All posts by nagaraj11081993

Sarala Subbarao Review: ಜೆನ್ ಜೀ ಕಾಲಕ್ಕೆ ರೆಟ್ರೋ ಪ್ರೀತಿ ಪರಿಚಯಿಸುವ ‘ಸರಳ ಸುಬ್ಬರಾವ್’ – Kannada News | Ajay Rao starrer Sarala Subbarao movie gives you 1970s feel

ಒಂದು ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಆಧರಿಸಿ ಹೆಚ್ಚು ಸಿನಿಮಾಗಳು ಮೂಡಿಬರುತ್ತಿದ್ದವು. ಕಾಲಕ್ರಮೇಣ ಅಂತಹ ಸಿನಿಮಾಗಳ ಸಂಖ್ಯೆ ಕಡಿಮೆ ಆಯಿತು. ಕನ್ನಡದ ಖ್ಯಾತ ಲೇಖಕಿ ತ್ರಿವೇಣಿ ಅವರ ಒಂದಷ್ಟು ಕಾದಂಬರಿಗಳು ಸಿನಿಮಾ ರೂಪ ಪಡೆದಿದ್ದವು. ಈಗ ಅದೇ ತ್ರಿವೇಣೆ ಅವರ ‘ವಸಂತಗಾನ’ ಕಾದಂಬರಿಯನ್ನು ಆಧರಿಸಿ ‘ಸರಳ ಸುಬ್ಬರಾವ್’ (Sarala Subbarao) ಸಿನಿಮಾ ಮಾಡಲಾಗಿದೆ. ಮಂಜು ಸ್ವರಾಜ್ ನಿರ್ದೇಶನ ಮಾಡಿದ ಈ ಚಿತ್ರಕ್ಕೆ ಲೋಹಿತ್ ನಂಜುಂಡಯ್ಯ ಅವರು ಬಂಡವಾಳ ಹೂಡಿದ್ದಾರೆ. ಅಜಯ್ ರಾವ್ (Ajay Rao), ಮಿಶಾ ನಾರಂಗ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಸರಳ ಸುಬ್ಬರಾವ್ ಚಿತ್ರದ ವಿಮರ್ಶೆ ಇಲ್ಲಿದೆ..

1971ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ‘ಸರಳ ಸುಬ್ಬರಾವ್’ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ನಿಜಕ್ಕೂ ಸವಾಲಿನ ಕೆಲಸ. 50 ವರ್ಷಕ್ಕಿಂತಲೂ ಹಿಂದಿನ ಕಾಲಘಟ್ಟವನ್ನು 2026ರಲ್ಲಿ ಚಿತ್ರಿಸುವುದು ಎಂದರೆ ಸುಲಭದ ಮಾತಲ್ಲ. ಆ ಕೆಲಸವನ್ನು ‘ಸರಳ ಸುಬ್ಬರಾವ್’ ಸಿನಿಮಾ ಯಶಸ್ವಿಯಾಗಿ ಮಾಡಿದೆ. ಈ ಸಿನಿಮಾ ನೋಡುತ್ತಿದ್ದರೆ ನೇರವಾಗಿ 5 ದಶಕಗಳ ಹಿಂದಕ್ಕೆ ಹೋದಂತಹ ಅನುಭವ ಪ್ರೇಕ್ಷಕರಿಗೆ ಆಗುತ್ತದೆ.

ಆ ಕಾಲದಲ್ಲಿ ಪ್ರೀತಿ, ಪ್ರೇಮ ಹೇಗಿತ್ತು? ಮೊಬೈಲ್ ಇಲ್ಲದ ಆ ದಿನಗಳಲ್ಲಿ ಪ್ರೇಮಿಗಳ ಚಡಪಡಿಕೆ ಯಾವ ರೀತಿ ಇರುತ್ತಿತ್ತು? ಗಂಡ-ಹೆಂಡತಿ ಸಂಬಂಧ ಹೇಗಿತ್ತು ಎಂಬುದನ್ನು ಸುಂದರ ಕವಿತೆಯ ರೀತಿಯಲ್ಲಿ ‘ಸರಳ ಸುಬ್ಬರಾವ್’ ಸಿನಿಮಾ ಕಟ್ಟಿಕೊಟ್ಟಿದೆ. ಇಲ್ಲಿ ನಾಯಕಿಯ ಪಾತ್ರದ ಹೆಸರು ಸರಳ. ಅಷ್ಟೇ ಸರಳವಾಗಿ ಸಿನಿಮಾ ಮೂಡಿಬಂದಿದೆ. ಯಾವುದೇ ಆಡಂಬರ ಇಲ್ಲದೇ ನೈಜವಾಗಿ ಎಲ್ಲ ಪಾತ್ರಗಳನ್ನು ತೋರಿಸಲಾಗಿದೆ.

ಇಂಗ್ಲಿಷ್ ಪ್ರೊಫೆಸರ್ ಸುಬ್ಬರಾವ್ ಎಂಬ ಪಾತ್ರದಲ್ಲಿ ಅಜಯ್ ರಾವ್ ನಟಿಸಿದ್ದಾರೆ. ಗೃಹಿಣಿಯಾಗಿ ಮಿಶಾ ನಾರಂಗ್ ಅವರು ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಕಾಂಬಿನೇಷನ್ ಬಹಳ ಚೆನ್ನಾಗಿದೆ. ಹೊಸದಾಗಿ ಮದುವೆಯಾದ ದಂಪತಿಯ ಸಲ್ಲಾಪಗಳನ್ನು ಸುಂದರವಾಗಿ ತೋರಿಸಲಾಗಿದೆ. ಮೊದಲ ಬಾರಿ ಗರ್ಭಿಣಿ ಆದ ಮಹಿಳೆಯ ಬಯಕೆ, ತವಕ, ತಲ್ಲಣ, ಆಂತಕ ಇತ್ಯಾದಿ ಭಾವನೆಗಳನ್ನು ಈ ಸಿನಿಮಾ ಯಶಸ್ವಿಯಾಗಿ ಚಿತ್ರಿಸುತ್ತದೆ. ಆ ಎಲ್ಲ ದೃಶ್ಯಗಳಲ್ಲಿ ಮಿಶಾ ನಾರಂಗ್ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ.

ರಂಗಾಯಣ ರಘು, ಚಿತ್ಕಳಾ ಬಿರಾದರ್ ಮುಂತಾದ ಹಿರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಿಭಾಯಿಸಿರುವ ಪಾತ್ರಕ್ಕೆ ಈ ಸಿನಿಮಾದಲ್ಲಿ ತೂಕ ಇದೆ. ಅವರನ್ನು ಭಾವುಕ, ಗಂಭೀರ ಪಾತ್ರಗಳಲ್ಲಿ ನೋಡಬೇಕು ಎಂದು ಬಯಸುವ ಪ್ರೇಕ್ಷಕರಿಗೆ ‘ಸರಳ ಸುಬ್ಬರಾವ್’ ಸಿನಿಮಾ ಖುಷಿ ನೀಡುತ್ತದೆ. ವಿಜಯ್ ಚಂಡೂರು, ರಘು ರಾಮನಕೊಪ್ಪ ಅವರು ಪ್ರೇಕ್ಷಕರನ್ನು ನಗಿಸುತ್ತಾರೆ.

ಈ ಚಿತ್ರದ ಮೂಲಕ Gen Z ಕಾಲದ ಪ್ರೇಕ್ಷಕರಿಗೆ ಬೇರೆಯದೇ ಲೋಕವನ್ನು ಪರಿಚಯಿಸಲಾಗಿದೆ. ಇಂದಿನ ಸಿನಿಮಾ ಮೇಕಿಂಗ್ ಶೈಲಿ ಬದಲಾಗಿದೆ. ಹೊಸ ತಲೆಮಾರಿನವರ ಪ್ರೀತಿಯ ವ್ಯಾಖ್ಯಾನವೂ ಬದಲಾಗಿದೆ. ಆದರೆ ‘ಸರಳ ಸುಬ್ಬರಾವ್’ ಸಿನಿಮಾ ಆ ವಿಚಾರಗಳಲ್ಲಿ ರಾಜಿ ಆಗದೇ ಹಳೇ ಕಾಲಘಟ್ಟದ ಶೈಲಿಯಲ್ಲೇ ಕಥೆಯನ್ನು ಪ್ರೇಕ್ಷಕರ ಮುಂದಿರಿಸಿದೆ. ಹಾಗಾಗಿ ಈ ಸಿನಿಮಾ ಸಂಪೂರ್ಣವಾಗಿ ಬೇರೆಯದೇ ಫೀಲ್ ನೀಡುತ್ತದೆ.

30 ಸೆಕೆಂಡ್ ಅವಧಿಯ ರೀಲ್​ಗಳನ್ನು ಕೂಡ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ನೋಡುವ ಮಂದಿಗೆ ‘ಸರಳ ಸುಬ್ಬರಾವ್’ ಸಿನಿಮಾ ರುಚಿಸದೇ ಇರಬಹುದು. ಒಟ್ಟಾರೆ ಕಥೆಯಲ್ಲಿ ರಣರೋಚಕ ಟ್ವಿಸ್ಟ್ ಕಾಣಿಸದೇ ಇರಬಹುದು. ಮಾಸ್ ಮಸಾಲೆ ಅಂಶಗಳು ಇಲ್ಲದ ಕಾರಣ ಆ ರೀತಿಯ ಪ್ರೇಕ್ಷಕರಿಗೆ ಮನರಂಜನೆ ಕಡಿಮೆ ಎನಿಸಬಹುದು. ಆದರೆ ಹಳೇ ಕಾಲದ ಪ್ರೀತಿಯನ್ನು ಫೀಲ್ ಮಾಡಬೇಕು ಎಂಬ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ.

ಇದನ್ನೂ ಓದಿ: ಸೆಕೆಂಡ್ ಕೇಸ್ ಆಫ್ ಸೀತಾರಾಮ್ ವಿಮರ್ಶೆ: ಕುತೂಹಲದ ಕಥೆ, ಕೊನೆವರೆಗೂ ರೋಚಕತೆ

ಕಲಾ ನಿರ್ದೇಶಕ ಅಮರ್ ಅವರ ಕೆಲಸ ಎದ್ದು ಕಾಣುತ್ತದೆ. 1970ರ ದಶಕವನ್ನು ತೋರಿಸಲು ಅವರು ಶ್ರಮಿಸಿದ್ದಾರೆ. ಪ್ರದೀಪ್ ಪದ್ಮ ಕುಮಾರ್ ಅವರ ಛಾಯಾಗ್ರಹಣ ಸೇರಿದಂತೆ ಇಡೀ ತಾಂತ್ರಿಕ ಬಳಗ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ಫೆಬ್ರವರಿ 20ರಂದು ಬಿಡುಗಡೆ ಆದ ಈ ಚಿತ್ರವು ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯದಲ್ಲೊಂದು ಅಮಾನುಷ ಕೃತ್ಯ: ಕೈಮುಗಿದು ಬೇಡಿದ್ರೂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ – Kannada News | Mandya brutal assault: Stone attack; FIR registered against 14 accused

ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವುದುImage Credit source: tv9 kannada

ಮಂಡ್ಯ, ಫೆಬ್ರವರಿ 23: ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಐವರ ಗುಂಪೊಂದು ಓರ್ವ ವ್ಯಕ್ತಿಗೆ ಮನಸೋ ಇಚ್ಛೆ ಮಾರಣಾಂತಿಕವಾಗಿ ಹಲ್ಲೆ (assault) ಮಾಡಿರುವಂತಹ ಘಟನೆ ನಡೆದಿದೆ. ಹುಡುಗಿ ವಿಚಾರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೈಮುಗಿದು ತಪ್ಪಾಯ್ತು ಎಂದರೂ ಬಿಡದೆ ಕಾಲಿನ ಮೇಲೆ ಸೈಜುಗಲ್ಲಿನಿಂದ  ಭೀಕರವಾಗಿ ಹಲ್ಲೆ ಮಾಡಿದ ಕಿರಾತಕರು ವ್ಯಕ್ತಿಯ ಕಾಲು ಮುರಿದಿದ್ದಾರೆ. ಇನ್ನು ತಾವೆಸಗಿದ ಕ್ರೌರ್ಯವನ್ನು ವಿಡಿಯೋ ಕೂಡ ಮಾಡಿದ್ದಾರೆ. ಇದೀಗ ಪಾಂಡವಪುರ ಠಾಣೆಯಲ್ಲಿ 14 ಆರೋಪಿಗಳ ವಿರುದ್ಧ FIR ದಾಖಲಾಗಿದೆ.

ಎಫ್​ಐಆರ್​​ನಲ್ಲಿ ಏನಿದೆ? 

ಫೆಬ್ರವರಿ 22ರಂದು ಮಧ್ಯಾಹ್ನ 03 ಗಂಟೆ ಸಮಯದಲ್ಲಿ ಚೇಕನಹಳ್ಳಿಯಲ್ಲಿರುವ ನನ್ನ ಚಿಕ್ಕಮ್ಮನ ಮಗ ನಂದೀಶನ ಬೈಕಿನಲ್ಲಿ ಚಿನಕುರಳಿಗೆ ಡ್ರಾಪ್ ತೆಗೆದುಕೊಳ್ಳುವ ಸಲುವಾಗಿ ಕನಗನಹಳ್ಳಿಯಿಂದ ಸ್ವಲ್ಪ ಮುಂದೆ ಕೆ.ಆರ್ ಪೇಟೆ – ಮೈಸೂರು ಮುಖ್ಯರಸ್ತೆಯಲ್ಲಿ ಚಿನಕುರಳಿ ಕಡೆಗಾದಂತೆ ನಾನು ಮತ್ತು ನವೀನ, ಬೈಕಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ್ ಮತ್ತು ಬೈಕಿನಲ್ಲಿ ಬಂದಂತಹ ನಮ್ಮ ಗ್ರಾಮದ ಗಿರೀಶ್, ಮಂಜು ಅಲಿಯಾಸ್​ ಪ್ಲಗ್, ಜೀವನ್, ಶಶಿಕುಮಾರ, ಅಯ್ಯಪ್ಪ, ಮದನ್, ಡಿಂಕಾ ಗ್ರಾಮದ ಮಾದಪ್ಪ, ರವಿ ಮತ್ತು ನಿಂಗಣ್ಣ, ಗಣೇಶರವರು ಅಕ್ರಮ ಗುಂಪುಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಮತ್ತು ಕಲ್ಲನ್ನು ಹಿಡಿದುಕೊಂಡು ಬಂದು ನಮ್ಮನ್ನು ಅಡ್ಡ ಹಾಕಿದರು.

ಇದನ್ನೂ ಓದಿ: ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು

ಕೂಡಲೇ ನಾನು ಮತ್ತು ನವೀನ ಬೈಕಿನಿಂದ ಜಿಗಿದು ಕನಗನಹಳ್ಳಿ ಜಮೀನು ಕಡೆಯಿಂದ ಮರಸನಹಳ್ಳಿ ಕಡೆಗೆ ಓಡಲು ಸ್ಟಾರ್ಟ್ ಮಾಡಿದೇವು. ಮೇಲ್ಕಂಡವರು ನಮ್ಮನ್ನ ಬೆನ್ನತ್ತಿ ಬಂದರು. ಆಗ ನವೀನ ಗದ್ದೆಯಲ್ಲಿ ಬಿದ್ದುಹೋದ. ಆಗ ಗಿರೀಶ, ಮಂಜ, ನಿಂಗಣ್ಣ, ಗಣೇಶ ಮತ್ತು ಮುದ್ದಪ್ಪ, ಶಿವಣ್ಣ ಶಿವಳ್ಳಿ ರವರು ಕಲ್ಲು ಮತ್ತು ದೊಣ್ಣೆಯಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆಯುತ್ತಿದ್ದರು. ಆಗ ನಾನು ಪ್ರಾಣಭಯದಿಂದ ಮೊರಸನಹಳ್ಳಿ ಕಡೆಗೆ ಓಡಿಬಂದೆ. ನನ್ನ ಹಿಂದೆ ಬೆನ್ನಟ್ಟಿ ಬಂದ ಜೀವನ್, ಶಶಿಕುಮಾರ್ ಅಯ್ಯಪ್ಪ, ಮದನ, ರವಿ, ಮಾದಪ್ಪ ಮತ್ತು ಪವನ ನನ್ನನ್ನು ಹಿಡಿದುಕೊಂಡು ಮುಂದೆ ಹೋಗದಂತೆ ತಡೆದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ರವಿ ದೊಣ್ಣೆಯಿಂದ ನನ್ನ ತಲೆಯ ಹಿಂಭಾಗಕ್ಕೆ, ಮಾದಪ್ಪ ದೊಣ್ಣೆಯಿಂದ ನನ್ನ ಬಲಕಾಲಿಗೆ ಹೊಡೆದು ರಕ್ತಗಾಯ ಪಡಿಸಿದರು. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಗಿರೀಶ, ದೊಣ್ಣೆಯನ್ನು ತೆಗೆದುಕೊಂಡು ಬಾಯಿಗೆ ತುರುಕಿದನು. ನಿಂಗಣ್ಣ ದೊಣ್ಣೆಯಿಂದ ಎಡಕಾಲಿಗೆ ಹೊಡೆದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ಮೊರಸಹಳ್ಳಿ ಗ್ರಾಮದ ಕೆಲವರು ಅವರಿಂದ ನನ್ನನ್ನು ಬಿಡಿಸಿದರು. ಈ ಮೇಲ್ಕಂಡವರೆಲ್ಲರೂ ಈ ದಿನ ಬದುಕಿಕೊಂಡಿದ್ದೀಯಾ ಮಗನೇ ನೀವೂ ಪದೇ ಪದೇ ನಮ್ಮ ವಿಚಾರಕ್ಕೆ ಬರತ್ತಾ ಇದ್ದೀಯಾ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿ ಅವರು ಹಿಡಿದುಕೊಂಡು ಬಂದಿದ್ದ ಕಲ್ಲು ಮತ್ತು ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಹೊರಟು ಹೋದರು.

ನನಗೆ ಮತ್ತು ನವೀನನಿಗೆ ಹೊಡೆದದ್ದನ್ನು ಕಣ್ಣಾರೆ ಕಂಡಂತಹ ನಮ್ಮ ಚಿಕ್ಕಮ್ಮನ ಮಗ ಚೀಕನಹಳ್ಳಿ ಗ್ರಾಮದ ನಂದೀಶ, ಅವನು ಗಾಬರಿಗೊಂಡು ಸ್ಥಳದಿಂದ ಹೊರಟುಹೋದ. ಆಗ ಅಲ್ಲಿಯೇ ಇದ್ದ ಸಾರ್ವಜನಿಕರು ನನ್ನನ್ನು ಮತ್ತು ನವೀನನನ್ನು ಆಂಬ್ಯುಲೆನ್ಸ್‌ನಲ್ಲಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು.

ಇದನ್ನೂ ಓದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಈ ಗಲಾಟೆ ವಿಚಾರವನ್ನು ತಿಳಿದು ಆಸ್ಪತ್ರೆಯ ಬಳಿ ಬಂದ ನಮ್ಮ ಗ್ರಾಮದ ನಮ್ಮ ದೊಡ್ಡಪ್ಪನ ಮಗ ಸ್ವಾಮಿಯು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಮೈಸೂರಿನ ಜೆ.ಎಸ್.ಎಸ್ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ. ಆದ್ದರಿಂದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ: . ಪೊಲೀಸರ ತನಿಖೆ ಬಗ್ಗೆ DCP ಸ್ಫೋಟಕ ಮಾಹಿತಿ

ಬೆಂಗಳೂರು (ಫೆಬ್ರವರಿ.23): ಶೇಷಾದ್ರಿಪುರಂ (Seshadripuram) ಬಳಿ ಇರುವ ಕೆನರಾ ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಖದೀಮರು ಕೆನರಾ ಬ್ಯಾಂಕಿನ (Canara Bank) ಒಳಗೆ ನುಗ್ಗಿದ್ದು, ಸೈರನ್ ಮೊಳಗುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಜೀಂದ್ರ ಪ್ರತಿಕ್ರಿಯಿಸಿದ್ದು,ವಿಂಡೋ ಕಟ್ ಮಾಡಿ ಆರೋಪಿ ಎಂಟ್ರಿಯಾಗಿದ್ದಾನೆ. ಒಳಗಡೆ ಹೋಗಲು ವಿಂಡೋ ಕಟ್ ಮಾಡಿ ಒಳಗಡೆ ಹೋಗಿದ್ದಾನೆ. ಬಳಿಕ ಸಿಸಿಟಿವಿಗೆ ಸಂಬಂಧಿಸಿದ ವೈರ್ ಕಟ್ ಮಾಡಿದ್ದಾನೆ. ಆಗ ಒಳಗಡೆ ಅಲರಾಮ್ ಆಗಿದೆ. ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ಗೊತ್ತಾಗಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದೆ. ಫಿಂಗರ್ ಫ್ರಿಂಟ್ ಚೆಕ್ ಎಲ್ಲಾ ಮಾಡಿದ್ದಾರೆ. ಆರೋಪಿ ಬಂಧನಕ್ಕೆ ತಂಡ ರಚನೆ ಮಾಡಲಾಗಿದ್ದು, ಆದಷ್ಟು ಬೇಗನೆ ಅರೆಸ್ಟ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು – Kannada News | A Man Kills 64 Year Old Woman for money In Davanagere

ದಾವಣಗೆರೆ, (ಫೆಬ್ರವರಿ 23): ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಇದೇ ತಿಂಗಳ 2ರಂದು ಗ್ರಾಮಸ್ಥರೆಲ್ಲ ಊರ ಹಬ್ಬದ ಖುಷಿಯಲ್ಲಿದ್ದರು. ಆದ್ರೆ ಮಾರನೇ ದಿನವೇ ಗ್ರಾಮದ 64 ವರ್ಷದ ಕಮಲಮ್ಮ ಮೃತಪಟ್ಟಿದ್ಳು. ಒಂಟಿ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂದುಕೊಂಡಿದ್ದರು. ಆದ್ರೆ, ಅಂತ್ಯಕ್ರಿಯೆ ಹೊತ್ತಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆ ಕಾಣೆಯಾಗಿರುವುದು ಸಂಬಂಧಿಯೊಬ್ಬರಿಗೆ ಸಂಶಯ ಬಂದಿದೆ. ಈ ವಿಷಯ ತಿಳಿದು ಅಖಾಡಕ್ಕಿಳಿದ ಪೊಲೀಸರು ವೃದ್ಧೆಯ ಸಾವಿನ ರಹಸ್ಯ ಬಯಲಿಗೆ ಬಂದಿದ್ದು, ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಅಭಿಷೇಕ್ ಎನ್ನುವಾತನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಹಂತಕ ಶಿವಮೊಗ್ಗ ಮೂಲದ ಅಭಿಷೇಕ್ Msc ಓದಿದ್ದ. ಆನ್​ಲೈನ್ ಗೇಮ್ ಚಟಕ್ಕೆ ಬಿದ್ದು 20ರಿಂದ 25 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲಕೊಟ್ಟವರ ಕಾಟ ಜಾಸ್ತಿ ಆಗ್ತಿದ್ದಂತೆ ಊರು ಬಿಟ್ಟೋನು 2 ತಿಂಗಳ ಕಾಲ ಅಲ್ಲಿ ಇಲ್ಲಿ ಸುತ್ತಾಡಿ ಫೆಬ್ರವರಿ 2ರಂದು ದಾವಣಗೆರೆಯ ಆರುಂಡಿ ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ. ಈ ವೇಳೆ ವೃದ್ಧೆ ಕಮಲಮ್ಮನ ನೋಡ್ತಿದ್ದಂತೆ ಪಾಪಿಯ ಕಣ್ಣು ಒಡವೆ ಮೇಲೆ ಬಿದ್ದಿತ್ತು.

ಇದನ್ನೂ ಒದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಎಲ್ಲರೂ ಊರ ಹಬ್ಬದ ಖುಷಿಯಲ್ಲಿದ್ರೆ, ಇವನು ಸದ್ದಿಲ್ಲದೆ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದು
8 ಲಕ್ಷ 44 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಅದೇ ಒಡವೆ ಅಡವಿಟ್ಟು ಮತ್ತೆ ಆನ್​ಲೈನ್ ಗೇಮ್ ಆಡಿದ್ದ. ಸದ್ಯ ಪೊಲೀಸರು ಅಭಿಷೇಕ್​ಗೆ ಜೈಲು ದಾರಿ ತೋರಿಸಿದ್ದಾರೆ. ಚೆನ್ನಾಗಿ ಓದಿರುವ ವಿದ್ಯಾವಂತರೇ ಹೀಗೆ ದುಶ್ಚಟಗಳಿಗೆ ಬಿದ್ದು ಕೊಲೆ, ಸುಲಿಗೆ ಮಾಡ್ತಿರೋದು ಜನರನ್ನ ಬೆಚ್ಚಿ ಬೀಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಿನಲ್ಲಿ ಮಹತ್ವದ ಸಭೆ – Kannada News | Important meeting in Mysuru about providing support price to Tobacco

ಮೈಸೂರು, (ಫೆಬ್ರವರಿ 23): ತಂಬಾಕು ದರ ಪಾತಾಳಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದು, ಈ ಸಂಬಂಧ ತಂಬಾಕು ಬೆಳೆಗಾರರು, ತಂಬಾಕು ಮಂಡಳಿ ಅಧಿಕಾರಿಗಳು ಇಂದು (ಫೆಬ್ರವರಿ 23) ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಸಿದರು. ತಂಬಾಕು ಕೊಂಡುಕೊಳ್ಳುವ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

Source link

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್: ಉತ್ತರ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ, ಟಿಕೆಟ್ ದರ ಎಷ್ಟು? – Kannada News | Ranji Trophy final in Hubballi: A festival for North Karnataka cricket lovers; what are the ticket prices

ರಣಜಿ ಟ್ರೋಫಿ ಫೈನಲ್ ಪಂದ್ಯImage Credit source: tv9 kannada

ಹುಬ್ಬಳ್ಳಿ, ಫೆಬ್ರವರಿ 23: ಒಂದಡೆ ಕರ್ನಾಟಕ ಕಳೆದ ಒಂದು ದಶಕದಿಂದ ರಣಜಿ ಕಪ್ (Ranji Trophy) ಗೆದ್ದಿಲ್ಲ. ಮತ್ತೊಂದಡೆ ಇಲ್ಲಿವರಗೆ ಒಮ್ಮೆಯೂ ಜಮ್ಮು-ಕಾಶ್ಮೀರ ತಂಡ ರಣಜಿ ಕಪ್ ಗೆದ್ದಿಲ್ಲ. ಇದೀಗ ಎರಡು ತಂಡಗಳಿಗೆ ಕಪ್ ಬರ ನೀಗಿಸಿಕೊಳ್ಳೋ ಸುವರ್ಣಾವಕಾಶ ದೊರತಿದೆ. ಇನ್ನೊಂದಡೆ ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರೇಮಿಗಳಿಗೆ ಕೂಡಾ ಹತ್ತಿರದಿಂದ ರಣಜಿ ಪಂದ್ಯ ನೋಡುವ ಸದಾವಕಾಶ ದೊರತಿದೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದ್ದು, ಕರ್ನಾಟಕ (Karnataka) ಮತ್ತು ಜಮ್ಮು ಕಾಶ್ಮೀರ ನಡುವಿನ ಅಂತಿಮ ಪಂದ್ಯದ ಐತಿಹಾಸಿಕ ಕ್ಷಣಕ್ಕೆ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಈ ದೃಶ್ಯವನ್ನು ಕಣ್ಣ್ತುಂಬಿಕೊಳ್ಳಲು ಕೇವಲ ಹುಬ್ಬಳ್ಳಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಹುಬ್ಬಳ್ಳಿಯ ರಾಜ ನಗರದಲ್ಲಿರುವ ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಾಳೆಯಿಂದ ಆರಂಭವಾಗಲಿರೋ 2025-26 ನೇ ಸಾಲಿನ ರಣಜಿ ಪೈನಲ್ ಪಂದ್ಯ ಹಿನ್ನೆಲೆ ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಮೆಂಟ್ ಫೈನಲ್ ಹಂತ‌ ತಲುಪಿದ್ದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರ ಫೈನಲ್ ಎಂಟ್ರಿಯಾಗಿದೆ. ಇತ್ತ ಹನ್ನೊಂದು ವರ್ಷದ ಬಳಿಕ ಕರ್ನಾಟಕ ಫೈನಲ್ ತಲುಪಿದೆ ಈ ಎರಡು ತಂಡಗಳ ಜಿದ್ದಾಜಿದ್ದಿ ನೋಡಲು ರಾಜ್ಯ ಮಾತ್ರವಲ್ಲದೆ ದೇಶವೇ ಕಾತುರದಿಂದ ಕಾಯುತ್ತಿದೆ.

ನಾವು ಈ ಬಾರಿ ಕಪ್ ಎತ್ತುತ್ತೇವೆ: ದೇವದತ್ತ ಪಡಿಕಲ್

ಇತ್ತ ಇದೇ ಮೊದಲ ಬಾರಿ ವಾಣಿಜ್ಯ ನಗರಿ ಹುಬ್ಬಳ್ಳಿ ಕೆಎಸ್​ಸಿಎ ಮೈದಾನದಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡಿದ್ದು, ಈ ಐತಿಹಾಸಿಕ ಕ್ರಿಕೆಟ್ ಪಂದಕ್ಕೆ ಹುಬ್ಬಳ್ಳಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ದೇವದತ್ತ್ ಪಡಿಕ್ಕಲ್ ನಾಯಕತ್ವ ಕರ್ನಾಟಕ ತಂಡದಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿರುವ ಹಿರಿಯ ಆಟಗಾರ ಕೆಎಲ್ ರಾಹುಲ್, ಮಯಾಂಕ್ ಅಗರವಾಲ್, ಕರುಣ್ ನಾಯರ್, ಪ್ರಸಿದ್ದ ಕೃಷ್ಣ ಸೇರಿದಂತೆ ಅನೇಕ ಸ್ಟಾರ್ ಆಟಾರರು ಕಣಕ್ಕಿಳಿಯಲಿದ್ದಾರೆ. ನಾವು ಈ ಬಾರಿ ಕಪ್ ಎತ್ತುತ್ತೇವೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಆಡಿರುವ ಅನುಭವಿದೆ. ಪಿಚ್ ಬಗ್ಗೆ ಸಾಕಷ್ಟು ವರ್ಕ್ ಮಾಡಿದ್ದೇವೆ. ಹುಬ್ಬಳ್ಳಿಯಂತ ನಗರದಲ್ಲಿ ರಣಜಿ ಫೈನಲ್ ಆಡುತ್ತಿರುವುದು ಖುಷಿಯಿದೆ ಅಂತ ಕರ್ನಾಟಕ ತಂಡ ನಾಯಕ ದೇವದತ್ತ ಪಡಿಕಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

ಕೆಎಸ್​ಸಿಎ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಹೊಂದಿದೆ. ಅದೇ ರೀತಿ ರಾಜ್ಯದಲ್ಲಿ ಕೆಎಸ್​ಸಿಎ ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಹೊಂದಿದ್ದು, 2012 ರಲ್ಲಿಯೇ ಹುಬ್ಬಳ್ಳಿಯಲ್ಲಿರೋ ಸ್ಟೇಡಿಯಂ ಉದ್ಘಾಟನೆಯಾಗಿದೆ. ಹುಬ್ಬಳ್ಳಿ ರಾಜ್ ನಗರದ ಮೈದಾನದಲ್ಲಿ ಇಲ್ಲಿವರಗೆ ಒಂಬತ್ತು ರಣಜಿ ಪಂದ್ಯಗಳು ನಡೆದಿದ್ದು, ಭಾರತ- ವೆಸ್ಟ್ ಇಂಡೀಸ್, ಭಾರತ- ಶ್ರೀಲಂಕಾ, ಭಾರತ ನ್ಯೂಜಲೆಂಡ್ ನ ಏ ಲಿಸ್ಟ್ ತಂಡಗಳ ನಡುವೆ ಮೂರು ಪಂದ್ಯಗಳು ಇದೇ ಮೈದಾನದಲ್ಲಿ ನಡೆದಿವೆ. ಭಾರತ ತಂಡಕ್ಕೆ ಆಡಿರೋ ಜಹೀರ್ ಖಾನ್, ಚೇತೇಶ್ವರ ಪೂಜಾರ್ ಸೇರಿದಂತೆ ಅನೇಕ ಆಟಗಾರರು ಹುಬ್ಬಳ್ಳಿ ರಾಜ್ ನಗರದಲ್ಲಿನ ಸ್ಟೇಡಿಯಂ ನಲ್ಲಿ ಆಟವಾಡಿದ್ದಾರೆ. 16.5 ಎಕರೆ ವಿಸ್ತೀರ್ಣದಲ್ಲಿರೋ ಸ್ಟೇಡಿಯಂನಲ್ಲಿ ಎಂಟು ಮುಖ್ಯ ಪಿಚ್, ಹತ್ತು ಅಭ್ಯಾಸ ಪಿಚ್, ಎರಡು ಕಾಂಕ್ರಿಟ್ ಪಿಚ್‌ಗಳಿವೆ. ಇನ್ನು ಪೈನಲ್ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿರೋದರಿಂದ ಬೆಂಗಳೂರು ಮತ್ತು ಮುಂಬೈನಿಂದ ಬಂದಿರುವ ಸಿಬ್ಬಂದಿ ಪಿಚ್ ತಯಾರು ಮಾಡಿದ್ದಾರೆ.

ಮೊದಲ ಬಾರಿ ನಾವು ಫೈನಲ್​ಗೆ ಬಂದಿರುವುದು ಖುಷಿಯಿದೆ: ಪರಾಸ್ ದೋಗ್ರಾ

ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿರುವ ಜಮ್ಮು-ಕಾಶ್ಮೀರ ತಂಡ ಸಹ ಮೊದಲ ಬಾರಿಗೆ ಕಪ್​ಗೆ ಮುತ್ತಿಡುವ ಆಸೆಯಲ್ಲಿದೆ. ಪಾರಸ್ ಡೋಗ್ರಾ ನಾಯಕತ್ವದಲ್ಲಿ ಶುಭಂ, ಉಮರ್, ರೋಹಿತ ಶರ್ಮಾ,ಮುಸ್ತಫಾ ಅಜಿ, ಅಬ್ದುಲ್, ಯದುವೀರ್ ಸಿಂಗ್, ಉಮರ್ ಮಲಿಕ್, ಸುನೀಲ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಇದ್ದಾರೆ. ಮೊದಲ ಬಾರಿ ನಾವು ಫೈನಲ್​ಗೆ ಬಂದಿರುವುದು ಖುಷಿಯಿದೆ. ನಮ್ಮಲ್ಲಿ ಪ್ರತಿಭೆ ಇದೆ, ನಮಗೆ ಸಪೋರ್ಟ್ ಮಾಡಿ ಅಂತ ನಾಯಕ ಪರಾಸ್ ದೋಗ್ರಾ ಹೇಳಿದ್ದಾರೆ.

ಟಿಕೆಟ್ ದರ ಎಷ್ಟು?

ಇನ್ನು ಪಂದ್ಯ ವೀಕ್ಷಣೆಗೆ ಬರುವವರಿಗೆ ಕ್ರೀಡಾಂಗಣದ 3 ಮತ್ತು 4ನೇ ದ್ವಾರಗಳಿಂದ ಪ್ರವೇಶವಿರಲಿದೆ. ಮೂರನೇ ಗೇಟ್‌ನಿಂದ ಪ್ರವೇಶಕ್ಕೆ 200 ರೂ ಮತ್ತು ನಾಲ್ಕನೇ ಗೇಟ್ ಮೂಲಕ ಪ್ರವೇಶಕ್ಕೆ 100 ರೂ ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಕೆಎಸ್​ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್‌ ಕಿತ್ತೂರು ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಟಿಕೆಟ್ ನೀಡಲು ಆರಂಭಿಸಲಾಗುವುದು. ಪ್ರತಿ ದಿನ 4,500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಸಾರ್ವಜನಿಕರು ನಗದು ಮತ್ತು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕ್ಯಾಚ್ ಹಿಡಿದು, ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ಶಮರ್ ಜೋಸೆಫ್

ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ರಣಜಿ ತಂಡದ ಫೈನಲ್ ಮ್ಯಾಚ್ ನಡೆಯುತ್ತಿರುವುದು ಈ ಭಾಗದ ಕ್ರಿಕೆಟ್ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ. ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ ಜನ ಕಾತುರದಿಂದ ಎದುರು ನೋಡ್ತಿದ್ದಾರೆ. ದೂರದ ಬೆಟ್ಟವಾಗಿದ್ದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳು ಈಗ ಸ್ಥಳೀಯ ಮಟ್ಟದ ಜನರಿಗೆ ಹತ್ತಿರವಾಗುತ್ತಿರುವುದು ಸಂತಸದ ವಿಷಯ. ಜೊತೆಗೆ ಈ ಬಾರಿ ರಣಜಿ ಕಪ್​ಗೆ ಯಾರು ಮುತ್ತಿಡಲಿದ್ದಾರೆ ಅನ್ನೋದು ನಾಳೆಯಿಂದ ನಡೆಯುವ ಫೈನಲ್ ಪಂದ್ಯದಲ್ಲಿ ಗೊತ್ತಾಗಲಿದೆ.

ಮತ್ತಷ್ಟು ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೆಲಂಗಾಣದ ದೇವಸ್ಥಾನದ ಜಾತ್ರೆಯಲ್ಲಿ ಜಾತಿ ಸಂಘರ್ಷ; ಕೂದಲೆಳೆದು ಮಹಿಳೆಯರಿಗೆ ಥಳಿತ, ಮಗು ಸಾವು – Kannada News | Women Attacked in Caste Clash at Telangana Temple Fair 2 month old baby died

ಹೈದರಾಬಾದ್, ಫೆಬ್ರವರಿ 23: ತೆಲಂಗಾಣದ ನಾಗರ್ಕರ್ನೂಲ್‌ನಲ್ಲಿ ನಡೆದ ಕುಮ್ಮೇರ ಜಾತ್ರೆಯ ಸಂದರ್ಭದಲ್ಲಿ ಜಾತಿ ಘರ್ಷಣೆಯಲ್ಲಿ ಒಂದು ಕುಟುಂಬದ ಮೇಲೆ ಪುರುಷರ ಗುಂಪೊಂದು ದಾಳಿ ನಡೆಸಿದೆ. ಈ ಗಲಾಟೆಯಲ್ಲಿ 2 ತಿಂಗಳ ಮಗುವೂ ಸಾವನ್ನಪ್ಪಿದೆ. ಕೆಳ ಜಾತಿಯ ಮಹಿಳೆಯರ ಕೂದಲನ್ನು ಎಳೆದು ರಾಡ್‌ಗಳಿಂದ ಹೊಡೆಯಲಾಗಿದೆ. ಜಾತ್ರೆಗೆ ದೇವಾಲಯದೊಳಕ್ಕೆ ಪ್ರವೇಶಿಸಲು ಕೆಳ ಜಾತಿಯ ಕುಟುಂಬಸ್ಥರು 100 ರೂ. ನೀಡಲು ನಿರಾಕರಿಸಿದಾಗ ವಾಗ್ವಾದ ಪ್ರಾರಂಭವಾಯಿತು. ಇದೇ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿತು.

ಇದಾದ ನಂತರ ಆ ಕುಟುಂಬದ ಸದಸ್ಯರು ಪೊಲೀಸ್ ದೂರು ದಾಖಲಿಸಿದರು. ತಮ್ಮನ್ನು “ಕೆಳಜಾತಿ” ಎಂದು ಕರೆದು ಹೀಯಾಳಿಸಿದ್ದಾರೆ. ದೇವಾಲಯಕ್ಕೆ ಪ್ರವೇಶ ಉಚಿತವಾದ್ದರಿಂದ ಹಣ ನೀಡಲು ನಾವು ನಿರಾಕರಿಸಿದಾಗ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮುಂದೆ ಮೂತ್ರ ವಿಸರ್ಜನೆ: ಪ್ರಶ್ನಿಸಿದ್ದಕ್ಕೆ ಹಲ್ಲೆ

ಗಲಾಟೆಯ ವೇಳೆ ಆ ಮಹಿಳೆಯರಲ್ಲಿ ಒಬ್ಬರು ತನ್ನ 2 ತಿಂಗಳ ಮಗುವನ್ನು ಗಲಾಟೆ ಮಾಡುವವರ ಪಾದಗಳ ಮೇಲೆ ಇಟ್ಟು, ತನ್ನ ಗಂಡನನ್ನು ಹೊಡೆಯದಂತೆ ಬೇಡಿಕೊಂಡಾಗ ಆತ ಎರಡು ತಿಂಗಳ ಮಗುವನ್ನು ತುಳಿದಿದ್ದಾನೆ. ತಕ್ಷಣ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಿ ಮೂರು ದಿನಗಳ ನಂತರ ಆ ಮಗು ಮೃತಪಟ್ಟಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆರೋಪಿಗಳು ಮಹಿಳೆಯರ ಕೂದಲನ್ನು ಎಳೆದು ಹೊರಗೆ ತಳ್ಳಿದರು. ತೆಂಗಿನಕಾಯಿ ಒಡೆಯಲು ಬಳಸಿದ್ದ ಕಬ್ಬಿಣದ ರಾಡ್ ಬಳಸಿ ನಾಲ್ವರು ಜನರು ಹಲ್ಲೆ ನಡೆಸಿದರು. ಈ ವೇಳೆ ಆ ಕುಟುಂಬದವರು ಹಾಕಿದ್ದ ಚಿನ್ನದ ಕಿವಿಯೋಲೆಗಳು, ಬೆಳ್ಳಿ ಬಳೆಗಳು ಮತ್ತು ಫೋನ್ ಸೇರಿದಂತೆ ಅವರ ವಸ್ತುಗಳನ್ನು ಕಸಿದುಕೊಳ್ಳಲಾಗಿದೆ ಎನ್ನಲಾಗಿದೆ. ಮೃತ ಶಿಶುವಿನ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಅದರ ಆಧಾರದ ಮೇಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು – Kannada News | Chanakya Niti: Chanakya says don’t joke about these three things

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸು, ಶ್ರೀಮಂತಿಕೆ ಗಳಿಸುವುದು ಹೇಗೆ, ದಾಂಪತ್ಯ ಜೀವನ ಸುಖವಾಗಿರಲು ಪತಿಪತ್ನಿಯರು ಹೇಗಿರಬೇಕು ಎಂಬುದರ ಬಗ್ಗೆ ಹೇಳಿದ್ದಾರೆ ಅದೇ ರೀತಿ ಅವರು ಕೆಲವೊಂದಿಷ್ಟು ಸಂಗತಿಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು, ಅವುಗಳ ಹತ್ತಿರಕ್ಕೆ ಹೋದರೆ ಅಥವಾ ಅವುಗಳೊಂದಿಗೆ ತಮಾಷೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.  ಹಾಗಿದ್ರೆ ಯಾವ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು ಎಂಬುದನ್ನು ನೋಡೋಣ ಬನ್ನಿ.

ಈ ವಿಷಯಗಳ ಬಗ್ಗೆ ಜಾಗರೂಕರಾಗಿರಿ:

ಹಾವುಗಳು: ಹಾವುಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಕೆಲವೊಂದು ಬಾರಿ ಅವುಗಳು ಸೇಹಪರವಾಗಿ ಕಂಡರೂ ಅವುಗಳು ಅಪಾಯವನ್ನು ತಂದೊಡ್ಡುತ್ತವೆ. ಹೌದು ಹಾವುಗಳು ಯಾವಾಗ ಕಚ್ಚುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಯಾವುಗಳ ಜೊತೆ ತಮಾಷೆ ಬೇಡ, ಅವುಗಳಿಂದ ದೂರವಿರುವುದೇ ಸೂಕ್ತ.

ಬೆಂಕಿ: ಬೆಂಕಿಯ ಜೊತೆ ಸರಸ ಬೇಡ್ವೇ ಬೇಡ ಎನ್ನುತ್ತಾರೆ ಚಾಣಕ್ಯ. ಬೆಂಕಿಯೊಂದಿಗೆ ತಮಾಷೆ ಮಾಡಲು ಹೋದರೆ ಅಥವಾ ಅದರೊಂದಿಗೆ ಹುಚ್ಚಾಟ ಆಡಿದರೆ  ಆ ಬೆಂಕಿ ಕ್ಷಣ ಮಾತ್ರದಲ್ಲಿ ನಮ್ಮನ್ನು ಸುಟ್ಟು ಬೂದಿ ಮಾಡಬಹುದು. ಹಾಗಾಗಿ ಬೆಂಕಿಯಿಂದ ಯಾವಾಗಲೂ ದೂರವಿರಿ.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಅಂಶಗಳೇ ಮುಖ್ಯ ಕಾರಣ

ನೀರು: ಕೆಲವರು ನೀರನ್ನು ಕಂಡರೆ ಹುಚ್ಚಾಟಗಳನ್ನು ಆಡುತ್ತಾರೆ. ಹೀಗೆ ನೀರಿನಲ್ಲಿ ಆಟವಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಹಲವರಿದ್ದಾರೆ. ಅದಕ್ಕಾಗಿ ಆಚಾರ್ಯ ಚಾಣಕ್ಯರು ನೀರಿನಿಂದ ಆದಷ್ಟು ದೂರವಿರಿ, ಸಮುದ್ರ, ನದಿ ನೀರಿನ ಬಳಿ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದು. ಹೀಗೆ ಹಾವು, ನೀರು, ಬೆಂಕಿ ಈ ಅಂಶಗಳು ಇರುವ ಸ್ಥಳದಲ್ಲಿ ಕೊಂಚ ಅಜಾಗರೂಕತೆಯನ್ನು ತೋರಿದರೂ ಅದು ನಮ್ಮ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಬಹುದು. ಹಾಗಾಗಿ ಈ ಮೂರು ವಿಷಯಗಳ ಬಗ್ಗೆ ತಮಾಷೆ ಬೇಡ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್ – Kannada News | Bollywood actress Kriti Sanon and Businessman Kabir Bahia age gap and dating

ಬಾಲಿವುಡ್ ಚೆಲುವು ಕೃತಿ ಸನನ್ (Kriti Sanon) ಅವರು ಉದ್ಯಮಿ ಕಬೀರ್ ಬಹಿಯಾ ಜೊತೆ ಲಂಡನ್​​ನಲ್ಲಿ ಸುತ್ತಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರ ನಡುವೆ 9 ವರ್ಷಗಳ ವಯಸ್ಸಿನ ಅಂತರ ಇದೆ. ಕಬೀರ್ ಬಹಿಯಾಗಿಂತಲೂ ಕೃತಿ ಸನೋನ್ ಅವರು 9 ವರ್ಷ ಹಿರಿಯರು. ಅವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ವಯಸ್ಸಿನ ಅಂತರದ ಕಾರಣದಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಕಬೀರ್ ಬಹಿಯಾ (Kabir Bahia) ಅವರು ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟರ್​ಗಳಿಗೆ ಆಪ್ತನಾಗಿದ್ದಾರೆ. ‘ಪರಮ್ ಸುಂದರಿ..’ ಹಾಡಿನಿಂದ ಸಿಕ್ಕಾಪಟ್ಟೆ ಜನಪ್ರಿಯುತೆ ಪಡೆದ ಕೃತಿ ಸನನ್ ಅವರು ಬಾಲಿವುಡ್​​ನಲ್ಲಿ ಸಖತ್ ಬೇಡಿಕೆ ಇದೆ. ಈ ನಡುವೆ ಅವರು ಮದುವೆ ಬಗ್ಗೆ ಆಲೋಚನೆ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ – Kannada News | Public Allegedly Threatened for Questioning Expired Medicines at Shirahatti Government Hospital in Gadag

ಗದಗ, ಫೆಬ್ರವರಿ 23: ಗದಗ ಜಿಲ್ಲೆಯ ಶಿರಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಿ ವಿತರಣೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಶ್ನಿಸಿದವರಿಗೆ ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗೋಪಾಲ್ ರಾಜ್ ಪೊಲೀಸ್​​ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಆಡಳಿತಾಧಿಕಾರಿ ನಡೆಗೆ ಕಿಡಿ ಕಾರಿದ್ದಾರೆ. ಶಶಿ ಪಾಟೀಲ್, ಪ್ರಕಾಶ್ ಎಂಬುವರ ವಿರುದ್ಧ ಡಾ.ಗೋಪಾಲ್ ರಾಜ್ ದೂರು ಸಹ ನೀಡಿದ್ದು, ಸದ್ಯ ಪ್ರತಿ ದೂರು ನೀಡಲು ರೋಗಿಗಳು ಮತ್ತು ಸಂಬಂಧಿಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link