ಜಮ್ಮು ಕಾಶ್ಮೀರದ ಎಲ್ಒಸಿ ಬಳಿ ಆಕಸ್ಮಿಕ ಗ್ರೆನೇಡ್ ಸ್ಫೋಟ; ನಾಲ್ವರು ಭಾರತೀಯ ಯೋಧರಿಗೆ ಗಾಯ – Kannada News | 4 Soldiers Injured In Blast Near LoC in Jammu and Kashmir Rajouri
ಶ್ರೀನಗರ, ಜೂನ್ 16: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (LoC) ಮುಂಚೂಣಿ ಪ್ರದೇಶದಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಭಾರತೀಯ ಸೇನೆಯ ನಾಲ್ವರು ಸೈನಿಕರು ಗಾಯಗೊಂಡಿರುವ ಘಟನೆ ನಡೆದಿದೆ. ರಕ್ಷಣಾ ಇಲಾಖೆಯ ಪ್ರಕಟಣೆಯ ಪ್ರಕಾರ, ಯೋಧರು ಗಡಿ ಭಾಗದಲ್ಲಿ ನಿಯಮಿತ ಗಸ್ತು ಕಾರ್ಯದಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಗಡಿ ಭಾಗದಲ್ಲಿ ಯೋಧರ ತಂಡವೊಂದು ಕರ್ತವ್ಯದಲ್ಲಿದ್ದಾಗ, ಅವರ ಬಳಿಯಿದ್ದ ಗ್ರೆನೇಡ್‌ವೊಂದು ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ನಾಲ್ವರು…