರಡರಲ್ಲೂ ಎಎಲ್ಬಿ ಈವೆಂಟ್‌ಗಳು ಮತ್ತು ಅಭಿಯಾನಗಳ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಇದರ ಭಾಗವಾಗಿ ಜುಲೈ 10ರಿಂದ 14ರವರೆಗೆ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಎಂಎಲ್ಬಿ ಆಲ್-ಸ್ಟಾರ್ ವೀಕ್ ಸೇರಿದಂತೆ, ಹೊಸ ಪ್ರೇಕ್ಷಕರಿಗೆ ಬೇಸ್‌ಬಾಲ್ ಆಟವನ್ನು ಪರಿಚಯಿಸಲು ಸಹಾಯ ಮಾಡುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಟ್ ಮತ್ತು ಚೆಂಡಿನ ಆಚೆಗೆ ಬೇಸ್‌ಬಾಲ್ ಮತ್ತು ಕ್ರಿಕೆಟ್ ನಡುವೆಯೂ ಹಲವು ಹೋಲಿಕೆಗಳಿವೆ.

ಭಾರತದಲ್ಲಿ ಬೇಸ್‌ಬಾಲ್ ಬೆಳವಣಿಗೆಯನ್ನು ಬೆಂಬಲಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ರಿಲಯನ್ಸ್) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೈಸ್ ವರ್ಲ್ಡ್‌ವೈಡ್ ಲಿಮಿಟೆಡ್ನೊಂದಿಗೆ ಕೈ ಜೋಡಿಸಿದೆ. ಆ ಸಹಯೋಗದ ಭಾಗವಾಗಿ ಎಂಎಲ್ಬಿ ಮತ್ತು ಜಿಯೋಸ್ಟಾರ್ ತಮ್ಮ ಮಾಧ್ಯಮ ಹಕ್ಕುಗಳ ಒಪ್ಪಂದವನ್ನು ವಿಸ್ತರಿಸಿವೆ. ಇದು ಭಾರತದಾದ್ಯಂತ ಕ್ರೀಡಾ ಅಭಿಮಾನಿಗಳಿಗೆ ಎಂಎಲ್ಬಿ ಪಂದ್ಯಗಳು ಮತ್ತು ಕಂಟೆಂಟ್ಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸುತ್ತದೆ. ನವೀಕರಿಸಿದ ಪಾಲುದಾರಿಕೆಯ ಅಡಿಯಲ್ಲಿ ಜಿಯೋಸ್ಟಾರ್ ಭಾರತದಲ್ಲಿ ಲೀನಿಯರ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂಎಲ್ಬಿಯ ಅಧಿಕೃತ ಪ್ರಸಾರ ಪಾಲುದಾರರಾಗಿ ಉಳಿಯುತ್ತದೆ. ಮಾಸ್ಟರ್‌ಕಾರ್ಡ್ ಪ್ರಸ್ತುತಪಡಿಸುವ ಎಂಎಲ್ಬಿ ಆಲ್-ಸ್ಟಾರ್ ಗೇಮ್, ಆಯ್ದ ನಿಯಮಿತ ಸೀಸನ್ ಆಟಗಳು ಮತ್ತು ವಿಶ್ವ ಸರಣಿಯೊಂದಿಗೆ ಮುಕ್ತಾಯಗೊಳ್ಳುವ ನಂತರದ ಆವೃತ್ತಿಯ ಪಂದ್ಯಗಳು ಸೇರಿದಂತೆ ಮಾರ್ಕ್ಯೂ ಈವೆಂಟ್‌ಗಳನ್ನು ಪ್ರಸಾರ ಮಾಡಲಾಗುತ್ತದೆ.

Source link

Leave a Reply

Your email address will not be published. Required fields are marked *