ಹಾಸನ, ಫರಬ್ರವರಿ 25: ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕಲಹ ವರದಿಯಾಗಿದೆ. ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ದಾಖಲಾತಿಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಮ್ಯಾನೇಜರ್ ಪ್ರಕಾಶ್ ಸೂಚನೆಯಂತೆ ತೆರವುಗೊಳಿಸಲಾಗಿದೆ. ಬೇರೆ ಯಾವುದೇ ಸಿಬ್ಬಂದಿ, ಶಾಖೆಗೂ ಕ್ಯಾಮರಾ ಅಳವಡಿಸದೆ ತಮ್ಮ ಕಚೇರಿಗೆ ಮಾತ್ರ ಹಾಕಿರುವದಕ್ಕೆ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅನುಮತಿ ಕೇಳದೆ ಕ್ಯಾಮರಾ ಹೇಗೆ ಹಾಕಿದ್ರು ಎಂದು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಯು ಹಾಸನ ಮಹಾನಗರ ಪಾಲಿಕೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹ ಕಾರ್ಯಕ್ರಮಗಳು ಬಲು ಅದ್ಧೂರಿಯಾಗಿ ನಡೆಯುತ್ತಿವೆ. ರಾಜಸ್ಥಾನದ ಉದಯಪುರದ ಬಳಿಯ ಐಶಾರಾಮಿ ರೆಸಾರ್ಟ್ನಲ್ಲಿ ಈ ಜೋಡಿ ವಿವಾಹ ಆಗುತ್ತಿದ್ದು, ಈ ಮದುವೆಯು ಬಲು ಅದ್ಧೂರಿಯಾಗಿಯೂ ಜೊತೆಗೆ ಅತ್ಯಂತ ಖಾಸಗಿಯಾಗಿಯೂ ಇರಲಿದೆ. ಈಗಾಗಲೇ ಮದುವೆ ಕಾರ್ಯಗಳು ಪ್ರಾರಂಭವಾಗಿ ವಾರವಾಗುತ್ತಾ ಬಂದಿದೆ. ಇಂದು ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಅವರು ಒಂದಲ್ಲ ಎರಡು ಬಾರಿ ಮದುವೆ ಆಗಲಿದ್ದಾರೆ!
ಹಿಂದೂ ಸಂಪ್ರದಾಯದಲ್ಲಿ ಒಂದು ಬಾರಿ ಮಾಂಗಲ್ಯಧಾರಣೆ ಮಾಡುವ ಪದ್ಧತಿ ಇದೆ. ಆದರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಎರಡೆರಡು ಬಾರಿ ಮದುವೆ ಆಗಲಿದ್ದಾರೆ. ಸಾಮಾನ್ಯವಾಗಿ ಎರಡು ಬೇರೆ ಧರ್ಮದವರು ಮದುವೆ ಆದಾಗ ಹೀಗೆ ಎರಡೆರಡು ಬಾರಿ ಮದುವೆ ಮಾಡುವ ಸಂಪ್ರದಾಯ ಚಿತ್ರರಂಗದಲ್ಲಿದೆ. ಆದರೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹಿಂದೂ ಧರ್ಮದವರೇ ಆಗಿದ್ದರೂ ಸಹ ಈ ಜೋಡಿ ಎರಡೆರಡು ಬಾರಿ ಮದುವೆ ಆಗುತ್ತಿದೆ. ಆದರೆ ಹೀಗೆ ಎರಡು ಬಾರಿ ಮದುವೆ ಆಗುತ್ತಿರುವುದು ಒಳ್ಳೆಯ ಕಾರಣಕ್ಕೆ.
ನಾಳೆ (ಫೆಬ್ರವರಿ 26) ಬೆಳಿಗ್ಗೆ ಮೊದಲಿಗೆ ವಿಜಯ್ ದೇವರಕೊಂಡ ಅವರ ಕುಟುಂಬ ಮತ್ತು ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ಬೆಳಿಗ್ಗೆ ಮದುವೆ ಕಾರ್ಯ ನಡೆಯಲಿದೆ. ಅದಾದ ಬಳಿಕ ಸಂಜೆ ವೇಳೆಗೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇಬ್ಬರೂ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸಲೆಂದು ಈ ನಿರ್ಧಾರವನ್ನು ಮಾಡಲಾಗಿದೆ.
ಈ ಮಾದರಿಯಿಂದ, ಎರಡೂ ಕಡೆಯ ಕುಟುಂಬದವರಿಗೆ ಪರಸ್ಪರರ ಕುಟುಂಬಗಳ ಸಂಪ್ರದಾಯಗಳ ಅರಿವು, ಪರಿಚಯ ಆದಂತಾಗುತ್ತದೆ. ಮತ್ತು ಎರಡೂ ಕುಟುಂಬದವರು ಪರಸ್ಪರರ ಸಂಪ್ರದಾಯ, ಆಚರಣೆಗಳನ್ನು ಗೌರವಿಸಿದಂತೆ ಆಗುತ್ತದೆ. ಹಾಗಾಗಿಯೇ ಎರಡು ಬಾರಿ ಮದುವೆ ಆಗುತ್ತಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮಗಳು ಇಂದು ನಡೆಯಲಿವೆ. ಈಗಾಗಲೇ ಅವರ ಕೆಲವಾರು ಗೆಳೆಯರು ಉದಯಪುರ ತಲುಪಿದ್ದು ಮದುವೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಸಹ ಭಾಗಿ ಆಗಿದ್ದಾರೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ಮುಗಿಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್ನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಆಯೋಜಿಸಲಾಗಿದೆ. ರಿಸೆಪ್ಷನ್ನಲ್ಲಿ ಚಿತ್ರರಂಗದ ಹಲವಾರು ಮಂದಿ ಗಣ್ಯರು ಮತ್ತು ರಾಜಕಾರಣಿಗಳು ಭಾಗವಹಿಸಲಿದ್ದಾರೆ.
T20 World Cup 2026: ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಅರ್ಧ ಪಂದ್ಯವನ್ನೇ ಗೆದ್ದಂತೆ. ಹೀಗಾಗಿಯೇ ಈ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ದುಕೊಳ್ಳುತ್ತೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮರು ಯೋಚಿಸದೇ ಬ್ಯಾಟಿಂಗ್ ಎಂದಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಸಾಹಿಬ್ಝಾದ ಫರ್ಹಾನ್ ಉತ್ತಮ ಆರಂಭ ಒದಗಿಸಿದ್ದರು. ಪರಿಣಾಮ ಪವರ್ಪ್ಲೇನಲ್ಲಿ ಪಾಕ್ ತಂಡವು 46 ರನ್ಗಳಿಸಲು ಸಾಧ್ಯವಾಯಿತು. ಇದರ ನಡುವೆ 6 ಎಸೆತಗಳಲ್ಲಿ ಬಾಬರ್ ಆಝಂ 10 ರನ್ ಬಾರಿಸಿದ್ದರು.
ಆದರೆ ಪವರ್ಪ್ಲೇ ಮುಕ್ತಾಯದ ಬಳಿಕ ಬಾಬರ್ ಟೆಸ್ಟ್ ಆಟ ಶುರು ಮಾಡಿಕೊಂಡರು. ಅಂದರೆ ಮೊದಲ 6 ಎಸೆತಗಳಲ್ಲಿ 10 ರನ್ಗಳಿಸಿದ್ದ ಬಾಬರ್ ಉಳಿದ 18 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 15 ರನ್ಗಳು ಮಾತ್ರ. ಈ ಹದಿನೈದು ರನ್ಗಳಲ್ಲಿ 2 ರನ್ ಓವರ್ ಥ್ರೋನಿಂದ ಸಿಕ್ಕಿದ್ದು ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಂದರೆ ಪವರ್ಪ್ಲೇ ಬಳಿಕ ಬಾಬರ್ ಆಝಂ ಎದುರಿಸಿದ 18 ಎಸೆತಗಳಲ್ಲಿ ಕೇವಲ 13 ರನ್ ಮಾತ್ರ ಕಲೆಹಾಕಿದ್ದರು. ಇದರಲ್ಲಿ ಒಂದೇ ಒಂದು ಫೋರ್ ಕೂಡ ಇರಲಿಲ್ಲ.
4ನೇ ಓವರ್ ವೇಳೆ ಕ್ರೀಸ್ಗೆ ಆಗಮಿಸಿ 11ನೇ ಓವರ್ ತನಕ ಬ್ಯಾಟ್ ಬೀಸಿದ ಬಾಬರ್ ಆಝಂ ಕಲೆಹಾಕಿದ್ದು 24 ಎಸೆತಗಳಲ್ಲಿ 25 ರನ್ಗಳು ಮಾತ್ರ. ಈ 24 ಎಸೆತಗಳು ಪಾಕ್ ಪಾಲಿಗೆ ದುಬಾರಿಯಾಯಿತು ಎಂದರೆ ತಪ್ಪಾಗಲಾರದು.
ಏಕೆಂದರೆ ಬೃಹತ್ ಮೊತ್ತದ ಟಾರ್ಗೆಟ್ನೊಂದಿಗೆ ಕಣಕ್ಕಿಳಿದಿದ್ದ ಪಾಕ್ ತಂಡವು 11 ಓವರ್ಗಳ ಮುಕ್ತಾಯದ ವೇಳೆಗೆ ಗಳಿಸಿದ್ದು ಕೇವಲ 73 ರನ್ಗಳು ಮಾತ್ರ.
ಇತ್ತ ಬಾಬರ್ ಆಝಂ ಔಟಾಗುತ್ತಿದ್ದಂತೆ ಪಾಕಿಸ್ತಾನ್ ತಂಡವು ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡುವ ಪ್ರಯತ್ನಕ್ಕೆ ಕೈ ಹಾಕಿತು. ಈ ಪ್ರಯತ್ನದ ಫಲವಾಗಿ 20 ಓವರ್ಗಳಲ್ಲಿ 164 ರನ್ ಕಲೆಹಾಕಿತು.
ಸಾಮಾನ್ಯವಾಗಿ ಪಲ್ಲೆಕೆಲೆ ಪಿಚ್ನಲ್ಲಿ 170 ರಿಂದ 180 ರನ್ಗಳಿಸಿದರೆ ಮೊದಲು ಬ್ಯಾಟ್ ಮಾಡುವ ತಂಡ ಗೆಲ್ಲುತ್ತದೆ. ಇದೇ ಲೆಕ್ಕಾಚಾರದೊಂದಿಗೆ ಪಾಕಿಸ್ತಾನ್ ತಂಡ ಕೂಡ ಮೊದಲು ಬ್ಯಾಟ್ ಮಾಡಿ 180 ರಿಂದ 190 ರನ್ಗಳಿಸುವ ಇರಾದೆಯಲ್ಲಿತ್ತು.
ಆದರೆ ಪವರ್ಪ್ಲೇ ಬಳಿಕ ಬಾಬರ್ ಆಡಿ ಟುಕ್ ಟುಕ್ ಆಟದಿಂದಾಗಿ ಪಾಕಿಸ್ತಾನ್ ತಂಡದ ಲೆಕ್ಕಾಚಾರಗಳೇ ಬುಡಮೇಲಾಯಿತು. ಇದೀಗ ಬಾಬರ್ ಆಝಂ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.
ಅದರಲ್ಲೂ ಅನುಭವಿ ದಾಂಡಿಗನಾಗಿರುವ ಬಾಬರ್ ಆಝಂ ಈ ಬಾರಿಯ ವಿಶ್ವಕಪ್ನಲ್ಲಿ ಕಲೆಹಾಕಿರುವ ಒಟ್ಟು ರನ್ 91 ಮಾತ್ರ. ಈ 91 ರನ್ಗಳಿಸಲು ಬಾಬರ್ ಬರೋಬ್ಬರಿ 81 ಎಸೆತಗಳನ್ನು ಎದುರಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಯೂಟ್ಯೂಬ್ ಕಂಟೆಂಟ್ ಕ್ರಿಯೆಟರ್ ಒಬ್ಬರು ಜಪಾನ್ ಹಾಗೂ ಬೆಂಗಳೂರು ಸಂಬಳದ ಬಗ್ಗೆ ಹೊಲಿಕೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೀ ಭಾರೀ ವೈರಲ್ ಆಗಿದೆ. ಜಪಾನ್‌ನಲ್ಲಿ ನೆಲೆಸಿರುವ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಆರ್ಥಿಕ ಜೀವನದ ಕುರಿತು ಯೂಟ್ಯೂಬರ್ ಡೋಲೇಶ್ (Dolesh) ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರಿನ ಇಬ್ಬರು ಟೆಕ್ಕಿಗಳು ಜಪಾನ್‌ನ ವಾಸ್ತವ ಸ್ಥಿತಿಯನ್ನು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.
ಜಪಾನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸುವವರಿಗೆ ವರ್ಷಕ್ಕೆ ಸುಮಾರು 3 ಮಿಲಿಯನ್ ಯೆನ್ (ಅಂದಾಜು 17 ಲಕ್ಷ ರೂ.) ಸಂಬಳ ಸಿಗುತ್ತದೆ. 2-3 ವರ್ಷಗಳ ಅನುಭವದ ನಂತರ ಇದು 4.5 ರಿಂದ 5 ಮಿಲಿಯನ್ ಯೆನ್ (ಅಂದಾಜು 28 – 30 ಲಕ್ಷ ರೂ.) ವರೆಗೆ ಏರಿಕೆಯಾಗಬಹುದು. ಬೆಂಗಳೂರಿನ ಟೆಕ್ಕಿಗಳು ವಿವರಿಸಿದಂತೆ, ಅವರು ಗಳಿಸುವ ವಾರ್ಷಿಕ ಆದಾಯದಲ್ಲಿ ಸುಮಾರು 3 ಲಕ್ಷ ರೂ.ನಷ್ಟು ಹಣವನ್ನು ತೆರಿಗೆ (Tax) ರೂಪದಲ್ಲಿಯೇ ಪಾವತಿಸಬೇಕಾಗುತ್ತದೆ. ಇದೀಗ ಈ ಹೇಳಿಕೆ ಭಾರತೀಯರಿಗೆ ಭಾರೀ ಅಚ್ಚರಿಗೊಳಿಸಿದೆ. ಮುಂಬೈ ಮೂಲದ ಡೋಲೇಶ್ ‘200Journeys’ ಹೆಸರಿನ ಚಾನೆಲ್ ನಡೆಸುತ್ತಿದ್ದು, ಪ್ರಪಂಚದಾದ್ಯಂತ ಪ್ರವಾಸ ಮಾಡಿ ಅಲ್ಲಿನ ಜೀವನ ಮತ್ತು ಹಣಕಾಸಿನ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಮಾಡುತ್ತಾರೆ. ಇದೀಗ ಭಾರತೀಯರಿಗೆ ಜಪಾನ್ ಹಣಕಾಸಿನ ಹಾಗೂ ಅಲ್ಲಿ ಆರ್ಥಿಕ ವಿಚಾರದ ಬಗ್ಗೆ ಹೇಳಿದ್ದಾರೆ.
ಇನ್ನು ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ. “ಜಪಾನ್‌ನಲ್ಲಿ ಗಳಿಸಿ ಅಲ್ಲೇ ಖರ್ಚು ಮಾಡಬೇಕಾದಾಗ ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿ ನೋಡುವುದರಲ್ಲಿ ಅರ್ಥವಿಲ್ಲ. ಜಪಾನ್ ಭಾರತಕ್ಕಿಂತ ದುಬಾರಿ ದೇಶ,” ಎಂದು ಅನೇಕರು ವಾದಿಸಿದ್ದಾರೆ. ಜಪಾನ್‌ನ ಕಠಿಣ ಕೆಲಸದ ಸಂಸ್ಕೃತಿ (Work Culture) ಮತ್ತು ಅಲ್ಲಿನ ಜೀವನಶೈಲಿ ಎಲ್ಲರಿಗೂ ಒಗ್ಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಿನ ತೆರಿಗೆ ಮತ್ತು ಜೀವನ ವೆಚ್ಚದ ನಂತರ ಕೈಗೆ ಉಳಿಯುವ ಹಣ ಭಾರತದ ಟಾಪ್ ಕಂಪನಿಗಳ ಸಂಬಳಕ್ಕಿಂತ ಹೆಚ್ಚೇನೂ ಅಲ್ಲ ಎಂಬುದು ಹಲವರ ವಾದಿಸಿದ್ದಾರೆ.
ಮಂಗಳೂರು, ಫೆಬ್ರವರಿ 25: ಮಂಗಳೂರಿನ ಪಲ್ಲಮಜಲು ಬಿ.ಮೂಡ ಗ್ರಾಮದಲ್ಲಿ ಕಳೆದ 17 ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಗಲು-ರಾತ್ರಿ ನಡೆಯುವ ಬ್ಲಾಸ್ಟಿಂಗ್‌ನಿಂದ ನೂರಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸರ್ಕಾರಿ ಶಾಲೆ, ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಕಟ್ಟಡಗಳಿಗೂ ಹಾನಿಯಾಗಿದೆ. ಸ್ಫೋಟದಿಂದ ಮತ್ತು ಭಾರೀ ಪ್ರಮಾಣದ ವಾಹನಗಳ ಓಡಾಟದಿಂದ ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಗಣಿಗಾರಿಕೆ ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಮಳೆಗಾಲದಲ್ಲಿ ಗ್ರಾಮಕ್ಕೆ ಪ್ರವಾಹದಂತೆಯೇ ನುಗ್ಗುತ್ತಿದೆ. ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ವಾಷಿಂಗ್ಟನ್, ಫೆಬ್ರುವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅಲ್ಲಗಳೆಯುವುದನ್ನು ಮುಂದುವರಿಸಿದ್ದಾರೆ. ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಅವರು, ಕೋರ್ಟ್ ತೀರ್ಪು ಬಹಳ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅಮೆರಿಕದ ಜೊತೆ ಮಾಡಿಕೊಂಡಿರುವ ಒಪ್ಪಂದಗಳಿಂದ ಸಂತುಷ್ಟಗೊಂಡಿವೆ ಎಂದು ಟ್ರಂಪ್ ಹಂಗಿಸಿದ್ದಾರೆ.
‘ನಮ್ಮನ್ನು ಹೀನಾಯವಾಗಿ ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅವರು ಖುಷಿಯಾಗಿದ್ದಾರೆ. ನಾವೂ ಖುಷಿಯಾಗಿದ್ದೇವೆ. ಡೆಮಾಕ್ರಾಟ್ನವರು ಇದಕ್ಕೆ ಒಪ್ಪದಿದ್ದರೂ ಅವರಿಗೆ ಗೊತ್ತಿದೆ. ಸುಪ್ರೀಂಕೋರ್ಟ್ ತೀರ್ಪು ದುರದೃಷ್ಟಕರ. ಖುಷಿ ಸುದ್ದಿ ಏನೆಂದರೆ, ಅಮೆರಿಕದ ಜೊತೆ ಒಪ್ಪಂದ ಮಾಡಿಕೊಂಡಿರುವ ದೇಶಗಳೆಲ್ಲವೂ ಅದನ್ನು ಮುಂದುವರಿಸಲು ಬಯಸುತ್ತಿವೆ,’ ಎಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಟ್ಯಾರಿಫ್ ವಿಧಿಸುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಇದರಿಂದ ಅಮೆರಿಕನ್ ಪ್ರಜೆಗಳಿಗೆ ಆದಾಯ ತೆರಿಗೆ ಹೊರೆ ಕಡಿಮೆ ಆಗುತ್ತೆ ಎಂದಿದ್ದಾರೆ.
‘ಕಾಲ ಕಳೆದಂತೆ ವಿದೇಶಗಳಿಂದ ಪಾವತಿಸಲಾಗುವ ಟ್ಯಾರಿಫ್ಗಳು ಆಧುನಿಕ ಆದಾಯ ತೆರಿಗೆ ಸಿಸ್ಟಂ ಅನ್ನು ಭರಿಸಬಲ್ಲುವು. ನಾನು ಪ್ರೀತಿಸುವ ಜನರಿಗೆ ಹಣದ ಹೊರೆಯನ್ನು ಇಳಿಸಬಲ್ಲುವು’ ಎಂದು ತಿಳಿಸಿದ ಡೊನಾಲ್ಡ್ ಟ್ರಂಪ್, ವಿದೇಶಗಳು ಅಮೆರಿಕನ್ನರ ಆದಾಯ ತೆರಿಗೆ ಪಾವತಿಸುತ್ತವೆ ಎಂದಿದ್ದಾರೆ.
‘ಡೆಮಾಕ್ರಾಟ್ಗಳು ಕೊಲೆಗಡುಕರನ್ನು ನಮ್ಮ ದೇಶದೊಳಗೆ ಬಿಟ್ಟುಕೊಂಡರು. ಅವರ ನೀತಿಗಳು ಬೆಲೆ ಏರಿಕೆಗೆ ಕಾರಣವಾದರೆ, ನಮ್ಮ ನೀತಿಗಳು ಬೆಲೆ ತಗ್ಗಿಸುತ್ತಿವೆ. ಮೊಟ್ಟೆ ಬೆಲೆ ಶೇ. 60 ಇಳಿಕೆ ಆಗಿದೆ. ಹೋಟೆಲ್, ಬಾಡಿಗೆ, ಆಟೊಮೊಬೈಲ್, ಬೀಫ್ ಬೆಲೆಗಳು ಸಾಕಷ್ಟು ಕಡಿಮೆ ಆಗಿವೆ. ವಿದ್ಯುತ್ ಬೆಲೆ ತಗ್ಗುತ್ತಿದೆ. ಮತ್ತೊಂದು ದೊಡ್ಡ ಟ್ಯಾಕ್ಸ್ ಕಡಿತದಂತಾಗಿದೆ’ ಎಂದು ಟ್ರಂಪ್ ತಿಳಿಸಿದ್ದಾರೆ.
‘ನನಗೆ ಮೊದಲು ಅಮೆರಿಕ. ನಾವು ಪ್ರೀತಿಸೋದು ಅಮೆರಿಕವನ್ನು. ಬೈಡನ್ ಹಾಗೂ ಅವರ ಭ್ರಷ್ಟ ಜೊತೆಗಾರರ ಅಡಿಯಲ್ಲಿ ಅಮೆರಿಕ ಮುರಿದುಬೀಳುವ ಹಂತಕ್ಕೆ ಹೋಗಿತ್ತು’ ಎಂದು ಟ್ರಂಪ್ ಸಿಡಿಗುಟ್ಟಿದ್ದಾರೆ.
ದಾವಣಗೆರೆ, ಫೆಬ್ರವರಿ 25: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ಜಾತ್ರೋತ್ಸವವು ವಿಜೃಂಭಣೆಯಿಂದ ಜರುಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಾತ್ರೆಯ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗುತ್ತಿದೆ. ಪ್ರಾಣಿಬಲಿ ನಿಷೇಧದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಪೊಲೀಸ್ ಅಧೀಕ್ಷಕರು (ಎಸ್ಪಿ) ರಾತ್ರಿಯಿಡೀ ಜಾತ್ರಾ ಆವರಣದಲ್ಲಿ ಹಾಜರಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಪ್ರಾಣಿ ಬಲಿಯಂಥ ಕೃತ್ಯಗಳು ನಡೆದಿಲ್ಲ. ಭಕ್ತರು ಅತ್ಯಂತ ಭಕ್ತಿಪರವಶರಾಗಿ, ಮೂಢನಂಬಿಕೆಗಳಿಂದ ದೂರವಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಡಿಸಿ ಹಾಗೂ ಎಸ್ಪಿ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ವಾಷಿಂಗ್ಟನ್, ಫೆಬ್ರವರಿ 25: ನಾನು ಮಧ್ಯಪ್ರವೇಶಿಸಿ ಭಾರತ-ಪಾಕಿಸ್ತಾನ ಯುದ್ಧವನ್ನು ತಡೆಯದಿದ್ದರೆ ಅಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯುತ್ತಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದ ಸಮಯದಲ್ಲಿ ಈ ವಿಷಯದ ಕುರಿತು ಮಾತನಾಡಿದ್ದಾರೆ. ಎರಡೂ ದೇಶಗಳ ಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ ಅದು ಪರಮಾಣು ಯುದ್ಧಕ್ಕೆ ಕಾರಣವಾಗುತ್ತಿತ್ತು.
ಇದರಿಂದ ಸುಮಾರು 35 ಮಿಲಿಯನ್ ಜನರು ಪ್ರಾಣ ಕಳೆದುಕೊಳ್ಳಬಹುದಿತ್ತು ಮತ್ತು ಪಾಕಿಸ್ತಾನದ ಪ್ರಧಾನಿ ಕೂಡ ಬದುಕುಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಟ್ರಂಪ್ ತಮ್ಮನ್ನು ಹೀರೋ ಎಂದು ಬಿಂಬಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ.
ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆಡಳಿತವು ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಲು ವ್ಯಾಪಾರ ಒಪ್ಪಂದಗಳು ಸುಂಕದ ಒತ್ತಡವ್ನು ಬಳಸಿಕೊಂಡಿದ್ದಾರೆ. ಆದರೂ ಭಾರತ-ಪಾಕ್ ನಡುವೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ನಡೆದಿಲ್ಲ ಎಂದು ಭಾರತ ಈ ಹಿಂದೆ ಸ್ಪಷ್ಟಪಡಿಸಿದೆ.
ಮೇ 2025ರಲ್ಲಿ 26 ಜನರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪ್ರತಿದಾಳಿ ನಡೆಸಿತು.
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತ ನಿಯಂತ್ರಣ ರೇಖೆಯಾದ್ಯಂತ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿತ್ತು. ನಂತರ ಪಾಕಿಸ್ತಾನ ಡ್ರೋನ್ ಮತ್ತು ಯುಸಿಎವಿ ದಾಳಿಗಳನ್ನು ಪ್ರಯತ್ನಿಸಿತು. ಆದರೆ ಅದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ವಿಫಲಗೊಳಿಸಿದವು. ಸೇನೆ, ವಾಯುಪಡೆ ಮತ್ತು ನೌಕಾಪಡೆ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿ, ಪಾಕಿಸ್ತಾನವನ್ನು ತೀವ್ರವಾಗಿ ಸೋಲಿಸಿದವು.ಇದರ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು ಮತ್ತು ಜಾಗತಿಕ ಕಳವಳ ಕೂಡ ಉಂಟಾಯಿತು.
ಭಾರತದ ನಿಲುವೇನು?
ಭಾರತ-ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸುವಲ್ಲಿ ಯಾವುದೇ ಮೂರನೇ ರಾಷ್ಟ್ರದ ಪಾತ್ರವಿಲ್ಲ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ. ಭಾರತದ ಪ್ರಕಾರ, ಅಮೆರಿಕದ ಒತ್ತಡದಿಂದಾಗಿ ಅಲ್ಲ, ಎರಡೂ ದೇಶಗಳ ನಡುವಿನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದಲ್ಲಿ ನಡೆದ ಮಾತುಕತೆ ನಂತರ ಮಿಲಿಟರಿ ಕ್ರಮವನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳು ದ್ವಿಪಕ್ಷೀಯ ಮತ್ತು ಯಾವುದೇ ಹೊರಗಿನ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.
ತಮ್ಮ ಭಾಷಣದಲ್ಲಿ ಟ್ರಂಪ್ ತಮ್ಮ ಆಡಳಿತವು ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಇರಾನ್ ಬಗ್ಗೆ ಹೇಳುವುದಾದರೆ ಅವರು ರಾಜತಾಂತ್ರಿಕಪರಿಹಾರವನ್ನು ಬಯಸುತ್ತಾರೆ, ಆದರೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಕುಟುಂಬ ಸದಸ್ಯರು, ಆಪ್ತರು ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ರಶ್ಮಿಕಾ, ವಿಜಯ್ ದೇವರಕೊಂಡ ಅವರನ್ನು ಪ್ರೀತಿಸಿ ಇದೀಗ ವಿವಾಹ ಆಗುತ್ತಿದ್ದಾರೆ. ರಶ್ಮಿಕಾರ ಯಶಸ್ಸಿಗೆ ಕಾರಣಕರ್ತರಾದ ಶೆಟ್ಟಿ ಗ್ಯಾಂಗಿನ ಸದಸ್ಯರ್ಯಾರನ್ನೂ ಸಹ ರಶ್ಮಿಕಾ ಮದುವೆಗೆ ಆಮಂತ್ರಿಸಿಲ್ಲ. ಇತ್ತೀಚೆಗಷ್ಟೆ ಈ ಬಗ್ಗೆ ಪ್ರಮೋದ್ ಶೆಟ್ಟಿ ಮಾತನಾಡಿ, ತಮಾಷೆ ಮಾಡಿದ್ದರು. ಇದೀಗ ನಟ ರಿಷಬ್ ಶೆಟ್ಟಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿ ಮಾಧ್ಯಮದವರು ರಶ್ಮಿಕಾರ ಮದುವೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬೈ ಹೇಳಿ ಹೊರಟಿದ್ದಾರೆ. ವಿಡಿಯೋ ನೋಡಿ…
ಮನೆಯಲ್ಲಿ ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ಸ್ಥಳಗಳಲ್ಲಿ ಅಡಿಗೆಮನೆ ಒಂದಾಗಿದೆ. ಅಡಿಗೆಮನೆಯು ಕೇವಲ ಅಡುಗೆಯನ್ನು ತಯಾರಿಸುವ ಸ್ಥಳವಲ್ಲ, ಇದು ನಮ್ಮ ದೇಹಕ್ಕೆ ಶಕ್ತಿ, ಒಳ್ಳೆಯ ಆಲೋಚನೆಗಳು ಮತ್ತು ನಿರ್ದಿಷ್ಟವಾಗಿ ಆರೋಗ್ಯವನ್ನು ಒದಗಿಸುವ ಕೇಂದ್ರವಾಗಿದೆ. ಆರೋಗ್ಯವಿದ್ದಾಗ ಮಾತ್ರ ನಮ್ಮ ಶ್ರೇಯಸ್ಸು, ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚುತ್ತವೆ. ಆರೋಗ್ಯ ನಷ್ಟವಾದರೆ ಎಲ್ಲವೂ ಕಳೆದುಹೋಗುತ್ತದೆ ಎಂಬುದನ್ನು ಮರೆಯಬಾರದು. ಈ ಆರೋಗ್ಯವನ್ನು ಸೃಷ್ಟಿಸುವ ಶಕ್ತಿ ಅಡಿಗೆಮನೆಯಲ್ಲಿದೆ. ಹಾಗಾಗಿ ಅಡಿಗೆಮನೆಯಲ್ಲಿ ಇರಬಾರದ ವಸ್ತುಗಳು ಮತ್ತು ಸ್ಥಿತಿಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ.
ವಾಸ್ತು ಶಾಸ್ತ್ರದ ಪ್ರಕಾರ, ಅಡಿಗೆಮನೆಯಲ್ಲಿ ಕೆಲವು ವಸ್ತುಗಳಿದ್ದರೆ ಅಥವಾ ಕೆಲವು ಸ್ಥಿತಿಗಳಿದ್ದರೆ ಅದು ಬಡತನ, ಆಲಸ್ಯ ಮತ್ತು ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗುತ್ತದೆ. ಅಡಿಗೆಮನೆಯನ್ನು ಸಾಮಾನ್ಯವಾಗಿ ಆಗ್ನೇಯ (ಸೌತ್ ಈಸ್ಟ್) ದಿಕ್ಕಿನಲ್ಲಿ ನಿರ್ಮಿಸಲು ಆದ್ಯತೆ ನೀಡಲಾಗುತ್ತದೆ, ನಂತರ ವಾಯುವ್ಯ (ನಾರ್ತ್ ವೆಸ್ಟ್) ದಿಕ್ಕನ್ನು ಆಯ್ಕೆ ಮಾಡಲಾಗುತ್ತದೆ. ಅಡುಗೆ ಮಾಡುವಾಗ ಸೂರ್ಯನ ಕಡೆ ಮುಖ ಮಾಡುವುದು ಶುಭ ಎಂದು ಪರಿಗಣಿಸಲಾಗುತ್ತದೆ.
ಅಡಿಗೆಮನೆಯಲ್ಲಿ ಗಮನಹರಿಸಬೇಕಾದ ನಾಲ್ಕು ಪ್ರಮುಖ ಅಂಶಗಳು ಇಲ್ಲಿವೆ:
ಉಳಿದ ಅಥವಾ ಹಾಳಾದ ಆಹಾರ:
ಅಡುಗೆ ಮಾಡಿದ ಆಹಾರವನ್ನು ಎಲ್ಲರೂ ಸೇವಿಸಿದ ನಂತರ, ಉಳಿದ ಆಹಾರವನ್ನು ಅತಿಯಾಗಿ ಕಾಯಿಸಬಾರದು ಅಥವಾ ಹಾಳಾಗಲು ಬಿಡಬಾರದು. ಆಹಾರ ಹಾಳಾಗಲು ಬಿಟ್ಟರೆ ಅದು ಮನೆಯಲ್ಲಿ ದಾರಿದ್ರ್ಯವನ್ನು ಹೆಚ್ಚಿಸುತ್ತದೆ. ಉಳಿದ ಒಳ್ಳೆಯ ಆಹಾರವನ್ನು ಪ್ರಾಣಿ-ಪಕ್ಷಿಗಳಿಗೆ ನೀಡಬಹುದು ಅಥವಾ ಹಸಿದವರಿಗೆ ಹಂಚಬಹುದು. ಆಹಾರ ಹಾಳಾಗಲು ಬಿಡುವುದು ಎಂದಿಗೂ ಒಳ್ಳೆಯದಲ್ಲ. ಇದು ಶ್ರೀಮಂತರು ಮತ್ತು ಬಡವರು ಎಲ್ಲರಿಗೂ ಅನ್ವಯಿಸುತ್ತದೆ
ಮುರಿದ ಪಾತ್ರೆಗಳು:
ಅಡಿಗೆಮನೆಯಲ್ಲಿ ಮುರಿದ ಅಥವಾ ಒಡೆದ ಪಾತ್ರೆಗಳನ್ನು ಇಡಬಾರದು ಅಥವಾ ಬಳಸಬಾರದು. ತೂತಾದ, ಕೆಟ್ಟಿರುವ ಅಥವಾ ಒಡೆದ ಪಾತ್ರೆಗಳನ್ನು ಇಟ್ಟುಕೊಂಡರೆ ಮನೆಯಲ್ಲಿ ಖರ್ಚು ಜಾಸ್ತಿಯಾಗುತ್ತದೆ ಮತ್ತು ಹಣ ಎಲ್ಲಿ ಹೋಗುತ್ತಿದೆ ಎಂದು ತಿಳಿಯುವುದಿಲ್ಲ. ಮುರಿದ ಪಾತ್ರೆಗಳು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ.
ಸಿಂಕ್‌ನಲ್ಲಿ ಆಹಾರ ಪದಾರ್ಥಗಳೊಂದಿಗೆ ಪಾತ್ರೆಗಳನ್ನು ಹೆಚ್ಚು ಹೊತ್ತು ಇಡಬಾರದು. ಊಟ ಮಾಡಿದ ತಟ್ಟೆ ಅಥವಾ ಇತರ ಪಾತ್ರೆಗಳಲ್ಲಿ ಉಳಿದಿರುವ ಆಹಾರವನ್ನು ಕೂಡಲೇ ವಿಲೇವಾರಿ ಮಾಡಬೇಕು. ಆಹಾರದ ಅವಶೇಷಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಹಾಕಬೇಕು. ಸಿಂಕ್‌ನಲ್ಲಿ ಆಹಾರ ಪದಾರ್ಥಗಳು ಹಾಗೆಯೇ ಉಳಿದಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಕಲಹಗಳಿಗೆ ಸಹ ಕಾರಣವಾಗಬಹುದು.
ಅಡಿಗೆಮನೆಯಲ್ಲಿ ಕಸ:
ಅಡಿಗೆಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಬೇಕು. ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ತರಕಾರಿ ತುಂಡುಗಳು ಅಥವಾ ಯಾವುದೇ ಕಸವನ್ನು ಅಡಿಗೆಮನೆಯಲ್ಲಿ ಹಾಗೆಯೇ ಬಿಡಬಾರದು. ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅನಾರೋಗ್ಯ ಕಾಡುತ್ತದೆ. ಅಲ್ಲದೆ, ಇಂತಹ ಅಶುದ್ಧ ಅಡಿಗೆಮನೆಗೆ ಲಕ್ಷ್ಮಿ ದೇವಿಯು ಪ್ರವೇಶಿಸುವುದಿಲ್ಲ. ಸ್ವಚ್ಛತೆ ಇಲ್ಲದ ಅಡಿಗೆಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿದವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಎಂದು ಗುರೂಜಿ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ