‘ದೊಡ್ಡಣ್ಣ ನಿಧನ’ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ – Kannada News | Doddanna Fights Fake News: Cyber Police Complaint Against Death Hoax Spreaders
ಸ್ಯಾಂಡಲ್ವುಡ್ನ ಹಿರಿಯ ನಟ ದೊಡ್ಡಣ್ಣ ಅವರು (Doddanna) ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳಿಗೆ ಈಗ ಸರಿಯಾಗಿಯೇ ಕಾನೂನಿನ ಬಿಸಿ ಮುಟ್ಟಿದೆ. ತಾವಿನ್ನೂ ಆರೋಗ್ಯವಾಗಿ ಬದುಕಿರುವಾಗಲೇ ‘ಸತ್ತಿದ್ದಾರೆ’ ಎಂದು ಸುಳ್ಳು ಪೋಸ್ಟ್ ಹಾಕಿ ವಿಕೃತ ಆನಂದ ಪಟ್ಟವರ ವಿರುದ್ಧ ಹಿರಿಯ ನಟ ದೊಡ್ಡಣ್ಣ ಅವರು ಖುದ್ದಾಗಿ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಟ ದೊಡ್ಡಣ್ಣ ಅವರ ಈ ದಿಟ್ಟ ಹೆಜ್ಜೆಯಿಂದಾಗಿ, ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು…