All posts by nagaraj11081993

Forest Dept Recruitment 2026: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗವಕಾಶ; PRO ಹುದ್ದೆಗೆ ಅರ್ಜಿ ಆಹ್ವಾನ – Kannada News | Karnataka Forest Dept PRO Recruitment 2026: Public Relations Officer Job Application

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಹುದ್ದೆಗೆ ನೇಮಕಾತಿ ಸಂಬಂಧಿಸಿದ ಮಹತ್ವದ ಅಧಿಸೂಚನೆ ಪ್ರಕಟವಾಗಿದೆ. ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು ಕೇಂದ್ರ ಕಚೇರಿಯಿಂದ ಈ ಪ್ರಕಟಣೆ ಹೊರಡಿಸಲಾಗಿದ್ದು, ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ (KFWCCF) ಅಡಿಯಲ್ಲಿ ಒಪ್ಪಂದ ಆಧಾರಿತವಾಗಿ ಎರಡು ವರ್ಷಗಳ ಪ್ರಾಥಮಿಕ ಅವಧಿಗೆ ಈ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಅನುಭವ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಮತ್ತು ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ http://kfwccf.in ಮೂಲಕ ಡೌನ್‌ಲೋಡ್ ಮಾಡಿ ಭರ್ತಿ ಸಲ್ಲಿಸಬಹುದು.

ಅರ್ಜಿಯನ್ನು ಫೆಬ್ರವರಿ 25ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ನೇಮಕಾತಿ ಪ್ರಕ್ರಿಯೆ, ಅರ್ಜಿ ವಿಧಾನ ಹಾಗೂ ಸೇವಾ ನಿಯಮಗಳ ಕುರಿತ ಹೆಚ್ಚಿನ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರಣ್ಯ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಇದು ಮಹತ್ವದ ವೃತ್ತಿ ಅವಕಾಶವಾಗಿದೆ.

ಅರ್ಜಿ ನಮೂನೆ ಹಾಗೂ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ: Notification for the post of Public Relations Officer (PRO) to KFWCCF

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳಲ್ಲಿನ ವ್ಯತ್ಯಾಸ ಗುರುತಿಸಬಲ್ಲಿರಾ – Kannada News | Optical Illusion: Find the three differences between these two pictures

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಒಗಟಿನ ಆಟಗಳೆಂದರೆ ಎಲ್ಲರಿಗೂ ಇಷ್ಟನೇ. ಹೀಗಾಗಿ ಕೆಲವರು ಬಿಡುವು ಸಿಕ್ಕಾಗ ಒಗಟನ್ನು ಬಿಡಿಸುತ್ತಾ ಮನಸ್ಸು ಮಾಡುತ್ತಾರೆ. ವೈರಲ್ ಆಗಿರುವ ಈ ಚಿತ್ರವು ನಿಮ್ಮ ದೃಷ್ಟಿ ಹಾಗೂ ಬುದ್ಧಿಗೆ ಸವಾಲು ಎಸೆಯುವುದಂತು ಖಂಡಿತ. ಈ ಎರಡು ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಕಂಡು ಹಿಡಿದ್ರೆ ನೀವು ಬುದ್ಧಿವಂತರು ಎನ್ನುವುದು ಖಚಿತವಾಗುತ್ತದೆ. ನಿಮಗೆ ಈ ಒಗಟು ಬಿಡಿಸಲು 30 ಸೆಕೆಂಡುಗಳು ಇವೆ.

ಈ ಚಿತ್ರ ನೋಡಿದಾಗ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿರುವಂತೆ ಕಾಣುತ್ತದೆ. ಪುಟ್ಟ ಹುಡುಗನು ಚೆಂಡಿನೊಂದಿಗೆ ಆಟವಾಡುತ್ತಿದ್ದಾನೆ. ಅಲ್ಲೇ ಪಕ್ಕದಲ್ಲಿ ನಾಯಿಯೂ ಇರುವುದನ್ನು ಕಾಣಬಹುದು. ಇಲ್ಲಿರುವ ಎರಡೂ ಚಿತ್ರಗಳು ದೃಶ್ಯ ಒಂದೇ ರೀತಿ ಇದೆ. ಆದರೆ ನೀವು ಈ ಎರಡು ಚಿತ್ರಗಳಲ್ಲಿ ಮೂರು ಸಣ್ಣ ವ್ಯತ್ಯಾಸಗಳಿವೆ. ನೀವು ಎಚ್ಚರಿಕೆಯಿಂದ ನೋಡಿದರೆ, ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳು ನಿಮಗೆ ಗೋಚರಿಸುತ್ತವೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚಿ

ಈ ಚಿತ್ರಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?

ಈ ಚಿತ್ರದತ್ತ ಕಣ್ಣುಹಾಯಿಸಿದರೂ ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲವೇ. ಹೌದು, ನೂರರಲ್ಲಿ ಹತ್ತು ಜನರಿಗೆ ಮಾತ್ರ ಇಂತಹ ವ್ಯತ್ಯಾಸಗಳನ್ನು ಸುಲಭವಾಗಿ ಕಂಡುಹಿಡಿಯುತ್ತಾರೆ. ಆದರೆ ಈ ಕೆಳಗಿನ ಚಿತ್ರಗಳಲ್ಲಿ ಆ ಮೂರು ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

ಕುಂಟುತ್ತಾ ಸಾಗಿದ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಕಾರ್ಯ: ನೀರು ಸಂಗ್ರಹಕ್ಕೆ ತೊಂದರೆ, ರೈತರಲ್ಲಿ ಆಂತಕ – Kannada News | Tungabhadra Dam Crest Gate Repair Slows: Farmers Fear Water Scarcity in Kalyana Karnataka

ತುಂಗಭದ್ರಾ ಡ್ಯಾಂ, ಗೇಟ್ ರಿಪೇರಿ ಕಾರ್ಯ

ಬಳ್ಳಾರಿ, ಫೆಬ್ರವರಿ 19: ತುಂಗಭದ್ರಾ ಡ್ಯಾಂ (Tungabhadra dam) ಕಲ್ಯಾಣ ಕರ್ನಾಟಕದ ಜೀವನಾಡಿ. ಈ ಡ್ಯಾಂ‌‌ನ ಕ್ರೆಸ್ಟ್ ಗೇಟ್‌ಗಳ ರಿಪೇರಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕುಂಟುತ್ತಾ ಸಾಗಿರುವ ಗೇಟ್ (crust gate)  ರಿಪೇರಿ ಕಾರ್ಯದಿಂದ ರೈತರು ಆತಂಕಗೊಂಡಿದ್ದಾರೆ. ಮೇ ತಿಂಗಳ ಅಂತ್ಯದೊಳಗೆ ಡ್ಯಾಂ ಗೇಟ್ ರಿಪೇರಿ ಕಾರ್ಯ ಮುಗಿಯದಿದ್ದರೇ ಡ್ಯಾಂ‌ನಲ್ಲಿ ನೀರು ಸಂಗ್ರಹಿಸುವುದು ಕಷ್ಟ ಎನ್ನುತ್ತಿದ್ದಾರೆ.

ಜನರು ಹಾಗೂ ರೈತರಲ್ಲಿ ಆತಂಕ

ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಡ್ಯಾಂ. ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್ ರಿಪೇರಿ ಕಾರ್ಯ ನಡೆದು ಎರಡ್ಮೂರು ತಿಂಗಳುಗಳೇ ಕಳೆದಿವೆ. ಆದರೆ ಈವರಗೆ ಕೇವಲ ಒಂದೇ ಒಂದು ಗೇಟ್ ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಕುಂಟುತ್ತಾ ಸಾಗಿರುವ ಟಬಿ ಡ್ಯಾಂ ಗೇಟ್ ರಿಪೇರಿ ಕಾರ್ಯದಿಂದ ಜನರು ಹಾಗೂ ರೈತರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ 19 ನೇ ಕ್ರೆಸ್ಟ್ ಗೇಟ್ ಕಳೆದ ವರ್ಷ ನೀರಿನ ರಭಸಕ್ಕೆ ಕಿತ್ತುಹೋಗಿತ್ತು. ಆಗ ನೂರಾರು ಟಿಎಮ್‌ಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವಂತಾಗಿತ್ತು. ಹೀಗಾಗಿ ಎಚ್ಚೆತ್ತ ಸರ್ಕಾರ ಈ ವರ್ಷ 33 ಗೇಟ್ ಹೊಂದಿರುವ ಟಿಬಿ ಡ್ಯಾಂನ ಎಲ್ಲಾ ಗೇಟ್ ರಿಪೇರಿ ಕಾರ್ಯಕ್ಕೆ ಮುಂದಾಗಿತ್ತು. ಸರ್ಕಾರ ತೆಗೆದುಕೊಂಡಿರುವ ಕಾರ್ಯ ಉತ್ತಮವಾಗಿದ್ದು, ಆದರೆ ರಿಪೇರಿ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಶೀಘ್ರ ಗೇಟ್ ರಿಪೇರಿ ಕಾರ್ಯ ಪೂರ್ಣಗೊಳಿಸಬೇಕು ಅಂತಾ ಸ್ಥಳೀಯರಾದ ಸಂತೋಷ್​​ ಎಂಬುವವರು ಒತ್ತಾಯಿಸಿದ್ದಾರೆ.

ನೀರು ಸಂಗ್ರಹಕ್ಕೆ ತೊಂದರೆ

ಇನ್ನು ತುಂಗಭದ್ರಾ ಡ್ಯಾಂನಿಂದ ವಿಜಯನಗರ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ಜೀವನಾಡಿಯಾಗಿದೆ. ಕಳೆದ ವರ್ಷ 19ರಂದು ಕ್ರೆಸ್ಟ್ ಗೇಟ್ ಕಿತ್ತು ಹೋದ ಪರಿಣಾಮ ಈ ವರ್ಷ 33 ಗೇಟ್‌ಗಳನ್ನ ತೆರವುಗೊಳಿಸಿ ಹೊಸ ಗೇಟ್‌ಗಳನ್ನ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ ಆ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ. ಹೀಗಾಗಿ ರೈತರಿಗೆ, ಜನರಿಗೆ ಆತಂಕ ಶುರುವಾಗಿದೆ. ಏಕೆಂದರೆ ಮಳೆಗಾಲ ಆರಂಭ ಆಗುವ ಮೊದಲೇ ಎಲ್ಲ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳದಿದ್ದರೆ, ಮತ್ತೆ ನೀರಿನ ಸಂಗ್ರಹಕ್ಕೆ ತೊಂದರೆ ಆಗಲಿದೆ.

ಟಿಬಿ ಡ್ಯಾಂ 103 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಗೇಟ್‌ಗಳು ತಾಂತ್ರಿಕ ಸಮಸ್ಯೆ ಹಿನ್ನೆಲೆ ಕಳೆದ ವರ್ಷ ಕೇವಲ 80 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿತ್ತು. ಮತ್ತದೆ ಕೆಲಸ ಆದರೆ ಎರಡನೇ ಬೆಳೆಗೆ ನೀರಿನ ತೊಂದರೆ ಉಂಟಾಗಲಿದೆ. ಹೀಗಾಗಿ ಶೀಘ್ರದಲ್ಲೇ ಗೇಟ್ ರಿಪೇರಿ ಕಾರ್ಯ ಪೂರ್ಣಗೊಳ್ಳಬೇಕು ಎನ್ನುವುದು ಜನರ ಒತ್ತಾಯ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಒಟ್ಟು 33 ಗೇಟ್​ಗಳ ಪೈಕಿ, ಒಂದು ಗೇಟ್ ಅಳವಡಿಕೆ ಯಶಸ್ವಿ ಆಗಿದೆ. 23 ಹೊಸ ಕ್ರೆಸ್ಟ್ ಗೇಟ್​ಗಳ ನಿರ್ಮಾಣ ಪೂರ್ಣ, 15 ಹಳೆಯ ಕ್ರೆಸ್ಟ್ ಗೇಟ್​ಗಳ ತೆರವು ಕಾರ್ಯ ಮುಗಿಸಿರುವ ತಂತ್ರಜ್ಞರು, ಹೊಸಪೇಟೆ ಮತ್ತು ಗದಗಿನಲ್ಲಿ ತಲಾ ಒಂದೊಂದು ಗೇಟ್ ಸಿದ್ಧ ಪಡಿಸಲಾಗುತ್ತಿದೆ. 4 ಹಳೆಯ ಕ್ರೆಸ್ಟ್ ಗೇಟ್​ಗಳ ತೆರವು ಪ್ರಗತಿಯಲ್ಲಿದೆ. 5 ಹೊಸ ಕ್ರೆಸ್ಟ್ ಗೇಟ್​ಗಳು ಅಳವಡಿಸಲಾಗಿದೆ. 18ನೇ ಗೇಟ್​ನ ಟ್ರಯಲ್ ಆ್ಯಂಡ್​ ರನ್ ಯಶಸ್ವಿಯಾಗಿದೆ. 8 ಗೇಟ್​ಗಳ ಅಳವಡಿಕೆ ಪ್ರಗತಿಯಲ್ಲಿದೆ.

ಒಟ್ಟಿನಲ್ಲಿ ತುಂಗಭದ್ರಾ ಡ್ಯಾಂ ಕ್ರೆಸ್ಟ್ ಗೇಟ್ ರಿಪೇರಿ ಕಾರ್ಯ ಶೀಘ್ರದಲ್ಲೇ ಪೂರ್ಣಗೊಂಡು ನೂರಾರು ಟಿಎಂಸಿ ನೀರು ಸಂಗ್ರಹಿಸುವಂತಾಗಲಿದೆ. ಜೊತೆಗೆ ರೈತರ ಜಮೀನುಗಳಿಗೆ ಎರಡು ಬೆಳೆಗೂ ನೀರು ಸಿಗುವಂತಾಗಲಿ ಎನ್ನುವುದು ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರೀತಿ ಮದ್ವೆಯಾದವಳ ಶೀಲದ ಮೇಲೆಯೇ ಶಂಕೆ: ಪ್ರೀತಿಕೊಂದ ಕೊಲೆಗಾರ – Kannada News | A Husband kills wife due to doubt on character in Ramanagara

ರಾಮನಗರ, (ಫೆಬ್ರವರಿ 19): ಕೌಟುಂಬಿಕ ಕಲಹ, ಪತ್ನಿಯ ಶೀಲದ ಮೇಲೆ ಶಂಕೆ ಹಿನ್ನೆಲೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕ್ರೂರಿ ಪತಿಯೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದಲ್ಲಿ ನಡೆದಿದೆ. ಸುಫಿಯಾ ಬಾನು ಹತ್ಯೆಯಾದ ಮಹಿಳೆ. ಸಲ್ಮಾನ್(22) ಹಾಗೂ ಸುಫಿಯಾ ಬಾನು(21) ವಯಸ್ಸಿನ್ನೂ ಚಿಕ್ಕದು. ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದ ಯಾರಬ್ ನಗರ ನಿವಾಸಿಗಳು. ರಾಮನಗರದ ‌ಫಿಲೆಚೆರಿಯೊಂದರಲ್ಲಿ ಕೆಲಸ ಮಾಡುತ್ತಿರುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಹೀಗಾಗಿ ನಾಲ್ಕು ತಿಂಗಳ ಕೆಳಗೆ ಇಬ್ಬರು ವಿವಾಹವಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರೂ ಸಹ ಪತ್ನಿ ಶೀಲಶಂಕಿಸಿ ಹತ್ಯೆ ಮಾಡಿದ್ದಾನೆ.

ಪತ್ನಿ ಸುಫಿಯಾ ಬಾನು ಮನೆಯಲ್ಲಿಯೇ ಸಲ್ಮಾನ್‌ ‌ಕೂಡ ವಾಸವಾಗಿದ್ದ. ಸಲ್ಮಾನ್ ಸುಫಿಯಾಳನ್ನ ಲೈಫ್ ಲಾಂಗ್ ನಿನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ. ಆದರೆ ನಿನ್ನೆ (ಫೆ.18) ಸಂಜೆ ಇಬ್ಬರು ಫಿಲಚೇರಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಮನೆಗೆ ಬಂದ ವೇಳೆ, ಸುಫಿಯಾ ತಾಯಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಸುಫಿಯಾಳಿಗೆ ಚಾಕುವಿನಿಂದ ಭೀಕರವಾಗಿ ಚುಚ್ಚಿದ್ದಾನೆ. ತಕ್ಷಣ ‌ಆಸ್ಪತ್ರೆಗೆ ದಾಖಲಿಸಲು ಮುಂದಾಗುವರಷ್ಟರಲ್ಲಿ ಸುಫಿಯಾ ಪ್ರಾಣಪಕ್ಷಿ ಹಾರಿಹೋಗಿದೆ.

ಇದನ್ನೂ ಓದಿ: ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಪತ್ನಿಯ ಕೊಲೆ: ಚಿನ್ನಾಭರಣ ದೋಚಿ ಎಸ್ಕೇಪ್​​

ಅಂದಹಾಗೆ ಸುಫಿಯಾ ಹಾಗೂ ಆರೋಪಿ ಸಲ್ಮಾನ್, ಮದುವೆ ಆಗುವುದಕ್ಕೂ ಮೊದಲೇ ರಾಮನಗರದ ಫಿಲೇಚೆರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪ್ರೀತಿ ಹುಟ್ಟಿ ಇಬ್ಬರು ವಿವಾಹವಾಗಿದ್ದರು. ಇನ್ನು ಸುಫಿಯಾ ತನ್ನ ತಾಯಿ, ತಮ್ಮ ಜೊತೆ ವಾಸವಾಗಿದ್ದಳು. ವಿವಾಹವಾದ‌ ನಂತರ ಸಲ್ಮಾನ್ ಸಹಾ ಅವರೊಟ್ಟಿಗೆ ಇದ್ದ. ಇಬ್ಬರು ವಿವಾಹವಾಗಿದ್ದು ತಂದೆ ಹಾಗೂ ಸಹೋದರಿಯವರಿಗೂ ಕೂಡ ಗೊತ್ತಿರಲಿಲ್ಲ. ಇನ್ನು ಇಬ್ಬರು ಮದುವೆ ಆದ ನಂತರವೂ ಕೂಡ ಒಟ್ಟಿಗೆ ಒಂದೇ ಫಿಲೇಚೆರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಿದ್ರು ಸುಫಿಯಾ ಬಾನು ಶೀಲದ ಮೇಲೆ ಸಲ್ಮಾನ್ ಗೆ ಸಾಕಷ್ಟು ಅನುಮಾನಪಟ್ಟಿದ್ದ.

ತನ್ನ ಹೆಂಡತಿ ಬೇರೊಬ್ಬರ ಜೊತೆ ಅನೈತಿಕ ಸಂಬಂಧವೊಂದಿದ್ದಾಳೆ ಎಂದು ಕೆಲ ದಿನಗಳಿಂದ ಸುಫಿಯಾ ಜೊತೆ ಸಲ್ಮಾನ್ ಗಲಾಟೆ ಮಾಡುತ್ತಿದ್ದನಂತೆ. ನಿನ್ನೆ ಸಹ ಸುಫಿಯಾ ಜೊತೆ ಗಲಾಟೆ ತೆಗೆದು ಆನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿ ಸಲ್ಮಾನ್ ಕಠಿಣ ಶಿಕ್ಷೆ ‌ಕೊಡಿಸಬೇಕು ಎಂದು ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇನ್ನು ತನ್ನ ಪತ್ನಿಯನ್ನ ಕೊಲೆಗೈದ ನಂತರ ಆರೋಪಿ ಸಲ್ಮಾನ್ ತಾನಾಗಿಯೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರದ ಪುರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

Source link

‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್ – Kannada News | Pinarayi Vijayan calls The Kerala Story 2 movie as communal agenda

2023ರಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಈಗ ಆ ಸಿನಿಮಾದ ಸೀಕ್ವೆಲ್ ಬರುತ್ತಿದೆ. ಈ ಬಾರಿ ಕೂಡ ವಿವಾದಗಳು ಶುರುವಾಗಿವೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ. ‘ದಿ ಕೇರಳ ಸ್ಟೋರಿ 2’ (The Kerala Story 2) ಕುರಿತಂತೆ ಈಗಾಗಲೇ ಪರ-ವಿರೋಧದ ಚರ್ಚೆ ಶುರು ಆಗಿದೆ.

‘ದ್ವೇಷ ಹುಟ್ಟಿಸುವ ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗದ ಬಿಡುಗಡೆಯ ಕುರಿತಾದ ವರದಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಮೊದಲ ಭಾಗದಲ್ಲಿ ಕೋಮುವಾದಿ ಅಜೆಂಡಾ ಮತ್ತು ಸ್ಪಷ್ಟ ಸುಳ್ಳುಗಳನ್ನು ಈಗಾಗಲೇ ನೋಡಿರುವ ಕೇರಳ ಜನತೆ, ನಮ್ಮ ಜಾತ್ಯತೀತ ರಚನೆಯನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಈ ಸಿನಿಮಾವನ್ನು ಮತ್ತೊಮ್ಮೆ ತಿರಸ್ಕರಿಸುತ್ತಾರೆ’ ಎಂದು ಪಿಣರಾಯಿ ವಿಜಯನ್ ಅವರು ಟ್ವೀಟ್ ಮಾಡಿದ್ದಾರೆ.

‘ಕೋಮು ವೈಷಮ್ಯವನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಕಲ್ಪಿತ ನಿರೂಪಣೆಗಳು ಹೇಗೆ ಮುಕ್ತವಾಗಿ ಅಂಗೀಕರಿಸಲ್ಪಡುತ್ತವೆ ಮತ್ತು ಕಲೆಯ ವಿಮರ್ಶಾತ್ಮಕ ಅಭಿವ್ಯಕ್ತಿಗಳು ಬಾಯಿ ಮುಚ್ಚಲ್ಪಡುತ್ತವೆ ಎಂಬುದು ಆಘಾತಕಾರಿ. ನಮ್ಮ ಸಾಮರಸ್ಯದ ಭೂಮಿಯನ್ನು ಭಯೋತ್ಪಾದನೆಯ ಕೇಂದ್ರದಂತೆ ಚಿತ್ರಿಸುವ ಈ ಪ್ರಯತ್ನಗಳ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲಬೇಕು. ಸತ್ಯ ಯಾವಾಗಲೂ ಗೆಲ್ಲುತ್ತದೆ’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಸಿನಿಮಾದ ಕಥೆ ಏನು ಎಂಬುದರ ಝಲಕ್ ಈ ಟ್ರೇಲರ್​​ನಲ್ಲಿ ಕಾಣಿಸಿದೆ. ಹಿಂದೂ ಹುಡುಗಿಯರನ್ನು ಮೋಸದಿಂದ ಪ್ರೀತಿ, ಮದುವೆಯ ಬಲೆಗೆ ಬೀಳಿಸಿ ಹೇಗೆ ಮತಾಂತರ ಮಾಡಲಾಗುತ್ತದೆ ಮತ್ತು ಹಿಂಸೆ ನೀಡಲಾಗುತ್ತದೆ ಎಂಬುದನ್ನು ಈ ಟ್ರೇಲರ್​​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಹಿಂದೂ ಯುವತಿಯರೇ ಟಾರ್ಗೆಟ್: ಶಾಕಿಂಗ್ ಆಗಿದೆ ‘ದಿ ಕೇರಳ ಸ್ಟೋರಿ 2’ ಟ್ರೇಲರ್

ಫೆಬ್ರವರಿ 27ಕ್ಕೆ ‘ದಿ ಕೇರಳ ಸ್ಟೋರಿ 2’ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಕಾಮಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಊಜಾ, ಉಲ್ಕಾ ಗುಪ್ತಾ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಟ್ರೇಲರ್ ಈಗಾಗಲೇ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

11 ವರ್ಷಗಳ ಬಳಿಕ ಫೈನಲ್​ಗೇರಿದ ಕರ್ನಾಟಕ – Kannada News | Karnataka enters the Ranji Trophy final11

ಬರೋಬ್ಬರಿ 11 ವರ್ಷಗಳ ಬಳಿಕ ಕರ್ನಾಟಕ ತಂಡ ರಣಜಿ ಟೂರ್ನಿಯ ಫೈನಲ್​ಗೇರಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ್ ಮತ್ತು ಕರ್ನಾಟಕ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ ಮೊದಲ ಇನಿಂಗ್ಸ್​ನಲ್ಲಿನ 503 ರನ್​ಗಳ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ್ ತಂಡದ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆಎಲ್ ರಾಹುಲ್ (141) ಶತಕ ಬಾರಿಸಿದರೆ,  ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ 135 ರನ್​ಗಳ ಇನಿಂಗ್ಸ್ ಆಡಿದರು. ಹಾಗೆಯೇ ಕೃತಿಕ್ ಕೃಷ್ಣ 60 ರನ್​ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ವಿದ್ಯಾಧರ್ ಪಾಟೀಲ್ 54 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಕರ್ನಾಟಕ ತಂಡವು 194.4 ಓವರ್​ಗಳಲ್ಲಿ ಬರೋಬ್ಬರಿ 736 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಉತ್ತರಾಖಂಡ್ ತಂಡವು ಕೇವಲ 233 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 503 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಫಾಲೋಆನ್​ ಹೇರದ ಕರ್ನಾಟಕ:

ಮೊದಲ ಇನಿಂಗ್ಸ್​ನಲ್ಲಿ 503 ರನ್​ಗಳ ಮುನ್ನಡೆ ಪಡೆದರೂ ಕರ್ನಾಟಕ ತಂಡ ಫಾಲೋ ಹೇರದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ದ್ವಿತೀಯ ಇನಿಂಗ್ಸ್​ನಲ್ಲಿ ಕರ್ನಾಟಕ ಪರ ಕೃತಿಕ್ ಕೃಷ್ಣ 52, ಸ್ಮರಣ್ ರವಿಚಂದ್ರನ್ 127 ಹಾಗೂ ಕೆಎಲ್ ರಾಹುಲ್ 86 ರನ್ ಬಾರಿಸಿದರು. ಈ ಮೂಲಕ ಸೆಕೆಂಡ್ ಇನಿಂಗ್ಸ್​ನಲ್ಲಿ 323 ರನ್​ಗಳಿಸಿ ಆಲೌಟ್ ಆಗಿದೆ.

827 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿನ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 827 ರನ್​ಗಳ ಗುರಿ ಪಡೆದ ಉತ್ತರಾಖಂಡ್ ತಂಡವು 5ನೇ ಕೊನೆಯ ದಿನದಾಟದ ಅಂತ್ಯಕ್ಕೆ ಕಲೆಹಾಕಿದ್ದು 260 ರನ್​ಗಳು ಮಾತ್ರ. ಇದರೊಂದಿಗೆ ಕರ್ನಾಟಕ-ಉತ್ತರಾಖಂಡ್ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ.

ಅತ್ತ ಮೊದಲ ಇನಿಂಗ್ಸ್​ನಲ್ಲಿನ  ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಫೆಬ್ರವರಿ 24 ರಿಂದ ಶುರುವಾಗಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜುಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿದೆ.

ಉತ್ತರಾಖಂಡ್ ಪ್ಲೇಯಿಂಗ್ 11: ಪ್ರಶಾಂತ್ ಚೋಪ್ರಾ , ಅವನೀಶ್ ಸುಧಾ , ಭೂಪೇನ್ ಲಾಲ್ವಾನಿ , ಕುನಾಲ್ ಚಂಡೆಲಾ (ನಾಯಕ) , ಲಕ್ಷ್ಯ ರಾಜೇಶ್ ರಾಯ್‌ಚಂದಾನಿ , ಜಗದೀಶ ಸುಚಿತ್ , ಸೌರಭ್ ರಾವತ್ (ವಿಕೆಟ್ ಕೀಪರ್) , ಅಭಯ್ ನೇಗಿ , ಮಾಯಾಂಕ್ ಮಿಶ್ರಾ , ಆದಿತ್ಯ ರಾವತ್ , ಜನಮೇಜಯ್ ಜೋಶಿ.

ಇದನ್ನೂ ಓದಿ: ಈ ಒಂದು ತಪ್ಪು ಸರಿಪಡಿಸದಿದ್ದರೆ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ!

ಕರ್ನಾಟಕ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಮಾಯಾಂಕ್ ಅಗರ್ವಾಲ್ , ದೇವದತ್ ಪಡಿಕ್ಕಲ್ (ನಾಯಕ) , ಕರುಣ್ ನಾಯರ್ , ಸ್ಮರಣ್ ರವಿಚಂದ್ರನ್ , ಶ್ರೇಯಸ್ ಗೋಪಾಲ್ , ಕೃತಿಕ್ ಕೃಷ್ಣ (ವಿಕೆಟ್ ಕೀಪರ್ ), ವಿದ್ಯಾಧರ ಪಾಟೀಲ್ , ವಿಜಯಕುಮಾರ್ ವೈಶಾಕ್ , ಶಿಖರ್ ಶೆಟ್ಟಿ , ಪ್ರಸಿದ್ಧ್ ಕೃಷ್ಣ.

Source link

3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ – Kannada News | 3 year old child sexually assaulted by her fathers friend in Visakhapatnam case registered

ವಿಶಾಖಪಟ್ಟಣಂ, ಫೆಬ್ರವರಿ 19: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಡಗಂಟ್ಯಾಡ ಮಂಡಲದಲ್ಲಿ 3 ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ (Sexually Harassment) ಎಸಗಿದ್ದಾನೆ. ಆಕೆಯ ತಂದೆಯನ್ನು ಭೇಟಿಯಾಗುವ ನೆಪದಲ್ಲಿ ಆತ ಮನೆಗೆ ಬಂದಿದ್ದ. ಆದರೆ, ಆಕೆಯ ಅಪ್ಪ ಮನೆಯಲ್ಲಿರಲಿಲ್ಲ. ಅಮ್ಮ ಒಳಗೆ ಅಡುಗೆ ಮಾಡುತ್ತಿದ್ದರು. ಈ ವೇಳೆ ಆ ಆರೋಪಿಯು ಮಗುವಿಗೆ ಬಿಸ್ಕತ್ ಕೊಡಿಸುತ್ತೇನೆ ಎಂದು ಹತ್ತಿರದ ದಿನಸಿ ಅಂಗಡಿಗೆ ಕರೆದೊಯ್ದನು.

ಆಕೆಯನ್ನು ಅಂಗಡಿಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಾದ ನಂತರ ಏನೂ ಆಗಿಯೇ ಇಲ್ಲವೆಂಬಂತೆ ಅವನು ಅವಳನ್ನು ವಾಪಾಸ್ ಕರೆದುಕೊಂಡು ಬಂದು ಅವಳ ಮನೆಯಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಮನೆಯಲ್ಲಿ ಆ ಮಗು ನೋವಿನಿಂದ ನಿರಂತರವಾಗಿ ಅಳುತ್ತಲೇ ಇದ್ದುದರಿಂದ ಆ ಮಗುವಿನ ತಾಯಿ ಅವಳನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳು ಕಂಡುಬಂದವು. ಏನಾಯಿತೆಂದು ಕೇಳಿದಾಗ ಆಕೆ ನಡೆದ ವಿಚಾರ ಹೇಳಿದಳು. ಆರೋಪಿಯ ವಿರುದ್ಧ ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಉದ್ಯಮಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಬಿಗ್​​​​ ಟ್ವಿಸ್ಟ್​: ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಖೈದಿಯಿಂದಲ್ಲೇ ಕನ್ನ!

ಈ ಘಟನೆಯ ಬಗ್ಗೆ ರಾಜ್ಯ ಮಹಿಳಾ ಆಯೋಗವು ತನ್ನ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಆಯೋಗದ ಅಧ್ಯಕ್ಷೆ ರಾಯಪತಿ ಶೈಲಜಾ ಅವರು ವಿಶಾಖಪಟ್ಟಣ ಸಿಪಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರು ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದು, ಆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಮಹಿಳಾ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಚಿಕ್ಕ ಮಕ್ಕಳಿಗೆ ಮನೆಯಲ್ಲೂ ಸುರಕ್ಷತೆ ಇಲ್ಲದಂತಾಗಿರುವುದು ಆತಂಕ ಸೃಷ್ಟಿಸಿದೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ, ತಮ್ಮ ಮನೆಯವನಂತೆಯೇ ಇದ್ದ ವ್ಯಕ್ತಿ ಚಿಕ್ಕ ಮಗುವಿನ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡಿರುವುದು ಆ ಕುಟುಂಬಕ್ಕೆ ಆಘಾತ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Karachi Blast: ಕರಾಚಿಯಲ್ಲಿ ಸ್ಫೋಟ, ಮಕ್ಕಳು ಸೇರಿ 16 ಮಂದಿ ಸಾವು – Kannada News | Deadly Blast in Karachi Claims 16 Lives, Children Among Victims

ಕರಾಚಿ, ಫೆಬ್ರವರಿ 19: ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟ(Blast) ಸಂಭವಿಸಿದ್ದು, ಮಕ್ಕಳು ಸೇರಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ, ಪಾಕಿಸ್ತಾನದಲ್ಲಿ ಇಂದು ರಂಜಾನ್ ಮೊದಲ ದಿನವನ್ನು ಆಚರಿಸಲಾಗುತ್ತಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬಹುತೇಕ ಮನೆಗಳಲ್ಲಿ ದೈನಂದಿನ ಬಳಕೆಗಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗಳನ್ನು ಅವಲಂಬಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಸ್ಥಳದಿಂದ ಇದುವರೆಗೆ 14 ಶವಗಳನ್ನು ಆಸ್ಪತ್ರೆಗಳಿಗೆ ತರಲಾಗಿದೆ ಎಂದು ದೃಢಪಡಿಸಿದ್ದಾರೆ, ಆದರೆ 14 ಗಾಯಾಳುಗಳು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಸ್ಫೋಟದ ಪರಿಣಾಮವಾಗಿ ಕಟ್ಟಡದ ಒಂದು ಭಾಗ ಶಿಥಿಲಗೊಂಡಿದ್ದರಿಂದ ಕುಸಿದು ಬಿದ್ದಿದೆ. ಇನ್ನೂ ಶವಗಳು ಅಥವಾ ಬದುಕುಳಿದವರು ಇದ್ದಾರೆಯೇ ಎಂದು ನೋಡಲು ನಾವು ಇನ್ನೂ ಹುಡುಕುತ್ತಿದ್ದೇವೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಹುಮಾಯೂನ್ ಖಾನ್ ಹೇಳಿದ್ದಾರೆ. ಮೃತರಲ್ಲಿ ಎರಡರಿಂದ 17 ವರ್ಷದೊಳಗಿನ ಕನಿಷ್ಠ ಒಂಬತ್ತು ಮಕ್ಕಳು ಸೇರಿದ್ದಾರೆ, ಗಾಯಗೊಂಡವರಲ್ಲಿ ಏಳು ಮಕ್ಕಳಿದ್ದಾರೆ.

ಮತ್ತಷ್ಟು ಓದಿ: ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಸ್ಫೋಟದ ಹೊಸ ಸಿಸಿಟಿವಿ ವಿಡಿಯೋ ವೈರಲ್

ಕರಾಚಿಯಲ್ಲಿ ಇತ್ತೀಚೆಗೆ ಸಂಭವಿಸಿದ ಎರಡನೇ ಪ್ರಮುಖ ದುರಂತ ಇದಾಗಿದೆ. ಕಳೆದ ತಿಂಗಳು, ಸದ್ದಾರ್ ಪ್ರದೇಶದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಾದ ಗುಲ್ ಶಾಪಿಂಗ್ ಪ್ಲಾಜಾದ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 79 ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ? – Kannada News | Shiva Rajkumar wants to act in Bakta Kumbara character

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್ (Shiva Rajkumar) ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ಯಶಸ್ವಿ 40 ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣದಲ್ಲಿ ಅವರು ಹಲವಾರು ರೀತಿಯ ಪಾತ್ರಗಳು, ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಆನಂದ್’ ಇಂದ ಆರಂಭಿಸಿ ಇತ್ತೀಚೆಗಿನ ‘45’ ಸಿನಿಮಾದ ವರೆಗೆ ನಾನಾ ರೀತಿಯ ಪಾತ್ರಗಳಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಆದರೆ ಶಿವಣ್ಣ ಅವರಿಗೆ ಆ ಒಂದು ಪಾತ್ರದಲ್ಲಿ ನಟಿಸುವ ಆಸೆ ಇದ್ದು, ಆ ಆಸೆ ಇನ್ನೂ ಈಡೇರಿಲ್ಲವಂತೆ. ಅಂದಹಾಗೆ ಶಿವಣ್ಣನ ಆ ನೆಚ್ಚಿನ ಪಾತ್ರದಲ್ಲಿ ಡಾ ರಾಜ್​​ಕುಮಾರ್ ಅವರು ಈಗಾಗಲೇ ನಟಿಸಿದ್ದಾಗಿದೆ. ಯಾವುದು ಆ ಪಾತ್ರ? ತಿಳಿಯಲು ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

AI Professional Courses: AI ಕೌಶಲ್ಯ ಹೆಚ್ಚಿಸಲು ಗೂಗಲ್​​ನಿಂದ ಹೊಸ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ – Kannada News | Google Launches 7 AI Professional Certificate Courses: Sundar Pichai’s India Announcement

ಗೂಗಲ್ ಕೃತಕ ಬುದ್ಧಿಮತ್ತೆ (AI) ಕುರಿತು ಪ್ರಮುಖ ಘೋಷಣೆ ಮಾಡಿದೆ. ಗೂಗಲ್ AI ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ಈ ಕಾರ್ಯಕ್ರಮದಡಿಯಲ್ಲಿ, ಗೂಗಲ್ ಒಟ್ಟು 7 AI ಪ್ರಮಾಣಪತ್ರ ಕೋರ್ಸ್‌ಗಳನ್ನು ನಡೆಸಲಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಜಾಗತಿಕ AI ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದರು. ಗೂಗಲ್ ಸಿಇಒ ಸುಂದರ್ ಪಿಚೈ ಭಾರತ-ಅಮೆರಿಕಾ ಸಂಪರ್ಕ ಉಪಕ್ರಮವನ್ನು ಘೋಷಿಸುವಾಗ ಈ ಕಾರ್ಯಕ್ರಮವನ್ನು ಘೋಷಿಸಿದರು.

ಭಾರತ್ ಮಂಟಪದಲ್ಲಿ ನಡೆದ AI ಸಮ್ಮೇಳನದಲ್ಲಿ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತ-ಯುಎಸ್ ಕನೆಕ್ಟ್ ಇನಿಶಿಯೇಟಿವ್ ಅನ್ನು ಘೋಷಿಸಿದರು. ಈ ಉಪಕ್ರಮವು ಭಾರತ ಮತ್ತು ಯುಎಸ್ ನಡುವೆ ಮತ್ತು ದಕ್ಷಿಣ ಗೋಳಾರ್ಧದ ಅನೇಕ ಸ್ಥಳಗಳಿಗೆ AI ಸಂಪರ್ಕವನ್ನು ವಿಸ್ತರಿಸಲು ಹೊಸ ಸಬ್ ಸೀ ಕೇಬಲ್ ಮಾರ್ಗಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಈ ಉಪಕ್ರಮದಿಂದ ಒದಗಿಸಲಾದ ಅವಕಾಶಗಳನ್ನು ಬಳಸಿಕೊಳ್ಳಲು, ನಾವು ಕೌಶಲ್ಯಗಳಲ್ಲಿಯೂ ಹೂಡಿಕೆ ಮಾಡಬೇಕು, ಆದ್ದರಿಂದ ನಾವು ಇಲ್ಲಿ ನಮ್ಮ ಅತಿದೊಡ್ಡ ಕೌಶಲ್ಯ ಕಾರ್ಯಕ್ರಮವನ್ನು ಘೋಷಿಸುತ್ತಿದ್ದೇವೆ ಎಂದು ಅವರು ಹೇಳಿದರು. ಇದರಲ್ಲಿ AI ಅನ್ನು ಕರಗತ ಮಾಡಿಕೊಳ್ಳಲು ಹೊಸ Google AI ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮವೂ ಸೇರಿದೆ.

AI ಮೂಲಭೂತ ಅಂಶಗಳು:

ಗೂಗಲ್ ತನ್ನ AI ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮದಡಿಯಲ್ಲಿ ಏಳು ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಇದರಲ್ಲಿ AI ಫಂಡಮೆಂಟಲ್ಸ್ ಸರ್ಟಿಫಿಕೇಟ್ ಕೋರ್ಸ್ ಕೂಡ ಸೇರಿದೆ. ಈ ಕೋರ್ಸ್ AI ಮೂಲಭೂತ ಅಂಶಗಳು, ಅದರ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳನ್ನು ಒಳಗೊಂಡಿದೆ. ಈ ಕೋರ್ಸ್ ಅಭ್ಯರ್ಥಿಗಳಿಗೆ 25 ಅಧ್ಯಾಯಗಳಲ್ಲಿ ಪ್ರಾಂಪ್ಟ್‌ಗಳು ಎಂದು ಕರೆಯಲ್ಪಡುವ ಸ್ಪಷ್ಟ ಮತ್ತು ಪರಿಣಾಮಕಾರಿ ಸೂಚನೆಗಳನ್ನು ಹೇಗೆ ನೀಡಬೇಕೆಂದು ಕಲಿಸುತ್ತದೆ.

ಬುದ್ದಿಮತ್ತೆ ಮತ್ತು ಯೋಜನೆಗಾಗಿ AI:

ಗೂಗಲ್‌ನ ಈ ವೃತ್ತಿಪರ ಪ್ರಮಾಣಪತ್ರ ಕೋರ್ಸ್ ಸೃಜನಶೀಲ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಅಮೂರ್ತ ವಿಚಾರಗಳನ್ನು ವಿವರವಾದ, ಕಾರ್ಯಸಾಧ್ಯ ಯೋಜನೆಗಳಾಗಿ ಪರಿವರ್ತಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ, AI ಬಳಸಿಕೊಂಡು ಹೊಸ ವಿಚಾರಗಳನ್ನು ಹೇಗೆ ಬುದ್ದಿಮತ್ತೆ ಮಾಡುವುದು ಮತ್ತು ಅವುಗಳನ್ನು ಸಾಮಾನ್ಯ ಚೌಕಟ್ಟಿನ ವಿರುದ್ಧ ಮೌಲ್ಯಮಾಪನ ಮಾಡುವುದು ಎಂಬುದನ್ನು ನೀವು ಕಲಿಯಬಹುದು.

ಸಂಶೋಧನೆ ಮತ್ತು ಒಳನೋಟಗಳಿಗಾಗಿ AI:

ಈ ಕೋರ್ಸ್ ಪೂರ್ಣಗೊಳಿಸಿದ ನಂತರ, ಯಾರಾದರೂ AI ಅನ್ನು ಕಾರ್ಯತಂತ್ರದ ಸಂಶೋಧನಾ ಪಾಲುದಾರರಾಗಿ ಬಳಸಬಹುದು. ಉದಾಹರಣೆಗೆ, ಜೆಮಿನಿ ಡೀಪ್ ರಿಸರ್ಚ್ ಬಳಸಿ, ನಿಮಿಷಗಳಲ್ಲಿ ಡಜನ್ಗಟ್ಟಲೆ ಮೂಲಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಮೆಟಾ-ಪ್ರಾಂಪ್ಟಿಂಗ್ ತಂತ್ರಗಳನ್ನು ಬಳಸಿಕೊಂಡು ಕಸ್ಟಮ್ ಜೆಮ್ ಸಹ ರಚಿಸಬಹುದು.

ಬರವಣಿಗೆ ಮತ್ತು ಸಂವಹನಕ್ಕಾಗಿ AI:

ಗೂಗಲ್‌ನ ಈ ಪ್ರಮಾಣೀಕರಣ ಕೋರ್ಸ್ ಬರವಣಿಗೆ ಪಾಲುದಾರರಾಗಿ AI ಅನ್ನು ಬಳಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅಭ್ಯರ್ಥಿಗಳು Google Meet ನಲ್ಲಿ ಜೆಮಿನಿಯನ್ನು ಬಳಸಿಕೊಂಡು ಕಚ್ಚಾ ಸಭೆಯ ಪ್ರತಿಲೇಖನವನ್ನು ಸ್ಪಷ್ಟವಾದ ಕ್ರಿಯಾ ಪಟ್ಟಿಯೊಂದಿಗೆ ಸಂಕ್ಷಿಪ್ತ ಸಾರಾಂಶವಾಗಿ ಪರಿವರ್ತಿಸಬಹುದು.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

ಡೇಟಾ ವಿಶ್ಲೇಷಣೆಗಾಗಿ AI:

Google ನ ಈ ಕೋರ್ಸ್ ನಿಮಗೆ AI ವಿಶ್ಲೇಷಣಾತ್ಮಕ ಪಾಲುದಾರನಾಗಿ ಬಳಸಲು ಸಹಾಯ ಮಾಡುತ್ತದೆ. ಈ ಕೋರ್ಸ್ ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳು ರಚನೆಯಿಲ್ಲದ ಡೇಟಾವನ್ನು ಸ್ಪಷ್ಟ, ಕಾರ್ಯಸಾಧ್ಯವಾದ ಒಳನೋಟಗಳಾಗಿ ಪರಿವರ್ತಿಸಲು ಮತ್ತು ಸಂಕೀರ್ಣ ಡೇಟಾವನ್ನು ರಚನಾತ್ಮಕ ಕೋಷ್ಟಕಗಳಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ.

ಕಾರ್ಯಕ್ರಮದ ವೈಶಿಷ್ಟ್ಯಗಳು:

  • AI ಯುಗದಲ್ಲಿ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳ ಮೇಲೆ ಗಮನ.
  • Google ತಜ್ಞರಿಂದ ನೇರ ತರಬೇತಿ.
  • 20 ಕ್ಕೂ ಹೆಚ್ಚು ಪ್ರಾಯೋಗಿಕ ಬಳಕೆ ಪ್ರಕರಣಗಳು.
  • Google ಮಾನ್ಯತೆ ಪಡೆದ ಪ್ರಮಾಣಪತ್ರ.
  • 7 ದಿನಗಳ ಉಚಿತ ಪ್ರಯೋಗಾವಧಿ.

ಒಟ್ಟಾರೆ, ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ AI ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಮುನ್ನಡೆ ಪಡೆಯಲು ಸಹಾಯಕವಾಗಲಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link