nagaraj11081993

ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು

ಶಿವಮೊಗ್ಗ, (ಮಾರ್ಚ್ 30): ಪ್ರೀತಿಸಿ (Love) ಕೇವಲ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ದುರಂತ ಸಾವು ಕಂಡಿದೆ. ಹೌದು… ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಲಾರಿಗೆ ಬೈಕ್​ ಡಿಕ್ಕಿಯಾಗಿದ್ದು, ಬೈಕ್ ನಲ್ಲಿ ಇದ್ದಂತಹ ದಂಪತಿಗಳಾದ ಬಾಬು (30) ಹಾಗೂ ಸಾವಿತ್ರಿ (26) ಸ್ಥಳದಲ್ಲಿ ಸಾವನಪ್ಪಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಆರು ತಿಂಗಳ ಹಿಂದೆ ಅಷ್ಟೇ ಸಪ್ತಪದಿ ತುಳಿದ್ದರು….

Read More

ಬೇಸಿಗೆಯಲ್ಲಿ ತುಳಸಿ ಗಿಡ ಒಣಗಿ ಹೋಗದಂತೆ ನೋಡಿಕೊಳ್ಳಲು ಈ ಸಿಂಪಲ್‌ ಸಲಹೆ ಪಾಲಿಸಿ

ಮನೆಗಳಲ್ಲಿ ಬಹುಮುಖ್ಯವಾಗಿ ಇರಲೇಬೇಕಾದ ಸಸ್ಯಗಳಲ್ಲಿ ತುಳಸಿ ಗಿಡವೂ ಒಂದು.  ಧಾರ್ಮಿಕ ಮಹತ್ವ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತುಳಸಿ ಗಿಡ ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಬೇಸಿಗೆಯ (summer) ವಿಪರೀತ ಶಾಖದ ಕಾರಣದಿಂದಾಗಿ ತುಳಸಿ ಗಿಡ ಬೇಗನೇ ಬಾಡಿ ಅಥವಾ ಒಣಗಿ ಹೋಗುವ ಕಾರಣ ಈ ಸಸ್ಯದ ಬಗ್ಗೆ ಬೇಸಿಗೆಯಲ್ಲಿ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಮನೆಯ ತುಳಸಿ ಗಿಡ ಕೂಡ ಈ ಉರಿ ಬಿಸಿಲಿಗೆ ಒಣಗಿ ಹೋಗ್ತಿದ್ಯಾ? ಹಾಗಿದ್ರೆ ಈ ಕೆಲವೊಂದು…

Read More

2027ಕ್ಕೆ ಭಾರತದ ಮೊದಲ ಪೂರ್ಣ ಡಿಜಿಟಲ್ ಸೆನ್ಸಸ್; 2026ರ ಏಪ್ರಿಲ್ 1ರಂದು ಮೊದಲ ಹಂತದ ಸೆನ್ಸಸ್ ಆರಂಭ

ನವದೆಹಲಿ, ಮಾರ್ಚ್ 30: ಹದಿನಾರು ವರ್ಷಗಳ ನಂತರ ಭಾರತದಲ್ಲಿ ಮೊದಲ ಬಾರಿಗೆ ಸೆನ್ಸಸ್ ನಡೆಯಲಿದೆ. 2027ರ ಸೆನ್ಸಸ್​ಗೆ ಏಪ್ರಿಲ್ 1ರಂದು ಚಾಲನೆ ಸಿಗಲಿದೆ. ಇದು ಭಾರತದ ಮೊದಲ ಪೂರ್ಣ ಡಿಜಿಟಲ್ ಸೆನ್ಸಸ್ (Census 2027) ಆಗಿರಲಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಇದು ವಿಶ್ವದಲ್ಲೇ ಅತಿದೊಡ್ಡ ಗಣತಿ ಕಾರ್ಯವಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೆ 15 ಸೆನ್ಸಸ್​ಗಳು ನಡೆದಿವೆ. ಸ್ವಾತಂತ್ರ್ಯದ ನಂತರ 7 ಸೆನ್ಸಸ್…

Read More

ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಬೆಂಗಳೂರು, (ಮಾರ್ಚ್ 30): ಸ್ಮಾರ್ಟ್‌ ಟ್ರಾಫಿಕ್‌ ನಿರ್ವಹಣಾ ವ್ಯವಸ್ಥೆ ಜಾರಿಗೆ ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿ ಬಾಡಿ ಕ್ಯಾಮೆರಾ (body worn camera) ಬಳಸುವುದು ಕಡ್ಡಾಯವಾಗಿದೆ. ಆದ್ರೆ, ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲಿಸ್ ಠಾಣೆಯ (Bengaluru High Grounds Traffic Police Station) ಮೂವರು ಸಿಬ್ಬಂದಿ ಬಾಡಿ ಕ್ಯಾಮೆರಾ ಆಫ್ ಮಾಡಿಕೊಂಡು ವಿನಾ ಕಾರಣ ಬೈಕ್ ನಿಲ್ಲಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಸಂಬಂಧ ಇದೀಗ ಮೂವರು ಪೊಲೀಸ್ ಸಿಬ್ಬಂದಿಯನ್ನು…

Read More

ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಮಾರ್ಚ್​​ 30: ಸಣ್ಣಪುಟ್ಟ ವೈವಾಹಿಕ ಜಗಳಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ (High Court) ಮಹತ್ವದ ತೀರ್ಪು ಪ್ರಕಟಿಸಿದೆ. ಆ ಮೂಲಕ 2018ರಲ್ಲಿ ಕೋರ್ಟ್​ ಮೇಟ್ಟಿಲೇರಿದ್ದ ಮೈಸೂರಿನ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧದ 498ಎ ಕೇಸ್​​ ಅನ್ನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಸೋಮವಾರ ಆದೇಶ ಹೊರಡಿಸಿದೆ. ಅತ್ತೆ, ಮಾವ ಹಾಗೂ ನಾದಿನಿ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ಎಂ…

Read More

ಬಿರುಗಾಳಿಗೆ ಮಂಟಪವನ್ನೇ ಹಾರದಂತೆ ತಡೆದವನು, ಇನ್ನು ಪತ್ನಿ ಕೈ ಬಿಡುವನೇ!

ಅಂದು ರಾತ್ರಿ ಹೊತ್ತು, ಎಲ್ಲರೂ ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದರು. ಮದುವೆಯ ವಿಧಿ ವಿಧಾನಗಳು ಒಂದೊಂದಾಗಿ ನಡೆಯುತ್ತಿತ್ತು. ಸಣ್ಣದಾಗಿ ಆರಂಭವಾದ ಗಾಳಿ ಒಂದೇ ಬಾರಿಗೆ ರೌದ್ರ ರೂಪ ತಾಳಿತ್ತು. ವರ ಮಂಟಪದಲ್ಲಿರುವಾಗಲೇ ಗಾಳಿ ಮಂಟಪವನ್ನೂ ಎಳೆದುಕೊಂಡು ಹೋಗುವಷ್ಟು ರಭಸವಾಗಿತ್ತು. ಆಗ ಒಂದೆಡೆ ಸಂಬಂಧಿಕರು ಇನ್ನೊಂದೆಡೆ ತಾನು ಮಂಟಪದ ಕಂಬಗಳನ್ನು ಕಟ್ಟಿಯಾಗಿ ಹಿಡಿದುಕೊಂಡು ಗಾಳಿಯಲ್ಲಿ ಹಾರದಂತೆ ತಡೆದಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಜನ ಮಂಟಪವನ್ನೇ ಹಾರಲು ಬಿಡದವನು ಪತ್ನಿ ಕೈ ಬಿಡುವುದುಂಟೇ ಎಂದಿದ್ದಾರೆ.    …

Read More

ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ರಾಯಚೂರು, ಮಾರ್ಚ್​ 30: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ಅನುಮಾನಾಸ್ಪದವಾಗಿ ತಾಯಿ ಹೆಣವಾಗಿ (death) ಪತ್ತೆಯಾದ ಘಟನೆ ನಗರದ ಐಬಿ ಕಾಲೋನಿಯಲ್ಲಿ ನಡೆದಿದೆ. ವಿದ್ಯಾ (30) ಮೃತ ತಾಯಿ. ಗಂಡ ಮಂಜುನಾಥ್, ಅತ್ತೆ ಕವಿತಾ ನೇಣುಬಿಗಿದು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಡಿವೈಎಸ್​ಪಿ ಶಾಂತವೀರ್ ನೇತೃತ್ವದಲ್ಲಿ ತನಿಖೆ ನಡೆದಿದೆ. ನಡೆದಿದ್ದೇನು? ಕಳೆದ ಎರದು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್​ ವಿವಾಹವಾಗಿದೆ. ದಂಪತಿಗೆ 11 ತಿಂಗಳ ಮಗು…

Read More

ಬೆಂಗಳೂರು ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ

ಬೆಂಗಳೂರು, ಮಾರ್ಚ್​​ 30: ನಗರದ ಹೋಟೆಲ್‌ಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆಯು ತೀವ್ರ ಆತಂಕ ಸೃಷ್ಟಿಸಿದೆ. ಈ ನಡುವೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಗುಡ್​​ ನ್ಯೂಸ್​​ ನೀಡಿದ್ದು, ನಾಳೆ ನಗರದ ಹೋಟೆಲ್‌ಗಳಿಗೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಆದೇಶದ ಅನ್ವಯ, ಇಂದು ವಿತರಕರಿಗೆ ಸಿಲಿಂಡರ್‌ಗಳು ತಲುಪಲಿದ್ದು, ನಾಳೆಯಿಂದ ಹೋಟೆಲ್ ಮಾಲೀಕರಿಗೆ ವಿತರಣೆ ಆರಂಭವಾಗಲಿದೆ. ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಹೋಟೆಲ್ ಮಾಲೀಕರ ಆತಂಕ ನಾಳೆಯಿಂದ ಬಗೆಹರಿಯಲಿದೆ ಎಂದು…

Read More

‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

ಬಾಲಿವುಡ್ ಅಂಗಳದಲ್ಲಿ ಈಗ ಎಲ್ಲಿ ನೋಡಿದರೂ ನಟ ರಣವೀರ್ ಸಿಂಗ್ (Ranveer Singh) ಅವರದ್ದೇ ಹವಾ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರದ ಭರ್ಜರಿ ಯಶಸ್ಸಿನಿಂದ ರಣವೀರ್ ಸಿಂಗ್ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಆದರೆ, ಈ ಯಶಸ್ಸಿನ ನಡುವೆಯೂ ಒಂದು ಸಣ್ಣ ಅಸಮಾಧಾನ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದೇನೆಂದರೆ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅವರು ರಣವೀರ್ ಅವರ ಈ ದೊಡ್ಡ ಸಾಧನೆಯ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬುದು….

Read More

ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

ನವದೆಹಲಿ, ಮಾರ್ಚ್ 30: ಪ್ರಮಾಣೀಕೃತವಲ್ಲದ ಸಿಸಿಟಿವಿ ಕ್ಯಾಮರಾಗಳ ಮಾರಾಟವನ್ನು ಭಾರತ ಏಪ್ರಿಲ್ 1ರಿಂದ ನಿರ್ಬಂಧಿಸಿದೆ. ಇದರೊಂದಿಗೆ ಚೀನೀ ಮೂಲದ ಸಿಸಿ ಕ್ಯಾಮರಾಗಳಿಗೆ (Chinese origin CCTV cameras) ಭಾರತದಲ್ಲಿ ಮಾರಾಟ ಸಾಧ್ಯವಾಗದೇ ಹೋಗಬಹುದು. ಭಾರತದ ಮಾರುಕಟ್ಟೆಯಲ್ಲಿ ಉಪಸ್ಥಿತಿ ಹೊಂದಿರುವ ಹೈಕ್​ವಿಶನ್ (HikVision), ಡಹುವಾ ಟೆಕ್ನಾಲಜಿ (Dahua Technology), ಟಿಪಿ ಲಿಂಕ್ (TP-Link) ಇತ್ಯಾದಿ ಚೀನೀ ಬ್ರ್ಯಾಂಡ್ ಈ ಕ್ರಮದಿಂದ ಭಾರತದ ಸ್ಥಳೀಯ ಸಿಸಿಟಿವಿ ಕ್ಯಾಮರಾ ಉದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ. ಸಿಸಿಟಿವಿ ಕ್ಯಾಮರಾದಲ್ಲಿ ಹೇಗೆ ನಿರ್ಬಂಧ?…

Read More