All posts by nagaraj11081993

Tirumala: ತಿರುಮಲದಲ್ಲಿ ಭಕ್ತರಿಗೆ ಮತ್ತೊಂದು ಸೌಲಭ್ಯ; ಪಾದರಕ್ಷೆ ನಿರ್ವಹಣೆಗೆ ಡಿಜಿಟಲ್ ಪರಿಹಾರ – Kannada News | TTD’s QR System Revolutionizes Tirumala Footwear Storage for Devotees

QR ಆಧಾರಿತ ಸ್ಮಾರ್ಟ್ ಪಾದರಕ್ಷೆ ವ್ಯವಸ್ಥೆ

ತಿರುಮಲ ಶ್ರೀವಾರಿ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಭಕ್ತರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಟಿಟಿಡಿ ಹಲವು ಹೊಸ ಸೌಲಭ್ಯಗಳನ್ನು ಹಂತ ಹಂತವಾಗಿ ಪರಿಚಯಿಸುತ್ತಿದೆ. ಈ ಕ್ರಮದಲ್ಲಿ ಈಗ ಭಕ್ತರು ಹೆಚ್ಚು ಎದುರಿಸುತ್ತಿದ್ದ ಒಂದು ಸಾಮಾನ್ಯ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸಲಾಗಿದೆ.

ತಿರುಮಲಕ್ಕೆ ಬರುವ ಭಕ್ತರಲ್ಲಿ ಅನೇಕರು ತಮ್ಮ ಪಾದರಕ್ಷೆಗಳನ್ನು ಎಲ್ಲಿ ಸುರಕ್ಷಿತವಾಗಿ ಇಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಕೆಲವರು ಅವನ್ನು ರಸ್ತೆಯ ಬದಿಯಲ್ಲಿ ಅಥವಾ ಯಾದೃಚ್ಛಿಕ ಸ್ಥಳಗಳಲ್ಲಿ ಬಿಡುವುದರಿಂದ ಅವು ಕಾಣೆಯಾಗುವುದು, ಅಸ್ವಚ್ಛತೆ ಉಂಟಾಗುವುದು ಮುಂತಾದ ಸಮಸ್ಯೆಗಳು ಕಂಡುಬಂದಿವೆ. ಪಾದರಕ್ಷೆ ಸಂಗ್ರಹಿಸಲು ವಿಶೇಷ ಕೌಂಟರ್‌ಗಳು ಇದ್ದರೂ, ಅಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಠೇವಣಿ ಇಡಲು ಮತ್ತು ಮರಳಿ ಪಡೆಯಲು ಸಮಯ ಹಿಡಿಯುತ್ತಿತ್ತು.

ಈ ಸಮಸ್ಯೆಗೆ ಪರಿಹಾರವಾಗಿ TTD QR-ಆಧಾರಿತ ಸ್ಮಾರ್ಟ್ ಪಾದರಕ್ಷೆ ಟ್ರ್ಯಾಕಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯಡಿ ಭಕ್ತರು ತಮ್ಮ ಪಾದರಕ್ಷೆಗಳನ್ನು ಕೌಂಟರ್‌ನಲ್ಲಿ ನೀಡಿದಾಗ QR ಕೋಡ್ ರಸೀದಿ ಪಡೆಯುತ್ತಾರೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪಾದರಕ್ಷೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮರಳಿ ಪಡೆಯಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ, ಭಕ್ತರಿಗೆ ಹೆಚ್ಚಿನ ಸೌಲಭ್ಯವೂ ದೊರೆಯುತ್ತಿದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಈ ವ್ಯವಸ್ಥೆಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಯಿತಾದರೂ, ಪ್ರಸ್ತುತ ಕೆಲವು ಸ್ಥಳಗಳಲ್ಲಿ ಮಾತ್ರ ಸೌಲಭ್ಯ ಲಭ್ಯವಿದೆ. ಆದರೆ ಭಕ್ತರ ಹೆಚ್ಚಿನ ಓಡಾಟ ಇರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಇನ್ನಷ್ಟು ಕೌಂಟರ್‌ಗಳನ್ನು ಸ್ಥಾಪಿಸಲು TTD ಸಿದ್ಧತೆ ನಡೆಸುತ್ತಿದೆ. ಕಲ್ಯಾಣಕಟ್ಟೆ, ATC ವೃತ್ತ ಮತ್ತು ಬೇಡಿ ಆಂಜನೇಯಸ್ವಾಮಿ ದೇವಾಲಯದ ಬಳಿಯೂ ಈ ಸ್ಮಾರ್ಟ್ ಪಾದರಕ್ಷೆ ಕೌಂಟರ್‌ಗಳನ್ನು ಆರಂಭಿಸಲು ಯೋಜಿಸಲಾಗಿದೆ. ಈ ಯೋಜನೆ ಕೋರಮಾಂಡರ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

TTD ತಿಳಿಸಿದ ಮಾಹಿತಿಯ ಪ್ರಕಾರ, ಈಗಾಗಲೇ 8,45,816 ಭಕ್ತರು ಈ ವ್ಯವಸ್ಥೆಯ ಸೌಲಭ್ಯವನ್ನು ಬಳಸಿದ್ದಾರೆ. ಇದರ ಪರಿಣಾಮವಾಗಿ ತಿರುಮಲದಲ್ಲಿ ಸ್ವಚ್ಛತೆ ಹೆಚ್ಚಿರುವುದಲ್ಲದೆ, ಪಾದರಕ್ಷೆ ಕಾಣೆಯಾಗುವ ಪ್ರಕರಣಗಳೂ ಕಡಿಮೆಯಾಗಿವೆ. ಆದರೆ ಕೆಲವು ಭಕ್ತರು ತಂತ್ರಜ್ಞಾನದ ಅರಿವಿನ ಕೊರತೆಯಿಂದಾಗಿ ಈ ವ್ಯವಸ್ಥೆಯನ್ನು ಇನ್ನೂ ಬಳಸುತ್ತಿಲ್ಲ. ಆದ್ದರಿಂದ, TTD ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಪ್ರಚಾರ ಕಾರ್ಯಗಳನ್ನು ಕೈಗೊಂಡಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:11 pm, Thu, 19 February 26

Source link

Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು? – Kannada News | India’s Sarvam AI Challenges Global Giants: Pratyush Kumar Leads Bengaluru’s AI Innovation

ಡಾ. ಪ್ರತ್ಯೂಷ್ ಕುಮಾರ್Image Credit source: Indian Express

ನವದೆಹಲಿ, ಫೆಬ್ರವರಿ 19: ಭಾರತ ನಿಧಾನವಾಗಿ ಕೃತಕ ಬುದ್ಧಿಮತ್ತೆ(AI)ಯ ಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ. ಹೆಚ್ಚಾಗಿ ಅಮೆರಿಕ ಮತ್ತು ಚೀನಾದವರು ಪ್ರಾಬಲ್ಯ ಹೊಂದಿದ್ದಾರೆ. ಬೆಂಗಳೂರು ಮೂಲದ ಸ್ಟಾರ್ಟ್ಅಪ್ ‘ ಸರ್ವಂ AI’ ಈ ಕ್ಷೇತ್ರದಲ್ಲಿ ಒಂದು ಮಾರ್ಗದರ್ಶಕನಾಗಿ ಹೊರಹೊಮ್ಮುತ್ತಿದೆ.ಇದು ಭಾರತದೊಳಗೆ ಮೂಲಭೂತ AI ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

2023ರಲ್ಲಿ ಆರಂಭವಾದ ಸರ್ವಂ ಎಐ ಎನ್ನುವ ಕಂಪನಿ, ಇವತ್ತು ಗೂಗಲ್ ಜೆಮಿನಿ ಮತ್ತು ಚಾಟ್ ಜಿಪಿಟಿಯಂತಹ ದೈತ್ಯ ಎಐ ಮಾಡೆಲ್‌ಗಳನ್ನು ಕೆಲವು ಪ್ರಮುಖ ಬೆಂಚ್‌ ಮಾರ್ಕ್‌ಗಳಲ್ಲಿ ಹಿಂದಿಕ್ಕಿದೆ. ಈ ಜಾಗತಿಕ ಎಐ ದಿಗ್ಗಜರಿಗೆ ಬೆಂಗಳೂರಿನ ಒಂದು ಸ್ಟಾರ್ಟ್‌ಅಪ್‌ ಶಾಕ್ ಕೊಟ್ಟಿದೆ ಎಂದರೆ ತಪ್ಪಾಗದು.  ಡಾ. ಪ್ರತ್ಯೂಷ್ ಕುಮಾರ್ ಹಾಗೂ ಡಾ. ವಿವೇಕ್ ರಾಘವನ್ ಇದನ್ನು ನಿರ್ಮಿಸಿದ್ದಾರೆ.

ಈ ಸಂಸ್ಥೆ ಇದೇ ಮೊದಲ ಬಾರಿ ದೇಶೀಯ ಎಐ ಚಾಲಿತ, ಕನ್ನಡಕ ಹೊರತಂದಿದ್ದು, ಎಐ ಇಂಪಾಕ್ಟ್​​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದರ ಅನುಭವ ಪಡೆದಿದ್ದರು. ‘ಸರ್ವಂ​ ಕೆಜೆ ಎಐ ಸ್ಮಾರ್ಟ್ ಗ್ಲಾಸ್’. ಇದು ನಿಮ್ಮ ಮುಖದ ಅಂದ ಹೆಚ್ಚಿಸುವುದಷ್ಟೇ ಅಲ್ಲ, ಅದು ಜಗತ್ತನ್ನು ನೋಡುವ, ಆಲಿಸುವ, ಅರ್ಥಮಾಡಿಕೊಳ್ಳುವ, ಪ್ರತಿಕ್ರಿಯಿಸುವ ಮತ್ತು ದೃಶ್ಯ ಸೆರೆಹಿಡಿಯುವ ಗ್ಯಾಜೆಟ್.

ಇದನ್ನು ಭಾರತದಲ್ಲಿ ವಿನ್ಯಾಸ ಮಾಡಲಾಗಿದ್ದು, ಭಾರತದಲ್ಲೇ ನಿರ್ಮಿಸಲಾಗಿದೆ. ಭಾರತದ ಎಐನೊಂದಿಗೆ ಅಳವಡಿಸಲಾಗಿದೆ. ಮೇಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಅವರು ಹೇಳಿದ್ದಾರೆ. ಈ ಸ್ಟಾರ್ಟ್​ಅಪ್ ಸ್ಥಾಪನೆಯಾಗಿ ಎರಡು ವರ್ಷಕ್ಕೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಅಂದಿನಿಂದ ಇದು ಗೂಗಲ್‌ನ ಜೆಮಿನಿ ಮತ್ತು ಓಪನ್‌ಎಐನ ಚಾಟ್‌ಜಿಪಿಟಿಯಂತಹ ಜಾಗತಿಕ ಎಐ ಹೆವಿವೇಯ್ಟ್‌ಗಳನ್ನು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ನಲ್ಲಿ ನಿರ್ದಿಷ್ಟ ಮಾನದಂಡಗಳಲ್ಲಿ ಮೀರಿಸಿದೆ.

ಮತ್ತಷ್ಟು ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಪ್ರತ್ಯೂಷ್ ಕುಮಾರ್ ಯಾರು?
ಡಾ.  ಪ್ರತ್ಯೂಷ್ ಕುಮಾರ್ ಬೆಂಗಳೂರಿನಲ್ಲಿರುವ ಎಐ ಸ್ಟಾರ್ಟ್​ ಅಪ್ ಸರ್ವಂ ಎಐನ ಸಿಇಒ ಆಗಿದ್ದಾರೆ. ಅವರು ಡಾ. ವಿವೇಕ್ ರಾಘವನ್ ಅವರೊಂದಿಗೆ ಸರ್ವಂ ಎಐಯನ್ನು ಸ್ಥಾಪಿಸಿದ್ದಾರೆ. ಅವರು ಇಟಿಎಚ್ ಜ್ಯೂರಿಚ್​ನಿಂದ ಪಿಎಚ್​ಡಿ ಮತ್ತು ಐಐಟಿ ಬಾಂಬೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ಮೈಕ್ರೋಸಾಫ್ಟ್ ರಿಸರ್ಚ್, ಐಬಿಎಂ ರಿಸರ್ಚ್ ಮತ್ತು ಐಐಟಿ ಮದ್ರಾಸ್‌ನಲ್ಲಿ ಸಹಾಯಕ ಅಧ್ಯಾಪಕ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಭಾರತೀಯ ಭಾಷೆಗಳಿಗಾಗಿ ಭಾರತಕ್ಕಾಗಿ AI4 ಮತ್ತು ಕೈಗೆಟುಕುವ ಆನ್‌ಲೈನ್ ಕಲಿಕೆಗಾಗಿ PadhAI ಅಭಿವೃದ್ಧಿಯಲ್ಲಿ ಅವರ ಪಾತ್ರ ಹೆಚ್ಚು.

ಇನ್ನು ವಿವೇಕ್ ರಾಘವನ್ ಬಗ್ಗೆ ಹೇಳವುದಾದರೆ, ಐಐಟಿ ದೆಹಲಿ ಪದವೀಧರರಾದ ರಾಘವನ್, ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ.ಸಿನೋಪ್ಸಿಸ್ ಮತ್ತು ಮ್ಯಾಗ್ಮಾ ಡಿಸೈನ್ ಆಟೊಮೇಷನ್‌ನಂತಹ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಎಲೆಕ್ಟ್ರಾನಿಕ್ ಡಿಸೈನ್ ಆಟೊಮೇಷನ್ (ಇಡಿಎ) ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಸರ್ವಂ AI ನ ಕೆಲಸ ಏಕೆ ವಿಶೇಷವಾಗಿದೆ?
ಸರ್ವಂ AI ದೊಡ್ಡ ಮತ್ತು ಭಾರವಾದ ಕ್ಲೌಡ್ ಮಾದರಿಗಳಿಗಿಂತ ಹಗುರವಾದ, ವೇಗದ ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ AI ಅನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸಿದೆ. ಕಂಪನಿಯು ಭಾರತೀಯ ಭಾಷೆಗಳು, ಕಡಿಮೆ ಇಂಟರ್ನೆಟ್ ವೇಗ ಮತ್ತು ಮೊಬೈಲ್‌ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ OCR ಮತ್ತು ಧ್ವನಿ ಪರಿಕರಗಳು ಸರ್ಕಾರಿ ಸೇವೆಗಳು, ಕಾಲ್ ಸೆಂಟರ್‌ಗಳು, ಬ್ಯಾಂಕಿಂಗ್ ಮತ್ತು ಡಿಜಿಟಲ್ ದಾಖಲೆಗಳಲ್ಲಿ ಉಪಯುಕ್ತವೆಂದು ಸಾಬೀತುಪಡಿಸಬಹುದು. ಅದಕ್ಕಾಗಿಯೇ ತಂತ್ರಜ್ಞಾನ ಜಗತ್ತಿನಲ್ಲಿ ಇದರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಚಾಟ್ ಜಿಪಿಟಿ ಜೆಮಿನಿ ಯಾವ ಕ್ಷೇತ್ರಗಳಲ್ಲಿ ಹಿಂದುಳಿದಿವೆ?
ಸರ್ವಮ್ AI ನ ಪರಿಕರಗಳಾದ ಸರ್ವಂ ವಿಷನ್ ಮತ್ತು ಬುಲ್‌ಬುಲ್, ನಿರ್ದಿಷ್ಟ ಮಾನದಂಡ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಭಾರತೀಯ ಭಾಷೆಗಳಿಗೆ OCR ಪರೀಕ್ಷೆಗಳಲ್ಲಿ ಸರ್ವಂ ವಿಷನ್ ಜೆಮಿನಿ ಮತ್ತು ಚಾಟ್‌ಜಿಪಿಟಿಗಿಂತ ಹೆಚ್ಚು ನಿಖರವಾದ ಫಲಿತಾಂಶಗಳನ್ನು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯೋಗಿ, ದಿಗಂತ್, ಸತೀಶ್: ವೇದಿಕೆ ಮೇಲೆ ಮೂವರು ಗೆಳೆಯರ ಮಾತುಗಳು – Kannada News | Neenasam Satish, Yogi, Diganth funny talk watch video

ನೀನಾಸಂ ಸತೀಶ್ (Neenasam Satish) ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾದ ಟ್ರೈಲರ್ ಬಿಡುಗಡೆ ನಿನ್ನೆಯಷ್ಟೆ ಅದ್ಧೂರಿಯಾಗಿ ನಡೆಯಿತು. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ದಿಗಂತ್ ಇನ್ನೂ ಹಲವರು ಭಾಗಿ ಆಗಿದ್ದರು. ಯೋಗಿ, ದಿಗಂತ್ ಮತ್ತು ಸತೀಶ್ ಅವರುಗಳು ಆತ್ಮೀಯ ಗೆಳೆಯರು ಸಹ. ವೇದಿಕೆ ಮೇಲೆ ಮೂವರು ಒಟ್ಟಿಗೆ ಸೇರಿ ಪರಸ್ಪರರ ಕಾಲೆಳೆದುಕೊಂಡರು. ರಾತ್ರಿ ಆದ್ರೆ ಸತೀಶ್ ಬೈತಾನೆ ಎಂದು ಯೋಗಿ ದೂರಿದರೆ, ದಿಗಂತ್ ಸಿನಿಮಾ ಮುಹೂರ್ತಕ್ಕೆ ಹೋಗಿದ್ದ ಕತೆಯೊಂದನ್ನು ನೆನಪಿಸಿಕೊಂಡು ತಮಾಷೆ ಮಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಟಾಕ್ಸಿಕ್’ ಟ್ರೇಲರ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಸರ್​​ಪ್ರೈಸ್ ಕೊಟ್ಟ ಯಶ್ – Kannada News | Yash’s ‘Toxic’ Teaser Release Date Out: What to Expect from the Highly Anticipated Film

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಎಲ್ಲಾ ಪಾತ್ರಗಳ ಪರಿಚಯವನ್ನು ತಂಡದವರು ಮಾಡಿದ್ದರು. ಈಗ ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಮಯ. ಫೆಬ್ರವರಿ 20ರ ಬೆಳಿಗ್ಗೆ 9.35ಕ್ಕೆ ಟೀಸರ್ ಬಿಡುಗಡೆ ಕಾಣಲಿದೆ. ಈ ಟೀಸರ್ ರಿಲೀಸ್ ಆದ ಬಳಿಕ ಸಿನಿಮಾ ಬಗ್ಗೆ ಇರೋ ಕ್ರೇಜ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಇತ್ತೀಚೆಗೆ ಸುದ್ದಿ ಹರಿದಾಡಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ ಎಂಬ ಮಾಹಿತಿ ಇದೆ. ಅದಕ್ಕೂ ಮೊದಲು ಅಭಿಮಾನಿಗಳಿಗೆ ಸರ್​​ಪ್ರೈಸ್ ಸಿಕ್ಕಿದೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಬಗ್ಗೆ ತಂಡ ಮಾಹಿತಿ ನೀಡಿದೆ. ಈ ವಿಷಯ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಈ ಮೊದಲು ‘ಟಾಕ್ಸಿಕ್’ ರಾಯ ಪಾತ್ರ ಪರಿಚಯಿಸೋ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್​​​ನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಇದ್ದವು. ಆ ದೃಶ್ಯಗಳ ಕಾರಣಕ್ಕೆ ಟೀಸರ್ ಸಾಕಷ್ಟು ಸದ್ದು ಮಾಡಿತು. ಈಗ ಹೊಸ ಟೀಸರ್ ಮೂಲಕ ಪ್ರೇಕ್ಷಕರ ಎದುರು ಬರಲು ಯಶ್ ರೆಡಿ ಆಗಿದ್ದಾರೆ. ಈ ಟೀಸರ್​​ನಲ್ಲೂ ಬೋಲ್ಡ್ ದೃಶ್ಯಗಳು ಇರುತ್ತವೆಯೇ ಎಂಬುದು ಸದ್ಯದ ಪ್ರಶ್ನೆ.

‘ಟಾಕ್ಸಿಕ್’ ಸಿನಿಮಾದ ಪ್ರಚಾರ ವೇಗವಾಗಿ ಸಾಗುತ್ತಿಲ್ಲ ಎಂಬ ಬೇಸರ ಅಭಿಮಾನಿಗಳಿಗೆ ಇತ್ತು. ಈಗ ‘ಟೀಸರ್’ ಮೂಲಕ ಸಿನಿಮಾ ಪ್ರಚಾರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಮುಂದಕ್ಕೆ ಹೋಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ರಿಲೀಸ್ ಆಗಿರೋ ಪೋಸ್ಟರ್​​ನಲ್ಲಿ ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರೋದು ಖಚಿತವಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ನಾಯಕ. ಗೀತು ಮೋಹನ್​ದಾಸ್ ಅವರು ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಸೇರಿದಂತೆ ಅನೇಕರಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್ ಮೂಲಕ ಅಭಿಮಾನಿಗಳ ಒಂದಷ್ಟು ಪ್ರಶ್ನೆಗೆ ಉತ್ತರ ಸಿಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ – Kannada News | ICC confirms 12 teams for T20 World Cup 2028

T20 World Cup 2026: 2026ರ ಟಿ20 ವಿಶ್ವಕಪ್​ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದೆ. ಇದರ ನಡುವೆ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ 12 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿವೆ. ಆಸ್ಟ್ರೇಲಿಯಾ-ನ್ಯೂಝಿಲೆಂಡ್ ಜಂಟಿಯಾಗಿ ಆಯೋಜಿಸಲಿರುವ 11ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ಡೈರೆಕ್ಟ್ ಎಂಟ್ರಿ ಪಡೆದಿರುವ ತಂಡಗಳ ಪಟ್ಟಿ ಈ ಕೆಳಗಿನಂತಿದೆ…

Source link

ಹೆಲ್ತಿ, ಸೂಪರ್‌ ಫಿಟ್‌ ಆಗಿರಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | If you do these things in your morning routine, you will be active throughout the day

ದಿನದ ಆರಂಭದಲ್ಲಿ ಸಕಾರಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು. ಹೌದು ಬೆಳಗಿನ ಅಭ್ಯಾಸಗಳು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಬದಲು ಉತ್ತಮ ದಿನಚರಿಯನ್ನು (morning routine)  ಪಾಲಿಸಬೇಕು, ಇದು ನಿಮ್ಮನ್ನು ದಿನವಿಡೀ ಆಕ್ಟಿವ್‌ ಆಗಿರಲು ಸಹಾಯ ಮಾಡುವುದು ಮಾತ್ರವಲ್ಲದೆ, ಮಾನಸಿಕ ಸಮತೋಲನ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಿದ್ರೆ ಸದೃಢವಾಗಿರಲು, ಸೂಪರ್‌ ಆಕ್ಟಿವ್‌ ಆಗಿರಲು ಯಾವ ಬೆಳಗಿನ ದಿನಚರಿಯಲ್ಲಿ ಯಾವ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ:

ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯಿರಿ: ಬೆಳಗಿನ ಸೂರ್ಯನ ಬೆಳಕು ದೇಹದಲ್ಲಿ ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  ಹಾಗಾಗಿ ಬೆಳಿಗ್ಗೆ 10 ರಿಂದ 15 ನಿಮಿಷಗಳ ಕಾಲ ಸೂರ್ಯನ ಬೆಳಕಿನಡಿಯಲ್ಲಿ ಕುಳಿತುಕೊಳ್ಳಿ.  ಇದು ದಿನವನ್ನು ತಾಜಾತನದಿಂದ ಪ್ರಾರಂಭಿಸಲು ಸಹಾಯ ಮಾಡುವುದಲ್ಲದೆ  ಆಯಾಸವನ್ನು ಕಡಿಮೆ ಮಾಡುತ್ತದೆ.

ಧ್ಯಾನ ಮಾಡಿ: ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡಿ.  ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ದಿನವಿಡೀ ನೀವು ಆಕ್ಟಿವ್‌ ಆಗಿರಲು ಸಹಾಯ ಮಾಡುತ್ತದೆ.

ವ್ಯಾಯಾಮ ಮಾಡಿ: ಬೆಳಗಿನ ದಿನಚರಿಯಲ್ಲಿ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 20 ರಿಂದ 30 ನಿಮಿಷಗಳ ಕಾಲ ಲಘು ಯೋಗ, ಸ್ಟ್ರೆಚಿಂಗ್, ವಾಕಿಂಗ್ ಅಥವಾ ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡಿ. ವ್ಯಾಯಾಮವು ದೇಹವನ್ನು ಸದೃಢವಾಗಿರಿಸುತ್ತದೆ, ತೂಕವನ್ನು ನಿಯಂತ್ರಿಸುತ್ತದೆ, ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಊಟದ ಬಳಿಕ ವೀಳ್ಯದೆಲೆ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಆರೋಗ್ಯಕರ ಅಹಾರ ಸೇವನೆ: ಬೆಳಗಿನ ಉಪಕಾರಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಿ. ಅದರಲ್ಲೂ ಹಸಿರು ತರಕಾರಿಗಳನ್ನು ತಿನ್ನುವುದು ತುಂಬಾನೇ ಮುಖ್ಯ. ಪಾಲಕ್, ಮೆಂತ್ಯ, ಬ್ರೊಕೊಲಿಯಂತಹ ಹಸಿರು ತರಕಾರಿಗಳು ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಇವು ಕಣ್ಣುಗಳು, ಚರ್ಮ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ, ಇದರಿಂದ ದೇಹವು ನಿರ್ವಿಷಗೊಳ್ಳುತ್ತದೆ.

ನೀರು ಕುಡಿಯಿರಿ: ಬೆಳಿಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ನೀರು ಕುಡಿಯಿರಿ ಮತ್ತು ದಿನವಿಡೀ 8-10 ಗ್ಲಾಸ್ ನೀರು ಕುಡಿಯಿರಿ. ನೀರು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಹೀಗೆ ಈ ಎಲ್ಲಾ ಅಭ್ಯಾಸಗಳನ್ನು ನಿಮ್ಮ ಬೆಳಗಿನ ದಿನಚರಿಯಲ್ಲಿ ಪಾಲಿಸುವ ಮೂಲಕ ನೀವು ಸದೃಢವಾಗಿರಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BJP-JDS ಮೈತ್ರಿ ಗೊಂದಲಕ್ಕೆ ಶಿಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ – Kannada News | Karnataka BJP JDS Leaders Meet to Iron Out Local Body Election Alliance Issues

ಬೆಂಗಳೂರು, ಫೆಬ್ರವರಿ 19: ಮೈತ್ರಿ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರ ಸೇರಿ ಕೆಲ ವಿಷಯಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ಮದ್ದರೆಯಲು BJP ಮತ್ತು JDS ನಾಯಕರು ಮುಂದಾಗಿದ್ದಾರೆ. ಕುಮಾರಸ್ವಾಮಿ, ಆರ್.ಅಶೋಕ್, ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶೀಘ್ರವೇ ಬೆಂಗಳೂರಿನಲ್ಲಿ ಮೈತ್ರಿ ನಾಯಕರ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ನಾಯಕರ ಗೊಂದಲದ ಹೇಳಿಕೆ ಹಿನ್ನೆಲೆ ಸಭೆ ನಡೆಸಲು ಉದ್ದೇಶಿಸಿರುವ ಮಾಹಿತಿ ಇದೆ.

ಉಭಯ ಪಕ್ಷಗಳ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರೋದು ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬುದಾದ ಹಿನ್ನೆಲೆ ಮೈತ್ರಿ ನಾಯಕರಲ್ಲಿ ಏನೇ ಮನಸ್ತಾಪ, ಗೊಂದಲಗಳಿದ್ದರೂ ಅದನ್ನು ಬಗೆಹರಿಸಲು ನಾಯಕರು ತೀರ್ಮಾನಿಸಿದ್ದಾರೆ. ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಹೊಂದಾಣಿಕೆ ವಿಚಾರ ಸಂಬಂಧ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಆರ್​. ಅಶೋಕ್​​, ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಜತೆ ಮಾತಾಡಿದ್ದು, ಸುಲಲಿತವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಆಗಲಿದೆ. ಆದಷ್ಟು ಬೇಗ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ‌ ನಡುವೆ ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳು ಇಲ್ಲ. ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಹೈಕಮಾಂಡ್ ‌ತೀರ್ಮಾನ ಅಂತಿಮ ಎಂದು ಹೇಳಿದ್ದರು.

ಇದನ್ನೂ ಓದಿ: ದೋಸ್ತಿ ನಾಯಕರ ನಡುವೆ ದಂಗಲ್​; ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?

ಅತ್ತ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಅದಾಗಲೇ ಮಾತನಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಮತ್ತು ಲೋಪಗಳಿಲ್ಲ. ವೈಯಕ್ತಿಕವಾಗಿ ಮಾತಾಡುವುದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ರಾಷ್ಟ್ರಮಟ್ಟದಲ್ಲಿ ನಾವು NDA ಸೇರಿರುವುದರಿಂದ ಬೇರೆ ವಿಚಾರ ಬರೋದಿಲ್ಲ. ನಾನು ನೂರಾರು ಬಾರಿ ಹೇಳಿದ್ದೀನಿ, ಜನ ಮುಂದಿನ ಸಿಎಂ ಎಂದು ಕೂಗ್ತಾರೆ. ಜನ ಮುಂದಿನ ಸಿಎಂ ಎಂದು ಕೂಗ್ತಾರೆಂದು ಭ್ರಮೆಯಲ್ಲಿ ಹೋಗಬಾರದು. ಜನ ನಮ್ಮ ಮೇಲಿನ ಪ್ರೀತಿಯಿಂದ ಮಾತಾಡ್ತಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನುವಂತಾಗಬಾರದು. ಸಿಎಂ ಆಗುತ್ತೇನೆ ಎಂದು ನಾನು ಕನಸು ಕಾಣಲು ಆಗುತ್ತಾ? ನಾನು 2 ಬಾರಿ ಸಿಎಂ ಆಗಿದ್ದೆ. ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಹಾಗೆಯೇ ಆಗುತ್ತದೆ. ನನ್ನ ಮೊದಲ ಆದ್ಯತೆ ರಾಜ್ಯದಲ್ಲಿರುವ ಕೆಟ್ಟ ಸರ್ಕಾರವನ್ನು ತೆಗೆಯುವುದು. ಕೆಟ್ಟ ಸರ್ಕಾರ ತೆಗೆಯಲು ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಯಬೇಕು ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

90 ದಿನಗಳ ಬಳಿಕ ಜೈಲಿನಿಂದ ಹೊರಬಂದ ಪೈರಸಿ ಕಿಂಗ್ ಐಬೊಮ್ಮ ರವಿ – Kannada News | Ibomma Ravi got Interim bail after 90 days of arrest

ಪೈರಸಿ (Piracy) ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರವಿ ಅಲಿಯಾಸ್ ಐಬೊಮ್ಮ ರವಿ ನಿನ್ನೆ ಚಂಚಗುಡ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಐಬೊಮ್ಮ ಸೇರಿದಂತೆ ಕೆಲವು ಪೈರಸಿ ವೆಬ್​​ಸೈಟ್ ಮತ್ತು ಅಪ್ಲಿಕೇಶನ್​​ಗಳನ್ನು ನಡೆಸುತ್ತದ್ದ ರವಿಯನ್ನು ಮೂರು ತಿಂಗಳ ಹಿಂದೆ ಪೊಲೀಸರು ಬಂದಿಸಿದ್ದರು. ಐಬೊಮ್ಮ ರವಿ ವಿರುದ್ಧ ಪೈರಸಿಯ ಹಲವಾರು ಕೇಸುಗಳು ದಾಖಲಾಗಿದ್ದವು. ವಿದೇಶದಲ್ಲಿ ಕೂತು ಪೈರಸಿ ವೆಬ್​​ಸೈಟ್ ನಡೆಸುತ್ತಿದ್ದ ರವಿ, ಕೌಟುಂಬಿಕ ಕಾರಣಗಳಿಗಾಗಿ ಹೈದರಾಬಾದ್​​ಗೆ ಬಂದಾಗ ಆತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಬಂಧಿಸಿದ 90 ದಿನಗಳ ಬಳಿಕವೂ ಪೊಲೀಸರು ರವಿ ವಿರುದ್ಧ ಚಾರ್ಜ್​​ ಶೀಟ್ ದಾಖಲು ಮಾಡಿರಲಿಲ್ಲ. ಇದರ ಆಧಾರದ ಮೇಲೆ ಐಬೊಮ್ಮ ರವಿ ಜಾಮೀನು ಪಡೆದಿದ್ದಾರೆ. ಕೆಲವು ಕಠಿಣ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ರವಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರತಿ ದಿನವೂ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕುವುದು, ತನ್ನ ಪಾಸ್​​ಪೋರ್ಟ್ ಮತ್ತು ವಿಸಾಗಳನ್ನು ಪೊಲೀಸರಿಗೆ ಒಪ್ಪಿಸಬೇಕು, ದೇಶ ಬಿಟ್ಟು ಹೊರ ಹೋಗುವ ಪ್ರಯತ್ನ ಮಾಡುವಂತಿಲ್ಲ ಮತ್ತು ಪೈರಸಿ ವೆಬ್​ಸೈಟ್​​ಗಳ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ಹಾಕಿದೆ.

ಪೊಲೀಸರ ಪರವಾಗಿ ವಾದಿಸಿದ ವಕೀಲರು, ‘ರವಿ ಸಾವಿರಾರು ಕೋಟಿ ನಷ್ಟಕ್ಕೆ ಕಾರಣವಾಗಿದ್ದು, ಆತ ವಿದೇಶಿ ನಾಗರೀಕ ಸಹ ಆಗಿದ್ದಾನೆ. ಹಾಗಾಗಿ ಆತ ಪಲಾಯನ ಮಾಡುವ ಅಪಾಯ ಇದೆ’ ಎಂದಿದ್ದರು. ಆದರೆ 90 ದಿನಗಳ ಬಳಿಕವೂ ಚಾರ್ಜ್ ಶೀಟ್ ಸಲ್ಲಿಸದೇ ಇರುವುದನ್ನೇ ಮುಖ್ಯವಾಗಿ ಪರಿಗಣಿಸಿದ ನ್ಯಾಯಾಧೀಶರು ರವಿಗೆ ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಿದ್ದಾರೆ.

ಇದನ್ನೂ ಓದಿ:‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

ಐಬೊಮ್ಮ ರವಿ, ಸಾವಿರಾರು ಸಿನಿಮಾಗಳನ್ನು ಪೈರಸಿ ಮಾಡಿದ್ದ. ವಿದೇಶದಲ್ಲೇ ಕೂತು ತನ್ನ ಐಬೊಮ್ಮ ಸೇರಿದಂತೆ ಹಲವು ವೆಬ್​​ಸೈಟ್​​ಗಳಿಗೆ ಉಚಿತವಾಗಿ ಸಿನಿಮಾಗಳನ್ನು ಅಪ್​ಲೋಡ್ ಮಾಡುತ್ತಿದ್ದ. ಕೆಲವು ಬಾರಿಯಂತೂ ಸಿನಿಮಾಗಳು ಬಿಡುಗಡೆ ಆಗುವ ಮುಂಚೆಯೇ ಅವುಗಳನ್ನು ವೆಬ್​​ಸೈಟ್​​ಗೆ ಅಪ್​ಲೋಡ್ ಮಾಡಿಬಿಡುತ್ತಿದ್ದ. ತೆಲುಗು ಸಿನಿಮಾಗಳೇ ಹೆಚ್ಚಾಗಿ ಐಬೊಮ್ಮ ರವಿಯ ಟಾರ್ಗೆಟ್ ಆಗಿರುತ್ತಿದ್ದವು. ಕೆಲ ವರದಿಗಳ ಪ್ರಕಾರ, ಐಬೊಮ್ಮ ರವಿ ಒಬ್ಬನಿಂದಲೇ ತೆಲುಗು ಚಿತ್ರರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ತೆಲುಗು ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರ ಸಂಘ, ಫಿಲಂ ಚೇಂಬರ್​​ಗಳು ರವಿ ವಿರುದ್ಧ ಹಲವು ಬಾರಿ ದೂರು ನೀಡಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರುವ ವೇಳೆ ರೆಡ್​​​ ಹ್ಯಾಂಡ್​​​ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ – Kannada News | Karnataka Gold Crime: Hubballi Woman and KGF Soil Thieves Arrested*

ರಾಣೇಬೆನ್ನೂರು, ಫೆ.19: ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಬಂಗಾರವನ್ನು ಮಾರಾಟ ಮಾಡಲು ನಗರದ ಗೋಲ್ಡ್ ಲೋನ್ ಕಂಪನಿಗೆ ಬಂದಿದ್ದ ಮಹಿಳೆಯೊಬ್ಬಳನ್ನು ರಾಣೇಬೆನ್ನೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೇಕಾರ ಎಂದು ಗುರುತಿಸಲಾಗಿದೆ. ಈಕೆ ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಸುಮಾರು 236 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು 16 ಲಕ್ಷ ರೂ. ಮೌಲ್ಯ) ಮಾರಾಟ ಮಾಡಲು ರಾಣೇಬೆನ್ನೂರಿನ ಖಾಸಗಿ ಗೋಲ್ಡ್ ಕಂಪನಿಗೆ ಬಂದಿದ್ದಳು.

ಚಿನ್ನ ಮಾರಾಟ ಮಾಡಲು ಬಂದ ಮಹಿಳೆಯ ನಡವಳಿಕೆ ಮತ್ತು ಆಕೆಯ ಬಳಿಯಿದ್ದ ಚಿನ್ನದ ದಾಖಲೆಗಳ ಬಗ್ಗೆ ಗೋಲ್ಡ್ ಕಂಪನಿಯ ಸಿಬ್ಬಂದಿಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಈ ಬಗ್ಗೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರಾಣೇಬೆನ್ನೂರು ನಗರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯ ಬಳಿ ಒಟ್ಟು 236 ಗ್ರಾಂ ಚಿನ್ನ ಇರುವುದು ತಿಳಿದುಬಂದಿದೆ. ಅದರಲ್ಲಿ ಆಕೆ 40 ಗ್ರಾಂ ಚಿನ್ನವನ್ನು (ಸುಮಾರು 6 ಲಕ್ಷ ರೂ. ಮೌಲ್ಯ) ಮಾರಾಟ ಮಾಡಲು ಮುಂದಾಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಚಿನ್ನವನ್ನು ವಶಪಡಿಸಿಕೊಂಡಿದ್ದು, ಈಕೆಯ ಹಿಂದೆ ಬೇರೆ ಜಿಲ್ಲೆಯ ಕಳ್ಳರ ಗ್ಯಾಂಗ್ ಇದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಬಿಗ್​​​​ ಟ್ವಿಸ್ಟ್​: ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಖೈದಿಯಿಂದಲ್ಲೇ ಕನ್ನ!

ಕೋಲಾರದಲ್ಲಿ ಪ್ರತ್ಯೇಕ ಘಟನೆ:

ಕೆಜಿಎಫ್‌ನ ಐತಿಹಾಸಿಕ ಚಿನ್ನದ ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಚಿನ್ನ ಮಿಶ್ರಿತ ಮಣ್ಣನ್ನು ಕದಿಯುತ್ತಿದ್ದ ಎಂಟು ಜನರ ತಂಡವನ್ನು ಉರಿಗಾಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್‌ನ ಗಿಫ್ಫಾರ್ಟ್ ಶಾಪ್ಟ್ ಪ್ರದೇಶದಲ್ಲಿ ಈ ಗ್ಯಾಂಗ್ ಅಕ್ರಮವಾಗಿ ಪ್ರವೇಶಿಸಿತ್ತು. ಗಣಿಯ ಆಳದಿಂದ ಚಿನ್ನದ ಅಂಶವಿರುವ ಮಣ್ಣನ್ನು ಹೊರತೆಗೆದು ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ಒಟ್ಟು 8 ಚೀಲಗಳಲ್ಲಿ ತುಂಬಿದ್ದ ಚಿನ್ನ ಮಿಶ್ರಿತ ಮಣ್ಣನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಈ ಮಣ್ಣಿನ ಮೌಲ್ಯ ಸುಮಾರು 40,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತ ಎಂಟು ಆರೋಪಿಗಳ ವಿರುದ್ಧ ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಕೆಜಿಎಫ್ ಗಣಿ ಮುಚ್ಚಲ್ಪಟ್ಟಿದ್ದರೂ, ಇಂದಿಗೂ ಅದರ ಮಣ್ಣಿನಲ್ಲಿ ಚಿನ್ನದ ಅಂಶವಿರುವ ಕಾರಣ ಇಂತಹ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಈ ಜಾಲದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:21 am, Thu, 19 February 26

Source link

Vasthu Tips: ಮನೆಯ ಮುಂದೆ ಹುಣಸೆ ಮರ ಇದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Tamarind Tree and Vastu: Why Avoid It Near Home? Impact and Remedies

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಸುತ್ತಮುತ್ತಲಿನ ಪರಿಸರವು ಕುಟುಂಬದ ಸುಖ, ಸಮೃದ್ಧಿ ಮತ್ತು ಮಾನಸಿಕ ಶಾಂತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಅನೇಕರು ತಮ್ಮ ಮನೆಗಳ ಮುಂದೆ ಹಣ್ಣಿನ ಮರಗಳು, ಹೂವಿನ ಗಿಡಗಳು ಮತ್ತು ತರಕಾರಿ ಸಸ್ಯಗಳನ್ನು ನೆಟ್ಟು ಮನೆಗೆ ಹಸಿರಿನ ಸೊಬಗು ನೀಡುತ್ತಾರೆ. ಸಾಮಾನ್ಯವಾಗಿ ಇದು ಒಳ್ಳೆಯದ್ದೇ. ಆದರೆ ವಾಸ್ತು ತಜ್ಞರ ಪ್ರಕಾರ, ಕೆಲವು ಮರಗಳು ತಪ್ಪು ಸ್ಥಳದಲ್ಲಿ ಇದ್ದರೆ ವಾಸ್ತು ದೋಷಗಳಿಗೆ ಕಾರಣವಾಗಬಹುದು.

ವಿಶೇಷವಾಗಿ ಮನೆಯ ಮುಂದೆ ಅಥವಾ ಮನೆಯ ಹತ್ತಿರ ಹುಣಸೆ ಮರ ಇರುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಎಂದು ಹೇಳಲಾಗುತ್ತದೆ. ಹುಣಸೆ ಮರವು ಗಾಢ ನೆರಳನ್ನು ನೀಡುವ ಮರವಾಗಿದ್ದು, ಇದರ ನೆರಳು ಮನೆಯ ಮೇಲೆ ಶುಭವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ. ಮನೆಯ ಮುಖ್ಯ ಬಾಗಿಲಿನ ಎದುರು ಹುಣಸೆ ಮರ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಮುಂದೆ ಹುಣಸೆ ಮರ ಇರುವುದು ಮನೆಯ ಸದಸ್ಯರಿಗೆ ಆರ್ಥಿಕ ಸಮಸ್ಯೆ, ಕುಟುಂಬ ಕಲಹಗಳು ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ವಿಶೇಷವಾಗಿ ಮನೆಯ ಪ್ರವೇಶ ದ್ವಾರದ ಮುಂದೆ ಈ ಮರ ಇರುವುದರಿಂದ ಬಡತನ, ಸಾಲದ ಸಮಸ್ಯೆಗಳು ಮತ್ತು ಅಭಿವೃದ್ಧಿಯಲ್ಲಿ ವಿಳಂಬ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

ಆದ್ದರಿಂದ, ಮನೆಯ ಆವರಣದಲ್ಲಿ ಹುಣಸೆ ಮರ ನೆಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಈಗಾಗಲೇ ಹುಣಸೆ ಮರ ಇದ್ದರೆ, ಅದರ ನೆರಳು ಮನೆ ಮೇಲೆ ಬೀಳದಂತೆ ಕ್ರಮ ಕೈಗೊಳ್ಳುವುದು ಅಥವಾ ವಾಸ್ತು ಪರಿಹಾರಗಳನ್ನು ಅನುಸರಿಸುವುದು ಒಳಿತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link