Headlines

nagaraj11081993

ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ? – Kannada News | Bharat Taxi, how investment of Rs 500 from drivers can turn into profit

ನವದೆಹಲಿ, ಫೆಬ್ರುವರಿ 24: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ ಸೋಮವಾರ (ಫೆ. 23) ಭಾರತ್ ಟ್ಯಾಕ್ಸಿ (Bhara Taxi) ಸೇವೆಗೆ ಚಾಲನೆ ನೀಡಿದ್ದಾರೆ. ಅಮೂಲ್ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಸೇರಿ ಕಟ್ಟಿರುವ ಕಂಪನಿ ಇದು. ಅಮೂಲ್​ನ ರೀತಿಯಲ್ಲೇ ಭಾರತ್ ಟ್ಯಾಕ್ಸಿಯ ಬ್ಯುಸಿನೆಸ್ ಮಾಡಲ್ ಇದೆ. ಅಮುಲ್​ನಲ್ಲಿ ಹಾಲು ಉತ್ಪಾದಕರೇ ಮಾಲೀಕರಾಗಿದ್ದಾರೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ. ಏನಿದು ಭಾರತ್ ಟ್ಯಾಕ್ಸಿ? ಓಲಾ, ಊಬರ್, ರಾಪಿಡೋ, ನಮ್ಮ ಯಾತ್ರಿ ರೀತಿಯಲ್ಲಿ ಭಾರತ್ ಟ್ಯಾಕ್ಸಿ…

Read More

ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ; ಯುವತಿಗೆ ಲವ್​ ಮ್ಯಾರೇಜ್ ಮಾಡಿಸಿದ್ದಕ್ಕೆ ನಡೀತಾ ಹಲ್ಲೆ? – Kannada News | Mandya Bommalapura: Man Brutally Attacked for Aiding Love Marriage, Leg Crushed

ಮಂಡ್ಯ, ಫೆಬ್ರವರಿ 24:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕಾಲನ್ನು ಸೈಜ್​ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಹುಡುಗಿ ವಿಚಾರವಾಗಿಯೇ ಈ ಹಲ್ಲೆ ನಡೆದಿದೆಯೆಂದು ಹೇಳಲಾಗಿದ್ದು, ಗ್ರಾಮದ ಹುಡುಗಿಯೊಬ್ಬಳು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಲು ಸಂತ್ರಸ್ತ ಸಹಾಯ ಮಾಡಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಸೇಡು ತೀರಿಸಿಕೊಂಡ್ರಾ ಯುವತಿಯ ತಂದೆ? ಬೊಮ್ಮಲಾಪುರ ಗ್ರಾಮದ ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಗಿರೀಶ್,…

Read More

ಜೀ ಕಿರುಚಿತ್ರ ಸ್ಪರ್ಧೆ: ಖ್ಯಾತ ನಿರ್ದೇಶಕರ ಎದುರು ಹೊಸ ಪ್ರತಿಭೆಗಳ ಅನಾವರಣಕ್ಕೆ ಅವಕಾಶ – Kannada News | Zee Short film contest 2026 details in Kannada Talented directors in jury panel

‘ಜೀ’ (Z) ಸಂಸ್ಥೆಯು ‘ಜೀ ಕಿರುಚಿತ್ರ ಸ್ಪರ್ಧೆ’ (Zee Short Film Contest) ಆಯೋಜಿಸುತ್ತಿದೆ. ದೇಶದಾದ್ಯಂತ ಉದಯೋನ್ಮುಖ ಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಮತ್ತು ಅವರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ. ಭಾರತದ ವಿವಿಧ ಪ್ರಾದೇಶಿಕ ಸಿನಿಮಾ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭಾ ಅನ್ವೇಷಣೆಯ ಅತ್ಯಂತ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ. ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ…

Read More

Air Ambulance Crash: ಒಂದು ಜೀವ ಉಳಿಸಲು ಏರ್ ಆಂಬ್ಯುಲೆನ್ಸ್​ಗೆ 7 ಲಕ್ಷ ರೂ. ಕೊಟ್ಟಿದ್ರು, ಆದ್ರೆ 7 ಪ್ರಾಣ ಹೋಯ್ತು – Kannada News | Jharkhand Air Ambulance Tragedy: Rs7 Lakh Paid for One Life, 7 Died in Crash

ರಾಂಚಿ, ಫೆಬ್ರವರಿ 24: ಜಾರ್ಖಂಡ್​​ನ ರಾಂಚಿಯಲ್ಲಿ ಏರ್ ಆಂಬ್ಯುಲೆನ್ಸ್(Air Ambulance)​ ಅಪಘಾತಕ್ಕೀಡಾಗಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಜೀವವನ್ನು ಉಳಿಸಲು ಕುಟುಂಬ ಈ ಆಂಬ್ಯುಲೆನ್ಸ್​ಗೆ 7 ಲಕ್ಷ ರೂ. ಪಾವತಿ ಮಾಡಿತ್ತು.  ಆದರೆ ಅಪಘಾತದಲ್ಲಿ ಏಳು ಜನರ ಪ್ರಾಣ ಹೋಗಿದೆ. ಅಷ್ಟೇ ಅಲ್ಲದೆ ದೆಹಲಿಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಲು ಲಕ್ಷಗಟ್ಟಲೆ ಸಾಲವನ್ನೂ ಕೂಡ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ಸಂಜೆ 7.11…

Read More

Sepsis: ನಾಯಿ ನಿಮ್ಮನ್ನು ನೆಕ್ಕುವುದರಿಂದ ಅಂಗಾಂಗಗಳನ್ನೇ ನೀವು ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು ಎಚ್ಚರ! – Kannada News | Dog Lick Danger: Sepsis Risk, Organ Failure and Limb Loss Protect Your Health

ಸಾಮಾನ್ಯವಾಗಿ ಸಾಕು ನಾಯಿ(Dog)ಗಳನ್ನು ಮನೆ ಮಾಲೀಕರು ಮನೆಯ ಒಂದು ಸದಸ್ಯನಂತೆ ಕಾಣುತ್ತಾರೆ. ಮನೆಯ ಒಳಗೇ ನಾಯಿಯನ್ನು ಬಿಟ್ಟುಕೊಳ್ಳುತ್ತಾರೆ. ತಮ್ಮ ಜತೆ ಬೆಡ್​ರೂಮಿನಲ್ಲೇ ಮಲಗಿಸಿಕೊಳ್ಳುತ್ತಾರೆ. ಹಾಗೆಯೇ ಆ ನಾಯಿಗಳು ಕೂಡ ಮನೆ ಸದಸ್ಯರ ಕೈಕಾಲು, ಮುಖಗಳನ್ನು ನೆಕ್ಕುತ್ತಾ ತಮ್ಮ ಪ್ರೀತಿಯನ್ನು ಸಾಬೀತುಪಡಿಸುತ್ತವೆ. ಆದರೆ ಆ ಪ್ರೀತಿ ಜನರ ಜೀವಕ್ಕೆ ಕುತ್ತು ತರಬಹುದು ಎಂಬುದು ಯಾರಿಗಾದರೂ ತಿಳಿದಿದೆಯೇ?. ನಾಯಿ ನಿಮ್ಮ ನೆಕ್ಕುವುದರಿಂದ ಅಂಗಾಂಗಗಳನ್ನೇ ನೀವು ಕಳೆದುಕೊಳ್ಳಬಹುದು, ಅಂಗಾಂಗ ವೈಫಲ್ಯ ಉಂಟಾಗಬಹುದು, ಟಿಶ್ಯೂ ಡ್ಯಾಮೇಜ್ ಆಗಬಹುದು, ನಿಮ್ಮ ಜೀವಕ್ಕೇ ಇದು ಕುತ್ತು…

Read More

ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ – Kannada News | KSCA To Name Pavilion Block At Hubballi Stadium After Sunil Joshi

ಹುಬ್ಬಳ್ಳಿಯ ಕೆಎಸ್​ಸಿಎ ಕ್ರೀಡಾಂಗಣದ ಪೆವಿಲಿಯನ್​ಗೆ ಕರ್ನಾಟಕದ ಮಾಜಿ ಆಟಗಾರ ಸುನಿಲ್ ಜೋಶಿ ಅವರ ಹೆಸರಿಡಲಾಗಿದೆ.  ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ‘ಸುನಿಲ್ ಜೋಶಿ ಪೆವಿಲಿಯನ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಸಿಸಿಐ (BCCI) ಗೌರವಾನ್ವಿತ ಅಧ್ಯಕ್ಷರಾದ  ಮಿಥುನ್ ಮನ್ಹಾಸ್, ಕೆಎಸ್‌ಸಿಎ (KSCA) ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪ್ರಸಾದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸೇರಿದಂತೆ ಪ್ರಮುಖರು  ಉಪಸ್ಥಿತರಿದ್ದರು….

Read More

ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಸಿನಿಮಾ: ಪ್ರಧಾನಿ ಮೋದಿ ಅಭಿನಂದನೆ – Kannada News | Manipuri Language Indian movie Boong won prestigious BAFTA award

ಆಸ್ಕರ್ (Oscar) ಪ್ರಶಸ್ತಿಯಲ್ಲಿ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’ ಅಂತಿಮ ಹದಿನೈದು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಸಿನಿಮಾ ನಾಮಿನೇಷನ್ ಹಂತ ತಲುಪಲು ವಿಫಲವಾಗಿತ್ತು. ಆದರೆ ಇದೀಗ ಸದ್ದೇ ಇಲ್ಲದೆ ಭಾರತೀಯ ಸಿನಿಮಾ ಒಂದು ಆಸ್ಕರ್​​ನಷ್ಟೆ ಪ್ರಮುಖವಾದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಿನಿಮಾಕ್ಕೆ ಸಿನಿಮಾದ ತಾಂತ್ರಿಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಮಣಿಪುರಿ ಸಿನಿಮಾ ‘ಬೂಂಗ್’ ಸಿನಿಮಾ ಪ್ರತಿಷ್ಠಿತ ಭಾಫ್ಟಾ ಪ್ರಶಸ್ತಿ ಗೆದ್ದುಕೊಂಡಿದೆ. ಇತ್ತೀಚೆಗೆ…

Read More

Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ, ನೇರಪ್ರಸಾರ – Kannada News | AKSSA and BJP Protest in Dharwad: Students Demand Filling of Vacant govt Posts, Live Updates

ಧಾರವಾಡ, ಫೆಬ್ರವರಿ 24: ಧಾರವಾಡದಲ್ಲಿ ಖಾಲಿ ಇರುವ 2.75 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಪ್ರತಿಪಕ್ಷ ಬಿಜೆಪಿ ಸಹ ಪ್ರತಿಭಟನೆ ನಡೆಸುತ್ತಿದೆ. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಪಕ್ಷವು ಒತ್ತಾಯಿಸಲಾಗಿದೆ. ಪ್ರತಿಭಟನೆಯು ಧಾರವಾಡದ ಶ್ರೀನಗರ ವೃತ್ತದಿಂದ ಆರಂಭವಾಗಿ ಮಿಚಿಗನ್ ಕಾಂಪೌಂಡ್‌ನಲ್ಲಿ ಸಭೆಯೊಂದಿಗೆ ಅಂತ್ಯಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್,…

Read More

ವಿಜಯ್ ಪಾಲಕರು ರಶ್ಮಿಕಾ ಮಂದಣ್ಣಗೆ ಹಾಕಿದ ಷರತ್ತು ಏನು? – Kannada News | Vijay Deverakonda and Rashmika Mandanna Wedding: Parents Reveal Their Only Condition

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹ ಸಮೀಪಿಸುತ್ತಿದೆ. ಅವರ ವಿವಾಹವು ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಈ ಅದ್ದೂರಿ ವಿವಾಹದಲ್ಲಿ ಕುಟುಂಬ ಸದಸ್ಯರು, ಆಪ್ತರು ಮತ್ತು ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ ಎಂದು ತೋರುತ್ತದೆ. ಆದಾಗ್ಯೂ, ಮಾರ್ಚ್ 04 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ವರದಿಯಾಗಿದೆ. ಈಗ ವಿಜಯ್ ಪಾಲಕರು ರಶ್ಮಿಕಾಗೆ ಹಾಕಿದ ಷರತ್ತಿನ ಬಗ್ಗೆ ಚರ್ಚೆ ನಡೆದಿದೆ. ಇಲ್ಲಿಯವರೆಗೆ ತಮ್ಮ ಪ್ರೀತಿ ಮತ್ತು ಮದುವೆಯ ಬಗ್ಗೆ ಮೌನವಾಗಿದ್ದ ವಿಜಯ್…

Read More

ದೆಹಲಿಯ ಉತ್ತಮ್ ನಗರದಲ್ಲಿ ಮೆಟ್ರೋ ಮುಂದೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ, ಐದು ದಿನಗಳಲ್ಲಿ ಎರಡನೇ ಘಟನೆ – Kannada News | Second Metro Track Tragedy in Five Days Reported at Uttam Nagar

ನವದೆಹಲಿ, ಫೆಬ್ರವರಿ 24: ದೆಹಲಿಯ ಉತ್ತಮ್ ನಗರ ಪೂರ್ವ ಮೆಟ್ರೋ(Metro) ನಿಲ್ದಾಣದಲ್ಲಿ ಹಳಿ ಮೇಲೆ ಹಾರಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. 45 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಜಸ್ಥಾನದ ಕರೋಲಿ ಜಿಲ್ಲೆಯ ಹಂಡು ರಾಮ್ ಅವರ ಪುತ್ರ ಮಹಾರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಅವರ ಶವವನ್ನು ಹಳಿಯಿಂದ ಹೊರತೆಗೆದು ಡಿಡಿಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಹಾರಾಜ್ ಸಿಂಗ್ ಹಲವಾರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆಗೆ ಕೇವಲ ಒಂದು ದಿನ…

Read More