All posts by nagaraj11081993

Karnataka Power Tussle: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕದನಕ್ಕೆ ಮತ್ತೊಂದು ತಿರುವು – Kannada News | Karnataka Power Tussle: Siddaramaiah Team Hits back at DK Shivakumar Gang to CM Post

ಬೆಂಗಳೂರು (ಮೇ.3): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ (Karnataka Power Tussle) ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವೇಳೆ ಹೈಕಮಾಂಡ್ (High Command)​​ ಜೊತೆ ಪವರ್ ಶೇರಿಂಗ್ ಚರ್ಚೆ ನಡೆದಿತ್ತು ಎನ್ನಲಾಗ್ತಿದ್ದು, ಮೇ ತಿಂಗಳಲ್ಲೇ ಮುಖ್ಯಮಂತ್ರಿ ಬದಲಾವಣೆ ಎಂದು ಕಾಂಗ್ರೆಸ್​ ಒಂದು ಬಣದ ಟೀಮ್​ ಹೇಳ್ತಿದೆ. ಸಿಎಂ ಕುರ್ಚಿ ಕಚ್ಚಾಟದ ಗೊಂದಲನ ನಡುವೆ ಸಿಎಂ ಪಟ್ಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೆಸರು ತೇಲಿಬಂದಿದೆ.

ಪಟ್ಟದಾಟದಲ್ಲಿ ಕಳೆದ ನಾಲ್ಕು ದಿನದಿಂದ ಉರುಳಿದ ದಾಳಗಳಿವು. ಅದ್ಯಾವಾಗ ಡಿಕೆ ದೆಹಲಿಗೆ ಹೋಗಿ ವಾಪಾಸ್ ಆಗ್ತಿದ್ದಂತೆ ಬಂಡೆ ಬಣದ ನಾಯಕರು ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಮಾಡ್ಕೊಂಡಿದ್ರು. ಮೇ 15ಕ್ಕೆ ಡಿಕೆ ಬರ್ತ್‌ಡೇ ಇದೆ. ಅಂದೇ ಶುಭ ಸುದ್ದಿ ಸಿಗುತ್ತೆಂಬ ವಿಶ್ವಾಸದಲ್ಲಿದರು. ಆಗ್ಲೇ ನೋಡಿ ಸಿಎಂ ಬಣದ ನಾಯಕರು ದೆಹಲಿಗೆ ಫ್ಲೈಟ್ ಹತ್ತಿದ್ರು. ಅಷ್ಟೇ ಅಲ್ಲ, ಹಿರಿಯರು ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ಬೇಕು ಅನ್ನೋ ಹೆಸರನ್ನ ತೇಲಿಬಿಟ್ರು. ಅದೇ ಸಾಲಿನಲ್ಲಿ ದೆಹಲಿಗೆ ಹೋಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ದೆಹಲಿಗೆ ಹೋಗಿದ್ರು. ಖರ್ಗೆ ಜೊತೆ ಮಾತುಕತೆ ನಡೆಸಿದ್ರು. ಖರ್ಗೆ ಜೊತೆ ಏನು ಮಾತನಾಡಿದೆ ಅನ್ನೋದನ್ನ ಟಿವಿ9 ಜೊತೆ ಎಕ್ಸ್‌ಕ್ಲೂಸಿವ್ ಆಗಿ ತೆರೆದಿಟ್ರು. ಸಿದ್ದರಾಮಯ್ಯರನ್ನ ಬಿಟ್ರೆ ಖರ್ಗೆಯವ್ರೇ ಸಿಎಂ ಆಗ್ಬೇಕು ಅಂತಾ ದಾಳ ಉರುಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಲೆ, ಪಾಚಿ ಕಟ್ಟಿದ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ನಿಮಿಷದಲ್ಲೇ ಕ್ಲೀನ್‌ ಮಾಡುತ್ತೆ ಈ ಮನೆಮದ್ದು – Kannada News | These home remedies can help you clean stains stuck on plastic buckets and mugs

ಸಾಮಾನ್ಯವಾಗಿ ಪ್ರತಿ ಮನೆಗಳಲ್ಲೂ ಬಾತ್‌ರೂಮ್‌ಗಳಲ್ಲಿ ಪ್ಲಾಸ್ಟಿಕ್‌ ಬಕೆಟ್‌ (plastic buckets), ಮಗ್‌ಗಳನ್ನೇ ಬಳಸುವುದು. ಇವುಗಳ ನಿರಂತರ ಬಳಕೆಯಿಂದಾಗಿ, ಬಕೆಟ್‌ಗಳ ಹೊಳಪು ಕಳೆದುಹೋಗುತ್ತದೆ ಮತ್ತು ಅದರ ಮೇಲೆ ಹಳದಿ ಬಣ್ಣದ ಕೊಳೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ, ಬಕೆಟ್ ತುಂಬಾ ಕೊಳಕಾಗಿ ಕಾಣುತ್ತದೆ. ಹಾಗಾಗಿ ಇವುಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನವರು ದುಬಾರಿ ಕ್ಲೀನರ್‌ಗಳ ಮೊರೆ ಹೋಗುತ್ತಾರೆ. ಆದರೆ ಇವುಗಳು ಅಷ್ಟು ಪರಿಣಾಮಕಾರಿಯಾಗಿ ಬಕೆಟ್‌ಗಳ ಕೊಳೆಗಳನ್ನು ತೆಗೆದುಹಾಕುವುದಿಲ್ಲ. ಬಕೆಟ್‌ನ ಮೂಲ ಹೊಳಪು ಹೆಚ್ಚಾಗಿ ಹಿಂತಿರುಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ಕೆಲವು ಸರಳ ಮನೆಮದ್ದುಗಳನ್ನು ಬಳಸಿಕೊಂಡು ನೀವು ಅತ್ಯಂತ ಕೊಳಕಾದ ಬಕೆಟ್‌ಗಳನ್ನು ಸಹ ಹೊಸದರಂತೆ ಹೊಳೆಯುವಂತೆ ಮಾಡಬಹುದು. ಆ ಪರಿಣಾಮಕಾರಿ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಪ್ಲಾಸ್ಟಿಕ್‌ ಬಕೆಟ್‌ಗಳನ್ನು ಸ್ವಚ್ಛಗೊಳಿಸಲು ಸಹಕಾರಿ ಈ ಮನೆಮದ್ದುಗಳು:

ಅಡಿಗೆ ಸೋಡಾ ಮತ್ತು ವಿನೆಗರ್:  ಬಕೆಟ್ ಮೇಲಿನ ಹಳದಿ ಲೇಪನವನ್ನು ಹೋಗಲಾಡಿಸಲು ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಬಳಸಬಹುದು. ಇದನ್ನು ಮಾಡಲು, ಬಕೆಟ್‌ಗೆ 2 ರಿಂದ 3 ಚಮಚ ಅಡಿಗೆ ಸೋಡಾವನ್ನು ಸೇರಿಸಿ ನಂತರ ಅರ್ಧ ಕಪ್ ವಿನೆಗರ್ ಸೇರಿಸಿ. ಮಿಶ್ರಣವನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ರಷ್ ಅಥವಾ ಸ್ಕ್ರಬ್ ಪ್ಯಾಡ್ ಬಳಸಿ ಬಕೆಟ್ ಅನ್ನು ಸಂಪೂರ್ಣವಾಗಿ ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಿ.

ನಿಂಬೆ ಮತ್ತು ಉಪ್ಪು: ನಿಮ್ಮ ಬಕೆಟ್ ಹೊಸದರಂತೆ ಹೊಳೆಯುವಂತೆ ಮಾಡಲು ನೀವು ನಿಂಬೆ ಮತ್ತು ಉಪ್ಪನ್ನು ಸಹ ಬಳಸಬಹುದು. ಈ ವಿಧಾನವನ್ನು ಅನ್ವಯಿಸಲು, ಬಕೆಟ್ ಒಳಭಾಗದಲ್ಲಿ ಉಪ್ಪನ್ನು ಸಿಂಪಡಿಸಿ. ಕೆಲವು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ, ನಿಂಬೆ ಹೋಳಿನಿಂದ ಸ್ವಚ್ಛಗೊಳಿಸಿ. ಇದರಿಂದ ಬಕೆಟ್ ಹೊಸದರಂತೆ ಹೊಳೆಯಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಗಿಡಗಳನ್ನು ಮನೆ ಸುತ್ತ ನೆಟ್ಟರೆ ಇನ್ನೆಂದೂ ಸೊಳ್ಳೆಗಳ ಹಾವಳಿಯೇ ಇರೋದಿಲ್ಲ

ಡಿಟರ್ಜೆಂಟ್‌ ಮತ್ತು ಬಿಸಿನೀರು: ನಿಮ್ಮ ಬಕೆಟ್ ಅನ್ನು ಸ್ವಚ್ಛಗೊಳಿಸಲು ನೀವು ಡಿಟರ್ಜೆಂಟ್ ಮತ್ತು ಬೆಚ್ಚಗಿನ ನೀರನ್ನು ಸಹ ಬಳಸಬಹುದು. ಮೊದಲು ಬಕೆಟ್ ಅನ್ನು ಬೆಚ್ಚಗಿನ ನೀರಿನಿಂದ ತುಂಬಿಸಿ ನಂತರ 2-3 ಚಮಚ ಡಿಟರ್ಜೆಂಟ್ ಮಿಶ್ರಣ ಮಾಡಿ. ಅದನ್ನು ಅರ್ಧ ಗಂಟೆ ನೆನೆಯಲು ಬಿಡಿ ಮತ್ತು ನಂತರ ಬ್ರಷ್‌ನಿಂದ  ಸುಲಭವಾಗಿ ಸ್ವಚ್ಛಗೊಳಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs PBKS: ಮೊದಲ ಓವರ್​ನಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತ ಸಿರಾಜ್ – Kannada News | IPL 2026: Mohammed Siraj’s Explosive Start Rocks Punjab Kings with 2 Wickets in 3 Balls

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 46ನೇ ಪಂದ್ಯದಲ್ಲಿ ಗುಜರಾತ್ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ತಂಡಕ್ಕೆ ಗುಜರಾತ್ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲೇ ಎರಡೆರಡು ಆಘಾತ ನೀಡಿದರು. ಸಿರಾಜ್ ತಮ್ಮ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿರಾಜ್ ವಿಕೆಟ್ ಪಡೆಯಬಹುದಿತ್ತು, ಆದರೆ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಅನ್ನು ಹಿಡಿಯುವಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ ಯಶಸ್ವಿಯಾಗಲಿಲ್ಲ. ಆದರೆ, ಮುಂದಿನ ಎಸೆತದಲ್ಲಿ ಪ್ರಿಯಾಂಶ್ ಮತ್ತೊಂದು ಶಾಟ್ ಪಡೆಯಲು ಪ್ರಯತ್ನಿಸಿದರು, ಈ ಬಾರಿ ಡೀಪ್ ಥರ್ಡ್ ಮ್ಯಾನ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಕೂಪರ್ ಕಾನೊಲಿ ಮುಂದಿನ ಎಸೆತದಲ್ಲಿಯೇ ವಿಕೆಟ್ ಕೀಪರ್ ಬಟ್ಲರ್‌ಗೆ ಕ್ಯಾಚ್ ನೀಡಿದರು.

ಈ ರೀತಿಯಾಗಿ, ಸಿರಾಜ್ ಪಂಜಾಬ್ ಪರ ಕೇವಲ ಮೂರು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಈ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಓವರ್‌ನಲ್ಲೇ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದೇ ಮೊದಲು. ಇದಲ್ಲದೆ, ಐಪಿಎಲ್ 2026 ರಲ್ಲಿ ಮೊದಲ ಬಾರಿಗೆ, ಪಂಜಾಬ್‌ನ ಎರಡನೇ ವಿಕೆಟ್ ಪತನವಾದಾಗ ತಂಡದ ಸ್ಕೋರ್ ಕೇವಲ ಎರಡು ರನ್‌ಗಳಾಗಿತ್ತು, ಇದು ಇಲ್ಲಿಯವರೆಗಿನ ಅತ್ಯಂತ ಕಡಿಮೆ ಮೊತ್ತವಾಗಿದೆ.

Source link

ಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸ್ಪಷ್ಟ; ಸಚಿವ ಪ್ರಲ್ಹಾದ ಜೋಶಿ – Kannada News | BJP Candidate Jeevaraj Win In Sringeri Postal Ballots Recount Says pralhad joshi

ನವದೆಹಲಿ, (ಮೇ 03): ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮರು ಮತ ಎಣಿಕೆಯಲ್ಲಿ (Sringeri Postal Ballots Recount) ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು ಸಾಧಿಸಿರುವ ಸಾಧ್ಯತೆ ಸ್ಪಷ್ಟವಾಗಿದೆ. ಕೂಡಲೇ ಫಲಿತಾಂಶ ಘೋಷಣೆ ಆಗಬೇಕು.ತಕ್ಷಣ ಫಲಿತಾಂಶ ಘೋಷಿಸದಿದ್ದರೆ ಅವಾಂತರಗಳಿಗೆ ಚುನಾವಣಾಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಎಂದು ಎಚ್ಚರಿಸಿದ್ದಾರೆ.

ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಅಂಚೆ ಮತ ಎಣಿಕೆ ಎಡವಟ್ಟಿನಿಂದ ಈಗಾಗಲೇ ಮೂರು ವರ್ಷದಿಂದ ಶಾಸಕ ಸ್ಥಾನದಿಂದ ವಂಚಿತರಾಗಿದ್ದಾರೆ. ಫಲಿತಾಂಶ ಘೋಷಣೆಗೆ ಇನ್ನೂ ವಿಳಂಬ ಸಲ್ಲದು. ಚುನಾವಣಾಧಿಕಾರಿ ಯಾವುದೇ ಒತ್ತಡಕ್ಕೆ ಮಣಿಯದೆ ತತ್ ಕ್ಷಣವೇ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಘೋಷಿಸಬೇಕು. ಮಾನ್ಯ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ: ತಕ್ಷಣ ಫಲಿತಾಂಶ ಘೋಷಣೆ ಕೋರಿ ಲೀಗಲ್​ ನೋಟಿಸ್​​

ಅಂಚೆ ಮತಗಳ ಮರು ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಚುನಾವಣಾಧಿಕಾರಿಯೇ (DEO) ಘೋಷಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಅದರಂತೆ ಚುನಾವಣಾಧಿಕಾರಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ಜೋಶಿ ಆಗ್ರಹಿಸಿದ್ದಾರೆ.

ಚುನಾವಣಾಧಿಕಾರಿಗೆ ಲೀಗಲ್ ನೋಟಿಸ್

ಕಾಂಗ್ರೆಸ್​ನ ಹಾಲಿ ಶಾಸಕರಿಗೆ ಬಿಗ್ ಶಾಕ್ ಎದುರಾಗಿದ್ದು, ಅಂಚೆ ಮತ ಮರು ಎಣಿಕೆಯಲ್ಲಿ ಮತ್ತಷ್ಟು ಅಂತರ ಹೆಚ್ಚಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದ ಶೃಂಗೇರಿ MLA ಟಿ.ಡಿ ರಾಜೇಗೌಡ ನಿರೀಕ್ಷೆ ಸಂಪೂರ್ಣ ತಲೆ ಕೆಳಗಾಗಿದೆ. ಕಾನೂನು ಹೋರಾಟದಲ್ಲಿ ಬಿಜೆಪಿಯ ಡಿಎನ್ ಜೀವರಾಜ್ ಜಯದ ಹೊಸ್ತಿಲಲ್ಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ರಾಜೇಗೌಡರು ಪಡೆದಿದ್ದ 569 ಅಂಚೆಮತಗಳ ಪೈಕಿ 255 ಅಸಿಂಧು ಆಗಿದ್ದು, ಅವರ ಮತ 314ಕ್ಕೆ ಕುಸಿದಿದೆ. ಹೀಗಾಗಿ 201 ಮತಗಳ ಅಂತರದಲ್ಲಿ ಸೋತಿದ್ದ ಜೀವರಾಜ್‌ಗೆ 52 ಮುನ್ನಡೆ ಸಿಕ್ಕಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಇನ್ನು ಅಂಚೆ ಮತಪತ್ರಗಳ ಮರುಎಣಿಕೆ ನಂತರ ಫಲಿತಾಂಶ ವಿಳಂಬ ಆಗ್ತಿದೆ. ಹೀಗಾಗಿ ತಕ್ಷಣ ಫಲಿತಾಂಶ ಘೋಷಣೆ ಕೋರಿ ಚುನಾವಣಾಧಿಕಾರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಡಿ.ಎನ್.ಜೀವರಾಜ್ ಪರ ವಕೀಲೆ ಡಾ.ವಂದನಾ ಪಿ.ಎಲ್.ರಿಂದ ನೋಟಿಸ್ ಕೊಟ್ಟಿದ್ದಾರೆ.

Source link

ಟಿ20 ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಪ್ಯಾಟ್ ಕಮ್ಮಿನ್ಸ್ – Kannada News | Pat Cummins’ Costliest T20 Over: Finn Allen’s 27 Run Assault in KKR vs SRH IPL 2026

ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಐಪಿಎಲ್ 2026 ರ 45 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ 166 ರನ್‌ಗಳ ಗುರಿಯನ್ನು ಬೆನ್ನಟ್ಟಿ ಸುಲಭ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕೆಕೆಆರ್ ಆರಂಭಿಕ ಆಟಗಾರ ಫಿನ್ ಅಲೆನ್, ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿದರು.

ಕಮ್ಮಿನ್ಸ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ ಆರು ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ಎರಡನೇ ಓವರ್‌ನಲ್ಲಿ ದುಬಾರಿಯಾದರು. ಆ ಓವರ್ ವೈಡ್‌ನೊಂದಿಗೆ ಪ್ರಾರಂಭವಾಯಿತು, ಅದು ಬೌಂಡರಿಗೆ ಹೋಯಿತು. ಇದರಿಂದ ಐದು ರನ್‌ ಬಂತು. ನಂತರದ ಎಸೆತವನ್ನು ಅಲೆನ್ ಸಿಕ್ಸರ್​ಗಟ್ಟಿದರು. ನಂತರದ ಎಸೆತದಲ್ಲಿ ಎರಡು ರನ್‌ ಬಂದವು.

ನಂತರ ಮೂರನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದ ಅಲೆನ್ ಮುಂದಿನ ಎರಡು ಎಸೆತಗಳಲ್ಲಿ ಸತತ 2 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ, ಪ್ಯಾಟ್ ಕಮ್ಮಿನ್ಸ್ ಅವರ ಈ ಓವರ್‌ನಲ್ಲಿ ಕೆಕೆಆರ್ ಒಟ್ಟು 27 ರನ್‌ ಕಲೆಹಾಕಿತು. ಇದು ಪ್ಯಾಟ್ ಕಮ್ಮಿನ್ಸ್ ಅವರ 15 ವರ್ಷಗಳ, 174 ಪಂದ್ಯಗಳ ಟಿ20 ವೃತ್ತಿಜೀವನದ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು.

Source link

ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’: ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್; ರೈತರು ಖುಷಿಯೋ ಖುಷಿ – Kannada News | Chikkaballapur Grapes: Dil Khush Variety Boosts Farmer Profits with High Demand

ಚಿಕ್ಕಬಳ್ಳಾಪುರ ಜಿಲ್ಲೆಯೂ ಹಣ್ಣು, ತರಕಾರಿ ಮತ್ತು ದ್ರಾಕ್ಷಿ ಬೆಳೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಬಾರಿ ಜಿಲ್ಲೆಯಾದ್ಯಂತ ಬರೋಬ್ಬರಿ 5,000 ಹೆಕ್ಟೇರ್ ಪ್ರದೇಶದಲ್ಲಿ ವೈವಿಧ್ಯಮಯ ದ್ರಾಕ್ಷಿ ಬೆಳೆಯಲಾಗುತ್ತಿದೆ. ದಿಲ್ ಖುಷ್​ ಎಂಬ ವಿಶೇಷ ತಳಿಗೆ ಸದ್ಯ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ರೈತರು ಮಂದಹಾಸ ಬೀರಿದ್ದಾರೆ.

ರಣ ಬಿಸಿಲಿನ ನಡುವೆಯೂ, ವಿಶೇಷವಾಗಿ ‘ದಿಲ್ ಖುಷ್’ ತಳಿಯ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಸದ್ಯ ಈ ವಿಶಿಷ್ಟ ತಳಿಯ ದ್ರಾಕ್ಷಿಯು ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.

ದ್ರಾಕ್ಷಿ ಬೆಳೆಗಾರರಿಗೆ ಈ ವರ್ಷ ಉತ್ತಮ ಬೆಲೆ ಸಿಗುತ್ತಿದೆ. ವರ್ತಕರು ಸ್ವತಃ ತೋಟಗಳಿಗೆ ಬಂದು, ರೈತರಿಗೆ ಪ್ರತಿ ಕೆ.ಜಿ ದ್ರಾಕ್ಷಿಗೆ 50 ರೂಪಾಯಿಯಂತೆ ನೀಡಿ ನೇರವಾಗಿ ಖರೀದಿಸುತ್ತಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ದ್ರಾಕ್ಷಿಯ ಇಳುವರಿ ಕಡಿಮೆಯಾಗಿರುವುದರಿಂದ, ಅಲ್ಲಿನ ದೊಡ್ಡ ದೊಡ್ಡ ವರ್ತಕರು ಇದೀಗ ಚಿಕ್ಕಬಳ್ಳಾಪುರದ ರೈತರತ್ತ ಮುಖ ಮಾಡಿದ್ದಾರೆ. ಇದು ಸ್ಥಳೀಯ ರೈತರಿಗೆ ವರದಾನವಾಗಿದ್ದು, ಜಣ ಜಣ ಕಾಂಚಣ ಎಣಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದ ಈ ದ್ರಾಕ್ಷಿಗೆ ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ ವ್ಯಾಪಾರಿಗಳು ರೈತರನ್ನು ಹುಡುಕಿಕೊಂಡು ಬಂದು ಮುಂಗಡ ಹಣ ನೀಡಿ ತೋಟದಲ್ಲೇ ದ್ರಾಕ್ಷಿಯನ್ನು ಖರೀದಿಸುತ್ತಿದ್ದಾರೆ.

ದ್ರಾಕ್ಷಿ ಬೆಳೆಗಾರರಾದ ವೆಂಕಟರೆಡ್ಡಿ ಮತ್ತು ಚಿಕ್ಕನಾಗವಳ್ಳಿ ಗ್ರಾಮದ ಕೊಂಡಪ್ಪನವರಂತಹ ಅನೇಕ ರೈತರು, ಈ ವರ್ಷ ತಮ್ಮ ಬೆಳೆಗೆ ಸಿಕ್ಕಿರುವ ಉತ್ತಮ ಬೆಲೆ ಮತ್ತು ಬೇಡಿಕೆಯನ್ನು ಕಂಡು ಸಂತಸಗೊಂಡಿದ್ದಾರೆ.

Published On – 8:07 pm, Sun, 3 May 26

Source link

ದೆಹಲಿ ಅಗ್ನಿ ದುರಂತ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ – Kannada News | Delhi Fire Tragedy: PM Modi Announces Rs 2 Lakh Compensation for Vivek Vihar Victims

ನವದೆಹಲಿ, ಮೇ 3: ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಬಹುಮಹಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire accident) ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಭಾನುವಾರ ಬೆಳಗಿನ ಜಾವ ನಡೆದ ಈ ದಾರುಣ ಘಟನೆಯಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದು, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಈ ಧನಸಹಾಯವನ್ನು ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳ ಪರಿಹಾರವನ್ನೂ ಪ್ರಧಾನಿ ಘೋಷಿಸಿದ್ದಾರೆ. ಘಟನೆಯ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಮೋದಿ ಅವರು, “ದೆಹಲಿಯ ಅಗ್ನಿ ಅವಘಡ ಹೃದಯ ವಿದ್ರಾವಕವಾಗಿದೆ. ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?

ಒಂದೇ ಕುಟುಂಬದ ಐವರು ಸಾವು

ವಿವೇಕ್ ವಿಹಾರ್‌ನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಒಂದೂವರೆ ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದಾರೆ. ಎರಡನೇ ಮತ್ತು ಮೂರನೇ ಮಹಡಿಯಲ್ಲಿದ್ದ ಕುಟುಂಬಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ.

ಕಟ್ಟಡದ ಕಿಟಕಿಗಳಿಗೆ ಅಳವಡಿಸಲಾಗಿದ್ದ ಬಲಿಷ್ಠ ಕಬ್ಬಿಣದ ಗ್ರಿಲ್‌ಗಳು ಮತ್ತು ಮೆಟ್ಟಿಲುಗಳ ಬಾಗಿಲು ಲಾಕ್ ಆಗಿದ್ದರಿಂದ ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಗ್ರಿಲ್‌ಗಳನ್ನು ಕತ್ತರಿಸಿ ಒಳಪ್ರವೇಶಿಸುವಷ್ಟರಲ್ಲಿ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದ ಕೆಳಭಾಗದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಧಾವಿಸಿದ 14 ಅಗ್ನಿಶಾಮಕ ವಾಹನಗಳು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ಬೆಂಕಿಯಿಂದ ರಕ್ಷಿಸಲ್ಪಟ್ಟ ಉಳಿದವರನ್ನು ಹತ್ತಿರದ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಕಟ್ಟಡದ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs KKR: ಬಲಿಷ್ಠ ಸನ್‌ರೈಸರ್ಸ್​ಗೆ ಸೋಲುಣಿಸಿದ ಕೆಕೆಆರ್ – Kannada News | IPL 2026 Match 45: KKR Dominates SRH at Home, Secures Third Victory

ಐಪಿಎಲ್ 2026 (IPL 2026) ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR)​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಅವರ ನೆಲದಲ್ಲೇ ಮಣಿಸಿದ ಕೆಕೆಆರ್ ಈ ಆವೃತ್ತಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಇತ್ತ ಸತತ ಗೆಲುವುಗಳಿಂದ ಬೀಗುತ್ತಿದ್ದ ಸನ್‌ರೈಸರ್ಸ್ ಲೀಗ್​ನಲ್ಲಿ 4ನೇ ಸೋಲು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 165 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 18.2 ಓವರ್​ಗಳಲ್ಲಿ ಜಯದ ನಗೆ ಬೀರಿತು.

ಸನ್‌ರೈಸರ್ಸ್​ಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇದಕ್ಕೆ ಪೂರಕವಾಗಿ ತಂಡಕ್ಕೆ ಉತ್ತಮ ಆರಂಭವೂ ಸಿಕ್ಕಿತು. ಅಭಿಷೇಕ್ ಹಾಗೂ ಹೆಡ್ ಮೊದಲ ವಿಕೆಟ್​ಗೆ 44 ರನ್​​ಗಳ ಜೊತೆಯಾಟವನ್ನು ಹಂಚಿಕೊಂಡರು. ಆ ನಂತರ ಹೆಡ್ ಹಾಗೂ ಕಿಶನ್ ತಂಡವನ್ನು ಶತಕದ ಗಡಿಯನ್ನು ದಾಟಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಸನ್‌ರೈಸರ್ಸ್ ತಂಡದ ಇನ್ನಿಂಗ್ಸ್ ಕುಸಿಯಿತು. ಇದರ ಪರಿಣಾಮವಾಗಿ ತಂಡವು 19 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಭಿಷೇಕ್ ಶರ್ಮಾ ಕೇವಲ 15 ರನ್‌ಗಳಿಗೆ ಔಟಾದರೆ, ಟ್ರಾವಿಸ್ ಹೆಡ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ 28 ಎಸೆತಗಳಲ್ಲಿ 61 ರನ್ ಗಳಿಸಿದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಆದರೆ ಹೆಡ್ ವಿಕೆಟ್ ಪತನದ ಬಳಿಕ ಪೆವಿಲಿಯನ್ ಪರೇಡ್ ಶುರುವಾಯಿತು. ಹೀಗಾಗಿ ಸನ್‌ರೈಸರ್ಸ್ ತಂಡವು ತನ್ನ ಕೊನೆಯ ಒಂಬತ್ತು ವಿಕೆಟ್‌ಗಳನ್ನು ಕೇವಲ 60 ರನ್‌ಗಳಿಗೆ ಕಳೆದುಕೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಸುನಿಲ್ ನರೈನ್ ಮತ್ತು ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್ ಪಡೆದರು. ವೈಭವ್ ಅರೋರಾ, ಕ್ಯಾಮರೂನ್ ಗ್ರೀನ್ ಮತ್ತು ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದರು.

ಸುಲಭವಾಗಿ ಗೆದ್ದ ಕೆಕೆಆರ್

ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಫಿನ್ ಅಲೆನ್ 13 ಎಸೆತಗಳಲ್ಲಿ 29 ರನ್ ಗಳಿಸಿದರು ಆದರೆ ಪ್ಯಾಟ್ ಕಮ್ಮಿನ್ಸ್ ಅವರನ್ನು ಔಟ್ ಮಾಡಿದರು. ನಂತರ ಅಜಿಂಕ್ಯ ರಹಾನೆ ಮತ್ತು ಅಂಗ್‌ಕ್ರಿಶ್ ರಘುವಂಶಿ ಎಚ್ಚರಿಕೆಯಿಂದ ಆಟವಾಡಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ರಹಾನೆ 36 ಎಸೆತಗಳಲ್ಲಿ 43 ರನ್ ಗಳಿಸಿದರೆ, ಅಂಗ್‌ಕ್ರಿಶ್ ರಘುವಂಶಿ 47 ಎಸೆತಗಳಲ್ಲಿ 59 ರನ್ ಗಳಿಸಿದರು. ರಿಂಕು ಸಿಂಗ್ ಕೂಡ 11 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿ ಕೆಕೆಆರ್ ತಂಡ 18.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಲು ಸಹಾಯ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Sun, 3 May 26

Source link

ಕರ್ನಾಟಕ ಹವಾಮಾನ ವರದಿ: ಇಂದಿನಿಂದ ಮೇ 9ರವರೆಗೆ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆ – Kannada News | Karnataka Rain Alert: IMD Forecasts Thunderstorms in Bengaluru, South Interior from May 3–9

ಬೆಂಗಳೂರು, ಮೇ 03: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪದ ನಡುವೆಯೇ ಹವಾಮಾನ ಇಲಾಖೆ ಮಳೆ (Rain) ಮುನ್ಸೂಚನೆ ನೀಡಿದೆ. ಮೇ 3ರಿಂದ 09ರವಗರೆ ಬೆಂಗಳೂರು (bangaluru) ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ವಿವಿಧೆಡೆ ಗುಡುಗು ಮತ್ತು ಬಿರುಗಾಳಿ ಸಹಿತ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಉಳಿದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಮಳೆಯಾಗಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿಂದು ಗುಡುಗು ಸಹಿತ ಮಳೆಯ ಸಾಧ್ಯತೆ!

ಇನ್ನು ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದ್ದು, ಇತ್ತ ಉತ್ತರ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಗದಗ, ಹಾವೇರಿ, ವಿಜಯಪುರ, ಬೆಳಗಾವಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯ ಅಬ್ಬರ ಇರುವುದಿಲ್ಲ. ಈ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮೇ 5ರ ನಂತರ ಹವಾಮಾನದಲ್ಲಿ ಬದಲಾವಣೆ 

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸದ್ಯ ಒಣಹವೆ ಇದ್ದರೂ, ಮೇ 5ರಿಂದ ಪರಿಸ್ಥಿತಿಯಲ್ಲಿ ಬದಲಾವಣೆಯಾಗಲಿದೆ. ಕೊಪ್ಪಳ, ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ!

ಒಟ್ಟಾರೆಯಾಗಿ, ರಾಜ್ಯದಲ್ಲಿ ಮಳೆ ಮತ್ತು ಒಣಹವೆಯ ಮಿಶ್ರ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜನರು ಗುಡುಗು-ಮಿಂಚಿನ ಬಗ್ಗೆ ಜಾಗರೂಕರಾಗಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:18 pm, Sun, 3 May 26

Source link

ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ನಾಳೆ ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ – Kannada News | West Bengal Election Results: Falta Constituency Vote Count Delayed Due to Re polling

ಕೋಲ್ಕತಾ, ಮೇ 3: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಮ್ ಮತ್ತು ಪುದುಚೆರಿಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಸೋಮವಾರ (ಮೇ 4) ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಸಖತ್ ಜಿದ್ದಾಜಿದ್ದಿ ನಡೆಯಿತು. ಹಲವೆಡೆ ಹಿಂಸಾಚಾರಗಳಾದವು. ಹಲವು ಬೂತ್​ಗಳಲ್ಲಿ ಮರುಮತದಾನ ಕೂಡ ಮಾಡಲಾಗಿದೆ. ಆದರೂ ಕೂಡ ಮೇ 4ರಂದು ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಿಗೂ ಫಲಿತಾಂಶ ಪ್ರಕಟವಾಗುತ್ತಿಲ್ಲ. ಒಂದು ಕ್ಷೇತ್ರದ ಫಲಿತಾಂಶ ಬಾಕಿ ಉಳಿಯಲಿದೆ.

ಸೌತ್ 24 ಪರಗಣ ಜಿಲ್ಲೆಯಲ್ಲಿರುವ ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ಮೇ 21ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮೇ 24ರಂದು ಫಲಿತಾಂಶ ಪ್ರಕಟವಾಗಲಿದೆ. ಬಂಗಾಳದ ಉಳಿದ 293 ಕ್ಷೇತ್ರಗಳಿಗೆ ಮೇ 4ರಂದು ಫಲಿತಾಂಶ ಪ್ರಕಟವಾಗಿ, ಮೂರು ವಾರಗಳ ನಂತರ ಫಾಲ್ಟಾದ ಫಲಿತಾಂಶ ಹೊರಬೀಳುತ್ತದೆ.

ಇದನ್ನೂ ಓದಿ: ಮಿಳುನಾಡು, ಬಂಗಾಳ ಸೇರಿ 5 ರಾಜ್ಯಗಳ ಚುನಾವಣೆ ಮತ ಎಣಿಕೆ ಯಾವಾಗ? ಫಲಿತಾಂಶ ನೋಡುವುದು ಹೇಗೆ?

ಫಾಲ್ಟಾ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ಮತದಾನ ಆಗಿತ್ತು. ಅಂದು ಕ್ಷೇತ್ರದ ಹಲವೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ, ಹಿಂಸಾಚಾರಗಳಾದ ವರದಿಯಾಗಿತ್ತು. ಈ ಕ್ಷೇತ್ರದಲ್ಲಿ ಟಿಎಂಸಿಯಿಂದ ಜಹಾಂಗೀರ್ ಖಾನ್, ಬಿಜೆಪಿಯಿಂದ ದೇಬಂಗಶು ಪಾಂಡ, ಕಾಂಗ್ರೆಸ್​ನಿಂದ ಅಬ್ದುರ್ ರಜಾಕ್ ಮೊಲ್ಲಾ ಮತ್ತು ಸಿಪಿಐಎಂನಿಂದ ಸಂಭುನಾಥ್ ಕುರ್ಮಿ ಮೊದಲಾದವರು ಸ್ಪರ್ಧಿಸಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪಗಳು ಜೋರಾಗಿ ನಡೆದಿವೆ.

ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಇವಿಎಂ ಮೆಷೀನ್​ಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆಯನ್ನು ಟೇಪ್​ನಿಂದ ಮುಚ್ಚಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಫಾಲ್ಟಾದ 144 ಮತ್ತು 189ನೇ ಮತಗಟ್ಟೆಯಲ್ಲಿ ಇದು ಆಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆಪಾದಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ 

ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗಿರುವ ಫಾಲ್ಟ ಕ್ಷೇತ್ರದಲ್ಲಿ ಮರುಮತದಾನಕ್ಕಾಗಿ ಎಲ್ಲಾ ರೀತಿಯಲ್ಲೂ ಸಜ್ಜಾಗಿರುವಂತೆ ಮತ್ತು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ಆದೇಶಿಸಿದೆ. ಬಂಗಾಳದ ಇನ್ನೂ ಕೆಲ ಕ್ಷೇತ್ರಗಳ ಕೆಲ ಬೂತ್​ಗಳಲ್ಲಿ ಮರುಮತದಾನಗಳಾಗಿವೆ. ಫಾಲ್ಟಾ ಹೊರತುಪಡಿಸಿ ಉಳಿದ 293 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗುತ್ತದೆ. ಅಸ್ಸಾಂ, ತಮಿಳುನಾಡು, ಕೇರಳ, ಪುದುಚೆರಿಯ ಎಲ್ಲಾ ಕ್ಷೇತ್ರಗಳಿಗೂ ನಾಳೆಯೇ ಫಲಿತಾಂಶ ಪ್ರಕಟವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link