ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಿಸಿದ ಅತಿಥಿಗಳು – Kannada News | By Election Fever: Davangere Wedding Hall Turns Into Result Viewing Centre
ದಾವಣಗೆರೆ, ಮೇ 04: ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಆಗಮಿಸಿದ್ದ ಅತಿಥಿಗಳು ಟಿವಿ9 ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮತ ಎಣಿಕೆಯ ನೇರಪ್ರಸಾರದ ವೀಕ್ಷಣೆಯಲ್ಲಿ ನಿರತರಾಗಿದ್ದರು. ದಾವಣಗೆರೆ ದಕ್ಷಿಣ, ಬಾಗಲಕೋಟೆ ಹಾಗೂ ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳನ್ನು ಜನರು ವಿಶೇಷ ಆಸಕ್ತಿಯಿಂದ ವೀಕ್ಷಿಸುತ್ತಿರೋ ದೃಶ್ಯ ಕಂಡುಬಂತು. ಮದುವೆ ಮನೆಯ ಆವರಣದಲ್ಲಿ ಟಿವಿ ಅಳವಡಿಸಲಾಗಿದ್ದು, ಸಾಮಾಜಿಕ ಕಾರ್ಯಕ್ರಮದ ನಡುವೆಯೂ ಚುನಾವಣಾ ಫಲಿತಾಂಶಗಳಿಗೆ ನೀಡಿದ ಗಮನ ರಾಜಕೀಯ ಪ್ರಜ್ಞೆಗೆ ಸಾಕ್ಷಿ ಎಂಬಂತಿತ್ತು. ಚುನಾವಣಾ ಫಲಿತಾಂಶದ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ. Source link