ಬಾಬರಿ ಮಸೀದಿಯನ್ನು ಇನ್ನೆಂದೂ ನಿರ್ಮಿಸಲು ಸಾಧ್ಯವಿಲ್ಲ; ಸಿಎಂ ಯೋಗಿ ಆದಿತ್ಯನಾಥ್ ಪುನರುಚ್ಛಾರ – Kannada News | Babri Masjid wont be rebuilt till eternity CM Yogi adityanath says in Barabanki
ಬಾರಾಬಂಕಿ, ಫೆಬ್ರವರಿ 10: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬಾಬರಿ ಮಸೀದಿ ವಿಷಯದ ಬಗ್ಗೆ ತಮ್ಮ ಕಠಿಣ ನಿಲುವನ್ನು ಪುನರುಚ್ಚರಿಸಿದ್ದಾರೆ. ಬಾಬರಿ ಮಸೀದಿಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ. ಈ ಸರ್ಕಾರ ಹೇಳಿದ್ದನ್ನೇ ಮಾಡುತ್ತದೆ ಮತ್ತು ಮಾಡುವುದನ್ನಷ್ಟೇ ಹೇಳುತ್ತದೆ. ನಾವು ಹೇಳಿದಂತೆಯೇ ರಾಮಜನ್ಮ ಭೂಮಿಯಲ್ಲಿ ಬಾಲರಾಮನಿಗೆ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ. ಬಾರಾಬಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾನು ನೀಡಿದ ಭರವಸೆಗಳನ್ನು ಈಡೇರಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅಯೋಧ್ಯೆಯ ಬಗ್ಗೆ…