ಬಿಹಾರ್, ಜಾರ್ಖಂಡ್ನಲ್ಲಿ ಆದಾಯ ತೆರಿಗೆ ಪಾವತಿಯಲ್ಲಿ ಉದ್ಯಮಿಗಳನ್ನೂ ಮೀರಿಸಿದ ಧೋನಿ – Kannada News | MS Dhoni reportedly highest individual tax payer in Jharkhand and Bihar
ರಾಂಚಿ, ಮೇ 8: ಮಾಜಿ ಕ್ರಿಕೆಟಿಗ ಮತ್ತು ಬ್ಯುಸಿನೆಸ್ಮ್ಯಾನ್ ಆಗಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಹಲವು ವರ್ಷಗಳಿಂದ ಅತಿಹೆಚ್ಚು ತೆರಿಗೆ ಪಾವತಿದಾರರ (Income tax payers) ಸಾಲಿನಲ್ಲಿ ಇದ್ದಾರೆ. ಇದೀಗ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿನ ವೈಯಕ್ತಿಕ ಆದಾಯ ತೆರಿಗೆಪಾವತಿದಾರರ ಪೈಕಿ ಧೋನಿಯೇ ನಂಬರ್ ಒನ್ ಎನಿಸಿದ್ದಾರೆ. ಈ ಎರಡು ರಾಜ್ಯಗಳಲ್ಲೇ 2025-26ರಲ್ಲಿ ಅತಿಹೆಚ್ಚು ಟ್ಯಾಕ್ಸ್ ಕಟ್ಟಿರುವುದು ಧೋನಿಯೇ ಎಂದು ತೆರಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ. ಬಹಳ ಹಿಂದುಳಿದ…