ಇನ್ನೂ ಮದುವೆ ಆಗದಿರಲು ಆ ಸಮಸ್ಯೆ ಕಾರಣ: ನಟಿ ಚಿತ್ರ ರೇಖಾ – Kannada News | Rekha Vedavyas talks about her personal life and marriage
ಇಸವಿ 2000 ರಲ್ಲಿ ಕನ್ನಡ ಚಿತ್ರರಂಗಕ್ಕೆ (Sandalwood) ಇಬ್ಬರು ರೇಖಾರ ಪರಿಚಯವಾಯ್ತು. ಒಬ್ಬರು ‘ಸ್ಪರ್ಷ’ ರೇಖಾ ಎನಿಸಿಕೊಂಡರೆ ಮತ್ತೊಬ್ಬರು ‘ಚಿತ್ರ’ ರೇಖಾ. ‘ಸ್ಪರ್ಷ’ ರೇಖಾ, ಸುದೀಪ್ ಮತ್ತು ದರ್ಶನ್ ಇಬ್ಬರೂ ನಾಯಕನಾಗಿ ನಟಿಸಿದ ಸಿನಿಮಾನಲ್ಲಿ ನಾಯಕಿ ಆಗಿ ನಟಿಸಿದ್ದರು. 2004 ರ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಸ್ಪರ್ಷ ರೇಖಾ, 2015 ರಿಂದ ಮತ್ತೆ ಸಕ್ರಿಯರಾಗಿದ್ದಾರೆ. ಬಿಗ್ಬಾಸ್ನಲ್ಲಿಯೂ ಇವರು ಭಾಗವಹಿಸಿದ್ದರು. ಆದರೆ ಚಿತ್ರ ರೇಖಾ ಅವರದ್ದು ಬೇರೆ ಕತೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ ಕನ್ನಡತಿ…