All posts by nagaraj11081993

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಸಿದ್ದರಾಮಯ್ಯ ಸಹಕಾರ ನೆನೆದ ಕುಮಾರ್ ಬಂಗಾರಪ್ಪ – Kannada News | Kumar Bangarappa talks about CM Siddaramaiah in Sarkari Nyaya Bele Angadi press meet

ಖ್ಯಾತ ನಟ ಕುಮಾರ್ ಬಂಗಾರಪ್ಪ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಕುಮಾರ್ ಬಂಗಾರಪ್ಪ ಅವರು ಸಿದ್ದರಾಮಯ್ಯ (Siddaramaiah), ನರೇಂದ್ರ ಮೋದಿ ಮುಂತಾದವರಿಗೆ ಧನ್ಯವಾದ ತಿಳಿಸಿದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗಾಗಿ ಆಹಾರ ಭದ್ರತೆ ಕಾಯ್ಕೆ ಪ್ರಕಾರ ದಿನಸಿ ನೀಡುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಿನಿಮಾದ ಹಾಡನ್ನು ಬಹಳ ಖುಷಿಯಿಂದ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ಪ್ರತಿ ಪಾತ್ರವೂ ವಿಶೇಷವಾಗಿದೆ. ಆ ಎಲ್ಲ ಪಾತ್ರಗಳು ಸೇರಿ ಸಿನಿಮಾ ಆಗಿದೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳ ಶ್ರಮಪಟ್ಟಿದೆ’ ಎಂದು ಕುಮಾರ್ ಬಂಗಾರಪ್ಪ (Kumar Bangarappa) ಅವರು ಹೇಳಿದರು. ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಒಂದು ವಾಟ್ಸಾಪ್ ಮೆಸೇಜಿನಿಂದ ರದ್ದಾಯ್ತು ಯುಜಿ ಪರೀಕ್ಷೆ – Kannada News | NEET UG 2026 paper leak; How a WhatsApp Group message led to exams cancellation in India

ನವದೆಹಲಿ, ಮೇ 12: 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಕನಸು ಇಂದು ಛಿದ್ರವಾಗಿದೆ. NEET-UG 2026 ಪರೀಕ್ಷೆಯು ವ್ಯವಸ್ಥಿತ ವೈಫಲ್ಯದ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯು (NEET) ಈಗ ಭಾರಿ ಹಗರಣವಾಗಿ ಬೆಳೆದಿದೆ. ತೀವ್ರ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಕಳುಹಿಸಿದ್ದ ವಾಟ್ಸಾಪ್ ಮೆಸೇಜಿನಿಂದಾಗಿಯೇ ಈ ಇಡೀ ಹಗರಣ ಬಯಲಾದಂತಾಗಿದೆ. ಅಷ್ಟಕ್ಕೂ ಆ ಮೆಸೇಜ್ ಏನು?

ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿದೆ. ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ ಕಂಡುಬರುವ ಖಾಸಗಿ ಮಾಫಿಯಾ ವಾಟ್ಸಾಪ್ ಗುಂಪಿನಿಂದಲೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳನ್ನು ಅಪ್‌ಲೋಡ್ ಮಾಡಲೆಂದೇ ರಚಿಸಲಾದ ಈ ಗುಂಪಿನಲ್ಲಿ ಸುಮಾರು 400 ಸದಸ್ಯರು ಇದ್ದರು ಎಂದು ವರದಿಯಾಗಿದೆ. ಇದು ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವನ್ನು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಹರಾಜು ಹಾಕುವ ಡಿಜಿಟಲ್ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಿತು. ಪೊಲೀಸ್ ತನಿಖೆಯು “ಖಾಸಗಿ ಮಾಫಿಯಾ” ಎಂಬ ವಾಟ್ಸಾಪ್ ಗುಂಪಿನ ಹೆಸರು ಮತ್ತು ಆರೋಪಿ ಮನೀಶ್ ಯಾದವ್ ಅವರ ಹೆಸರು ಬಹಿರಂಗಗೊಂಡಿದೆ.

ಇದನ್ನೂ ಓದಿ: NEET Exam 2026 Cancelled: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ವಾಟ್ಸಾಪ್ ಗುಂಪಿನಿಂದ ಪ್ರಶ್ನೆ ಪತ್ರಿಕೆಯ ಸೋರಿಕೆ ಆಕಸ್ಮಿಕವಾಗಿ ಸಂಭವಿಸಿಲ್ಲ. ಇದು ಪ್ಲಾನ್ ಮಾಡಿಯೇ ನಡೆಸಲಾದ ಕೃತ್ಯವಾಗಿತ್ತು. ಮೂಲಗಳ ಪ್ರಕಾರ, ಈ ಪತ್ರಿಕೆಯು ನಾಸಿಕ್‌ನ ಮುದ್ರಣಾಲಯದಿಂದ ನೇರವಾಗಿ ಸೋರಿಕೆಯಾಗಿದೆ. ಪ್ರಶ್ನೆ ಪತ್ರಿಕೆಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರಿಂದಲೇ ಈ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ಅದು ಎಲ್ಲೆಡೆ ಹರಡಿ ಸೋರಿಕೆಯಾಗಿದೆ.

ಆರಂಭದಲ್ಲಿ ಈ ಪ್ರಶ್ನೆಪತ್ರಿಕೆಯನ್ನು “ಊಹೆ ಪತ್ರಿಕೆ”ಯ ಸೋಗಿನಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ, ಸೋರಿಕೆಯಾದ ಸೆಟ್‌ನಲ್ಲಿರುವ 281 ಪ್ರಶ್ನೆಗಳಲ್ಲಿ, 90 ಜೀವಶಾಸ್ತ್ರದ ಪ್ರಶ್ನೆಗಳಲ್ಲಿ ಪ್ರತಿಯೊಂದೂ ನಿಜವಾದ ನೀಟ್ ಪರೀಕ್ಷೆಯಲ್ಲಿ ಬಂದಿತ್ತು. ಅಷ್ಟೇ ಅಲ್ಲ ಆ ಪ್ರಶ್ನೆಗಳಲ್ಲಿದ್ದ ಅನುಕ್ರಮ, ಅಲ್ಪವಿರಾಮಗಳು ಮತ್ತು ಪೂರ್ಣ ವಿರಾಮಗಳು ಸಹ ಒಂದೇ ರೀತಿಯಲ್ಲಿದ್ದವು.

ಇದನ್ನೂ ಓದಿ: NEET UG 2026: ನೀಟ್ ಯುಜಿ ಪರೀಕ್ಷಾ ದಿನದ ಡ್ರೆಸ್ ಕೋಡ್ ಮತ್ತು ಪ್ರಮುಖ ಮಾರ್ಗಸೂಚಿ ಪ್ರಕಟ!

ಸೋರಿಕೆಯಾದ ಈ ಪ್ರಶ್ನೆ ಪತ್ರಿಕೆಗಳ ಬೆಲೆ 30,000 ರೂ.ಗಳಿಂದ 28 ಲಕ್ಷ ರೂ.ಗಳವರೆಗೆ ಇತ್ತು. ದೆಹಲಿಯಿಂದ ಸುಳಿವು ಪಡೆದ ನಂತರ ನಾಗೌರ್‌ನ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಕೇವಲ 4 ದಿನಗಳ ಮೊದಲು 28 ಲಕ್ಷ ರೂ.ಗಳನ್ನು ಪಾವತಿಸಿದ್ದಾನೆ ಎಂದು ವರದಿಯಾಗಿದೆ. ಬಳಿಕ ಆ ಹುಡುಗ ಆ ಪತ್ರಿಕೆಯನ್ನು ಕೇರಳದ ಎಂಬಿಬಿಎಸ್ ವಿದ್ಯಾರ್ಥಿಗೆ ಮಾರಿದನು. ನಂತರ ಅವನು ಅದನ್ನು ಸಿಕಾರ್‌ನಲ್ಲಿರುವ ಪಿಜಿ ಹಾಸ್ಟೆಲ್ ನಿರ್ವಾಹಕನಾದ ತನ್ನ ತಂದೆಗೆ ಕಳುಹಿಸಿದನು.

ವಾಟ್ಸಾಪ್ ಮೆಸೇಜಿನಲ್ಲೇನಿತ್ತು?:

ಆ ವಿದ್ಯಾರ್ಥಿಯ ವಾಟ್ಸಾಪ್ ಮೆಸೇಜ್​ನಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು. “ಅಪ್ಪಾ, ಇದನ್ನು ನನ್ನ ಒಬ್ಬ ಸ್ನೇಹಿತ ಕಳುಹಿಸಿದ್ದಾನೆ. ಹಾಸ್ಟೆಲ್‌ನಲ್ಲಿರುವ ಹುಡುಗಿಯರಿಗೆ ಕೊಡಿ. ನಾಳೆಯ ಪರೀಕ್ಷೆಯಲ್ಲಿ ಇದೇ ಪ್ರಶ್ನೆ ಬರುತ್ತದೆ.” ಎಂದು ಸ್ಪಷ್ಟವಾಗಿ ಆ ಮೆಸೇಜಿನಲ್ಲಿ ತಿಳಿಸಲಾಗಿತ್ತು. ಹಾಸ್ಟೆಲ್ ನಿರ್ವಾಹಕರು ಇದನ್ನು ಎಲ್ಲೆಡೆ ಶೇರ್ ಮಾಡಿದ್ದರು. ಆದರೆ, ಪರೀಕ್ಷೆ ನಡೆದ ಬಳಿಕ ಅಲ್ಲಿ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ತಾವು ಶೇರ್ ಮಾಡಿದ್ದ ಪ್ರಶ್ನೆ ಪತ್ರಿಕೆ ಸಂಪೂರ್ಣವಾಗಿ ಒಂದೇ ರೀತಿಯಿತ್ತು ಎಂಬುದು ಗೊತ್ತಾದಾಗ ಅವರು ಆತಂಕಕ್ಕೊಳಗಾದರು. ತಾವು ಸಿಕ್ಕಿಬೀಳಬಹುದು ಎಂಬ ಭೀತಿಯಲ್ಲಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಇದನ್ನು ವದಂತಿ ಎಂದು ತಳ್ಳಿಹಾಕಿದರೂ, ಎನ್‌ಟಿಎ ಮತ್ತು ಗುಪ್ತಚರ ಬ್ಯೂರೋ ಮಧ್ಯಪ್ರವೇಶಿಸಿ ತನಿಖೆ ನಡೆಸಿದಾಗ ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಲ ಪತ್ತೆಯಾಯಿತು. ಬಳಿಕ ಇದನ್ನು ಸಿಬಿಐಗೆ ವಹಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು: 2.20 ಲಕ್ಷ ಕುಟುಂಬಗಳಿಗೆ ಸಿಕ್ಕಿತು ಅಧಿಕೃತ ಮನೆ ಹಕ್ಕು! – Kannada News | Hakku Patra Distribution: Addressing Land Ownership Gaps in Karnataka

ಬೆಂಗಳೂರು, ಮೇ.12: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ದಶಕಗಳಿಂದಲೂ ದಾಖಲೆರಹಿತ ವಸತಿ ಪ್ರದೇಶಗಳಾಗಿರುವ ಹಾಡಿ, ಹಟ್ಟಿ, ತಾಂಡಾ ಮತ್ತು ಕ್ಯಾಂಪ್‌ಗಳಿಗೆ ಅಧಿಕೃತ ಮಾನ್ಯತೆ ನೀಡುವ ಕಾರ್ಯಕ್ರಮವನ್ನು ಆದ್ಯತೆಯಾಗಿ ಕೈಗೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಭೂ ದಾಖಲೆಗಳಿಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆಶ್ರಯ ಯೋಜನೆ, ಬ್ಯಾಂಕ್ ಸಾಲ, ಇ-ಸ್ವತ್ತು, ಮತ್ತು ಆಸ್ತಿ ಪರಬಾರೆ ಮಾಡುವಂತಹ ಹಕ್ಕುಗಳನ್ನು ಹೊಂದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರವು ಕಾನೂನು ತಿದ್ದುಪಡಿ ಮಾಡಿ ಆರು ವರ್ಷಗಳಲ್ಲಿ (2017-2023) 1.06 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿತ್ತು. ಆದರೆ, ಪ್ರಸ್ತುತ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಇದನ್ನು ಒಂದು ಪ್ರಮುಖ ಯೋಜನೆಯಾಗಿ ಪರಿಗಣಿಸಿ, ಕೇವಲ ಎರಡುವರೆ ವರ್ಷಗಳಲ್ಲಿ 2.20 ಲಕ್ಷ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದೆ. ಕೇಂದ್ರ ಸರ್ಕಾರದ ಜನಗಣತಿ ನಿರ್ದೇಶನದಿಂದಾಗಿ ಹೊಸ ಕಂದಾಯ ಗ್ರಾಮ ಸೃಜನೆಗೆ ತಾತ್ಕಾಲಿಕ ನಿರ್ಬಂಧವಿರುವುದರಿಂದ ಇನ್ನೂ 2 ಲಕ್ಷ ಹಕ್ಕುಪತ್ರಗಳ ವಿತರಣೆ ವಿಳಂಬವಾಗಿದೆ. ಜನಗಣತಿ ಮುಗಿದ ನಂತರ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್ – Kannada News | Udhayanidhi Stalin repeats controversial Sanatan dharm must be abolished comment in Tamil Nadu Assembly

ಚೆನ್ನೈ, ಮೇ 12: ತಮಿಳುನಾಡಿನಲ್ಲಿ ಮತ್ತೊಮ್ಮೆ ಸನಾತನ ಧರ್ಮದ ಸುತ್ತಲಿನ ವಿವಾದ ಸೃಷ್ಟಿಯಾಗಿದೆ. ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಇಂದು ಸದನದಲ್ಲಿ ಮತ್ತೆ ‘ಸನಾತನ ಧರ್ಮದ ನಿರ್ಮೂಲನೆ’ಯನ್ನು ಪ್ರತಿಪಾದಿಸಿದ್ದಾರೆ. ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Joseph Vijay) ಮೌನವಾಗಿದ್ದರು.

“ಜನರನ್ನು ಬೇರ್ಪಡಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಸ್ಟಾಲಿನ್ ತಮಿಳುನಾಡು ಚುನಾವಣೆಯ ನಂತರ ವಿಧಾನಸಭಾ ಅಧಿವೇಶನದ ಮೊದಲ ದಿನದಂದು ಹೇಳಿದ್ದಾರೆ. ಅವರ ಈ ಹೇಳಿಕೆಗಳು ಸನಾತನ ಧರ್ಮದ ಬಗ್ಗೆ ಅವರ ಹಿಂದಿನ ಹೇಳಿಕೆಗಳನ್ನು ಪ್ರತಿಬಿಂಬಿಸುತ್ತವೆ. ಅದರಲ್ಲಿ ಅವರು ಪ್ರಾಚೀನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳ ಜೊತೆ ಹೋಲಿಸಿದ್ದರು. ಅಂತಹ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಜನರನ್ನು ಒತ್ತಾಯಿಸಿದ್ದರು. ಈ ಹೇಳಿಕೆಗಳ ಬಳಿಕ ಸ್ಟಾಲಿನ್‌ಗೆ ದೊಡ್ಡ ಕಾನೂನು ತೊಂದರೆ ಎದುರಾಗಿತ್ತು. ಅವರ ವಿರುದ್ಧ ಹಲವಾರು ನ್ಯಾಯಾಲಯ ಪ್ರಕರಣಗಳು ದಾಖಲಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ತಂಗಿಯ ರೆಸ್ಟೋರೆಂಟ್; 1 ಪ್ಲೇಟ್ ಪಾಸ್ತಾ ಬೆಲೆ 5 ಸಾವಿರ ರೂಪಾಯಿ – Kannada News | Salman Khan sister Arpita Khan luxury restaurant Mercii menu prices Mumbai

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ತಂಗಿ ಅರ್ಪಿತಾ ಖಾನ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಆದರೆ ಇದು ಯಾವುದೇ ಸಿನಿಮಾಗೆ ಸಂಬಂಧಿಸಿದ ಕಾರಣಕ್ಕಾಗಿ ಅಲ್ಲ. ಬದಲಿಗೆ, ಅವರು ಮುಂಬೈನಲ್ಲಿ ಆರಂಭಿಸಿರುವ ಐಷಾರಾಮಿ ರೆಸ್ಟೋರೆಂಟ್‌ನ ದರ ಪಟ್ಟಿಗಾಗಿ ಎಂಬುದು ವಿಶೇಷ. ಮುಂಬೈನ ಪ್ರತಿಷ್ಠಿತ ಸಾಂತಾಕ್ರೂಜ್ ಪ್ರದೇಶದಲ್ಲಿ ಅರ್ಪಿತಾ ಖಾನ್ (Arpita Khan) Mercii ಎಂಬ ಯುರೋಪಿಯನ್ ಶೈಲಿಯ ಫೈನ್-ಡೈನಿಂಗ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇದರಲ್ಲಿನ ಆಹಾರದ ಬೆಲೆಗಳನ್ನು ನೋಡಿ ಸಾಮಾನ್ಯ ಜನರು ದಂಗಾಗಿದ್ದಾರೆ.

ಇತ್ತೀಚೆಗೆ ಈ ರೆಸ್ಟೋರೆಂಟ್‌ನ ಮೆನು ಕಾರ್ಡ್‌ನ ಕೆಲವು ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಸಾಮಾನ್ಯವಾಗಿ ಒಂದು ಉತ್ತಮ ರೆಸ್ಟೋರೆಂಟ್‌ನಲ್ಲಿ ಸಿಗುವ ಪಾಸ್ತಾ ಬೆಲೆ ನೂರಾರು ರೂಪಾಯಿಗಳಲ್ಲಿರುತ್ತದೆ. ಆದರೆ ಅರ್ಪಿತಾ ಅವರ ರೆಸ್ಟೋರೆಂಟ್‌ನಲ್ಲಿ ಒಂದು ಪ್ಲೇಟ್ ಯುರೋಪಿಯನ್ ಪಾಸ್ತಾ ಬೆಲೆ ಸುಮಾರು 5 ಸಾವಿರ ರೂಪಾಯಿ ಎಂದು ವರದಿಯಾಗಿದೆ.

ಅಷ್ಟೇ ಅಲ್ಲದೆ, ಇಲ್ಲಿನ ಬಹುತೇಕ ಖಾದ್ಯಗಳ ಬೆಲೆ ಒಂದು ಸಾವಿರ ರೂಪಾಯಿಗಿಂತಲೂ ಹೆಚ್ಚಿದೆ. ಕೆಲವು ವಿಶೇಷ ಖಾದ್ಯಗಳ ಬೆಲೆ 10 ಸಾವಿರ ರೂಪಾಯಿಗೂ ಮೀರಿದ್ದು, ಇದು ಮುಂಬೈನಲ್ಲೇ ಅತ್ಯಂತ ದುಬಾರಿ ಸೆಲೆಬ್ರಿಟಿ ರೆಸ್ಟೋರೆಂಟ್‌ಗಳಲ್ಲಿ ಒಂದೆನಿಸಿದೆ. ಈ ದುಬಾರಿ ದರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

‘ಇದರಲ್ಲಿ ಅಂತಹ ವಿಶೇಷವೇನಿದೆ? ಬಂಗಾರದ ತಟ್ಟೆಯಲ್ಲಿ ನೀಡುತ್ತಾರೆಯೇ?’ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು, ‘ಇದು ಕೇವಲ ಕೋಟ್ಯಧಿಪತಿಗಳು ಮತ್ತು ಸೆಲೆಬ್ರಿಟಿಗಳಿಗಾಗಿ ಮಾಡಿರುವ ರೆಸ್ಟೋರೆಂಟ್. ಇಲ್ಲಿ ಸಾಮಾನ್ಯ ಜನರು ಹೋಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ನಟನೆಯ ಹಿಂದಿ ಸಿನಿಮಾಗೆ ಸಿಕ್ತು ಸಲ್ಮಾನ್ ಖಾನ್ ಬೆಂಬಲ

ವರದಿಗಳ ಪ್ರಕಾರ ಅರ್ಪಿತಾ ಖಾನ್ ಅವರ ಒಟ್ಟು ಆಸ್ತಿ 166 ಕೋಟಿ ರೂಪಾಯಿಗಳಾಗಿದ್ದು, ಅವರ ಕುಟುಂಬದ ಒಟ್ಟು ಆಸ್ತಿ 257 ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ ಅವರ ಪತಿ ಆಯುಷ್ ಶರ್ಮಾ ಅವರ ಪಾಲು ಕೇವಲ ಶೇ.35ರಷ್ಟು ಮಾತ್ರ ಎಂದು ಹೇಳಲಾಗಿದೆ. ಅರ್ಪಿತಾ ಖಾನ್ ಅವರು ಸಲೀಂ ಖಾನ್ ಅವರ ದತ್ತುಪುತ್ರಿ. ಆದರೂ ಇಡೀ ಖಾನ್ ಕುಟುಂಬಕ್ಕೆ ಅರ್ಪಿತಾ ಎಂದರೆ ಪಂಚಪ್ರಾಣ. ಅದರಲ್ಲೂ ಸಲ್ಮಾನ್ ಖಾನ್ ಅವರಿಗೆ ಅರ್ಪಿತಾ ಅತಿ ಪ್ರಿಯವಾದ ಸಹೋದರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪದೇಪದೇ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವುದು ಸಾಮಾನ್ಯವಲ್ಲ; ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು ಎಚ್ಚರ! – Kannada News | When Bloating and Gas Mean More Than Indigestion

ಇತ್ತೀಚಿನ ದಿನಗಳಲ್ಲಿ ಅನೇಕರು ಪದೇಪದೇ ಹೊಟ್ಟೆ ನೋವು (Stomach Pain) ಅಜೀರ್ಣ (Indigestion), ಗ್ಯಾಸ್ಟ್ರಿಕ್ (Gastric) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಅದು ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು. ಹೌದು, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ತಜ್ಞ ಡಾ. ಎಲ್.ಎಚ್. ಘೋಟೇಕರ್ ಅವರು ಹೇಳುವ ಪ್ರಕಾರ, ಪದೇಪದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಅಸ್ವಸ್ಥ ಆಹಾರ ಪದ್ಧತಿಯಾಗಿದೆ. ಹಾಗಾದರೆ ಪದೇ ಪದೇ ಈ ರೀತಿಯಾಗುವುದಕ್ಕೆ ಕಾರಣವೇನು, ಯಾವ ರೀತಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಹೊಟ್ಟೆ ಆರೋಗ್ಯ ಕಾಪಾಡಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಸಮಸ್ಯೆಗಳ ಸೂಚನೆಯಾಗಿರಬಹುದು?

ಇತ್ತೀಚಿನ ದಿನಗಳಲ್ಲಿ ಅನೇಕರು ಮೈದಾ ಪದಾರ್ಥಗಳು, ಫಾಸ್ಟ್ ಫುಡ್ ಮತ್ತು ಎಣ್ಣೆಯ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ರೀತಿಯ ಆಹಾರ ಸುಲಭವಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆ ಉಂಟುಮಾಡುತ್ತದೆ. ಕೆಲವರಿಗೆ ಹಾಲು, ಗ್ಲೂಟನ್ ಅಥವಾ ಕೆಲವು ಆಹಾರ ಪದಾರ್ಥಗಳು ಕೂಡ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ಉಬ್ಬುವುದು ಮತ್ತು ಸಣ್ಣ ನೋವು ಕಾಣಿಸಿಕೊಳ್ಳಬಹುದು. ದೀರ್ಘಕಾಲ ಗ್ಯಾಸ್ಟ್ರಿಕ್, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆ ಇದ್ದರೆ ಅದು ಐಬಿಎಸ್ (ಇರಿಟೇಬಲ್ ಬವಲ್ ಸಿಂಡ್ರೋಮ್) ಅಥವಾ ಅಂತರಾಯದ ಉರಿಯೂತದ ಸೂಚನೆಯಾಗಿರಬಹುದು. ಕೆಲ ಸಂದರ್ಭಗಳಲ್ಲಿ ಹೊಟ್ಟೆ ಸಮಸ್ಯೆ ಅಲ್ಸರ್ ಅಥವಾ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿಯೂ ಕಾಣಿಸಬಹುದು. ಹೀಗಾಗಿ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ; ಇದರ ಹಿಂದೆ ಬರಬಹುದು ನೀವು ಊಹಿಸಲೂ ಸಾಧ್ಯವಿಲ್ಲದ ಕಾಯಿಲೆಗಳು!

ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ:

  • ಕಾರಣವಿಲ್ಲದೆ ತೂಕ ಇಳಿಕೆಯಾಗುವುದು
  • ಪದೇಪದೇ ವಾಂತಿ
  • ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು
  • ದೌರ್ಬಲ್ಯ ಮತ್ತು ಬೇಗ ದಣಿವಾಗುವುದು
  • ನಿರಂತರ ಹೊಟ್ಟೆನೋವು

ಹೊಟ್ಟೆಯ ಆರೋಗ್ಯ ಕಾಪಾಡಲು ಏನು ಮಾಡಬೇಕು?

ವೈದ್ಯರ ಪ್ರಕಾರ, ಫಾಸ್ಟ್ ಫುಡ್ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು. ದಿನಕ್ಕೆ ಕನಿಷ್ಠ 7 ಗ್ಲಾಸ್ ನೀರು ಕುಡಿಯಬೇಕು. ಹಸಿರು ತರಕಾರಿ, ಹಣ್ಣು ಮತ್ತು ಫೈಬರ್‌ಯುಕ್ತ ಆಹಾರ ಸೇವಿಸುವುದು ಜೀರ್ಣಕ್ರಿಯೆ ಸುಧಾರಣೆಗೆ ಸಹಾಯಕ. ಪ್ರತಿದಿನ ನಿಯಮಿತ ಸಮಯಕ್ಕೆ ಊಟ ಮಾಡುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುವು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ: ಕರಾವಳಿ ಜನರೇ ಎಚ್ಚರ – Kannada News | IMD Forecast: Karnataka Brace for Hailstorms and Strong Winds; Districts Under Alert

ಬೆಂಗಳೂರು, ಮೇ.12: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದ್ದು, ಆಲಿಕಲ್ಲು ಮಳೆ (Hailstorm) ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಉತ್ತರ ಒಳನಾಡಿನಲ್ಲಿ ಮೇ 14 ಮತ್ತು 15 ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ದಕ್ಷಿಣ ಒಳನಾಡಿನಲ್ಲೂ ಕೂಡ ಮೇ 15 ರಂದು ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಐಎಂಡಿ (IMD) ವತಿಯಿಂದ ಆರೆಂಜ್ಅಲರ್ಟ್ ನೀಡಲಾಗಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಮೇ 14 ರಿಂದ 16 ರವರೆಗೆ ರಾಜ್ಯದ ಹಲವೆಡೆ ಆಲಿಕಲ್ಲು ಮಳೆ (Hailstorm) ಸಾಧ್ಯತೆಯಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಮತ್ತು ಕೊಪ್ಪಳ ಮೇ 14-15ರಂದು ಮಳೆಯಾಗುತ್ತದೆ. ಇನ್ನು ಮೇ. 14 ದಾವಣಗೆರೆ, ವಿಜಯನಗರ, ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಂಜಿನ ಕಲ್ಲುಗಳು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನೈಋತ್ಯ ಮುಂಗಾರು (Southwest Monsoon) ಚುರುಕುಗೊಂಡಿದ್ದು, ಈ ವಾರಾಂತ್ಯಕ್ಕೆ ಅಂಡಮಾನ್ ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮಿಸುವ ಲಕ್ಷಣಗಳಿವೆ. ಪ್ರಸ್ತುತ ಉಂಟಾಗಿರುವ ‘ಸೈಕ್ಲೋನಿಕ್ ಸರ್ಕ್ಯುಲೇಷನ್’ ಮಳೆಯ ತೀವ್ರತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಮಲೆನಾಡಲ್ಲಿ ವರುಣನ ಆರ್ಭಟ: ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ; ಮಂಜಿನ ನಗರಿಯಾದ ಕಾಫಿನಾಡು!

ಗುಡುಗು-ಮಿಂಚಿನ ವೇಳೆ ಮನೆಯೊಳಗೆ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ. ಮರ ಅಥವಾ ವಿದ್ಯುತ್ ಕಂಬಗಳ ಕೆಳಗೆ ಆಶ್ರಯ ಪಡೆಯಬೇಡಿ. ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಪರೀಕ್ಷೆ ರದ್ದಾಗಿದ್ದಕ್ಕೆ ವಿದ್ಯಾರ್ಥಿಗಳು ಬೇಸರ; ಜ್ಯೋತಿಷಿಗೆ ಗಿಫ್ಟ್ ನೀಡಿದ ಸಿಎಂ ವಿಜಯ್ – Kannada News | TV9 Kannada News Live: Students upset Over NEET Exam Cancellation; CM Vijay Gives Gifts to Astrologer

ಬೆಂಗಳೂರು, ಮೇ 12: ಮೇ 3ರಂದು ದೇಶಾದ್ಯಂತ ನಡೆದ NEET-UG ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲೇ ಹೊಸ ದಿನಾಂಕ ನಿಗದಿ ಮಾಡಲಾಗುವುದು ಎಂದು ಅದು ಹೇಳಿದೆ. ನೀಟ್ ಪರೀಕ್ಷೆ ರದ್ದಾಗಿರೋದಕ್ಕೆ ರಾಜ್ಯದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯದ ಸಚಿವರೂ ಆಕ್ರೋಶ ಹೊರಹಾಕಿದ್ದಾರೆ. ನೀಟ್​ ಪರೀಕ್ಷೆ ರದ್ದಾಗಿರುವುದರಿಂದ ಆಘಾತ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ. ಇನ್ನು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಆಕ್ರೋಶ ಹೊರಹಾಕಿದ್ದು, ರಾಜ್ಯದಲ್ಲಿ ಪರೀಕ್ಷೆಯಲ್ಲಿ ಇಂತಹ ಅಕ್ರಮವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಾಂಶಗಳು

  • ನೀಟ್ ಪರೀಕ್ಷೆ ರದ್ದಾಗಿದ್ದಕ್ಕೆ ರಾಜ್ಯದ ಸಚಿವರು ಆಕ್ರೋಶ
  • ಭವಿಷ್ಯ ನುಡಿದ ಜ್ಯೋತಿಷಿಗೆ ಸಿಎಂ ವಿಜಯ್ ಕಡೆಯಿಂದ ಭರ್ಜರಿ ಗಿಫ್ಟ್​​
  • ಬಗೆದಷ್ಟು ಬಯಲಾಗ್ತಿದೆ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣದ ರಹಸ್ಯ

ಪೊಲೀಸರಿಗೆ ಕಗ್ಗಂಟಾದ ಜಿಲೆಟಿನ್ ಕಡ್ಡಿ ಪ್ರಕರಣ: ಆರೋಪಿ ಲೋಹಿತ್​ ಮೂಲ ಸೂತ್ರಧಾರಿನಾ?

ಪ್ರಧಾನಿ ನರೇಂದ್ರ ಮೋದಿ ಹಾದು ಹೋಗುವ ಮಾರ್ಗ ಬಳಿ ಜಿಲೆಟಿನ್‌ ಕಡ್ಡಿ ಪತ್ತೆ ಪ್ರಕರಣ ಪೊಲೀಸರಿಗೆ ಕಗ್ಗಂಟ್ಟಾಗಿದೆ. ಕಳೆದ ಮೂರು ದಿನಗಳಾದ್ರೂ ಆರೋಪಿಯ ಸುಳಿವೇ ಸಿಕ್ಕಿರಲಿಲ್ಲ. ಬೆಂಗಳೂರಿನ ವಡೇರಹಳ್ಳಿ ಗೇಟ್ ಬಳಿ ಪತ್ತೆಯಾಗಿದ್ದ ಸ್ಫೋಟಕಗಳನ್ನ ಯಾರಿಟ್ಟಿದ್ದು ಎಂದು ಸುಳಿವೇ ಸಿಕ್ಕಿರಲಿಲ್ಲ. ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ ಮಾಡಿದ್ರು. ಆದರೆ ಅಂದು ಮೇ10 ರಂದು ಮೋದಿ ಬರುವ ವೇಳೆಯಲ್ಲೇ ಬಾಂಬ್ ಸ್ಫೋಟಿಸೋದಾಗಿ ಬೆದರಿಕೆ ಕರೆ ಮಾಡಿದ್ದ ಲೋಹಿತ್​​ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಈತನಿಗೂ ಜಿಲೆಟಿನ್ ಕಡ್ಡಿ ಪತ್ತೆಗೂ ಏನಾದ್ರೂ ಸಂಬಂಧ ಇದೆಯಾ ಅಂತಾ ಪೊಲೀಸರು ತನಿಖೆ ಮಾಡಿದ್ದರು. ಆದರೆ ಇದೀಗ ಅದು ನಿಜ ಆದಂತೆ ಕಾಣಿಸ್ತಿದೆ. ಏಕೆಂದರೆ ಆರೋಪಿ ಲೋಹಿತ್ ಹೇಳಿರುವ ಸ್ಥಳದ ಸಮೀಪವೇ ಜಿಲೆಟಿನ್ ಕಡ್ಡಿಗಳು ಪತ್ತೆ ಆಗಿದೆ.

ಶ್ರೀಲಂಕಾದಿಂದ ಭಾರತಕ್ಕೆ ಈಜಿ ದಾಖಲೆ ಸೃಷ್ಟಿಸಿದ ಬೆಂಗಳೂರು ದಂಪತಿ

ಬೆಂಗಳೂರಿನ ದಂಪತಿ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದ್ ಅವರು ಶ್ರೀಲಂಕಾದಿಂದ ಭಾರತಕ್ಕೆ ಪಾಲ್ಕ್ ಜಲಸಂಧಿಯ ಮೂಲಕ ಈಜಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೇ 7ರಂದು ಶ್ರೀಲಂಕಾದ ತಲೈಮನ್ನಾರ್‌ನಿಂದ ಈಜು ಆರಂಭಿಸಿದ ಜೋಡಿ, ಸುಮಾರು 32 ಕಿ.ಮೀ ದೂರವನ್ನು ಕೇವಲ 10 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿ ತಮಿಳುನಾಡಿನ ಧನುಷ್ಕೋಡಿಯನ್ನು ತಲುಪಿದ್ದಾರೆ.

ಇದನ್ನೂ ಓದಿ: ಟ್ರೆಕ್ಕಿಂಗ್​​ ಪ್ರಿಯರೇ ಗಮನಿಸಿ: ವನ್ಯಜೀವಿ ಓಡಾಟವಿರುವ ಚಾರಣಪಥಗಳಲ್ಲಿ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್​​

ಈ ಕಠಿಣ ಮಾರ್ಗದಲ್ಲಿ ಓಪನ್ ವಾಟರ್ ಈಜು ಪೂರ್ಣಗೊಳಿಸಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಕೇವಲ ನಾಲ್ಕು ವರ್ಷಗಳ ಹಿಂದೆ ಈಜು ಕಲಿಯಲು ಆರಂಭಿಸಿದ ಇವರು, ಕಠಿಣ ತರಬೇತಿಯ ಮೂಲಕ ಈ ಸಾಹಸ ಮೆರೆಯುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದಾರೆ.

ವಿಜಯ್​​ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದ್ದ ಜ್ಯೋತಿಷಿಯ ಲಕ್​​ ಚೇಂಜ್​​

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್​​ ಗೆಲುವನ್ನು ಮೊದಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರ ಲಕ್ಕೇ ಬದಲಾಗಿದೆ. ವಿಜಯ್ ಅವರದ್ದು ಸುನಾಮಿ ಜಾತಕ ಎಂದು ಹೇಳಿದ್ದ ಅವರನ್ನು ಸಿಎಂ ವಿಜಯ್ ಇದೀಗ ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ಆಸ್ಟ್ರಾಲಜಿ ಮೇಲೆ ವಿಜಯ್ ಅವರಿಗಿರುವ ನಂಬಿಕೆ ಅಥವಾ ಭವಿಷ್ಯ ನಿಜವಾದ ಕೃತಜ್ಞತೆಗಾಗಿ ಈ ಸ್ಥಾನ ನೀಡಲಾಗಿದೆಯೇ ಎಂಬ ಚರ್ಚೆ ಶುರುವಾಗಿದೆ. ವಿಶೇಷವೆಂದರೆ, ವಿಜಯ್ ಹೊಸ ಕ್ಯಾಬಿನೆಟ್‌ನಲ್ಲಿ ಯೂಟ್ಯೂಬರ್ ಸೇರಿದಂತೆ ರಾಜಕೀಯೇತರ ವ್ಯಕ್ತಿಗಳಿಗೆ ಮಣೆ ಹಾಕಲಾಗಿದ್ದು, ಇದು ತಮಿಳುನಾಡು ರಾಜಕೀಯದಲ್ಲಿ ಹೊಸ ಮತ್ತು ವಿಚಿತ್ರ ಬೆಳವಣಿಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ – Kannada News | Uday Kotak Warns: West Asia Crisis to Hit India Economy Hard; Oil Prices Loom

ನವದೆಹಲಿ, ಮೇ 12: ಪ್ರಖ್ಯಾತ ಉದ್ಯಮಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸ್ಥಾಪಕ ಉದಯ್ ಕೋಟಕ್ (Uday Kotak) ಅವರು ಪಶ್ಚಿಮ ಏಷ್ಯಾದಲ್ಲಿ (ವಿಶೇಷವಾಗಿ ಅಮೆರಿಕ ಮತ್ತು ಇರಾನ್ ನಡುವೆ) ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಭೀಕರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿನಗರಿಯಲ್ಲಿ ನಡೆದ ‘ಸಿಐಐ ವಾರ್ಷಿಕ ಸಮ್ಮೇಳನ 2026’ರಲ್ಲಿ ಮಾತನಾಡಿದ ಅವರು, ಭಾರತಕ್ಕೆ ದೊಡ್ಡ ಮಟ್ಟದ ಆರ್ಥಿಕ ಆಘಾತ ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆ ಅಷ್ಟಾಗಿ ಕಂಡಿಲ್ಲ. ಆದರೆ, “ನಿಜವಾದ ಆಘಾತ ಈಗ ಬರಲಿದೆ ಮತ್ತು ಅದು ಬಹಳ ದೊಡ್ಡದಾಗಿರಲಿದೆ” ಎಂದು ಕೋಟಕ್ ಹೇಳಿದ್ದಾರೆ. ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಅಸ್ಥಿರತೆ ಶೀಘ್ರದಲ್ಲೇ ಜನಸಾಮಾನ್ಯರಿಗೆ ತಟ್ಟಲಿದೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: I4C ಮತ್ತು RBIH ಮಧ್ಯೆ ಒಪ್ಪಂದ; ಭಾರತೀಯರಿಗೆ ಅತ್ಯಾಧುನಿಕ ಸೈಬರ್ ರಕ್ಷಾ ಕವಚ: ಅಮಿತ್ ಶಾ ಘೋಷಣೆ

ತೈಲ ಬೆಲೆ ಬ್ಯಾರಲ್​ಗೆ 60 ಡಾಲರ್ ಇದ್ದಾಗ ಚಾಲ್ತಿ ಖಾತೆ ಕೊರತೆ ಕಡಿಮೆ ಇತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ತಲುಪುವ ಸಾಧ್ಯತೆಯಿದೆ. ಇದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿ, ಹಣದುಬ್ಬರಕ್ಕೆ (ಬೆಲೆ ಏರಿಕೆ) ಕಾರಣವಾಗಲಿದೆ. ಸಾಮಾನ್ಯ ಜನರ ದೈನಂದಿನ ಖರ್ಚುಗಳು ಇದರಿಂದ ಹೆಚ್ಚಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕಷ್ಟದ ಕಾಲ ಬರುವ ಮುನ್ನವೇ ನಾವು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

“ಸಂಕಷ್ಟ ಬಂದ ಮೇಲೆ ಪ್ರತಿಕ್ರಿಯಿಸುವುದಕ್ಕಿಂತ, ಅದು ಬರುವ ಮೊದಲೇ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವುದು ಉತ್ತಮ” ಎಂದು ಅವರು ಉದ್ಯಮಿಗಳಿಗೆ ಮತ್ತು ಸರ್ಕಾರಕ್ಕೆ ಸೂಚಿಸಿದ್ದಾರೆ.

ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆ

ವಿಶ್ವವು ಈಗ ಸಹಕಾರದ ಬದಲು ತಮ್ಮ ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಡುವ ‘ಬುಡಕಟ್ಟು’ (Tribal) ಮನಸ್ಥಿತಿಗೆ ಮರಳುತ್ತಿದೆ. ವ್ಯಾಪಾರ ಮಾರ್ಗಗಳ ನಿಯಂತ್ರಣಕ್ಕಾಗಿ ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿರುವುದು ಭಾರತದಂತಹ ಆಮದು ಅವಲಂಬಿತ ದೇಶಗಳಿಗೆ ಸವಾಲಾಗಿದೆ. ಇಂಥ ಹೊತ್ತಲ್ಲಿ ಉದಯ್ ಕೋಟಕ್ ಅವರ ಈ ಎಚ್ಚರಿಕೆಯ ಮಾತುಗಳು ಕೇಳಿಬಂದಿರುವುದು ಗಮನಾರ್ಹ.

ಇದನ್ನೂ ಓದಿ: ಷೇರುಬಜಾರು ಅಲುಗಾಟ, 4-5 ದಿನದಲ್ಲಿ ಹೂಡಿಕೆದಾರರಿಗೆ 11 ಲಕ್ಷ ಕೋಟಿ ರೂ ನಷ್ಟ; ಬೇರೆ ದೇಶಗಳಲ್ಲಿ ಹೆಚ್ಚಿದರೂ ಭಾರತದಲ್ಲಿ ಕುಸಿತ ಯಾಕೆ?

ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಇಂಧನ ಬಳಕೆಯನ್ನು ಕಡಿಮೆ ಮಾಡಲು, ಸಾರ್ವಜನಿಕ ಸಾರಿಗೆ ಬಳಸಲು ಮತ್ತು ವಿದೇಶಿ ಪ್ರವಾಸಗಳನ್ನು ಮುಂದೂಡಲು ನಾಗರಿಕರಲ್ಲಿ ಮನವಿ ಮಾಡಿದ್ದರು. ಉದಯ್ ಕೋಟಕ್ ಅವರು ಈ ಆರ್ಥಿಕ ಶಿಸ್ತಿನ ಕರೆಯನ್ನು ಬೆಂಬಲಿಸಿದ್ದು, ದೇಶವು ತನ್ನ ಶಕ್ತಿಯ ಮೀರಿ ಖರ್ಚು ಮಾಡಬಾರದು ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟೈಫಾಯ್ಡ್ ಪ್ರಕರಣಗಳ ಹೆಚ್ಚಳ: ಮಕ್ಕಳಲ್ಲಿ ಈ ಲಕ್ಷಣ ಕಂಡುಬಂದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ – Kannada News | Typhoid Care For Kids: Treatment, Diet, and Recovery Timeline

ಬದಲಾಗುತ್ತಿರುವ ಹವಾಮಾನದಲ್ಲಿ, ಮಕ್ಕಳಲ್ಲಿ ಟೈಫಾಯ್ಡ್ (Typhoid) ಜ್ವರದ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ, ಪೋಷಕರಿಗೆ ತಮ್ಮ ಮಗುವಿಗೆ ಈ ಜ್ವರವಿದೆ ಎಂದು ಆರಂಭದಲ್ಲಿ ತಿಳಿಯುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಮತ್ತಷ್ಟು ಅಪಾಯಕಾರಿಯಾಗಬಹುದು. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದರಿಂದ ಸಾಧ್ಯವಾದಷ್ಟು ಈ ಜ್ವರವನ್ನು ನಿಯಂತ್ರಿಸಬಹುದಾಗಿದೆ. ಡಾ. ವಿಪಿನ್‌ಚಂದ್ರ ಉಪಾಧ್ಯಾಯ ಅವರು ಹೇಳುವ ಪ್ರಕಾರ, ಟೈಫಾಯ್ಡ್ ಒಂದು ಬ್ಯಾಕ್ಟೀರಿಯಾ ಸೋಂಕು. ಇದು ಕಲುಷಿತ ನೀರು ಮತ್ತು ಅಶುದ್ಧ ಆಹಾರದ ಮೂಲಕ ಹರಡುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಬೇಗ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ಟೈಫಾಯ್ಡ್‌ ಕಂಡುಬರುವ ಮೊದಲು ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ರೀತಿ ಮಕ್ಕಳಿಗೆ ಟೈಫಾಯ್ಡ್ ಬಂದರೆ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಟೈಫಾಯ್ಡ್‌ನ ಆರಂಭಿಕ ಲಕ್ಷಣಗಳು:

ತಜ್ಞರ ಪ್ರಕಾರ, ಎರಡು ದಿನಕ್ಕಿಂತ ಹೆಚ್ಚು ಕಾಲ ಇರುವ ಜ್ವರ ಟೈಫಾಯ್ಡ್‌ನ ಪ್ರಮುಖ ಲಕ್ಷಣವಾಗಿದೆ. ಜೊತೆಗೆ ದೌರ್ಬಲ್ಯ, ಬೇಗ ದಣಿವು, ಹಸಿವು ಕಡಿಮೆಯಾಗುವುದು, ಹೊಟ್ಟೆನೋವು, ಹೊಟ್ಟೆ ಉಬ್ಬುವುದು, ವಾಂತಿ, ಅತಿಸಾರ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಈ ಜ್ವರದ ಆರಂಭಿಕ ಲಕ್ಷಣವಾಗಿರುತ್ತದೆ. ಇನ್ನು ಕೆಲ ಮಕ್ಕಳಲ್ಲಿ ನಿರಂತರ ಬೇಸರ, ನಿದ್ರಾಹೀನತೆ ಮತ್ತು ಆಟದಲ್ಲಿ ಆಸಕ್ತಿ ಕಡಿಮೆಯಾಗುವಂತಹ ಲಕ್ಷಣ ಕೂಡ ಕಾಣಿಸಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1: ಆತಂಕಕಾರಿ ಮಾಹಿತಿ ಬಹಿರಂಗ

ಯಾವ ಲಕ್ಷಣಗಳು ಗಂಭೀರವಾಗಿರಬಹುದು?

ತೀವ್ರ ಜ್ವರ, ನಿರಂತರ ವಾಂತಿ, ಉಸಿರಾಟದ ತೊಂದರೆ, ಅತಿಯಾದ ದೌರ್ಬಲ್ಯ ಅಥವಾ ಪ್ರಜ್ಞೆ ತಪ್ಪುವ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಸೋಂಕು ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಟೈಫಾಯ್ಡ್ ಬಂದರೆ ಏನು ಮಾಡಬೇಕು?

ವೈದ್ಯರ ಸಲಹೆಯಂತೆ ಪೂರ್ಣ ಔಷಧಿ ಕೋರ್ಸ್ ಮುಗಿಸುವುದು ಬಹಳ ಮುಖ್ಯ. ಮಕ್ಕಳಿಗೆ ವಿಶ್ರಾಂತಿ ನೀಡಬೇಕು ಹಾಗೂ ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಕೊಡಬೇಕು. ಗಂಜಿ, ಸೂಪ್ ಮತ್ತು ಹಗುರವಾದ ಆಹಾರ ನೀಡುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.

ಟೈಫಾಯ್ಡ್ ತಡೆಯಲು ಈ ಮುನ್ನೆಚ್ಚರಿಕೆ ಅಗತ್ಯ:

  • ಮಕ್ಕಳಿಗೆ ಯಾವಾಗಲೂ ಶುದ್ಧ ನೀರನ್ನು ನೀಡಬೇಕು
  • ಹೊರಗೆ ಸಿಗುವ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು
  • ಊಟಕ್ಕೂ ಮೊದಲು ಮತ್ತು ಶೌಚಾಲಯದ ಬಳಿಕ ಕೈ ತೊಳೆಯುವ ಅಭ್ಯಾಸ ಮಾಡಿಸಬೇಕು
  • ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಕೊಡಬೇಕು

ಸರಿಯಾದ ಸ್ವಚ್ಛತೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡಿದರೆ ಟೈಫಾಯ್ಡ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link