ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮೋದಿಗೆ ಟ್ರಂಪ್ ಅಭಿನಂದನೆ – Kannada News | Donald Trump congratulates PM Modi over BJP Historic win in West Bengal elections
ನವದೆಹಲಿ, ಮೇ 5: ಪಶ್ಚಿಮ ಬಂಗಾಳ (West Bengal Election Results) ರಾಜ್ಯದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಇದನ್ನು “ಐತಿಹಾಸಿಕ” ಮತ್ತು “ನಿರ್ಣಾಯಕ” ಫಲಿತಾಂಶ ಎಂದು ಕರೆದಿದ್ದಾರೆ. ಭಾರತವು ಅವರನ್ನು ನಾಯಕನನ್ನಾಗಿ ಪಡೆದಿರುವುದು ಅವರ ಅದೃಷ್ಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳಷ್ಟೇ ತಮ್ಮ ಫೋನ್ ಕರೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅವರನ್ನು ತನ್ನ…