All posts by nagaraj11081993

ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ

ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ

ಶಿವಮೊಗ್ಗ, ಮಾರ್ಚ್​ 30: ಖಾಸಗಿ ಬಸ್​​​ ಒಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದ ಕಾಗೆಹಳ್ಳದಲ್ಲಿ ನಡೆದಿದೆ. ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ  ಗಾಯಾಳುಗಳಿಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಭದ್ರಾವತಿಗೆ ಬಸ್ ಹೊರಟ್ಟಿತ್ತು. ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಸಿಲೋ ಬಿಸಿಲು! ಮುಂದಿನ ಒಂದು ವಾರ ಕರ್ನಾಟಕದ ಹವಾಮಾನ ಹೇಗಿರಲಿದೆ? ಮಳೆಯಾಗುವ ಜಿಲ್ಲೆಗಳು ಯಾವುವು?

ಬೆಂಗಳೂರು. ಮಾ.30: ಮುಂದಿನ ಒಂದು ವಾರ ರಾಜ್ಯದಾದ್ಯಂತ ಮಿಶ್ರ ಹವಾಮಾನ ಇರಲಿದ್ದು, ಸುಡು ಬಿಸಿಲಿನ ನಡುವೆಯೇ ವರುಣನ ಸಿಂಚನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನದಲ್ಲಿ 2-3°C ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿರಲಿದೆ. ಬೆಂಗಳೂರಿನ ಮುಂದಿನ 7 ದಿನ ಬೇಸಿಗೆಯ ತಾಪ ಏರುತ್ತಿದ್ದು, ಬಿಸಿಲಿನ ಬೇಗೆಯ ನಡುವೆಯೇ ಅಲ್ಲಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಮಧ್ಯಾಹ್ನದ ನಂತರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಹವಾಮಾನದ ಸ್ಥಿತಿ ತೇವಾಂಶಭರಿತ ಉಷ್ಣಾಂಶ ಹಾಗೂ ಸೆಖೆ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರಲಿದೆ. ಹುಬ್ಬಳ್ಳಿ ಒಣ ಹವೆ ಇರಲಿದ್ದು, ಬಿಸಿಲು ತೀವ್ರವಾಗಲಿದ್ದು, ಮಧ್ಯಾಹ್ನದ ವೇಳೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಏಪ್ರಿಲ್ 2ರ ನಂತರ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ.

ವಲಯ ನಿರೀಕ್ಷಿತ ಹವಾಮಾನ ಜಿಲ್ಲೆಗಳು
ದಕ್ಷಿಣ ಒಳನಾಡು ಹಗುರ ಮಳೆ / ಗುಡುಗು ಬೆಂಗಳೂರು, ಮೈಸೂರು, ಕೊಡಗು, ಮಂಡ್ಯ, ಹಾಸನ
ಉತ್ತರ ಒಳನಾಡು ಅತಿಯಾದ ಬಿಸಿಲು / ಒಣ ಹವೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು
ಕರಾವಳಿ ಉಷ್ಣಾಂಶ ಮತ್ತು ತೇವಾಂಶ ಹೆಚ್ಚಳ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ
ಮಲೆನಾಡು ಸಾಧಾರಣ ಮಳೆ ಸಾಧ್ಯತೆ ಶಿವಮೊಗ್ಗ, ಚಿಕ್ಕಮಗಳೂರು

ಎಕ್ಸ್​ ಪೋಸ್ಟ್​​ ಇಲ್ಲಿದೆ ನೋಡಿ:

ಬೆಳಗಾವಿಯಲ್ಲಿ ಭಾಗಶಃ ಮೋಡ ಹಾಗೂ ಒಣ ಹವೆ ಇರಲಿದೆ. ಬೆಳಗಾವಿಯ ಕೆಲವು ಭಾಗಗಳಲ್ಲಿ ಏಪ್ರಿಲ್ 4ರ ಸುಮಾರಿಗೆ ಸಿಡಿಲು ಸಹಿತ ಮಳೆಯಾಗಬಹುದು. ಹಾಸನದಲ್ಲಿ ಹಗುರ ಮಳೆ ಬರುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕಲಬುರಗಿ ತೀವ್ರ ಬಿಸಿಲು ಹಾಗೂ ಜಿಲ್ಲೆಯಲ್ಲಿ ತಾಪಮಾನ 41 ಡಿಗ್ರಿ ದಾಟುವ ಸಾಧ್ಯತೆವಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೆಳಗಾವಿ ಭಾಗದಲ್ಲಿ ಗುಡುಗು ಕೇಳಿಸಿದಾಗ ವಿದ್ಯುತ್ ಉಪಕರಣಗಳಿಂದ ದೂರವಿರಿ ಮತ್ತು ಮರದ ಕೆಳಗೆ ಆಶ್ರಯ ಪಡೆಯಬೇಡಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಕಲಬುರಗಿ ಮತ್ತು ಹುಬ್ಬಳ್ಳಿ ಭಾಗದ ಜನರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಜಾಗ್ರತೆ ವಹಿಸಿ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ರೈತರು ಕಟಾವು ಮಾಡಿದ ಬೆಳೆಗಳನ್ನು ಮಳೆಯಿಂದ ರಕ್ಷಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು

ಶಿವಮೊಗ್ಗ, (ಮಾರ್ಚ್ 30): ಪ್ರೀತಿಸಿ (Love) ಕೇವಲ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ದುರಂತ ಸಾವು ಕಂಡಿದೆ. ಹೌದು… ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಲಾರಿಗೆ ಬೈಕ್​ ಡಿಕ್ಕಿಯಾಗಿದ್ದು, ಬೈಕ್ ನಲ್ಲಿ ಇದ್ದಂತಹ ದಂಪತಿಗಳಾದ ಬಾಬು (30) ಹಾಗೂ ಸಾವಿತ್ರಿ (26) ಸ್ಥಳದಲ್ಲಿ ಸಾವನಪ್ಪಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಆರು ತಿಂಗಳ ಹಿಂದೆ ಅಷ್ಟೇ ಸಪ್ತಪದಿ ತುಳಿದ್ದರು. ಆದ್ರೆ, ವಿಧಿ ಜೋಡಿಯನ್ನು ಬಾಳಲು ಬಿಟ್ಟಿಲ್ಲ. ಈ ಸಂಬಂಧ ಸಂಬಂಧಿಕ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ತುಳಸಿ ಗಿಡ ಒಣಗಿ ಹೋಗದಂತೆ ನೋಡಿಕೊಳ್ಳಲು ಈ ಸಿಂಪಲ್‌ ಸಲಹೆ ಪಾಲಿಸಿ

ಮನೆಗಳಲ್ಲಿ ಬಹುಮುಖ್ಯವಾಗಿ ಇರಲೇಬೇಕಾದ ಸಸ್ಯಗಳಲ್ಲಿ ತುಳಸಿ ಗಿಡವೂ ಒಂದು.  ಧಾರ್ಮಿಕ ಮಹತ್ವ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತುಳಸಿ ಗಿಡ ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಬೇಸಿಗೆಯ (summer) ವಿಪರೀತ ಶಾಖದ ಕಾರಣದಿಂದಾಗಿ ತುಳಸಿ ಗಿಡ ಬೇಗನೇ ಬಾಡಿ ಅಥವಾ ಒಣಗಿ ಹೋಗುವ ಕಾರಣ ಈ ಸಸ್ಯದ ಬಗ್ಗೆ ಬೇಸಿಗೆಯಲ್ಲಿ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಮನೆಯ ತುಳಸಿ ಗಿಡ ಕೂಡ ಈ ಉರಿ ಬಿಸಿಲಿಗೆ ಒಣಗಿ ಹೋಗ್ತಿದ್ಯಾ? ಹಾಗಿದ್ರೆ ಈ ಕೆಲವೊಂದು ತೋಟಗಾರಿಕೆ ಸಲಹೆಗಳನ್ನು ಪಾಲಿಸುವ ಮೂಲಕ ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ತುಳಸಿ ಗಿಡದ ಆರೈಕೆ ಹೇಗಿರಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ತುಳಸಿ ಗಿಡದ ಆರೈಕೆ ಹೀಗಿರಲಿ:

ಸಸ್ಯಕ್ಕೆ ಸರಿಯಾದ ರೀತಿಯಲ್ಲಿ ನೀರು ಹಾಕಿ: ಬೇಸಿಗೆಯಲ್ಲಿ, ಪ್ರತಿದಿನ ಸಸ್ಯಕ್ಕೆ ಸ್ವಲ್ಪ ನೀರು ಹಾಕುವುದು ಮುಖ್ಯ, ಬೆಳಿಗ್ಗೆ ಅಥವಾ ಸಂಜೆ ತುಳಸಿ ಗಿಡಕ್ಕೆ ನೀರು ಹಾಕುವುದು ಸಸ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಆ ಸಮಯದಲ್ಲಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ, ಇದು ಗಿಡ  ನೀರನ್ನು ಉತ್ತಮವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಒಂದೇ ಬಾರಿಗೆ ಅತಿಯಾಗಿ ನೀರು ಹಾಕುವುದನ್ನು ತಪ್ಪಿಸಿ. ಏಕೆಂದರೆ ಇದು ಬೇರುಗಳಿಗೆ ಹಾನಿ ಮಾಡುತ್ತದೆ.

ಸಾವಯವ ಗೊಬ್ಬರದ ಬಳಕೆ: ತುಳಸಿ ಎಲೆಗಳು ಹಚ್ಚ ಹಸಿರಾಗಿ ಇರಬೇಕು ಮತ್ತು ಒಣಗಬಾರದು ಎಂದು ನೀವು ಬಯಸಿದರೆ, ಕಾಲಕಾಲಕ್ಕೆ ಗಿಡದ ಬುಡಕ್ಕೆ ಸಾವಯವ ಗೊಬ್ಬರವನ್ನು ಸೇರಿಸುವುದು ಮುಖ್ಯ. ನೀವು ಹಸುವಿನ ಸಗಣಿ ಅಥವಾ ವರ್ಮಿಕಾಂಪೋಸ್ಟ್ ಹಾಕಬಹುದು. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ ಬೇಸಿಗೆಯಲ್ಲಿ, ಸಣ್ಣ ಕೀಟಗಳು ಹೆಚ್ಚಾಗಿ ತುಳಸಿ ಎಲೆಗಳಿಗೆ ಹಾನಿ ಮಾಡುತ್ತವೆ. ಇದನ್ನು ತಡೆಗಟ್ಟಲು, ಬೇವಿನ ನೀರು ಅಥವಾ ಬೇವಿನ ಎಣ್ಣೆಯನ್ನು ಲಘುವಾಗಿ ಸಿಂಪಡಿಸಿ.

ಸರಿಯಾದ ಪೋಷಣೆ ಅತ್ಯಗತ್ಯ: ತುಳಸಿ ಗಿಡವನ್ನು ಪೋಷಿಸಲು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಮಣ್ಣಿಗೆ ಅಕ್ಕಿ ನೀರು ಅಥವಾ ಮಜ್ಜಿಗೆಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಸಸ್ಯಕ್ಕೆ ನೈಸರ್ಗಿಕ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ. ಅಲ್ಲದೆ ಬಾಳೆಹಣ್ಣಿನ ಸಿಪ್ಪೆಯ ಪುಡಿಯನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಸಸ್ಯವು ಬಲಗೊಳ್ಳುತ್ತದೆ.

ಮಣ್ಣಿನ ಫಲವತ್ತತೆಯ ಬಗ್ಗೆ ಇರಲಿ ಗಮನ: ಬೇಸಿಗೆಯಲ್ಲಿ, ತುಳಸಿ ಗಿಡದ ಮಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಣ್ಣು ತುಂಬಾ ಗಟ್ಟಿಯಾಗಿದ್ದರೆ, ಅದು ಬೇರುಗಳಿಗೆ ಸರಿಯಾದ ಗಾಳಿ ಮತ್ತು ನೀರಿನ ಹರಿವನ್ನು ತಡೆಯುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಮಣ್ಣನ್ನು ಸ್ವಲ್ಪ ಸಡಿಲಗೊಳಿಸಿ. ಇದು ಗಾಳಿಯ ಪ್ರಸರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬೇರುಗಳನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಹಣ್ಣುಗಳನ್ನು ಪ್ರತಿನಿತ್ಯ ಸೇವನೆ ಮಾಡಿ

ಬೇಸಿಗೆಯಲ್ಲಿ ತುಳಸಿ ಒಣಗುವುದನ್ನು ತಡೆಯಲು ಇತರೆ ಸಲಹೆಗಳು:

  • ಬೇಸಿಗೆಯಲ್ಲಿ ತುಳಸಿ ಗಿಡವನ್ನು ಕಾಲಕಾಲಕ್ಕೆ ಕತ್ತರಿಸುತ್ತಿರಿ.
  • ತುಳಸಿ ಗಿಡವನ್ನು ಯಾವಾಗಲೂ ಬಲವಾದ ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇರಿಸಿ. ಅಂದರೆ ಬೇಸಿಗೆಯಲ್ಲಿ ತುಳಸಿ ಗಿಡವನ್ನು ನೆರಳಿನ ಪ್ರದೇಶದಲ್ಲಿ ಇಡಬೇಕು.
  • ಬೇಸಿಗೆಯಲ್ಲಿ ನಿಮ್ಮ ತುಳಸಿ ಗಿಡವನ್ನು ಮಣ್ಣಿನ ಮೇಲೆ ಒಣ ಎಲೆಗಳು ಅಥವಾ ತೆಂಗಿನ ಸಿಪ್ಪೆಗಳನ್ನು ಹರಡುವ ಮೂಲಕ ಹಸಿಗೊಬ್ಬರ ಮಾಡಬಹುದು.
  • ಪ್ರತಿ ಕೆಲವು ದಿನಗಳಿಗೊಮ್ಮೆ, ತುಳಸಿ ಗಿಡದಿಂದ ಹಳದಿ ಎಲೆಗಳನ್ನು ತೆಗೆದುಹಾಕುತ್ತಾ ಇರಿ, ಇದರಿಂದ ಹೊಸ ಎಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2027ಕ್ಕೆ ಭಾರತದ ಮೊದಲ ಪೂರ್ಣ ಡಿಜಿಟಲ್ ಸೆನ್ಸಸ್; 2026ರ ಏಪ್ರಿಲ್ 1ರಂದು ಮೊದಲ ಹಂತದ ಸೆನ್ಸಸ್ ಆರಂಭ

ನವದೆಹಲಿ, ಮಾರ್ಚ್ 30: ಹದಿನಾರು ವರ್ಷಗಳ ನಂತರ ಭಾರತದಲ್ಲಿ ಮೊದಲ ಬಾರಿಗೆ ಸೆನ್ಸಸ್ ನಡೆಯಲಿದೆ. 2027ರ ಸೆನ್ಸಸ್​ಗೆ ಏಪ್ರಿಲ್ 1ರಂದು ಚಾಲನೆ ಸಿಗಲಿದೆ. ಇದು ಭಾರತದ ಮೊದಲ ಪೂರ್ಣ ಡಿಜಿಟಲ್ ಸೆನ್ಸಸ್ (Census 2027) ಆಗಿರಲಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಇದು ವಿಶ್ವದಲ್ಲೇ ಅತಿದೊಡ್ಡ ಗಣತಿ ಕಾರ್ಯವಾಗಲಿದೆ.

ಭಾರತದಲ್ಲಿ ಇಲ್ಲಿಯವರೆಗೆ 15 ಸೆನ್ಸಸ್​ಗಳು ನಡೆದಿವೆ. ಸ್ವಾತಂತ್ರ್ಯದ ನಂತರ 7 ಸೆನ್ಸಸ್ ಆಗಿವೆ. ಕಳೆದ ಬಾರಿ ಸೆನ್ಸಸ್ ನಡೆದದ್ದು 2011ರಲ್ಲಿ. ಸಾಮಾನ್ಯವಾಗಿ ಪ್ರತೀ ದಶಕಕ್ಕೊಮ್ಮೆ ಈ ಕಾರ್ಯ ನಡೆಯುತ್ತದೆ. ಈ ಬಾರಿ ಸ್ವಲ್ಪ ವಿಳಂಬವಾಗಿದೆ. 2027ರಲ್ಲಿ ನಡೆಯಲಿರುವುದು 16ನೇ ಸೆನ್ಸಸ್ ಆಗಿರುತ್ತದೆ. ಪೂರ್ಣ ಡಿಜಿಟಲ್ ವೇದಿಕೆ ಬಳಸಿ ನಡೆಯುವ ಮೊದಲ ಜನಗಣತಿ ಇದು ಎನ್ನುವ ದಾಖಲೆ ಆಗಲಿದೆ.

ಎರಡು ಹಂತಗಳಲ್ಲಿ ಜನಗಣತಿ

ಈ ಬಾರಿಯ ಜನಗಣತಿ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಆಗಲಿದೆ. ಮನೆಗಳ ಸ್ಥಿತಿ, ಸೌಲಭ್ಯ, ಆಸ್ತಿಪಾಸ್ತಿ ಇತ್ಯಾದಿ ಮಾಹಿತಿ ಕಲೆಹಾಕಲಾಗುತ್ತದೆ. ಮೊದಲ ಹಂತದ ಸೆನ್ಸಸ್ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೂ ನಡೆಯುತ್ತದೆ.

ಇದನ್ನೂ ಓದಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ

ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇಲ್ಲಿ ಜನರ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ದತ್ತಾಂಶವನ್ನು ಕಲೆಹಾಕಲಾಗುತ್ತದೆ. ಜನರ ಜಾತಿ, ಉಪಜಾತಿ ಇತ್ಯಾದಿ ಮಾಹಿತಿಯನ್ನೂ ಪಡೆಯಲಾಗುತ್ತದೆ.

ಜನಗಣತಿ ಹೇಗೆ ನಡೆಯುತ್ತದೆ?

ಈ ಡಿಜಿಟಲ್ ಗಣತಿ ಕಾರ್ಯದಲ್ಲಿ 30 ಲಕ್ಷದಷ್ಟು ಗಣತಿದಾರರು, ಮೇಲುಸ್ತುವಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗಣತಿಗೆಂದೇ ಮೊಬೈಲ್ ಆ್ಯಪ್​ಗಳನ್ನು ಅಬಿವೃದ್ಧಿಪಡಿಸಲಾಗಿದೆ. ಗಣತಿದಾರರು ಈ ಆ್ಯಪ್​ಗಳಲ್ಲಿ ದತ್ತಾಂಶವನ್ನು ತುಂಬಲಿದ್ದಾರೆ. ಹಾಗೆಯೇ, ಜನರು ಸ್ವಯಂ ಆಗಿ ತಮ್ಮ ದತ್ತಾಂಶ ನೀಡಲು ಆನ್​ಲೈನ್ ಪೋರ್ಟಲ್​ವೊಂದು ಇದೆ. ಇದು 16 ಭಾಷೆಗಳಲ್ಲಿರುತ್ತದೆ.

ಜನರು ತಮ್ಮ ಹಾಗೂ ತಮ್ಮ ಕುಟುಂಬದವರ ವಿವರವನ್ನು ಆನ್​ಲೈನ್​ನಲ್ಲೇ ತುಂಬಬಹುದು. ಆಗ ಒಂದು ಗಣತಿ ಐಡಿ ಸಿಗುತ್ತದೆ. ಮನೆಗಳಿಗೆ ಗಣತಿದಾರರು ಬಂದಾಗ ಈ ಐಡಿಯನ್ನು ಪರಿಶೀಲಿಸಿ, ಮಾಹಿತಿ ದೃಢಪಡಿಸುತ್ತಾರೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಮೇ 15ರವರೆಗೂ

ಕರ್ನಾಟಕ, ಮಿಜೋರಾಮ್, ದೆಹಲಿ, ಗೋವಾ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ಏಪ್ರಿಲ್ 1ರಿಂದ 15ರವರೆಗೆ ಸ್ವ ಗಣತಿಗೆ ಕಾಲಾವಕಾಶ ಇರುತ್ತದೆ. ನಂತರ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗಳಿಗೆ ತೆರಳಿ ಸೆನ್ಸಸ್ ಕಾರ್ಯ ಮಾಡಲಿದ್ದಾರೆ. ಇತರ ಕೆಲ ರಾಜ್ಯಗಳಲ್ಲಿ ಏಪ್ರಿಲ್ 16ರಿಂದ ಆರಂಭವಾಗಿ ಮೇ 30ರವರೆಗೂ ಗಣತಿ ಕಾರ್ಯ ನಡೆಯಲಿದೆ.

ಸರ್ಕಾರ ಈ ಗಣತಿ ಯೋಜನೆಗೆ 11,718.24 ಕೋಟಿ ರೂ ಹಂಚಿಕೆ ಮಾಡಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ನಗರ, ಪಟ್ಟಣ, ಗ್ರಾಮಗಳಲ್ಲಿ ಸರ್ವೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಬೆಂಗಳೂರು, (ಮಾರ್ಚ್ 30): ಸ್ಮಾರ್ಟ್‌ ಟ್ರಾಫಿಕ್‌ ನಿರ್ವಹಣಾ ವ್ಯವಸ್ಥೆ ಜಾರಿಗೆ ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿ ಬಾಡಿ ಕ್ಯಾಮೆರಾ (body worn camera) ಬಳಸುವುದು ಕಡ್ಡಾಯವಾಗಿದೆ. ಆದ್ರೆ, ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲಿಸ್ ಠಾಣೆಯ (Bengaluru High Grounds Traffic Police Station) ಮೂವರು ಸಿಬ್ಬಂದಿ ಬಾಡಿ ಕ್ಯಾಮೆರಾ ಆಫ್ ಮಾಡಿಕೊಂಡು ವಿನಾ ಕಾರಣ ಬೈಕ್ ನಿಲ್ಲಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಸಂಬಂಧ ಇದೀಗ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಹೈ ಗ್ರೌಂಡ್ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಸುರೇಶ್ ,ಕಾನ್ಸ್ ಟೇಬಲ್ ಗಳಾದ ಪ್ರಶಾಂತ್ ಹಾಗೂ ಸಾದಿಕ್ ಅವರನ್ನ ಸಸ್ಪೆಂಡ್ ಮಾಡಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

ಹೈ ಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಲಂಚ ಪಡೆದ ಆರೋಪ, ಕರ್ತವ್ಯ ಲೋಪ , ಬಾಡಿ ವಾರ್ನ್ ಕ್ಯಾಮೆರಾ ಆಪ್ ಮಾಡಿ ಕೆಲಸ ನಿರ್ವಹಣೆ ಹಾಗೂ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ ಮಾಡಿದ್ದ ಆರೋಪ. ಹೀಗೆ ಹಲವು ಆರೋಪಗಳು ಕೇಳಿಬಂದಿದ್ದವು.

ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯು ಆಂತರಿಕ ತನಿಖೆ ನಡೆಸಿತ್ತು. ತನಿಖೆಯ ವೇಳೆ ಈ ಮೂವರು ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಮತ್ತು ಲಂಚ ಪಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ಮೂವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಇಂದು (ಮಾರ್ಚ್ 30) ಆದೇಶಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ: ಚಿನ್ನ, ಮುದ್ದು, ಬಂಗಾರಿ ಎಂದವನಿಂದಲೇ ಕೊಲೆ ಬೆದರಿಕೆ!

ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ

ಬಾಡಿ ಕ್ಯಾಮರಾ ಅಳವಡಿಸಿಕೊಳ್ಳುವುದರಿಂದ ಪೊಲೀಸ್‌ ಸಿಬ್ಬಂದಿ ಎಸಗುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಸಿಬ್ಬಂದಿ ಕಾರ್ಯವೈಖರಿಯನ್ನು ಸಂಬಂಧಪಟ್ಟ ಠಾಣೆಗಳಿಂದಲೇ ಗಮನಿಸಿ ಮೇಲ್ವಿಚಾರಣೆ ನಡೆಸಬಹುದು. ಇದಲ್ಲದೆ, ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರ ಮೇಲೆ ಹಲ್ಲೆ ನಡೆಸುವವರಿಗೂ ಭಯ ಹುಟ್ಟುವುದರ ಜತೆಗೆ, ಪೊಲೀಸರಿಗೂ ರಕ್ಷಣೆ ಸಿಕ್ಕಂತಾಗುತ್ತದೆ. ಆದ್ದರಿಂದ ಸರ್ಕಾರ ಬಾಡಿ ಕ್ಯಾಮೆರಾ ಖರೀದಿಸಿ ಪೊಲೀಸರಿಗೆ ನೀಡಿ ಕಡ್ಡಾಯವಾಗಿ ಧರಿಸುವಂತೆ ಆದೇಶಿಸಿದೆ.ಆದ್ರೆ, ಕೆಲವರು  ಬಾಡಿ ಕ್ಯಾಮೆರಾವನ್ನು ಆಫ್ ಮಾಡಿಕೊಂಡು ಕಳ್ಳಾಟದಲ್ಲಿ ತೊಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

3 ವರ್ಷಗಳಲ್ಲಿ 666 ಪೊಲೀಸರು ಸಸ್ಪೆಂಡ್

ಕರ್ತವ್ಯ ಲೋಪ, ನಿರ್ಲಕ್ಷ್ಯ, ದುರ್ನಡತೆ, ಸಂತ್ರಸ್ತರಿಂದ ಹಣ ಪಡೆದಿರುವುದು ಸೇರಿದಂತೆ ವಿವಿಧ ಅಪರಾಧವೆಸಗಿದ ಆರೋಪದಡಿ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 666 ಮಂದಿ ಪೊಲೀಸರು ಅಮಾನತುಗೊಂಡಿದ್ದಾರೆ. 2023ರಲ್ಲಿ 188, 2024ರಲ್ಲಿ 242 ಹಾಗೂ 2025ರಲ್ಲಿ 236 ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಬೆದರಿಕೆ, ಹಲ್ಲೆ, ಲಂಚ, ಆರೋಪಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ವಿರುದ್ಧ 88 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಮಾರ್ಚ್​​ 30: ಸಣ್ಣಪುಟ್ಟ ವೈವಾಹಿಕ ಜಗಳಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ (High Court) ಮಹತ್ವದ ತೀರ್ಪು ಪ್ರಕಟಿಸಿದೆ. ಆ ಮೂಲಕ 2018ರಲ್ಲಿ ಕೋರ್ಟ್​ ಮೇಟ್ಟಿಲೇರಿದ್ದ ಮೈಸೂರಿನ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧದ 498ಎ ಕೇಸ್​​ ಅನ್ನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಸೋಮವಾರ ಆದೇಶ ಹೊರಡಿಸಿದೆ.

ಅತ್ತೆ, ಮಾವ ಹಾಗೂ ನಾದಿನಿ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿ ವಿಚಾರಣೆಯನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ: ಋತುಚಕ್ರ ರಜೆ ಆದೇಶ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮಹಿಳೆಯರು

ಮದುವೆಗೆ ಮುಂಚೆ ವಧು, ವರರ ಮನೆಯವರ ನಡುವೆ ವರದಕ್ಷಿಣೆ ಅಥವಾ ಮದುವೆಯ ಖರ್ಚುಗಳ ಕುರಿತು ನಡೆದ ಮಾತುಕತೆಯನ್ನಷ್ಟೇ ಆಧಾರವನ್ನಾಗಿಟ್ಟುಕೊಂಡು ಮದುವೆಯ ನಂತರ ಅತ್ತೆ, ಮಾವ ಮತ್ತು ನಾದಿನಿ ಕ್ರೌರ್ಯ ಎಸಗಿದ್ದಾರೆ ಎಂಬ ಆರೋಪವನ್ನು ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಆರೋಪಗಳನ್ನು ಮಾನ್ಯಗೊಳಿಸಲು ಮದುವೆಯ ನಂತರ ನಡೆದ ನಿಜವಾದ ಕಿರುಕುಳ, ಹಣ ಅಥವಾ ಆಸ್ತಿ ಕುರಿತ ಬೇಡಿಕೆ, ಒತ್ತಡ ಅಥವಾ ಹಿಂಸೆ ಎಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯಗಳಿರಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ದೂರಿನಲ್ಲಿ, ಆರೋಪಪಟ್ಟಿಯಲ್ಲಿ ನಿಖರವಾದ ಸಾಕ್ಷ್ಯಗಳಿಲ್ಲ. ಸಾಮಾನ್ಯ ಜಗಳಗಳು, ದೂಷಣೆಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು. ವೈವಾಹಿಕ ವಿವಾದದಲ್ಲಿ ಅತ್ತೆ, ಮಾವ, ನಾದಿಯನ್ನು ಎಳೆಯಲಾಗಿದೆ. ಪ್ರಕರಣ ಮುಂದುವರಿಯಲು ಬಿಟ್ಟರೆ ಕಾನೂನಿನ ದುರುಪಯೋಗವಾಗಲಿದೆ ಎಂದಿರುವ ಪೀಠ ಈ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ

ಮೈಸೂರಿನ ಗೋಕುಲಂ ನಿವಾಸಿ ತೇಜಸ್​ನೊಂದಿಗೆ ವಿವಾಹ ಬೆಂಗಳೂರಿನ ವಧುವಿನೊಂದಿಗೆ 2018ರಲ್ಲಿ ಐಟಿಸಿ ಗಾರ್ಡೇನಿಯಾದಲ್ಲಿ ನಿಶ್ಚಿತಾರ್ಥ ಮತ್ತು ಲಲಿತಮಹಲ್​ನಲ್ಲಿ ಮದುವೆ ಮಾಡಲಾಗಿತ್ತು. ವಿವಾಹವಾದ 19 ದಿನಗಳಲ್ಲಿ ಉದ್ಯೋಗಿ ಪತಿ ಅಮೆರಿಕಕ್ಕೆ ಹಾರಿದ್ದ. ಪತಿಯಿಂದ ಮಾನಸಿಕ ಹಿಂಸೆ, ಅತ್ತೆ, ಮಾವ, ನಾದಿನಿಯಿಂದ ಕಿರುಕುಳ ಆರೋಪಿಸಿ ಪತ್ನಿ ಆರೇ ತಿಂಗಳಲ್ಲಿ ಪತಿ ಮನೆ ತೊರೆದಿದ್ದರು. ಬಳಿಕ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿರುಗಾಳಿಗೆ ಮಂಟಪವನ್ನೇ ಹಾರದಂತೆ ತಡೆದವನು, ಇನ್ನು ಪತ್ನಿ ಕೈ ಬಿಡುವನೇ!

ಅಂದು ರಾತ್ರಿ ಹೊತ್ತು, ಎಲ್ಲರೂ ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದರು. ಮದುವೆಯ ವಿಧಿ ವಿಧಾನಗಳು ಒಂದೊಂದಾಗಿ ನಡೆಯುತ್ತಿತ್ತು. ಸಣ್ಣದಾಗಿ ಆರಂಭವಾದ ಗಾಳಿ ಒಂದೇ ಬಾರಿಗೆ ರೌದ್ರ ರೂಪ ತಾಳಿತ್ತು. ವರ ಮಂಟಪದಲ್ಲಿರುವಾಗಲೇ ಗಾಳಿ ಮಂಟಪವನ್ನೂ ಎಳೆದುಕೊಂಡು ಹೋಗುವಷ್ಟು ರಭಸವಾಗಿತ್ತು. ಆಗ ಒಂದೆಡೆ ಸಂಬಂಧಿಕರು ಇನ್ನೊಂದೆಡೆ ತಾನು ಮಂಟಪದ ಕಂಬಗಳನ್ನು ಕಟ್ಟಿಯಾಗಿ ಹಿಡಿದುಕೊಂಡು ಗಾಳಿಯಲ್ಲಿ ಹಾರದಂತೆ ತಡೆದಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಜನ ಮಂಟಪವನ್ನೇ ಹಾರಲು ಬಿಡದವನು ಪತ್ನಿ ಕೈ ಬಿಡುವುದುಂಟೇ ಎಂದಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ರಾಯಚೂರು, ಮಾರ್ಚ್​ 30: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ಅನುಮಾನಾಸ್ಪದವಾಗಿ ತಾಯಿ ಹೆಣವಾಗಿ (death) ಪತ್ತೆಯಾದ ಘಟನೆ ನಗರದ ಐಬಿ ಕಾಲೋನಿಯಲ್ಲಿ ನಡೆದಿದೆ. ವಿದ್ಯಾ (30) ಮೃತ ತಾಯಿ. ಗಂಡ ಮಂಜುನಾಥ್, ಅತ್ತೆ ಕವಿತಾ ನೇಣುಬಿಗಿದು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಡಿವೈಎಸ್​ಪಿ ಶಾಂತವೀರ್ ನೇತೃತ್ವದಲ್ಲಿ ತನಿಖೆ ನಡೆದಿದೆ.

ನಡೆದಿದ್ದೇನು?

ಕಳೆದ ಎರದು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್​ ವಿವಾಹವಾಗಿದೆ. ದಂಪತಿಗೆ 11 ತಿಂಗಳ ಮಗು ಕೂಡ ಇದೆ. ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕಾರ್ಯನಿರ್ವಹಿಸುತ್ತಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು. 30 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನ ವಿದ್ಯಾ ಕುಟುಂಬ ವರದಕ್ಷಿಣೆಯಾಗಿ ನೀಡಿದ್ದರು.

ಇದನ್ನೂ ಓದಿ: ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಶಿಕ್ಷಕ ಕಮ್ ಸ್ವಾಮೀಜಿ ಆತ್ಮಹತ್ಯೆ, ಕಾರಣ ನಿಗೂಢ

ನಿನ್ನೆ ಸಂಜೆ ಪತಿ ಮಂಜುನಾಥ್ ಕಂಠಪೂರ್ತಿ ಕುಡಿದು ಬಂದು ವಿದ್ಯಾಳನ್ನ ಕೆಲಸದಿಂದ ಕರೆತಂದಿದ್ದ. ಆ ಬಳಿಕ ಮನೆಯಲ್ಲಿ 11 ತಿಂಗಳ ಹಸುಗೂಸಿಗೆ ಹಾಲುಣಿಸಿದ ವಿದ್ಯಾ, ಇದೇ ವೇಳೆ ಗಂಡನ ಕುಡಿತದ ಬಗ್ಗೆ ಅತ್ತೆಗೆ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಕೆಲಹೊತ್ತಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾ ಮೃತದೇಹ ಪತ್ತೆ ಆಗಿದೆ. ಗಂಡ ಮತ್ತು ಅತ್ತೆಯೇ ನೇಣುಬಿಗಿದು ಕೊಲೆಗೈದಿರುವುದಾಗಿ ಆರೋಪ ಕೇಳಿಬಂದಿದೆ. ಸದ್ಯ ಮಂಜುನಾಥ್ ಮತ್ತು ಕವಿತಾ ವಿರುದ್ಧ ದೂರು ದಾಖಲಾಗಿದೆ.

ಖಾಸಗಿ ಆಸ್ಪತ್ರೆ ಮೇಲಿಂದ ಬಿದ್ದು ಬಾಣಂತಿ ಸಾವು

ಖಾಸಗಿ ಆಸ್ಪತ್ರೆಯ 3ನೇ ಮಹಡಿ ಮೇಲಿಂದ ಬಿದ್ದು ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಇದೇ ಮಾರ್ಚ್ 26ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬಿದ್ದು ಐದು ದಿನದ ಬಾಣಂತಿ ವಾಸವಿ (22) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮೂರು ಭೀಕರ ರಸ್ತೆ ಅಪಘಾತ: ಆರು ಬಂದಿ ಸಾವು

ಬಾಣಂತಿ ವಾಸವಿ ಐದು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅನಾರೋಗ್ಯಕ್ಕೆ ಒಳಗಾದ ಮಗುವಿಗೆ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಣಂತಿ ಸಾವಿಗೂ ಮುನ್ನ ಮಹಡಿ ಹತ್ತುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ

ಬೆಂಗಳೂರು, ಮಾರ್ಚ್​​ 30: ನಗರದ ಹೋಟೆಲ್‌ಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆಯು ತೀವ್ರ ಆತಂಕ ಸೃಷ್ಟಿಸಿದೆ. ಈ ನಡುವೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಗುಡ್​​ ನ್ಯೂಸ್​​ ನೀಡಿದ್ದು, ನಾಳೆ ನಗರದ ಹೋಟೆಲ್‌ಗಳಿಗೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಆದೇಶದ ಅನ್ವಯ, ಇಂದು ವಿತರಕರಿಗೆ ಸಿಲಿಂಡರ್‌ಗಳು ತಲುಪಲಿದ್ದು, ನಾಳೆಯಿಂದ ಹೋಟೆಲ್ ಮಾಲೀಕರಿಗೆ ವಿತರಣೆ ಆರಂಭವಾಗಲಿದೆ. ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಹೋಟೆಲ್ ಮಾಲೀಕರ ಆತಂಕ ನಾಳೆಯಿಂದ ಬಗೆಹರಿಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ದೇಶೀಯ ಸಿಲಿಂಡರ್‌ಗಳ ವಿತರಣೆಯಲ್ಲೂ ವಿಳಂಬವಾಗುತ್ತಿದ್ದು, ಗ್ರಾಹಕರು ವಿನಾಕಾರಣ ಡಿಸ್ಟ್ರಿಬ್ಯೂಟರ್‌ಗಳ ಕಚೇರಿಗೆ ಹೋಗಬಾರದು. 25 ದಿನಗಳ ನಂತರ ಬುಕ್ ಮಾಡಿದರೆ ಸಿಲಿಂಡರ್ ಲಭ್ಯವಾಗುತ್ತದೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಇದು 45 ದಿನಗಳಿಗೆ ಅನ್ವಯಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link