Headlines

nagaraj11081993

ದಿನ ಭವಿಷ್ಯ: ಈ ರಾಶಿಯವರಿಂದ ಇಂದು ಅಧಿಕಾರವನ್ನು ಕಸಿದುಕೊಳ್ಳುವ ಸಂಭವ – Kannada News | Horoscope May 08 Thursday 2026; Dina Rashi Bhavishya Today, Checkout the details here

ಮೇಷ ರಾಶಿ: ವೃತ್ತಿ ಜೀವನದಲ್ಲಿ ಹೊಸ ರೀತಿಯ ಒತ್ತಡ ಎದುರಿಸಬೇಕಾಗಬಹುದು. ಆರ್ಥಿಕ ನಿರ್ವಹಣೆಯಲ್ಲಿ ಸಮರ್ಪಕ ವ್ಯವಸ್ಥೆ ಅಗತ್ಯ. ಹೊಸ ಸಂಬಂಧಗಳನ್ನೊಳಗೊಂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಯಾವುದೇ ದಾಖಲೆಗಳಿಲ್ಲದೇ ವ್ಯವಹಾರ ಬೇಡ. ಅನಂತರ ಅದೇ ತಿರುಗು ಬಾಣವಾಗಿ ಚುಚ್ಚುವುದು. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ವೃಷಭ ರಾಶಿ: ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಆರ್ಥಿಕ ಸ್ಥಿರತೆ ಹೆಚ್ಚಿಸಲು ಹೊಸ ಮಾರ್ಗಗಳ ಅನ್ವೇಷಣೆ ಅಗತ್ಯ. ವೃತ್ತಿಯಲ್ಲಿ ಹೊಸ…

Read More

ಆಪರೇಷನ್ ಸಿಂಧೂರ್ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್ – Kannada News | Union Minister Rajnath Singh Releases Documentary On Operation Sindoor

ಜೈಪುರ, ಮೇ 7: ಆಪರೇಷನ್ ಸಿಂಧೂರ್‌ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ರಾಜನಾಥ್ ಸಿಂಗ್ (Rajnath Singh) ಇಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜೈಪುರದಲ್ಲಿ ನಡೆದ ಜಂಟಿ ಕಮಾಂಡರ್‌ಗಳ ಸಮ್ಮೇಳನದ ಸಂದರ್ಭದಲ್ಲಿ 28 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ. 28 ನಿಮಿಷಗಳ ಈ ಸಾಕ್ಷ್ಯಚಿತ್ರವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತದೆ. ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಭಾರತೀಯ…

Read More

ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಚರಣೆ: 1.44 ಕೋಟಿ ರೂ ಮೌಲ್ಯದ 785 ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ? – Kannada News | Kalaburagi Police Recover 785 Lost Phones Worth 1.44 Crore Using CEIR Portal

ಕಲಬುರಗಿ, ಮೇ 07: ನಗರ ಪೊಲೀಸರು ಕಳೆದ ಎರಡು ತಿಂಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯ ಮೂಲಕ ಸಿಇಐಆರ್ (CEIR) ಪೋರ್ಟಲ್ ಬಳಸಿ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳೆದುಹೋಗಿದ್ದ ದಾಖಲೆ ಮಟ್ಟದ ಬರೋಬ್ಬರಿ 1,44,90,000 ರೂ ಮೌಲ್ಯದ 785 ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ವಿವಿಧ ಕಂಪನಿಗಳ ಈ ಕೋಟ್ಯಂತರ ರೂ ಮೌಲ್ಯದ ಮೊಬೈಲ್ ಫೋನ್‌ಗಳನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ, ಮಾಲೀಕರಿಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದ ಮೊಬೈಲ್ ಫೋನ್‌ಗಳನ್ನು ಮರಳಿ…

Read More

LSG vs RCB: ಆರ್​ಸಿಬಿ ವಿರುದ್ಧ ಅಬ್ಬರಿಸಿ ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್ – Kannada News | Mitchell Marsh’s Explosive IPL 2026 Century: LSG’s Fastest Ever vs RCB!

ಐಪಿಎಲ್ 2026 ರ 50 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಸ್ಫೋಟಕ ಶತಕ ಸಿಡಿಸಿದರು. ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮಾರ್ಷ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಲಕ್ನೋ ತಂಡದ ಪರ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಇದು ಐಪಿಎಲ್‌ನಲ್ಲಿ ಮಾರ್ಷ್​ ಅವರ ಎರಡನೇ ಶತಕವಾಗಿದ್ದರೆ, ಈ ಆವೃತ್ತಿಯಲ್ಲಿ ಮೊದಲ ಶತಕವಾಗಿದೆ….

Read More

‘ಎರಡು ಚಿತ್ರದ ಜಗದೇಕವೀರ’ ಚೇತನ್​​ಗೆ ಜಗ್ಗೇಶ್ ಮಾತಿನ ಚಾಟಿ – Kannada News | Actor Jaggesh criticize Chetan Ahimsa’s statement about Dr Rajkumar’s memorial

ನಟ ಚೇತನ್ ಅಹಿಂಸ, ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಆಡಿರುವ ಅಸೂಕ್ಷ್ಮ ಮಾತುಗಳು ತೀವ್ರ ಟೀಕೆಗೆ, ನಿಂದನೆಗೆ ಗುರಿ ಆಗಿವೆ. ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಸಹ ನಡೆಸಿದ್ದಾರೆ. ಹಲವು ವಿಚಾರವಾದಿಗಳು, ಸಾಹಿತಿಗಳು ಸಹ ಚಿತ್ರರಂಗ ಹಾಗೂ ಕರ್ನಾಟಕಕ್ಕೆ ಅಣ್ಣಾವ್ರ ಕೊಡುಗೆಯನ್ನು ವಿವರಿಸಿದ್ದಾರೆ. ಇದೀಗ ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗಕ್ಕೆ ಅಣ್ಣಾವ್ರ ಮಹತ್ವದ ಕೊಡುಗೆಯನ್ನು ವಿವರಿಸಿರುವ ಜೊತೆಗೆ ಚೇತನ್ ಅಹಿಂಸ ಹೇಳಿಕೆಯನ್ನು ಟೀಕೆ ಮಾಡಿದ್ದಾರೆ. ‘ಹೋದವರೆಲ್ಲಾ ಒಳ್ಳೆಯವರು…

Read More

ಫೋನ್‌ ಕಳೆದುಕೊಂಡು ಅಲೆದಾಡಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ? ಅನುಭವದ ಮಾತು ಕೇಳಿ – Kannada News | What you should do if you lose your phone, here Is Kalaburagi victim suggestions

ಕಲಬುರಗಿ, (ಮೇ 07): ಕಲಬುರಗಿ ನಗರ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ದಾಖಲೆ ಮಟ್ಟದ ಬರೋಬ್ಬರಿ 1,44,90,000 ರೂಪಾಯಿ ಮೌಲ್ಯದ ಮೊಬೈಲ್ ಪೋನ್ ಗಳನ್ನ ಪತ್ತೆ ಹಚ್ಚಿದ್ದಾರೆ. ಕಲಬುರಗಿ ನಗರ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 785 ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಕೇವಲ ಎರಡು ತಿಂಗಳಲ್ಲಿ ಪತ್ತೆ ಮಾಡಿದ್ದು, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ವಾರಸುದಾರರಿಗೆ ಮರಳಿ ಮೊಬೈಲ್ ಹಸ್ತಾಂತರಿಸಿದರು. ಇನ್ನು ವ್ಯಕ್ತಿಯೋರ್ವ ಮೊಬೈಲ್ ಸಿಕ್ಕ ಖುಷಿಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದು,…

Read More

ಬಿಡಿಎ ಆಸ್ತಿ ಮೇಲೆ ಬ್ರೋಕರ್ ಕಣ್ಣು: ನೌಕರನೆಂದು ನಂಬಿಸಿ ಸೈಟ್ ಕಬಳಿಸಿದ್ದ ಕಿಂಗ್‌ಪಿನ್ ಬಂಧನ – Kannada News | Fake BDA Employee Arrested in Bengaluru Property Grabbing Case

ಬೆಂಗಳೂರು, ಮೇ 07: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸುತ್ತಿದ್ದ ದೊಡ್ಡ ಜಾಲವೊಂದನ್ನು ಬಿಡಿಎ ಜಾಗೃತ ದಳ ಪತ್ತೆಹಚ್ಚಿದೆ. ಪ್ರಾಧಿಕಾರದ ನೌಕರನೆಂದು ಸುಳ್ಳು ಹೇಳಿ ಸೈಟ್ (Land Scam) ಪಡೆದಿದ್ದ ಬ್ರೋಕರ್ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರೆ, ನೂರಾರು ಕೋಟಿ ರೂ ಮೌಲ್ಯದ ಜಾಗಕ್ಕೆ ಸ್ಕೆಚ್ ಹಾಕಿದ್ದ ಲಕ್ಷ್ಮೀನಾರಾಯಣ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಮುಖ್ಯಾಂಶಗಳು ಗ್ರೂಪ್-ಡಿ ನೌಕರನ ಸೋಗಿನಲ್ಲಿ ವಂಚನೆ ಅಧಿಕಾರಿಗಳು ಶಾಮೀಲು ಶಂಕೆ 160 ಕೋಟಿ ಮೌಲ್ಯದ ಭೂಮಿಗೆ ಸ್ಕೆಚ್…

Read More

ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜೀ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ತೀರ್ಮಾನ – Kannada News | Karnataka cabinet decides Going Court Against Union Governmnet for Changed MGNREGA as VB G RAM G

ಬೆಂಗಳೂರು, (ಮೇ 07): ಮನ್​ರೇಗಾ (MGNREGA) ಎನ್ನುವುದನ್ನು ವಿಬಿ ಜಿ ರಾಮ್ ಜೀ (VB-G RAM G) ಎಂದು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೊರೆ ಹೋಗಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು (ಮೇ 07) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚರ್ಚಿಸಿದ್ದು, ಮನ್​ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಈ ಬಗ್ಗೆ ಕಾನೂನು ಸಚಿವ ಎಚ್​​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ. ಮನ್​ರೇಗಾ…

Read More

ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ – Kannada News | Tamil Nadu DMK chief MK Stalin Asks DMK MLAs to Stay in Chennai Till May 10

ಚೆನ್ನೈ, ಮೇ 7: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಸದ್ಯಕ್ಕೆ ಚೆಂಡು ಟಿವಿಕೆ ಮುಖ್ಯಸ್ಥ ವಿಜಯ್ (Vijay) ಅವರ ಮೈದಾನದಲ್ಲಿದ್ದರೂ ಯಾರು ಬಹುಮತ ಸಾಬೀತುಪಡಿಸುತ್ತಾರೋ ಅವರಿಗೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಹೀಗಾಗಿ, ಡಿಎಂಕೆ ಮತ್ತು ಎಐಎಡಿಎಂಕೆ ಕೂಡ ತಮ್ಮ ಪಕ್ಷದ ಶಾಸಕರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಡಿಎಂಕೆ ವಿಧಾನಸಭಾ ಶಾಸಕರು ಇಂದು ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ (MK Stalin) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಎಂ.ಕೆ…

Read More

ಎಲುಬುಗಳಲ್ಲಿ ನೋವು ಕಂಡುಬರುವುದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ? ಇದನ್ನು ತಡೆಗಟ್ಟಲು ಸಿಂಪಲ್ ಟ್ರಿಕ್ ಇಲ್ಲಿದೆ – Kannada News | Vitamin Deficiencies That Cause Bone Pain: What You Need to Know

ಇತ್ತೀಚಿನ ದಿನಗಳಲ್ಲಿ ಎಲುಬು ನೋವು ಮತ್ತು ದೇಹದ ದುರ್ಬಲತೆ ಸಮಸ್ಯೆಗಳು ಅನೇಕರಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಹಲವರು ಇದನ್ನು ಸಾಮಾನ್ಯ ದಣಿವು ಅಥವಾ ವಯಸ್ಸಿನ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ದೇಹದಲ್ಲಿ ಅಗತ್ಯ ವಿಟಮಿನ್ (Vitamin Deficiencies) ಮತ್ತು ಖನಿಜಗಳ ಕೊರತೆ ಕೂಡ ಎಲುಬು ನೋವಿಗೆ ಪ್ರಮುಖ ಕಾರಣವಾಗಬಹುದು. ತಜ್ಞರ ಪ್ರಕಾರ, ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಎಲುಬು ನೋವಿಗೆ ಪ್ರಮುಖ ಕಾರಣವಾಗಿದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಇದು ಎಲುಬುಗಳನ್ನು…

Read More