All posts by nagaraj11081993

ಆಳಂದದ ದರ್ಗಾದಲ್ಲಿ ಶಿವರಾತ್ರಿ ಪೂಜೆ ನಡೆಸಲು ಸುಪ್ರೀಂ ಗ್ರೀನ್​​ ಸಿಗ್ನಲ್ – Kannada News | Aland Dargah Shivaratri Puja: Supreme Court Dismisses Appeal, Upholds High Court Order

ಕಲಬುರಗಿ, ಫೆ.12: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆ (Aland Dargah Shivaratri Puja) ನಡೆಸುವ ವಿಚಾರಕ್ಕೆ ಸಂಬಂಧಿಸಿಂತೆ ಸುಪ್ರೀಂ ಕೋರ್ಟ್​ ಮಹತ್ವದ ಆದೇಶವನ್ನು ನೀಡಿದೆ. ನೆನ್ನೆ (ಫೆ.11) ಕಲಬುರಗಿ ಹೈಕೋರ್ಟ್‌ ​ ಪೀಠ ಶಿವರಾತ್ರಿ ಪೂಜೆಗೆ ಅನುಮತಿ ನೀಡಿದ ಬೆನ್ನಲ್ಲೇ, ಇದೀಗ ಸುಪ್ರೀಂ ಕೋರ್ಟ್​ ಕೂಡ ಗ್ರೀನ್​​ ಸಿಗ್ನಲ್ ನೀಡಿದೆ. ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಸುಪ್ರೀಂ ಕೋರ್ಟ್ ಸಂಪೂರ್ಣ ಅನುಮತಿ ನೀಡಿದೆ. ದರ್ಗಾ ಆವರಣದಲ್ಲಿ ಪೂಜೆಗೆ ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಗಾ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಪೂಜೆಗೆ ತಡೆ ನೀಡಲು ನಿರಾಕರಿಸಿದೆ.

ಸಂವಿಧಾನದ 32ನೇ ವಿಧಿ (Article 32) ಇಂತಹ ಉದ್ದೇಶಗಳಿಗಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರ ವಿರುದ್ಧ ಗರಂ ಆಗಿದೆ. ಕೂಡಲೇ ಅರ್ಜಿಯನ್ನು ಹಿಂಪಡೆಯುವಂತೆ ದರ್ಗಾ ಪರ ಅರ್ಜಿದಾರರಿಗೆ ಸೂಚನೆ ನೀಡಿದೆ. ಕರ್ನಾಟಕ ಹೈಕೋರ್ಟ್ ಕೂಡ ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಈಗ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಹೈಕೋರ್ಟಿನ ಆದೇಶವನ್ನು ಎತ್ತಿಹಿಡಿದೆ. ಇದೀಗ ಈ ಆದೇಶದ ಮೂಲಕ ಈ ಬಾರಿಯ ಮಹಾಶಿವರಾತ್ರಿಯಂದು ಪೂಜೆ ನಡೆಸಲು ಇದ್ದ ಕಾನೂನು ಅಡೆತಡೆಗಳು ನಿವಾರಣೆಯಾಗಿವೆ.

ಇದನ್ನೂ ಓದಿ: ಅಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್‌

ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗವಿದೆ. ಇಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಕಳೆದ ಕೆಲವು ವರ್ಷಗಳಿಂದ ಎರಡು ಸಮುದಾಯಗಳ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತವು ಕೆಲವು ನಿರ್ಬಂಧಗಳನ್ನು ವಿಧಿಸುತ್ತಾ ಬಂದಿತ್ತು. ಸುಪ್ರೀಂ ಕೋರ್ಟ್ ಪೂಜೆಗೆ ಅವಕಾಶ ನೀಡಿರುವುದರಿಂದ, ಮಹಾಶಿವರಾತ್ರಿಯಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಬುರಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಆಳಂದನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಸಾಧ್ಯತೆ ಇದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Surya Grahan 2026: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ – Kannada News | Kankana Surya Grahan: “Ring of Fire” Phenomenon, India Visibility and NASA Streaming

ಕೆಲವೇ ದಿನಗಳಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ದೃಶ್ಯವೊಂದು ಮೂಡಲಿದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಜಗತ್ತಿನ ಹಲವೆಡೆ “ರಿಂಗ್ ಆಫ್ ಫೈರ್” ಎಂಬ ಅದ್ಭುತ ದೃಶ್ಯ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 3:26ಕ್ಕೆ ಆರಂಭವಾಗಿ ಸಂಜೆ 7:57ಕ್ಕೆ ಮುಕ್ತಾಯಗೊಳ್ಳುತ್ತದೆ. ಒಟ್ಟು ಸುಮಾರು 4 ಗಂಟೆ 32 ನಿಮಿಷಗಳ ಕಾಲ ಈ ಗ್ರಹಣ ಪ್ರಕ್ರಿಯೆ ನಡೆಯಲಿದೆ.

ಗ್ರಹಣದ ಗರಿಷ್ಠ ಹಂತ ಸಂಜೆ 5:42ರ ಸುಮಾರಿಗೆ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚದೆ, ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಹೊಳೆಯುತ್ತವೆ. ಈ ದೃಶ್ಯವೇ “ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುತ್ತದೆ. ಗರಿಷ್ಠ ಹಂತವು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಮುಂದುವರಿದು, ಬಳಿಕ ಗ್ರಹಣ ಕ್ರಮೇಣ ಕ್ಷೀಣಿಸಿ ಅಂತ್ಯಗೊಳ್ಳುತ್ತದೆ.

ಕಂಕಣ ಸೂರ್ಯಗ್ರಹಣವು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಉಂಟಾಗುತ್ತದೆ. ಆದರೆ ಚಂದ್ರನು ಭೂಮಿಯಿಂದ ಸ್ವಲ್ಪ ದೂರದಲ್ಲಿರುವ ಕಾರಣ ಸೂರ್ಯನಿಗಿಂತ ಸಣ್ಣದಾಗಿ ಕಾಣುತ್ತದೆ. ಈ ಕಾರಣದಿಂದ ಸೂರ್ಯನನ್ನು ಸಂಪೂರ್ಣ ಮುಚ್ಚಲು ಸಾಧ್ಯವಾಗದೆ, ಸೂರ್ಯನ ಸುತ್ತಲೂ ಉಂಗುರದ ಆಕಾರದಲ್ಲಿ ಬೆಳಕು ಕಾಣಿಸುತ್ತದೆ. ಇದೇ ಈ ಗ್ರಹಣದ ವೈಶಿಷ್ಟ್ಯವಾಗಿದ್ದು, ಖಗೋಳಶಾಸ್ತ್ರ ಪ್ರಿಯರಿಗೆ ಅತ್ಯಂತ ಆಕರ್ಷಕ ಕ್ಷಣವಾಗಿರುತ್ತದೆ.

ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ

ಆದರೆ ಭಾರತೀಯರಿಗೆ ಈ ಬಾರಿ ಈ ಅದ್ಭುತವನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯುವುದಿಲ್ಲ. ಭಾರತದಲ್ಲಿಯೂ ಅಲ್ಲದೆ ಏಷ್ಯಾದ ಬಹುತೇಕ ಭಾಗಗಳಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ದೇಶದಲ್ಲಿ ಸೂತಕ ಅಥವಾ ವಿಶೇಷ ಧಾರ್ಮಿಕ ಆಚರಣೆಗಳ ಅವಶ್ಯಕತೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಈ ಗ್ರಹಣವನ್ನು ನೇರಪ್ರಸಾರ ಮಾಡುವ ಸಾಧ್ಯತೆ ಇದೆ. ನಾಸಾದ ಅಧಿಕೃತ ಯೂಟ್ಯೂಬ್ ಚಾನೆಲ್ ಅಥವಾ ಆನ್‌ಲೈನ್ ವೇದಿಕೆಗಳ ಮೂಲಕ ಈ ಅಪರೂಪದ ದೃಶ್ಯವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ರಾಯಭಾರಿ: ಕೆಎಂಎಫ್ ಆಕ್ಷೇಪ – Kannada News | Sudharani appointed as Nandini products brand ambassador by Bamul

ಕೆಲ ದಿನಗಳ ಹಿಂದಷ್ಟೆ ರಾಜ್ಯದ ಹೆಮ್ಮೆಯಾಗಿರುವ ಸರ್ಕಾರಿ ಮಾಲೀಕತ್ವದ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ಪ್ಯಾನ್ ಇಂಡಿಯಾ ನಟಿ ತಮನ್ನಾ ಭಾಟಿಯಾ (Tamannah Bhatia) ಅವರನ್ನು ರಾಯಭಾರಿ ಅನ್ನಾಗಿ ಮಾಡಲಾಗಿದೆ. ಕನ್ನಡದವರ ಬದಲು ಪರಭಾಷಾ ನಟಿಯನ್ನು ರಾಯಭಾರಿ ಮಾಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ತಮ್ಮ ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ಅವರನ್ನು ರಾಯಭಾರಿ ಅನ್ನಾಗಿ ಮಾಡಿದೆ. ಆದರೆ ಇದಕ್ಕೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳ) ವಿರೋಧ ವ್ಯಕ್ತಪಡಿಸಿದೆ.

ಬಮೂಲ್​​ನ ಅಧ್ಯಕ್ಷರಾಗಿರುವ ಡಿಕೆ ಸುರೇಶ್ ಅವರು ಸುಧಾರಾಣಿ ಅವರನ್ನು ಭೇಟಿಯಾಗಿ ಅವರಿಗೆ ಹೂಗುಚ್ಛ ನೀಡಿ ಅವರನ್ನು ಬಮೂಲ್​​ ಉತ್ಪನ್ನಗಳ ರಾಯಭಾರಿ ಆಗಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಟಿ ಸುಧಾರಾಣಿ, ‘ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ (BAMUL Nandini) ಜೊತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ’ ಎಂದಿದ್ದಾರೆ.

‘ಸಂಸ್ಥೆಯಿಂದ ಬರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು. ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳು ಸೇರಿದೆ. ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗ ಸಿಟ್ಟಾದ ತಮನ್ನಾ ಭಾಟಿಯಾ: ವಿಡಿಯೋ ನೋಡಿ

ಆದರೆ ಸುಧಾರಾಣಿ ಅವರನ್ನು ಬಮೂಲ್, ರಾಯಭಾರಿ ಅನ್ನಾಗಿ ನೇಮಕ ಮಾಡಿಕೊಂಡಿರುವುದಕ್ಕೆ ಮಾತೃಸಂಸ್ಥೆಯಾದ ಕೆಎಂಎಫ್ ಆಕ್ಷೇಪ ವ್ಯಕ್ತಪಡಿಸಿದೆ. ಬಮೂಲ್ ಸಂಸ್ಥೆಯು ಬೈಲಾದ ವಿರುದ್ಧವಾಗಿ ರಾಯಭಾರಿ ಅನ್ನು ನೇಮಕ ಮಾಡಿದೆ ಎಂದು ಆರೋಪಿಸಿದ್ದು, ಈ ನೇಮಕವು ನಿಯಮ ಬಾಹಿರವಾಗಿದೆ ಎಂದಿದೆ. ಕೆಎಂಎಫ್​​ಗೆ ಮಾಹಿತಿ ಸಹ ನೀಡದೆ ರಾಯಭಾರಿ ನೇಮಕ ಮಾಡಿರುವ ಬಗ್ಗೆ ಬಮೂಲ್ ಅಧಿಕಾರಿಗಳ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ಕೆಎಂಎಫ್​​ನ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ನಂದಿನಿಯ ಉತ್ಪನ್ನಗಳಿಗೆ ಡಾ ರಾಜ್​​ಕುಮಾರ್ ಪ್ರಥಮ ರಾಯಭಾರಿ ಆಗಿದ್ದರು. ರಾಜ್​​ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ನೀಡಿದ ಪ್ರಚಾರದಿಂದಾಗಿ ನಂದಿನಿಯ ಉತ್ಪನ್ನಗಳು ರಾಜ್ಯದಾದ್ಯಂತ ಮನೆ ಮಾತಾದವು. ಬಳಿಕ ಪುನೀತ್ ರಾಜ್​​ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆದರು. ಪುನೀತ್ ಅವರೂ ಸಹ ಉಚಿತವಾಗಿ ನಂದಿನಿಗೆ ರಾಯಭಾರಿ ಆಗಿದ್ದರು. ಆದರೆ ಅವರ ನೇಮಕವನ್ನು ಕೆಎಂಎಫ್​ ಮಾಡಿತ್ತು, ಇದೀಗ ಬಮೂಲ್ ಸ್ವತಂತ್ರ್ಯವಾಗಿ ಸುಧಾರಾಣಿ ಅವರನ್ನು ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಹಿಂದಿದೆ ಜೈಶ್ ಉಗ್ರ ಸಂಘಟನೆ ಕೈವಾಡ – Kannada News | Major Revelation: United Nations Flags Pakistani Outfit in Red Fort near Attack

ನವದೆಹಲಿ, ಫೆಬ್ರವರಿ 12: ಇತ್ತೀಚೆಗೆ ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಸ್ಫೋಟ(Car Blast)ಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ಆ ವರದಿಯಲ್ಲಿ ಈ ದಾಳಿಯಲ್ಲ ಪಾಕಿಸ್ತಾನಿ ಉಗ್ರ ಸಂಘಟನೆ ಜೈಶ್-ಎ ಮೊಹಮ್ಮದ್ ಕೈವಾಡವಿತ್ತು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ವಿಶ್ವಸಂಸ್ಥೆಯ 37 ನೇ ವರದಿಯು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನಂಟು ಈ ದಾಳಿಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದೆ.

ವರದಿ ಪ್ರಕಾರ, ಜೈಶ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಸದಸ್ಯ ರಾಷ್ಟ್ರವೊಂದು ಹೇಳಿದೆ. ವರದಿಯು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಪ್ರಶ್ನೆಗಳನ್ನು ಮತ್ತೆ ಹುಟ್ಟುಹಾಕಿದೆ. ಮಸೂದ್ ಅಜರ್ ಅಕ್ಟೋಬರ್ 8 ರಂದು ಪ್ರತ್ಯೇಕ ಮಹಿಳಾ ವಿಭಾಗವನ್ನು ರಚಿಸುವುದಾಗಿ ಘೋಷಿಸಿದ್ದಾನೆ. ಹೊಸ ವಿಭಾಗಕ್ಕೆ ಜಮಾತ್-ಉಲ್-ಮುಮಿನಾತ್ ಎಂದು ಹೆಸರಿಲಾಗಿದೆ. ಈ ವಿಭಾಗವನ್ನು ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಸೇರಿಸಲಾಗಿಲ್ಲ, ಆದರೆ ಸಂಘಟನೆಯು ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ.

ಈ ವಿಷಯದ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯವಿದೆ. ಒಂದು ದೇಶ ಜೈಶ್ ಇನ್ನೂ ಸಕ್ರಿಯವಾಗಿದೆ ಎಂದು ಹೇಳಿಕೊಂಡರೆ, ಇನ್ನೊಂದು ದೇಶ ಜೈಶ್ ಈಗ ನಿಷ್ಕ್ರಿಯ ಎಂದು ಹೇಳಿದೆ. ನಿಷೇಧದ ನಂತರ ಜೈಶ್ ಮತ್ತು ಲಷ್ಕರ್ ಇನ್ನು ಮುಂದೆ ಸಕ್ರಿಯವಾಗಿಲ್ಲ ಎಂದು ಪಾಕಿಸ್ತಾನ ಈಗಾಗಲೇ ಹೇಳಿದೆ.ವರದಿಯು ಪಹಲ್ಗಾಮ್ ದಾಳಿಯ ಬಗ್ಗೆಯೂ ಉಲ್ಲೇಖಿಸಿದೆ. ಏಪ್ರಿಲ್ 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಲಷ್ಕರ್‌ನ ಪ್ರತಿನಿಧಿ ಎಂದು ಪರಿಗಣಿಸಲಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯನ್ನು ನಡೆಸಿತ್ತು.

ಮತ್ತಷ್ಟು ಓದಿ: ದೆಹಲಿ ನಿಗೂಢ ಸ್ಫೋಟ: ಘಟನೆಗೆ ಕಾರಣವಾದ ಕಾರಿನ ಸ್ಥಿತಿ ಹೇಗಾಗಿದೆ ವಿಡಿಯೋ ನೋಡಿ

ಜುಲೈ 28, 2025 ರಂದು ಮೂವರು ಶಂಕಿತರನ್ನು ಕೊಲ್ಲಲಾಯಿತು. ಮೇ ತಿಂಗಳಲ್ಲಿ, ಭಾರತ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಕ್ರಮ ಕೈಗೊಂಡಿತ್ತು. ನವೆಂಬರ್ 10, 2025 ರಂದು ನವದೆಹಲಿಯ ಕೆಂಪು ಕೋಟೆಯ ಬಳಿ ದಾಳಿ ನಡೆದಿತ್ತು. ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗ್ರಾಹಕರ ಪ್ರಾಣದ ಜತೆ ಚೆಲ್ಲಾಟ: ಬೇಕರಿಯಲ್ಲಿ ‘ಬೂಸ್ಟ್’ ತುಂಬಿದ ಕೇಕ್ ಮಾರಾಟ, ಆಹಾರ ಇಲಾಖೆ ಡೋಂಟ್ ಕೇರ್ – Kannada News | Shiroor Food Safety Alert: Boost Powder in Cakes Sparks Viral Videos & Nargund Food Dept Scrutiny

ಗದಗ, ಫೆ.12: ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬೇಕರಿಯೊಂದರಲ್ಲಿ ‘ಬೂಸ್ಟ್’ (Boost) ಪುಡಿಯನ್ನು ಅಸಹಜವಾಗಿ ತುಂಬಿದ ಕೇಕ್ ಮಾರಾಟ ಮಾಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿರೋಳ ಗ್ರಾಮದ ‘ಬೆಂಗಳೂರು ಬೇಕರಿ’ಯಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೇಕ್‌ನ ಒಳಭಾಗದಲ್ಲಿ ಬೂಸ್ಟ್ ಪುಡಿಯನ್ನು ವಿಪರೀತವಾಗಿ ತುಂಬಲಾಗಿದೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಹೆಚ್ಚು ಲಾಭಕ್ಕಾಗಿ ಹಾಗೂ ಹಳೆಯ ಕೇಕ್​​ಗಳು ಮಾರಾಟವಾಗಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ನರಗುಂದ ತಾಲೂಕಿನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥ್ಯಾಂಕ್ ಗಾಡ್, ನಾವು ನೇಪಾಳ ವಿರುದ್ಧ ಗೆದ್ದಿದ್ದೇವೆ: ಹ್ಯಾರಿ ಬ್ರೂಕ್ ಅಚ್ಚರಿಯ ಹೇಳಿಕೆ – Kannada News | England skipper Harry Brook was thankful for Nepal’s win

ಟಿ20 ವಿಶ್ವಕಪ್​ನ 15ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲನುಭವಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 196 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 19 ಓವರ್​ಗಳಲ್ಲಿ 166 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ 30 ರನ್​ಗಳಿಂದ ಆಂಗ್ಲ ಪಡೆ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್, ವೆಸ್ಟ್ ಇಂಡೀಸ್ ವಿರುದ್ಧ ಸೋತಿರುವುದು ನಿಜಕ್ಕೂ ನಿರಾಶಾದಾಯಕ. ನಿಸ್ಸಂಶಯವಾಗಿ, ಪಂದ್ಯವನ್ನು ಸೋಲುವುದು ಎಂದಿಗೂ ಒಳ್ಳೆಯದಲ್ಲ. ಇದಾಗ್ಯೂ ಈ ಮ್ಯಾಚ್​ನಲ್ಲಿ ವೆಸ್ಟ್ ಇಂಡೀಸ್ ಅತ್ಯುತ್ತಮವಾಗಿ ಆಡಿದೆ. ಅವರ ಸಾಮರ್ಥ್ಯವೇನು ಎಂಬುದರ ಸಂಪೂರ್ಣ ಅರಿವು ಅವರಿಗಿತ್ತು. ಹೀಗಾಗಿ ಅವರು ಸಿಕ್ಸರ್​ಗಳ ಮೂಲಕ ರನ್​ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ನಮ್ಮ ಬ್ಯಾಟರ್​ಗಳು ಸಂಪೂರ್ಣ ವಿಫಲರಾಗಿದ್ದಾರೆ.  ಟಾಪ್-ಆರ್ಡರ್ ಬ್ಯಾಟರ್​ಗಳಿಂದ ಬಿರುಸಿನ ಬ್ಯಾಟಿಂಗ್ ಮೂಡಿ ಬಂದಿಲ್ಲ. ಇದು ಕೂಡ ಒಂದು ಕಾರಣವಷ್ಟೆ. ಇದಾಗ್ಯೂ ಮುಂದಿನ ಪಂದ್ಯಗಳಲ್ಲಿ ನಾವು ಗೆಲ್ಲಲೇಬೇಕಿದೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ನಾವು ಗೆದ್ದಿರುವುದೇ ಸಮಾಧಾನ.

ನೇಪಾಳ ವಿರುದ್ಧ ನಾವು 4 ರನ್​ಗಳ ರೋಚಕ ಜಯ ಸಾಧಿಸಿದ್ದೆವು. ಇದಕ್ಕೆ ದೇವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಇಲ್ಲದಿದ್ದರೆ ನಾವು ಕಠಿಣ ಪರಿಸ್ಥಿತಿಯಲ್ಲಿ ಇರುತ್ತಿದ್ದೆವು. ಇದೀಗ ಒಂದು ಗೆಲುವು ಹೊಂದಿರುವ ನಾವು ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಬೇಕಿದೆ. ಅದರಂತೆ ಸ್ಕಾಟ್ಲೆಂಡ್ ಹಾಗೂ ಇಟಲಿ ವಿರುದ್ಧ ಗೆದ್ದು ದ್ವಿತೀಯ ಸ್ಥಾನಕ್ಕೇರುವ ವಿಶ್ವಾಸವಿದೆ ಎಂದು ಹ್ಯಾರಿ ಬ್ರೂಕ್ ತಿಳಿಸಿದ್ದಾರೆ.

Source link

ನಮ್ಮ ಮೆಟ್ರೋ ರೆಡ್​​ ಲೈನ್​​ ಡಿಪಿಆರ್​​ಗೆ ಕೇಂದ್ರ ಸರ್ಕಾರದ ತಗಾದೆ: ಮರುಪರಿಶೀಲನೆಗೆ ಸೂಚನೆ – Kannada News | Namma Metro Red Line: Centre Objects to Sarjapur Hebbal Double Decker Plan

ಬೆಂಗಳೂರು, ಫೆಬ್ರವರಿ 12: ನಮ್ಮ ಮೆಟ್ರೋ ರೈಲುಗಳ ಟಿಕೆಟ್​​ ದರ ಏರಿಕೆ ವಿಚಾರವಾಗಿ ಜಟಾಪಟಿ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬ್ಯಾಡ್​​ ನ್ಯೂಸ್​​ ಸಿಕ್ಕಿದೆ. ಬಹು ನಿರೀಕ್ಷಿತ ಮೆಟ್ರೋ ರೆಡ್​​ ಲೈನ್​​ನ ಸರ್ಜಾಪುರ ಟು ಹೆಬ್ಬಾಳ ಯೋಜನೆಯ ಡಿಪಿಆರ್​​ಗೆ ಕೇಂದ್ರ ಆಕ್ಷೇಪ ತೆಗೆದಿದ್ದು, ಡಬಲ್ ಡೆಕ್ಕರ್ ಪ್ಲ್ಯಾನ್​​ಗೆ ನೋ ಎಂದಿದೆ. ಹೀಗಾಗಿ ಮೆಟ್ರೋ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗುವ ಸಾಧ್ಯತೆ ಗೋಚರಿಸಿದೆ.

ಕೇಂದ್ರ ಸರ್ಕಾರದ ಆಕ್ಷೇಪ ಯಾಕೆ?

ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ 28,405 ಕೋಟಿ ಡಿಪಿಆರ್ ಹಿನ್ನೆಲೆ ಕೇಂದ್ರ ಸರ್ಕಾರ ತಗಾದೆ ತೆಗೆದಿದೆ. ಡಬಲ್ ಡೆಕ್ಕರ್ ಮಾಡೋದ್ರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಕಾರಣ ರೆಡ್ ಲೈನ್ ಮೆಟ್ರೋ ಕಾರಿಡಾರ್​​ಗಳಲ್ಲಿ ಡಬಲ್ ಡೆಕ್ಕರ್ ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬೇಕಾದಲ್ಲಿ ಅಗತ್ಯ ಜಂಕ್ಷನ್​​ಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಮಾಡಲು ಒಪ್ಪಿಗೆ ಸೂಚಿಸಲಾಗಿದ್ದು, ಯೋಜನೆಯನ್ನು ಮರುಪರಿಶೀಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL

ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದಲ್ಲಿ ಸರ್ಜಾಪುರ – ಹೆಬ್ಬಾಳ ಸಂಪರ್ಕಿಸುವ ಕೆಂಪು ಮಾರ್ಗ ಯೋಜನೆಯ ಡಿಪಿಆರ್​​ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಸುಮಾರು 37 ಕಿ.ಮೀ ಉದ್ದದ, ಅಂದಾಜು 28,405 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, 28 ನಿಲ್ದಾಣಗಳನ್ನು ಈ ಮಾರ್ಗ ಹೊಂದಲಿದೆ. ಐಟಿ ಕಾರಿಡಾರ್ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಈ ಮೆಟ್ರೋ ಮಾರ್ಗ 4 ಪ್ರಮುಖ ಇಂಟರ್‌ಚೆಂಜ್ ಮಾರ್ಗಗಳನ್ನು ಸಂಪರ್ಕಿಸಲಿದೆ ಎಂದು ಹೇಳಲಾಗಿತ್ತು. 2031ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತಾದರೂ ಈಗ ಕೇಂದ್ರ ಸರ್ಕಾರ ಯೋಜನೆಯ ಡಿಪಿಆರ್​​ಗೆ ಆಕ್ಷೇಪ ತೆಗೆದ ಕಾರಣ, ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ದೊಡ್ಮನೆ ಹಬ್ಬ’ದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು; ತಬ್ಬಿ ಸಂತೈಸಿದ ರಘು-ಗಿಲ್ಲಿ – Kannada News | Gilli Nata And Raghu Hugged Rakshitha Shetty While she is crying on Stage

ರಕ್ಷಿತಾ ಶೆಟ್ಟಿ ಅವರು ದೊಡ್ಮನೆಯಲ್ಲಿ ಸಾಕಷ್ಟು ಹೆಸರು ಮಾಡಿದರು. ಅವರು ರನ್ನರ್ ಅಪ್ ಕೂಡ ಆಗಿದ್ದರು. ಅವರು ದೊಡ್ಮನೆ ಹಬ್ಬದಲ್ಲಿ ಕಣ್ಣೀರು ಹಾಕಿದ್ದಾರೆ. ಆಗ ವೇದಿಕೆ ಏರಿದ ರಘು ಹಾಗೂ ಗಿಲ್ಲಿ ರಕ್ಷಿತಾನ ಸಮಾಧಾನ ಮಾಡಿದ್ದನ್ನು ಕಾಣಬಹುದು. ಬಿಗ್ ಬಾಸ್ ಮನೆಯನ್ನು, ಸಹ ಸ್ಪರ್ಧಿಗಳನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಈ ಕಣ್ಣೀರು ಬಂದಿದೆ. ಏಪ್ರಿಲ್ 14ರ ಮಧ್ಯಾಹ್ನ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಸತತ ಮೂರು ಗಂಟೆ ಈ ಮನರಂಜನೆ ಸಿಗಲಿದೆ ಎಂಬುದು ವಿಶೇಷ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ದುಬೈನಿಂದ ಭಾರತಕ್ಕೆ ಮರಳಿದ ಕೇರಳದ ಮಹಿಳೆ; ಕಾರಣ ಇದೇ ನೋಡಿ – Kannada News | Kerala woman reveals true story after returning to India from Dubai

ಉತ್ತಮ ಗುಣಮಟ್ಟದ ಜೀವನ, ಅಧಿಕ ಸಂಬಳ ಸಿಗುವ ಕೆಲಸವೇ ಬೇಕೆಂದು ಕೆಲವರು ತಮ್ಮ ತಾಯ್ನಾಡು ಬಿಟ್ಟು ಅಮೆರಿಕ, ಕೆನಾಡ, ಜಪಾನ್‌ ಇತ್ಯಾದಿ ಅಭಿವೃದ್ಧಿಶೀಲ ದೇಶಗಳಿಗೆ ಹೋಗ್ತಾರೆ. ಕೆಲವರು ತಮ್ಮ ತಾಯ್ನಾಡಿಗೆ ಬರುವುದೇ ಅಪರೂಪ. ಆದರೆ ಕೇರಳದ (Kerala) ಮಹಿಳೆಯೊಬ್ಬರು ದುಬೈನಿಂದ ಭಾರತಕ್ಕೆ ಮರಳಿದ್ದು, ತಮ್ಮ ನಿರ್ಧಾರದ ಹಿಂದಿನ ಹತ್ತು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದಲ್ಲದೇ, ಹೆಚ್ಚುತ್ತಿರುವ ವೆಚ್ಚಗಳು, ಶಾಲಾ ಶಿಕ್ಷಣ ಮತ್ತು ಸಾಲಮುಕ್ತ ಜೀವನವು ಭಾರತಕ್ಕೆ ಮರಳುವ ನಿರ್ಧಾರವನ್ನು ಹೇಗೆ ಪ್ರೇರೇಪಿಸಿತು ಎನ್ನುವುದನ್ನು ಅನಿವಾಸಿ ಭಾರತೀಯ ಮಹಿಳೆ (NRI woman) ತಿಳಿಸಿದ್ದಾರೆ.

ಇತ್ತೀಚೆಗೆ ದುಬೈನಿಂದ ಕೇರಳಕ್ಕೆ ತಮ್ಮ ಕುಟುಂಬದೊಂದಿಗೆ ಹಿಂತಿರುಗಿದ ಲೀನಾ ಸುಬಿನ್ (@unfilteredvoiceswithinme) ಹೆಸರಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ. ಇದು ಹಠಾತ್ ನಿರ್ಧಾರವಾಗಿರಲಿಲ್ಲ. ಇದು ಸಮಯ ಹಾಗೂ ಮಾನಸಿಕ ಶಾಂತಿಯ ಬಗ್ಗೆ ಯೋಚಿಸಿ ತೆಗೆದುಕೊಂಡ ನಿರ್ಧಾರ. ಯುಎಇಯಲ್ಲಿ ಮನೆ ಬಾಡಿಗೆ ನವೀಕರಣದೊಂದಿಗೆ ವೀಸಾ ನವೀಕರಣವು ಹೊಂದಿಕೆಯಾದಾಗ ಮಹತ್ವದ ತಿರುವು ಪಡೆದುಕೊಂಡಿತು. ಈ ವಿರಾಮವು ನಾವು ಎಲ್ಲವನ್ನೂ ಶಾಂತವಾಗಿ, ಪ್ರಾಯೋಗಿಕವಾಗಿ ಮತ್ತು ಪ್ರಾಮಾಣಿಕವಾಗಿ ನೋಡುವಂತೆ ಮಾಡಿತು ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಶಿಕ್ಷಣವು ಮತ್ತೊಂದು ಪ್ರಮುಖ ಅಂಶವಾಗಿತ್ತು. ಕೇರಳದಲ್ಲಿ ತಮ್ಮ ಮನೆಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಇಂಟರ್ನ್ಯಾಷನಲ್ ಶಾಲೆಯನ್ನು ಕಂಡುಕೊಂಡೆ. 10 ನಿಮಿಷಗಳ ಸುಲಭ ಪ್ರಯಾಣ ಹಾಗೂ ತರಗತಿಗಳು ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನನ್ನ ಮಗು ಈ ಹಿಂದೆ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟು ದುಬೈನಲ್ಲಿ ಪ್ರತಿದಿನ ಸುಮಾರು 90 ನಿಮಿಷ ಪ್ರಯಾಣಿಸಬೇಕಾಗಿತ್ತು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

ನನ್ನ ಕುಟುಂಬವು 2021 ರಲ್ಲಿ ಕೇರಳದಲ್ಲಿ ತಮ್ಮ ವಿಲ್ಲಾ ನಿರ್ಮಾಣವನ್ನು ಪೂರ್ಣಗೊಳಿಸಿತು. ಆದರೆ ಸ್ವತಂತ್ರ ಮನೆಯಲ್ಲಿ ವಾಸಿಸುವುದು ವಿದೇಶದಲ್ಲಿ ಕಾಣೆಯಾಗಿದೆ ಎಂದು ನಾನು ಅರಿತು ಕೊಂಡೆ. ಅದಲ್ಲದೇ, ನಾನು ಇಂದು ಸಾಲ ಕಟ್ಟಬೇಕಾಗಿಲ್ಲ, ಇಎಂಐ ಇಲ್ಲ. ಈ ಸಮಯದಲ್ಲಿ ಮಾನಸಿಕ ಸ್ವಾತಂತ್ರ್ಯವು ಹೆಚ್ಚು ಮುಖ್ಯವಾಗಿದೆ ಎಂದು ಅರ್ಥವಾಯ್ತು. ವಯಸ್ಸಾದ ಹೆತ್ತವರೊಂದಿಗೆ ಇರುವುದು ಮತ್ತೊಂದು ಪ್ರಮುಖ ಅಂಶವಾಗಿತ್ತು. ನನ್ನ ಹೆತ್ತವರು 70 ಮತ್ತು 80 ವಯಸ್ಸಿನವರಾಗಿರುವುದರಿಂದ ಅವರ, ಸಾಮೀಪ್ಯವು “ಜವಾಬ್ದಾರಿಗಿಂತ ಹೆಚ್ಚಾಗಿ ಸವಲತ್ತಿನಂತೆ ಭಾಸವಾಗುತ್ತದೆ ಎಂದಿದ್ದಾರೆ.

8 ವರ್ಷಗಳ ಹಿಂದೆ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಿದೆ. ಇದು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿತು. ನಾನು ಇಲ್ಲಿ ದೇಶಗಳನ್ನು ಹೋಲಿಸುತ್ತಿಲ್ಲ. ಬದಲಾಗಿ ಸುಸ್ಥಿರತೆಯ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲವೊಮ್ಮೆ, ಜೀವನವು ಎಲ್ಲಿ ಉತ್ತಮವಾಗಿ ಕಾಣುತ್ತದೆ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಆದರೆ ಅದು ನಿಜವಾಗಿಯೂ ಎಲ್ಲಿ ಸುಸ್ಥಿರವಾಗಿರುತ್ತದೆ ಎಂಬುದು ಮುಖ್ಯ ಎಂದು ವಿವರಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: ಫ್ರಾನ್ಸ್‌ಗಿಂತ ಭಾರತ ಉತ್ತಮ; ವಿದೇಶಿ ಮಹಿಳೆ ನೀಡಿದ ಕಾರಣ ನೋಡಿ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯ್ನಾಡಿನಲ್ಲಿ ಜೀವನ ನಡೆಸುವ ಖುಷಿ ಬೇರೆಲ್ಲೂ ಸಿಗಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪೋಷಕರು ನನ್ನ ಮೊದಲ ಆದ್ಯತೆ ಎನ್ನುವ ಮಾತು ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮುಂಬೈನಲ್ಲಿ ಭಾರತದ ಮೊದಲ ‘ಮ್ಯೂಸಿಕಲ್ ರೋಡ್’, ವಾಹನ ಹೋದ್ರೆ ‘ಜೈ ಹೋ‘ ಹಾಡು ಕೇಳ್ಸುತ್ತೆ – Kannada News | Mumbai Introduces India’s First Singing Road That Plays Jai Ho for Drivers

ಮುಂಬೈ, ಫೆಬ್ರವರಿ 12: ಮುಂಬೈನಲ್ಲಿ ಮೊದಲ ಮ್ಯೂಸಿಕಲ್ ರೋಡ್ ನಿರ್ಮಿಸಲಾಗಿದ್ದು, ಆ ರಸ್ತೆಯ ಮೇಲೆ ವಾಹನ ಹೋದರೆ ಜೈ ಹೋ ಹಾಡು ಕೇಳುತ್ತದೆ. ಈ ರಸ್ತೆಯನ್ನು ಮುಂಬೈ ಕರಾವಳಿ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ರಸ್ತೆಯನ್ನು ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ಉಪಸ್ಥಿತರಿದ್ದರು. ಈ ಕಲ್ಪನೆಯನ್ನು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದರು.

ವಾಹನಗಳು ನಿಗದಿತ ವೇಗದಲ್ಲಿ ಚಲಿಸುವಾಗ ಮಾತ್ರ ಈ ಹಾಡನ್ನು ಕೇಳಬಹುದು. ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರದ ಜೈ ಹೋ ಹಾಡನ್ನು ನೀವು ಕೇಳಬಹುದು. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ಬಿಎಂಸಿ ಈ ವಿಶೇಷ ರಸ್ತೆಯನ್ನು ನಿರ್ಮಿಸಿದೆ.ಈ ರಸ್ತೆಗೆ ಧೈರ್ಯಶಾಲಿ ಮತ್ತು ಸ್ವಾಭಿಮಾನಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರನ್ನು ಇಡಲಾಗಿದೆ. ಇದು ವಿಶ್ವದ ಐದನೇ ಮ್ಯೂಸಿಕಲ್ ರಸ್ತೆ ಮತ್ತು ಭಾರತದಲ್ಲಿ ಮೊದಲನೆಯದು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಹೇಳಿದೆ. ಇದು ವರ್ಲಿ ಸುರಂಗದಿಂದ ಹೊರ ಬಂದ ಬಳಿಕ ಸುಮಾರು 500 ಮೀಟರ್ ಮುಂದೆ, ಮೊದಲ ಲೇನ್‌ನಲ್ಲಿ ಸ್ಥಾಪಿಸಲಾಗಿದೆ.

ವಾಹನಗಳು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ, ಟೈರ್‌ಗಳು ಮತ್ತು ರಸ್ತೆಯ ನಡುವಿನ ಘರ್ಷಣೆಯು ಶಬ್ದ ತರಂಗಗಳನ್ನು ಸೃಷ್ಟಿಸುತ್ತದೆ ಎಂದು ಬಿಎಂಸಿ ವಿವರಿಸಿದೆ. ಈ ರಾಗವು ವಾಹನದ ಒಳಗೆ ಸ್ಪಷ್ಟವಾಗಿ ಕೇಳಿಸಬಲ್ಲದು.
ಚಾಲಕರಿಗೆ ಮುಂಚಿತವಾಗಿ ತಿಳಿಸಲು ಫಲಕಗಳನ್ನು ಅಳವಡಿಸಲಾಗಿದೆ ಎಂದು ನಿಗಮ ತಿಳಿಸಿದೆ. 500 ಮೀಟರ್, 100 ಮೀಟರ್ ಮತ್ತು 60 ಮೀಟರ್‌ಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಈ ಮ್ಯೂಸಿಕಲ್ ರೋಡ್ ಕಲ್ಪನೆ ಮೊದಲು 2007 ರಲ್ಲಿ ಜಪಾನ್‌ನಲ್ಲಿ ಶುರುವಾಗಿತ್ತು. ನಂತರ ಹಂಗೇರಿ, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಂತಹ ದೇಶಗಳಲ್ಲಿ ಇದೇ ರೀತಿಯ ರಸ್ತೆಗಳನ್ನು ನಿರ್ಮಿಸಲಾಯಿತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link