Headlines

ಮಗುವಿನಂತೆ ಆರಾಮವಾಗಿ ನಿದ್ರಿಸಲು ರಾತ್ರಿ ಸಮಯದಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ – Kannada News | These nighttime habits help you get a good sleep

ಕೆಲಸದ ಒತ್ತಡ, ಕೌಟುಂಬಿಕ, ಆರ್ಥಿಕ ಸಮಸ್ಯೆಗಳು, ತಡರಾತ್ರಿಯವೆರೆಗ ಮೊಬೈಲ್‌ ನೋಡುತ್ತಾ ಸಮಯ ಕಳೆಯುವುದು ಈ ಎಲ್ಲದರ ಕಾರಣದಿಂದ ಅನೇಕರು ಇಂದು ನಿದ್ರೆಗೆ (sleep) ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದಾರೆ. ಹೌದು ಅದೆಷ್ಟೋ ಜನ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಈ ನಿದ್ರೆಯ ಕೊರತೆ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ  ಮರುದಿನದ ಶಕ್ತಿ, ದೈನಂದಿನ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಒಳ್ಳೆಯ ನಿದ್ರೆ ಪಡೆಯುವುದು ಬಹಳ ಮುಖ್ಯ. ಇದಕ್ಕಾಗಿ ಹೆಚ್ಚೇನು ಮಾಡುವ ಅಗತ್ಯವಿಲ್ಲ. ಪ್ರತಿ ರಾತ್ರಿ ಈ ಕೆಲವೊಂದಿಷ್ಟು ಅಭ್ಯಾಸಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರಾತ್ರಿಯ ಈ ಅಭ್ಯಾಸಗಳು ಉತ್ತಮ ನಿದ್ರೆ ಪಡೆಯಲು ಸಹಕಾರಿ:

ರಾತ್ರಿ ಸಮಯದಲ್ಲಿ ಫೋನ್‌, ಲ್ಯಾಪ್‌ಟಾಪ್‌ ನೋಡುವುದನ್ನು ಕಡಿಮೆ ಮಾಡಿ: ಮಲಗುವ ಸಮಯಕ್ಕೆ ಕನಿಷ್ಠ 30 ರಿಂದ 60 ನಿಮಿಷಗಳ ಮೊದಲು ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ಮತ್ತು ಟಿವಿ ನೋಡುವುದನ್ನು  ನಿಲ್ಲಿಸಿ. ಏಕೆಂದರೆ ಈ ಸಾಧನಗಳು ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿದ್ರೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಮೊಬೈಲ್‌ ನೋಡುವ ಬದಲು ಒಳ್ಳೆಯ ಪುಸ್ತಕ ಓದಿ, ಮನಸ್ಸಿಗೆ ಮುದ ನೀಡುವ ಸಂಗೀತವನ್ನು ಆಲಿಸಿ. ಇದು ವೇಗವಾಗಿ ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ.

ಹಗುರವಾದ ಭೋಜನ ಮಾಡಿ: ರಾತ್ರಿಯ ಸಮಯದಲ್ಲಿ ಎಂದಿಗೂ ಕರಿದ, ಎಣ್ಣೆಯುಕ್ತ ಹಾಗೂ ಭರವಾದ ಆಹಾರಗಳನ್ನು ಸೇವನೆ ಮಾಡುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ರಾತ್ರಿ ಏಳರಿಂದ ಎಂಟು ಗಂಟೆಯ ಒಳಗೆ ಊಟವನ್ನು ಮಾಡಿ ಮುಗಿಸಿ, ಮುಖ್ಯವಾಗಿ ರಾತ್ರಿ ಹಗುರವಾದ ಮತ್ತು ಆರೋಗ್ಯಕರ ಆಹಾರವನ್ನೇ ಸೇವನೆ ಮಾಡಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲ ಉತ್ತಮ ನಿದ್ರೆಗೂ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಳಿಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಕೆಫೀನ್ ಸೇವನೆಯನ್ನು ತಪ್ಪಿಸಿ: ಸಂಜೆ ಅಥವಾ ರಾತ್ರಿಯಲ್ಲಿ ಚಹಾ, ಕಾಫಿ, ಎನರ್ಜಿ ಡ್ರಿಂಕ್ಸ್ ಮತ್ತು ಸಕ್ಕರೆಯುಕ್ತ ಪಾನೀಯಗಳನ್ನು ಸೇವನೆ ಮಾಡಬೇಡಿ. ಏಕೆಂದರೆ ಕೆಫೀನ್‌ ಸೇವನೆಯು ನಿದ್ರೆಗೆ ಅಡ್ಡಿ ಪಡಿಸುತ್ತದೆ. ಹಾಗಾಗಿ ಕೆಫೀನ್‌ ಬದಲು ನೀರನ್ನು ಕುಡಿಯಿರಿ ಇದು ದೇಹಕ್ಕೆ ಉತ್ತಮ ಜಲ ಸಂಚಯನವನ್ನು ಒದಗಿಸುತ್ತದೆ. ಅಲ್ಲದೆ ಕ್ಯಾಮೊಮೈಲ್ ಮತ್ತು ಲ್ಯಾವೆಂಡರ್ ನಂತಹ ಗಿಡಮೂಲಿಕೆ ಚಹಾಗಳನ್ನು ಕುಡಿಯಬಹುದು. ಇದು ದೇಹ ಮತ್ತು ಮನಸ್ಸು ಎರಡೂ ಶಾಂತಗೊಳಿಸುತ್ತದೆ.

ಕೋಣೆಯ ವಾತಾವರಣ ಶಾಂತ ಮತ್ತು ಆರಾಮದಾಯಕವಾಗಿರಲಿ: ಮಲಗುವ ಕೋಣೆ ಸ್ವಚ್ಛವಾಗಿಲ್ಲದಿದ್ದರೆ, ಮನಸ್ಸು ಕೂಡ ಹಾಳಾಗುತ್ತದೆ. ಹಾಗಾಗಿ ಮಲಗುವ ಮುನ್ನ, ನಿಮ್ಮ ಕೋಣೆಯನ್ನು ಶಾಂತವಾಗಿ, ಸ್ವಚ್ಛವಾಗಿ ಮತ್ತು ಆರಾಮದಾಯಕವಾಗಿ ಇರಿಸಿ. ಈ ವಾತಾವರಣವು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *