All posts by nagaraj11081993

ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ

ಕುರಿ ಪ್ರತಾಪ್ ಅವರು ‘ಜೋಡಿ ನಂಬರ್ 1’ ಶೋನಲ್ಲಿ ನಿರೂಪಕರಾಗಿದ್ದಾರೆ. ವೇದಿಕೆ ಮೇಲೆ ಅವರ ಮಗನಿಗೆ ಹೆಣ್ಣು ನೋಡುವ ಶಾಸ್ತ್ರ ನಡೆದಿದೆ. ಹುಡುಗಿ ರೂಪದಲ್ಲಿ ಬಂದಿದ್ದು ಮಿಮಿಕ್ರಿ ಗೋಪಿ ಅವರು.  ಫನ್ ರೂಪದಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ಸಖತ್ ಫನ್ ರೂಪದಲ್ಲಿ ಈ ವಿಡಿಯೋ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಒಪೆಕ್ ಒಕ್ಕೂಟಕ್ಕೆ ಯುಎಇ ಗುಡ್‌ಬೈ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗುತ್ತಾ? – Kannada News | UAE Quits OPEC: Strategic Exit to Boost Oil Production; Big Win for India’s Energy Needs

ನವದೆಹಲಿ, ಮೇ 1: ಜಾಗತಿಕ ಇಂಧನ ಮಾರುಕಟ್ಟೆ ದೃಷ್ಟಿಯಲ್ಲಿ ಇಂದು (ಮೇ 1, 2026) ಒಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಕಳೆದ 60 ವರ್ಷಗಳಿಂದ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟದ (OPEC) ಪ್ರಬಲ ಸದಸ್ಯನಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಈ ಒಕ್ಕೂಟದಿಂದ ಇಂದಿನಿಂದ ಅಧಿಕೃತವಾಗಿ ಹೊರಬಂದಿದೆ. ಯುಎಇ ಕೈಗೊಂಡಿರುವ ಈ ನಿರ್ಧಾರವು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ದೀರ್ಘಕಾಲದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಪೆಕ್ (OPEC) ಎಂದರೇನು?

ಒಪೆಕ್ ಎಂದರೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟ. 1960ರಲ್ಲಿ ಇರಾಕ್‌ನ ಬಾಗ್ದಾದ್‌ನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಜಗತ್ತಿನ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇ 38ಕ್ಕಿಂತ ಹೆಚ್ಚಿನ ಪಾಲನ್ನು ನಿಯಂತ್ರಿಸುತ್ತದೆ. ಇದರ ಪ್ರಧಾನ ಕಚೇರಿ ಆಸ್ಟ್ರಿಯಾದ ವಿಯೆನ್ನಾದಲ್ಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳುವುದು ಮತ್ತು ಸದಸ್ಯ ರಾಷ್ಟ್ರಗಳ ಹಿತಾಸಕ್ತಿ ಕಾಯುವುದು ಇದರ ಮುಖ್ಯ ಉದ್ದೇಶ.

ಯುಎಇ ಒಪೆಕ್​ನಿಂದ ಹೊರಬರಲು ಕಾರಣವೇನು?

ತನ್ನ ತೈಲ ಉತ್ಪಾದನಾ ನೀತಿಯಲ್ಲಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸ್ವಂತ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯುಎಇ ಈ ಕ್ರಮ ಕೈಗೊಂಡಿದೆ. ಒಪೆಕ್ ವಿಧಿಸಿರುವ ಉತ್ಪಾದನಾ ಮಿತಿಗಳು ತನ್ನ ದೇಶದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂಬುದು ಯುಎಇ ಅಭಿಪ್ರಾಯ. ಇದರೊಂದಿಗೆ ಪ್ರಾದೇಶಿಕ ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಇರಾನ್ ಕುರಿತಾದ ನಿಲುವುಗಳು ಕೂಡ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಯುಎಇ ಒಪೆಕ್​ನಿಂದ ಹೊರಬಂದರೆ ಭಾರತಕ್ಕೇನು ಲಾಭ?

ಯುಎಇ ಒಪೆಕ್‌ನಿಂದ ಹೊರಬಂದಿರುವುದು ಭಾರತಕ್ಕೆ ಹಲವು ವಿಧಗಳಲ್ಲಿ ಅನುಕೂಲಕರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

  • ರಿಯಾಯಿತಿ ದರದಲ್ಲಿ ತೈಲ: ಒಪೆಕ್‌ನ ನಿಯಂತ್ರಣವಿಲ್ಲದ ಕಾರಣ ಯುಎಇ ಹೆಚ್ಚಿನ ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡಬಹುದು ಮತ್ತು ತಾನೇ ಬೆಲೆ ನಿರ್ಧರಿಸಬಹುದು. ಮತ್ತೊಂದೆಡೆ, ಯುಎಇ ಹಾಗೂ ಭಾರತದ ನಡುವೆ ಕಳೆದ ಹಲವು ವರ್ಷಗಳಿಂದಲೂ ಅತ್ಯುತ್ತಮ ಬಾಂಧವ್ಯವಿದೆ. ಉತ್ಪಾದನೆ ಹೆಚ್ಚಳ ಮತ್ತು ತಾನೇ ಬೆಲೆ ನಿರ್ಧರಿಸಬಹುದಾದ್ದರಿಂದ ಭಾರತಕ್ಕೆ ರಿಯಾಯಿತಿ ದರದಲ್ಲಿ ಯುಎಇ ಕಚ್ಚಾತೈಲ ಪೂರೈಕೆ ಮಾಡುವ ಸಾಧ್ಯತೆ ಹೆಚ್ಚಿದೆ.
  • ಪೂರೈಕೆಯಲ್ಲಿ ಸ್ಥಿರತೆ: ಯುಎಇ ಪುಜೈರಾ ಬಂದರಿನವರೆಗೆ ಪೈಪ್‌ಲೈನ್ ಹೊಂದಿರುವುದರಿಂದ, ಹೊರ್ಮುಜ್ ಜಲಸಂಧಿಯ ಯಾವುದೇ ಬಿಕ್ಕಟ್ಟುಗಳಿಲ್ಲದೆ ಭಾರತಕ್ಕೆ ಸರಾಗವಾಗಿ ತೈಲ ಪೂರೈಕೆಯಾಗಲಿದೆ.
  • ಪೆಟ್ರೋಲ್, ಡೀಸೆಲ್ ದರ ಇಳಿಕೆ ನಿರೀಕ್ಷೆ: ಭಾರತ ತನ್ನ ತೈಲ ಅಗತ್ಯದ ಶೇ 45ರಷ್ಟು ಭಾಗವನ್ನು ಒಪೆಕ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುಎಇ ಉತ್ಪಾದನೆ ಹೆಚ್ಚಿಸಿದರೆ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಇರಾನ್ ಯುದ್ಧದ ನಡುವೆ ತೈಲ ರಫ್ತು ಸಂಘಟನೆಯಾದ OPECನಿಂದ ಹೊರಬಂದ ಯುಎಇ

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ? – Kannada News | Massive hike in Commercial Gas Cylinder Price: Hotels and Consumers Face Steep Challenges

ಬೆಂಗಳೂರು, ಮೇ 01: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 993 ರೂಪಾಯಿಗಳಷ್ಟು ಭಾರಿ ಏರಿಕೆ (LPG Gas cylinder Hike) ಕಂಡಿದ್ದು, ಹೋಟೆಲ್ ಮಾಲೀಕರಿಗೆ ಮತ್ತು ಜನಸಾಮಾನ್ಯರಿಗೆ ಮತ್ತೊಂದು ಆಘಾತ ನೀಡಿದೆ. ಈ ಏರಿಕೆಯು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಊಟ, ತಿಂಡಿ ಮತ್ತು ಪಾನೀಯಗಳ ಬೆಲೆಗಳು ಹೆಚ್ಚಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಗ್ಯಾಸ್ ಅಭಾವದಿಂದ ಈಗಾಗಲೇ ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಿದೆ. ಇದೀಗ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ಕಾಫಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಕಾಫಿ ಕುಡಿಯಲೂ ಜನ 10 ಬಾರಿ ಯೋಚಿಸುವಂತಾಗಬಹುದು.ಅಂತಿಮವಾಗಿ ಇದರ ಹೊರೆ ಗ್ರಾಹಕರ ಮೇಲೆ ಬೀಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಲವು ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ: ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್​​ – Kannada News | Child Commission Member Arrested for Blackmailing and Physical Assault of Women

ಮಹಿಳೆಯರ ಜೊತೆ ಆರೋಪಿ ಚಂದ್ರೇಗೌಡImage Credit source: Tv9 Kannada

ಬೆಂಗಳೂರು, ಮೇ 1: ಹಲವು ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನನ್ನು ಬೆಂಗಳೂರಿನ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಚಂದ್ರೇಗೌಡ ಬಂಧಿತನಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ಈತ ವಿಡಿಯೋಮಾಡಿಟ್ಟುಕೊಳ್ಳುತ್ತಿದ್ದ. ಫೋಟೋ, ವಿಡಿಯೋ ಇಟ್ಟುಕೊಂಡು ಪೀಡಿಸುತ್ತಿದ್ದ. ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಬಿಂಬಿಸಿ, ನಕಲಿ ಐಡಿ ಮಾಡಿಕೊಂಡು ಹಲವರಿಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.

20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಪತ್ತೆ

ಇನ್ನು ಆರೋಪಿ ಮೊಬೈಲ್​​ ಪರಿಶೀಲಿಸಿದಾಗ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಪತ್ತೆಯಾಗಿವೆ. ಗಂಡನಿಂದ ದೂರವಾಗಿದ್ದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಗೆ ನಾನು ಲೆಕ್ಚರ್ ಎಂದು ಪರಿಚಯ ಮಾಡಿಕೊಂಡಿದ್ದ. ನನಗೆ ಡಿವೋರ್ಸ್ ಆಗಿದ್ದು, ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ. ಖಾಸಗಿ ಕ್ಷಣವನ್ನು ವಿಡಿಯೋ ಮಾಡಿಕೊಂಡಿದ್ದ ಚಂದ್ರೇಗೌಡ ಅದನ್ನು ಇಟ್ಟುಕೊಂಡು ಮಹಿಳೆಗೆ ಹೆದರಿಸಿ ಆಕೆಯಿಂದ 5 ಲಕ್ಷ ಹಣ ಪಡೆದಿದ್ದ ಎಂದು ದೂರಲಾಗಿದೆ. ಸಂತ್ರಸ್ತ ಮಹಿಳೆ ಒಮ್ಮೆ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದ್ದ ವೇಳೇ ಆಕೆಗೆ ಶಾಕ್​​ ಆಗಿದ್ದು, ಮೊಬೈಲ್​​ನಲ್ಲಿ ಹಲವು ಮಹಿಳೆಯರ ವಿಡಿಯೋ, ಚಾಟಿಂಗ್ ಪತ್ತೆಯಾಗಿತ್ತು. ಹೀಗಾಗಿ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪೂಜಾ ದತ್ತಾ ಬೆತ್ತಲೆ ಶವ ಪತ್ತೆ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸಿಕ್ತು ಹಲವು ಆಘಾತಕಾರಿ ಮಾಹಿತಿ!

ಮದುವೆ ಡ್ರಾಮಾ

ಇನ್ನು ದೂರುದಾರ ಮಹಿಳೆಯನ್ನು ಮದುವೆಯಾಗಿ ನಂಬಿಸಿದ್ದ ಆರೋಪಿ ವಿವಾಹವಾಗಿದ್ದೇನೆ ಎಂದು ನಂಬಿಸಲು ಆಕೆಯ ಕೊರಳಿಗೆ ಅರಿಶಿನದ ಕೊಂಬನ್ನೂ ಕಟ್ಟಿದ್ದ. ಸಂತ್ರಸ್ತೆಯ ಆಧಾರ್​​ ಕಾರ್ಡ್​​ ಕೂಡ ಪಡೆದಿದ್ದ ಈತ ತಾನು ಆಕೆಯ ಗಂಡನೆಂದು ಬಿಂಬಿಸಿ ಮಾಡಿಗೆ ಮನೆಯೊಂದಕ್ಕೆ ಕರಾರು ಪತ್ರವನ್ನೂ ಮಾಡಿಸಿದ್ದ. ತನ್ನ ತಾಯಿಯನ್ನೂ ಸಂತ್ರಸ್ತೆಯ ಮನೆಯಲ್ಲೇ ಆತ ಬಿಟ್ಟಿದ್ದು, ವರ್ಷಾನುಗಟ್ಟಲೆ ಆಕೆಯ ಆರೈಕೆಯನ್ನು ದೂರುದಾರ ಮಹಿಳೆ ಮಾಡಿದ್ದಾಳೆ ಎನ್ನಲಾಗಿದೆ. ಸಾಲದ್ದಕ್ಕೆ ಸಂತ್ರಸ್ತೆಯ ಮಗಳ ವ್ಯಾಸಂಗ ಸಂಬಂಧಿತ ದಾಖಲಾತಿಗಳನ್ನೂ ಬದಲಾಯಿಸಿ, ತಾನೇ ಮಹಿಳೆಯ ಗಂಡ ಎಂದು ಬಿಂಬಿಸಲು ಹೊರಟಿದ್ದ ಎಂದು ಆರೋಪಿಸಲಾಗಿದೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದ ಈ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯ ಬಂಪರ್ ಕೊಡುಗೆ: 4 ವಿಶೇಷ ರೈಲುಗಳು ‘ಖಾಯಂ’! ದರದಲ್ಲೂ ಇಳಿಕೆ – Kannada News | Kalyana Karnataka Rail Boost: 4 Special Trains Regularized, Cuts Fares and Boosts Connectivity

ಬೆಂಗಳೂರು, ಮೇ.1: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಂಡಳಿಯು ಭರ್ಜರಿ ಸಿಹಿಸುದ್ದಿ ನೀಡಿದೆ. ಈವರೆಗೆ ತಾತ್ಕಾಲಿಕವಾಗಿ ‘ವಿಶೇಷ ರೈಲು’ಗಳಾಗಿ ಸಂಚರಿಸುತ್ತಿದ್ದ ನಾಲ್ಕು ಪ್ರಮುಖ ರೈಲುಗಳನ್ನು ಈಗ ಕಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಟಿಕೆಟ್ ದರ ಇಳಿಕೆಯಾಗುವುದರ ಜೊತೆಗೆ ಸಂಚಾರದ ವಿಶ್ವಾಸಾರ್ಹತೆ ಹೆಚ್ಚಾದಂತಾಗಿದೆ.

ಖಾಯಂಗೊಂಡ ರೈಲುಗಳ ವಿವರ:

ಸೊಲ್ಲಾಪುರ – ಕಲಬುರಗಿ ಡೆಮು (71435/71436): ಪ್ರತಿದಿನ ಸಂಚರಿಸುವ ಈ ರೈಲು ಗಾಣಗಾಪುರ ದತ್ತಾತ್ರೇಯ ಭಕ್ತರಿಗೆ ಮತ್ತು ದೈನಂದಿನ ಪ್ರಯಾಣಿಕರಿಗೆ ವರದಾನವಾಗಲಿದೆ.

ದೌಂಡ್ – ಕಲಬುರಗಿ ಫಾಸ್ಟ್ ಪ್ಯಾಸೆಂಜರ್: ವಾರದ ಐದು ದಿನ (51301/51302) ಹಾಗೂ ವಾರಕ್ಕೆ ಎರಡು ದಿನ (51303/51304) ಸಂಚರಿಸುವ ರೈಲುಗಳನ್ನು ನಿಯಮಿತಗೊಳಿಸಲಾಗಿದೆ.

ಸೊಲ್ಲಾಪುರ – ಮುಂಬೈ (ಲೋಕಮಾನ್ಯ ತಿಲಕ್) ಎಕ್ಸ್‌ಪ್ರೆಸ್ (11303/11304): ಕಲಬುರಗಿ, ಹುಮ್ನಾಬಾದ್, ಬೀದರ್ ಮತ್ತು ಭಾಲ್ಕಿ ಮೂಲಕ ಸಂಚರಿಸುವ ಈ ರೈಲು ಕಲ್ಯಾಣ ಕರ್ನಾಟಕದಿಂದ ಮುಂಬೈಗೆ ನೇರ ಸಂಪರ್ಕ ಕಲ್ಪಿಸಲಿದೆ.

ಸೊಲ್ಲಾಪುರ – ಅನಕಾಪಲ್ಲಿ ಎಕ್ಸ್‌ಪ್ರೆಸ್ (11313/11314): ವಾಡಿ, ಯಾದಗಿರಿ ಮತ್ತು ರಾಯಚೂರು ಮೂಲಕ ಸಾಗುವ ಈ ರೈಲು ಆಂಧ್ರಪ್ರದೇಶದ ವಿಜಯವಾಡ ಮತ್ತು ಕರಾವಳಿ ಭಾಗಕ್ಕೆ ತೆರಳಲು ಸಹಕಾರಿಯಾಗಿದೆ.

ಇದನ್ನೂ ಓದಿ: ಮಳೆ ಮಧ್ಯೆ ಜೆಪಿ ನಗರ ಟು ಕೋರಮಂಗಲ ಜರ್ನಿ: ಆಟೋ ಚಾಲಕನ ಈ ಒಂದು ಮಾತು ಪ್ರಿಯಾಂಕಾ ಕಣ್ಣಾಲಿ ಒದ್ದೆ ಮಾಡಿದ್ದು ಯಾಕೆ ಗೊತ್ತಾ?

ಪ್ರಯಾಣಿಕರಿಗಾಗುವ ಲಾಭಗಳೇನು?

ಟಿಕೆಟ್ ದರ ಇಳಿಕೆ: ‘ವಿಶೇಷ ರೈಲು’ ಎಂಬ ಹಣೆಪಟ್ಟಿ ದೂರವಾಗುವುದರಿಂದ ಹೆಚ್ಚುವರಿ ಶುಲ್ಕ ರದ್ದಾಗಿ ಸಾಮಾನ್ಯ ದರ ಅನ್ವಯವಾಗಲಿದೆ.

ಸ್ಥಿರ ಸಂಚಾರ: ರೈಲುಗಳು ರದ್ದಾಗುವ ಆತಂಕವಿಲ್ಲದೆ ಸಾರ್ವಜನಿಕರು ಮುಂಗಡ ಟಿಕೆಟ್ ಕಾಯ್ದಿರಿಸಬಹುದು.

ಅಂತರರಾಜ್ಯ ಸಂಪರ್ಕ: ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ತೆರಳುವ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಷಾ ಕಾರಲ್ಲಿ ಕ್ರಾಸ್ ಚಿಹ್ನೆ; ಇದರ ಅಸಲಿಯತ್ತೇನು? – Kannada News | Thalapathy Vijay Trisha: Car Cross Fuels Conversion and Marriage Rumors

ತಮಿಳು ನಟ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹದ ವಿಷಯ ಆಗಾಗ ಚರ್ಚೆ ಆಗುಇತ್ತಲೇ ಇರುತ್ತದೆ. ಕಳೆದ ಹಲವು ತಿಂಗಳುಗಳಿಂದ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೇ ಸಂದರ್ಭದಲ್ಲಿ ವಿಜಯ್ ಪತ್ನಿ ಸಂಗೀತಾ, ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿತು. ಈಗ ನಟಿ ತ್ರಿಷಾ ಅವರ ಕಾರಿನಲ್ಲಿ ಕಾಣಿಸಿಕೊಂಡ ಒಂದು ಕ್ರಾಸ್ ಚಿಹ್ನೆ ಚರ್ಚೆಗೆ ಕಾರಣ ಆಗಿದೆ. ಇದು ಚರ್ಚೆ ಮಾಡುವ ವಿಷಯವೇ ಅಲ್ಲ ಎಂದು ಅನೇಕರು ಹೇಳಿದ್ದಾರೆ.

ಇತ್ತೀಚೆಗೆ ತಮಿಳುನಾಡು ಚುನಾವಣೆ ನಡೆದಿದೆ. ಮತದಾನ ಮಾಡಿದ ತ್ರಿಷಾ ಅವರು, ಜನರ ಬಳಿಯೂ ಮತ ಹಾಕುವಂತೆ ಕೋರಿದರು. ಇದಕ್ಕಾಗಿ ಅವರು ತಮ್ಮ ಕಾರಿನಲ್ಲಿ ಕುಳಿತು, ಇಂಕ್ ಹಾಕಿರುವ ಬೆರಳನ್ನು ತೋರಿಸುತ್ತಿದ್ದರು. ಈ ಫೋಟೋದಲ್ಲಿ ತ್ರಿಷಾ ಅವರ ಕಾರಿನ ಮುಂಭಾಗದಲ್ಲಿ ಕ್ರೈಸ್ತ ಧರ್ಮದ ಸಂಕೇತವಾದ ‘ಕ್ರಾಸ್’ (Cross) ಇರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ತ್ರಿಷಾ ಮೂಲತಃ ಹಿಂದೂ ಧರ್ಮದವರು. ಹೀಗಿರುವಾಗ, ಅವರ ಕಾರಲ್ಲಿ ಕ್ರಾಸ್ ಚಿಹ್ನೆ ಬರಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ.

ದಳಪತಿ ವಿಜಯ್ ಅವರು ಕ್ರಿಶ್ಚಿಯನ್ ಧರ್ಮದವರಾಗಿದ್ದು, ತ್ರಿಷಾ ಅವರ ಕಾರಿನಲ್ಲಿ ಕ್ರಾಸ್ ಕಂಡಿದ್ದಕ್ಕೂ ವಿಜಯ್ ಅವರೊಂದಿಗಿನ ಇತ್ತೀಚಿನ ಒಡನಾಟಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಇತ್ತೀಚೆಗೆ ಇಬ್ಬರೂ ಒಟ್ಟಾಗಿ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ಫೋಟೋಗಳು ವೈರಲ್ ಆಗಿದ್ದವು. ವಿಜಯ್‌ಗಾಗಿ ತ್ರಿಷಾ ಧರ್ಮ ಬದಲಿಸಿದ್ದಾರೆಯೇ ಅಥವಾ ಇಬ್ಬರೂ ಗುಟ್ಟಾಗಿ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಈಗ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಮತದಾನ ಮಾಡಿದ ತ್ರಿಷಾ, ವಿಡಿಯೋ ನೋಡಿ

ಆದರೆ, ತ್ರಿಷಾ ಅವರ ಕೆಲವು ಆಪ್ತ ಅಭಿಮಾನಿಗಳು ಇದನ್ನು ತಳ್ಳಿಹಾಕಿದ್ದಾರೆ. ಒಬ್ಬ ನಟಿಯಾಗಿ ಅವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಅಥವಾ ಅದು ಅವರ ವೈಯಕ್ತಿಕ ನಂಬಿಕೆಯಾಗಿರಬಹುದು ಎಂದು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಜೋಡಿಯ ಸುತ್ತ ಎದ್ದಿರುವ ಗಾಳಿ ಸುದ್ದಿಗಳು ಮಾತ್ರ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ವಿಷಯ ಕೋರ್ಟ್​​ನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪವನ್ ಖೇರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ಮಾನನಷ್ಟ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು – Kannada News | Pawan Khera Gets SC Anticipatory Bail in Defamation Case, Relief from Arrest

ನವದೆಹಲಿ, ಮೇ 1: ಅಸ್ಸಾಂ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera)ಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಗುವಾಹಟಿ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್​ ರದ್ದುಗೊಳಿಸಿದೆ.  ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಪ್ರಕರಣದ ಸಂದರ್ಭಗಳನ್ನು ಗಮನಿಸಿದರೆ ಇದು ರಾಜಕೀಯ ದ್ವೇಷದಂತೆ ತೋರುತ್ತಿದೆ ಮತ್ತು ಇಂತಹ ಸಂದರ್ಭದಲ್ಲಿ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ ಖೇರಾ ಅವರ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅವರು ವಿದೇಶಗಳಲ್ಲಿ ಅನೇಕ ಪಾಸ್‌ಪೋರ್ಟ್‌ಗಳನ್ನು ಮತ್ತು ಅಮೆರಿಕದಲ್ಲಿ ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಖೇರಾ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಮಾನನಷ್ಟ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿಯ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.

ಏಪ್ರಿಲ್ 10 ರಂದು ತೆಲಂಗಾಣ ಹೈಕೋರ್ಟ್ ಖೇರಾ ಅವರಿಗೆ ಒಂದು ವಾರದ ಸಾರಿಗೆ ಜಾಮೀನು ನೀಡಿತ್ತು. ಏಪ್ರಿಲ್ 15-17: ಅಸ್ಸಾಂ ಸರ್ಕಾರದ ಮೇಲ್ಮನವಿಯ ನಂತರ ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ಗುವಾಹಟಿ ಹೈಕೋರ್ಟ್ ಸಂಪರ್ಕಿಸಲು ಸೂಚಿಸಿತ್ತು.

ಮತ್ತಷ್ಟು ಓದಿ: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಒಂದು ವಾರದ ನಿರೀಕ್ಷಣಾ ಜಾಮೀನು ಮಂಜೂರು

ಏಪ್ರಿಲ್ 24 ರಂದು ಗುವಾಹಟಿ ಹೈಕೋರ್ಟ್ ಖೇರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಮುಗ್ಧ ಮಹಿಳೆಯನ್ನು ರಾಜಕೀಯ ವಿವಾದಕ್ಕೆ ಎಳೆದಿದ್ದೀರಿ ಮತ್ತು ಆರೋಪಗಳನ್ನು ಸಾಬೀತುಪಡಿಸಿಲ್ಲ ಎಂದು ಹೈಕೋರ್ಟ್ ಅಂದು ಹೇಳಿತ್ತು.

ಗುವಾಹಟಿ ಹೈಕೋರ್ಟ್ ಆದೇಶದ ವಿರುದ್ಧ ಖೇರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಹೇಳಿಕೆಗಳು ಸಾರ್ವಜನಿಕ ಸಂದರ್ಭದಲ್ಲಿ ಮಾಡಿದ ರಾಜಕೀಯ ವಾಕ್ಚಾತುರ್ಯವಾಗಿದ್ದು, ದೂರುದಾರರಾದ ಮುಖ್ಯಮಂತ್ರಿಗಳ ಪತ್ನಿ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಎಫ್‌ಐಆರ್ ಬಳಸುತ್ತಿದ್ದಾರೆ ಎಂದು ಖೇರಾ ವಾದಿಸಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಈ ವಾದವನ್ನು ಪುರಸ್ಕರಿಸಿ ಅವರಿಗೆ ರಕ್ಷಣೆ ನೀಡಿದೆ.

ಸದ್ಯಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಈ ಆದೇಶವು ಪವನ್ ಖೇರಾ ಅವರಿಗೆ ದೊಡ್ಡ ಸಮಾಧಾನ ತಂದಿದ್ದು, ಅಸ್ಸಾಂ ಪೊಲೀಸರ ಬಂಧನದ ಭೀತಿಯಿಂದ ಅವರಿಗೆ ಮುಕ್ತಿ ಸಿಕ್ಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುದ್ದೇನಹಳ್ಳಿಯ ಉಚಿತ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಗುಣಮಟ್ಟದ ಗರಿ! – Kannada News | Muddenahalli Free Medical College Wins NABH Accreditation: A Milestone in Rural Healthcare

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆImage Credit source: Shree Madhusudhana Sai Medical College

ಮುದ್ದೇನಹಳ್ಳಿ, ಮೇ 01: ಇಲ್ಲಿನ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (SMSIMSR) ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಮಾನ್ಯತಾ ಮಂಡಳಿ (NABH) ಆರಂಭಿಕ ಹಂತದ ಮಾನ್ಯತೆಯನ್ನು ನೀಡಿದೆ. ಇದರೊಂದಿಗೆ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ಬಲ ಸಿಕ್ಕಿದೆ. ಈ ಪ್ರತಿಷ್ಠಿತ ಮಾನ್ಯತೆಯಿಂದಾಗಿ ಸಂಸ್ಥೆಯು ರೋಗಿಯ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಸಮರ್ಥವಾಗಿ ಪಾಲಿಸುತ್ತಿದೆ ಎಂಬುದು ದೃಢಪಟ್ಟಿದೆ. ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ದೇಶದ ವಿರಳ ಗ್ರಾಮೀಣ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಈ ಸಂಸ್ಥೆಗೆ ಹೊಸ ಗರಿಮೆ ಸಿಕ್ಕಿದಂತಾಗಿದೆ.

ಒಂದು ವರ್ಷದ ನಿರಂತರ ಪರಿಶ್ರಮ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದಲ್ಲಿ 2025ರ ಜನವರಿಯಲ್ಲಿ ಆರಂಭವಾದ ಗುಣಮಟ್ಟ ಸುಧಾರಣಾ ಪ್ರಕ್ರಿಯೆ, ಒಂದು ವರ್ಷದ ನಿರಂತರ ಪರಿಶ್ರಮ, ಶಿಸ್ತು ಮತ್ತು ತಂಡದ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದವರೆಲ್ಲ ಪ್ರಯತ್ನಗಳಿಂದ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡು ಜಾರಿಗೊಂಡಿವೆ.

ಆರಂಭಿಕ ಹಂತದ ಮಾನ್ಯತೆ

ಈ ಅವಧಿಯಲ್ಲಿ ಆಂತರಿಕ ಹಾಗೂ ಬಾಹ್ಯ ಲೆಕ್ಕಪರಿಶೋಧನೆಗಳನ್ನು ಹಲವು ಹಂತಗಳಲ್ಲಿ ನಡೆಸಿ, ಕಾರ್ಯವಿಧಾನಗಳನ್ನು ಪರಿಶೀಲಿಸಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. 2026ರ ಜನವರಿ 12ರಂದು ನಡೆದ NABH ಪರಿಶೀಲನೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಉತ್ತೀರ್ಣವಾಗಿದೆ.

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ಪದ್ಮಶ್ರೀ, ದೇಶದಲ್ಲಿರುವ ಸುಮಾರು 80,000 ರಿಂದ 90,000 ಆಸ್ಪತ್ರೆಗಳ ಪೈಕಿ ಕೇವಲ 1.4 ಶೇಕಡಾ ಆಸ್ಪತ್ರೆಗಳು ಮಾತ್ರ ಸಂಪೂರ್ಣ ಮಾನ್ಯತೆ (Full Accreditation) ಪಡೆದಿವೆ. ಸುಮಾರು 3 ಶೇಕಡಾ ಆಸ್ಪತ್ರೆಗಳು ಮಾತ್ರ ಆರಂಭಿಕ ಹಂತದ (Entry-Level) ಮಾನ್ಯತೆ ಹೊಂದಿವೆ. ಸಂಪೂರ್ಣ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವ ಆಸ್ಪತ್ರೆಗಳ ಸಂಖ್ಯೆ ತೀರಾ ಕಡಿಮೆ. ನಮ್ಮ ಸಂಸ್ಥೆಗೆ ಮಾನ್ಯತೆ ದೊರಕಿರುವುದು ಮೊದಲ ಹೆಜ್ಜೆಯಾಗಿದೆ. ಶೀಘ್ರದಲ್ಲೇ ಸಂಪೂರ್ಣ NABH ಮಾನ್ಯತೆ ಪಡೆಯುವ ವಿಶ್ವಾಸವೂ ನಮಗಿದೆ ಎಂದು ಹೇಳಿದ್ದಾರೆ.

ಈ ಸಾಧನೆಯೊಂದಿಗೆ SMSIMSR ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ಖಾಸಗಿ ಗ್ರಾಮೀಣ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿಯೇ ಉಚಿತ ಸೇವೆಗಳೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಬಹುದು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ.

ಉಚಿತ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ದಿಕ್ಕು

ಆರೋಗ್ಯ ಸೇವೆ ತಲುಪದ ಜನರಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಮೂಲಕ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಿದೆ. NABH ಮಾನ್ಯತೆಯೊಂದಿಗೆ ಸುರಕ್ಷಿತ, ಕ್ರಮಬದ್ಧ ಹಾಗೂ ಪಾರದರ್ಶಕ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಇದು ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಗ್ರಾಮೀಣ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಕನಸಿನ ಮಾತು. ಆದರೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆ ಇದಕ್ಕೆ ಅಪವಾದ ವಾಗಿದ್ದು, ಉಚಿತ ಚಿಕಿತ್ಸೆ, ಉತ್ತಮ ಆರೈಕೆ ಹಾಗೂ ಗುಣಮಟ್ಟದ ಚಿಕಿತ್ಸೆ ಗಳನ್ನು ಏಕಕಾಲಕ್ಕೆ ನೀಡಬಹುದು ಎಂಬುದನ್ನು ಸಾಬೀತುಪಡಿಸಿದೆ.

ಮಾನ್ಯತೆ ಪಡೆಯಲು ಕಾರಣವಾದ ಅಂಶಗಳು

ರೋಗಿಯ ಸುರಕ್ಷತೆಗೆ ಆದ್ಯತೆ, ಪರಿಣಾಮಕಾರಿ ಸೋಂಕು ನಿಯಂತ್ರಣ, ಪ್ರಮಾಣಿತ ವೈದ್ಯಕೀಯ ಹಾಗೂ ಆಡಳಿತಾತ್ಮಕ ಕ್ರಮಗಳು, ನೈತಿಕ ಮತ್ತು ಪಾರದರ್ಶಕ ಚಿಕಿತ್ಸಾ ವಿಧಾನಗಳು ಹಾಗೂ ಸಮಗ್ರ ದಾಖಲೆ ನಿರ್ವಹಣೆ ಇವುಗಳ ಸಮರ್ಪಕ ಅನುಷ್ಠಾನದಿಂದ ಈ ಮಾನ್ಯತೆ ಲಭಿಸಿದೆ. ಈ ವ್ಯವಸ್ಥೆಗಳು ಪ್ರತಿಯೊಬ್ಬ ರೋಗಿಗೂ ಸುರಕ್ಷಿತ ಹಾಗೂ ಜವಾಬ್ದಾರಿಯುತ ಚಿಕಿತ್ಸೆ ದೊರಕುವುದನ್ನು ಖಚಿತಪಡಿಸುತ್ತವೆ. ಈ ಮಾನ್ಯತೆಯಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆ ಲಭ್ಯವಾಗಲಿದೆ.

‘ಒನ್ ವರ್ಲ್ಡ್, ಒನ್ ಫ್ಯಾಮಿಲಿ’ ಧ್ಯೇಯೋದ್ದೇಶಕ್ಕೆ ಬಲ

ಆರ್ಥಿಕ ಸ್ಥಿತಿ ಯಾವುದಾದರೂ ಇರಲಿ, ಎಲ್ಲರಿಗೂ ಸಮಾನ ಆರೋಗ್ಯ ಸೇವೆ ನೀಡಬೇಕು ಎಂಬ ಮಾನವೀಯ ಮೌಲ್ಯವನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ. ಉಚಿತ ಸೇವೆಗಳೊಂದಿಗೆ ರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಈ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಾದರಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಮಂತಾ ಪತಿಯೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಸಲ್ಮಾನ್ ಖಾನ್ – Kannada News | Raj and DK to direct a super hero movie to Salman Khan

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಸದ್ಯ ತೆಲುಗಿನ ನಿರ್ಮಾಪಕ ದಿಲ್ ರಾಜು ನಿರ್ಮಿಸಿ, ವಂಶಿ ಪೈಡಪಲ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಮಹರ್ಷಿ’, ‘ಮುನ್ನಾ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ವಂಶಿ ಇದೀಗ ಸಲ್ಮಾನ್ ಖಾನ್​​ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಹ ದಕ್ಷಿಣದ ನಿರ್ದೇಶಕರುಗಳೊಟ್ಟಿಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮುರುಗದಾಸ್ ಜೊತೆಗೆ ‘ಸಿಖಂಧರ್’ ಮಾಡಿದ್ದರು. ಅದು ಫ್ಲಾಪ್ ಆಯ್ತು. ಈಗ ವಂಶಿ ಪೈಡಪಲ್ಲಿ ಜೊತೆ ಕೆಲಸ ಮಾಡುತ್ತಿದ್ದಾರೆ. ಇದಾದ ಬಳಿಕ ಸಮಂತಾರ ಹಾಲಿ ಪತಿಯ ನಿರ್ದೇಶನದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

ಸಮಂತಾರ ಪತಿ ರಾಜ್ ಮತ್ತು ಅವರ ಗೆಳೆಯ ಡಿಕೆ ಸಲ್ಮಾನ್ ಖಾನ್ ಅವರಿಗಾಗಿ ಸೂಪರ್ ಹೀರೋ ಕತೆಯುಳ್ಳ ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ‘ರಾಜ್ ಮತ್ತು ಡಿಕೆ’ ಜೋಡಿಯದ್ದು ದೊಡ್ಡ ಹೆಸರು. ಹಲವು ಸಿನಿಮಾಗಳು ಮತ್ತು ಕೆಲವು ಸೂಪರ್ ಹಿಟ್ ವೆಬ್ ಸರಣಿಗಳನ್ನು ಈ ಜೋಡಿ ಈಗಾಗಲೇ ನೀಡಿದೆ. ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ ಅವರು ದಶಕಗಳಿಂದಲೂ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದಲೂ ಅವರು ಕತೆಯೊಂದರ ಮೇಲೆ ಕೆಲಸ ಮಾಡಿದ್ದು, ಕತೆಗೆ ಸಲ್ಮಾನ್ ಖಾನ್ ಅವರೇ ಸೂಕ್ತ ಎಂಬ ಕಾರಣಕ್ಕೆ ಇದೀಗ ಸಲ್ಲು ಜೊತೆಗೆ ರಾಜ್ ಮತ್ತು ಡಿಕೆ ಕೈಜೋಡಿಸಿದ್ದಾರೆ. ಸಲ್ಮಾನ್ ಖಾನ್ ಈ ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ

ರಾಜ್ ಮತ್ತು ಡಿಕೆ ಈ ಹಿಂದೆ ಕೆಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರಾದರೂ ಸೂಪರ್ ಸ್ಟಾರ್ ನಟನೊಟ್ಟಿಗೆ ಮತ್ತು ಇಷ್ಟು ದೊಡ್ಡ ಬಜೆಟ್​​ನ ಸಿನಿಮಾ ನಿರ್ದೇಶಿಸುತ್ತಿರುವುದು ಇದೇ ಮೊದಲಾಗಿದೆ. ಇದು ಕೇವಲ ಸಾಹಸ ಪ್ರಧಾನ ಚಿತ್ರವಲ್ಲದೆ, ರಾಜ್ ಮತ್ತು ಡಿಕೆ ಅವರ ವಿಶಿಷ್ಟ ಶೈಲಿಯ ಹಾಸ್ಯ ಮತ್ತು ವಿನೂತನ ಕಥಾವಸ್ತುವನ್ನು ಹೊಂದಿರಲಿದೆ. ಈ ಸಿನಿಮಾದ ಪ್ರಾಥಮಿಕ ಕೆಲಸಗಳು ಈಗಾಗಲೇ ಆರಂಭವಾಗಿದ್ದು, ಅಕ್ಟೋಬರ್ 2026 ರಿಂದ ಅಧಿಕೃತವಾಗಿ ಚಿತ್ರೀಕರಣ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

2003 ರಿಂದಲೂ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ರಾಜ್ ಮತ್ತು ಡಿಕೆ, ‘99’, ‘ಗೋ ಗಾನ್ ಗೋವಾ’, ‘ಶೋರ್ ಇನ್ ದಿ ಸಿಟಿ’, ‘ಎ ಜಂಟಲ್​​ಮ್ಯಾನ್’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಬಹಳ ಜನಪ್ರಿಯವಾಗಿರುವ ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಗನ್ಸ್ ಆಂಡ್ ಗುಲಾಬ್ಸ್’, ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗಳನ್ನು ಸಹ ಇವರೇ ನಿರ್ದೇಶಿಸಿದ್ದಾರೆ. ಇದೀಗ ಮೊದಲ ಬಾರಿಗೆ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Masala Dosa: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್​; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ! – Kannada News | Masala Dosa Ranks 6th Globally: TasteAtlas Crowns It Among World’s Best Pancakes

ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್Image Credit source: gemini ai

ಭಾರತೀಯರ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಹೆಮ್ಮೆಯ ಆಹಾರವಾದ ಮಸಾಲ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಪ್ರಸಿದ್ಧ ಅಂತರಾಷ್ಟ್ರೀಯ ಆಹಾರ ಮಾರ್ಗದರ್ಶಿ ‘ಟೇಸ್ಟ್ ಅಟ್ಲಾಸ್’ (TasteAtlas) ಪ್ರಕಟಿಸಿರುವ ಮೇ 2026ರ ವಿಶ್ವದ ’50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ’ ಪಟ್ಟಿಯಲ್ಲಿ ಮಸಾಲ ದೋಸೆಗೆ 6ನೇ ಸ್ಥಾನ ಲಭಿಸಿದೆ. ವಿಶ್ವದಾದ್ಯಂತ ಇರುವ ವಿವಿಧ ಬಗೆಯ ತಿಂಡಿಗಳನ್ನು ಹಿಂದಿಕ್ಕಿ, ಮಸಾಲ ದೋಸೆ ಈ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತೀಯ ಆಹಾರ ಪದ್ಧತಿಯ ಖ್ಯಾತಿಯನ್ನು ಹೆಚ್ಚಿಸಿದೆ.

ಟೇಸ್ಟ್ ಅಟ್ಲಾಸ್ ವರದಿ:

ವಿಶ್ವದ ವಿವಿಧ ಮೂಲೆಗಳ ಆಹಾರ ಪ್ರಿಯರು ಮತ್ತು ವಿಮರ್ಶಕರು ನೀಡಿರುವ ರೇಟಿಂಗ್ ಆಧಾರದ ಮೇಲೆ ಮಸಾಲ ದೋಸೆಗೆ 4.3 ಸ್ಟಾರ್ ರೇಟಿಂಗ್ ನೀಡಲಾಗಿದೆ. ಒಟ್ಟು 50 ಖಾದ್ಯಗಳ ಪೈಕಿ ಮಸಾಲ ದೋಸೆ 6ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮಸಾಲ ದೋಸೆಯ ಗರಿಗರಿಯಾದ ವಿನ್ಯಾಸ, ಒಳಗಿನ ಮಸಾಲೆಭರಿತ ಆಲೂಗೆಡ್ಡೆ ಪಲ್ಯ ಮತ್ತು ಅದನ್ನು ಚಟ್ನಿ-ಸಾಂಬಾರ್ ಜೊತೆಗೆ ಸವಿಯುವ ಶೈಲಿಯನ್ನು ಟೇಸ್ಟ್ ಅಟ್ಲಾಸ್ ವಿಶೇಷವಾಗಿ ಶ್ಲಾಘಿಸಿದೆ.

ದಕ್ಷಿಣ ಭಾರತದ ರುಚಿಗೆ ಜಾಗತಿಕ ಮನ್ನಣೆ:

ಸಾಮಾನ್ಯವಾಗಿ ವಿದೇಶಗಳಲ್ಲಿ ‘ಪ್ಯಾನ್‌ಕೇಕ್’ ಎಂದರೆ ಸಿಹಿಯಾದ ತಿಂಡಿ ಎಂಬ ಭಾವನೆ ಇದೆ. ಆದರೆ, ಭಾರತದ ಈ ಖಾರವಾದ ಮತ್ತು ಸತ್ವಯುತವಾದ ಮಸಾಲ ದೋಸೆ, ಅಂತರಾಷ್ಟ್ರೀಯ ಮಟ್ಟದಲ್ಲಿ ‘ಪ್ಯಾನ್‌ಕೇಕ್ ಪಾರ್ಟಿ’ಯನ್ನು ಧೂಳೀಪಟ ಮಾಡಿ ಜಾಗತಿಕ ಆಹಾರ ಪ್ರಿಯರ ಮೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯ ಹಿಟ್ಟನ್ನು ಹುದುಗಿಸಿ ತಯಾರಿಸುವ ಈ ದೋಸೆ, ಆರೋಗ್ಯ ಮತ್ತು ರುಚಿಯ ದೃಷ್ಟಿಯಿಂದಲೂ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮತ್ತಷ್ಟು ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ:

ಈ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ “ದೋಸೆ ಲವರ್ಸ್” ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಮಸಾಲ ದೋಸೆ ಕೇವಲ ಒಂದು ಆಹಾರವಲ್ಲ, ಅದು ಒಂದು ಭಾವನೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಹಿಂದೆ ಇದೇ ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಭಾರತದ ರೊಟ್ಟಿ, ನಾನ್ ಮತ್ತು ಸಮೋಸಾಗಳು ಸ್ಥಾನ ಪಡೆದಿದ್ದವು. ಈಗ ಆ ಪಟ್ಟಿಗೆ ಮಸಾಲ ದೋಸೆಯೂ ಸೇರ್ಪಡೆಯಾಗಿರುವುದು ಭಾರತೀಯ ಪಾಕಶಾಲೆಯ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

ಪ್ಯಾನ್‌ಕೇಕ್ ಎಂದರೇನು?

ಪ್ಯಾನ್‌ಕೇಕ್ ಎಂಬುದು ಹಿಟ್ಟು, ಮೊಟ್ಟೆ, ಹಾಲು ಮತ್ತು ಬೆಣ್ಣೆಯಂತಹ ಪದಾರ್ಥಗಳ ಮಿಶ್ರಣದಿಂದ ತಯಾರಿಸಿದ ತೆಳುವಾದ ಮತ್ತು ದುಂಡಗಿನ ಆಕಾರದ ಒಂದು ಬಗೆಯ ತಿಂಡಿಯಾಗಿದೆ. ಇದನ್ನು ಸಾಮಾನ್ಯವಾಗಿ ಫ್ರೈಯಿಂಗ್ ಪ್ಯಾನ್ ಅಥವಾ ತವಾ ಮೇಲೆ ಎರಡೂ ಬದಿಗಳಲ್ಲಿ ಬೇಯಿಸಲಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಇದು ಅತ್ಯಂತ ಜನಪ್ರಿಯ ಉಪಹಾರವಾಗಿದ್ದು, ಸಾಮಾನ್ಯವಾಗಿ ಇದನ್ನು ಜೇನುತುಪ್ಪ (Honey), ಮೇಪಲ್ ಸಿರಪ್ ಅಥವಾ ಹಣ್ಣುಗಳೊಂದಿಗೆ ಸಿಹಿಯಾಗಿ ಸವಿಯುತ್ತಾರೆ. ತಯಾರಿಸುವ ವಿಧಾನದಲ್ಲಿ ಇದು ಭಾರತದ ದೋಸೆ ಅಥವಾ ಉತ್ತಪ್ಪವನ್ನು ಹೋಲುತ್ತದೆಯಾದರೂ, ಪ್ಯಾನ್‌ಕೇಕ್ ಸಾಮಾನ್ಯವಾಗಿ ಮೃದುವಾಗಿ ಮತ್ತು ಸ್ವಲ್ಪ ದಪ್ಪವಾಗಿರುತ್ತದೆ. ಜಾಗತಿಕವಾಗಿ ಇದನ್ನು ಸಿಹಿ ಮತ್ತು ಖಾರ ಹೀಗೆ ಎರಡೂ ರುಚಿಗಳಲ್ಲಿ ಆಯಾ ದೇಶಗಳ ಸಂಪ್ರದಾಯಕ್ಕೆ ತಕ್ಕಂತೆ ತಯಾರಿಸಲಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:34 am, Fri, 1 May 26

Source link