All posts by nagaraj11081993

ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು? – Kannada News | Who should be win and who should be loss for Team India?

T20 World Cup 2026: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಸ್ಥಿತಿ ಪ್ರಸ್ತುತ ನಿರ್ಣಾಯಕ ಹಂತದಲ್ಲಿದೆ. ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಸೋತ ನಂತರ, ಸೆಮಿಫೈನಲ್‌ಗೇರಲು ಭಾರತಕ್ಕೆ ಮುಂದಿನ ಪಂದ್ಯಗಳು ಅತ್ಯಂತ ಮುಖ್ಯವಾಗಿವೆ. ಅದರಂತೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲೇಬೇಕು. ಈ ಗೆಲುವುಗಳ ಹೊರತಾಗಿಯೂ ಭಾರತ ತಂಡ ನೇರವಾಗಿ ಸೆಮಿಫೈನಲ್​ಗೇರುತ್ತೆ ಎಂದೇಳಲಾಗುವುದಿಲ್ಲ.

ಏಕೆಂದರೆ ಸೆಮಿಫೈನಲ್ ರೇಸ್​ನಲ್ಲಿ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳಿವೆ. ಹೀಗಾಗಿ ಈ ಮೂರು ತಂಡಗಳಿಗೂ ಮುಂದಿನ ಮ್ಯಾಚ್​ಗಳು ನಿರ್ಣಾಯಕ. ಅದರಲ್ಲೂ ನೆಟ್ ರನ್ ರೇಟ್​ನಲ್ಲಿ ಹಿಂದೆ ಉಳಿದಿರುವ ಟೀಮ್ ಇಂಡಿಯಾಗೆ ಎದುರಾಳಿ ತಂಡಗಳ ಫಲಿತಾಂಶಗಳು ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗಿದ್ರೆ ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು ಎಂದು ನೋಡುವುದಾದರೆ…

  • ಝಿಂಬಾಬ್ವೆ ತಂಡವು ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಟೀಮ್ ಇಂಡಿಯಾ ಎದುರು ನೋಡಬೇಕು.
  • ವೆಸ್ಟ್  ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಸೋತರೆ ಟೀಮ್ ಇಂಡಿಯಾ ಹಾದಿ ಸುಗಮ.
  • ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆಲ್ಲಬೇಕು.

ಅಂದರೆ ಇಲ್ಲಿ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಗೆದ್ದರೆ ಭಾರತ ತಂಡಕ್ಕೆ ನೆಟ್ ರನ್ ರೇಟ್ ಪರಿಗಣನೆಗೆ ಬರುವುದಿಲ್ಲ. ಏಕೆಂದರೆ ಮುಂದಿನ ಎರಡು ಮ್ಯಾಚ್​ಗಳ ಗೆಲುವುಗಳೊಂದಿಗೆ ಸೌತ್ ಆಫ್ರಿಕಾ ತಂಡವು 6 ಅಂಕಗಳೊಂದಿಗೆ ಸೆಮಿಫೈನಲ್​ಗೇರಲಿದೆ.

ಇತ್ತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದರೆ ಒಟ್ಟು 4 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಸೆಮಿಫೈನಲ್​ಗೇರಬಹುದು.

ಒಂದು ವೇಳೆ ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ ಭಾರತ ತಂಡವು ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಬೇಕು. ಏಕೆಂದರೆ ವಿಂಡೀಸ್ ವಿರುದ್ಧ ಸೋತು ಸೌತ್ ಆಫ್ರಿಕಾ ತಂಡ ಝಿಂಬಾಬ್ವೆ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯಲಿದೆ.

ಇದರಿಂದ ಸೆಮಿಫೈನಲ್​ಗೇರಲು ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಆಫ್ರಿಕಾ ಪಡೆ ಗೆಲ್ಲುವುದನ್ನು ಟೀಮ್ ಇಂಡಿಯಾ ಎದುರು ನೋಡಲಿದೆ.

ಇನ್ನು ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಸೋತರೂ ಕೂಡ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಇದನ್ನೂ ಓದಿ: ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರಲು ಇನ್ನೂ ಇದೆ ಚಾನ್ಸ್​..!

ಇಲ್ಲದಿದ್ದರೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲುವ ಮೂಲಕ ಮಾತ್ರ ಭಾರತ ತಂಡಕ್ಕೆ ಸೆಮಿಫೈನಲ್​ಗೇರಲು ಅವಕಾಶ ಇರಲಿದೆ. ಹೀಗಾಗಿಯೇ ಭಾರತ ತಂಡಕ್ಕೆ ತನ್ನ ಪಂದ್ಯಗಳಲ್ಲದೇ ಎದುರಾಳಿ ಮ್ಯಾಚ್​ ಕೂಡ ನಿರ್ಣಾಯಕ. ಈ ನಿರ್ಣಾಯಕ ಪಂದ್ಯಗಳ ಫಲಿತಾಂಶಗಳ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್​ಗೇರುತ್ತಾ ಕಾದು ನೋಡಬೇಕಿದೆ.

Source link

ಕೊಪ್ಪಳ: ಅಲ್ಪಸಂಖ್ಯಾತ ಇಲಾಖೆ ವಸತಿ ಶಾಲೆಯ ಪಿಯು ವಿದ್ಯಾರ್ಥಿನಿ ಗರ್ಭಿಣಿ! – Kannada News | PU Student Found Pregnant at Koppal Morarji Desai Residential School; Accused Arrested, Safety Concerns Raised

ಕೊಪ್ಪಳ, ಫೆಬ್ರವರಿ 24: ಕೊಪ್ಪಳ (Koppal) ಜಿಲ್ಲೆಯ ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಪಿಯು ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ಆಮಿಷವೊಡ್ಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಆರೋಪಿಯು ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.

ಮದುವೆಯ ಆಮಿಷವೊಡ್ಡಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಫೆಬ್ರವರಿ 19ರಂದು ಬಾಲಕಿಗೆ ರಕ್ತಸ್ರಾವವಾಗಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾದಣೆ ನಡೆಸಿದಾಗ ಗರ್ಭಿಣಿಯಾಗಿರುವುದು ಬಹಿರಂಗವಾಗಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪ್ರಕರಣ ಬಹಿರಂಗವಾದ ಬಳಿಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯವನ್ನು ಮುಚ್ಚಿಡಲು ಯತ್ನಿಸಿದರೆಂಬ ಆರೋಪದ ಹಿನ್ನೆಲೆ ವಸತಿಶಾಲೆಯ ಪ್ರಾಂಶುಪಾಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಪ್ರಾಂಶುಪಾಲರ ಅಮಾನತಿಗೆ ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡು ನಿಖೆ ಮುಂದುವರಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪ್ರಾಪ್ತೆಯರ ಸುರಕ್ಷತೆ ಹಾಗೂ ವಸತಿಶಾಲೆಗಳ ಮೇಲ್ವಿಚಾರಣೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಲಯದಲ್ಲೇ ಬಾಲಕಿ ಹೆರಿಗೆ ಕೇಸ್​​ಗೆ ಎಂಟ್ರಿಕೊಟ್ಟ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ: ಡಿಸಿ, ಎಸ್ಪಿಗೆ ಪತ್ರ

ಕೊಪ್ಪಳದ ಕುಕನೂರು ವಿದ್ಯಾರ್ಥಿನಿಲಯದಲ್ಲಿ ಅಪ್ರಾಪ್ತ ಬಾಲಕಿಗೆ ಹೆರಿಗೆಯಾದ ಪ್ರಕರಣ ಕಳೆದ ನವೆಂಬರ್​​ನಲ್ಲಿ ವರದಿಯಾಗಿ ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿತ್ತು. ನಂತರ ಬಾಲಕಿಯ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನಲ್ಲಿ ಕರ್ನಾಟಕ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕನ್ನಡ ಪ್ರೇಮಕ್ಕೆ ಇದೇ ಸಾಕ್ಷಿ – Kannada News | Shilpa Shetty opened a Karnataka theme restaurant in Mumbai

ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್​​ನ ಸ್ಟಾರ್ ನಟಿ ಆಗಿರುವ ಜೊತೆಗೆ ಬಲು ಯಶಸ್ವಿ ಉದ್ಯಮಿಯೂ ಸಹ ಹೌದು. ಮಂಗಳೂರು ಮೂಲದವರಾದರೂ ಸಹ ಶಿಲ್ಪಾ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ಬಾಲ್ಯದಿಂದಲೂ ಮುಂಬೈನಲ್ಲೇ ಬೆಳೆದಿದ್ದರೂ ಸಹ ತಮ್ಮ ಮೂಲವಾದ ಕರ್ನಾಟಕವನ್ನು ಶಿಲ್ಪಾ ಶೆಟ್ಟಿ ಮರೆತಿಲ್ಲ. ಇತ್ತೀಚೆಗಷ್ಟೆ ಮುಂಬೈನಲ್ಲಿ ಹೋಟೆಲ್ ಒಂದನ್ನು ಶಿಲ್ಪಾ ಶೆಟ್ಟಿ ಪ್ರಾರಂಭ ಮಾಡಿದ್ದು, ಕರ್ನಾಟಕ ಥೀಮ್​​​ನ ಹೋಟೆಲ್ ಇದಾಗಿದೆ. ಮಾತ್ರವಲ್ಲದೆ ಇದಕ್ಕೆ ಇರಿಸಿರುವುದು ಸಹ ಕನ್ನಡದ ಹೆಸರನ್ನೇ.

ಶಿಲ್ಪಾ ಶೆಟ್ಟಿ ಈಗಾಗಲೇ ಬಾಸ್ಟಿಯನ್ ಹೆಸರಿನಲ್ಲಿ ಮುಂಬೈನಲ್ಲಿ ಒಂದು ಹಾಗೂ ಗೋವಾನಲ್ಲಿ ಒಂದು ಐಶಾರಾಮಿ ಹೋಟೆಲ್ ಹೊಂದಿದ್ದಾರೆ. ಆ ರೆಸ್ಟಾರೆಂಟ್​​ಗಳು ಸಿರಿವಂತರ ಮತ್ತು ಅಲ್ಟ್ರಾ ಸಿರಿವಂತರ ಹೋಟೆಲ್​​ಗಳಾಗಿವೆ. ಇದೀಗ ಅದೇ ಬಾಸ್ಟಿಯನ್ ಹೆಸರಿನಲ್ಲಿ ಮೇಲ್ಮಧ್ಯಮ ವರ್ಗದವರಿಗಾಗಿ ರೆಸ್ಟೊರೆಂಟ್ ಆರಂಭಿಸಿದ್ದಾರೆ ಶಿಲ್ಪಾ ಶೆಟ್ಟಿ. ರೆಸ್ಟಾರೆಂಟ್​​ನ ಹೆಸರು ‘ಬಾಸ್ಟಿಯನ್ ಅಮ್ಮ ಕೈ’. ಈ ರೆಸ್ಟಾರೆಂಟ್​​ ಕರ್ನಾಟಕ ಥೀಮ್​​ನ ರೆಸ್ಟಾರೆಂಟ್ ಆಗಿದ್ದು, ಇಲ್ಲಿ ಸಿಕ್ಕುವ ಖಾದ್ಯಗಳು ಕರ್ನಾಟಕದ ಜನಪ್ರಿಯ ಖಾದ್ಯಗಳೇ ಆಗಿವೆ.

ಮುಂಬೈನ ಬಾಂದ್ರಾ ವೆಸ್ಟ್​ನ ನ್ಯೂ ಲಿಂಕ್ ರಸ್ತೆಯಲ್ಲಿ ಈ ಹೋಟೆಲ್ ಅನ್ನು ಶಿಲ್ಪಾ ಶೆಟ್ಟಿ ಪ್ರಾರಂಭಿಸಿದ್ದಾರೆ. ಹೋಟೆಲ್​ನ ವಿಶೇಷತೆಯೆಂದರೆ ಅದರ ಮೆನು. ಅವರ ಮೆನುವಿನಲ್ಲಿ ಕರ್ನಾಟಕದ ಮ್ಯಾಪ್ ಅನ್ನೇ ಪ್ರಿಂಟ್ ಮಾಡಿದ್ದಾರೆ ನಟಿ. ಹೋಟೆಲ್ ಮುಂಬೈನಲ್ಲಿದ್ದರೂ ಸಹ ಖಾದ್ಯಗಳ ಹೆಸರು ಹಿಂದಿಯ ಬದಲಿಗೆ ಕನ್ನಡದಲ್ಲಿಯೇ ಇವೆ. ಮೆಣಸಿಕಾಯಿ ಬಜ್ಜಿ, ಸಬ್ಬಕ್ಕಿ ವಡೆ ಎಂದೇ ಮೆನುವಿನಲ್ಲಿ ಮುದ್ರಿಸಲಾಗಿದೆ. ಮುಂಬೈನಲ್ಲಿ ಈ ಖಾದ್ಯಗಳನ್ನು ಮಿರ್ಚಿ ಬಜಿ, ಸಾಬೂದಾನ ವಡಾ ಎಂದು ಕರೆಯಲಾಗುತ್ತದೆ. ಆದರೆ ಹಿಂದಿ ಹೆಸರಿನ ಬದಲಾಗಿ ಮೆನುವಿನಲ್ಲಿ ಕನ್ನಡದ ಹೆಸರುಗಳನ್ನೇ ಇರಿಸಿದ್ದಾರೆ ಶಿಲ್ಪಾ ಶೆಟ್ಟಿ.

ಇದನ್ನೂ ಓದಿ:ನಟಿ ಶಿಲ್ಪಾ ಶೆಟ್ಟಿ ಮುಂಬೈ ನಿವಾಸದ ಮೇಲೆ ಐಟಿ ದಾಳಿ: 60 ಕೋಟಿ ರೂ. ವಂಚನೆ ಕೇಸ್

ಅದು ಮಾತ್ರವೇ ಅಲ್ಲದೆ ಮೈಸೂರು ಮಸಾಲೆ ದೋಸೆ, ದಾವಣೆಗೆರೆ ಬೆಣ್ಣೆ ದೋಸೆ, ಕೂರ್ಗಿ ಪಂದಿ ಕರಿ, ಕೂರ್ಗಿ ಚಿಕನ್, ಮಂಗಳೂರು ಗೀ ರೋಸ್ಟ್, ಬಿಸಿಬೇಳೆ ಬಾತ್, ಮಂಗಳೂರು ಸುಕ್ಕಾ, ಮೈಸೂರು ಮಸಾಲ ಮೊಟ್ಟೆ ಬುರ್ಜಿ ಇನ್ನೂ ಹಲವು ಕರ್ನಾಟದ ಖಾದ್ಯಗಳು ರೆಸ್ಟಾರೆಂಟ್​​ನಲ್ಲಿ ಲಭ್ಯವಿದೆ. ಮೆನುಕಾರ್ಡ್​​ನಲ್ಲಿ ಕರ್ನಾಟಕದ ಭೂಪಟವನ್ನೇ ಮುದ್ರಿಸಿರುವ ಶಿಲ್ಪಾ ಶೆಟ್ಟಿ, ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಸಿದ್ಧ ಖಾದ್ಯಗಳು ಮತ್ತು ಡ್ರಿಂಕ್​​ಗಳನ್ನು ತಮ್ಮ ಹೋಟೆಲ್​​ನಲ್ಲಿ ಸರ್ವ್ ಮಾಡುವುದಾಗಿ ಮೆನು ಕಾರ್ಡ್​​ನಲ್ಲಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

OTT Platforms Ban: ಅಶ್ಲೀಲ ಮತ್ತು ಅಸಭ್ಯ ವಿಷಯಗಳ ಪ್ರಸಾರ: ಐದು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ – Kannada News | India Bans 5 OTT Platforms: Govt Cracks Down on Obscene Content, Cites IT Rules 2021

ನವದೆಹಲಿ, ಫೆಬ್ರವರಿ 25: ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯವನ್ನು ತೋರಿಸುವ ಐದು ಒಟಿಟಿ(OTT) ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕೇಂದ್ರ ಸರ್ಕಾರ ಪ್ರಮುಖ ಕ್ರಮ ಕೈಗೊಂಡಿದೆ. ಅಧಿಕಾರಿಗಳು ನೀಡಿರುವ ಪ್ರಕಾರ, ಕೇಂದ್ರ ಸರ್ಕಾರ ಈ ಐದು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಲು ಆದೇಶಗಳನ್ನು ಹೊರಡಿಸಿದೆ.

ಮಾಹಿತಿಯ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮೂಡ್‌ಎಕ್ಸ್‌ವಿಐಪಿ, ಕೋಯಲ್ ಪ್ಲೇಪ್ರೊ, ಡಿಜಿ ಮೂವಿಪ್ಲೆಕ್ಸ್, ಫೀಲ್ ಮತ್ತು ಜುಗ್ನು ಎಂಬ ಐದು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಲು ಆದೇಶಗಳನ್ನು ಹೊರಡಿಸಿದೆ. ಅಧಿಕಾರಿಗಳ ಪ್ರಕಾರ, ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಒಂದೆರಡು ವರ್ಷಗಳಿಂದ ಜನರು ಕೆಲವೇ ಕೆಲವು ಸಿನಿಮಾಗಳಿಗಾಗಿ ಚಿತ್ರಮಂದಿರವನ್ನು ಅವಲಂಬಿಸಿದ್ದಾರೆ. ಉಳಿದೆಲ್ಲವನ್ನೂ ಮನೆಯಲ್ಲೇ ಕುಳಿತು ಈ ಒಟಿಟಿ ಮೂಲಕ ವೀಕ್ಷಿಸುತ್ತಾರೆ.

ಈ ಸಂದರ್ಭದಲ್ಲಿ, ಈ ವೇದಿಕೆಗಳು ಅಶ್ಲೀಲ ಮತ್ತು ಆಕ್ಷೇಪಾರ್ಹವೆಂದು ಪರಿಗಣಿಸಲಾದ ವಿಷಯವನ್ನು ಒಳಗೊಂಡಿವೆ ಎಂದು ಸಚಿವಾಲಯ ಹೇಳಿದೆ. ಡಿಜಿಟಲ್ ವೇದಿಕೆಗಳು ಸ್ವಾತಂತ್ರ್ಯವನ್ನು ಹೊಂದಿವೆ ಎಂದು ಸರ್ಕಾರ ಹೇಳುತ್ತದೆ, ಆದರೆ ಅವು ನಿಯಮಗಳು ಮತ್ತು ಸಾಮಾಜಿಕ ಮಾನದಂಡಗಳನ್ನು ಸಹ ಪಾಲಿಸಬೇಕು. ಈ ವೇದಿಕೆಗಳ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಇನ್ನು ಮುಂದೆ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಯಮಗಳನ್ನು ಮಾಹಿತಿ ತಂತ್ರಜ್ಞಾನ ನಿಯಮಗಳು 2021 ಮತ್ತು ಅಶ್ಲೀಲತೆ ತಡೆಗಟ್ಟುವ ಕಾನೂನುಗಳ ಅಡಿಯಲ್ಲಿ ಜಾರಿಗೊಳಿಸಲಾಗಿದೆ.ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 69 ಎ ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ವಿಭಾಗದ ಅಡಿಯಲ್ಲಿ, ವಿವಿಧ ಕಾರಣಗಳಿಗಾಗಿ ಆನ್‌ಲೈನ್ ವಿಷಯವನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ.

ಮತ್ತಷ್ಟು ಓದಿ: ಜಿಯೋ ಹಾಟ್​ಸ್ಟಾರ್ ಈಗ ವಿಶ್ವದ ಎರಡನೇ ಅತಿದೊಡ್ಡ ಒಟಿಟಿ

ಸರ್ಕಾರದ ಈ ಕ್ರಮವನ್ನು ಡಿಜಿಟಲ್ ಜಾಗದಲ್ಲಿ ವಿಷಯ ನಿಯಂತ್ರಣದ ಕುರಿತು ಕಟ್ಟುನಿಟ್ಟಿನ ಸಂದೇಶವೆಂದು ಪರಿಗಣಿಸಲಾಗುತ್ತಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಇತರ ಮಾಧ್ಯಮಗಳಂತೆಯೇ ಅದರದ್ದೇ ಆದ ಜವಾಬ್ದಾರಿಗಳನ್ನು ಪೂರೈಸಬೇಕು.

ಯಾವುದೇ ಪ್ಲಾಟ್‌ಫಾರ್ಮ್ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಆಕ್ಷೇಪಾರ್ಹ ವಿಷಯವನ್ನು ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮನರಂಜನಾ ಉದ್ಯಮವು ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ಅಶ್ಲೀಲತೆಯನ್ನು ಹೆಚ್ಚಾಗಿ ಉತ್ತೇಜಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಲ್ಯಾಣ ಮಂಟಪದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಫೋಟೊಗ್ರಾಫರ್ ಸಾವು! – Kannada News | Photographer Dies of Heart Attack During Wedding Reception in Gundlupet, Chamarajanagar

ಚಾಮರಾಜನಗರ, ಫೆಬ್ರವರಿ 25: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ. ಆರತಕ್ಷತೆ ಫೋಟೋಗಳನ್ನು ತೆಗೆಯುತ್ತಿದ್ದ ಯುವ ಫೋಟೋಗ್ರಾಫರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೊಮ್ಮನಹಳ್ಳಿ ಗ್ರಾಮದ ಮೂರ್ತಿ ಮೃತ ದುರ್ದೈವಿ. ಮದುವೆ ಮಂಟಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಮೂರ್ತಿ ಕುಸಿದು ಬಿದ್ದಿದ್ದು, ಕೊನೆಯುಸಿರೆಳೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೋಟೋಗ್ರಾಫರ್ ಸಾವಿನಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೀಗಾದ್ರೆ ಸೌತ್ ಆಫ್ರಿಕಾ ಕೂಡ ವಿಶ್ವಕಪ್‌ನಿಂದ ಹೊರ ಬೀಳಬಹುದು! – Kannada News | South Africa at risk of World Cup exit if this happens

T20 World Cup 2026: ಸೂಪರ್-8 ಸುತ್ತಿನ ಮೊದಲ ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಸೆಮಿಫೈನಲ್ ಲೆಕ್ಕಾಚಾರಗಳು ಶುರುವಾಗಿದೆ. ಈಗಾಗಲೇ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡ ಸೆಮಿಫೈನಲ್​ಗೆ ಪ್ರವೇಶಿಸಿದರೆ, ಗ್ರೂಪ್-1 ರಲ್ಲಿ ಪೈಪೋಟಿ ಮುಂದುವರೆದಿದೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಸೌತ್ ಆಫ್ರಿಕಾ ತಂಡವು ಸೆಮಿಫೈನಲ್​ಗೇರುವ ವಿಶ್ವಾಸದಲ್ಲಿದೆ. ಆದರೆ ಚೋಕರ್ಸ್ ಹಣೆಪಟ್ಟಿ ಹೊಂದಿರುವ ಆಫ್ರಿಕಾ ಪಡೆ ಮುಂದಿನ ಪಂದ್ಯಗಳಲ್ಲಿ ಗೆಲ್ಲಲಿದೆಯಾ ಎಂಬುದೇ ಪ್ರಶ್ನೆ.

ಏಕೆಂದರೆ ಒಂದೆಡೆ ವೆಸ್ಟ್ ಇಂಡೀಸ್ ತಂಡವು ಪ್ರಚಂಡ ಪ್ರದರ್ಶನ ನೀಡುತ್ತಿದೆ. ಮತ್ತೊಂದೆಡೆ ಝಿಂಬಾಬ್ವೆ ತಂಡವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಏಕೆಂದರೆ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೇ ಸೋಲುಣಿಸಿ ಈ ಬಾರಿ ಝಿಂಬಾಬ್ವೆ ಪಡೆ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದಿಲ್ಲ ಎಂದು ಷರಾ ಬರೆಯುವಂತಿಲ್ಲ.

ಹೀಗಾಗಿಯೇ ಚೋಕರ್ಸ್ ಹಣೆಪಟ್ಟಿ ಹೊಂದಿರುವ ಸೌತ್ ಆಫ್ರಿಕಾ ಸೆಮಿಫೈನಲ್​ಗೆ ಪ್ರವೇಶಿಸುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಮುಂದಿನ ಪಂದ್ಯಗಳಲ್ಲಿ ಲೆಕ್ಕಾಚಾರಗಳು ಬುಡಮೇಲಾದರೆ ಸೌತ್ ಆಫ್ರಿಕಾ ತಂಡ ವಿಶ್ವಕಪ್​ನಿಂದ ಹೊರಬೀಳಲಿದೆ. ಅಂದರೆ ಈ ಕೆಳಗಿನ ಸಂದರ್ಭಗಳು ಸಂಭವಿಸಿದಲ್ಲಿ ಆಫ್ರಿಕಾ ಪಡೆ ಟೂರ್ನಿಯಿಂದ ಹೊರಬೀಳಬಹುದು…

  •  2  ಸೋಲು: ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೋತರೆ, ಅವರು ಕೇವಲ 2 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳಲಿದ್ದಾರೆ.
  • 4 ಅಂಕಗಳು: ಸೌತ್ ಆಫ್ರಿಕಾ ತಂಡ ಮುಂದಿನ ಪಂದ್ಯಗಳಲ್ಲಿ ಸೋತು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು 4 ಅಂಕಗಳನ್ನು ಪಡೆದುಕೊಂಡರೆ ಆಫ್ರಿಕಾ ಪಡೆ ಹೊರಬೀಳುವುದು ಖಚಿತವಾಗಲಿದೆ.
  •  1 ಗೆಲುವು: ಒಂದು ವೇಳೆ ಸೌತ್ ಆಫ್ರಿಕಾ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೆ, ಅವರು 4 ಅಂಕಗಳನ್ನು ಪಡೆಯುತ್ತಾರೆ. ಆಗ ಭಾರತ ಅಥವಾ ವೆಸ್ಟ್ ಇಂಡೀಸ್ ಕೂಡ 4 ಅಂಕಗಳನ್ನು ಹೊಂದಿದ್ದರೆ, ನೆಟ್ ರನ್ ರೇಟ್ ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಸದ್ಯ ಸೌತ್ ಆಫ್ರಿಕಾ ತಂಡವು +3.800 ನೆಟ್ ರನ್ ಹೊಂದಿದ್ದರೂ ಮುಂದಿನ ಪಂದ್ಯಗಳಲ್ಲಿ ಹೀನಾಯವಾಗಿ ಸೋತರೆ ಸಂಕಷ್ಟಕ್ಕೆ ಸಿಲುಕಲಿದೆ.
  • ಪಂದ್ಯ ರದ್ದು: ಸೌತ್ ಆಫ್ರಿಕಾ ತಂಡದ ಪಂದ್ಯಗಳು ಮಳೆಯಿಂದಾಗಿ ರದ್ದಾದರೆ ತಲಾ 1 ಅಂಕ ಹಂಚಿಕೆಯಾಗುತ್ತದೆ. ಇದು ರನ್ ರೇಟ್ ಹೆಚ್ಚಿಸಿಕೊಳ್ಳಲು ಅಡ್ಡಿಯಾಗಬಹುದು. ಇತರ ತಂಡಗಳು ಪಂದ್ಯಗಳನ್ನು ಗೆದ್ದು ಹೆಚ್ಚಿನ ಅಂಕ ಪಡೆದರೆ ಸೌತ್ಆ ಫ್ರಿಕಾ ತಂಡಕ್ಕೆ ಹಿನ್ನಡೆಯಾಗಬಹುದು.

ಇದನ್ನೂ ಓದಿ: ಅಳಿಯಲಿದೆಯಾ, ಉಳಿಯಲಿದೆಯಾ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ

ಅಂದರೆ ಇಲ್ಲಿ ಮೊದಲ ಪಂದ್ಯದಲ್ಲಿ 76 ರನ್​ಗಳ ಭರ್ಜರಿ ಜಯ ಸಾಧಿಸಿದರೂ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ಆಡುವುದು ಇನ್ನೂ ಸಹ ಖಚಿತವಾಗಿಲ್ಲ. ಈ ಮೇಲಿನ ಸಂದರ್ಭಗಳು ಎದುರಾದರೆ ಆಫ್ರಿಕಾ ಪಡೆ ಟಿ20 ವಿಶ್ವಕಪ್​ನಿಂದಲೇ ಹೊರಬೀಳಬಹುದು. ಒಂದೊಮ್ಮೆ ಸೌತ್ ಆಫ್ರಿಕಾ ಹೀಗೆ ಅನಿರೀಕ್ಷಿತವಾಗಿ ಹೊರಬಿದ್ದರೆ ಚೋಕರ್ಸ್ ಹಣೆಪಟ್ಟಿ ಮುಂದುವರೆಯಲಿದೆ.

Source link

Horoscope Today 25 February​: ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಮಾಡಬೇಕಾದೀತು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 25, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶುಕ್ಲಪಕ್ಷ ನವಮಿ, ರೋಹಿಣಿ ನಕ್ಷತ್ರದ ವಿಶೇಷ ದಿನವಾಗಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ವೃಷಭ ರಾಶಿಯ ರೋಹಿಣಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ.

ಡಾ. ಗುರೂಜಿ ಅವರು ಪ್ರತಿ ರಾಶಿಚಕ್ರ ಚಿಹ್ನೆಗೆ ನಿರ್ದಿಷ್ಟವಾದ ಫಲಗಳನ್ನು ವಿವರಿಸಿದ್ದಾರೆ. ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ಕುಟುಂಬದ ಸಮಸ್ಯೆಗಳು, ಮಕ್ಕಳ ಆರೋಗ್ಯದ ಕಾಳಜಿ, ಮತ್ತು ವ್ಯಾಪಾರದಲ್ಲಿ ಲಾಭದಂತಹ ವಿಷಯಗಳನ್ನು ವಿಶ್ಲೇಷಿಸಲಾಗಿದೆ. ಪ್ರತಿದಿನದ ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಬಗ್ಗೆಯೂ ಸಲಹೆ ನೀಡಿದ್ದಾರೆ.

 

 

Source link

ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ – Kannada News | Rashmika Mandanna and Vijay Deverakonda marriage here is the guest list

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಸಮೀಪದಲ್ಲಿರುವ ಐಶಾರಾಮಿ ರೆಸಾರ್ಟ್​​ನಲ್ಲಿ ಇವರಿಬ್ಬರ ಮದುವೆ ನಡೆಯುತ್ತಿದೆ. ಈಗಾಗಲೇ ಒಂದು ವಾರದಿಂದಲೂ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು (ಫೆಬ್ರವರಿ 25) ಮತ್ತು ನಾಳೆ (ಫೆಬ್ರವರಿ 26) ಹಳದಿ, ಮೆಹಂದಿ ಮತ್ತು ಮಾಂಗಲ್ಯಧಾರಣೆಯಂಥಹ ಪ್ರಮುಖ ಕಾರ್ಯಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ಮದುವೆಗೆ ಅತ್ಯಂತ ಕಡಿಮೆ ಮಂದಿಯನ್ನು ರಶ್ಮಿಕಾ ಮತ್ತು ವಿಜಯ್ ಆಹ್ವಾನಿಸಿದ್ದು ಪಟ್ಟಿ ಇಲ್ಲಿದೆ ನೋಡಿ…

ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಸಂಬಂಧಿಗಳು ಕಳೆದ ಒಂದು ವಾರದಿಂದಲೂ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಇನ್ನೂ ಕೆಲವೇ ಕೆಲವು ಅತ್ಯಾಪ್ತ ಗೆಳೆಯ-ಗೆಳತಿಯರನ್ನಷ್ಟೆ ಮದುವೆಗೆ ಆಹ್ವಾನಿಸಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ. ಈಗಾಗಲೇ ಕೆಲವು ಗೆಳೆಯರು, ಚಿತ್ರರಂಗದ ಕೆಲವು ಪ್ರಮುಖರು ಉದಯಪುರ ತಲುಪಿದ್ದು ಮದುವೆಯಲ್ಲಿ ಭಾಗಿ ಸಹ ಆಗಿದ್ದಾರೆ. ಅಂಥಹವರ ಪಟ್ಟಿ ಇಲ್ಲಿದೆ ನೋಡಿ.

ತರುಣ್ ಭಾಸ್ಕರ್ ಮತ್ತು ಇಶಾ ರೆಬ್ಬಾ ಅವರುಗಳು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆಯಲ್ಲಿ ಭಾಗಿ ಆಗಿದ್ದಾರೆ. ತರುಣ್ ಭಾಸ್ಕರ್, ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಪೆಳ್ಳಿ ಚೂಪುಲು’ ಸಿನಿಮಾದ ನಿರ್ದೇಶಕ. ವಿಜಯ್ ಅವರಿಗೆ ನಾಯಕನಾಗಿ ಅವಕಾಶ ಕೊಟ್ಟ ಮೊದಲ ನಿರ್ದೇಶಕ. ಇಶಾ ರೆಬ್ಬ, ವಿಜಯ್ ದೇವರಕೊಂಡ ಪೋಷಕ ಪಾತ್ರಧಾರಿಯಾಗಿ ನಟಿಸಿದ್ದ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ನಾಯಕಿ ಆಗಿದ್ದರು. ತರುಣ್ ಹಾಗೂ ನಟಿ ಇಶಾ ರೆಬ್ಬ ನಡುವೆ ಆಪ್ತ ಸಂಬಂಧವಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರಿಗೂ ಆಪ್ತವಾಗಿರುವ ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಅವರು ಸಹ ಮದುವೆಯಲ್ಲಿ ಭಾಗಿ ಆಗಿದ್ದರು. ಶ್ರಾವ್ಯಾ ಅವರು ಚಿತ್ರರಂಗದ ಬಲು ಬೇಡಿಕೆಯ ಸ್ಟೈಲಿಸ್ಟ್ ಆಗಿದ್ದಾರೆ. ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಸಹ ರಶ್ಮಿಕಾ-ವಿಜಯ್ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಆಶಿಕಾ ರಂಗನಾಥ್ ಅವರು ರಶ್ಮಿಕಾರ ಆಪ್ತ ಗೆಳತಿಯರಲ್ಲಿ ಒಬ್ಬರು ಎನ್ನಲಾಗುತ್ತಿದೆ.

ರಶ್ಮಿಕಾರ ಈ ಹಿಂದಿನ ಸಿನಿಮಾ ‘ದಿ ಗರ್ಲ್​​ಫ್ರೆಂಡ್’ ನಿರ್ದೇಶನ ಮಾಡಿರುವ ನಿರ್ದೇಶಕ ರಾಹುಲ್ ರವಿಂದ್ರನ್ ಅವರು ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ‘ದಿ ಗರ್ಲ್​ಫ್ರೆಂಡ್’ ನಿರ್ದೇಶನದ ವೇಳೆ ರಶ್ಮಿಕಾ ಹಾಗೂ ರಾಹುಲ್ ನಡುವೆ ಒಳ್ಳೆಯ ಗೆಳೆತನ ಏರ್ಪಟ್ಟಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದರು. ಅದೇ ಕಾರಣಕ್ಕೆ ಇದೀಗ ಅವರು ಮದುವೆಗೆ ಆಹ್ವಾನಿಸಲ್ಪಟ್ಟಿದ್ದು, ಮದುವೆಗೆ ಹಾಜರಿ ಹಾಕಿದ್ದಾರೆ.

ಇವರಷ್ಟೆ ಅಲ್ಲದೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ಇನ್ನೂ ಕೆಲವು ಸಿನಿಮಾ ಸೆಲೆಬ್ರಿಟಿಗಳು ವಿಜಯ್-ರಶ್ಮಿಕಾ ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ವಿಜಯ್ ಅವರ ಕೆಲವು ಕಾಲೇಜು ದಿನಗಳ ಗೆಳೆಯರು ಮತ್ತು ರಶ್ಮಿಕಾ ಅವರ ಕೆಲವು ಅತ್ಯಾಪ್ತ ಗೆಳತಿಯರು ಸಹ ಮದುವೆಯಲ್ಲಿ ಭಾಗಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರು: ಮಾರ್ಚ್ 11 ರಿಂದ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ – Kannada News | Karnataka Government Faces Twin Protests: Contractors Demand Dues, Doctors Announce OPD Shutdown from March 11

ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವೈದ್ಯರು, ಗುತ್ತಿಗೆದಾರರುImage Credit source: tv9

ಬೆಂಗಳೂರು, ಫೆಬ್ರವರಿ 25: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಗುತ್ತಿಗೆದಾರರು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಏಕಕಾಲದಲ್ಲಿ ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 37,000 ಕೋಟಿ ರೂಪಾಯಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಲವು ಬೇಡಿಕೆಗಳ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ವೈದ್ಯರ ಬೇಡಿಕೆಗಳೇನು?

  1. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಸಮರ್ಪಕವಾಗಿ ಔಷಧಗಳ ಸರಬರಾಜು.
  2. ವೃಂದ ಮತ್ತ ನೇಮಕಾತಿ ನಿಯಮಗಳನ್ನ ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡುವುದು.
  3. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನ ಪ್ರಕಟಿಸುವುದು.
  4. ಕಳೆದ ಐದು ವರ್ಷಗಳಿಂದ ತಡೆ ಹಿಡಿಯಲಾದ ಮುಂಬಡ್ತಿಯನ್ನ ನೀಡುವುದು.
  5. ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ಮಾಡುವುದು.
  6. ಕೇಂದ್ರ ಪುರಸ್ಕೃತ ಯೋಜನೆಯಡಿ 6 ಸಾವಿರ ನೌಕರರಿಗೆ ಪ್ರತಿತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆ ನೀಡುವುದು.
  7. ಖಾಲಿ ಇರುವ ವೈದ್ಯರು,ಅರೆ ವೈದ್ಯರ ಹುದ್ದೆಯನ್ನ ಕೂಡಲೇ ಭರ್ತಿ ಮಾಡುವುದು.

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ಮಾರ್ಚ್ 11ರಿಂದ ಮುಷ್ಕರ ಮಾಡುವುದಾಗಿ ಘೋಷಿಸಿದೆ. ಸರ್ಕಾರದ ಜೊತೆ ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಎರಡು ಹಂತಗಳಲ್ಲಿ ವೈದ್ಯರ ಮುಷ್ಕರ

ಮುಷ್ಕರವನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಡಿಸ್ಪೆನ್ಸರಿಗಳಲ್ಲಿ ಕಪ್ಪು ಪಟ್ಟಿಧರಿಸಿ ಹೊರ ರೋಗಿ (ಓಪಿಡಿ) ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ತುರ್ತು ಸೇವೆಗಳು ಮಾತ್ರ ಮುಂದುವರಿಯಲಿವೆ. ಎರಡನೇ ಹಂತವಾಗಿ ಮಾರ್ಚ್ 16ರಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ತುಂಬಾ ತಾಳ್ಮೆಯಿಂದ ಇದ್ದೇವೆ. ಹತ್ತಾರು ಸಭೆಗಳನ್ನು ನಡೆಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ವರ್ಷಗಳಿಂದ ಕಾದಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಆದರೆ ಸರ್ಕಾರ ಸ್ಪಂದಿಸದ ಕಾರಣ ಮುಷ್ಕರಕ್ಕೆ ಹೋಗುವುದು ಅನಿವಾರ್ಯವಾಗಿದೆ ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ ರವೀಂದ್ರನಾಥ್ ಮೇಟಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗ್ತಿಲ್ಲ ಔಷಧಿ

ಕೌನ್ಸೆಲಿಂಗ್ ಸರಿಯಾಗಿ ಮಾಡಿಲ್ಲ, ಪರಸ್ಪರ ವರ್ಗಾವಣೆ ಆಗಿಲ್ಲ, ಅಂಗವಿಕಲರಿಗೆ ನ್ಯಾಯಯುತ ವರ್ಗಾವಣೆ ನೀಡಿಲ್ಲ. ಕಾಲಕಾಲಕ್ಕೆ ಔಷಧ ಪೂರೈಕೆ ಆಗುತ್ತಿಲ್ಲ. ಔಷಧಗಳಿಲ್ಲದಿದ್ದರೂ ಇದೆ ಎಂದು ತೋರಿಸಲಾಗುತ್ತಿದೆ. ಸರ್ಕಾರವೇ ತಂದ ನಿಯಮ ಪ್ರಕಾರ ಹೊರಗಡೆಗೆ ಚೀಟಿ ಬರೆಯಬಾರದು, ಆದರೆ ಅನಿವಾರ್ಯವಾಗಿ ಬರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ರವೀಂದ್ರನಾಥ್ ಮೇಟಿ ಆರೋಪಿಸಿದ್ದಾರೆ.

ಇತ್ತೀಚೆಗೆ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದರೂ ಔಷಧ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. 496 ಔಷಧಗಳಲ್ಲಿ ಕೇವಲ 26 ಮಾತ್ರ ಸರಬರಾಜಾಗುತ್ತಿವೆ. ಹಲವೆಡೆ ಐವಿ ಫ್ಲೂಯಿಡ್ ಕೊರತೆ ಉಂಟಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ನೌಕರರ ಸಂಘದ ಬೆಂಬಲ

ವೈದ್ಯರ ಬೇಡಿಕೆಗಳು ನ್ಯಾಯಯುತವಾಗಿವೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ದೊಡ್ಡದು. ಚರ್ಚೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕು. ಅಧಿಕಾರಿಗಳು ಪ್ರತಿಷ್ಠೆಗೆ ತೆಗೆದುಕೊಳ್ಳಬಾರದು. ನಾವು ಕಾನೂನಿನಡಿಯಲ್ಲಿ ಕೇಳುತ್ತಿದ್ದೇವೆ. ಪ್ರಮೋಷನ್ ಇಲ್ಲ, ವೇತನ ಹೆಚ್ಚಳವಿಲ್ಲ, ಗೌರವವಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಹೋಗಬೇಕಾಗಿದೆ. ಸರ್ಕಾರ ತಕ್ಷಣ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆದಾರರಿಂದ ಸರ್ಕಾರಕ್ಕೆ ಫೆಬ್ರವರಿ ಡೆಡ್​​ಲೈನ್

ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ 37,000 ಕೋಟಿ ರೂಪಾಯಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ. ಈ ಹಣ ಲೋಕೋಪಯೋಗಿ, ಜಲಸಂಪನ್ಮೂಲ, ಆರ್‌ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದೆ. ಬಾಕಿ ಪಾವತಿಸದಿದ್ದಲ್ಲಿ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿ ಮಾರ್ಚ್ 6ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಳಿಯಲಿದೆಯಾ, ಉಳಿಯಲಿದೆಯಾ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ – Kannada News | Sahibzada farhan Chasing On Virat Kohli’s Iconic World Record

T20 World Cup 2026: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಾಹಿಬ್​ಝಾದ ಫರ್ಹಾನ್ (Sahibzada farhan) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ನಮೀಬಿಯ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಾಹಿಬ್​ ಇದೀಗ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಾಹಿಬ್​ಝಾದ ಫರ್ಹಾನ್ 45 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 63 ರನ್​ ಬಾರಿಸಿದ್ದಾರೆ.

ಈ 63 ರನ್​ಗಳೊಂದಿಗೆ ಸಾಹಿಬ್​ಝಾದ ಫರ್ಹಾನ್ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈವರೆಗೆ 5 ಇನಿಂಗ್ಸ್ ಆಡಿರುವ ಸಾಹಿಬ್ ಒಟ್ಟು 283 ರನ್​ಗಳಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿಯ ಐತಿಹಾಸಿಕ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.

ವಿರಾಟ್ ಕೊಹ್ಲಿ 2014ರ ಟಿ20 ವಿಶ್ವಕಪ್​ನಲ್ಲಿ 6 ಇನಿಂಗ್ಸ್​ಗಳ ಮೂಲಕ ಬರೋಬ್ಬರಿ 319 ರನ್​ ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. 

ಇದೀಗ ಈ ದಾಖಲೆ ಮುರಿಯಲು ಸಾಹಿಬ್​ಝಾದ ಫರ್ಹಾನ್​ಗೆ ಕೇವಲ 37 ರನ್​ಗಳ ಅವಶ್ಯಕತೆಯಿದೆ. ಅಂದರೆ ಸೂಪರ್-8 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 37 ರನ್ ಬಾರಿಸಿದರೆ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಬಹುದು. ಅದರಂತೆ ಫೆಬ್ರವರಿ 28 ರಂದು ಸಾಹಿಬ್​ಝಾದ ಫರ್ಹಾನ್ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.

Published On – 8:42 am, Wed, 25 February 26

Source link