All posts by nagaraj11081993

Assembly Election Results 2026 Live: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಲೈವ್ ವಿಡಿಯೋ – Kannada News | Assembly Election Results 2026 Live Streaming on 5 State Vidhan Sabha poll Result Online in Kannada

ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ಆರಂಭವಾಗಿದೆ, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಪಟ್ಟಕ್ಕಾಗಿ ಬಿಗ್ ಫೈಟ್​​ ನಡೆಲಿದೆ. ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಕ್ಷಣ ಕ್ಷಣದ ಲೈವ್ ವಿಡಿಯೋ ಇಲ್ಲಿದೆ ನೋಡಿ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಅಬ್ಬಬ್ಬಾ! ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಎಲ್ಲದಕ್ಕಿಂತ ಉತ್ತಮ! – Kannada News | Bangalore Air Pollution Crisis: Bengaluru Air quality gets better along with all places

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಎಲ್ಲದಕ್ಕಿಂತ ಉತ್ತಮ!

ಬೆಂಗಳೂರು, ಮೇ 04: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿಯ ಏರ್ ಕ್ವಾಲಿಟಿ  (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಹುಬ್ಬಳ್ಳಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 88ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಹುಬ್ಬಳ್ಳಿ ಏರ್ ಕ್ವಾಲಿಟಿ ಇಂದು 68ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 88
  • ಮಂಗಳೂರು-122
  • ಮೈಸೂರು – 104
  • ಬೆಳಗಾವಿ – 50
  • ಕಲಬುರ್ಗಿ-93
  • ಶಿವಮೊಗ್ಗ –100
  • ಬಳ್ಳಾರಿ – 110
  • ಹುಬ್ಬಳ್ಳಿ- 68
  • ಉಡುಪಿ –110
  • ವಿಜಯಪುರ – 75

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಇತಿಹಾಸದಲ್ಲಿ ಸಿಎಂ ಆದ ಚಿತ್ರರಂಗದ ತಾರೆಯರಿವರು – Kannada News | Vijay’s TVK: Can Dalapathi Redefine Tamil Nadu Politics Amid Election Counting?

ತಮಿಳುನಾಡು ಮತ್ತು ಸಿನಿಮಾ ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮುವ ಇಲ್ಲಿನ ಸಂಪ್ರದಾಯ ಈಗ ಹೊಸ ಹಂತಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿ, ಮತ ಎಣಿಕೆಯ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ, ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಪ್ರಭಾವ ಎಷ್ಟಿರಬಹುದು ಎಂಬ ಚರ್ಚೆ ಜೋರಾಗಿದೆ.

ಈ ಹಿಂದೆ ಎಂ.ಜಿ. ರಾಮಚಂದ್ರನ್ (MGR) ಅವರು ತಮ್ಮ ಸಿನೆಮಾ ವರ್ಚಸ್ಸಿನಿಂದ ಎಐಎಡಿಎಂಕೆ ಕಟ್ಟಿ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದರು. ಅವರ ಹಾದಿಯಲ್ಲೇ ಬಂದ ಜಯಲಲಿತಾ ಅವರು ‘ಅಮ್ಮ’ನಾಗಿ ರಾಜ್ಯವಾಳಿದರು. ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಅವರು ದಶಕಗಳ ಕಾಲ ಡಿಎಂಕೆ ಪಕ್ಷದ ಭದ್ರಕೋಟೆಯನ್ನು ಕಾಯ್ದುಕೊಂಡಿದ್ದರು. ಇದೀಗ ಮತ ಎಣಿಕೆಯ ಈ ಸಂದರ್ಭದಲ್ಲಿ ವಿಜಯ್ ಅವರು ಈ ದಿಗ್ಗಜರ ಸಾಲಿಗೆ ಸೇರಬಲ್ಲರೇ ಎಂಬುದು ಸದ್ಯದ ಕುತೂಹಲ.

ಬದಲಾದ ರಾಜಕೀಯ ಚಿತ್ರಣ:

ಈ ಹಿಂದೆ ‘ಕ್ಯಾಪ್ಟನ್’ ವಿಜಯಕಾಂತ್ ಅವರು ಡಿಎಂಡಿಕೆ ಮೂಲಕ ಅಲ್ಪಾವಧಿಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ಅವರ ‘ಮಕ್ಕಳ್ ನೀಧಿ ಮೈಯಂ’ ಆಡಳಿತ ಸುಧಾರಣೆಯ ಮಾತನಾಡುತ್ತಾ ಮತದಾರರ ಗಮನ ಸೆಳೆದಿತ್ತು. ಆದರೆ, ದಳಪತಿ ವಿಜಯ್ ಅವರ ಎಂಟ್ರಿ ಇವೆಲ್ಲಕ್ಕಿಂತ ಭಿನ್ನವಾಗಿದೆ. ಅಪಾರ ಯುವ ಸಮೂಹವನ್ನು ಹೊಂದಿರುವ ವಿಜಯ್, ಚುನಾವಣಾ ಕಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ?

ಮತ ಎಣಿಕೆಯತ್ತ ಎಲ್ಲರ ಚಿತ್ತ:

ಚುನಾವಣೋತ್ತರ ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರು ವಿಜಯ್ ಅವರ ಪ್ರಭಾವದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ತಾರೆಗಳೇ ಆಳುತ್ತಿದ್ದ ತಮಿಳುನಾಡಿನಲ್ಲಿ, ಈಗಿನ ಮತದಾರರು ನಟ ವಿಜಯ್ ಅವರಿಗೆ ‘ಪವರ್’ ನೀಡುತ್ತಾರಾ? ಅಥವಾ ಹಳೆಯ ದ್ರಾವಿಡ ಪಕ್ಷಗಳೇ ಅಧಿಪತ್ಯ ಮುಂದುವರಿಸುತ್ತವೆಯೇ? ಎಂಬ ಪ್ರಶ್ನೆಗೆ ಮತ ಎಣಿಕೆಯ ಅಂತ್ಯದಲ್ಲಿ ಉತ್ತರ ಸಿಗಲಿದೆ. ವಿಜಯ್ ಅವರ ಈ ಹೊಸ ಇನ್ನಿಂಗ್ಸ್ ತಮಿಳು ರಾಜಕೀಯದ ಭವಿಷ್ಯವನ್ನು ನಿರ್ಧರಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

15,660 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್​ನ 3 ತಂಡಗಳು ಮಾರಾಟ..! – Kannada News | Mittals, Poonawalla Buy Rajasthan Royals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಮತ್ತೊಂದು ಫ್ರಾಂಚೈಸಿ ಮಾರಾಟವಾಗಿದೆ. ಈ ಬಾರಿ ಮಾರಾಟವಾಗಿದ್ದು ರಾಜಸ್ಥಾನ್ ರಾಯಲ್ಸ್​. ವಿಶ್ವದ ಖ್ಯಾತ ಉಕ್ಕು ಉದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ನೇತೃತ್ವದ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರು ಜಂಟಿಯಾಗಿ ‘ರಾಜಸ್ಥಾನ ರಾಯಲ್ಸ್’ ತಂಡವನ್ನು ಭರ್ಜರಿ 15,660 ಕೋಟಿ ರೂಪಾಯಿ ($1.65 ಬಿಲಿಯನ್) ಮೊತ್ತಕ್ಕೆ ಖರೀದಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯ ಹಿಂದಿನ ಮಾಲೀಕರು ಯಾರು?

  • ಮನೋಜ್ ಬಡಾಲೆ ಅವರ ನೇತೃತ್ವದ ಎಮರ್ಜಿಂಗ್ ಮೀಡಿಯಾ  ರಾಜಸ್ಥಾನ್ ರಾಯಲ್ಸ್​ ತಂಡದ ಶೇ. 65 ರಷ್ಟು ಪಾಲನ್ನು ಹೊಂದಿದ್ದರು.
  • ಅಮೆರಿಕ ಮೂಲದ ಈ ಹೂಡಿಕೆ ಸಂಸ್ಥೆ ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್ನರ್ಸ್ 2021 ರಲ್ಲಿ ಆರ್​ಆರ್ ಫ್ರಾಂಚೈಸಿಯ ಶೇ. 15 ರಷ್ಟು ಪಾಲನ್ನು ಖರೀದಿಸಿದ್ದರು.
  • ಲಚ್ಲನ್ ಮರ್ಡೋಕ್ ಅವರು ಸಹ ತಂಡದಲ್ಲಿ ಗಮನಾರ್ಹ ಹೂಡಿಕೆ ಹೊಂದಿದ್ದರು.

ಈಗ ಯಾರು ಪಾಲು ಎಷ್ಟು?

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಇದೀಗ ಮಿತ್ತಲ್ ಫ್ಯಾಮಿಲಿ ಹಾಗೂ ಆದಾರ್ ಪೂನಾವಾಲಾ ಜಂಟಿಯಾಗಿ ಖರೀದಿಸಿದ್ದಾರೆ. ಈ ಖರೀದಿಯೊಂದಿಗೆ ಇದೀಗ ಆರ್​ಆರ್​ ಫ್ರಾಂಚೈಸಿಯಲ್ಲಿ ಮೂವರು ಮಾಲೀಕರು ರಚನೆಯಾಗಿದ್ದಾರೆ. ಅವರೆಂದರೆ…

  • ಮಿತ್ತಲ್ ಕುಟುಂಬ: ಶೇಕಡಾ 75 ರಷ್ಟು ಪಾಲು ಹೊಂದಲಿದ್ದು, ಬಹುಮತದ ಮಾಲೀಕರಾಗಿ ಹೊರಹೊಮ್ಮಿದ್ದಾರೆ.
  • ಆದಾರ್ ಪೂನಾವಾಲಾ: ಸುಮಾರು ಶೇಕಡಾ 18 ರಷ್ಟು ಪಾಲನ್ನು ಖರೀದಿಸಿದ್ದಾರೆ.
  • ಮನೋಜ್ ಬಡಾಲೆ ಮತ್ತು ತಂಡ: ಈ ಹಿಂದಿನ ಮಾಲೀಕರಾದ ಮನೋಜ್ ಬಡಾಲೆ ಮತ್ತು ಅವರ ಹೂಡಿಕೆದಾರರು ಉಳಿದ ಶೇಕಡಾ 7 ರಷ್ಟು ಪಾಲನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

 3 ತಂಡಗಳು ಮಾರಾಟ!

ಈ ಮಾರಾಟ ಪ್ರಕ್ರಿಯೆಯು ಕೇವಲ ಐಪಿಎಲ್ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ರಾಜಸ್ಥಾನ್ ರಾಯಲ್ಸ್ ಒಡೆತನದ ಉಳಿದ ಎರಡು ಟೀಮ್​ಗಳನ್ನು ಸೇರಿ ಹೊಸ ಒಪ್ಪಂದ ಮಾಡಲಾಗಿದೆ. ಅದರಂತೆ ಆರ್​ಆರ್ ಫ್ರಾಂಚೈಸಿ ಮಾರಾಟ ಮಾಡಿದ 3 ತಂಡಗಳು ಈ ಕೆಳಗಿನಂತಿದೆ…

  • ರಾಜಸ್ಥಾನ್ ರಾಯಲ್ಸ್​ (ಇಂಡಿಯನ್ ಪ್ರೀಮಿಯರ್ ಲೀಗ್)
  • ಬಾರ್ಬಡೋಸ್ ರಾಯಲ್ಸ್​ (ಕೆರಿಬಿಯನ್ ಪ್ರೀಮಿಯರ್ ಲೀಗ್, ವೆಸ್ಟ್ ಇಂಡೀಸ್)
  • ಪಾರ್ಲ್ ರಾಯಲ್ಸ್​ (ಸೌತ್ ಆಫ್ರಿಕಾ ಟಿ20 ಲೀಗ್​).

ಈ ಮೂರು ತಂಡಗಳನ್ನು ಲಕ್ಷ್ಮಿ ಎನ್. ಮಿತ್ತಲ್ ನೇತೃತ್ವದ ಮಿತ್ತಲ್ ಕುಟುಂಬ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರು ಜಂಟಿಯಾಗಿ 15,660 ಕೋಟಿ ರೂ.ಗೆ ಖರೀದಿಸಿದ್ದಾರೆ.

ಮನೋಜ್ ಬಡಾಲೆ ಮುಂದುವರಿಕೆ:

ತಂಡದ ಸುಗಮ ನಿರ್ವಹಣೆ ಮತ್ತು ಸ್ಥಿರತೆಗಾಗಿ, ಪ್ರಸ್ತುತ ಮಾಲೀಕ ಮನೋಜ್ ಬಡಾಲೆ ಅವರು ಬೋರ್ಡ್ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಹಳೆಯ ಮತ್ತು ಹೊಸ ಆಡಳಿತದ ನಡುವೆ ಅವರು ಕೊಂಡಿಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಹಂತವೇನು?

ಈ ವ್ಯವಹಾರವು 2026 ರ ಮೂರನೇ ತ್ರೈಮಾಸಿಕದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇದಕ್ಕೆ ಬಿಸಿಸಿಐ (BCCI), ಐಪಿಎಲ್ ಆಡಳಿತ ಮಂಡಳಿ ಮತ್ತು ಭಾರತೀಯ ಸ್ಪರ್ಧಾ ಆಯೋಗದ (CCI) ಅಂತಿಮ ಅನುಮೋದನೆ ಬಾಕಿ ಇದೆ. ಅದರಂತೆ ಐಪಿಎಲ್ 2027 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಹೊಸ ಮಾಲೀಕರ ಅಧೀನದಲ್ಲಿ ಕಣಕ್ಕಿಳಿಯಲಿದೆ.

ಆರ್​ಸಿಬಿ ಹೆಸರಿನಲ್ಲೇ ಉಳಿದ ದಾಖಲೆ:

ಐಪಿಎಲ್​ ಇತಿಹಾಸದಲ್ಲೇ ಅತೀ ದುಬಾರಿ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ.

ಕೆಲ ತಿಂಗಳುಗಳ ಹಿಂದೆಯಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ (Aditya Birla Group) ನೇತೃತ್ವದ ಒಕ್ಕೂಟವು ಸುಮಾರು 16,660 ಕೋಟಿ ರೂಪಾಯಿಗಳಿಗೆ ($1.78 ಬಿಲಿಯನ್) ಖರೀದಿಸಿತ್ತು. ಈ ಒಕ್ಕೂಟದಲ್ಲಿ ಟೈಮ್ಸ್ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಕಂಪನಿಗಳು ಪಾಲುದಾರಿಕೆಯನ್ನು ಹೊಂದಿವೆ.

ಇದನ್ನೂ ಓದಿ: IPL 2026: RCB ತಂಡದ ಪ್ಲೇಆಫ್ ಲೆಕ್ಕಾಚಾರ ಹೀಗಿದೆ

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆಯನ್ನು ಆರ್​ಸಿಬಿ ನಿರ್ಮಿಸಿತ್ತು. ಇದೀಗ 15,660 ಕೋಟಿ ರೂ.ಗೆ ರಾಜಸ್ಥಾನf ರಾಯಲ್ಸ್​ನ ಫ್ರಾಂಚೈಸಿಯ ತಂಡಗಳನ್ನು ಮಾರಾಟ ಮಾಡಲಾಗಿದೆ.

Source link

ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ? – Kannada News | Trisha Krishnan Visits Tirupati on TN Election Result Day; Special Pooja for Thalapathy Vijay?

ದಳಪತಿ ವಿಜಯ್​​ಗೆ ಇಂದು (ಮೇ 4) ಪ್ರಮುಖ ದಿನ. ಏಕೆಂದರೆ, ಇಂದು ತಮಿಳುನಾಡು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಚುನಾವಣೆ ಸ್ಪರ್ಧಿಸಿದ್ದಾರೆ. ಮತ ಎಣಿಕೆ ಆರಂಭಕ್ಕೂ ಮೊದಲು ತ್ರಿಷಾ ಅವರು ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವಿಶೇಷ ಪೂಜೆ ದಳಪತಿ ವಿಜಯ್​​ಗೋಸ್ಕರವೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಸಾಹಸವೋ ಅಥವಾ ಸಾವಿನೊಂದಿಗೆ ಆಟವೋ, ಟ್ರಾಫಿಕ್ ಎಂದು ಟ್ರಕ್​ ಅಡಿ ಗಾಡಿ ಸಮೇತ ನುಗ್ಗುತ್ತಿರುವ ಬೈಕ್ ಸವಾರರು – Kannada News | Risky Bike Maneuver Near Moving Truck Raises Road Safety Concerns

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಮತ್ತು ಕ್ಷಣಿಕ ಸಾಹಸ ಪ್ರದರ್ಶಿಸಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಚಲಿಸುವ ಬೃಹತ್ ವಾಹನಗಳ ಬಳಿ ಬೈಕ್ ಸವಾರರು ಮಾಡುವ ಇಂತಹ ಅಪಾಯಕಾರಿ ಸಾಹಸಗಳು ಮತ್ತು ನಂತರ ಚಾಲಕರ ಮೇಲೆ ಗೂಬೆ ಕೂರಿಸುವ ಪ್ರವೃತ್ತಿಯ ಕುರಿತಾದ ವಿಡಿಯೋ ಇಲ್ಲಿದೆ. ರಸ್ತೆ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಿ, ಚಲಿಸುವ ಟ್ರಕ್‌ಗಳ ಅಡಿಯಲ್ಲಿ ಅಥವಾ ಅತ್ಯಂತ ಸಮೀಪದಲ್ಲಿ ಬೈಕ್ ನುಗ್ಗಿಸುವ ‘ಸ್ಟಂಟ್’ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಘಟನೆಗಳು ಕೇವಲ ಅಪಘಾತಗಳಿಗೆ ಕಾರಣವಾಗುವುದಲ್ಲದೆ,ಟ್ರಕ್ ಚಾಲಕರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿವೆ. ಟ್ರಾಫಿಕ್ ಇದೆ ಎಂದು ಬೈಕ್ ಸವಾರರು ಟ್ರಕ್ ಅಡಿ ಗಾಡಿಯೊಂದಿಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

‘ಸೂರ್ಯವಂಶ’ ಸ್ಟೈಲ್​​ನಲ್ಲಿ ಬಂತು ‘ಕ್ವಾಟ್ಲೆ ಕಿಚನ್ 2’ ಪ್ರೋಮೋ – Kannada News | Kwatle Kitchen 2 Promo Goes Viral! Colors Kannada Show Returns in Suryavamsha Style

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಭಿನ್ನ ಹಾಗೂ ಹಾಸ್ಯಭರಿತ ಅಡುಗೆ ಕಾರ್ಯಕ್ರಮ ‘ಕ್ವಾಟ್ಲೆ ಕಿಚನ್’ ಈಗ ಮತ್ತೆ ಸುದ್ದಿಯಲ್ಲಿದೆ. ಈ ಹಿಂದೆ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದ ಈ ಶೋ, ಇದೀಗ ಹೊಸ ರೂಪದಲ್ಲಿ ಹಾಗೂ ಹೊಸ ಸೀಸನ್‌ನೊಂದಿಗೆ ಮರಳಿ ಬರಲು ರೆಡಿ ಆಗಿದೆ. ಇದರ ಪ್ರೋಮೋ ಗಮನ ಸೆಳೆದಿದೆ. ‘ಸೂರ್ಯವಂಶ’ ಸ್ಟೈಲ್​​​ನಲ್ಲಿ ಪ್ರೋಮೋ ಮೂಡಿ ಬಂದಿದೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಗಮನ ಸೆಳೆದಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಹಾಗೂ ಹೊಸ ಆರಂಭದ ಮುನ್ಸೂಚನೆ ನೀಡುವಂತೆ ಈ ಪೋಸ್ಟ್ ಕಂಡುಬರುತ್ತಿದೆ. ‘ಕ್ವಾಟ್ಲೆ ಕಿಚನ್’ ಎಂದರೆ ಕೇವಲ ಅಡುಗೆಯಷ್ಟೇ ಅಲ್ಲ, ಅಲ್ಲಿನ ಕಿಚಾಯಿಸುವಿಕೆ, ಹಾಸ್ಯದ ತುಣುಕುಗಳು ಮತ್ತು ಅತಿಥಿಗಳ ಕಾಲೆಳೆಯುವ ಗುಣ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಅದು ಈಗಲೂ ಮುಂದುವರಿಯಲಿದೆ.

ಇದನ್ನೂ ಓದಿ: ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’

ಆಲೂಗಡ್ಡೆ -ಬೆಂಡೆಕಾಯಿ ವಿವಾಹ ಆಗುತ್ತದೆ. ಆ ಬಳಿಕ ಆಲೂಗಡ್ಡೆ ಅಪ್ಪ ನವಜೋಡಿಗಳಾದ ಆಲೂಗಡ್ಡೆ-ಬೆಂಡೆಕಾಯಿಯನ್ನು ಹೊರಹಾಕುತ್ತಾರೆ. ಆಗ ಈ ಜೋಡಿ ತೆರಳೋದು ಕ್ವಾಟ್ಲೆ ಕಿಚನ್​ಗೆ.

ಈ ಹಿಂದೆ ಪ್ರಸಾರವಾದಾಗ, ಸಿನೆಮಾ ತಾರೆಯರು ಹಾಗೂ ಕಿರುತೆರೆಯ ಕಲಾವಿದರು ಈ ಶೋನಲ್ಲಿ ಭಾಗವಹಿಸಿ ತಮ್ಮ ಅಡುಗೆ ಕೌಶಲ್ಯದ ಜೊತೆಗೆ ವೈಯಕ್ತಿಕ ಜೀವನದ ತಮಾಷೆಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತಿದ್ದರು. ಅಡುಗೆ ಮಾಡುವ ಗಡಿಬಿಡಿಯಲ್ಲಿ ನಡೆಯುವ ಎಡವಟ್ಟುಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಅದೇ ಹಳೆಯ ಲವಲವಿಕೆ ಕಂಡುಬರುತ್ತಿದ್ದು, ಕಮೆಂಟ್ ವಿಭಾಗದಲ್ಲಿ ಅಭಿಮಾನಿಗಳು “ಬೇಗ ಈ ಶೋ ಶುರು ಮಾಡಿ, ಕಾಲೆಳೆಯುವ ಆಟ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಳ್ಳುತ್ತಿದ್ದಾರೆ. ಪ್ರಸಾರ ದಿನಾಂಕ ವಾಹಿನಿಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Assembly Election 2026 Results: ಪಂಚ ರಾಜ್ಯ ಚುನಾವಣಾ ಫಲಿತಾಂಶ ನೇರ ಪ್ರಸಾರ ಇಲ್ಲಿ ನೋಡಿ – Kannada News | Assembly Election 2026 Results Live: Counting Begins for West Bengal, Tamil Nadu, Kerala, Assam, and Puducherry; Bypoll Results for Karnataka

ವಿಧಾನಸಭಾ ಚುನಾವಣೆ ಫಲಿತಾಂಶ 2026 ನೇರ ಪ್ರಸಾರImage Credit source: tv9

ವಿಧಾನಸಭೆ ಚುನಾವಣೆ ಫಲಿತಾಂಶ 2026: ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆಗಳ ಹಾಗೂ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು (ಮೇ 4) ಪ್ರಕಟವಾಗುತ್ತಿದೆ. ಅಸ್ಸಾಂನ 126 ಸ್ಥಾನಗಳಿಗೆ, ಕೇರಳದ 140 ಸ್ಥಾನಗಳಿಗೆ ಮತ್ತು ಪುದುಚೇರಿಯ 30 ಸ್ಥಾನಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ಪಶ್ಚಿಮ ಬಂಗಾಳದ 294 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 16 ಜಿಲ್ಲೆಗಳ 152 ಸ್ಥಾನಗಳಿಗೆ, ಎರಡನೇ ಹಂತದಲ್ಲಿ ಏಪ್ರಿಲ್ 29 ರಂದು 8 ಜಿಲ್ಲೆಗಳ 142 ಸ್ಥಾನಗಳಿಗೆ ಮತದಾನ ನಡೆದಿತ್ತು. ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ 9 ರಂದು ನಡೆದಿತ್ತು. ಫಲಿತಾಂಶದ ನೇರ ಪ್ರಸಾರ ಇಲ್ಲಿದೆ.

ಚುನಾವಣಾ ಫಲಿತಾಂಶ ಲೈವ್ ಇಲ್ಲಿ ನೋಡಿ


ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಸ್ಥಾನಗಳಿದ್ದು, ಅವುಗಳಲ್ಲಿ 62 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ಅಧಿಕಾರ ವಶಪಡಿಸಿಕೊಳ್ಳಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 118. ಈ ಬಾರಿ, ತಮಿಳುನಾಡಿನಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ. ಇದು ಯಾರಿಗೆ ಪ್ಲಸ್, ಯಾರಿಗೆ ಮೈನಸ್ ಎಂಬ ಚರ್ಚೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ? ಸೂಪರ್ ಸ್ಟಾರ್ ವಿಜಯ್ ಅವರ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತದೆಯೇ ಎಂಬ ಕುತೂಹಲ ಮೂಡಿದೆ.

ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಸ್ಥಾನಗಳಿದ್ದು, ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಶೇ 93 ರಷ್ಟು ಮತದಾನ ದಾಖಲಾಗಿದೆ. ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ಸಂಖ್ಯೆ 148. ಎಣಿಕೆಗಾಗಿ 77 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಟಿಎಂಸಿ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತದೆಯೇ? ಅಥವಾ ಬಿಜೆಪಿ ಅಧಿಕಾರ ವಹಿಸಿಕೊಳ್ಳುತ್ತದೆಯೇ ಎಂಬುದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

ಕೇರಳದಲ್ಲಿ ಒಟ್ಟು 140 ವಿಧಾನಸಭಾ ಸ್ಥಾನಗಳಿವೆ. ಮತ ಎಣಿಕೆಗಾಗಿ 140 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮ್ಯಾಜಿಕ್ ಸಂಖ್ಯೆ 71. ಈ ಬಾರಿ ಶೇಕಡಾ 78 ಕ್ಕೂ ಹೆಚ್ಚು ಮತದಾನ ನಡೆದಿದೆ. ಪಿಣರಾಯಿ ವಿಜಯನ್ ಮತ್ತೆ ಸರ್ಕಾರ ರಚಿಸುತ್ತಾರಾ? ಯುಡಿಎಫ್ ಅಧಿಕಾರಕ್ಕೆ ಬರುತ್ತದಾ ಎಂಬುದು ಇಂದು ಗೊತ್ತಾಗಲಿದೆ.

126 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಅಸ್ಸಾಂನಲ್ಲಿ ಈ ಬಾರಿ ಶೇಕಡಾ 85 ಕ್ಕೂ ಹೆಚ್ಚು ಮತದಾನ ನಡೆದಿದೆ. ಮತ ಎಣಿಕೆಗಾಗಿ 40 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಮ್ಯಾಜಿಕ್ ಸಂಖ್ಯೆ 64. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಮೀಕ್ಷೆಗಳು ತಿಳಿಸಿವೆ. ಸಮೀಕ್ಷೆಯ ಭವಿಷ್ಯವಾಣಿಗಳು ನಿಜವಾಗುತ್ತವೆಯೇ? ಅಥವಾ ಎಣಿಕೆ ಬದಲಾಗುತ್ತದೆಯೇ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ಇಂದು ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ

ಪುದುಚೇರಿಯಲ್ಲಿ 30 ವಿಧಾನಸಭಾ ಸ್ಥಾನಗಳಿದ್ದು, ಈ ಬಾರಿ ಶೇಕಡಾ 90 ರಷ್ಟು ಮತದಾನ ನಡೆದಿದೆ. ಮತ ಎಣಿಕೆ 6 ಕೇಂದ್ರಗಳಲ್ಲಿ ನಡೆಯಲಿದೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ತುಮಕೂರಿನಲ್ಲಿಂದು ಗಾಳಿ ಮಳೆ ಅಬ್ಬರ ಜೋರು! – Kannada News | Bengaluru temperature: Thundershowers in Bengaluru and most of the state, dry weather elsewhere

ಬೆಂಗಳೂರು, ತುಮಕೂರಿನಲ್ಲಿಂದು ಗಾಳಿ ಮಳೆ ಅಬ್ಬರ ಜೋರು!

ಬೆಂಗಳೂರು, ಮೇ 04: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯ (Karnataka Weather) ಮುಖ ತೋರಿಸಿದ್ದು, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಸುತ್ತಮುತ್ತ ದಿಢೀರನೆ ಭಾರೀ ಮಳೆ ಸುರಿದಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಮಳೆ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇನ್ನೂ ಮೂರು ದಿನ ಗುಡುಗು, ಮಳೆಯಬ್ಬರ!

ಕರ್ನಾಟಕದ ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೇ 05 ಮತ್ತು ಮೇ 7ರಂದು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಬೆಳಗ್ಗೆಯೇ ಮಳೆ ಅಬ್ಬರ, ಮೆಜೆಸ್ಟಿಕ್-ಶಾಂತಿನಗರ ಸೇರಿ ಹಲವೆಡೆ ವರ್ಷಧಾರೆ

ಕರ್ನಾಟಕದ ಉತ್ತರ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ (3.1° C ನಿಂದ 5.0° C). ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ 1.6° C ನಿಂದ 3.0° C ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೇತರಿಕೆ ಕಾಣದ ಸಾಯಿ ಪಲ್ಲವಿ ಸಿನಿಮಾ; ನಿರ್ಮಾಪಕ ಆಮಿರ್​ಗೆ ನಷ್ಟ?

ಸಾಯಿ ಪಲ್ಲವಿ ಹಾಗೂ ಆಮಿರ್ ಖಾನ್ ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಹೆಚ್ಚಿನ ಏಳ್ಗೆ ಕಾಣುತ್ತಿಲ್ಲ. ಬುಕ್ ಮೈ ಶೋನಲ್ಲಿ ಸಿನಿಮಾ ಉತ್ತಮ ರೇಟಿಂಗ್ ಪಡೆದುಕೊಂಡ ಹೊರತಾಗಿಯೂ ಚಿತ್ರಕ್ಕೆ ಕಡಿಮೆ ಕಲೆಕ್ಷನ್ ಆಗುತ್ತಿದೆ. ದೇಶಾದ್ಯಂತ ಚಿತ್ರಕ್ಕೆ ಸಾವಿರಾರು ಶೋಗಳನ್ನು ನೀಡಲಾಗಿತ್ತು. ಇದರ ಮಧ್ಯೆಯೂ ಸಿನಿಮಾ ಚೇತರಿಕೆ ಕಾಣುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.

‘ಏಕ್ ದಿನ್’ ಸಿನಿಮಾ ಮೇ 1ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡರು. ಸಿನಿಮಾಗೆ ಎಲ್ಲ ಕಡೆಗಳಲ್ಲೂ ಪಾಸಿಟಿವ್ ಟಾಕ್ ಇದೆ. ಆದರೆ, ಸಾಯಿ ಪಲ್ಲವಿ ಪರಿಚಯ ಬಾಲಿವುಡ್​​ನಲ್ಲಿ ಅನೇಕರಿಗೆ ಇಲ್ಲ ಎಂದರೂ ತಪ್ಪಾಗಲಾರದು. ಈ ಕಾರಣಕ್ಕೆ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತಿದೆ.

‘ಏಕ್ ದಿನ್’ ಚಿತ್ರದಲ್ಲಿ ಜುನೈದ್ ಖಾನ್ ನಟಿಸಿದ್ದಾರೆ. ಮಗನ ಸಿನಿಮಾ ಎಂಬ ಕಾರಣಕ್ಕೆ ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ಮೊದಲೆರಡು ದಿನ ತಲಾ 1.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಭಾನುವಾರ (ಮೇ 4) ಸುಮಾರು 2 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರಕ್ಕೆ 3.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಚಿತ್ರದ ಬಜೆಟ್ 15 ಕೋಟಿ ರೂಪಾಯಿ. ಈ ಸಿನಿಮಾ ಲಾಭ ಕಾಣಬೇಕು ಎಂದರೆ ಏನಿಲ್ಲ ಎಂದರೂ 30 ಕೋಟಿ ರೂಪಾಯಿ ಗಳಿಕೆ ಮಾಡಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಅದು ಅಸಾಧ್ಯ. ಇನ್ನು, ಒಟಿಟಿ, ಸ್ಯಾಟಲೈಟ್ ರೈಟ್ ಹಕ್ಕುಗಳ ಮಾರಾಟದಿಂದ ನಿರ್ಮಾಪಕರಿಗೆ ಸ್ವಲ್ಪ ಹಣ ಬರಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದರೆ ಮಾತ್ರ ಆಮಿರ್ ಖಾನ್ ಲಾಭ ಕಾಣುತ್ತಾರೆ.

ಇದನ್ನೂ ಓದಿ: ಬಾಲಿವುಡ್​​ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್?

ಅಂದಹಾಗೆ, ಆಮಿರ್ ಖಾನ್ ಅವರಿಗೆ ಸಿನಿಮಾ ನಿರ್ಮಾಣದಿಂದ ದುಡ್ಡು ಮಾಡಬೇಕು ಎನ್ನುವ ಉದ್ದೇಶ ಇಲ್ಲ. ಅವರ ಉದ್ದೇಶ ಏನಿದ್ದರೂ ಒಳ್ಳೆಯ ಸಿನಿಮಾ ನೀಡಬೇಕು ಎಂಬುದು. ಹೀಗಾಗಿ, ಒಳ್ಳೆಯ ಕಥೆ ಸಿಕ್ಕರೆ ಅವರು ಸಿನಿಮಾ ಮಾಡುತ್ತಾರೆ. ಅವರು ಲಾಭ-ನಷ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link