All posts by nagaraj11081993

Video: ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Vietnam Child Road Accident: Tragic CCTV Shows Toddler Hit by Truck, Mother’s Agony

ವಿಯೆಟ್ನಾಂನಲ್ಲಿ ಮನಕಲಕುವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ರಸ್ತೆಯ ಆಚೆಗಿದ್ದ ತಾಯಿಯ ಬಳಿಗೆ ಓಡಲು ಹೋದ ಪುಟ್ಟ ಮಗುವೊಂದು ವೇಗವಾಗಿ ಬಂದ ಭಾರಿ ಗಾತ್ರದ ಟ್ರಕ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದೆ. ತನ್ನ ಕಣ್ಣೆದುರೇ ಮಗು ಅಪಘಾತಕ್ಕೀಡಾಗುವುದನ್ನು ಕಂಡು ಆಘಾತಕ್ಕೊಳಗಾದ ತಾಯಿ, ಗಾಬರಿಯಲ್ಲಿ ತನ್ನ ಬಳಿಯೇ ಇದ್ದ ಮತ್ತೊಂದು ಮಗುವನ್ನು ರಸ್ತೆಯಲ್ಲೇ ಬಿಟ್ಟು ಮೃತ ಮಗುವಿನತ್ತ ಓಡಿದ್ದಾರೆ. ಈ ವೇಳೆ ಆ ಮಗು ಕೂಡ ರಸ್ತೆಯಲ್ಲಿದ್ದ ವಾಹನಗಳ ನಡುವೆ ಸಿಲುಕಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಈ ಇಡೀ ಹೃದಯವಿದ್ರಾವಕ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ!

 

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಶಾಸಕ ಟಿಡಿ ರಾಜೇಗೌಡಗೆ ಗೆಲುವು – Kannada News | Sringeri Postal Ballot Recount: Congress MLA TD Rajegowda Declared Winner

ಚಿಕ್ಕಮಗಳೂರು, ಮೇ 02: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ (Sringeri Postal Ballot Recount) ಕೊನೆಗೂ ಕಾಂಗ್ರೆಸ್​​ ಶಾಸಕ ಟಿ.ಡಿ.ರಾಜೇಗೌಡ (MLA TD Rajegowda) ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎದುರಾಗಿದ್ದ ದೊಡ್ಡ ಅಗ್ನಿಪರೀಕ್ಷೆಯಲ್ಲೂ ಜಯಗಳಿಸಿದ್ದಾರೆ. ಸದ್ಯ ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗದಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಶಾಸಕ ಟಿ.ಡಿ.ರಾಜೇಗೌಡ ಪರ ಕಾರ್ಯಕರ್ತರು  ಘೋಷಣೆ ಕೂಗಿ, ಹೂವಿನ ಮಳೆ ಸುರಿಸಿದು ಹರ್ಷ ವ್ಯಕ್ತಪಡಿಸಿದರು.

ಹೈಕೋರ್ಟ್ ಆದೇಶದ ಮೇರೆಗೆ ಇಂದು ಚಿಕ್ಕಮಗಳೂರು ನಗರದ IDSG ಕಾಲೇಜಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ ಮಾಡಲಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮರು ಎಣಿಕೆ ಫೈಟ್ ಜೋರಾಗಿತ್ತು. ಸಾಕಷ್ಟು ಕುತೂಹಲದ ಮಧ್ಯೆ ಇದೀಗ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್​ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದಾರೆ.

ಶಾಸಕ ಟಿ.ಡಿ.ರಾಜೇಗೌಡ ಗೆದ್ದಿದ್ದಾರೆ ಎಂದು ಅಭಿಮಾನಿಗಳ ಸಂಭ್ರಮ

ಇನ್ನು ಅತ್ತ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸಂಭ್ರಮಿಸಿದರು. 267 ಮತಗಳು ಬಹುತೇಕ ತಿರಸ್ಕೃತ ಬೆನ್ನಲ್ಲೇ ರಾಜೇಗೌಡ ಗೆದ್ದರು ಎಂದು ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು.

ಗೆಲುವಿನ ಬಗ್ಗೆ ಕಾಂಗ್ರೆಸ್ ‌ಶಾಸಕ ರಾಜೇಗೌಡ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಕಾಂಗ್ರೆಸ್ ‌ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ. ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದರು.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ: ನಾಪತ್ತೆಯಾಗಿದ್ದ ಮತಪತ್ರಗಳನ್ನ ಹುಡುಕಿ ಹೈರಾಣಾದ ಅಧಿಕಾರಿಗಳು

ಈ ಹಿಂದೆ ಮತ‌ಎಣಿಕೆ ವೇಳೆ ಪ್ರತಿಯೊಂದು ಮತಗಳನ್ನ ಪರಿಶೀಲನೆ ಮಾಡಿದ್ದರೂ ಆರೋಪ ಮಾಡಿದ್ದರು. ಕೆಲವು ಟ್ರಂಕ್ ಗಳು ಓಪನ್ ಆಗಿತ್ತು, ಅದಕ್ಕೆ ನಾನು ಟ್ಯಾಂಪರಿಂಗ್ ಮಾಡಿರಬಹುದು ಎಂದು ಆರೋಪ ಮಾಡಿದ್ದೆ. ಬಿಜೆಪಿ ಅಭ್ಯರ್ಥಿ 40, 42 ಮತಗಳಿಂದ ಗೆಲುವು ನಮ್ಮದೆ ಅಂದ್ರು. ಹಾಗಾಗಿ ನನಗೆ ಅನುಮಾನ ಬಂದಿತ್ತು. 12 ಅಂಚೆ ಮತಗಳು ನಾಪತ್ತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಹಿನ್ನೆಲೆ 

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರವು ತೀವ್ರ ಕುತೂಹಲ ಮೂಡಿಸಿತ್ತು. ಅಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರ ವಿರುದ್ಧ ಕೇವಲ 201 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 1822 ಅಂಚೆ ಮತಗಳ ಪೈಕಿ 279 ಮತಗಳನ್ನು ತಿರಸ್ಕೃತಗೊಳಿಸಲಾಗಿತ್ತು. ಈ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೀವರಾಜ್ ಅವರು ಮರು ಎಣಿಕೆಗೆ ಮನವಿ ಮಾಡಿದ್ದರು, ಆದರೆ ಅಂದಿನ ಜಿಲ್ಲಾ ಚುನಾವಣಾಧಿಕಾರಿಗಳು ಆ ಮನವಿಯನ್ನು ಪರಿಗಣಿಸದೆ ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು (ಮೇ 2, 2026) ಅಂಚೆ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸಿತ್ತು. ಅದರಂತೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮರು ಎಣಿಕೆಯಲ್ಲೂ ಟಿ.ಡಿ. ರಾಜೇಗೌಡ ಅವರೇ ಜಯಭೇರಿ ಬಾರಿಸುವ ಮೂಲಕ ತಮ್ಮ ಗೆಲುವನ್ನು ಮರುಸ್ಥಾಪಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಮರ್ಷಿಯಲ್ ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಪ್ರಧಾನಿ ಮೋದಿಗೆ ಪತ್ರ – Kannada News | Bengaluru Hotel Association Writes to PM Modi: Urges to Reduce Commercial LPG Cylinder Prices After Recent Hike

ಬೆಂಗಳೂರು, ಮೇ 2: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ಬೆಲೆ ಇಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಮೇ 1 ರಂದು ಬರೋಬ್ಬರಿ 993 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ದರ ಏರಿಕೆಯಿಂದಾಗಿ ಹೋಟೆಲ್ ನಡೆಸುವುದೇ ಅಸಾಧ್ಯವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ, ದರ ಏರಿಸದಿದ್ದರೆ ಮಾಲೀಕರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.

ತಮ್ಮ ಸಮಸ್ಯೆಗಳನ್ನು ವೈಯಕ್ತಿಕವಾಗಿ ಹೇಳಿಕೊಳ್ಳಲು ಪ್ರಧಾನಿಯವರು ಒಂದು ಅವಕಾಶ ನೀಡಬೇಕು ಮತ್ತು ತಕ್ಷಣವೇ ವಾಣಿಜ್ಯ ಗ್ಯಾಸ್ ದರವನ್ನು ಇಳಿಸಿ ಹೋಟೆಲ್ ಉದ್ಯಮವನ್ನು ಉಳಿಸಬೇಕು ಎಂದು ಬೆಂಗಳೂರು ಹೋಟೆಲ್ ಒಕ್ಕೂಟ ಪತ್ರದ ಮೂಲಕ ವಿನಂತಿಸಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Women’s T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ – Kannada News | Harmanpreet Kaur’s India Squad Announced for 2026 Women’s T20 World Cup

ಕಳೆದ ವರ್ಷ ಅಂದರೆ 2025 ರ ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್‌ ಗೆದ್ದ ಸಾಧನೆ ಮಾಡಿದ್ದ ಭಾರತ ವನಿತಾ ಪಡೆ ಇದೀಗ ತನ್ನ ಎರಡನೇ ಐಸಿಸಿ ಟ್ರೋಫಿಗಾಗಿ ಎದುರು ನೋಡುತ್ತಿದೆ. ಇದೇ ಜೂನ್ 12 ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್​ಗೆ ಭಾರತ ಮಹಿಳಾ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. ಎಂದಿನಂತೆ ಹರ್ಮನ್​ಪ್ರೀತ್ ಕೌರ್ ತಂಡದ ನಾಯಕತ್ವವಹಿಸಿದ್ದು, ಸ್ಮೃತಿ ಮಂಧಾನಗೆ ಉಪನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ಉಳಿದಂತೆ ಈ ತಂಡದಲ್ಲಿ ಈ ಮೊದಲೇ ನಿರೀಕ್ಷಿಸಿದ್ದ ಹೆಸರುಗಳೇ ಸೇರಿವೆ.

12 ತಂಡಗಳ ನಡುವೆ 33 ಪಂದ್ಯಗಳು

2026 ರ ಮಹಿಳಾ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ಆತಿಥ್ಯವಹಿಸುತ್ತಿದ್ದು, ಈ ಪಂದ್ಯಾವಳಿ ಜೂನ್ 12 ರಂದು ಪ್ರಾರಂಭವಾಗಲಿದ್ದು, ಜುಲೈ 5 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಮಹಿಳಾ ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಭಾರತ ಟಿ20 ವಿಶ್ವಕಪ್ ತಂಡ: ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗ್ಸ್, ಶಫಾಲಿ ವರ್ಮಾ, ಭಾರತಿ ಪುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಕೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.

ಟೀಂ ಇಂಡಿಯಾದ ವೇಳಾಪಟ್ಟಿ

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತವನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೇರಿವೆ. ಭಾರತೀಯ ಮಹಿಳಾ ತಂಡ ಜೂನ್ 14 ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜೂನ್ 17 ರಂದು ನೆದರ್ಲ್ಯಾಂಡ್ಸ್, ಜೂನ್ 21 ರಂದು ದಕ್ಷಿಣ ಆಫ್ರಿಕಾ, ಜೂನ್ 25 ರಂದು ಬಾಂಗ್ಲಾದೇಶ ಹಾಗೂ ಜೂನ್ 28 ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Source link

ಆರ್​ಬಿಐ ಉಪ ಗವರ್ನರ್ ಆಗಿ ರೋಹಿತ್ ಜೈನ್ ನೇಮಕ – Kannada News | Government Appointed Rohit Jain as a RBI Deputy Governor who is he

ನವದೆಹಲಿ, ಮೇ 2: ಕೇಂದ್ರ ಸರ್ಕಾರವು ರೋಹಿತ್ ಜೈನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹೊಸ ಉಪ ಗವರ್ನರ್ ಆಗಿ 3 ವರ್ಷಗಳ ಅವಧಿಗೆ ನೇಮಕ ಮಾಡಿದೆ. ಅವರ ನೇಮಕಾತಿಯನ್ನು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅನುಮೋದಿಸಿದೆ. ಅವರು ಮೇ 3ರಂದು ಅಥವಾ ನಂತರ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಆರ್​ಬಿಐ ಉಪ ಗವರ್ನರ್ ಆಗಿದ್ದ ಟಿ. ರವಿಶಂಕರ್ ಅವರ ಅಧಿಕಾರಾವಧಿ ಮುಗಿದಿದೆ. ಹೀಗಾಗಿ, ಅವರ ಸ್ಥಾನವನ್ನು ರೋಹಿತ್ ಜೈನ್ ವಹಿಸಿಕೊಳ್ಳಲಿದ್ದಾರೆ.

ರೋಹಿತ್ ಜೈನ್ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ರಿಸರ್ವ್ ಬ್ಯಾಂಕಿನಲ್ಲಿ ಮೇಲ್ವಿಚಾರಣೆ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ರೋಹಿತ್ ಜೈನ್ ಅವರನ್ನು ಡಿಸೆಂಬರ್ 2020ರಲ್ಲಿ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಯಿತು. ರೋಹಿತ್ ಜೈನ್ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

ಆರ್‌ಬಿಐ ಒಬ್ಬ ಗವರ್ನರ್ ಮತ್ತು ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿದೆ. ಇಬ್ಬರು ಉಪ ಗವರ್ನರ್‌ಗಳನ್ನು ಬಡ್ತಿ ಮೂಲಕ ನೇಮಿಸಲಾಗುತ್ತದೆ. ಇತರ ಇಬ್ಬರು ಉಪ ಗವರ್ನರ್‌ಗಳು ಹೊರಗಿನವರಾಗಿರುತ್ತಾರೆ. ಅವರ ಹೆಸರು ಪೂನಂ ಗುಪ್ತಾ ಮತ್ತು ಸ್ವಾಮಿನಾಥನ್ ಜೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ 20 ರಿಂದ ರಾಜ್ಯಾದ್ಯಂತ ಸಾರಿಗೆ ಬಸ್​ಗಳು ರಸ್ತೆಗಿಳಿಯುವುದು ಡೌಟ್! ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ತೀರ್ಮಾನ – Kannada News | Karnataka Transport Strike: KSRTC and BMTC Buses May Stop from May 20 as Employees Announce Indefinite Protest

ಬೆಂಗಳೂರು, ಮೇ 2: ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ಸಾರಿಗೆ ಬಸ್‌ಗಳು ಮೇ 20ರಿಂದ ರಸ್ತೆಗಿಳಿಯುವುದು ಅನುಮಾನವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ (Karnataka Transport Strike) ನಡೆಸಲು ಮುಂದಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸುಮಾರು 1.25 ಲಕ್ಷ ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಸಾರಿಗೆ ಬಸ್​​ಗಳ ಸಂಚಾರ ಅನುಮಾನವಾಗಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

  • ವೇತನ ಹಿಂಬಾಕಿ: ಬಾಕಿ ಇರುವ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ನೀಡಬೇಕು.
  • ವೇತನ ಹೆಚ್ಚಳ: 2024ರ ಜನವರಿ 1 ರಿಂದ ಅನ್ವಯವಾಗುವಂತೆ ಮೂಲ ವೇತನವನ್ನು ಶೇ 25ರಷ್ಟು ಏರಿಕೆ ಮಾಡಬೇಕು.
  • ತುಟ್ಟಿಭತ್ಯೆ ವಿಲೀನ: ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು.
  • ಒಂದೇ ಕಂತಿನಲ್ಲಿ ಪಾವತಿ: ಸರ್ಕಾರ ಒಪ್ಪಿರುವ 26 ತಿಂಗಳ ಬಾಕಿ ಹಣ 1272 ಕೋಟಿ ರೂಪಾಯಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.
  • ಇತರೆ ಭತ್ಯೆಗಳು: ಬಾಟಾ ಸೇರಿದಂತೆ ಇತರೆ ಭತ್ಯೆಗಳನ್ನು ಹೆಚ್ಚಿಸಬೇಕು ಹಾಗೂ ಕೋವಿಡ್ ಸಮಯದ ಬಾಕಿ ಹಣವನ್ನು (Arrears) ನೀಡಬೇಕು.

ವಿಫಲವಾದ 12 ಸುತ್ತಿನ ಸಭೆಗಳು

ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಈಗಾಗಲೇ 12 ಬಾರಿ ಮಾತುಕತೆ ನಡೆದಿದೆ. ಆದರೆ, ಈ ಎಲ್ಲಾ ಸಭೆಗಳು ವಿಫಲವಾಗಿವೆ. ಸರ್ಕಾರವು 38 ತಿಂಗಳ ಹಿಂಬಾಕಿಯ ಬದಲಾಗಿ ಕೇವಲ 26 ತಿಂಗಳ ಬಾಕಿ ಹಣ ನೀಡಲು ಮುಂದಾಗಿದೆ. ಆದರೆ ನೌಕರರು ಪೂರ್ಣ ಪ್ರಮಾಣದ 38 ತಿಂಗಳ ಬಾಕಿ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಧೋರಣೆಯನ್ನು ಖಂಡಿಸಿರುವ ನೌಕರರ ಸಂಘಟನೆಗಳು, ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.

ಇದನ್ನೂ ಓದಿ: KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ಜಂಟಿ ಕ್ರಿಯಾ ಸಮಿತಿ ಕೈಗೊಂಡ ನಿರ್ಧಾರವೇನು?

ಈ ಹಿಂದೆ ಕೂಡ ಹಲವು ಬಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೇ ಘಳಿಗೆಯಲ್ಲಿ ಸರ್ಕಾರ ಮಾತುಕತೆ ನಡೆಸಿ ಅವರ ಮನವೊಲಿಸುತ್ತಿತ್ತು. ಆದರೆ, ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ONGC Scholarship 2026: ಒಎನ್‌ಜಿಸಿ ವಿದ್ಯಾರ್ಥಿವೇತನ; ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 48,000ರೂ. ಆರ್ಥಿಕ ನೆರವು – Kannada News | ONGC Scholarship 2026: Apply Now! Eligibility, Last Date and Benefits for UG/PG Students

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ONGC) ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ 2026ನೇ ಸಾಲಿನ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಈ ಯೋಜನೆಯಡಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 1000, ಒಬಿಸಿ ಅಭ್ಯರ್ಥಿಗಳಿಗೆ 500 ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ವಿದ್ಯಾರ್ಥಿವೇತನಗಳನ್ನು ಮೀಸಲಿಡಲಾಗಿದೆ. ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದ್ದು, ಎಲ್ಲಾ ವಿಭಾಗಗಳಲ್ಲಿ ಶೇಕಡಾ 50 ರಷ್ಟು ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿನಿಯರಿಗೇ ಹಂಚಿಕೆ ಮಾಡಲಾಗುತ್ತದೆ. ಪ್ರಸ್ತುತ ಸಂಬಂಧಿತ ವಿಭಾಗಗಳಲ್ಲಿ ಯುಜಿ (UG) ಮತ್ತು ಪಿಜಿ (PG) ಕೋರ್ಸ್‌ಗಳನ್ನು ಕಲಿಯುತ್ತಿರುವ ಆಸಕ್ತ ವಿದ್ಯಾರ್ಥಿಗಳು ಮೇ 15, ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ವಿದ್ಯಾರ್ಥಿವೇತನವು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್ (B.E/B.Tech), ಎಂಬಿಬಿಎಸ್ (MBBS), ಭೂವಿಜ್ಞಾನ (Geology), ಭೂಭೌತಶಾಸ್ತ್ರ (Geophysics) ಅಥವಾ ಎಂಬಿಎ (MBA) ಕೋರ್ಸ್‌ಗಳ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಮಾತ್ರ ಲಭ್ಯವಿರುತ್ತದೆ. ಎಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳು ಪಿಯುಸಿ/ಇಂಟರ್‌ನಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಹೊಂದಿರಬೇಕು. ಅದೇ ರೀತಿ, ಪಿಜಿ ಮಟ್ಟದ ಭೂವಿಜ್ಞಾನ, ಭೂಭೌತಶಾಸ್ತ್ರ ಮತ್ತು ಎಂಬಿಎ ವಿದ್ಯಾರ್ಥಿಗಳು ತಮ್ಮ ಪದವಿಯಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಪಡೆದಿರಬೇಕು. ಆಗಸ್ಟ್ 1, 2025ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 30 ವರ್ಷ ಮೀರಿರಬಾರದು. ಅಲ್ಲದೆ, ಪೋಷಕರ ವಾರ್ಷಿಕ ಆದಾಯವು ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 2 ಲಕ್ಷ ರೂ. ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 4.5 ಲಕ್ಷ ರೂ. ಮೀರಿರಬಾರದು.

ಆಯ್ಕೆ ಪ್ರಕ್ರಿಯೆ ಮತ್ತು ಆರ್ಥಿಕ ನೆರವು:

ಈ ವಿದ್ಯಾರ್ಥಿವೇತನಕ್ಕೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ, ಅಭ್ಯರ್ಥಿಗಳು ತಮ್ಮ ಹಿಂದಿನ ಶಿಕ್ಷಣದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಎಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ತಿಂಗಳಿಗೆ 4,000 ರೂ.ಗಳಂತೆ ವರ್ಷಕ್ಕೆ ಒಟ್ಟು 48,000 ರೂ. ವಿದ್ಯಾರ್ಥಿವೇತನ ದೊರೆಯುತ್ತದೆ. ಅದೇ ರೀತಿ, ಎಂಬಿಎ ಮತ್ತು ಭೂವಿಜ್ಞಾನ/ಭೂಭೌತಶಾಸ್ತ್ರದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಇದೇ ಮೊತ್ತದ ನೆರವು ಸಿಗಲಿದೆ. ಅಭ್ಯರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ಪಡೆಯಲು ತಮ್ಮ ಕೋರ್ಸ್‌ನ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಸಲ್ಲಿಸುವ ವಿಧಾನ ಮತ್ತು ವಲಯವಾರು ಹಂಚಿಕೆ:

ಈ ವಿದ್ಯಾರ್ಥಿವೇತನಕ್ಕಾಗಿ ದೇಶವನ್ನು ಐದು ವಲಯಗಳಾಗಿ ವಿಂಗಡಿಸಲಾಗಿದ್ದು, ಕಾಲೇಜು ಇರುವ ರಾಜ್ಯದ ಆಧಾರದ ಮೇಲೆ ವಲಯವನ್ನು ನಿರ್ಧರಿಸಲಾಗುತ್ತದೆ. ಪ್ರತಿ ವಲಯದಿಂದ ನಿಗದಿತ ಸಂಖ್ಯೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈಗಾಗಲೇ ಬೇರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿರುವವರು ಈ ಒಎನ್‌ಜಿಸಿ ಸ್ಕಾಲರ್‌ಶಿಪ್‌ಗೆ ಅರ್ಹರಾಗಿರುವುದಿಲ್ಲ. ಆಸಕ್ತರು ಮೇ 15ರ ಒಳಗಾಗಿ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ದಾಖಲೆಗಳನ್ನು ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್ ಮಾಡಿ

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:54 pm, Sat, 2 May 26

Source link

ಪ್ರಚಾರಕ್ಕೆ ಬಾರದ ನಟಿ ವಿರುದ್ಧ ನಿರ್ದೇಶಕ, ನಿರ್ಮಾಪಕರಿಂದ ದೂರು ದಾಖಲು – Kannada News | Complaint against actress Rajini for not attending Movie promotion

ನಿನ್ನೆಯಷ್ಟೆ ಹಣ ಕೊಡದೆ ಸತಾಯಿಸುತ್ತಿರುವ ನಿರ್ಮಾಪಕನ (Producer) ವಿರುದ್ಧ ‘ವಸುದೇವ ಕುಟುಂಬ’ ಧಾರಾವಾಹಿಯ ನಟ-ನಟಿಯರು ಮತ್ತು ಯೂನಿಟ್ ಸದಸ್ಯರು ದೂರು ನೀಡಿದ್ದಲ್ಲದೆ, ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡ ಹಾಕಿ ಮಂಗಳಾರತಿ ಮಾಡಿದ್ದರು. ಇಂದು ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರ ವಿರುದ್ಧ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕ ದೂರು ನೀಡಿದ್ದಾರೆ.

‘ಅಮೃತವರ್ಷಿಣಿ’ ಧಾರಾವಾಹಿ ನಟಿ ರಜನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದು, ಸಿನಿಮಾನಲ್ಲಿ ನಟಿಸಿ ಈಗ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ‘ಅಸುರನ ಕೈಯಲ್ಲಿ ಪಾರಿಜಾತ’ ಹೆಸರಿನಲ್ಲಿ ಸಿನಿಮಾನಲ್ಲಿ ರಜಿನಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ಕಾರ್ತಿಕ್ ಎಂಬುವರು ಮೀಕ್ಷಾ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಟಿ ಬರುತ್ತಿಲ್ಲವೆನ್ನಲಾಗುತ್ತಿದೆ.

‘ಅಸುರನ ಕೈಯಲ್ಲಿ ಪಾರಿಜಾತ’ ಸಿನಿಮಾ ಅನ್ನು ವಿಘ್ನೇಶ್ ನಿರ್ದೇಶನ ಮಾಡಿದ್ದು ಕಾರ್ತಿಕ್ ಅವರು ನಿರ್ಮಾಣ ಮಾಡುವ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ. ಟ್ರೈಲರ್ ರಿಲೀಸ್​​ಗೆ ಕರೆದರೆ ಅಂದು ಬರ್ತ್​ ಡೇ ಇದೆ ಬರಲ್ಲ ಎಂದರು. ಪ್ರಚಾರಕ್ಕೆ ಕರೆದರೆ ಸೀರಿಯಲ್ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದೀನಿ ಎಂದರು. ನಮ್ಮ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು, ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ ನಿರ್ದೇಶಕ.

ಇದನ್ನೂ ಓದಿ:ಏಕಾಏಕಿ ಎಂಟ್ರಿ ಕೊಟ್ಟ ‘ಪೆದ್ದಿ’ ಸಿನಿಮಾ; ಅಭಿಮಾನಿಗಳಿಗೆ ಶುರುವಾಗಿದೆ ಆತಂಕ

ಕೇವಲ ಎರಡು ಗಂಟೆ ಬಂದು ಪ್ರಚಾರ ಮಾಡಿಕೊಡಿ ಎಂದರೆ ಬರುತ್ತಿಲ್ಲ. ಮೂರು ದಿನ ಬನ್ನಿ ಅಂತ ಅಷ್ಟೇ ಕೇಳಿರೋದು ರಿಲೀಸ್ ದಿನ, ಟ್ರೈಲರ್ ರಿಲೀಸ್ ದಿನ ಒಂದು ಪ್ರೆಸ್ ಮೀಟ್ ಅಷ್ಟೇ , ಸಿನಿಮಾ ರೀಲ್ಸ್ ಶೇರ್ ಮಾಡಿಕೊಳ್ಳಿ ಎಂದರೆ ಹಣ ಕೊಡಿ ನಾನೇ ರೀಲ್ಸ್ ಮಾಡಿ ಹಾಕುತ್ತೀನಿ ಎನ್ನುತ್ತಾರೆ. ಅದಕ್ಕೆ ಈಗ ನಾವು ಫಿಲಂ ಚೇಂಬರ್ ಅಧ್ಯಕ್ಷರಿಗೆ ನಟಿಯ ವಿರುದ್ಧ ದೂರು ನೀಡಿದ್ದೀವಿ’ ಎಂದಿದ್ದಾರೆ ವಿಘ್ನೇಶ್. ದೂರು ಸ್ವೀಕರಿಸಿ ಮಾತನಾಡಿರುವ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, ‘ನಾನು ದೂರು ತಗೊಂಡಿದ್ದೀನಿ ಅದಕ್ಕೆ ಹೇಳೋದು ನಿರ್ಮಾಪಕರಿಗೆ ಸಿನಿಮಾ ಮಾಡೋಕು ಮುಂಚೆ ಸರಿಯಾಗಿ ಒಪ್ಪಂದ ಮಾಡಿಕೊಳ್ಳಿ ಅಂತ. ಆದರೆ ಇವರುಗಳು ಕೇಳಲ್ಲ, ನಾನು ಈಗಾಗಲೇ ರಜಿನಿ ಅವರ ಹತ್ತಿರ ಮಾತನಾಡಿದ್ದೀನಿ, ಫಿಲಂ ಚೇಂಬರ್​ಗೆ ಬರ್ತೀನಿ ಅಂತ ಹೇಳಿದ್ದಾರೆ. ನೋಡೋಣ, ಸಂಧಾನ ಮಾಡುವ ಪ್ರಯತ್ನ ಮಾಡುತ್ತೀವಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಆರಂಭಿಕನಾಗಿ ರೋಹಿತ್, ಕೊಹ್ಲಿ ದಾಖಲೆ ಮುರಿದ ರಾಹುಲ್

Source link

ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ – Kannada News | War Likely To Resume again Iran makes a big claim Donald trump

ಟೆಹ್ರಾನ್, ಮೇ 2: ಕದನವಿರಾಮ ಘೋಷಣೆಯಾಗಿದ್ದರೂ ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆ ಇನ್ನೂ ಹೆಚ್ಚಾಗಿದೆ. ಎರಡೂ ದೇಶಗಳ ನಡುವಿನ ಪರಿಸ್ಥಿತಿ ಮತ್ತೆ ಉಲ್ಬಣಗೊಳ್ಳಬಹುದು. ಅಮೆರಿಕ ಮತ್ತು ಇಸ್ರೇಲ್ ಜೊತೆ ಯುದ್ಧ ಮತ್ತೆ ಆರಂಭವಾಗಬಹುದು ಎಂದು ಇರಾನ್ (Iran) ಸೇನೆ ಎಚ್ಚರಿಸಿದೆ. ಇರಾನ್ ಸೇನಾ ಉಪ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ ಅಮೆರಿಕ ಯಾವುದೇ ಒಪ್ಪಂದಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಅಮೆರಿಕದ ಅಧಿಕಾರಿಗಳ ಹೇಳಿಕೆಗಳು ಕೇವಲ ಪ್ರದರ್ಶನಕ್ಕಾಗಿ ಮಾತ್ರ ಎಂದು ಅಸ್ಸಾದಿ ಆರೋಪಿಸಿದ್ದಾರೆ. ಇರಾನ್ ಸೇನೆಯು ಸಂಪೂರ್ಣವಾಗಿ ಸಿದ್ಧವಾಗಿದೆ. ಮತ್ತೆ ಯಾವುದೇ ದಾಳಿ ನಡೆದರೂ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: ನೀವು ನನಗೆ ಸಹಾಯ ಮಾಡಿ, ನಾನು ನಿಮಗೆ ಸಹಾಯ ಮಾಡ್ತೇನೆ, ಟ್ರಂಪ್-ಪುಟಿನ್ 90 ನಿಮಿಷಗಳ ರಹಸ್ಯ ಮಾತುಕತೆ

ಇರಾನ್ ಜೊತೆಗಿನ ಮಾತುಕತೆಯ ಹೊಸ ಪ್ರಸ್ತಾಪವನ್ನು ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ಸಮಯದಲ್ಲಿಯೇ ಅವರ ಈ ಹೇಳಿಕೆ ಬಂದಿದೆ. ಇರಾನ್ ತಾನು ಒಪ್ಪಿಕೊಳ್ಳಲು ಸಾಧ್ಯವಾಗದ ಷರತ್ತುಗಳನ್ನು ವಿಧಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ನಾಯಕರು ಒಗ್ಗಟ್ಟಿನಲ್ಲಿಲ್ಲ ಎಂದು ಅವರು ಆರೋಪಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಇರಾನ್ ಸಮರ ಅಂತ್ಯ: ಟ್ರಂಪ್ ಆಡಳಿತದ ದಿಢೀರ್ ಘೋಷಣೆ, ಸಂಸತ್ತಿನ ಹಸ್ತಕ್ಷೇಪಕ್ಕೆ ಬೀಳಲಿದೆಯೇ ಬ್ರೇಕ್?

ಒಂದು ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಮಾತನಾಡುತ್ತಾ, ಪರಮಾಣು ಶಸ್ತ್ರಾಸ್ತ್ರಗಳು ಹುಚ್ಚರ ಕೈಗೆ ಸಿಗಲು ಬಿಡಲು ಸಾಧ್ಯವಿಲ್ಲದ ಕಾರಣ ಅಮೆರಿಕ ಈ ಯುದ್ಧದಲ್ಲಿ ಭಾಗವಹಿಸಿದೆ ಎಂದು ಹೇಳಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link