All posts by nagaraj11081993

ರಾಜ್ಯಾದ್ಯಂತ 100 ಕಡೆ ಕಾಂಗ್ರೆಸ್ ಭವನ: ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ ನೀಡಲು ಪತ್ರ – Kannada News | Government Decided To Give High Value Site At Low Price To Construct Congress Bhavana In Karnataka

ಬೆಂಗಳೂರು, (ಫೆಬ್ರವರಿ 08): ಕರ್ನಾಟಕದಾದ್ಯಂತ 100 ಕಡೆಗಳಲ್ಲಿ ಕಾಂಗ್ರೆಸ್ ಭವನ (Congress Bhavana) ನಿರ್ಮಾಣಕ್ಕೆ ಪಕ್ಷ ಮುಂದಾಗಿದೆ. ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಭವನ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕೋಟಿ ಕೋಟಿ ಬೆಲೆ ಬಾಳುವ ಸಿಎ ಸೈಟ್​​ಗಳನ್ನು ಕಾಂಗ್ರೆಸ್ ಟ್ರಸ್ಟ್​​ಗೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ. ಇನ್ನೂ 13 ಜಿಲ್ಲೆಗಳಲ್ಲಿ ಪುರಸಭೆ, ನಗರ ಸಭೆಗಳ ಜಾಗವನ್ನ ಕಾಂಗ್ರೆಸ್ ಭವನ ಕಟ್ಟಲು ಕೊಟ್ಟಿರೋ ಪೌರಾಡಳಿತ ಇಲಾಖೆ ಕೊಟ್ಟಿದೆ. ಕಾನೂನು ಇಲಾಖೆ ವಿರೋಧದ ನಡುವೆಯೂ ಕಾಂಗ್ರೆಸ್ ಭವನಕ್ಕೆ ಜಾಗ ಕೊಟ್ಟಿರೋ ಬಗ್ಗೆಯೂ ಆರೋಪ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

Source link

ಭಾರತೀಯ ಸಿನಿಮಾಗಳ ಕಲೆಕ್ಷನ್ ಹೆಚ್ಚಳಕ್ಕೆ ಆಮಿರ್ ಖಾನ್ ಐಡಿಯಾ, ವರ್ಕೌಟ್ ಆಗುತ್ತ? – Kannada News | Aamir Khan says India has very less number of theaters

ಭಾರತೀಯ ಚಿತ್ರರಂಗದಲ್ಲಿ (Indian Cinema) ಸಿನಿಮಾವನ್ನೇ ಉಸಿರಾಡುವ ಕೆಲವೇ ಕೆಲವು ಸಿನಿಮಾ ಕರ್ಮಿಗಳಲ್ಲಿ ಆಮೀರ್ ಖಾನ್ ಸಹ ಒಬ್ಬರು. ಒಳ್ಳೆಯ ಸಿನಿಮಾಗಳನ್ನು ಮಾಡುವುದರ ಜೊತೆಗೆ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕುರಿತಾಗಿ, ಸಿನಿಮಾ ಮಂದಿ ಹೆಚ್ಚು ಲಾಭ ಮಾಡುವುದರ ಕುರಿತಾಗಿ ಒಂದಿಲ್ಲೊಂದು ಯೋಜನೆ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಅವರು ತಾವೇ ನಟಿಸಿ, ನಿರ್ಮಾಣ ಮಾಡಿದ್ದ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಯ ಬದಲಿಗೆ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿ ಹೊಸ ಪ್ರಯೋಗ ಮಾಡಿದರು. ಒಟಿಟಿಗಳ ಬಗ್ಗೆ ಮೊದಲಿನಿಂದಲೂ ವಿರೋಧ ಅಭಿಪ್ರಾಯವನ್ನೇ ಹೊಂದಿರುವ ಆಮಿರ್ ಖಾನ್, ಇದೀಗ ಭಾರತೀಯ ಸಿನಿಮಾಗಳು ಹೆಚ್ಚು ಲಾಭ ಗಳಿಸದಿರಲು ಕಾರಣ ಏನು ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಈ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪಿಲ್ಲ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್, ‘ಭಾರತದಲ್ಲಿ ಸುಮಾರು 9,000 ರಿಂದ 10,000 ಚಿತ್ರಮಂದಿರಗಳು ಮಾತ್ರವೇ ಇವೆ. ಭಾರತದಂಥಹಾ ಭಾರಿ ಜನಸಂಖ್ಯೆಯ ದೇಶಕ್ಕೆ ಇದು ಬಹಳ ಕಡಿಮೆ. ಚೀನಾದಲ್ಲಿ ಸುಮಾರು ಒಂದು ಲಕ್ಷದಷ್ಟು ಚಿತ್ರಮಂದಿರಗಳು ಇವೆ. ಅಮೆರಿಕದಲ್ಲೂ ಸಹ ಚಿತ್ರಮಂದಿರಗಳ ಸಂಖ್ಯೆ ಬಹಳ ಹೆಚ್ಚಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಚಿತ್ರಮಂದಿರಗಳಿಲ್ಲ. ಚೀನಾದಲ್ಲಿ ಒಂದು ಸಿನಿಮಾ ಬಿಡುಗಡೆಯಾದಾಗ ಅಲ್ಲಿನ ಮೂಲಸೌಕರ್ಯದ ಕಾರಣದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ’ ಎಂದು ಆಮೀರ್ ಖಾನ್ ಹೇಳಿದ್ದಾರೆ.

‘ಧುರಂಧರ್’ ಸಿನಿಮಾದ ಉದಾಹರಣೆ ನೀಡಿರುವ ಆಮಿರ್ ಖಾನ್, ‘ಧುರಂಧರ್’ ಸಿನಿಮಾ 5,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿ 1,000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಒಂದು ವೇಳೆ ನಮ್ಮಲ್ಲಿ 15,000 ಸ್ಕ್ರೀನ್‌ಗಳು ಲಭ್ಯವಿದ್ದಿದ್ದರೆ, ಈ ಸಿನಿಮಾದ ಗಳಿಕೆ ಇನ್ನೂ ಎಷ್ಟು ಪಟ್ಟು ಹೆಚ್ಚಾಗುತ್ತಿತ್ತು ಎಂದು ಊಹಿಸಿ. ಹಳ್ಳಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇಂದಿಗೂ ಒಂದೂ ಚಿತ್ರಮಂದಿರ ಇಲ್ಲದ ಪ್ರದೇಶಗಳಿವೆ’ ಎಂದಿದ್ದಾರೆ ಆಮಿರ್ ಖಾನ್.

ಇದನ್ನೂ ಓದಿ:‘ನಾವು ಮದುವೆ ಆಗಿದ್ದೇವೆ, ಆದರೆ..’; ದೊಡ್ಡ ಹೇಳಿಕೆ ನೀಡಿದ ಆಮಿರ್ ಖಾನ್

ಮುಂದುವರೆದು ಮಾತನಾಡಿರುವ ಆಮಿರ್ ಖಾನ್, ‘ಕೇವಲ 2 ಪರ್ಸೆಂಟ್ ರಷ್ಟು ಭಾರತೀಯರು ಮಾತ್ರ ದೊಡ್ಡ ಹಿಟ್ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡುತ್ತಾರೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದ ಅವರು, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾದರೆ ಮಾತ್ರ ಸಿನಿಮಾ ಉದ್ಯಮವು ತಳಮಟ್ಟದಲ್ಲಿ ಬೆಳೆಯಲು ಸಾಧ್ಯ ಮತ್ತು ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ. ಚಿತ್ರಮಂದಿರಗಳ ನಿರ್ಮಾಣವನ್ನು ಮೂಲಸೌಕರ್ಯದಂತೆ ಪರಿಗಣಿಸಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ.

ಆಮಿರ್ ಖಾನ್ ಅಭಿಪ್ರಾಯಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಆಮಿರ್ ಖಾನ್ ಯೋಜನೆ ಅದ್ಭುತ ಎಂದರೆ ಇನ್ನು ಕೆಲವರು ಇದು ಅಸಾಧ್ಯ ಎಂದಿದ್ದಾರೆ. 15 ಸಾವಿರ ಚಿತ್ರಮಂದಿರಗಳಿಗೆ ಸಾಕಾಗುವಷ್ಟು ಒಳ್ಳೆಯ ಸಿನಿಮಾಗಳು ಭಾರತದಲ್ಲಿ ನಿರ್ಮಾಣ ಆಗುತ್ತಿಲ್ಲ ಎಂದು ಕೆಲವರು ಹೇಳಿದರು. 15000 ಚಿತ್ರಮಂದಿರ ನಿರ್ಮಾಣ ಮಾಡಲು ಭಾರಿ ಮೊತ್ತದ ಹಣ, ಸ್ಥಳ ಬೇಕಾಗುತ್ತದೆ. ಅಷ್ಟು ಹೂಡಿಕೆ ಮಾಡಿ ಲಾಭಕ್ಕಾಗಿ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BOB Recruitment 2026: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶ; ತಿಂಗಳಿಗೆ ಲಕ್ಷಗಳಲ್ಲಿ ಸಂಬಳ – Kannada News | Bank of Baroda Recruitment 2026: 419 Manager Posts, Apply Online by Feb 26!

ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ವಿವಿಧ ಶಾಖೆಗಳು ಮತ್ತು ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ನಿಯಮಿತ ಹಾಗೂ ಒಪ್ಪಂದದ ಆಧಾರದ ಮೇಲೆ ಹಿರಿಯ ವ್ಯವಸ್ಥಾಪಕ, ಉಪ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಸಹಾಯಕ ಉಪಾಧ್ಯಕ್ಷ ಸೇರಿದಂತೆ ಒಟ್ಟು 419 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ಪದವಿ ಅಥವಾ MBA, PGDM, CA, CFA, CMA ಮುಂತಾದ ವೃತ್ತಿಪರ ಅರ್ಹತೆಗಳನ್ನು ಹೊಂದಿರಬೇಕು. ಜೊತೆಗೆ, ಅಧಿಸೂಚನೆಯಲ್ಲಿ ಸೂಚಿಸಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವವೂ ಅಗತ್ಯವಾಗಿದೆ. ಹುದ್ದೆಗಳ ಪ್ರಕಾರ ವಯೋಮಿತಿ 22 ರಿಂದ 40 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಸರಕಾರದ ನಿಯಮಗಳಂತೆ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಪಿಎಚ್‌ಡಿ ಪಡೆದವರಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಆಸಕ್ತರು ಫೆಬ್ರವರಿ 6 ರಿಂದ ಫೆಬ್ರವರಿ 26ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು . ಅರ್ಜಿ ಶುಲ್ಕವಾಗಿ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 850 ಪಾವತಿಸಬೇಕಾಗಿದ್ದು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಇಎಸ್‌ಎಂ, ಡಿಇಎಸ್‌ಎಂ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಮಾತ್ರ ನಿಗದಿಯಾಗಿದೆ. ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರದೆ, ಅಭ್ಯರ್ಥಿಗಳ ಆಯ್ಕೆ ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.

ಒಟ್ಟಿನಲ್ಲಿ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉತ್ತಮ ಹುದ್ದೆ ಮತ್ತು ಸ್ಥಿರ ವೃತ್ತಿಜೀವನದ ಕನಸು ಕಾಣುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ ಈ ನೇಮಕಾತಿ ಒಂದು ಸುವರ್ಣಾವಕಾಶವಾಗಿದೆ. ಅರ್ಹರು ಅಂತಿಮ ದಿನಾಂಕಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಉತ್ತಮ.

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:36 pm, Sun, 8 February 26

Source link

ENG vs NEP: ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತ ಮಲ್ಲ – Kannada News | T20 World Cup 2026: Debutant Sher Malla Stuns England, Dismisses Phil Salt First Ball!

ಮುಂಬೈನ ವಾಂಖೆಡೆ ಮೈದಾನದಲ್ಲಿ 2026 ರ ಟಿ20 ವಿಶ್ವಕಪ್​ನ ಎರಡನೇ ದಿನದಂದು ಐದನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನೇಪಾಳ ಮುಖಾಮುಖಿಯಾಗಿದ್ದವು. ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಅದರಂತೆ ಇಂಗ್ಲೆಂಡ್ ಪರ ಅನುಭವಿಗಳಾದ ಪಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದರು.

ಇಬ್ಬರು ಹೊಡಿಬಡಿ ದಾಂಡಿಗರಾಗಿರುವುದರಿಂದ ಇಂಗ್ಲೆಂಡ್ ಸ್ಫೋಟಕ ಆರಂಭದ ನಿರೀಕ್ಷೆಯಲ್ಲಿತ್ತು. ಆದರೆ ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲೇ ಇಂಗ್ಲೆಂಡ್​ಗೆ ಆಘಾತ ಎದುರಾಯಿತು. ನೇಪಾಳ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದ ಶೇರ್ ಮಲ್ಲ ಮೊದಲ ಎಸೆತದಲ್ಲೇ ಪಿಲ್ ಸಾಲ್ಟ್ ಅವರ ವಿಕೆಟ್ ಎಗರಿಸಿದರು. ಮಲ್ಲನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟುವ ಯತ್ನದಲ್ಲಿ ಸಾಲ್ಟ್ ಕ್ಯಾಚಿತ್ತು ನಿರ್ಗಮಿಸಿದರು. ಇತ್ತ ಚೊಚ್ಚಲ ಅಂತರರಾಷ್ಟ್ರೀಯ ಹಾಗೂ ಟಿ20 ವಿಶ್ವಕಪ್ ಪಂದ್ಯವನ್ನಾಡುತ್ತಿದ್ದ ಮಲ್ಲ, ತಾನು ಎಸೆದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ನೇಪಾಳ ತಂಡದ ಆಟಗಾರರು ಹಾಗೂ ಅಭಿಮಾನಿಗಳು ಕೂಡ ಸಂತಸ ಅಲೆಯಲ್ಲಿ ಮಿಂದೆದ್ದರು.

Source link

ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು? – Kannada News | Tumakuru: First Wife Halts Husbands Secret Second Marriage Ceremony

ತುಮಕೂರು, ಫೆಬ್ರವರಿ 08: ನಗರದ ಯಡಿಯೂರಿನ ಎಸ್.ಎಲ್.ಎನ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ವಿವಾಹವೊಂದನ್ನು ಮೊದಲ ಪತ್ನಿ ತಡೆದು ನಿಲ್ಲಿಸಿರುವಂತಹ ಘಟನೆ ನಡೆದಿದೆ. ಆ ಮೂಲಕ  ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲನೇ ಪತ್ನಿ ಶಾಕ್ ನೀಡಿದ್ದಾರೆ. ಹರಿಪ್ರಸಾದ್ ಎಂಬುವರು ವಿಚ್ಛೇದನ ನೀಡದೇ ಎರಡನೇ ಮದುವೆಗೆ ಮುಂದಾಗಿದ್ದರು. ಅವರ ಮೊದಲ ಪತ್ನಿ ಲೇಪಾಕ್ಷಿ ಪೊಲೀಸರೊಂದಿಗೆ ಮದುವೆ ಮಂಟಪಕ್ಕೆ ಆಗಮಿಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್​ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ – Kannada News | Narendra Modi Malaysia visit leads 16 initiatives to be announced jointly by 2 countries

ಕೌಲಾಲಂಪುರ್, ಫೆಬ್ರುವರಿ 8: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಲೇಷ್ಯಾ ಭೇಟಿ ಫಲಪ್ರದವಾಗಿದೆ. ಇಂದು ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ಇರುವ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ. ಈ ವರ್ಷದ ಮೊದಲ ವಿದೇಶ ಭೇಟಿಯಾಗಿ ಮಲೇಷ್ಯಾಗೆ ಹೋಗಿದ್ದ ಮೋದಿ ಅವರು ಅಲ್ಲಿಯ ಪ್ರಧಾನಿ ದಾತು ಸೆರಿ ಅನ್ವರ್ ಇಬ್ರಾಹಿಂ (Dato Seri Anwar Ibrahim) ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು.

ಭಾರತ ಮತ್ತು ಮಲೇಷ್ಯಾದಿಂದ ಘೋಷಣೆಯಾದ ಕೆಲ ಜಂಟಿ ಉಪಕ್ರಮಗಳು

  • ಮಲೇಷ್ಯಾದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆಯಲಾಗುವುದು
  • ಮಲೃಷ್ಯಾದ ಪೇಮೆಂಟ್ ಸಿಸ್ಟಂ ಮತ್ತು ಭಾರತದ ಯುಪಿಐ ಪೇಮೆಂಟ್ ಸಿಸ್ಟಂಗಳ ಹೊಂದಿಕೆ ಮಾಡಲಾಗುವುದು. ಇದರೊಂದಿಗೆ ಭಾರತೀಯರು ಮಲೇಷ್ಯಾಗೆ ಹೋದರೆ ಯುಪಿಐ ಮೂಲಕ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ. ಸಿಂಗಾಪುರ ಇತ್ಯಾದಿ ಕೆಲ ದೇಶಗಳಲ್ಲಿ ಈ ರೀತಿ ಹೊಂದಾಣಿಕೆ ವ್ಯವಸ್ಥೆ ಮಾಡಲಾಗಿದೆ.
  • ವಿಪತ್ತು ನಿರ್ವಹಣೆಗೆ ಎರಡೂ ದೇಶಗಳ ಮಧ್ಯೆ ಎಂಒಯು ಒಪ್ಪಂದ.
  • ಭ್ರಷ್ಟಾಚಾರ ನಿಗ್ರಹಕ್ಕಾಗಿ ಎರಡೂ ದೇಶಗಳ ಮಧ್ಯೆ ಸಹಕಾರಕ್ಕೆ ಒಪ್ಪಂದ
  • ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ. ಸೆಮಿಕಂಡಕ್ಟರ್ ಸಪ್ಲೈ ಚೈನ್ ಬಲಪಡಿಸಲು ಇದರಿಂದ ಅನುಕೂಲ.
  • ವಿಶ್ವಸಂಸ್ಥೆ ಶಾಂತಿಪಾಲನೆ ಸಹಕಾರ ವಿಚಾರದಲ್ಲಿ ಭಾರತ ಮತ್ತು ಮಲೇಷ್ಯಾ ಸರ್ಕಾರಗಳ ನಡುವೆ ಪತ್ರ ವಿನಿಮಯ.
  • ಮಲೇಷ್ಯಾದಲ್ಲಿ ಇರುವ ಭಾರತೀಯ ಪ್ರಜೆಗಳಿಗೆ ಇನ್ಷೂರೆನ್ಸ್ ಸೌಲಭ್ಯ ಒದಗಿಸಲು ಇಎಸ್​ಐಸಿ ಮತ್ತು ಪೆರ್ಕೆಸೋ ನಡುವೆ ಸಹಕಾರ ಒಪ್ಪಂದ
  • ಭಾರತ ಮತ್ತು ಮಲೇಷ್ಯಾಗಳ ರಾಷ್ಟ್ರೀಯ ಭದ್ರತಾ ಮಂಡಳಿಗಳ ಮಧ್ಯೆ ಸಹಕಾರ
  • ಆರೋಗ್ಯ ಮತ್ತು ಔಷಧ ಕ್ಷೇತ್ರಗಳಲ್ಲಿ ಸಹಕಾರ
  • ಮಲಯ ಯೂನಿವರ್ಸಿಟಿಯಲ್ಲಿ ತಿರುವಳ್ಳುವರ್ ಸೆಂಟರ್ ಸ್ಥಾಪನೆಗೆ ಕ್ರಮ
  • ಮಲೇಷ್ಯಾದ ಸೈಬರ್​ಜಯಾ ಯೂನಿವರ್ಸಿಟಿ ಮತ್ತು ಆಯುರ್ವೇದ ತರಬೇತಿ, ಸಂಶೋಧನಾ ಸಂಸ್ಥೆಯಾದ ಐಟಿಆರ್​ಎ ನಡುವೆ ಎಂಒಯು ಒಪ್ಪಂದ.

ಇದನ್ನೂ ಓದಿ: ನೀವೇ ಭಾರತ- ಮಲೇಷ್ಯಾ ನಡುವಿನ ಜೀವಂತ ಸೇತುವೆ; ಭಾರತೀಯ ವಲಸಿಗರ ಜೊತೆ ಪ್ರಧಾನಿ ಮೋದಿ ಸಂವಾದ

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

vijayapura plane crashed : ವಿಜಯಪುರದಲ್ಲಿ ವಿಮಾನ ಪತನ – Kannada News | Two Injured private plane crashes in mangalore at vijayapura

ವಿಜಯಪುರ, ಫೆಬ್ರವರಿ 08):: ಬಬಲೇಶ್ವರ ತಾಲೂಕಿನ ಮಂಗಳೂರು (Mangaluru) ಗ್ರಾಮದಲ್ಲಿ ಜೆಟ್ ವಿಮಾನವೊಂದು (Private Jet Plane) ಪತನವಾಗಿದೆ. ಇಂದು (ಫೆಬ್ರವರಿ 08) ಮಧ್ಯಾಹ್ನ ವೇಳೆ ರೆಡ್ ಬರ್ಡ್ ಖಾಸಗಿ ಜೆಟ್ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿಸಲಾಗಿದೆ. ಕಲಬುರಗಿಯಿಂದ ಬೆಳಗಾವಿಗೆ (Belagavi) ತೆರಳುತ್ತಿದ್ದ ವೇಳೆ ಇಂಧನ ಖಾಲಿಯಾದ ಕಾರಣ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ರೆಡ್ ಬರ್ಡ್‌ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ರೈತರ ಜಮೀನಿನ ಮೇಲೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೆಟ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ಸ್ಥಳಕ್ಕೆ ಬಬಲೇಶ್ವರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ಏನು ಕಾರಣ ಎನ್ನುವುದು ತಿಳಿದುಬರಬೇಕಿದೆ.

Published On – 3:56 pm, Sun, 8 February 26

Source link

T20 World Cup: ಆ ಅವಮಾನಕರ ಸೋಲಿಗೆ 610 ದಿನಗಳ ನಂತರ ಸೇಡು ತೀರಿಸಿಕೊಂಡ ಕಿವೀಸ್ – Kannada News | T20 World Cup 2026: New Zealand Chases 182 to Beat Afghanistan, Seifert Shines

2026 ರ ಟಿ20 ವಿಶ್ವಕಪ್​ನ (T20 World Cup 2026) ಎರಡನೇ ದಿನದ ಮೊದಲ ಪಂದ್ಯದಂದು ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ (New Zealand vs Afghanistan) ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ಕೆಲವು ವರ್ಷಗಳಿಂದ ಅಫ್ಘನ್ ತಂಡ ಕೂಡ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯವನ್ನು ತೋರಿಸಿರುವುದರಿಂದ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದರ ಜೊತೆಗೆ ಕಳೆದ ವಿಶ್ವಕಪ್​ನಲ್ಲಿ ಇದೇ ನ್ಯೂಜಿಲೆಂಡ್ ತಂಡವನ್ನು ಭಾರಿ ಅಂತರದಿಂದ ಅಫ್ಘಾನಿಸ್ತಾನ ಮಣಿಸಿತ್ತು. ಅಂತಿಮವಾಗಿ ಈ ಸೇಡಿನ ಸಮರದಲ್ಲಿ ಗೆದ್ದು ಬೀಗುವುದರಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ182 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಇನ್ನು 13 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ, ನ್ಯೂಜಿಲೆಂಡ್ 2024 ರ ವಿಶ್ವಕಪ್‌ನಲ್ಲಿ ತನ್ನ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿತು.

610 ದಿನಗಳ ಹಳೆಯ ಸೇಡು

ಸರಿಯಾಗಿ 610 ದಿನಗಳ ಹಿಂದೆ ಅಂದರೆ ಜೂನ್ 8, 2024 ರಂದು ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಕೇವಲ 75 ರನ್‌ಗಳಿಗೆ ಆಲೌಟ್ ಮಾಡಿ 84 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು. ಪರಿಣಾಮವಾಗಿ, ಚೆನ್ನೈ ಪಿಚ್‌ನಲ್ಲೂ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿತ್ತು. ವಿಶೇಷವಾಗಿ ಭಾರತ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಸ್ಪಿನ್ನರ್‌ಗಳ ವಿರುದ್ಧ ಕಿವೀಸ್ ಬ್ಯಾಟ್ಸ್‌ಮನ್‌ಗಳ ಹೋರಾಟವನ್ನು ಪರಿಗಣಿಸಿದರೆ, ಅಫ್ಘಾನಿಸ್ತಾನವು ಅಸಾಧಾರಣ ಸವಾಲಾಗಿ ಪರಿಣಮಿಸಿತ್ತು.

ಸೀಫರ್ಟ್ ಗೆಲುವಿನ ಇನ್ನಿಂಗ್ಸ್

ಇದಕ್ಕೆ ಪೂರಕವಾಗಿ 182 ರನ್​ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಆರಂಭಿಕರಾದ ಫಿನ್ ಅಲೆನ್ ಮತ್ತು ರಚಿನ್ ರವೀಂದ್ರ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು. ಆದಾಗ್ಯೂ, ಆ ಬಳಿಕ ಜೊತೆಯಾದ ಟಿಮ್ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ 74 ರನ್‌ಗಳ ಜೊತೆಯಾಟ ನಡೆಸಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇದೇ ವೇಳೆ ಸೀಫರ್ಟ್ 65 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕೂಡ ಆಡಿದರು. ಅವರಿಗೆ ಮಾರ್ಕ್ ಚಾಪ್ಮನ್ ಕೂಡ ಸಾಥ್ ನೀಡಿ 28 ರನ್​ಗಳ ಕಾಣಿಕೆ ನೀಡಿದರು. ಇಬ್ಬರೂ ಔಟಾದಾಗ, ನ್ಯೂಜಿಲೆಂಡ್ 26 ಎಸೆತಗಳಲ್ಲಿ ಕೇವಲ 28 ರನ್ ಗಳಿಸಬೇಕಾಗಿತ್ತು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಮುಂದಿನ 13 ಎಸೆತಗಳಲ್ಲಿ 28 ರನ್ ಗಳಿಸಿ ಕೇವಲ 17.5 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

182 ರನ್ ದಾಖಲಿಸಿದ ಅಫ್ಘಾನಿಸ್ತಾನ

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘನ್ ತಂಡದ ಆರಂಭ ಕಳಪೆಯಾಗಿತ್ತು. ಪವರ್‌ಪ್ಲೇನಲ್ಲಿ ಇಬ್ಬರೂ ಆರಂಭಿಕರು ಕೇವಲ 44 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಒಂದೇ ಓವರ್‌ನಲ್ಲಿ ಲಾಕಿ ಫರ್ಗುಸನ್ ಇಬ್ಬರನ್ನೂ ಔಟ್ ಮಾಡಿದರು. ಆದಾಗ್ಯೂ, ನಂತರ ಗುಲ್ಬದಿನ್ ಮತ್ತು ಸೆಡಿಕುಲ್ಲಾ ಅಟಲ್ ಸುಮಾರು 80 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಗುಲ್ಬದಿನ್ ಕೇವಲ 35 ಎಸೆತಗಳಲ್ಲಿ 63 ರನ್ ಗಳಿಸಿದರೆ, ಮೊಹಮ್ಮದ್ ನಬಿ, ದರ್ವಿಶ್ ರಸೂಲಿ ಮತ್ತು ಅಜ್ಮತುಲ್ಲಾ ಒಮರ್‌ಜೈ ಕೊನೆಯ ಓವರ್‌ಗಳಲ್ಲಿ ಅಲ್ಪ ಹಾಗೂ ಉಪಯುಕ್ತ ಕಾಣಿಕೆ ನೀಡಿ ತಂಡವನ್ನು 182 ರನ್‌ಗಳಿಗೆ ಕೊಂಡೊಯ್ದರು. ಆದರೆ ಕಿವೀಸ್ ಅಬ್ಬರದ ಮುಂದೆ ಅಫ್ಘನ್ ಗೆಲುವಿಗೆ ಇಷ್ಟು ರನ್ ಸಾಕಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:44 pm, Sun, 8 February 26

Source link

ಯಶ್ ತಾಯಿ ಪುಷ್ಪಾ ಸೈಟ್ ವಿವಾದ: ಇಷ್ಟು ದಿನಗಳ ಬಳಿಕ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ಲಕ್ಷ್ಮಮ್ಮ – Kannada News | Yash mother Pushpa Arun Kumar property dispute in Hassan 93 years old Lakshmamma reacts

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರ ನಿವೇಶನದ ಗಲಾಟೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಈಗ ಒಂದು ಟ್ವಿಸ್ಟ್ ಸಿಕ್ಕಿದೆ. ಈ ನಿವೇಶನದ ಮೂಲ ಮಾಲಕಿ ಎನ್ನಲಾದ ಲಕ್ಷ್ಮಮ್ಮ ಅವರು ಪ್ರತ್ಯಕ್ಷರಾಗಿದ್ದಾರೆ. ‘ಪುಷ್ಪ ಅರುಣ್ ಕುಮಾರ್ ಅವರ ಜಾಗ ಬೇರೆ ಕಡೆ ಇದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ಕಟ್ಟಿಸಿದ್ದರು. ಅದನ್ನು ತೆಗೆಸಿದ್ದೇವೆ’ ಎಂದು ಲಕ್ಷ್ಮಮ್ಮ (Lakshmamma) ಅವರು ಹೇಳಿದ್ದಾರೆ. ಸದ್ಯಕ್ಕೆ ಲಕ್ಷ್ಮಮ್ಮ ಅವರು ಮೈಸೂರಿನಲ್ಲಿ ಇದ್ದಾರೆ.

‘ನನಗೆ 93 ವರ್ಷ. ನಾನು ಮೈಸೂರಿನಲ್ಲಿ ಇರುವುದು. ಹಾಸನಕ್ಕೆ ಬರುವುದು ಸ್ವಲ್ಪ ತಾಪತ್ರಯ ಆಗುತ್ತದೆ. ಅದಕ್ಕಾಗಿ ದೇವರಾಜ್ ಅವರಿಗೆ ಜಿಪಿಎ ಹೋಲ್ಡರ್ ಮಾಡಿದ್ದೇನೆ. ಪುಷ್ಪಾ ಅವರ ಜಾಗಕ್ಕೂ ನಮಗೂ ಸಂಬಂಧವೇ ಇಲ್ಲ. ಅವರದ್ದು ಆ ರಸ್ತೆಯಲ್ಲಿದೆ, ನಮ್ಮದು ಈ ರಸ್ತೆಯಲ್ಲಿದೆ. ಯಶ್ ತಾಯಿ ಅಲ್ಲಿಗೆ ಯಾಕೆ ಹೋಗುತ್ತಾರೆ ಅಂತ ಗೊತ್ತಿಲ್ಲ’ ಎಂದಿದ್ದಾರೆ ಲಕ್ಷ್ಮಮ್ಮ.

ಈ ಬಗ್ಗೆ ಪುಷ್ಪಾ ಅರುಣ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಲಕ್ಷ್ಮಮ್ಮ ಎಂಬುವವರು ಇದ್ದಾರೆ ಎಂಬುದನ್ನು ಕೇಳಿ ತಿಳಿದಿದ್ದೆ. ದಾಖಲೆ ತೆಗೆದಾಗ ಲಕ್ಷ್ಮಮ್ಮ ಅವರಿಂದ ಬೇರೆಯವರಿಗೆ ಹಸ್ತಾಂತರ ಆಗಿ 45 ವರ್ಷಗಳು ಕಳೆದಿವೆ. ಈಗ ಅವರನ್ನು ಟಿವಿಯಲ್ಲಿ ನೋಡಿದೆ. ಖಾತೆ ಮಾಡಿರುವುದು ನಾನು, ಕಂದಾಯ ಕಟ್ಟಿರುವುದು ನಾನು. ಅವರ ಹೆಸರಿನಲ್ಲಿ ಯಾಕೆ ಕಂದಾಯ ಬಂದಿಲ್ಲ? ದೇವರಾಜ್ ಅವರ ಜೊತೆ ಲಕ್ಷ್ಮಮ್ಮ ಅವರು ಭಾಗಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತದೆ’ ಎಂದು ಪುಷ್ಪಾ ಅರುಣ್ ಕುಮಾರ್ ಅವರು ಹೇಳಿದ್ದಾರೆ.

‘ನಮಗೆ ಏನೂ ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ. ಹಿಂದೆ ಇರುವ ಎರಡು ಸೈಟ್​​ಗಳಿಗೂ ಇದೇ ರೀತಿ ಮಾಡಿದ್ದಾರೆ. ಸತೀಶ್ ಪಟೇಲ್, ಲಾಯರ್ ಶೇಖರ್, ಡಿಪಿಒ ನಟರಾಜ್, ದೇವರಾಜೇಗೌಡ ಎಲ್ಲರೂ ಸೇರಿ ಹಾಸನದಲ್ಲಿ ಈ ರೀತಿ ದಂಧೆ ಮಾಡಿದ್ದಾರೆ. ಇದನ್ನು ನಾನು ಬಯಲಿಗೆ ಎಳೆಯುತ್ತೇವೆ. ಪ್ರತಿಯೊಬ್ಬರಿಗೂ ತೊಂದರೆ ಆಗಿದೆ ಅಂತ ಜನರು ನನಗೆ ಮಾಹಿತಿ ಕೊಡುತ್ತಿದ್ದಾರೆ’ ಎಂದಿದ್ದಾರೆ ಪುಷ್ಪಾ ಅರುಣ್ ಕುಮಾರ್.

ಇದನ್ನೂ ಓದಿ: ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ

‘ಸರ್ಕಾರ ಅವರಿಗೆ ಮೋಸ ಮಾಡಿದ್ದರೆ ಅವರು ಸರ್ಕಾರವನ್ನು ಕೇಳಬೇಕು. ನಮ್ಮ ಮೇಲೆ ಫೈಟ್ ಮಾಡೋದಲ್ಲ. ನಾನು 2020ಕ್ಕೂ ಮುಂಚೆ ಈ ನಿವೇಶನ ತೆಗೆದುಕೊಂಡಿದ್ದೆ. ಈ ಹಿಂದೆ ತಪ್ಪು ಏನಾದರೂ ಆಗಿತ್ತಾ ಎಂಬುದನ್ನು ವಿಚಾರಿಸಿದ್ದೇನೆ. ಆ ರೀತಿ ಆಗಿಲ್ಲ. ದೇವರಾಜ್, ಸತೀಶ್ ಅವರು ಹೆಣ್ಮಕ್ಕಳ ಬಗ್ಗೆ ಹೀನಾಮಾನ ಮಾತಾಡಿದ್ದಾರೆ. ಅದನ್ನು ನಾನು ಮಹಿಳಾ ಆಯೋಗಕ್ಕೆ ನೀಡುತ್ತೇನೆ’ ಎಂದು ಪುಷ್ಪಾ ಅವರು ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ – Kannada News | Chamarajanagar: Farmer Killed by Wild Elephants in Tamil Nadu Border Village Karalavadi; Region Conflict

ಚಾಮರಾಜನಗರ, ಫೆಬ್ರವರಿ 08: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನ ಮೇಲೆ 9 ಕಾಡಾನೆಗಳ (Wild Elephant) ಹಿಂಡು ದಾಳಿ ಮಾಡಿದ ಪರಿಣಾಮ ರೈತ ಬಲಿಯಾಗಿರುವಂತಹ (death) ಘಟನೆ ಚಾಮರಾಜನಗರ ಗಡಿ ಗ್ರಾಮವಾದ ತಮಿಳುನಾಡಿನ ಕರಳವಾಡಿಯಲ್ಲಿ‌ ನಡೆದಿದೆ. ಗಜಪಡೆಯ ಅಟ್ಟಹಾಸಕ್ಕೆ ಕರಳವಾಡಿ ಗ್ರಾಮದ ಮಹೇಶ್ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಸತ್ಯಮಂಗಲ ಟೈಗರ್ ರಿಸರ್ವ್ ಫಾರೆಸ್ಟ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ರೈತ ಮಹೇಶ್​​, ಜಮೀನಿನಲ್ಲಿ ಕಾವಲು ಕಾಯುತ್ತಿದ್ದರು. ಈ ವೇಳೆ 9 ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಈ ವೇಳೆ ಅಕ್ಕ, ಪಕ್ಕದ ಜಮೀನಿನವರು ಎಷ್ಟೇ ಕೂಗಾಡಿದರೂ ಕಾಡಾನೆ ಹಿಂಡು ಬಿಟ್ಟಿಲ್ಲ. ಗಜಪಡೆಯ ಅಟ್ಟಹಾಸಕ್ಕೆ ಮಹೇಶ್​ ಬಲಿಯಾಗಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಕಾಡಾನೆಗಳ ಹಿಂಡು ಓಡಾಟ ಮಾಡುತ್ತಿವೆ. ಸದ್ಯ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ಮಾಡಿದ್ದಾರೆ.

ಕೂಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿ: ವ್ಯಕ್ತಿ ಸಾವು

ಇನ್ನು ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ತಮಿಳುನಾಡಿನ ಮಾಕಪಾಳ್ಯ ಗ್ರಾಮದ ನಿವಾಸಿ ಶಿವಮೂರ್ತಿ ಮೃತ ದುರ್ದೈವಿ.

ಕೂಲಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಶಿವಮೂರ್ತಿ, ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಹೂಗ್ಯಂ ವಲಯದ ಜಲ್ಲಿಪಾಳ್ಯ ಭಾಗದಲ್ಲಿ ಕಾಡಾನೆಗಳ ಹಿಂಡು ಅಡ್ಡ ಬಂದಿದ್ದು, ಏಕಾಏಕಿ ಆನೆಗಳು ದಾಳಿ ನಡೆಸಿದ್ದವು.

ಇದನ್ನೂ ಓದಿ: ಹಾಸನ: ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ, ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿರುವುದರಿಂದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಮಾರ್ಗಗಳಲ್ಲಿ ಸಂಚರಿಸುವಾಗ ಎಚ್ಚರ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link