ಬೆಂಗಳೂರು ಚಿತ್ರೋತ್ಸವದ ಕೊನೆಯ ದಿನ ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ – Kannada News | 10 Best movies to watch on last day in 17th Bengaluru International Film Festival
ಜನವರಿ 29ರಿಂದ ಫೆಬ್ರವರಿ 6ರ ತನಕ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival) ನಡೆದಿದೆ. ಫೆಬ್ರವರಿ 6ರಂದು ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ನಟಿ, ನಿರ್ಮಾಪಕಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪಾರ್ವತಮ್ಮ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್ಕುಮಾರ್, ಎಸ್. ರಾಮಚಂದ್ರ ಪರವಾಗಿ ಅವರ ಪುತ್ರಿ ಉಷಾ…