Chanakya Niti: ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Chanakya Niti: Chanakya says one should never insult these people

ಚಾಣಕ್ಯ ನೀತಿಯ (Chanakya Niti) ಪ್ರಕಾರ, ನಮ್ಮ ನಡವಳಿಕೆಯು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮಾತ್ರವಲ್ಲ, ಉತ್ತಮ ನಡವಳಿಕೆಯೂ ಮುಖ್ಯ. ನಮ್ಮ ನಡವಳಿಕೆ ಉತ್ತಮ ರೀತಿಯಲ್ಲಿ ಇದ್ದಾಗ ಮಾತ್ರ ಯಶಸ್ಸನ್ನು ಗಳಿಸಲು, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ. ಅದೇ ರೀತಿ ಅಹಂಕಾರ ಭಾವವನ್ನು ಬೆಳೆಸಿಕೊಂಡು ಈ ಕೆಲವು ಜನರನ್ನು ಅವಮಾನಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಜೀವನದಲ್ಲಿ ಯಾವೆಲ್ಲಾ ಜನರನ್ನು ತಪ್ಪಿಯೂ ಅವಮಾನಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ:

ಗುರುಗಳನ್ನು ಅವಮಾನಿಸಬೇಡಿ: ಗುರುವಿಲ್ಲದೆ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಗುರುವನ್ನು ಅಗೌರವಿಸಬಾರದು. ಗುರುವಿನ ಆದೇಶಗಳನ್ನು ಪಾಲಿಸದಿರುವುದು, ಅವರನ್ನು ಅವಮಾನಿಸುವುದು ಜೀವನದಲ್ಲಿ ಅನೇಕ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಜನರನ್ನು ಗೇಲಿ ಮಾಡುವುದರಿಂದ ಅಥವಾ ಅವರನ್ನು ಕೀಳಾಗಿ ನೋಡುವುದರಿಂದ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಪೋಷಕರು: ನಾವು ನಮ್ಮ ಹೆತ್ತವರನ್ನು ಎಂದಿಗೂ ಅವಮಾನಿಸಬಾರದು. ಆಚಾರ್ಯ ಚಾಣಕ್ಯರ ಪ್ರಕಾರ ತಂದೆ ತಾಯಿಯನ್ನು ಅವಮಾನಿಸುವುದು, ವೃದ್ಧಾಪ್ಯದಲ್ಲಿ ಅವರನ್ನು ನಿರ್ಲಕ್ಷಿಸುವುದು ಪಾಪ. ನಮ್ಮ ಹೆತ್ತವರ ಪ್ರೀತಿ ಮತ್ತು ತ್ಯಾಗಗಳನ್ನು ನಾವು ಗುರುತಿಸದಿದ್ದರೆ, ಅವರಿಗೆ ಗೌರವವನ್ನು ನೀಡದಿದ್ದರೆ ಜೀವನದಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ಚಾಣಕ್ಯ.

ಒಳ್ಳೆಯ ಜನರು: ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವ ಜನರನ್ನು ಗೌರವಿಸುವುದು ಬಹಳ ಮುಖ್ಯ. ಅಂತಹ ಒಳ್ಳೆಯ ಜನರನ್ನು ಗೌರವಿಸುವುದರಿಂದ ಮನಸ್ಸಿನ ಶಾಂತಿ ಬರುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಸದಾ ಇತರರ ಮಾತನ್ನು ಕೇಳುವುದರಿಂದ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಗೊತ್ತಾ?

ಜ್ಞಾನವನ್ನು ಹೊಂದಿರುವ ಜನರನ್ನು ಅವಮಾನಿಸಬಾರದು: ಚಾಣಕ್ಯರ ಪ್ರಕಾರ, ಅನುಭವ ಮತ್ತು ಆಳವಾದ ಜ್ಞಾನದ ಸಂಪತ್ತನ್ನು ಹೊಂದಿರುವ ಜನರ ಸಹವಾಸವು ಅಮೂಲ್ಯವಾದುದು. ಇಂತಹ ವ್ಯಕ್ತಿಗಳನ್ನು ಅವಮಾನಿಸುವುದು ಬೌದ್ಧಿಕ ಬಡತನದ ಸಂಕೇತ, ಇದರಿಂದಾಗಿ ಒಬ್ಬ ವ್ಯಕ್ತಿ ಉತ್ತಮ ಜ್ಞಾನ ಪಡೆಯಲು ಸಾಧ್ಯವಿಲ್ಲ. ಅದು ಅವನ ಅವನತಿಗೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *