ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ: ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು – Kannada News | Mother Emotional for Her Daughter Escaped With Muslim Man at mangaluru
ಮಂಗಳೂರು, (ಫೆಬ್ರವರಿ 11): ಅನ್ಯಕೋಮಿನ ಯುವಕನೊಂದಿಗೆ ಹಿಂದೂ (Hindu) ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ (Mangaluru) ಸುರತ್ಕಲ್ನಲ್ಲಿ ನಡೆದಿದೆ. ಸುರತ್ಕಲ್ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟರ್ ಮ್ಯಾರೇಜ್ ಆಗಿರುವ ಮಾಹಿತಿ ತಿಳಿದುಬಂದಿದೆ. ಆದ್ರೆ, ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ವೈಶಾಲಿ ತಂದೆ ವಿದೇಶದಿಂದ ದೌಡಾಯಿಸಿದ್ದು, ಮಗಳಿಗಾಗಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ವೈಶಾಲಿ ತಾಯಿಯೂ ಸಹ…