Headlines

nagaraj11081993

ಬಡತನವನ್ನೇ ಮೆಟ್ಟಿ ನಿಂತು ಮಹತ್ತರ ಸಾಧನೆ: ಛಲಬಿಡದೆ ಓದಿ ಜಡ್ಜ್ ಆದ ಆಟೋ ಚಾಲಕನ ಮಗಳು! – Kannada News | Auto Driver’s Daughter from Anekal Becomes Civil Judge: Nagini L Secures 48th Rank After Beating Poverty

ಆನೇಕಲ್, ಫೆಬ್ರವರಿ 24: ಆಟೋ ಚಾಲಕರೊಬ್ಬರ ಮಗಳು ಬಡತನವನ್ನೇ ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿ ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಈ ಮೂಲಕ, ಕುಟುಂಬದವರಿಗಷ್ಟೇ ಅಲ್ಲದೆ ಇಡೀ ಊರಿಗೂ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ. ಇಂಥದ್ದೊಂದು ಅಪರೂಪದ ವಿದ್ಯಮಾನ ಬೆಂಗಳೂರು (Bangalore) ಹೊರವಲಯದ ಆನೇಕಲ್​ನಿಂದ ವರದಿಯಾಗಿದೆ. ಆನೇಕಲ್ ತಾಲ್ಲೂಕಿನ ತಿರುಪಾಳ್ಯ ನಿವಾಸಿಯಾದ ನಾಗಿಣಿ ಎಲ್ ಎಂಬವರು ಲಕ್ಷ್ಮಣ್ ಮತ್ತು ಮಂಜುಳಾ ದಂಪತಿಯ ದ್ವಿತೀಯ ಪುತ್ರಿ. ತಂದೆ ಲಕ್ಷ್ಮಣ್ ಆಟೋ ಚಾಲಕರಾಗಿದ್ದು, ತಾಯಿ ಮಂಜುಳಾ ಹೂವಿನ ವ್ಯಾಪಾರ…

Read More

ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ! – Kannada News | Dharwad Job Aspirants Protest for Vacant Posts Amidst Police Opposition

ಧಾರವಾಡ, ಫೆಬ್ರವರಿ 24: ಧಾರವಾಡದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಕರು ಶ್ರೀನಗರ ವೃತ್ತದಲ್ಲಿ ಜಮಾಯಿಸಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಪೊಲೀಸರ ವಿರೋಧದ ಮಧ್ಯೆಯೂ ಪ್ರತಿಭಟನಾಕಾರರು ಜಯನಗರ ವೃತ್ತದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಧಾರವಾಡ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಜನಾಸಮಂಕರ ವೇದಿಕೆಯ ಅಡಿಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಿಡಿದು ತಮ್ಮ…

Read More

ಸರ್ಕಾರದ ವಿರುದ್ಧ ಉದ್ಯೋಗಾಂಕ್ಷಿಗಳ ಕಿಚ್ಚು: ಅನುಮತಿ ಇಲ್ಲದಿದ್ರೂ ಪ್ರೊಟೆಸ್ಟ್​​ – Kannada News | Massive Protest by Job Aspirants in Dharwad Held Without Police Permission

ಧಾರವಾಡ, ಫೆಬ್ರವರಿ 24: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಶ್ರೀನಗರ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗಿರುವ ಪ್ರತಿಭಟನಾಕಾರರು, ಕಾಂಗ್ರೆಸ್ ನಾಯಕರ ಫೋಟೋ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಧಾರವಾಡ ಪೊಲೀಸರ ಹರಸಾಹಸ ಪಟ್ಟ ಪ್ರಸಂಗವೂ ನಡೆದದೆ. ಇನ್ನು ಇಂದು ಪ್ರತಿಭಟನೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ(AKSA) ಅನುಮತಿ ಕೇಳಿದ್ದು, ಪೊಲೀಸರು ನಿರಾಕರಿಸಿದ್ದರು. ಆದರೆ ಸಂಘಟನೆ ಹೈಕೋರ್ಟ್​​ ಮೊರೆ ಹೋಗಿದ್ದು, ಕೋರ್ಟ್​​ ಪೊಲೀಸರೊಂದಿಗೇ…

Read More

Astrological Remedie: ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೇ? ಈ ಜ್ಯೋತಿಷ್ಯ ಸಲಹೆ ಅನುಸರಿಸಿ – Kannada News | Recover Lent Money: Astrological Remedies to Get Your Funds Back Fast

ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಿತರವರಿಗೆ ಸಹಾಯದ ಮನಸ್ಸಿನಿಂದ ನೀಡಿದ ಹಣ ಸಮಯಕ್ಕೆ ಸರಿಯಾಗಿ ವಾಪಸ್ ಸಿಗದಿದ್ದರೆ ಮಾನಸಿಕ ಒತ್ತಡ ಉಂಟಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಕೆಲವರು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸುವ ಮೂಲಕ ಧನಪ್ರವಾಹ ಸುಗಮವಾಗುತ್ತದೆ ಎಂದು ನಂಬುತ್ತಾರೆ. ಇವು ನಂಬಿಕೆ ಆಧಾರಿತ ಪರಿಹಾರಗಳಾಗಿದ್ದು, ನಿಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅನುಸರಿಸಬಹುದು. ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೆಂದಾದರೆ ಜ್ಯೋತಿಷ್ಯ ಶಾಸ್ತಜ್ಞರು ಹೇಳುವ ಈ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ. ಬುಧವಾರದ ಪರಿಹಾರ: ಬುಧವಾರ ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನ…

Read More

ಎಂಜಿನ್​​ನಲ್ಲಿ ದೋಷ, 150 ಜನರನ್ನು ಹೊತ್ತು ಲೇಹ್​​ಗೆ ಹೊರಟಿದ್ದ ಸ್ಪೈಸ್​​ಜೆಟ್ ವಿಮಾನ ದೆಹಲಿಗೆ ವಾಪಸ್ – Kannada News | SpiceJet Emergency: Delhi Leh Flight Makes Safe Return After Engine Issue

ಸ್ಪೈಸ್​ಜೆಟ್-ಸಾಂದರ್ಭಿಕ ಚಿತ್ರ Image Credit source: Skytrax ನವದೆಹಲಿ, ಫೆಬ್ರವರಿ 24: ಎಂಜಿನ್​​ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ 150 ಜನರನ್ನು ಹೊತ್ತು ಲೇಹ್​​ಗೆ ಹೊರಟಿದ್ದ ಸ್ಪೈಸ್​ಜೆಟ್(SpiceJet) ವಿಮಾನ ದೆಹಲಿಗೆ ಹಿಂದಿರುಗಿರುವ ಘಟನೆ ನಡೆದಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು . SG121 ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು, ಆಗ ಸಿಬ್ಬಂದಿಗೆ ಒಂದು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಮುನ್ನೆಚ್ಚರಿಕೆಯಾಗಿ, ಪೈಲಟ್‌ಗಳು ವಿಮಾನವನ್ನು ತಿರುಗಿಸಿ…

Read More

ಆಲಿಯಾ ಭಟ್ ಮೇಲೆ ನಂಬಿಕೆ 215 ಕೋಟಿ ಆಫರ್ ತಿರಸ್ಕರಿಸಿದ ವೈಆರ್​ಎಫ್ – Kannada News | Yash Raj Films rejects 215 crore rs offer of Netflix on Alpha movie

ಬಾಲಿವುಡ್‌ನ (Bollywood) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್, ಒಂದರ ಹಿಂದೊಂದು ಭಾರಿ ಬಜೆಟ್ ಸಿನಿಮಾಗಳನ್ನು ಮಾಡುತ್ತಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ರಣ್​​ಬೀರ್ ಕಪೂರ್, ಹೃತಿಕ್ ರೋಷನ್, ಜೂ ಎನ್​​ಟಿಆರ್ ಹೀಗೆ ಒಬ್ಬರಾದ ಮೇಲೆ ಒಬ್ಬ ಸೂಪರ್ ಸ್ಟಾರ್ ನಟರ ಭಾರಿ ಬಜೆಟ್ ಸಿನಿಮಾಗಳ ಮೇಲೆ ಸಾವಿರಾರು ಕೋಟಿ ಹಣ ಸುರಿಯುತ್ತಿದೆ. ಭಾರಿ ಬಜೆಟ್​ನ ಆಕ್ಷನ್ ಸಿನಿಮಾಗಳು, ಸ್ಪೈ ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಾ ಬಂದಿರುವ ಯಶ್ ರಾಜ್ ಫಿಲಮ್ಸ್, ಇದೀಗ ಮಹಿಳಾ ಪ್ರಧಾನ…

Read More

Namma Metro: ಪರ್ಪಲ್ ಮತ್ತು ಗ್ರೀನ್ ಲೈನ್​ಗೆ ಬರಲಿವೆ ಮೂರು ಹೊಸ ರೈಲುಗಳು! – Kannada News | Namma Metro: New Trains to Ease Purple and Green Line Rush by May June

ಬೆಂಗಳೂರು, ಫೆಬ್ರವರಿ 24: ನಗರದ ಮೆಟ್ರೋ (Namma Metro) ಸಂಚಾರದಲ್ಲಿ ಉಂಟಾಗುತ್ತಿರುವ ತೀವ್ರ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶೇಷವಾಗಿ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಲ್ಲಿ ಪ್ರಯಾಣಿಕರು ತೀವ್ರ ಅಸೌಕರ್ಯ ಅನುಭವಿಸುತ್ತಿದ್ದಾರೆ. ವಾರದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿದೆ ಎನ್ನಲಾಗಿದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಮೇ–ಜೂನ್ ವೇಳೆಗೆ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ. ಇನ್ನೆರಡೇ ತಿಂಗಳಲ್ಲಿ ಟೀಟಾಘರ್ನಿಂದ ರೈಲು ಪೂರೈಕೆ ಪಶ್ಚಿಮ ಬಂಗಾಳ ಮೂಲದ ಟೀಟಾಘರ್ನಿಂದ(ಟಿಆರ್‌ಎಸ್‌ಎಲ್) ಫೆಬ್ರವರಿ…

Read More

Gold Rate Today: ಚಿನ್ನದ ಬೆಲೆ ಏರಿಕೆ; ಬೆಳ್ಳಿ ಬೆಲೆ ಇಳಿಕೆ – Kannada News | Gold Price Today on 24th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 24: ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಮೊನ್ನೆ ಮತ್ತು ನಿನ್ನೆ ಕ್ರಮವಾಗಿ 285 ರೂ ಮತ್ತು 190 ರೂ ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು 40 ರೂ ಹೆಚ್ಚಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯ ಏರಿಕೆ ಓಟ ನಿಂತಿದೆ. ಮಂಗಳವಾರ ಇದರ ಬೆಲೆ 10ರಿಂದ 15 ರೂನಷ್ಟು ತಗ್ಗಿದೆ. ನಿನ್ನೆ ಬೆಳ್ಳಿ ಬೆಲೆ ಬರೋಬ್ಬರಿ 25 ರೂ ಏರಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,300…

Read More

Wallet Vastu: ಪರ್ಸ್​​ನಲ್ಲಿ ಯಾವ ವಸ್ತು ಇಡಲೇಬಾರದು? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Wallet Vastu and Prosperity: Guruji’s Sanatana Tips for Money Attraction

ದೈನಂದಿನ ಜೀವನದಲ್ಲಿ ಪರ್ಸ್ ಅಥವಾ ವಾಲೆಟ್ ಅತ್ಯಗತ್ಯ ವಸ್ತುವಾಗಿದೆ. ಇದು ಕೇವಲ ಹಣವನ್ನು ಇಡುವ ಸಾಧನವಷ್ಟೇ ಅಲ್ಲ, ಪ್ರಾಚೀನ ಸನಾತನ ಸಂಸ್ಕೃತಿಯಲ್ಲಿ ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪರ್ಸ್ನ್ನು ಸ್ವಚ್ಛವಾಗಿ ಮತ್ತು ಸರಿಯಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ. ಪ್ರಾಚೀನ ಕಾಲದಲ್ಲಿ ಹಣವನ್ನು ಇಡುವ ಚೀಲಗಳ ಪರಿಕಲ್ಪನೆ ಇದ್ದು, ಆಗ ಬೆಳ್ಳಿ, ಬಂಗಾರ, ತಾಮ್ರ ಮತ್ತು…

Read More

Video: ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿ ಪ್ರೀತಿ ವ್ಯಕ್ತಪಡಿಸಿದ ಆಟೋ ಡ್ರೈವರ್ – Kannada News | Bengaluru: Bengaluru auto driver expresses love by hanging his wife’s earring in auto

ಬೆಂಗಳೂರು, ಫೆಬ್ರವರಿ 24: ಪ್ರೀತಿ (love) ಕುರುಡು ಪ್ರೀತಿಗೆ ಕಣ್ಣಿಲ್ಲ. ಪ್ರೀತಿಯಲ್ಲಿ ಬಿದ್ದವರಿಗೆ ಈ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ ಎಂದು ಹೇಳುವುದನ್ನು ನೋಡಿರಬಹುದು. ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಸಂಗಾತಿಯ ಮನಸ್ಸು ಗೆಲ್ತಾರೆ. ಆದರೆ ಬೆಂಗಳೂರಿನ (Bengaluru) ಆಟೋ ಚಾಲಕನೊಬ್ಬ ತನ್ನ ಮಡದಿ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾನೆ. ಹೌದು ತನ್ನ ಪತ್ನಿಯ ಕಿವಿಯೋಲೆಯನ್ನು ಆಟೋದಲ್ಲಿ ನೇತು ಹಾಕಿ ಪತ್ನಿಯ ಪ್ರೀತಿಯನ್ನು ಕೆಲಸದ ನಡುವೆಯೂ ನೆನಪಿಸಿಕೊಂಡಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ…

Read More