ಕಾಂಗ್ರೆಸ್ ಜೊತೆ ಕೂರುವುದಿಲ್ಲ, ಬೇರೆ ಆಸನ ನೀಡಿ; ಲೋಕಸಭಾ ಸ್ಪೀಕರ್‌ಗೆ ಡಿಎಂಕೆ ಸಂಸದೆ ಕನಿಮೋಳಿ ಪತ್ರ – Kannada News | DMK MP Kanimozhi seeks separate seating in Lok Sabha after party officially ends alliance with Congress
ನವದೆಹಲಿ, ಮೇ 8: ತಮಿಳುನಾಡಿನಲ್ಲಿ 55 ವರ್ಷಗಳಿಂದ ಡಿಎಂಕೆ ಜೊತೆ ಮೈತ್ರಿಯಲ್ಲಿದ್ದ ಕಾಂಗ್ರೆಸ್ ಈ ಬಾರಿ ವಿಜಯ್ ಅವರ ಟಿವಿಕೆಗೆ (TVK) ಬೆಂಬಲ ಘೋಷಿಸಲು ತಮ್ಮ ದಶಕಗಳ ಮೈತ್ರಿಯನ್ನು ಮುರಿದುಕೊಂಡಿದೆ. ಇದು ಎರಡೂ ಪಕ್ಷಗಳ ನಾಯಕರ ಮೇಲೆ ಪರಿಣಾಮ ಬೀರಿದೆ. ಡಿಎಂಕೆ ಸಂಸದೆ ಕನಿಮೋಳಿ ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದು, ನಮ್ಮ ಮೈತ್ರಿ ಮುರಿದುಬಿದ್ದಿರುವುದರಿಂದ ನಾವು (ಡಿಎಂಕೆ ಸಂಸದರು) ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಜೊತೆ ಕುಳಿತುಕೊಳ್ಳುವುದಿಲ್ಲ. ನಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಕೋರಿದ್ದಾರೆ….