ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ – Kannada News | Two Sisters in Jodhpur die on the day of marriage after consuming poison
ನವದೆಹಲಿ, ಫೆಬ್ರುವರಿ 22: ಇಬ್ಬರು ಹೆಣ್ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ಮನೆಗೆ ದಿಢೀರನೇ ಸೂತಕದ ಛಾಯೆ ಒತ್ತರಿಸಿಬಂತು. ರಾಜಸ್ಥಾನದ ಗ್ರಾಮವೊಂದರಲ್ಲಿ ಒಂದೇ ದಿನದಂದು ಮದುವೆಯಾಗಬೇಕಿದ್ದ ಇಬ್ಬರು ಸಹೋದರಿಯರು ಮಸಣಕ್ಕೆ ಸೇರಬೇಕಾದ ಘಟನೆ ನಡೆದಿದೆ. ಜೋಧಪುರದ ಮನಾಯ್ ಎನ್ನುವ ಗ್ರಾಮದಲ್ಲಿ ಸಹೋದರಿಯರಾದ ಶೋಭಾ (25) ಮತ್ತು ವಿಮಲಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಡಿಟಿವಿ ವಾಹಿನಿಯಲ್ಲಿ ವರದಿಯಾಗಿದೆ. ಈ ಇಬ್ಬರು ಅಕ್ಕ ತಂಗಿಯರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಶನಿವಾರ (ಫೆ. 21) ಇಬ್ಬರದ್ದೂ ಮದುವೆ…