All posts by nagaraj11081993

ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ: ಎಳನೀರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – Kannada News | Bengaluru Heat: Tender Coconut Demand Soars, Prices Spike Early

ಬೆಂಗಳೂರು, ಫೆಬ್ರವರಿ 23: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ಪ್ರಮಾಣ (summer heat) ಹೆಚ್ಚಾಗಿದ್ದು, ಜನರು ಕಲ್ಲಂಗಡಿ ಹಾಗೂ ಎಳನೀರು (Tender coconut) ಮೊರೆ‌ ಹೋಗುತ್ತಿದ್ದಾರೆ. ಕಲ್ಲಂಗಡಿ ಹಾಗೂ ಎಳನೀರಿಗೆ ಸದ್ಯ ಭಾರೀ ಡಿಮ್ಯಾಂಡ್​ ಇದೆ. ಆದರೆ ಜನರು ಖರೀದಿ ಮಾಡುವುದಕ್ಕೆ ಹಿಂದುಮುಂದು ನೋಡುವಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾದರೆ ಕಲ್ಲಂಗಡಿ, ಎಳನೀರು ವ್ಯಾಪಾರ ಹೇಗಿದೆ ತಿಳಿಯಿರಿ.

ಈ ಬಾರಿಯ ಬಿಸಿಲಿನ ಪ್ರಮಾಣ ಜೋರಾಗಿಯೇ ಇದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ‌ ಆರಂಭವಾಗುವ ಬಿಸಿಲಿನ ಝಳ ಈ ಬಾರಿ ಫೆಬ್ರವರಿಯಲ್ಲೇ ಶುರುವಾಗಿದ್ದು, ಪ್ರಮುಖವಾಗಿ ಬೆಂಗಳೂರಿನಲ್ಲಿ ಸುಡುಬಿಸಿಲಿಗೆ ಜನರು ರೋಸಿಹೋಗಿದ್ದಾರೆ.

ಇದನ್ನೂ ಓದಿ: ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?

ಈಗಾಗಲೇ ಬೆಂಗಳೂರಿನಲ್ಲಿ 32 ರಿಂದ 33 ಡಿಗ್ರಿವರೆಗೂ ಉಷ್ಣಾಂಶ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದಲ್ಲಿ ಸೂರ್ಯ ನೆತ್ತಿಯ ಮೇಲೆ ಕುಳಿತಿದ್ದಾನೆ. ಸದ್ಯ ಬಿಸಿಲಿನ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಜನರು ಕಲ್ಲಂಗಡಿ ಹಾಗೂ ಎಳನೀರಿನ ಮೊರೆ ಹೋಗಿದ್ದಾರೆ. ಸಾಮಾನ್ಯವಾಗಿ 40 ರಿಂದ 50 ರೂ.ಗೆ ಸಿಗುತ್ತಿದ್ದ ಎಳನೀರು ಇದೀಗ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಜೊತೆಗೆ ಕೆ.ಜಿಗೆ 20 ರೂಪಾಯಿಗೆ ಕಲ್ಲಂಗಡಿ ಹಣ್ಣು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇಷ್ಟೇ ಅಲ್ಲದೇ ಬೇಸಿಗೆ ಆರಂಭಕ್ಕೂ ಮುನ್ನವೇ ಬೆಲೆ ದುಪ್ಪಟ್ಟಾಗಿರುವುದರಿಂದ ಮುಂದೆ ಇನ್ನಷ್ಟು ದರ ಹೆಚ್ಚಳವಾಹಬಹುದೆಂಬ ಆತಂಕ ಗ್ರಾಹಕರನ್ನು ಕಾಡಲಾರಂಭಿಸಿದೆ.

ಇನ್ನು ಹವಾಮಾನ ವೈಪರೀತ್ಯದಿಂದ ಅನೇಕ ಭಾಗಗಳಲ್ಲಿ ರೋಗಳಿಂದ ಎಳನೀರು ಇಳುವರಿ ಕಡಿಮೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಸಿಗುವ ಹೆಚ್ಚಿನ ಎಳನೀರು ಮಂಡ್ಯ, ಚಾಮರಾಜನಗರ, ಮದ್ದೂರು, ಮಳವಳ್ಳಿ, ರಾಮನಗರ, ಹಾಸನ ಮತ್ತು ತುಮಕೂರಿನಿಂದ ಬರುತ್ತದೆ. ಸೀಸನ್ ಆಗಿರುವುದರಿಂದ 50 ರಿಂದ 55 ರೂ.ಗೆ ಸಿಕ್ಕರೆ ಸ್ವಾಭಾವಿಕವಾಗಿ ದರ ಏರಿಕೆಯಾಗುತ್ತದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಮಕ್ಕಳು, ಪೌಷ್ಟಿಕಾಂಶ ಕೊರತೆಯಿಂದ ಬಳಲುವವರು ಅತ್ಯಗತ್ಯ ಎಳನೀರನ್ನು ಬಳಸುವುದರಿಂದ ಎಳೆನೀರಿನ ದರ ದುಪಟ್ಟಾಗಿದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ

ಒಟ್ಟಿನಲ್ಲಿ ಬಿಸಿಲಿನ ಝಳ ಜೋರಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಎಳೆನೀರಿನ ಬೆಲೆ ದುಪಟ್ಟಾಗಿರುವುದು ಜನಸಾಮಾನ್ಯರು ಕುಡಿಯಲು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಣಜಿ ಟ್ರೋಫಿ ಫೈನಲ್: ಕರ್ನಾಟಕದ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂತ್ ತಿಳಿಸಿದ ವಿನಯ್ ಕುಮಾರ್ – Kannada News | Karnataka’s batting depth gives it edge over Jammu And Kashmir in Ranji Trophy final: Vinay Kumar

ಹುಬ್ಬಳ್ಳಿ, (ಫೆಬ್ರವರಿ 23): ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯ ನಡೆಯುತ್ತಿದೆ. ಕರ್ನಾಟಕ (Karnataka Team) ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವಿನ ಫೈನಲ್ ಪಂದ್ಯ ನಾಳೆ (ಫೆಬ್ರವರಿ 24) ಆರಂಭವಾಗಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆವಲ ಹುಬ್ಬಳ್ಳಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದೆ. ಇನ್ನೊಂದೆಡೆ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಕರ್ನಾಟಕದ ಸ್ಟ್ರೆಂತ್ ಹೇಗಿದೆ?  ಬ್ಯಾಟಿಂಗ್ ಮತ್ತು ಬೌಲಿಂಗ್ ಹೇಗಿದೆ  ಎನ್ನುವುದನ್ನು ಮಾಜಿ ಆಟಗಾರ ಆರ್ ವಿನಯ್ ಕುಮಾರ್ ಅವರು ವಿವರಿಸಿದ್ದಾರೆ ಕೇಳಿ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್: ಉತ್ತರ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ, ಟಿಕೆಟ್ ದರ ಎಷ್ಟು?

Source link

ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ರಫೀಕುಲ್ ಇಸ್ಲಾಂ ಪ್ರತಿಕ್ರಿಯೆ – Kannada News | AIUDF leader Rafiqul Islam says Congress needs to make a sacrifice to wipe out BJP

ಗುವಾಹಟಿ, ಫೆಬ್ರವರಿ 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಇಂದು ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗೆ ಇಳಿಯಬೇಕೆಂದು ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ AIUDF ನಾಯಕ ರಫೀಕುಲ್ ಇಸ್ಲಾಂ, “ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗಳನ್ನು ರಾಹುಲ್ ಗಾಂಧಿ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ. ಅವರು ತುಂಬಾ ಪ್ರಬುದ್ಧರಾಗಿದ್ದಾರೆ. ರಾಹುಲ್ ಗಾಂಧಿ ಇಂಡಿಯ ಬ್ಲಾಕ್‌ನ ಅಧ್ಯಕ್ಷರಾಗಿದ್ದರೆ ಮತ್ತು ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದರೆ ಇತರೆ ಮಿತ್ರಪಕ್ಷಗಳು ಅವರನ್ನು ಬೆಂಬಲಿಸುತ್ತಾರೆಯೇ? ಈಗ ವರ್ಷಗಳೇ ಕಳೆದಿವೆ. ನಿಧಾನವಾಗಿ, ಇಂಡಿಯ ಬ್ಲಾಕ್ ಮೂಲೆಗುಂಪಾಗಿ ಬಿಜೆಪಿ ಆಡಳಿತವನ್ನು ಮುಂದುವರಿಸುತ್ತದೆ. ಆದ್ದರಿಂದ, ಮಣಿಶಂಕರ್ ಅಯ್ಯರ್ ಹೇಳಿದ್ದು ಸರಿ. ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಇತರರನ್ನು ಮುಂದಕ್ಕೆ ಬಿಟ್ಟು ಬಿಜೆಪಿಯನ್ನು ಅಳಿಸಿ ಹಾಕಬೇಕು. ಇದಕ್ಕೆ ಕಾಂಗ್ರೆಸ್ ತ್ಯಾಗ ಮಾಡಬೇಕಾಗಿದೆ. ರಾಹುಲ್ ಗಾಂಧಿಯನ್ನು ಅವರನ್ನು ಬೆಂಬಲಿಸಲು ಯಾರೂ ಇರುವುದಿಲ್ಲ. ಮಮತಾ ದೀದಿ, ಕೇಜ್ರಿವಾಲ್, ಅಖಿಲೇಶ್, ಸ್ಟಾಲಿನ್ ಇರುವುದಿಲ್ಲ. ಕೇವಲ 100 ಸ್ಥಾನಗಳಿಂದ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ. ಮಣಿಶಂಕರ್ ಅಯ್ಯರ್ ಹೇಳಿದ್ದು ಸರಿ ಎಂದು ನಾನು ಭಾವಿಸುತ್ತೇನೆ. ಅಖಿಲೇಶ್ ಯಾದವ್, ಕೇಜ್ರಿವಾಲ್, ಸ್ಟಾಲಿನ್ ಮತ್ತು ತೇಜಸ್ವಿ ಯಾದವ್‌ರಂತಹ ಜನರಿಗೆ ಮೈತ್ರಿಕೂಟದ ನಾಯಕನ ಸ್ಥಾನ ನೀಡಬೇಕು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುರುವೈಭವೋತ್ಸವ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ರಾಘವೇಂದ್ರ ರಾಜ್​ಕುಮಾರ್ – Kannada News | Raghavendra Rajkumar awarded honorary doctorate by Yoga Samskrutham University in Mantralaya

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಇದೇ ಉತ್ಸವದ ವೇದಿಕೆಯಲ್ಲಿ ಹಲವು ಗಣ್ಯರಿಗೆ ಸನ್ಮಾನ ಮಾಡಲಾಗಿದೆ. ನಟ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ. ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವೇಳೆ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ರಾಯರ ಅನುಗೃಹ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಯಿತು. ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್​​ಕುಮಾರ್ ಅವರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.

ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ರಾಘವೇಂದ್ರ ರಾಜ್​ಕುಮಾರ್ ಅವರು ಮಾತನಾಡಿದರು. ಡಾಕ್ಟರೇಟ್ ಪದವಿ ಸಿಕ್ಕಿದ್ದು ಪುಣ್ಯ. ಅದನ್ನ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುವೆ. ನಾನು ಹುಟ್ಟಿದಾಗ ತಂದೆ ಅವರು ಮಂತ್ರಾಲಯ ಸಿನಿಮಾ ಮಾಡುತ್ತಿದ್ದರು. ಆಗ ನನಗೆ ರಾಘವೇಂದ್ರ ಅಂತ ನನಗೆ ಹೆಸರು ಇಟ್ಟಿದ್ರು. ಅದು ರಾಘವೇಂದ್ರ ರಾಜ್​ಕುಮಾರ್ ಆಗಿ ಬೆಳೆದು ಬಂದಿದೆ’ ಎಂದು ಅವರು ಹೇಳಿದರು.

‘ನನಗೆ ಈಗ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ. ಇದರಿಂದ ಜವಾಬ್ದಾರಿ, ಭಯ ಜಾಸ್ತಿ ಆಗ್ತಿದೆ. ಏನು ಸಾಧನೆ ಮಾಡದೇ ಇರುವವನಿಗೆ ಯಾಕೆ ಕೊಟ್ಟರು ಎನಿಸುತ್ತದೆ. ದೇವರ ಆಶೀರ್ವಾದದಿಂದ ಬಂದಿದೆ. ಇನ್ಮೇಲೆ ನಾನು ಸಮಾಜ ಸೇವೆ ಮಾಡಿಕೊಂಡು ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ. ತಂದೆ-ತಾಯಿ ಆಶೀರ್ವಾದ ಮಾಡಿ ಈ ಗೌರವ ಕೊಡಿಸಿರೋ ಥರ ಆಗಿದೆ. ಇದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತಿದ್ದೇನೆ’ ಎಂದು ರಾಘವೇಂದ್ರ ರಾಜ್​ಕುಮಾರ್ ಅವರು ಹೇಳಿದರು.

ಸೆಲ್ಫಿಗಾಗಿ ಫ್ಯಾನ್ಸ್ ತಳ್ಳಾಟ: ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವ ರಾಜ್​ಕುಮಾರ್ ಮತ್ತು ವಿನಯ್ ರಾಜ್​ಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಕಾರು ಹತ್ತಲು ಬಿಡದೇ ಸೆಲ್ಫಿಗಾಗಿ ನೂಕಾಟ, ತಳ್ಳಾಟ ನಡೆಯಿತು. ಕೊನೆಗೂ ಅಭಿಮಾನಿಗಳಿಗೆ ಸೆಲ್ಫಿ ನೀಡಿ ಅವರಿಬ್ಬರು ತೆರಳಿದರು.

ಇದನ್ನೂ ಓದಿ: ಎದೆಯೊಳಗಿದ್ದ ಅಪ್ಪುವನ್ನು ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡ ರಾಘವೇಂದ್ರ ರಾಜ್​ಕುಮಾರ್

ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಈಗ 60 ವರ್ಷ ವಯಸ್ಸು. 1988ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನರನ್ನು ರಂಜಿಸಿದ್ದಾರೆ. ನಿರ್ಮಾಪಕನಾಗಿ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2004ರ ಬಳಿಕ ಸತತ 15 ವರ್ಷಗಳ ಕಾಲ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಸೆಂಬರ್ ತ್ರೈಮಾಸಿಕ ವರದಿ ಬಿಡುಗಡೆ ನಂತರ ಪತಂಜಲಿ ಷೇರುಗಳಿಗೆ ಬೇಡಿಕೆ; ಹೂಡಿಕೆದಾರರಿಗೆ ಭರ್ಜರಿ ಲಾಭ – Kannada News | Patajali Foods investors gain a lot after company’s December end quarterly report release

ಪತಂಜಲಿ ಫುಡ್ಸ್ ಲಿಮಿಟೆಡ್‌ನ (Patanjali Foods) ಮೂರನೇ ತ್ರೈಮಾಸಿಕದ ಫಲಿತಾಂಶ ಪ್ರಕಟಗೊಂಡ ಬಳಿಕ ಅದರ ಷೇರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇವತ್ತು ಸೋಮವಾರ ಅದರ ಷೇರುಬೆಲೆ 3 ರೂ ಕಡಿಮೆಗೊಂಡು 531 ರೂಗೆ ಇಳಿದಿದೆ. ಆದರೆ, ಅದಕ್ಕೂ ಹಿಂದಿನ ಏಳು ಟ್ರೇಡಿಂಗ್ ದಿನಗಳಲ್ಲಿ ಷೇರುಬೆಲೆಯಲ್ಲಿ ಶೇ. 2.50ರಷ್ಟು ಏರಿಕೆ ಇತ್ತು. ಇದರಿಂದಾಗಿ ಅದರ ಮಾರುಕಟ್ಟೆ ಬಂಡವಾಳ 58,000 ಕೋಟಿ ರೂ ಗಡಿ ದಾಟಿತ್ತು. ಹೂಡಿಕೆದಾರರಿಗೆ 1,500 ಕೋಟಿ ರೂ ಲಾಭ ತಂದುಕೊಟ್ಟಿದೆ. ಕಂಪನಿಯ ತ್ರೈಮಾಸಿಕ ವರದಿ (Quarterly results) ಬಹಳ ಗಮನ ಸೆಳೆದಿದೆ. ಅದರ ಲಾಭವು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 60ರಷ್ಟು ಹೆಚ್ಚಿದೆ. ಅದರ ಆದಾಯವೂ ಕೂಡ ಹೆಚ್ಚಿದೆ.

ಕಂಪನಿ ಷೇರುಗಳಲ್ಲಿ ಉತ್ತಮ ಏರಿಕೆ

ಪತಂಜಲಿ ಫುಡ್ಸ್ ಸಂಸ್ಥೆಯ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಫೆಬ್ರವರಿ 11 ರಂದು ಪ್ರಕಟಿಸಲಾಯಿತು. ಅಂದಿನಿಂದ, ಕಂಪನಿಯ ಷೇರುಗಳು 2.50% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಫೆಬ್ರವರಿ 11 ರಂದು ಷೇರು ಮಾರುಕಟ್ಟೆ ಮುಕ್ತಾಯಗೊಂಡಾಗ, ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 522 ರೂ ಇತ್ತು. ಫೆಬ್ರವರಿ 20 ರಂದು, ಕಂಪನಿಯ ಷೇರುಗಳು 535.55 ರೂ.ಗಳಿಗೆ ಮುಕ್ತಾಯಗೊಂಡವು. ಅಂದರೆ, ಕಂಪನಿಯ ಷೇರುಗಳು ಅಂದಿನಿಂದ 13.55 ರೂ. ಅಥವಾ 2.59% ರಷ್ಟು ಏರಿಕೆ ಕಂಡಿವೆ. ಇವತ್ತು 3 ರೂ ಕಡಿಮೆ ಆಗಿರುವುದನ್ನು ಪರಿಗಣಿಸಿದರೆ, ಫೆಬ್ರುವರಿ 13ರಿಂದ ಈಚೆಗೆ ಇದರ ಷೇರು ಬೆಲೆ 10.55 ರೂನಷ್ಟು ಏರಿಕೆ ಆಗಿದೆ. ಇದೂ ಕೂಡ ಗಮನಾರ್ಹ ಅಂಶವೆನಿಸುತ್ತದೆ.

ಪತಂಜಲಿ ಕಂಪನಿಯ ಮೌಲ್ಯ 1500 ಕೋಟಿ ರೂ ಹೆಚ್ಚಳ

ಪತಂಜಲಿ ಷೇರುಗಳ ಈ ಏರಿಕೆಯು ಅದರ ಮೌಲ್ಯದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು ₹1,500 ಕೋಟಿಗಳಷ್ಟು ಹೆಚ್ಚಾಗಿದೆ ಎಂದು ಡೇಟಾ ತೋರಿಸುತ್ತದೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಫೆಬ್ರವರಿ 11 ರಂದು ಷೇರು ಮಾರುಕಟ್ಟೆ ಮುಕ್ತಾಯಗೊಂಡಾಗ, ಕಂಪನಿಯ ಮಾರುಕಟ್ಟೆ ಬಂಡವಾಳ ₹56,789.32 ಕೋಟಿಗಳಷ್ಟಿತ್ತು. ಫೆಬ್ರುವರಿ 20, ಶುಕ್ರವಾರ ಅದು ₹58,263.45 ಕೋಟಿಗಳಿಗೆ ಏರಿದೆ. ಇದರ ಮಾರುಕಟ್ಟೆ ಬಂಡವಾಳದಲ್ಲಿ ಈ ಏಳು ದಿನಗಳಲ್ಲಿ ಏರಿಕೆ ಆಗಿದ್ದು 1,474.13 ಕೋಟಿ ರೂನಷ್ಟು. ಇವತ್ತು ಸೋಮವಾರ ಪತಂಜಲಿ ಫುಡ್ಸ್ ಮಾರುಕಟ್ಟೆ ಬಂಡವಾಳ 57,654 ಕೋಟಿ ರೂ ಮುಟ್ಟಿದೆ.

ಇದನ್ನೂ ಓದಿ: ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ

ಪತಂಜಲಿ 60% ಲಾಭ ಹೆಚ್ಚಳ

ಅಡುಗೆ ಎಣ್ಣೆ ಸೇರಿದಂತೆ ಹಲವು ಎಫ್​ಎಂಸಿಜಿ ಉತ್ಪನ್ನಗಳನ್ನು ಮಾರುವ ಪತಂಜಲಿ ಫುಡ್ಸ್ ಸಂಸ್ಥೆ ಡಿಸೆಂಬರ್ ಕ್ವಾರ್ಟರ್​ನಲ್ಲಿ ಮಾಡಿರುವ ನಿವ್ವಳ ಲಾಭ 593.33 ಕೋಟಿ ರೂ ಆಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 60ರಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷದ ಡಿಸೆಂಬರ್ ಕ್ವಾರ್ಟರ್​ನಲ್ಲಿ ಅದಕ್ಕೆ ಸಿಕ್ಕ ನಿವ್ವಳ ಲಾಭ ₹370.88 ಕೋಟಿ ಇತ್ತು. ಕಂಪನಿ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ಸ್ ಪ್ರಕಾರ, ತ್ರೈಮಾಸಿಕದ ಒಟ್ಟು ಆದಾಯ ₹10,541.12 ಕೋಟಿಗಳಿಗೆ ಏರಿದೆ. ಇದು ಹಿಂದಿನ ವರ್ಷ ₹9,020.38 ಕೋಟಿಗಳಷ್ಟಿತ್ತು. ಅಡುಗೆ ಎಣ್ಣೆಯ ಜೊತೆಗೆ, ಪತಂಜಲಿ ಫುಡ್ಸ್ ಇತರ ಆಹಾರ ಮತ್ತು ಗ್ರಾಹಕ ಸರಕುಗಳನ್ನು ಸಹ ಮಾರಾಟ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಫೆ. 26ರಂದು ಭಾರತಕ್ಕೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿ – Kannada News | Canada PM Mark Carney to visit India on February 26 on Indo Pacific tour

ನವದೆಹಲಿ, ಫೆಬ್ರವರಿ 23: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಫೆಬ್ರವರಿ 26ರಿಂದ ಮಾರ್ಚ್ 7ರವರೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ಗೆ ಪ್ರಯಾಣಿಸಲಿದ್ದಾರೆ. ಅವರ ಭೇಟಿಯ ಸಮಯದಲ್ಲಿ ವ್ಯಾಪಾರ, ಇಂಧನ, ತಂತ್ರಜ್ಞಾನ ಮತ್ತು ರಕ್ಷಣೆಯ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಕೆನಡಾ ಸರ್ಕಾರದ ಹೇಳಿಕೆ ತಿಳಿಸಿದೆ. “ಪ್ರಧಾನಿ ಕಾರ್ನಿ ಮೊದಲು ಮುಂಬೈಗೆ ಭೇಟಿ ನೀಡಲಿದ್ದಾರೆ, ನಂತರ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (PM Modi) ಭೇಟಿ ಮಾಡಲಿದ್ದಾರೆ.

ಉಭಯ ನಾಯಕರು ಕೆನಡಾ-ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ಮತ್ತು ವಿಸ್ತರಿಸುವತ್ತ ಗಮನಹರಿಸಲಿದ್ದಾರೆ. ವ್ಯಾಪಾರ, ಇಂಧನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI), ಪ್ರತಿಭೆ, ಸಂಸ್ಕೃತಿ ಮತ್ತು ರಕ್ಷಣೆಯಲ್ಲಿ ಮಹತ್ವಾಕಾಂಕ್ಷೆಯ ಹೊಸ ಪಾಲುದಾರಿಕೆಗಳೊಂದಿಗೆ ಈ ಭೇಟಿಯ ಚರ್ಚೆ ನಡೆಯಲಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಜಸ್ಟಿನ್ ಟ್ರುಡೊ ನಂತರ ಅಧಿಕಾರ ವಹಿಸಿಕೊಂಡ ನಂತರ ಕಾರ್ನಿ ಅವರ ಭಾರತಕ್ಕೆ ಇದು ಮೊದಲ ಭೇಟಿಯಾಗಿದೆ. 2024ರಲ್ಲಿ ಭಾರತವು ಕೆನಡಾದ 7ನೇ ಅತಿದೊಡ್ಡ ಸರಕು ಮತ್ತು ಸೇವೆಗಳ ವ್ಯಾಪಾರ ಪಾಲುದಾರರಾಗಿದ್ದು, ಇದರಲ್ಲಿ ಕೆನಡಾ ಸರ್ಕಾರದ ಪ್ರಕಾರ 2 ದೇಶಗಳ ನಡುವಿನ ದ್ವಿಮುಖ ವ್ಯಾಪಾರವು ಸುಮಾರು 31 ಶತಕೋಟಿ ಡಾಲರ್‌ಗಳಷ್ಟಿತ್ತು. 2025ರ G20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ, ನವದೆಹಲಿ ಮತ್ತು ಒಟ್ಟಾವಾ ಮಹತ್ವಾಕಾಂಕ್ಷೆಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವಾದ CEPAಗಾಗಿ ಔಪಚಾರಿಕವಾಗಿ ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡವು. ಇದು 2030ರ ವೇಳೆಗೆ ಎರಡೂ ರಾಷ್ಟ್ರಗಳ ನಡುವಿನ ದ್ವಿಮುಖ ವ್ಯಾಪಾರವನ್ನು 70 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ: . ಪೊಲೀಸರ ತನಿಖೆ ಬಗ್ಗೆ DCP ಸ್ಫೋಟಕ ಮಾಹಿತಿ – Kannada News | DCP Talks about attempted robbery in seshadripuram canara bank at Bengaluru

ಬೆಂಗಳೂರು (ಫೆಬ್ರವರಿ.23): ಶೇಷಾದ್ರಿಪುರಂ (Seshadripuram) ಬಳಿ ಇರುವ ಕೆನರಾ ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಖದೀಮರು ಕೆನರಾ ಬ್ಯಾಂಕಿನ (Canara Bank) ಒಳಗೆ ನುಗ್ಗಿದ್ದು, ಸೈರನ್ ಮೊಳಗುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಜೀಂದ್ರ ಪ್ರತಿಕ್ರಿಯಿಸಿದ್ದು,ವಿಂಡೋ ಕಟ್ ಮಾಡಿ ಆರೋಪಿ ಎಂಟ್ರಿಯಾಗಿದ್ದಾನೆ. ಒಳಗಡೆ ಹೋಗಲು ವಿಂಡೋ ಕಟ್ ಮಾಡಿ ಒಳಗಡೆ ಹೋಗಿದ್ದಾನೆ. ಬಳಿಕ ಸಿಸಿಟಿವಿಗೆ ಸಂಬಂಧಿಸಿದ ವೈರ್ ಕಟ್ ಮಾಡಿದ್ದಾನೆ. ಆಗ ಒಳಗಡೆ ಅಲರಾಮ್ ಆಗಿದೆ. ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ಗೊತ್ತಾಗಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದೆ. ಫಿಂಗರ್ ಫ್ರಿಂಟ್ ಚೆಕ್ ಎಲ್ಲಾ ಮಾಡಿದ್ದಾರೆ. ಆರೋಪಿ ಬಂಧನಕ್ಕೆ ತಂಡ ರಚನೆ ಮಾಡಲಾಗಿದ್ದು, ಆದಷ್ಟು ಬೇಗನೆ ಅರೆಸ್ಟ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ; ಐವರು ಸಾವು, 16 ಜನರಿಗೆ ಗಾಯ – Kannada News | Double decker bus overturns in Lucknow 5 killed 16 injured on Purvanchal Expressway

ಲಕ್ನೋ, ಫೆಬ್ರವರಿ 23: ಉತ್ತರ ಪ್ರದೇಶದ ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿಯಾಗಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, 16 ಜನರು ಗಾಯಗೊಂಡಿದ್ದಾರೆ. ಗೋಸಾಯಿ ಗಂಜ್ ಬಳಿಯ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತ (Accident) ಸಂಭವಿಸಿದಾಗ ಬಸ್ ಲುಧಿಯಾನದಿಂದ ಬಿಹಾರದ ದರ್ಭಂಗಾಗೆ ಪ್ರಯಾಣಿಸುತ್ತಿತ್ತು. ಬಸ್ ಡಿಕ್ಕಿಯ ಪರಿಣಾಮದಿಂದಾಗಿ ವಾಹನವು ತೀವ್ರವಾಗಿ ಹಾನಿಗೊಳಗಾಗಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಆರಂಭಿಕ ವರದಿಯ ಪ್ರಕಾರ, ಬಸ್ ಚಾಲಕ ಬಸ್ ಚಲಾಯಿಸುವಾಗ ನಿದ್ರಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆಗಳನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌, ಒಂದೇ ಕಿಡಿಗೆ ಬಸ್ ಅವಸ್ಥೆ ನೋಡಿ

ಅಪಘಾತದ ಸಮಯದಲ್ಲಿ ಸುಮಾರು 40 ಪ್ರಯಾಣಿಕರು ಬಸ್‌ನಲ್ಲಿದ್ದರು. 5 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕೆಲವು ಪ್ರಯಾಣಿಕರು ಒಳಗೆ ಸಿಲುಕಿಕೊಂಡಿರಬಹುದು ಎಂಬ ಆತಂಕದ ನಡುವೆ ಉರುಳಿದ ಬಸ್ ಅನ್ನು ಮೇಲಕ್ಕೆತ್ತಲು ಕ್ರೇನ್ ಅನ್ನು ನಿಯೋಜಿಸಲಾಯಿತು.

ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು! ಬೆಂಗಳೂರಿನಲ್ಲೇ ಅತಿಹೆಚ್ಚು ಸಾವು!

ಜನವರಿಯಲ್ಲಿ ಜಾರ್ಖಂಡ್‌ನಲ್ಲಿ ಇದೇ ರೀತಿಯ ದುರಂತ ಸಂಭವಿಸಿತ್ತು. ಜನವರಿಯಲ್ಲಿ ಜಾರ್ಖಂಡ್‌ನ ಲತೇಹಾರ್‌ನಲ್ಲಿ ಇದೇ ರೀತಿಯ ದೊಡ್ಡ ಅಪಘಾತ ಸಂಭವಿಸಿತ್ತು. ಅಲ್ಲಿ ಮದುವೆಯ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 9 ಜನರು ಸಾವನ್ನಪ್ಪಿದ್ದರು, ಸುಮಾರು 80 ಜನರು ಗಾಯಗೊಂಡಿದ್ದರು. ಛತ್ತೀಸ್‌ಗಢದ ಬಲರಾಂಪುರದಿಂದ ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಬಸ್ ಲತೇಹಾರ್‌ನ ಮಹುವಾದಂಡ್‌ಗೆ ಹೋಗುತ್ತಿದ್ದಾಗ ಓರ್ಸಾ ಕಣಿವೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಬಿಪಿ, ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತದೆಯೇ? ನೀವು ತಿಳಿಯಬೇಕಾದ ವಿಷಯಗಳಿವು! – Kannada News | Kidney Damage: BP and Diabetes Risks

ಇತ್ತೀಚಿನ ದಿನಗಳಲ್ಲಿ, ರಕ್ತದೊತ್ತಡ (Hypertension) ಮತ್ತು ಮಧುಮೇಹದ (Diabetes) ಸಮಸ್ಯೆಗಳು ಹೆಚ್ಚುತ್ತಿವೆ. ಮೊದಲೆಲ್ಲಾ ಈ ರೋಗಗಳು ವಯಸ್ಸಾದ ಮೇಲೆ ಕಾಣಿಸಿಕೊಳ್ಳುತ್ತಿತ್ತು, ಆದರೆ ಈಗ ಹಾಗಲ್ಲ, ಯುವಜನತೆಯಲ್ಲಿಯೇ ಇದು ಹೆಚ್ಚಾಗಿ ಕಂಡುಬರುತ್ತಿದೆ. ಕಳಪೆ ಆಹಾರ, ಒತ್ತಡ, ಬೊಜ್ಜು, ದೈಹಿಕ ಚಟುವಟಿಕೆಯ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಕಾಯಿಲೆಗಳು ಸ್ಪಷ್ಟ ಲಕ್ಷಣಗಳಿಲ್ಲದೆ ದೀರ್ಘಕಾಲದವರೆಗೆ ದೇಹವನ್ನು ಹಾನಿಗೊಳಿಸುತ್ತವೆ, ವಿಶೇಷವಾಗಿ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ರೋಗಗಳನ್ನು ಹಗುರವಾಗಿ ಪರಿಗಣಿಸುವುದು ಅಪಾಯಕಾರಿಯಾಗಿದ್ದು ಮುಂದೊಂದು ದಿನ ಅದು ಕಿಡ್ನಿಯನ್ನು ಶಾಶ್ವತವಾಗಿ ಹಾನಿ ಮಾಡುವ ಮೊದಲು ಅವುಗಳ ಲಕ್ಷಣ ಮತ್ತು ತಡೆಗಟ್ಟುವ ಕ್ರಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಒಳ್ಳೆಯದು.

ರಕ್ತದೊತ್ತಡ, ಮಧುಮೇಹ ಕಿಡ್ನಿಗೆ ಹೇಗೆ ಹಾನಿ ಮಾಡುತ್ತದೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಮೂತ್ರಪಿಂಡಗಳ ಮುಖ್ಯ ಕಾರ್ಯವೆಂದರೆ ರಕ್ತವನ್ನು ಸ್ವಚ್ಛಗೊಳಿಸುವುದು ಮತ್ತು ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷಕಾರಿ ಅಂಶವನ್ನು ತೆಗೆದುಹಾಕುವುದು. ರಕ್ತದೊತ್ತಡ ದೀರ್ಘಕಾಲದವರೆಗೆ ಹೆಚ್ಚಾದಾಗ, ಅದು ಮೂತ್ರಪಿಂಡಗಳಲ್ಲಿನ ಸಣ್ಣ ರಕ್ತನಾಳಗಳ ಮೇಲೆ ಒತ್ತಡವನ್ನು ಬೀರುತ್ತದೆ, ಕ್ರಮೇಣ ಅವು ತಮ್ಮ ಕೆಲಸವನ್ನು ಕಡಿಮೆ ಮಾಡುತ್ತದೆ. ನಿರಂತರ ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಫಿಲ್ಟರ್‌ಗಳನ್ನು ದುರ್ಬಲಗೊಳಿಸುತ್ತದೆ, ರಕ್ತವನ್ನು ಸರಿಯಾಗಿ ಸ್ವಚ್ಛಗೊಳಿಸುವುದನ್ನು ತಡೆಯುತ್ತದೆ.

ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲಿ ಬಿಪಿ ಬರುವುದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ! ಇಂದೇ ಬದಲಾಯಿಸಿಕೊಳ್ಳಿ

ಮಧುಮೇಹದಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದರಿಂದ ಮೂತ್ರಪಿಂಡದ ಫಿಲ್ಟರ್‌ಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಹೆಚ್ಚುವರಿ ಗ್ಲೂಕೋಸ್‌ನಿಂದಾಗಿ, ಈ ಫಿಲ್ಟರ್‌ಗಳು ಪರಿಣಾಮ ಬೀರಬಹುದು ಮತ್ತು ಮೂತ್ರದಲ್ಲಿ ಪ್ರೋಟೀನ್ ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು, ಇದು ಮೂತ್ರಪಿಂಡದ ಹಾನಿಯ ಆರಂಭಿಕ ಲಕ್ಷಣವಾಗಿದೆ. ಎರಡೂ ಸ್ಥಿತಿಗಳು ದೀರ್ಘಕಾಲದ ವರೆಗೆ ಅನಿಯಂತ್ರಿತವಾಗಿದ್ದರೆ, ಮೂತ್ರಪಿಂಡ ವೈಫಲ್ಯದ ಅಪಾಯ ಹೆಚ್ಚಾಗುತ್ತದೆ.

ಲಕ್ಷಣಗಳು ಹೇಗಿರುತ್ತವೆ?

ಆರಂಭಿಕ ಹಂತಗಳಲ್ಲಿ, ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳು ಹೆಚ್ಚಾಗಿ ಸ್ಪಷ್ಟವಾಗಿ ಕಂಡುಬರುವುದಿಲ್ಲ. ಆದರೆ ಕ್ರಮೇಣ, ಕಾಲು ಮತ್ತು ಮುಖದಲ್ಲಿ ಊತ, ಆಯಾಸ, ಆಗಾಗ ಮೂತ್ರ ವಿಸರ್ಜನೆ ಅಥವಾ ನೊರೆ ಮೂತ್ರದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಹಸಿವು ಕಡಿಮೆಯಾಗುವುದು, ವಾಕರಿಕೆ ಅಥವಾ ದೌರ್ಬಲ್ಯ ಕೂಡ ಕಂಡುಬರಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಉಸಿರಾಟದ ತೊಂದರೆ ಮತ್ತು ದೇಹದಲ್ಲಿ ಊತ ಉಂಟಾಗಬಹುದು. ಆದ್ದರಿಂದ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಇದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಯಕ್ಕೆ ಪತ್ತೆಹಚ್ಚಬಹುದು.

ರಕ್ಷಿಸಿಕೊಳ್ಳುವುದು ಹೇಗೆ?

ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಇದನ್ನು ತಡೆಯಬಹುದು. ಅದರ ಜೊತೆಗೆ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು, ವೈದ್ಯರ ಸಲಹೆಯನ್ನು ಅನುಸರಿಸುವುದು, ಉಪ್ಪು ಮತ್ತು ಸಕ್ಕರೆ ಸೇವನೆಯನ್ನು ಮಿತಿಗೊಳಿಸುವುದರಿಂದ ಈ ಸಮಸ್ಯೆಯನ್ನು ಹತೋಟಿಯಲ್ಲಿ ಇಡಬಹುದು. ಇವುಗಳ ಜೊತೆಗೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ತೂಕ ನಿಯಂತ್ರಣವು ಅತ್ಯಂತ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ವಿರುದ್ಧ ಸಿಡಿದ ಡಾಕ್ಟರ್ಸ್: ಆಸ್ಪತ್ರೆಗೆ ಹೋಗುವ ಮುನ್ನ ಈ ಸುದ್ದಿ ನೋಡಿ – Kannada News | Doctors Call protest against Karnataka government, Likely Hospital OPD Close from march 11

ಬೆಂಗಳೂರು, (ಫೆಬ್ರವರಿ 23): ಕರ್ನಾಟಕ ಸಾರಿಗೆ ನಿಗಮಗಳ ನೌಕರರ ಮುಷ್ಕರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದ (Karnataka Government) ವಿರುದ್ಧ ವೈದ್ಯರು (Doctors)  ಸಿಡಿದೆದ್ದಿದ್ದಾರೆ. ಔಷಧ ಸರಬರಾಜು, ವೈದ್ಯರ ನೇಮಕ, ಬಡ್ತಿ ಸಹಿತ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ (Strike) ನಡೆಸಲು ಮುಂದಾಗಿದ್ದಾರೆ. ಹೌದು…ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಮಾರ್ಚ್ 11 ರಿಂದ ಮುಷ್ಕರ ಆರಂಭಿಸಲಿದೆ. ಹೀಗಾಗಿ ಮಾರ್ಚ್ 11ರಿಂದ 15ರವರೆಗೆ ಎಲ್ಲಾ ಜಿಲ್ಲಾ ಆಸ್ಪತ್ರೆ(District Hospitals) ತಾಲೂಕಾಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಮುಂದಿನ ತಿಂಗಳು ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ (Health Emergency) ಉಂಟಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

 

Source link