All posts by nagaraj11081993

ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮೋದಿಗೆ ಟ್ರಂಪ್ ಅಭಿನಂದನೆ – Kannada News | Donald Trump congratulates PM Modi over BJP Historic win in West Bengal elections

ನವದೆಹಲಿ, ಮೇ 5: ಪಶ್ಚಿಮ ಬಂಗಾಳ (West Bengal Election Results) ರಾಜ್ಯದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಇದನ್ನು “ಐತಿಹಾಸಿಕ” ಮತ್ತು “ನಿರ್ಣಾಯಕ” ಫಲಿತಾಂಶ ಎಂದು ಕರೆದಿದ್ದಾರೆ. ಭಾರತವು ಅವರನ್ನು ನಾಯಕನನ್ನಾಗಿ ಪಡೆದಿರುವುದು ಅವರ ಅದೃಷ್ಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳಷ್ಟೇ ತಮ್ಮ ಫೋನ್ ಕರೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅವರನ್ನು ತನ್ನ ನಾಯಕನನ್ನಾಗಿ ಪಡೆದಿರುವುದು ಭಾರತದ ಅದೃಷ್ಟ ಎಂದು ಹೇಳಿದ್ದರು. ಇಂದು ಐತಿಹಾಸಿಕ ಮತ್ತು ನಿರ್ಣಾಯಕ ಚುನಾವಣಾ ಗೆಲುವಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ?

ರಾಜಕೀಯವಾಗಿ ಬಹಳ ಕಾಲದಿಂದ ತೃಣಮೂಲ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಪಶ್ಚಿಮ ಬಂಗಾಳದ ಮೇಲೆ ಬಿಜೆಪಿ ಮೊದಲ ಬಾರಿಗೆ ಹಿಡಿತ ಸಾಧಿಸಿದೆ. ಈ ಫಲಿತಾಂಶವು ಬ್ಯಾನರ್ಜಿಯವರ 15 ವರ್ಷಗಳ ಅಧಿಕಾರದ ಹಿಡಿತವನ್ನು ಕೊನೆಗೊಳಿಸಿದೆ. ನರೇಂದ್ರ ಮೋದಿಗೆ ಇದು ಒಂದು ಪ್ರಮುಖ ರಾಜಕೀಯ ಲಾಭವೆಂದು ಪರಿಗಣಿಸಲಾಗುತ್ತಿದೆ.

ಸೋಮವಾರ ಪ್ರಕಟವಾದ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದೆ. ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದೆ. ಪಶ್ಚಿಮ ಬಂಗಾಳದಲ್ಲಿ ತನ್ನ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಸಿದ್ಧತೆಗಳನ್ನು ನಡೆಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಜನ ಸಂಯೋಗ ಮತ್ತು ಸಂಚಾರದಿಂದ ಆಗಲಿದೆ ಈ ಎಲ್ಲ ಬದಲಾವಣೆ.. – Kannada News | Kuja Conjunction and Dasha: Major Astrological Changes, Effects and Solutions

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನು ಅಗ್ನಿತತ್ವದ ಗ್ರಹನಾಗಿದ್ದಾನೆ. ಆದರೆ ಮೀನವು ಜಲತತ್ವದ ರಾಶಿ‌ ಬೆಂಕಿ ಮತ್ತು ನೀರು ಒಂದೇ ಕಡೆ ಇದ್ದಾಗ ಏನಾಗಬಹುದು. ಇದೇ ವ್ಯಕ್ತಿಯ ಜೀವನದಲ್ಲಿ ಅತೀವವಾದ ಆಂತರಿಕ ಶಕ್ತಿ ಮತ್ತು ಭಾವನಾತ್ಮಕ ವೇಗವನ್ನು ಸೂಚಿಸುತ್ತದೆ.

​ಸ್ವ-ದ್ರೆಕ್ಕಾಣ ಮತ್ತು ತ್ರಿಂಶಾಂಶದಲ್ಲಿ ಮಂಗಳನು ತನ್ನದೇ ದ್ರೆಕ್ಕಾಣ ಮತ್ತು ತ್ರಿಂಶಾಂಶದಲ್ಲಿ ಇರುವುದು ಆತನಿಗೆ ಸ್ವಕ್ಷೇತ್ರದ ಬಲವನ್ನು ನೀಡುತ್ತದೆ. ಇದು ವ್ಯಕ್ತಿಗೆ ಅದ್ಭುತವಾದ ಧೈರ್ಯ, ತಾಂತ್ರಿಕ ಜ್ಞಾನ ಮತ್ತು ಎಂತಹ ಕಠಿಣ ಸವಾಲನ್ನೂ ಎದುರಿಸುವ ಛಲವನ್ನು ನೀಡುತ್ತದೆ.

​ರವಿ ಸ್ಥಾನ :

ಸೂರ್ಯನ ಹೋರೆಯಲ್ಲಿ ಮಂಗಳನಿರುವುದು ಆಡಳಿತಾತ್ಮಕ ಶಕ್ತಿ ಮತ್ತು ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ​ಶನಿ ನವಾಂಶ ಮತ್ತು ದ್ವಾದಶಾಂಶದಲ್ಲಿ ಮಂಗಳನ ಮೇಲೆ ಶನಿಯ ಪ್ರಭಾವವಿದೆ. ಇದು ಅಗ್ನಿ-ಮಾರುತ ಯೋಗದಂತೆ ಕೆಲಸ ಮಾಡುತ್ತದೆ. ಮಂಗಳನ ವೇಗಕ್ಕೆ ಶನಿಯು ಶಿಸ್ತು ಮತ್ತು ನಿಧಾನಗತಿಯನ್ನು ನೀಡುತ್ತಾನೆ. ಇದರಿಂದ ಕೆಲಸಗಳು ತಡವಾದರೂ, ಅವುಗಳಲ್ಲಿ ಸ್ಥಿರತೆ ಇರುತ್ತದೆ.

ಕುಜ ದಶೆಯ ಫಲ :

​ಈ ದಶೆ ನಡೆಯುತ್ತಿರುವವರಿಗೆ ಜೀವನದಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡುಬರುತ್ತವೆ. ​ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕ್ಷೇತ್ರ, ರಕ್ಷಣೆ, ಭೂಮಿ ವ್ಯವಹಾರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಅತ್ಯಂತ ಶುಭದಾಯಕ. ಶನಿಯ ಪ್ರಭಾವ ಇರುವುದರಿಂದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ​ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಧನಲಾಭಕ್ಕಿಂತ ಹೆಚ್ಚಾಗಿ, ವ್ಯವಸ್ಥಿತವಾದ ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿ ಖರೀದಿ ಅಥವಾ ಮನೆ ಕಟ್ಟುವ ಯೋಗ ಬಲವಾಗಿದೆ. ಮನಸ್ಸು ಸ್ವಲ್ಪ ಚಂಚಲವಾಗಬಹುದು. ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚುತ್ತದೆ.

ಇದನ್ನೂ ಓದಿ: ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ..

​ರಾಶಿಗಳ ಶುಭ ಮತ್ತು ಅಶುಭ ಫಲ :

ಅತ್ಯಂತ ಶುಭ ಕಟಕ, ವೃಶ್ಚಿಕ, ಮೀನ ಈ ರಾಶಿಗಳಿಗೆ ಮಂಗಳನು ಯೋಗಕಾರಕ. ಭಾಗ್ಯೋದಯ, ಶತ್ರು ಜಯ ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮಧ್ಯಮ ಮೇಷ, ಸಿಂಹ, ಧನು ಸಾಹಸ ಪ್ರವೃತ್ತಿ ಹೆಚ್ಚುತ್ತದೆ. ಆದರೆ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಎಚ್ಚರಿಕೆ ಅಗತ್ಯ ಮಿಥುನ, ಕನ್ಯಾ, ಕುಂಭ ಮಾನಸಿಕ ಒತ್ತಡ, ವೃತ್ತಿಯಲ್ಲಿ ಅಡೆತಡೆಗಳು ಅಥವಾ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು. ತಾಳ್ಮೆ ಇರಲಿ.

​ಮಂಗಳ ಮತ್ತು ಶನಿಯ ಮಿಶ್ರ ಪ್ರಭಾವವಿರುವುದರಿಂದ, ಈ ದಶೆಯನ್ನು ಸುಗಮಗೊಳಿಸಲು ಮಂಗಳವಾರದಂದು ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದು ಅತ್ಯುತ್ತಮ. ಇದು ಮಂಗಳನ ಉಗ್ರತೆಯನ್ನು ಕಡಿಮೆ ಮಾಡಿ, ಶನಿಯ ಶಿಸ್ತನ್ನು ನೀಡುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:22 pm, Tue, 5 May 26

Source link

ಸಚಿವ ಜಮೀರ್ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ಯಾರು? ಸ್ಫೋಟಕ ಅಂಶ ಬಯಲಿಗೆ – Kannada News | Two Held For Theft Of Gold Jewellery Worth Rs 1.13 Cr At Minister Zameer Ahmed Khan Home in Bengaluru

ಬೆಂಗಳೂರು, (ಮೇ 05): ಉಂಡು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರಿಗೆ ದ್ರೋಹಬಗೆದಿರುವ ಘಟನೆ ನಡೆದಿದೆ. ಹೌದು…ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ವರ್ಷಗಳಿಂದ ಗುಟ್ಟಾಗಿ ನಡೆದಿದ್ದ ಕಳ್ಳತನದ ಅಸಲಿಯತ್ತು ಹೊರಬಿದ್ದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಂದರೆ 1.13 ಮೌಲ್ಯದಷ್ಟು ಚಿನ್ನವನ್ನು ಕದ್ದು ನೌಟಂಕಿ ಆಟವಾಡುತ್ತಿದ್ದವರನ್ನು ಶಿವಾಜಿನಗರ ಪೊಲೀಸರು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿದ್ದು ಬೇರೆ ಯಾರೂ ಅಲ್ಲ. ಸಚಿವರ ತಾಯಿಯ ಸಂಬಂಧಿಕರು. ಸಂಬಂಧಿ ಸೈಯದ್ ಅಮೀರ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 1 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಸಚಿವ ಜಮೀರ್ ಅಹಮ್ಮದ್ ಖಾನ್ ನಿವಾಸದಲ್ಲಿ ಚಿನ್ನಾಭರಣ ಕದ್ದಿದ್ದ ಇಬ್ಬರ ಬಂಧನ.
  • ಬೆಂಗಳೂರಿನ ಶಿವಾಜಿನಗರ ಠಾಣೆ ಪೊಲೀಸರಿಂದ ಇಬ್ಬರ ಬಂಧನ.
  • ಸೈಯದ್ ಅಮೀರ್, ಅಮಿರ್ ಅಹ್ಮದ್ ಬಂಧಿತ ಆರೋಪಿಗಳು.
  • ಟ್ರಾವೆಲ್ಸ್ ಬ್ಯುಸಿನೆಸ್​ನಲ್ಲಿ ಲಾಸ್ ಆಗಿದ್ದಕ್ಕೆ ಕಳ್ಳತನ

ಸಚಿವರ ತಾಯಿ ಸಂಬಂಧಿಯಿಂದಲೇ ಕೃತ್ಯ

ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ವರ್ಷಗಳಿಂದ ಗುಟ್ಟಾಗಿ ನಡೆದಿದ್ದ ಕಳ್ಳತನದ ಅಸಲಿಯತ್ತು ಹೊರಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮಿರ್ ಅಹ್ಮದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.​ಬಂಧಿತ ಸೈಯದ್ ಅಮೀನ್, ಸಚಿವ ಜಮೀರ್ ತಾಯಿಯ ಹತ್ತಿರದ ಸಂಬಂಧಿ. ಈ ನಂಟಿನಿಂದಾಗಿ ಸಚಿವರ ಮನೆಗೆ ಈತನಿಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬಂದು ಒಳ್ಳೆಯವನಂತೆ ನಟಿಸುತ್ತಿದ್ದ ಅಮೀನ್, ಯಾರೂ ಇಲ್ಲದ ಸಮಯ ನೋಡಿ ಕಳೆದ 2025 ರಿಂದಲೂ ಹಂತ ಹಂತವಾಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿ ಮದುವೆ ಸಮಾರಂಭಗಳು ಇದ್ದಾಗ ಆಭರಣಗಳನ್ನು ಎಗರಿಸುವುದು ಈತನ ಚಾಳಿಯಾಗಿತ್ತು.

ಇದನ್ನೂ ನೋಡಿ: ಸಚಿವ ಜಮೀರ್ ಮನೆಯಲ್ಲಿ 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ ಇಬ್ಬರ ಬಂಧನ

​ಬಂಧಿತ ಸೈಯದ್ ಅಮೀನ್, ಸಚಿವ ಜಮೀರ್ ತಾಯಿಯ ಹತ್ತಿರದ ಸಂಬಂಧಿ. ಈ ನಂಟಿನಿಂದಾಗಿ ಸಚಿವರ ಮನೆಗೆ ಈತನಿಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬಂದು ಒಳ್ಳೆಯವನಂತೆ ನಟಿಸುತ್ತಿದ್ದ ಅಮೀನ್, ಯಾರೂ ಇಲ್ಲದ ಸಮಯ ನೋಡಿ ಕಳೆದ 2025 ರಿಂದಲೂ ಹಂತ ಹಂತವಾಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿ ಮದುವೆ ಸಮಾರಂಭಗಳು ಇದ್ದಾಗ ಆಭರಣಗಳನ್ನು ಎಗರಿಸುತ್ತಿದ್ದ. ಅದರಂತೆ ಸ್ನೇಹಿತ ಅಮೀರ್ ಅಹಮದ್ ಸಹಾಯ ಪಡೆದು ಸುಮಾರು 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಬಳಿಕ ಆಭರಣಗಳನ್ನು ಅಡವಿಟ್ಟು ಹಣ ಸಹ ಪಡೆದುಕೊಂಡಿದ್ರು. ಅಷ್ಟೇ ಅಲ್ಲದೆ, ಆ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸುವ ಕನಸು ಕಂಡಿದ್ದರು.

ಕಳ್ಳತನಕ್ಕೆ ಕಾರಣವೇನು?

ಆರೋಪಿಗಳು ಟ್ರಾವೆಲ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಇವರ ವ್ಯವಹಾರ ತೀವ್ರ ನಷ್ಟಕ್ಕೆ ಸಿಲುಕಿತ್ತು. ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಮತ್ತು ಸಾಲ ತೀರಿಸಲು ಇವರು ಹಣದ ಹಪಹಪಿಯಲ್ಲಿದ್ದರು. ಎಲ್ಲಿಯೂ ಫೈನಾನ್ಸ್ ಅಥವಾ ಸಾಲ ಸಿಗದಿದ್ದಾಗ, ಅಂತಿಮವಾಗಿ ತಮ್ಮದೇ ಸಂಬಂಧಿಯಾದ ಸಚಿವರ ಮನೆಯ ಮೇಲೆ ಕಣ್ಣು ಹಾಕಿದ್ದರು. ಕಳೆದೊಂದು ವರ್ಷದಿಂದ ಹಂತ ಹಂತವಾಗ ಮನೆಯಲ್ಲಿದ್ದ ಜಮೀರ್ ತಾಯಿ ಚಿನ್ನವನ್ನು ಕಳ್ಳತನ ಮಾಡಿದ್ದು, ಬಳಿಕ ಚಿನ್ನಾಭರಣಗಳನ್ನು ಅಡವಿಟ್ಟು ಆ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ದುರಾಲೋಚನೆ ಇವರದ್ದಾಗಿತ್ತು.

ಕಳ್ಳರು ಸಿಕ್ಕಿಬಿದ್ದಿದ್ಹೇಗೆ?

ಕಳ್ಳತನ ನಡೆದ ಮೇಲೆ ಆರೋಪಿ ಅಮೀನ್ ನಡವಳಿಕೆ ಬದಲಾಗಿದ್ದು ಪೊಲೀಸರಿಗೆ ಕ್ಲ್ಯೂ ನೀಡಿತ್ತು. ಆಗಾಗ ಜಮೀರ್ ಮನೆ ಬರುತ್ತಿದ್ದವನು ಕಳ್ಳತನವಾದ ನಂತರ ಬರುವುದನ್ನೇ ನಿಲ್ಲಿಸಿದ್ದ. ಸಚಿವರ ತಾಯಿ ಫೋನ್ ಮಾಡಿದರೂ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದ.​ಯಾವಾಗ ಇವನ ಮೊಬೈಲ್ ಸ್ವಿಚ್ ಆಫ್ ಆಯ್ತೋ, ಆಗ ಪೊಲೀಸರಿಗೆ ಇವನೇ ಆರೋಪಿ ಎಂಬುದು ಗೊತ್ತಾಗಿತ್ತು. ಸದ್ಯ ಕಾರ್ಯಾಚರಣೆ ನಡೆಸಿ ಇಬ್ಬರು ಖದೀಮರ ಹೆಡೆಮುರಿ ಕಟ್ಟಿರುವ ಪೊಲೀಸರ ವಿಚಾರಣೆ ವೇಳೆ ಈತ ತನ್ನ ಪಾಪದ ಪುರಾಣವನ್ನು ಬಿಚ್ಚಿಟ್ಟಿದ್ದಾನೆ. ಸದ್ಯ ಬಂಧಿತರಿಂದ ಒಟ್ಟು 759 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ನಂಬಿಕಸ್ಥನೇ ದ್ರೋಹ ಬಗೆದ ಈ ಘಟನೆ ಸಚಿವ ಜಮೀರ್ ಅಹಮದ್ ಖಾನ್ ಕುಟುಂಬವನ್ನೇ ದಂಗಾಗಿಸಿದೆ. ಸದ್ಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Chanakya Niti: Chanakya says one should never insult these people

ಚಾಣಕ್ಯ ನೀತಿಯ (Chanakya Niti) ಪ್ರಕಾರ, ನಮ್ಮ ನಡವಳಿಕೆಯು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮಾತ್ರವಲ್ಲ, ಉತ್ತಮ ನಡವಳಿಕೆಯೂ ಮುಖ್ಯ. ನಮ್ಮ ನಡವಳಿಕೆ ಉತ್ತಮ ರೀತಿಯಲ್ಲಿ ಇದ್ದಾಗ ಮಾತ್ರ ಯಶಸ್ಸನ್ನು ಗಳಿಸಲು, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ. ಅದೇ ರೀತಿ ಅಹಂಕಾರ ಭಾವವನ್ನು ಬೆಳೆಸಿಕೊಂಡು ಈ ಕೆಲವು ಜನರನ್ನು ಅವಮಾನಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಜೀವನದಲ್ಲಿ ಯಾವೆಲ್ಲಾ ಜನರನ್ನು ತಪ್ಪಿಯೂ ಅವಮಾನಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ:

ಗುರುಗಳನ್ನು ಅವಮಾನಿಸಬೇಡಿ: ಗುರುವಿಲ್ಲದೆ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಗುರುವನ್ನು ಅಗೌರವಿಸಬಾರದು. ಗುರುವಿನ ಆದೇಶಗಳನ್ನು ಪಾಲಿಸದಿರುವುದು, ಅವರನ್ನು ಅವಮಾನಿಸುವುದು ಜೀವನದಲ್ಲಿ ಅನೇಕ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಜನರನ್ನು ಗೇಲಿ ಮಾಡುವುದರಿಂದ ಅಥವಾ ಅವರನ್ನು ಕೀಳಾಗಿ ನೋಡುವುದರಿಂದ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಪೋಷಕರು: ನಾವು ನಮ್ಮ ಹೆತ್ತವರನ್ನು ಎಂದಿಗೂ ಅವಮಾನಿಸಬಾರದು. ಆಚಾರ್ಯ ಚಾಣಕ್ಯರ ಪ್ರಕಾರ ತಂದೆ ತಾಯಿಯನ್ನು ಅವಮಾನಿಸುವುದು, ವೃದ್ಧಾಪ್ಯದಲ್ಲಿ ಅವರನ್ನು ನಿರ್ಲಕ್ಷಿಸುವುದು ಪಾಪ. ನಮ್ಮ ಹೆತ್ತವರ ಪ್ರೀತಿ ಮತ್ತು ತ್ಯಾಗಗಳನ್ನು ನಾವು ಗುರುತಿಸದಿದ್ದರೆ, ಅವರಿಗೆ ಗೌರವವನ್ನು ನೀಡದಿದ್ದರೆ ಜೀವನದಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ಚಾಣಕ್ಯ.

ಒಳ್ಳೆಯ ಜನರು: ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವ ಜನರನ್ನು ಗೌರವಿಸುವುದು ಬಹಳ ಮುಖ್ಯ. ಅಂತಹ ಒಳ್ಳೆಯ ಜನರನ್ನು ಗೌರವಿಸುವುದರಿಂದ ಮನಸ್ಸಿನ ಶಾಂತಿ ಬರುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಸದಾ ಇತರರ ಮಾತನ್ನು ಕೇಳುವುದರಿಂದ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಗೊತ್ತಾ?

ಜ್ಞಾನವನ್ನು ಹೊಂದಿರುವ ಜನರನ್ನು ಅವಮಾನಿಸಬಾರದು: ಚಾಣಕ್ಯರ ಪ್ರಕಾರ, ಅನುಭವ ಮತ್ತು ಆಳವಾದ ಜ್ಞಾನದ ಸಂಪತ್ತನ್ನು ಹೊಂದಿರುವ ಜನರ ಸಹವಾಸವು ಅಮೂಲ್ಯವಾದುದು. ಇಂತಹ ವ್ಯಕ್ತಿಗಳನ್ನು ಅವಮಾನಿಸುವುದು ಬೌದ್ಧಿಕ ಬಡತನದ ಸಂಕೇತ, ಇದರಿಂದಾಗಿ ಒಬ್ಬ ವ್ಯಕ್ತಿ ಉತ್ತಮ ಜ್ಞಾನ ಪಡೆಯಲು ಸಾಧ್ಯವಿಲ್ಲ. ಅದು ಅವನ ಅವನತಿಗೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ.. – Kannada News | Ravi in Mesha Rashi: Career, Health, and Life Predictions for All Zodiacs

​ರವಿಯು ಮೇಷ ರಾಶಿಯಲ್ಲಿದ್ದು ಈ ಕೆಳಗಿನ ವಿಭಾಗಗಳಲ್ಲಿದ್ದಾನೆ. ಇಲ್ಲಿ ರವಿ ಬಲಿಷ್ಠ. ಕುಜ ದ್ರೇಕ್ಕಾಣದಲ್ಲಿದ್ಸದು ಇದು ಸತ್ವ ಮತ್ತು ಸಾಹಸವನ್ನು ಸೂಚಿಸುತ್ತದೆ. ಚಂದ್ರ ಹೋರೆಯು ಸೌಮ್ಯತೆ ಮತ್ತು ಮಾನಸಿಕ ಬಲವನ್ನು ನೀಡುತ್ತದೆ. ​ಬುಧನ ನವಾಂಶವು ರವಿ ಸ್ವಲ್ಪ ಬೌದ್ಧಿಕ ಚತುರತೆಯನ್ನು ಪಡೆಯುತ್ತಾನೆ. ಬುಧನ ತ್ರಿಂಶಾಂಶದಿಂದವ್ಯವಹಾರ ಜ್ಞಾನ ಮತ್ತು ಸಂವಹನ ಕೌಶಲಕ್ಕೆ ಒತ್ತು ನೀಡುತ್ತದೆ. ಕುಜ ದ್ವಾದಶಾಂಶದಲ್ಲಿ ಅಧಿಕಾರ ಮತ್ತು ಶಕ್ತಿಯನ್ನು ಪುನರುಚ್ಚರಿಸುತ್ತದೆ.

ರಾಶಿಗಳ ಮೇಲೆ ಸಾಮಾನ್ಯ ಪರಿಣಾಮಗಳು

​ರವಿಯು ಮೇಷದಲ್ಲಿ ಬಲಿಷ್ಠನಾಗಿರುವುದರಿಂದ ಮತ್ತು ವರ್ಗಗಳಲ್ಲಿ ಮಂಗಳ ಹಾಗೂ ಬುಧನ ಪ್ರಭಾವ ಹೆಚ್ಚಿರುವುದರಿಂದ ಈ ಕೆಳಗಿನ ಫಲಗಳನ್ನು ನಿರೀಕ್ಷಿಸಬಹುದು.

​ಮೇಷ, ಸಿಂಹ, ಧನು ರಾಶಿಯಲ್ಲಿ ಇದ್ದರೆ ಅದ್ಭುತ ಆತ್ಮವಿಶ್ವಾಸ, ಆಡಳಿತಾತ್ಮಕ ಜಯ ಮತ್ತು ಸಮಾಜದಲ್ಲಿ ಗೌರವ ಪ್ರಾಪ್ತಿ. ​ಮಿಥುನ, ತುಲಾ, ಕುಂಭದಲ್ಲಿ ರವಿ ಇದ್ದರೆ ಹೊಸ ಯೋಜನೆಗಳ ಆರಂಭ, ಉತ್ತಮ ಸಂವಹನ ಮತ್ತು ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು. ​ವೃಷಭ, ಕನ್ಯಾ, ಮಕರದಲ್ಲಿ ರವಿ ಇದ್ದರೆ ವೃತ್ತಿಯಲ್ಲಿ ಪ್ರಗತಿ, ಆದರೆ ಕೆಲಸದ ಒತ್ತಡ ಮತ್ತು ಪಿತ್ತ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.​ಕರ್ಕಾಟಕ, ವೃಶ್ಚಿಕ, ಮೀನದಲ್ಲಿ ರವಿ ಇದ್ದರೆ ಮಿಶ್ರಫಲ. ಆಸ್ತಿ ವಿಚಾರದಲ್ಲಿ ಲಾಭವಾದರೂ, ಮಾನಸಿಕ ಅಶಾಂತಿ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

​ರವಿ ದಶೆಯ ಶುಭ-ಅಶುಭ ಫಲಗಳು

​ರವಿಯ ದಶೆಯು ವ್ಯಕ್ತಿಯ ಜಾತಕದಲ್ಲಿ ರವಿಯ ಸ್ಥಾನ ಮತ್ತು ಲಗ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಶುಭ ಫಲ :

​ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ಲಗ್ನದವರಿಗೆ ರವಿ ದಶೆಯು ಸಾಮಾನ್ಯವಾಗಿ ಶುಭ ಫಲ ನೀಡುತ್ತದೆ. ಸರ್ಕಾರಿ ಉದ್ಯೋಗ, ರಾಜಕೀಯ ಲಾಭ, ತಂದೆಯಿಂದ ಆಸ್ತಿ ಅಥವಾ ಸಹಾಯ, ಮತ್ತು ಸಮಾಜದಲ್ಲಿ ಉನ್ನತ ಪದವಿ ಸಿಗುತ್ತದೆ.

ಅಶುಭ ಫಲ :

​ವೃಷಭ, ಕನ್ಯಾ, ತುಲಾ, ಮಕರ ಮತ್ತು ಕುಂಭ ಲಗ್ನದವರಿಗೆ ರವಿ ದಶೆಯು ಸವಾಲುಗಳನ್ನು ತರಬಹುದು. ಕಣ್ಣಿನ ಸಮಸ್ಯೆ, ಉಷ್ಣ ಸಂಬಂಧಿ ಕಾಯಿಲೆಗಳು, ಮೇಲಧಿಕಾರಿಗಳೊಂದಿಗೆ ಸಂಘರ್ಷ ಅಥವಾ ಅನಗತ್ಯ ಅಲೆದಾಟ ಉಂಟಾಗಬಹುದು.

ಇದನ್ನೂ ಓದಿ: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ

​ಮಿಶ್ರ ಫಲ :

​ಮಿಥುನ ಲಗ್ನದವರಿಗೆ ರವಿ ದಶೆಯು ಪ್ರಯತ್ನಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ಸಣ್ಣಪುಟ್ಟ ಅಡೆತಡೆಗಳ ನಂತರ ಯಶಸ್ಸು ಸಿಗುತ್ತದೆ.

​ಜಾತಕದಲ್ಲಿ ರವಿಯು 6, 8 ಅಥವಾ 12ನೇ ಮನೆಯಲ್ಲಿದ್ದರೆ ಅಥವಾ ಶನಿಯ ದೃಷ್ಟಿಯಲ್ಲಿದ್ದರೆ, ಶುಭ ಲಗ್ನವಾಗಿದ್ದರೂ ಮಿಶ್ರ ಫಲಗಳನ್ನೇ ನಿರೀಕ್ಷಿಸಬೇಕಾಗುತ್ತದೆ.

ಸೂರ್ಯನು ಇಲ್ಲಿ ಬುಧನ ನವಾಂಶ ಮತ್ತು ತ್ರಿಂಶಾಂಶದಲ್ಲಿರುವುದರಿಂದ, ಈ ದಶೆಯಲ್ಲಿ ವ್ಯಕ್ತಿಯು ಕೇವಲ ದೈಹಿಕ ಬಲಕ್ಕಿಂತ ಹೆಚ್ಚಾಗಿ ತನ್ನ ಬುದ್ಧಿವಂತಿಕೆಯನ್ನು ಬಳಸಿ ಕಾರ್ಯಸಿದ್ಧಿ ಮಾಡಿಕೊಳ್ಳುತ್ತಾನೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:56 pm, Tue, 5 May 26

Source link

ಮೇ 13ಕ್ಕೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್​ಗೆ ಪ್ರಧಾನಿ ಮೋದಿ ಭೇಟಿ, ಹಲವು ಯೋಜನೆಗಳಿಗೆ ಚಾಲನೆ – Kannada News | PM Narendra Modi to visit Bengaluru Art of Living International Centre on May 13 Sri Sri Ravi Shankar

ಬೆಂಗಳೂರು, ಮೇ 5: ಮೇ ತಿಂಗಳಲ್ಲಿ ಆರ್ಟ್ ಆಫ್ ಲಿವಿಂಗ್ (Art Of Living) ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂಸ್ಥೆಯ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಆಚರಣೆಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೇ 13ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಗುರುದೇವ ರವಿಶಂಕರ್ ಅವರೊಂದಿಗೆ ಪ್ರಧಾನಿ ಮೋದಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ ವಿಶ್ವ ಸಾಂಸ್ಕೃತಿಕ ಉತ್ಸವದಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಚಾರ ಮಾಡುವಲ್ಲಿ ಶ್ರೀ ಶ್ರೀ ರವಿಶಂಕರ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಈ ಭೇಟಿ ಕೇವಲ ಶುಭಾಶಯಗಳಿಗೆ ಸೀಮಿತವಾಗಿರದೆ, ಸಮುದಾಯದ ಯೋಗಕ್ಷೇಮಕ್ಕಾಗಿ ವಿನ್ಯಾಸಗೊಳಿಸಲಾದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ

ಈ 45 ವರ್ಷಗಳ ಪ್ರಯಾಣದಲ್ಲಿ ಆರ್ಟ್ ಆಫ್ ಲಿವಿಂಗ್ ಯೋಗ ಮತ್ತು ಧ್ಯಾನದಲ್ಲಿ ಮಾತ್ರವಲ್ಲದೆ ನದಿ ಪುನರುಜ್ಜೀವನ, ಶೈಕ್ಷಣಿಕ ಅಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿಯೂ ಗಮನಾರ್ಹ ಬದಲಾವಣೆಯನ್ನು ತಂದಿದೆ. 150ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿರುವ ಈ ಸಂಸ್ಥೆಯು ಮಾನವೀಯ ಮೌಲ್ಯಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pisces May 2026 Horoscope: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ – Kannada News | Pisces May 2026 Horoscope: Financial Gains and Strategic Investments, Avoid Risks

ಮೇ ತಿಂಗಳಲ್ಲಿ ಮೀನ ರಾಶಿಗೆ ಅಂದರೆ ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ ಈ ಮೂರು ನಕ್ಷತ್ರಗಳಿಗೆ ಗುರು, ಶನಿ, ಬುಧರ ಆಧಿಪತ್ಯ ಇರಲಿದೆ. ಗುರು ಚತುರ್ಥ, ಶನಿ ಸ್ವರಾಶಿ, ಬುಧ ದ್ವಿತೀಯ ಸ್ಥಾನದಲ್ಲಿ ಇರುವರು. ನಕ್ಷತ್ರಕ್ಕೆ ತಕ್ಕಂತೆ ದಶೆಗಳಿದ್ದರೆ ಶುಭ. ಇಲ್ಲವಾದರೆ ಕೆಲವು ಕಷ್ಟಗಳನ್ನು ಎದುರಿಸಬೇಕಾಗುವುದು.

ಆರ್ಥಿಕ ಮತ್ತು ಹೂಡಿಕೆ :

​ದ್ವಿತೀಯ ಭಾವವಾದ ಮೇಷದಲ್ಲಿ ರವಿ ಮತ್ತು ಬುಧರ ಸಂಯೋಗವಿರುವುದರಿಂದ ಆರ್ಥಿಕವಾಗಿ ಈ ತಿಂಗಳು ಬಲಿಷ್ಠವಾಗಿದೆ. ಸ್ಥಿರ ಆಸ್ತಿಯಿಂದ ಅಥವಾ ಬಾಕಿ ಉಳಿದಿದ್ದ ಹಣ ಕೈ ಸೇರುವ ಸಾಧ್ಯತೆ ಇದೆ. ದೀರ್ಘಕಾಲದ ಹೂಡಿಕೆಗೆ ಇದು ಸಕಾಲ. ಆದರೆ, ಮೀನ ರಾಶಿಯಲ್ಲಿ ಶನಿ ಇರುವುದರಿಂದ ಸಟ್ಟಾ ವ್ಯಾಪಾರ ಅಥವಾ ಶಾರ್ಟ್-ಟರ್ಮ್ ಟ್ರೇಡಿಂಗ್‌ನಲ್ಲಿ ಅತಿಯಾದ ಸಾಹಸ ಬೇಡ. ಸುಖ ಸ್ಥಾನದಲ್ಲಿರುವ ಗುರುವಿನಿಂದಾಗಿ ಮನೆ ರಿಪೇರಿ ಅಥವಾ ಶುಭ ಕಾರ್ಯಗಳಿಗಾಗಿ ಹಣ ವ್ಯಯವಾಗಬಹುದು.

ಕೃಷಿ ಮತ್ತು ಭೂಮಿ :

​ಕೃಷಿಕರಿಗೆ ಈ ತಿಂಗಳು ಅತ್ಯಂತ ಪ್ರಶಸ್ತವಾಗಿದೆ. ಬೆಳೆ ನಿರ್ವಹಣೆ: ನಾಲ್ಕನೇ ಮನೆಯಲ್ಲಿರುವ ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲಿರುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾರ್ಯಗಳು ಯಶಸ್ವಿಯಾಗುತ್ತವೆ. ತೋಟಗಾರಿಕೆ ಬೆಳೆಗಳು, ವಿಶೇಷವಾಗಿ ದೀರ್ಘಕಾಲದ ಇಳುವರಿ ನೀಡುವ ಬೆಳೆಗಳ ಮೇಲೆ ಗಮನಹರಿಸಿ. ಕೃಷಿಯಲ್ಲಿ ಹೊಸ ಯಂತ್ರೋಪಕರಣಗಳ ಖರೀದಿ ಅಥವಾ ಆಧುನಿಕ ಪದ್ಧತಿ ಅಳವಡಿಕೆಗೆ ಈ ಸಮಯ ಪೂರಕವಾಗಿದೆ.

ವೃತ್ತಿ, ಸ್ವ-ಉದ್ಯೋಗ ಮತ್ತು ಅಧಿಕಾರ :

​ಸ್ವ-ಉದ್ಯೋಗ: ಸ್ವಂತ ಉದ್ಯೋಗ ಮಾಡುವವರಿಗೆ ಶುಕ್ರನ ಬಲ ಇರುವುದರಿಂದ ನಿಮ್ಮ ಉತ್ಪನ್ನಗಳಿಗೆ ಅಥವಾ ಸೇವೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಟಿಯಾಗಲಿದೆ. ಕಚೇರಿಯಲ್ಲಿ ಅಥವಾ ಸಂಘ-ಸಂಸ್ಥೆಗಳಲ್ಲಿ ನಿಮಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ, ಆದರೆ ಎರಡನೇ ಮನೆಯ ರವಿಯು ಮಾತಿನಲ್ಲಿ ಅಹಂಕಾರ ತರಬಹುದು, ಎಚ್ಚರಿಕೆ ಇರಲಿ. ಹಳೆ ಬಾಕಿ ವಸೂಲಿಯಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯ.

ಪ್ರೇಮ, ವಿವಾಹ ಮತ್ತು ಕೌಟುಂಬಿಕ :

​ಏಳನೇ ಮನೆಯ ಮೇಲೆ ಶನಿಯ ದೃಷ್ಟಿ ಇರುವುದರಿಂದ ವಿವಾಹದ ಮಾತುಕತೆಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಬರಬಹುದು. ತಾಳ್ಮೆಯಿಂದ ವಿಷಯಗಳನ್ನು ನಿಭಾಯಿಸಿ. ಪ್ರೇಮಿಗಳ ನಡುವೆ ಸಂವಹನದ ಕೊರತೆ ಉಂಟಾಗದಂತೆ ನೋಡಿಕೊಳ್ಳಿ. ಮೂರನೇ ಮನೆಯ ಶುಕ್ರನು ಪ್ರೇಮ ಜೀವನಕ್ಕೆ ಹೊಸ ಆಯಾಮ ನೀಡಲಿದ್ದಾನೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸೂಚನೆ ಇದೆ.

ಇದನ್ನೂ ಓದಿ: ಮೇ ತಿಂಗಳಿನಲ್ಲಿ ಈ ರಾಶಿಗೆ ಸಾಡೇ ಸಾಥ್ ಕೊನೆಯ ಕಾಲ: ನಿಮ್ಮೆಲ್ಲ ಕಷ್ಟದ ದಿನಗಳು ಇಲ್ಲಿಗೆ ಅಂತ್ಯ

​ಹವ್ಯಾಸ, ಕಲೆ ಮತ್ತು ಪರಿಶ್ರಮ :

ಬರವಣಿಗೆ, ಸಂಗೀತ ಅಥವಾ ಕರಕುಶಲ ಕಲೆಗಳಲ್ಲಿ ಇರುವವರಿಗೆ ಈ ತಿಂಗಳು ಸೃಜನಶೀಲತೆ ಉತ್ತುಂಗದಲ್ಲಿರುತ್ತದೆ. ನಿಮ್ಮ ರಾಶಿಯಲ್ಲಿರುವ ಕುಜ ಮತ್ತು ಶನಿ ನಿಮ್ಮನ್ನು ಸದಾ ಕಾರ್ಯನಿರತರನ್ನಾಗಿ ಮಾಡುತ್ತಾರೆ. ಕೆಲಸದ ಒತ್ತಡ ಹೆಚ್ಚಿದ್ದರೂ, ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರುತ್ತದೆ. ದೈಹಿಕ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

​ಅಶುಭ ಫಲ :

​ರಾಶಿಯಲ್ಲಿ ಕುಜ ಇರುವುದರಿಂದ ಸಣ್ಣ ವಿಷಯಕ್ಕೂ ಸಿಡಿಮಿಡಿಗೊಳ್ಳುವ ಸಾಧ್ಯತೆ ಇರುತ್ತದೆ. ವಾದ-ವಿವಾದಗಳಿಂದ ದೂರವಿರಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ. ಧಾರಾಳವಾಗಿ ನೀರು ಕುಡಿಯಿರಿ.

​ಪ್ರತಿದಿನ ಶಿವಾಯನನ್ನು ಜಪಿಸಿ, ​ಗುರುವಾರ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸುವುದು ಮಾನಸಿಕ ಶಾಂತಿಗೆ ಸಹಕಾರಿ. ​ಈ ತಿಂಗಳು ನಿಮ್ಮ ಸಂಕಲ್ಪ ಬಲದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಗ್ರಹಗಳ ಅನುಕೂಲತೆಯನ್ನು ಬಳಸಿಕೊಂಡು ಯೋಜನಾಬದ್ಧವಾಗಿ ಮುನ್ನಡೆಯಿರಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ – Kannada News | Thalapathy Vijay movies famous producer RB Choudary passes away in Udaipur Car Accident

ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ (RB Choudary) (68) ಅವರು ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ನಿಧನರಾಗಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ಉದಯಪುರಕ್ಕೆ ತೆರಳಿದ್ದ ಚೌಧರಿ ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ (Car Accident) ವೇಳೆ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

1. ರಸ್ತೆ ಅಪಘಾತದಲ್ಲಿ ನಿಧನರಾದ ನಿರ್ಮಾಪಕ ಆರ್.ಬಿ. ಚೌಧರಿ.

2. ಹಲವು ಮಂದಿ ಹೊಸಬರಿಗೆ ಅವಕಾಶ ಕೊಟ್ಟಿದ್ದ ನಿರ್ಮಾಪಕ.

3. ‘ಸೂಪರ್ ಗುಡ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯ ಯಶಸ್ಸಿನ ಸಾರಥಿ.

‘ಸೂಪರ್ ಗುಡ್ ಫಿಲ್ಮ್ಸ್’ ಬ್ಯಾನರ್ ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದ ಆರ್.ಬಿ. ಚೌಧರಿ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. 1980ರ ದಶಕದ ಕೊನೆಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು, ಮೂರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಅವರ ಸಿನಿಮಾ ಬದುಕಿನಲ್ಲಿ ಬಹುದೊಡ್ಡ ತಿರುವು ನೀಡಿದ ‘ಪೂವೆ ಉನಕ್ಕಾಗ’ ಚಿತ್ರವನ್ನು ನಿರ್ಮಿಸಿದ್ದು ಇದೇ ಆರ್.ಬಿ. ಚೌಧರಿ. ಅಷ್ಟೇ ಅಲ್ಲದೆ, ವಿಜಯ್ ಅಭಿನಯದ ‘ಜಿಲ್ಲಾ’, ‘ತಿರುಪ್ಪಾಚಿ’, ‘ಶಾಜಹಾನ್’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಶರತ್ ಕುಮಾರ್, ಮಮ್ಮುಟ್ಟಿ ಮುಂತಾದ ಸ್ಟಾರ್ ನಟರ ಸಿನಿಮಾಗಳಿಗೂ ಆರ್.ಬಿ. ಚೌಧರಿ ಬಂಡವಾಳ ಹೂಡಿದ್ದರು.

ನಟ ಚಿರಂಜೀವಿ ಸಂತಾಪ:

ಆರ್.ಬಿ. ಚೌಧರಿ ಅವರು ಕೇವಲ ಸ್ಟಾರ್ ನಟರಿಗಷ್ಟೇ ಅಲ್ಲದೆ, ಹತ್ತಾರು ಹೊಸ ನಿರ್ದೇಶಕರಿಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ನೀಡುವ ಮೂಲಕ ಅವರ ವೃತ್ತಿಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದ್ದರು. ಇವರಿಗೆ ಸುರೇಶ್, ಜೀವನ್, ಜಿತನ್ ರಮೇಶ್ ಮತ್ತು ಜೀವಾ ಎಂಬ ನಾಲ್ವರು ಗಂಡು ಮಕ್ಕಳಿದ್ದಾರೆ. ಜೀವಾ ಅವರು ತಮಿಳು ಚಿತ್ರರಂಗದಲ್ಲಿ ಮುಂಚೂಣಿ ನಟರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು

ಚೌಧರಿ ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿಟ್​ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ – Kannada News | Rohit Sharma’s Heroic Return Earns Special Gift from Nita Ambani

IPL 2026: ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಐತಿಹಾಸಿಕ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಹಿಟ್​ಮ್ಯಾನ್ ಆರ್ಭಟ:

ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಕಳೆದ ಐದು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಈ ಪಂದ್ಯದ ಮೂಲಕ ಮೈದಾನಕ್ಕೆ ಮರಳಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದ ರೋಹಿತ್, ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ರಯಾನ್ ರಿಕೆಲ್ಟನ್ (32 ಎಸೆತಗಳಲ್ಲಿ 83 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 143 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಮುಂಬೈ ತಂಡ 229 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಲು ನೆರವಾದರು.

‘ಬೆಸ್ಟ್ ಪಾರ್ಟ್‌ನರ್‌ಶಿಪ್’ ಗಾಗಲ್ಸ್!

ಮುಂಬೈ ಇಂಡಿಯನ್ಸ್ ತಂಡವು ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪದಕಗಳನ್ನು ನೀಡುವುದು ವಾಡಿಕೆ. ಆದರೆ, 2026ರ ಈ ಸೀಸನ್‌ನಲ್ಲಿ ನೀತಾ ಅಂಬಾನಿ ಅವರು ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ.

ಜಯದ ಸಂಭ್ರಮದಲ್ಲಿದ್ದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ನೀತಾ ಅಂಬಾನಿ, ಪಂದ್ಯದ ಶ್ರೇಷ್ಠ ಜೊತೆಯಾಟವಾಡಿದ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಅವರಿಗೆ ಸ್ಟೈಲಿಶ್ ಆದ “ಬೆಸ್ಟ್ ಪಾರ್ಟ್‌ನರ್‌ಶಿಪ್ ಗಾಗಲ್ಸ್” (ಕನ್ನಡಕ) ಉಡುಗೊರೆಯಾಗಿ ನೀಡಿದರು. ರೋಹಿತ್ ಶರ್ಮಾ ನಗುತ್ತಲೇ ಈ ಕಲರ್ ಫುಲ್ ಕನ್ನಡಕವನ್ನು ಧರಿಸಿದಾಗ ಇಡೀ ಡ್ರೆಸ್ಸಿಂಗ್ ರೂಮ್ ಚಪ್ಪಾಳೆಯಿಂದ ಮೊಳಗಿತು.

ಪಂದ್ಯದ ಮುಖ್ಯಾಂಶಗಳು:

  • ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 228 ರನ್​
  • ಮುಂಬೈ ಇಂಡಿಯನ್ಸ್​ 18.4 ಓವರ್​​ಗಳಲ್ಲಿ 229 ರನ್​.
  • ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ.

ಇದನ್ನೂ ಓದಿ: DC vs CSK IPL 2026 Live Score: ಕ್ಯಾಪಿಟಲ್ಸ್​​ಗೆ ಸೂಪರ್ ಕಿಂಗ್ಸ್​ ಸವಾಲು

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಸದ್ಯ ಅಂಕ ಪಟ್ಟಿಯಲ್ಲಿ 9ನೇ  ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಮುಂದಿನ 4 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.

Source link

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸಲು ಮೋದಿ ಸಂಪುಟ ಅನುಮೋದನೆ – Kannada News | Modi Cabinet approves proposal to increase number of Supreme Court judges from 34 to 38

ನವದೆಹಲಿ, ಮೇ 5: ಕೇಂದ್ರ ಸಚಿವ ಸಂಪುಟ ಇಂದು ಸುಪ್ರೀಂ ಕೋರ್ಟ್‌ನ (Supreme Court) ನ್ಯಾಯಾಧೀಶರ ಬಲವನ್ನು ಪ್ರಸ್ತುತ ಇರುವ 34ರಿಂದ 38ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಸದ್ಯಕ್ಕೆ, ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೇರಿದಂತೆ 34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿದೆ. ನ್ಯಾಯಾಧೀಶರ ಸಂಖ್ಯೆಯಲ್ಲಿನ ಹೆಚ್ಚಳವು ಸುಪ್ರೀಂ ಕೋರ್ಟ್ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ, ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ಪ್ರಸ್ತಾವನೆಯನ್ನು ಜಾರಿಗೆ ತರಲು, ಸಂಸತ್ತಿನಲ್ಲಿ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಅನ್ನು ಪರಿಚಯಿಸಲು ಸಂಪುಟ ಅನುಮೋದನೆ ನೀಡಿದೆ. ನ್ಯಾಯಾಂಗ ವ್ಯವಸ್ಥೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ, 1956 ಅನ್ನು ತಿದ್ದುಪಡಿ ಮಾಡಲು ಮಸೂದೆ ಪ್ರಸ್ತಾಪಿಸುತ್ತದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

1956 ರಲ್ಲಿ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆಯನ್ನು ಜಾರಿಗೆ ತಂದಾಗ, ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಅನುಮೋದಿತ ಬಲವನ್ನು 10 ನ್ಯಾಯಾಧೀಶರಿಗೆ ನಿಗದಿಪಡಿಸಲಾಯಿತು. ಇದನ್ನು 1960ರಲ್ಲಿ 13ಕ್ಕೆ ಮತ್ತು 1977 ರಲ್ಲಿ 17ಕ್ಕೆ ಹೆಚ್ಚಿಸಲಾಯಿತು. ಅದಾದ ನಂತರ 1986ರಲ್ಲಿ 25ಕ್ಕೆ ಮತ್ತು 2008ರಲ್ಲಿ 30ಕ್ಕೆ ಏರಿಸಲಾಯಿತು. ಕೊನೆಯ ಬಾರಿ 2019 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಆ ವೇಳೆ ಸಂಸತ್ತು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸೇರಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 31ರಿಂದ 34ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link