All posts by nagaraj11081993

ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳ ಬಳಕೆ: ದೆಹಲಿಯಲ್ಲೂ ಸದ್ದು ಮಾಡಿದ ವಿವಾದ – Kannada News | Karnataka CA Site Row: Congress Accused of Land Grab for Offices, BJP Alleges 48 Cr Corruption

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿImage Credit source: Google

ಬೆಂಗಳೂರು, ಫೆಬ್ರವರಿ 18: ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳನ್ನು ಪಡೆದುಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪವೀಗ ದೆಹಲಿಯಲ್ಲೂ ಸದ್ದು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಗೌರವ್ ಭಾಟಿಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿದ್ದ 24 ಜಾಗಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಳಿಗಾಗಿ ಬಳಸಲು ಹೊರಟಿರುವುದು ಏಕೆ? ಈ 24 ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಅವುಗಳ ಮೌಲ್ಯ ಸುಮಾರು 50 ಕೋಟಿ ರೂಪಾಯಿ. ಆದರೆ ಭ್ರಷ್ಟಾಚಾರಕ್ಕೆ ಪ್ರಸಿದ್ಧವಾದ ಕಾಂಗ್ರೆಸ್‌ಗೆ ಅವುಗಳನ್ನು ಕೇವಲ 2 ಕೋಟಿಗೆ ನೀಡಲಾಗಿದೆ. ಇಲ್ಲಿ ಸ್ಪಷ್ಟವಾಗಿ 48 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವರ್ಗಾವಣೆಯ ಉದ್ದೇಶವೇನು? 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವುದೇ? ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮತ್ತು ದೇಶದ ಜನರು ಮಹತ್ವದವರಲ್ಲ. ಕಾಂಗ್ರೆಸ್ ಪಕ್ಷದ ಡಿಎನ್‌ಎಯೇ ಹೀಗಿದೆ . ಅವರು ‘ನಕಲಿ ಗಾಂಧಿ ಕುಟುಂಬ’ವನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ.  ಸಾರ್ವಜನಿಕ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ಸರ್ಕಾರಕ್ಕೆ ನೀಡದೇ ಕಾಂಗ್ರೆಸ್ ಆಸ್ತಿಯನ್ನಾಗಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರವಾನಗಿ ಸಿಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದಲೇ ಭೂಕಬಳಿಕೆ; ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ

ನಿನ್ನೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ವಿಧಾನ ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಾಖಲೆಗಳೊಂದಿಗೆ ಕಾಂಗ್ರೆಸ್​​ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ಬಡವರಿಗೆ ಮನೆ ಭೂಮಿ ನೀಡದೇ ಸರ್ಕಾರವೇ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಕೌಂಟರ್​​ ಕೊಟ್ಟಿದ್ದ ಡಿಸಿಎಂ ಡಿಕೆಶಿ

ಆದರೆ ಬಿಜೆಪಿ ಆರೋಪಗಳಿಗೆ ಕೌಂಟೆರ್​ ಕೊಟ್ಟಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​, ಬಿಜೆಪಿಯವರು RSS ಕಚೇರಿಗೆ ನೂರಾರು ಎಕರೆ ಕೊಟ್ಟಿಲ್ವೇ? ಚಾಣಕ್ಯ ವಿವಿ, RSS ಕಚೇರಿಗೆ ಜಮೀನು ನೀಡಿಲ್ಲವೇ ಎಂದು ಪ್ರಶ್ನಿಸಿದ್ದರು. ಬಿಜೆಪಿ ಅವಧಿಯಲ್ಲಿ ಬೆಂಗಳೂರಲ್ಲಿ 100ಕ್ಕೂ ಹೆಚ್ಚು ಕಡೆ ವಿವಿಧ ಟ್ರಸ್ಟ್​ಗಳ ಹೆಸರಿನಲ್ಲಿ ಜಾಗವನ್ನು ಪಡೆದಿದ್ದಾರೆ. ಚಾಣಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ. ಆದ್ರೆ, ಬಿಜೆಪಿಗರು ಎಕರೆಗೆ 50 ಲಕ್ಷದ ದರದಲ್ಲಿ 100 ಎಕರೆ ಮಂಜೂರು ಮಾಡಿದ್ದಾರೆ.ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ. ಹೀಗಾಗಿ ಬಿಜೆಪಿಯವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ಅವರು ಏನಾದರೂ ಆರೋಪಗಳನ್ನ ಮಾಡಿಕೊಳ್ಳಲಿ. ಎಲ್ಲ ಮಾನದಂಡಗಳ ಆಧಾರದ ಮೇಲೆ ಜಾಗ ಮಂಜೂರು ಮಾಡಲಾಗಿದ್ದು, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಹೋಗಲಿ ಎಂದು ಸವಾಲು ಹಾಕಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:26 pm, Wed, 18 February 26

Source link

ರೆಟ್ರೋ ಲುಕ್, ಎಲೆಕ್ಟ್ರಿಕ್ ಪವರ್: ಹೊಸ ಅವತಾರದಲ್ಲಿ ಮಾರುತಿ 800 ‘ಇವಿ’ ಬಂದರೆ ಹೇಗಿರುತ್ತೆ? – Kannada News | Maruti 800 EV Concept: Rishav Kumar’s Digital Render Blends Past and Future

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ‘ಮಾರುತಿ 800’ ಎಂಬುದು ಕೇವಲ ಒಂದು ಕಾರಲ್ಲ, ಅದು ಕೋಟ್ಯಾಂತರ ಕುಟುಂಬಗಳ ಕನಸು. 1983ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಪುಟ್ಟ ಕಾರು, ಅಗ್ಗದ ಬೆಲೆ ಮತ್ತು ಅದ್ಭುತ ಕಾರ್ಯಕ್ಷಮತೆಯಿಂದ ದೇಶವನ್ನೇ ಅಚ್ಚರಿಗೊಳಿಸಿತು. ಈಗ ಇದೇ ಲೆಜೆಂಡರಿ ಕಾರನ್ನು ಎಲೆಕ್ಟ್ರಿಕ್ ಕಾಲಕ್ಕೆ ತಕ್ಕಂತೆ ಆಧುನಿಕವಾಗಿ ಮರುಕಲ್ಪಿಸಿರುವ (Digital Render) ಚಿತ್ರಗಳು ವಾಹನ ಪ್ರಿಯರ ಗಮನ ಸೆಳೆಯುತ್ತಿವೆ. ಡಿಜಿಟಲ್ ಕಲಾವಿದ ರಿಷವ್ ಕುಮಾರ್ (Rishav Kumar) ಎಂಬುವವರು ಈ ಹೊಸ ಮಾರುತಿ 800 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮೂಲ ಕಾರಿನ ಸಾಂಪ್ರದಾಯಿಕ ‘ಬಾಕ್ಸಿ’ (ಚೌಕಾಕಾರದ) ವಿನ್ಯಾಸವನ್ನು ಉಳಿಸಿಕೊಂಡೇ ಇದಕ್ಕೆ ‘ಸೈಬರ್ ಪಂಕ್’ ಮತ್ತು ‘ಫ್ಯೂಚರಿಸ್ಟಿಕ್’ ಲುಕ್ ನೀಡಲಾಗಿದೆ.

ಕಾರಿನ ವಿನ್ಯಾಸದ ಪ್ರಮುಖ ಅಂಶಗಳು:

ನಿಯೋ-ರೆಟ್ರೋ ಶೈಲಿ: ಕಾರಿನ ಹಳೆಯ ಚಾರ್ಮ್ ಹಾಗೆಯೇ ಇದೆ, ಆದರೆ ಶಾರ್ಪ್ ಲೈನ್‌ಗಳು ಇದಕ್ಕೆ ಆಧುನಿಕ ಕಲೆ ನೀಡಿವೆ.

ಸ್ಮಾರ್ಟ್ ಲೈಟಿಂಗ್: ಮುಂಭಾಗದ ಹಳೆಯ ಗ್ರಿಲ್ ಬದಲಿಗೆ ಸಂಪೂರ್ಣವಾಗಿ ಮುಚ್ಚಿದ ಸ್ಲೀಕ್ ಫೇಸಿಯಾ ನೀಡಲಾಗಿದೆ. ಆಯತಾಕಾರದ ಹೆಡ್‌ಲ್ಯಾಂಪ್‌ಗಳ ಒಳಗೆ ಅಲ್ಟ್ರಾ-ಸ್ಲಿಮ್ ಎಲ್‌ಇಡಿ (LED) ಲೈಟ್ ಬಾರ್ ಇರುವುದು ಕಾರಿನ ಅಂದವನ್ನು ಹೆಚ್ಚಿಸಿದೆ.

ಹೈ-ಟೆಕ್ ಫೀಚರ್ಸ್: ಫ್ಲಶ್ ಡೋರ್ ಹ್ಯಾಂಡಲ್‌ಗಳು (ಬಾಗಿಲಿನ ಒಳಗೆ ಹುದುಗಿರುವ ಹ್ಯಾಂಡಲ್), ಏರೋ-ಡಿಸ್ಕ್ ವೀಲ್ಸ್‌ ಮತ್ತು ಕಪ್ಪು ಬಣ್ಣದ ಕ್ಲಾಡಿಂಗ್ ಈ ಕಾರಿಗೆ ಹೈ-ಟೆಕ್ ಲುಕ್ ನೀಡಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್

ಅಂದಿನ ಇಂಜಿನ್ vs ಇಂದಿನ ಕಲ್ಪನೆ:

80ರ ಕಾಲದಲ್ಲಿ ಮಾರುತಿ 800 ಕೇವಲ 796 ಸಿಸಿ (cc) ಇಂಜಿನ್ ಹೊಂದಿತ್ತು. ಅದು 40 ಹೊರ್ಸ್ ಪವರ್ ಮತ್ತು 59 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಅಂದಿನ ಕಾಲಕ್ಕೆ ಅಷ್ಟೇ ಸಾಕಾಗಿತ್ತು. ಆದರೆ ಈ ಹೊಸ ಡಿಜಿಟಲ್ ರೆಂಡರ್‌ನಲ್ಲಿ ಪೆಟ್ರೋಲ್ ಇಂಜಿನ್ ಬದಲಿಗೆ ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ವಾಹನಗಳ ಕ್ರಾಂತಿಯ ಸಂಕೇತವಾಗಿದೆ.

ಇಲ್ಲಿದೆ ನೋಡಿ ಇನ್ಸ್ಟಾಗ್ರಾಮ್​​ ಪೋಸ್ಟ್​

ಒಳಾಂಗಣ ವಿನ್ಯಾಸ:

ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಅಧಿಕೃತವಾಗಿ ತಯಾರಿಸಿಲ್ಲವಾದರೂ, ಈ ಡಿಜಿಟಲ್ ರೆಂಡರ್ ಹಳೆಯ ತಲೆಮಾರಿನ ನೆನಪುಗಳನ್ನು ಕೆರಳಿಸಿದೆ ಮತ್ತು ಹೊಸ ತಲೆಮಾರಿನ ಎಕೊ-ಫ್ರೆಂಡ್ಲಿ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಒಂದು ವೇಳೆ ಮಾರುತಿ 800 ಈ ರೂಪದಲ್ಲಿ ಮರಳಿದರೆ, ಅದು ಮತ್ತೊಮ್ಮೆ ಕ್ರಾಂತಿ ಮಾಡುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಊಟದ ಬಳಿಕ ವೀಳ್ಯದೆಲೆ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – Kannada News | Do you know how many benefits there are from eating betel leaves after meals?

ಭಾರತೀಯ ಸಂಸ್ಕೃತಿಯಲ್ಲಿ, ವೀಳ್ಯದೆಲೆ (betel leaves) ಬಹಳ ಪ್ರಾಮುಖ್ಯತೆಯಿದೆ. ಪೂಜೆ, ವಿವಾಹ ಸಮಾರಂಭವಾಗಿರಲಿ ಅಥವಾ ಯಾವುದೇ ಇತರ ಧಾರ್ಮಿಕ ಆಚರಣೆಯಾಗಿರಲಿ, ಪ್ರತಿ ಶುಭ ಸಂದರ್ಭದಲ್ಲಿಯೂ ವೀಳ್ಯದ ಎಲೆ ಇರಲೇಬೇಕು. ಧಾರ್ಮಿಕ ಮಹತ್ವ ಮಾತ್ರವಲ್ಲದೆ ಇದು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ವೀಳ್ಯದೆಲೆಗಳು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದ್ದು , ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಬಾಯಿಯ ದುರ್ವಾಸನೆಯನ್ನು ನಿವಾರಿಸಲು, ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕಾಗಿ ಹಿರಿಯರು ಊಟದ ಬಳಿಕ ಎಲೆ ಅಡಿಕೆ ಜಗಿಯೋದು.  ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ವೀಳ್ಯದೆಲೆ ತಿನ್ನುವುದರಿಂದ ಲಭಿಸುವ ಪ್ರಯೋಜನಗಳು:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ವೀಳ್ಯದೆಲೆಗಳಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ ಅತ್ಯಂತ ಪ್ರಯೋಜನಕಾರಿ. ಅವುಗಳನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಅಲ್ಲದೆ ಇದು ಅಜೀರ್ಣ, ಗ್ಯಾಸ್, ಮಲಬದ್ಧತೆ, ಹೊಟ್ಟೆಯುಬ್ಬರ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ: ಪ್ರತಿದಿನ ಊಟದ ನಂತರ ವೀಳ್ಯದೆಲೆ ತಿನ್ನುವುದರಿಂದ ಮನಸ್ಥಿತಿ ಸುಧಾರಣೆಯಾಗುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಡುತ್ತದೆ: ಊಟದ ನಂತರ ವೀಳ್ಯದ ಎಲೆಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಹುಣ್ಣುಗಳಂತಹ ಗಂಭೀರ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಬಾಯಿ ದುರ್ವಾಸನೆಯನ್ನು ತೆಗೆದುಹಾಕುತ್ತದೆ: ಬಾಯಿಯ ದುರ್ವಾಸನೆಯು ಅನೇಕ ಜನರನ್ನು ಕಾಡುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ವೀಳ್ಯದ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣವಾಗಿರುವ ಬಾಯಿಯಲ್ಲಿ ಬೆಳೆಯುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಇದು ಅತ್ಯುತ್ತಮ ನೈಸರ್ಗಿಕ ಬಾಯಿಯ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.

ದಂತ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ: ಹಲ್ಲುನೋವು, ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಗೆ ವೀಳ್ಯದ ಎಲೆಗಳು ತುಂಬಾ ಪ್ರಯೋಜನಕಾರಿ. ವೀಳ್ಯದ ಎಲೆಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ ಮತ್ತು ವಿಶಿಷ್ಟವಾದ ಸುವಾಸನೆಯನ್ನು ಹೊಂದಿರುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಅಗಿಯುವುದರಿಂದ ಒಸಡುಗಳು ಬಲಗೊಳ್ಳುತ್ತವೆ ಮತ್ತು ಹಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಗ್ಲೋಯಿಂಗ್ ಸ್ಕಿನ್‌ ನಿಮ್ಮದಾಗಲು ತಪ್ಪದೇ ಆಹಾರಗಳನ್ನು ಸೇವನೆ ಮಾಡಿ

ದೇಹವನ್ನು ಆರೋಗ್ಯವಾಗಿಡುತ್ತದೆ: ವೀಳ್ಯದೆಲೆಗಳು ಟ್ಯಾನಿನ್‌ಗಳು ಮತ್ತು ಪ್ರೊಪೇನ್ ಅನ್ನು ಒಳಗೊಂಡಿರುತ್ತವೆ, ಇದು ದೇಹದಿಂದ ವಿಷವನ್ನು ಹೊರಹಾಕಲು ಮತ್ತು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಅಮೇರಿಕನ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ವೀಳ್ಯದ ಎಲೆಗಳು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಅವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಶೀತ, ಕೆಮ್ಮು, ಗಂಟಲು ನೋವು ಮತ್ತು ಬಾಯಿಯ ದುರ್ವಾಸನೆಯಂತಹ ಸಾಮಾನ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಶತಮಾನಗಳಿಂದ ಆಯುರ್ವೇದದಲ್ಲಿ ಇದನ್ನು ಬಳಸಲಾಗುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BEL Recruitment 2026: BELನಲ್ಲಿ ನೇಮಕಾತಿ; ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | BEL Project Engineer Recruitment 2026: Apply for 12 Government Jobs for Engineers!

ಸರ್ಕಾರಿ ವಲಯದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಯುವ ಎಂಜಿನಿಯರ್‌ಗಳಿಗೆ ಸುವರ್ಣಾವಕಾಶ ದೊರೆತಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 09ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಒಟ್ಟು 12 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000ರೂ. ಸಂಬಳ ನೀಡಲಾಗುತ್ತದೆ. ರಕ್ಷಣಾ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ BELನಲ್ಲಿ ಕೆಲಸ ಮಾಡುವುದರಿಂದ ವೃತ್ತಿಪರ ಅನುಭವದ ಜೊತೆಗೆ ಗೌರವಾನ್ವಿತ ಸರ್ಕಾರಿ ಸೇವೆಯ ಅವಕಾಶವೂ ದೊರೆಯುತ್ತದೆ.

ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್, ದೂರಸಂಪರ್ಕ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ (CSE), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (EEE), ಇನ್ಫರ್ಮೇಷನ್ ಟೆಕ್ನಾಲಜಿ (IT) ವಿಷಯಗಳಲ್ಲಿ BE/B.Tech ಅಥವಾ ಸಂಬಂಧಿತ B.Sc ಪದವಿ ಪೂರ್ಣಗೊಳಿಸಿರಬೇಕು. 01-02-2026ರಂತೆ ಗರಿಷ್ಠ ವಯಸ್ಸು 32 ವರ್ಷವಾಗಿದ್ದು, OBC (NCL) ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕವಾಗಿ SC/ST/PwBD ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳು 400 ರೂ. ಆನ್‌ಲೈನ್ ಮೂಲಕ ಪಾವತಿಸಬೇಕು. ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು/ಅಥವಾ ಸಂದರ್ಶನದ ಮೂಲಕ ನಡೆಯಲಿದೆ. ಅಭ್ಯರ್ಥಿಗಳ ತಾಂತ್ರಿಕ ಜ್ಞಾನ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ವೃತ್ತಿಪರ ನೈಪುಣ್ಯವನ್ನು ಪರಿಗಣಿಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿ ಸಲ್ಲಿಸಲು ಆಸಕ್ತರು ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು. ನಂತರ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಮತ್ತು ಅನ್ವಯಿಸಿದರೆ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಕೊನೆಗೆ ಅರ್ಜಿ ಸಲ್ಲಿಸಿದ ನಂತರ ರಿಜಿಸ್ಟ್ರೇಶನ್ ಸಂಖ್ಯೆಯನ್ನು ಕ್ಯಾಪ್ಟರ್​ ಮಾಡಿ ಇಟ್ಟುಕೊಳ್ಳಿ.

ಮಾರ್ಚ್ 09ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಒಳಿತು. BELನಲ್ಲಿ ಕೆಲಸ ಮಾಡುವುದರಿಂದ ಕೇವಲ ಉದ್ಯೋಗವಷ್ಟೇ ಅಲ್ಲ, ದೇಶದ ರಕ್ಷಣಾ ಮತ್ತು ತಾಂತ್ರಿಕ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡುವ ಅವಕಾಶವೂ ಸಿಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಡುಗಿಗಾಗಿ ಮುಂಡರಗಿ ಬಸ್ ನಿಲ್ದಾಣದಲ್ಲಿ ವಾಮಾಚಾರ: ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಮಿತ್ರೋ.

ಗದಗ, (ಫೆಬ್ರವರಿ 18): ವಾಮಾಚಾರ ಪ್ರಯೋಗ ಎಂಬ ಪದವೇ ದಿಗಿಲು ಹುಟ್ಟಿಸುವಂಥದ್ದು. ಏಕೆಂದರೆ ಹೀಗೆ ವಾಮಾಚಾರ ಮಾಡಿದರೆ ಸಮಸ್ಯೆಗಳು ಹೇಗಾಗುತ್ತವೆ ಅಂದರೆ, ಕೆನ್ನೆ ಮೇಲೆ ಪೆಟ್ಟು ಬಿದ್ದ ಅನುಭವ ಆಗುತ್ತದೆ. ಆದರೆ ಹೊಡೆದವರು ಯಾರು ಎಂಬುದು ಕಣ್ಣಿಗೆ ಕಾಣಲ್ಲ. ಅದರಂತೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರ ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಹೋದ ವರ್ಷ ನಾ ಬಯಸಿದು ಸಿಕ್ಕಿಲ್ಲ. ಆದ್ರೆ ಈ ವರ್ಷ ತೊಗೊಳದೆ ಬಿಡಲ್ಲ ಎಂದು ನಕ್ಷತ್ರ ಆಕಾರದಲ್ಲಿ ಬಿಡಿಸಿ ಕಪ್ಪು ಬಣ್ಣದ ಗೊಂಬೆ, ಮೊಟ್ಟೆ, ಎಲೆ ಅಡಿಕೆ, ನಿಂಬೆಹಣ್ಣು ಇಟ್ಟು ವಾಮಾಚಾರ ಮಾಡಲಾಗಿದೆ. ಇದನ್ನು ಕಂಡು ಹೆದರಿದ ಸ್ಥಳೀಯರು, ದುಷ್ಕರ್ಮಿಗಳನ್ನು ಪತ್ತೆ ಮಾಡುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ – Kannada News | Indian companies to build big AI data center infrastructure in collab with Nvidia

ನವದೆಹಲಿ, ಫೆಬ್ರುವರಿ 18: ವಿಶ್ವದ ಅಗ್ರಮಾನ್ಯ ಎಐ ಚಿಪ್ ತಯಾರಕ ಕಂಪನಿ ಎನಿಸಿದ ಎನ್​ವಿಡಿಯಾ (Nvidia) ಹಲವು ಭಾರತೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಡಾಟಾ ಸೆಂಟರ್​ಗಳ ಇನ್​ಫ್ರಾಸ್ಟ್ರಕ್ಚರ್ ರೂಪಿಸಲು ಎನ್​ವಿಡಿಯಾದ ಶಕ್ತಿಶಾಲಿ ಚಿಪ್​ಗಳ ಬಳಕೆ ಆಗಲಿದೆ. ಯೋಟ್ಟಾ ಡಾಟಾ ಸರ್ವಿಸಸ್ (Yotta Data Services), ಎಲ್ ಅಂಡ್ ಟಿ (L&T, ಇ ಟು ಇ ನೆಟ್ವರ್ಕ್ಸ್ (E2E Networks), ನೆಟ್​ವೆಬ್ ಟೆಕ್ನಾಲಜೀಸ್ (Netweb Technologies) ಸಂಸ್ಥೆಗಳು ಎನ್​ವಿಡಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ.

ಯೋಟ್ಟಾದಿಂದ ಏಷ್ಯಾದ ಅತಿದೊಡ್ಡ ಎಐ ಕಂಪ್ಯೂಟಿಂಗ್ ಹಬ್

ಭಾರತದ ಡಾಟಾ ಸೆಂಟರ್ ಕಂಪನಿಯಾದ ಯೋಟ್ಟಾ ಡಾಟಾ ಸರ್ವಿಸಸ್ ಭಾರತದಲ್ಲಿ ಎಐ ಕಂಪ್ಯೂಟಿಂಗ್ ಹಬ್ ಅನ್ನು ನಿರ್ಮಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಎನ್​ವಿಡಿಯಾದ ಬ್ಲ್ಯಾಕ್​ವೆಲ್ ಅಲ್ಟ್ರಾ ಜಿಪಿಯುಗಳನ್ನು ಅಳವಡಿಸುವುದಾಗಿ ತಿಳಿಸಿದೆ. ಇದು ಏಷ್ಯಾದ ಅತಿದೊಡ್ಡ ಎಐ ಕಂಪ್ಯೂಟಿಂಗ್ ಹಬ್​ಗಳಲ್ಲಿ ಒಂದೆನಿಸಲಿದೆ. ಇದಕ್ಕಾಗಿ ಯೋಟಾ ಡಾಟಾ ಸರ್ವಿಸಸ್ ಸಂಸ್ಥೆ 2 ಬಿಲಿಯನ್ ಡಾಲರ್​ಗೂ ಅಧಿಕ ಹೂಡಿಕೆ ಮಾಡಲಿದ್ದು, ಆಗಸ್ಟ್​ನಿಂದ ಚಾಲನೆಗೊಳ್ಳುತ್ತದೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಎಲ್ ಅಂಡ್ ಟಿಯಿಂದ ಗೀಗಾವ್ಯಾಟ್ ಮಟ್ಟದ ಎಐ ಡಾಟಾ ಸೆಂಟರ್ ಫ್ಯಾಕ್ಟರಿ

ಎಲ್ ಅಂಡ್ ಟಿ ಸಂಸ್ಥೆ ಎನ್​ವಿಡಿಯಾ ಸಹಯೋಗದೊಂದಿಗೆ ಗೀಗಾವ್ಯಾಟ್ ಮಟ್ಟದ ಎಐ ಡಾಟಾ ಸೆಂಟರ್ ಫ್ಯಾಕ್ಟರಿಯೊಂದನ್ನು ಸ್ಥಾಪಿಸಲಿದೆ. ಇದರಲ್ಲಿ ಎಐ ಸಜ್ಜಿತ ಡಾಟಾ ಸೆಂಟರ್ ಇನ್​ಫ್ರಾಸ್ಟ್ರಕ್ಚರ್, ಸುಧಾರಿತ ಕಂಪ್ಯೂಟಿಂಗ್ ಪ್ಲಾಟ್​ಫಾರ್ಮ್​ಗಳು, ಇಕೋಸಿಸ್ಟಂ ನಿರ್ಮಾಣ ವ್ಯವಸ್ಥೆಗಳು ಇರಲಿವೆ.

ಎಲ್ ಅಂಡ್ ಟಿ ಸಂಸ್ಥೆ ಚೆನ್ನೈನಲ್ಲಿ 300 ಎಕರೆ ಪ್ರದೇಶದಲ್ಲಿ ಒಂದು ಡಾಟಾ ಸೆಂಟರ್ ಹೊಂದಿದೆ. ಅದು ಸದ್ಯಕ್ಕೆ 30 ಮೆಗಾವ್ಯಾಟ್ ಕೆಪಾಸಿಟಿಯ ಹೊಂದಿದ್ದು, ಮುಂದೆ ಅದನ್ನು ಗಿಗಾವ್ಯಾಟ್ ಮಟ್ಟಕ್ಕೆ ಏರಿಸುವ ಯೋಜನೆ ಇದೆ. ಅದಕ್ಕಾಗಿ ಎನ್​ವಿಡಿಯಾದ ಜಿಪಿಯು ಕ್ಲಸ್ಟರ್ ಅನ್ನು ನಿಯೋಜಿಸಲಿದೆ. ಇನ್ನು, ಮುಂಬೈನಲ್ಲಿ ಒಂದು ಡಾಟಾ ಸೆಂಟರ್ ನಿರ್ಮಾಣ ಆಗುತ್ತಿದ್ದು, ಅದರಲ್ಲಿ 40 ಮೆಗಾವ್ಯಾಟ್ ಸಾಮರ್ಥ್ಯ ಇರಲಿದೆ. ಇ2ಇ ನೆಟ್ವರ್ಕ್ಸ್ ಸಂಸ್ಥೆಯು ಟಿಐಆರ್ ಕ್ಲೌಡ್ ಕಂಪ್ಯೂಟ್ ಪ್ಲಾಟ್​ಫಾರ್ಮ್​ನಲ್ಲಿ ಎನ್​ವಿಡಿಯಾ ಬ್ಲ್ಯಾಕ್​ವೆಲ್ ಜಿಪಿಯು ಕ್ಲಸ್ಟರ್ ನಿರ್ಮಿಸುತ್ತಿದೆ.

ಇದನ್ನೂ ಓದಿ: ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ನೆಟ್ವೆಬ್ ಟೆಕ್ನಾಲಜೀಸ್​ನಿಂದ ಎಐ ಸೂಪರ್ ಕಂಪ್ಯೂಟಿಂಗ್ ಸಿಸ್ಟಂಗಳು

ನೆಟ್​ವೆಬ್ ಟೆಕ್ನಾಲಜೀಸ್ ಸಂಸ್ಥೆ ಭಾರತದಲ್ಲಿ ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂಗಳನ್ನು ನಿರ್ಮಿಸಲಿದೆ. ಇದಕ್ಕಾಗಿ ಎನ್​ವಿಡಿಯಾದ ಸೋವರಿನ್ ಎಐ ಡೆವಲಪ್ಮೆಂಟ್ ಟೂಲ್​ಗಳನ್ನು ಬಳಸಲಿದೆ. ವಿಶ್ವದರ್ಜೆಯ ಎಐ ಹಾರ್ಡ್​ವೇರ್​ಗಳನ್ನು ನಿರ್ಮಿಸುವ ಸಂಸ್ಥೆಯಾಗಿ ನೆಟ್​ವೆಬ್ ಪರಿವರ್ತನೆಗೊಳ್ಳುತ್ತಿರುವುದು ಗಮನಾರ್ಹ. ಈ ಬೆಳವಣಿಗೆ ಆಗುತ್ತಲೇ ನೆಟ್​ವೆಬ್ ಟೆಕ್ನಾಲಜೀಸ್​ನ ಷೇರುಗಳಿಗೆ ಪೇಟೆಯಲ್ಲಿ ಬಹಳ ಬೇಡಿಕೆ ಕುದುರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್​​ನ್ಯೂಸ್​? ಸೀಲ್ಡ್ ಲಿಕ್ಕರ್​​ ಬಾಟಲ್​​ ಸಾಗಾಟಕ್ಕೆ ಅನುಮತಿ? – Kannada News | Namma Metro Alcohol Policy Update: BMRCL Mulls Allowing Sealed Liquor Bottles on Delhi Model

ಬೆಂಗಳೂರು, ಫೆಬ್ರವರಿ 18: ಮದ್ಯಪ್ರಿಯರಿಗೆ ಬಿಎಂಆರ್​​ಸಿಎಲ್​ ಶೀಘ್ರವೇ ಶುಭಸುದ್ದಿ ಕೊಡುವ ನಿರೀಕ್ಷೆ ಇದ್ದು, ಸೀಲ್ಡ್ ಮಾಡಿರುವ ಮದ್ಯದ ಬಾಟಲಿಗಳನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಸಾಗಿಸಲು ಅನುಮತಿ ನೀಡುವ ಸಾಧ್ಯತೆ ಇದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲಿಯೂ ಮತ್ತೆ ಪ್ರಸ್ತಾಪಿಸಲಾಗಿದೆ. ತಾತ್ವಿಕ ಅನುಮತಿ ದೊರೆತಿದ್ದರೂ, ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದೆ.

ದೆಹಲಿ ಮಾದರಿಯನ್ನು ನಮ್ಮ ಮೆಟ್ರೋದಲ್ಲಿಯೂ ಅನುಸರಿಸುವ ಬಗ್ಗೆ ಚರ್ಚೆ ನಡೆದಿದೆ. ಪ್ರಸ್ತುತ ದೆಹಲಿ ಮೆಟ್ರೋದ ಏರ್‌ಪೋರ್ಟ್ ಮಾರ್ಗದಲ್ಲಿ ಮದ್ಯ ಸಾಗಿಸಲು ಅನುಮತಿ ಇದೆ. ನಮ್ಮ ಮೆಟ್ರೋ ಏರ್‌ಪೋರ್ಟ್‌ಗೆ ಸಂಪರ್ಕ ಹೊಂದಿದ ಬಳಿಕ, ರಾಜ್ಯದಲ್ಲಿಯೂ ಮೆಟ್ರೋಗಳಲ್ಲಿ ಮದ್ಯ ಸಾಗಾಟಕ್ಕೆ ಅನುಮತಿ ನೀಡುವ ಬಗ್ಗೆ ಸಮಾಲೋಚನೆ ನಡೆದಿದೆ. BMRCL ಅಧಿಕಾರಿಗಳ ಪ್ರಕಾರ ಮದ್ಯದ ಬಾಟಲಿ ಸಾಗಿಸಲು ಯಾವುದೇ ವಿಶೇಷ ಅನುಮತಿ ಅಥವಾ ಪ್ರತ್ಯೇಕ ಪರವಾನಗಿ ಅಗತ್ಯವಿಲ್ಲ. ಅನುಮೋದನೆ ಸಿಕ್ಕ ಬಳಿಕ ಮೆಟ್ರೋ ನಿಯಮಾವಳಿಗಳಲ್ಲಿ ಅಗತ್ಯ ತಿದ್ದುಪಡಿ ನಡೆಯಲಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋ ಆರಂಭ ಯಾವಾಗ? ಮಹತ್ವದ ಮಾಹಿತಿ ಹಂಚಿಕೊಂಡ ಬಿಎಂಆರ್​ಸಿಎಲ್

ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಪ್ರಸ್ತುತವಾಗಿ ಅನುಮತಿ ಇಲ್ಲ. ಹೀಗಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋದಲ್ಲಿ ಮದ್ಯ ಸೇವಿಸಿರುವವರು ಪ್ರಯಾಣಿಸಬಹುದು. ಆದರೆ ಸೇವನೆ ಅನುಮತಿಸಿದ ಮಿತಿಯೊಳಗೇ ಇರಬೇಕು ಎಂದಿದ್ದರೂ ಆ ಕುರಿತ ಸ್ಪಷ್ಟ ವಿವರಣೆ ನೀಡಲಾಗಿಲ್ಲ. ಪ್ರಯಾಣಿಕರು ಅಸಭ್ಯವಾಗಿ ವರ್ತಿಸಬಾರದು ಅಥವಾ ಇತರರಿಗೆ ಅಸೌಕರ್ಯ ಉಂಟುಮಾಡಬಾರದು ಎಂಬುದೇ ಈ ನಿಯಮದ ಉದ್ದೇಶ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮದ್ಯ ಸಾಗಿಸಲು ಏಕೆ ನಿಷೇಧ ಎಂಬ ಪ್ರಶ್ನೆ ಕೇಳಿಬರುತ್ತಿದೆ. ರೈಲಿನೊಳಗೆ ತಿನ್ನುವುದು ಮತ್ತು ಕುಡಿಯುವುದಕ್ಕೆ ಅನುಮತಿ ಇಲ್ಲದಿದ್ದರೂ ಸೀಲ್ಡ್ ಮಾಡಿದ ಬಾಟಲಿಯನ್ನು ಸಾಮಾನ್ಯ ಸರಕುಗಳಂತೆ ಸಾಗಿಸಲು ತೊಂದರೆ ಇರಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿವೆ. ಕೆಲವೆಡೆ ಭದ್ರತಾ ಸಿಬ್ಬಂದಿ ಬಾಟಲಿಗಳನ್ನು ಸಾಗಿಸಲು ಅವಕಾಶ ನೀಡಿದ ಉದಾಹರಣೆಗಳೂ ಇವೆ ಎಂದು ಅಧಿಕಾರಿಗಳು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್ – Kannada News | Akshay Kumar Bhooth Bangla song promo likely to be attached to Dhurandhar 2

‘ಧುರಂಧರ್ 2’ (Dhurandhar 2) ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಈಗಾಗಲೇ ‘ಧುರಂಧರ್’ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆದ್ದರಿಂದ ಅದರ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬ ಕೌತುಕ ಇದೆ. ‘ಧುರಂಧರ್ 2’ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಅಕ್ಷಯ್ ಕುಮಾರ್ (Akshay Kumar) ಕೂಡ ಕಾಣಿಸಿಕೊಳ್ಳಲಿದ್ದಾರೆ! ಆದರೆ ನೀವಂದುಕೊಂಡಂತೆ ಅಲ್ಲ.

ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಜೊತೆ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾದ ಪ್ರಚಾರ ಮಾಡಲು ಪ್ಲ್ಯಾನ್ ಮಾಡಲಾಗಿದೆ. ‘ಧುರಂಧರ್ 2’ ಜೊತೆ ‘ಭೂತ್ ಬಂಗ್ಲ’ ಸಿನಿಮಾದ ಪ್ರೋಮೋ ಸಾಂಗ್ ಅಟ್ಯಾಚ್ ಮಾಡಲಾಗುತ್ತದೆ. ಅಂದರೆ, ‘ಧುರಂಧರ್ 2’ ಸಿನಿಮಾ ಪ್ರದರ್ಶನ ಆಗುವ ಚಿತ್ರಮಂದಿರಗಳಲ್ಲಿ ‘ಭೂತ್ ಬಂಗ್ಲ’ ಪ್ರೋಮೋ ಸಾಂಗ್ ಕೂಡ ಬಿತ್ತರ ಆಗಲಿದೆ.

‘ಭೂತ್ ಬಂಗ್ಲ’ ಸಿನಿಮಾಗೆ ಪ್ರಿಯದರ್ಶನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ನಟಿಸಿದ್ದ ‘ಭೂಲ್ ಭುಲಯ್ಯ’ ಸಿನಿಮಾಗೂ ಪ್ರಿಯದರ್ಶನ್ ಅವರೇ ಆ್ಯಕ್ಷನ್-ಕಟ್ ಹೇಳಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಟೈಟಲ್ ಸಾಂಗ್ ಸಖತ್ ಜನಪ್ರಿಯತೆ ಪಡೆದಿತ್ತು. ಅದೇ ರೀತಿ ಈಗ ‘ಭೂತ್ ಬಂಗ್ಲ’ ಸಿನಿಮಾದಲ್ಲಿ ಕೂಡ ಸಾಂಗ್ ಹೈಲೈಟ್ ಆಗಲಿದೆ.

ಭೂತ್ ಬಂಗ್ಲ’ ಸಿನಿಮಾದ ಹಾಡನ್ನು ಅತಿ ಹೆಚ್ಚಿನ ಜನರಿಗೆ ತಲುಪಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದ್ದರಿಂದ ‘ಧುರಂಧರ್ 2’ ಸಿನಿಮಾ ಜೊತೆ ಹಾಡಿನ ಪ್ರೋಮೋವನ್ನು ಅಟ್ಯಾಚ್ ಮಾಡಲು ತೀರ್ಮಾನಿಸಲಾಗಿದೆ. ‘ಧುರಂಧರ್ 2’ ಆರಂಭಕ್ಕೂ ಮುನ್ನ ಅಥವಾ ಮಧ್ಯಂತರದಲ್ಲಿ ಈ ಪ್ರೋಮೋ ಪ್ರದರ್ಶನ ಆಗಲಿದೆ.

ಇದನ್ನೂ ಓದಿ: ಪಾರ್ಟಿ ವೇಳೆ ಜಗಳ: ಅಕ್ಷಯ್ ಕುಮಾರ್ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಗೆ ಏನಾಯ್ತು?

ಈ ಪ್ಲ್ಯಾನ್ ಬಗ್ಗೆ ‘ಭೂತ್ ಬಂಗ್ಲ’ ಸಿನಿಮಾದವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಆದರೆ ಗಾಸಿಪ್ ಜೋರಾಗಿದೆ. ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟ ಆಗಿದೆ. ಅಕ್ಷಯ್ ಕುಮಾರ್, ಟಬು, ಪರೇಶ್ ರಾವಲ್, ರಾಜ್​ಪಾಲ್ ಯಾದವ್ ಮುಂತಾದವರು ನಟಿಸಿರುವ ಈ ಸಿನಿಮಾ ಏಪ್ರಿಲ್ 10ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಇಡೀ ಕುಟುಂಬವೇ ದುರಂತ ಅಂತ್ಯ – Kannada News | Three of a family dies in head on collision road accident at miraj jamkhandi highway

ಬೆಳಗಾವಿ, (ಫೆಬ್ರವರಿ 18): ಜಮಖಂಡಿ- ಮಿರಜ್ ರಾಜ್ಯ ಹೆದ್ದಾರಿಯಲ್ಲಿ (miraj jamkhandi highway) ಭೀಕರ ರಸ್ತೆ ಅಪಘಾತದಲ್ಲಿ ಇಡೀ ಕುಟುಂಬ ದಾರುಣ ಅಂತ್ಯಕಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ. ಲಾರಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್​​ನಲ್ಲಿದ್ದ ಗಂಡ, ಹೆಂಡ್ತಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ ಗಿರೇಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ ಕುಂದ್ರಾಳಿ(27), ಮಗು ಆರಾಧ್ಯ ಕುಂದ್ರಾಳಿ(7) ಮೃತ ದುರ್ವೈವಿಗಳು. ಮೂವರು ಬೈಕ್ ಮೇಲೆ ಮಹಾರಾಷ್ಟ್ರದ ಮಿರಜ್ ನಿಂದ ಜಮಖಂಡಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗಿರೇಪ್ಪಾ, ಮಂಜುಳಾ ಹಾಗೂ ಆರಾಧ್ಯ ಒಂದೇ ಬೈಕ್​​ನಲ್ಲಿ ಮಿರಜ್ ನಿಂದ ಜಮಖಂಡಿಗೆ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​​ನಲ್ಲಿ ಗಂಡ-ಹೆಂಡ್ತಿ ಹಾಗೂ ಮಗಳು ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹಾರೂಗೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಾಲಕನ ಜೊತೆ ಮಾತಾಡಿದ್ದಕ್ಕೆ ಪತ್ನಿಯನ್ನೇ ಕೊಚ್ಚಿಕೊಂದ ಪತಿ!

ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸಾವು

 ಯಾದಗಿರಿ: ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಡೆದಿದೆ. ಪುನೀತ್ ಮೃತ ಮಗು. ಗಾಜರಕೋಟ ಗ್ರಾಮದ ವಿಸ್ಡಮ್ ಶಾಲೆಯ ವಿದ್ಯಾರ್ಥಿ ಪುನೀತ್ ನಿನ್ನೆ (ಫೆಬ್ರವರಿ 17) ಬಸ್​ನಿಂದ ಕೆಳಗೆ ಇಳಿಯುತ್ತಿದ್ದಂತೆ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ. ಆಗ ಬಸ್ ಪುನೀತ್ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಬಸ್ ಡ್ರೈವರ್​ಗೆ ಜೀವಾವಧಿ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಬಳಿಕ ಪೊಲೀಸರ ಮನವೊಲಿಕೆಯಿಂದ ಪ್ರತಿಭಟನೆ ಕೈಬಿಟ್ಟರು.

ಡಿವೈಡರ್’ಗೆ ಕಾರು ಡಿಕ್ಕಿ

ಬೀದರ್: ಡಿವೈಡರ್’ಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ. ಹುಮ್ನಾಬಾದ್ ತಾಲೂಕಿನ ಸಿಂಧನಕೇರಾದ ಕಾಶೀನಾಥ್ ಹಾಗೂ ಧುಮ್ಮನಸೂರ ನಿವಾಸಿ ನೀತೇಶ ಎನ್ನುವರು ಗಾಯಗೊಂಡಿದ್ದು, ಇವರನ್ನು ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಾರಾಷ್ಟ್ರದ ಉಮ್ಮರ್ಗಾ ಕಡೆಯಿಂದ ಹುಮ್ನಾಬಾದ್ ಕಡೆದ ತೆರಳುವಾಗ ಈ ದುರ್ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್ ತೊರೆದು ಭಾರತಕ್ಕೆ ಬರುವ ಸ್ಥಿತಿಯಲ್ಲಿಲ್ಲ; ಬಾಂಬೆ ಹೈಕೋರ್ಟ್​ಗೆ ವಿಜಯ್ ಮಲ್ಯ ಮಾಹಿತಿ – Kannada News | Not In A Position To leave England Vijay Mallya To Bombay High Court On Return To India

ನವದೆಹಲಿ, ಫೆಬ್ರವರಿ 18: ದೇಶಭ್ರಷ್ಟ ವಿಜಯ್ ಮಲ್ಯ (Vijay Mallya) ಒಂದುವೇಳೆ ತನ್ನ ವಿರುದ್ಧದ ಕಾನೂನಿನ ಅರ್ಜಿಯ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನು ಹೊಂದಿದ್ದರೆ ಅವರು ಭಾರತಕ್ಕೆ ಮರಳಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂದು ಬಾಂಬೆ ಹೈಕೋರ್ಟ್​ ತಿಳಿಸಿತ್ತು. ಮಾಜಿ ಮದ್ಯದ ದೊರೆ ವಿಜಯ್ ಮಲ್ಯ ಇಂದು ಬಾಂಬೆ ಹೈಕೋರ್ಟ್‌ಗೆ ಇದಕ್ಕೆ ಉತ್ತರ ತಿಳಿಸಿದ್ದು, ತಾನು ಯಾವಾಗ ಭಾರತಕ್ಕೆ ಮರಳುತ್ತೇನೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುವ ಸ್ಥಿತಿಯಲ್ಲಿಲ್ಲ ಎಂದು ಇಂಗ್ಲೆಂಡ್‌ನಲ್ಲಿ ಹೊರಡಿಸಲಾದ ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ವಿಜಯ್ ಮಲ್ಯ ಅವರ ಅರ್ಜಿಯು ಪರಾರಿಯಾದ ಆರ್ಥಿಕ ಅಪರಾಧಿಗಳ (FEO) ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ನೇತೃತ್ವದ ಬಾಂಬೆ ಹೈಕೋರ್ಟ್ ಪೀಠವು ಮಲ್ಯ ಅವರಿಗೆ ಮರಳಲು ಉದ್ದೇಶಿಸಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಅಂತಿಮ ಅವಕಾಶವನ್ನು ನೀಡಿತು. “ನೀವು ಹಿಂತಿರುಗಲೇಬೇಕು. ನೀವು ವಾಪಾಸ್ ಬರದಿದ್ದರೆ, ನಾವು ನಿಮ್ಮ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ನೀವು ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಾ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ನ್ಯಾಯಯುತವಾಗಿ, ನಾವು ನಿಮ್ಮ ಪ್ರಕರಣವನ್ನು ವಜಾಗೊಳಿಸುತ್ತಿಲ್ಲ. ನಿಮಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದೇವೆ” ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ದೇಶಭ್ರಷ್ಟರಿಬ್ಬರ ಸಂಭ್ರಮ; ವಿಜಯ್ ಮಲ್ಯ 70ನೇ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಲಲಿತ್ ಮೋದಿ

ವಿಜಯ್ ಮಲ್ಯ ಅವರು ಭಾರತಕ್ಕೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. “ನೀವು ಯಾವಾಗ ಬರುತ್ತೀರಿ? ನ್ಯಾಯಾಲಯದಲ್ಲಿ ನಿಮ್ಮ ದೈಹಿಕ ಉಪಸ್ಥಿತಿಯಿಲ್ಲದೆ ನೀವು ವಿಚಾರಣೆಗೆ ಅರ್ಹರು ಎಂದು ಈಗಾಗಲೇ ವಾದಿಸಿದ್ದೀರಿ. ಆದರೆ ಮೊದಲು ಅದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹೇಳಿದ್ದರು.

ತಮ್ಮ ವಿರುದ್ಧದ ವಿಚಾರಣೆಗಳು ವಿದೇಶದಲ್ಲಿ ನಡೆಯುತ್ತಿರುವುದರಿಂದ ಯುಕೆ ನ್ಯಾಯಾಲಯಗಳು ವಿಧಿಸಿರುವ ನಿರ್ಬಂಧಗಳ ಕಾರಣದಿಂದಾಗಿ ನನಗೆ ಭಾರತಕ್ಕೆ ಪ್ರಯಾಣವ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಜಯ್ ಮಲ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಎರಡನೇ ವಿಜಯ್ ಮಲ್ಯ ಆಗಿದ್ದರೇ ಸಿಜೆ ರಾಯ್? ಐಷಾರಾಮಿ ಜೀವನ, ನಷ್ಟದಿಂದ ಆಘಾತ! ಸ್ಫೋಟಕ ಮಾಹಿತಿ ಬಹಿರಂಗ

2016ರಿಂದ ಯುಕೆಯಲ್ಲಿ ನೆಲೆಸಿರುವ ವಿಜಯ್ ಮಲ್ಯ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ತಮ್ಮನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಾಗಿದ್ದರೆ ಇನ್ನೊಂದು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾಗಿದೆ. 70 ವರ್ಷ ವಯಸ್ಸಿನ ವಿಜಯ್ ಮಲ್ಯ ಭಾರತದಲ್ಲಿ ವಂಚನೆ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಏನಿದು ಪ್ರಕರಣ?:

ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಇಬ್ಬರೂ ಭಾರತದಲ್ಲಿ ಆರ್ಥಿಕ ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. 2018ರ ಕಾನೂನಿನ ಅಡಿಯಲ್ಲಿ ಒಟ್ಟು 15 ಜನ ದೇಶ ಬಿಟ್ಟು ಪರಾರಿಯಾಗಿರುವ ವ್ಯಕ್ತಿಗಳನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದೆ. ಈ ಪೈಕಿ 9 ಜನರು ಸಾರ್ವಜನಿಕ ವಲಯದ ಬ್ಯಾಂಕುಗಳ ವಿರುದ್ಧ ದೊಡ್ಡ ಪ್ರಮಾಣದ ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದು, ಇದರ ಪರಿಣಾಮವಾಗಿ 26,645 ಕೋಟಿ ರೂ. ಮೂಲ ನಷ್ಟವಾಗಿದೆ. 2025ರ ಅಕ್ಟೋಬರ್ 31ರವರೆಗೆ ಈ ಸಾಲಗಳ ಮೇಲಿನ ಬಡ್ಡಿ 31,437 ಕೋಟಿ ರೂ.ಗಳಾಗಿದ್ದು, ಅಪರಾಧಿಗಳಿಂದ 19,187 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link