ಬೆಂಗಳೂರು, ಮೇ.1: ವಾಹನ ತಪಾಸಣೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಥವಾ ಅನುಚಿತವಾಗಿ ವರ್ತಿಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಭಾರತೀಯ ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಕಾನ್‌ಸ್ಟೆಬಲ್‌ಗೆ ನಾಗರಿಕರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರವಿಲ್ಲ ಎಂಬುದು ಕಾನೂನುಬದ್ಧ ಸತ್ಯ. ಆದರೆ ಬೆಂಗಳೂರಿನಲ್ಲಿ ಪೊಲೀಸರು ಕಾನೂನು ವಿರೋಧವಾಗಿ ನಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋ ಚಾಲಕನೊಬ್ಬನಿಗೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಆಟೋ ಚಾಲಕ ಪ್ರಶ್ನೆ ಮಾಡಿದ್ದಕ್ಕೆ ಎಳೆದಾಡಿದ್ದಾರೆ. ಇನ್ನೊಂದು ಕಡೆ ಲಾರಿ ಡ್ರೈವರ್ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು @KarnatakaPortfolio ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೊಲೀಸರಿಗೆ ದಾಖಲೆಗಳ ಪರಿಶೀಲನೆಗಾಗಿ ವಾಹನವನ್ನು ನಿಲ್ಲಿಸುವ ಅಧಿಕಾರವಿದೆ. ಚಾಲನಾ ಪರವಾನಗಿ (DL), ಆರ್‌ಸಿ (RC), ವಿಮೆ ಮತ್ತು ಪಿಯುಸಿ (PUC) ದಾಖಲೆಗಳನ್ನು ಕೇಳುವುದು, ನಿಯಮ ಉಲ್ಲಂಘನೆಯಾದಲ್ಲಿ ಚಲನ್ ನೀಡುವುದು ಅಥವಾ ದಂಡ ವಿಧಿಸುವುದು. ಗಂಭೀರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವಾಹನವನ್ನು ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇದೆ. ಯಾವುದೇ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡುವುದು ಕೇವಲ ಆತ್ಮರಕ್ಷಣೆಗಾಗಿ ಅಥವಾ ಗಂಭೀರ ಅಪರಾಧವನ್ನು ತಡೆಯಲು ಮಾತ್ರ ಸೀಮಿತವಾಗಿದೆ. ಅನಗತ್ಯ ಹಲ್ಲೆಯು ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಅಪರಾಧವಾಗುತ್ತದೆ ಮತ್ತು ಇದು ಪೊಲೀಸ್ ಸೇವಾ ನಿಯಮಗಳ ಉಲ್ಲಂಘನೆಯೂ ಹೌದು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ