‘ಟಾಕ್ಸಿಕ್’ ಡೈರೆಕ್ಟರ್ ಮಹಿಳೆ ಆದ್ರೂ ಟೀಸರ್ನಲ್ಲಿ ನಟಿಯರಿಗೆ ಜಾಗ ಇಲ್ಲ; ನೆಟ್ಟಿಗರ ಟೀಕೆ – Kannada News | Why no female characters shown in Yash starrer Toxic teaser
ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾರ್ಚ್ 19ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದ ಬಿಡುಗಡೆಗೆ ಒಂದು ತಿಂಗಳು ಬಾಕಿ ಇದೆ ಎನ್ನುವಾಗ ಟೀಸರ್ ಅನಾವರಣ ಮಾಡಲಾಗಿದೆ. ಈ ಟೀಸರ್ ನೋಡಿ ಯಶ್ (Yash) ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಒಂದು ಕೊರತೆ ಕಾಣಿಸಿದೆ. ಇಡೀ ಟೀಸರ್ನಲ್ಲಿ ಯಾವುದೇ ನಟಿಯರ ಮುಖ ಕಾಣಿಸಿಲ್ಲ! ನಯನತಾರಾ, ರುಕ್ಮಿಣಿ ವಸಂತ್ ಮುಂತಾದ ಸ್ಟಾರ್ ನಟಿಯರು ‘ಟಾಕ್ಸಿಕ್’ ಚಿತ್ರದಲ್ಲಿ ಅಭಿನಯಿಸಿದ್ದರೂ ಕೂಡ ಟೀಸರ್ನಲ್ಲಿ ಅವರು ದರ್ಶನ ನೀಡಿಲ್ಲ….