All posts by nagaraj11081993

ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್ – Kannada News | Manvi Police Bust Prostitution Racket: 11 Arrested for Trapping Unemployed Women in Raichur

ರಾಯಚೂರು, ಏಪ್ರಿಲ್ 28: ಉದ್ಯೋಗ ನೀಡುವ ನೆಪದಲ್ಲಿ ನಿರುದ್ಯೋಗಿ ಮಹಿಳೆಯರನ್ನು ದಂಧೆಗೆ ಇಳಿಸುತ್ತಿದ್ದ ಜಾಲವನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೊಲೀಸರು ಭೇದಿಸಿದ್ದಾರೆ. ಹಿರೇಕೊಟ್ನೆಕಲ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ (Prostitution) ದಂಧೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಿಂಗ್‌ಪಿನ್ ತಾಯಪ್ಪ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಸ್ಟರ್ ಮೈಂಡ್ ತಾಯಪ್ಪ!

ಮಾನ್ವಿ ಪಟ್ಟಣದ ಇಂದಿರಾನಗರದ ನಿವಾಸಿಯಾದ ತಾಯಪ್ಪ ಈ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದು, ಆಂಧ್ರಪ್ರದೇಶ, ತೆಲಂಗಾಣ, ಬೆಳಗಾವಿ ಹಾಗೂ ಮಹಾರಾಷ್ಟ್ರದ ನಿರುದ್ಯೋಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ. ಅವರಿಗೆ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ನಂತರ ಬಲವಂತವಾಗಿ ದಂಧೆಗೆ ತಳ್ಳುತ್ತಿದ್ದ ಎನ್ನಲಾಗಿದೆ. ಹಿರೇಕೊಟ್ನೆಕಲ್ ಗ್ರಾಮದ ಹೊರವಲಯದ ಜಮೀನುಗಳನ್ನು ಈ ಅಕ್ರಮ ಚಟುವಟಿಕೆಗೆ ಅಡ್ಡೆಯನ್ನಾಗಿ ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ ಮನೆ, ಸ್ಪಾಗಳಲ್ಲಿ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ, 6 ಮಹಿಳೆಯರ ರಕ್ಷಣೆ

ಆರೋಪಿಗಳು ಸೆರೆ

ವಿಷಯ ತಿಳಿದ ಮಾನ್ವಿ ಪೊಲೀಸರು ಜಮೀನಿನ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ಕಿಂಗ್‌ಪಿನ್ ತಾಯಪ್ಪ, ಅಮರೇಶ್, ಹುಸೇನಪ್ಪ, ಪ್ರಕಾಶ್, ಆದೇಶ್, ವಿಜಯಕುಮಾರ್, ಶರಣಬಸವ ಹಾಗೂ ಮಲ್ಲಿಕಾರ್ಜುನ ಸೇರಿದಂತೆ 11 ಮಂದಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಟಿಕೆಟ್ ಬ್ಲಾಕ್ ದಂಧೆಗೆ ಪೊಲೀಸರ ಬ್ರೇಕ್: 24 ಮಂದಿ ಅರೆಸ್ಟ್, 17 ಕೇಸ್ ದಾಖಲು! – Kannada News | IPL 2026: Bengaluru Police Crack Down on Ticket Black Marketing; 24 Arrested and 37 Tickets Seized

ಬೆಂಗಳೂರು, ಏಪ್ರಿಲ್ 28: ಐಪಿಎಲ್ ಪಂದ್ಯಾವಳಿಗಳ ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಬ್ಲಾಕ್ ಮಾರ್ಕೆಟ್ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ, ಪೊಲೀಸರು 17 ಪ್ರಕರಣಗಳನ್ನು ದಾಖಲಿಸಿದ್ದು, ಈ ಸಂಬಂಧ 24 ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ 37 ಐಪಿಎಲ್ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ಪ್ರಕರಣಗಳು ದಾಖಲಾಗಿದ್ದರೆ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕ್ರಿಕೆಟ್ ಪ್ರೇಮಿಗಳ ಆಸೆಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಲಾಭ ಗಳಿಸಲು ಯತ್ನಿಸುತ್ತಿದ್ದ ದಂಧೆಕೋರರನ್ನು ಸಿಸಿಬಿ ಅಧಿಕಾರಿಗಳು ಸಹ ದಾಳಿ ನಡೆಸಿ ಬಂಧಿಸಿದ್ದಾರೆ. ಈ ಮೂಲಕ ಐಪಿಎಲ್ ಟಿಕೆಟ್ ಬ್ಲಾಕ್ ಮಾರ್ಕೆಟ್​​ಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs RCB: ಜಾಕೋಬ್ ಬೆಥೆಲ್‌ ಸಿಡಿಸಿದ 104 ಮೀಟರ್ ಸಿಕ್ಸ್ ಕಂಡು ಶಾಕ್ ಆದ ಕೊಹ್ಲಿ: ವಿಡಿಯೋ ನೋಡಿ – Kannada News | Virat Kohli shocked by Jacob Bethell’s 104 meter six in DC vs RCB Match Watch video

ಬೆಂಗಳೂರು (ಏ. 28): 2026 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಆರ್‌ಸಿಬಿಯ ಸ್ಟಾರ್ ಮತ್ತು ಯುವ ಇಂಗ್ಲಿಷ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ (Jacob Bethell) ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಜಾಕೋಬ್ ಸಣ್ಣ ಇನ್ನಿಂಗ್ಸ್ ಆಡಿದರೂ, ಇವರು ಬಾರಿಸಿದ ಒಂದು ಶಾಟ್ ಎಲ್ಲರನ್ನೂ ದಂಗಾಗಿಸಿತು. ಜಾಕೋಬ್ ಬೆಥೆಲ್ ಡೆಲ್ಲಿ ಕ್ಯಾಪಿಟಲ್ಸ್​ನ ವೇಗಿ ಕೈಲ್ ಜೇಮಿಸನ್ ಬೌಲಿಂಗ್​ನಲ್ಲಿ ಅದ್ಭುತವಾದ ಸಿಕ್ಸರ್ ಬಾರಿಸಿದರು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತದೆ.

ಜೇಮಿಸನ್ ಬೌಲಿಂಗ್​ನಲ್ಲಿ 104 ಮೀಟರ್ ಸಿಕ್ಸ್ ಸಿಡಿಸಿದ ಬೆಥೆಲ್

ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಡೆಲ್ಲಿ ಕ್ಯಾಪಿಟಲ್ಸ್ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೂರನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಅವರ ಓವರ್‌ನಲ್ಲಿ, ಜಾಕೋಬ್ ಬೆಥೆಲ್ ಶಾರ್ಟ್ ಬಾಲ್‌ನಲ್ಲಿ ಔಟಾದರು, ಆದರೆ ಇದಕ್ಕೂ ಮುನ್ನ 104 ಮೀಟರ್ ಉದ್ದದ ಸಿಕ್ಸ್ ಬಾರಿಸಿದ್ದು ಅದ್ಭುತವಾಗಿತ್ತು. ಅವರು ಜೇಮಿಸನ್ ಎಸೆತದಲ್ಲಿ ಅದ್ಭುತ ಪುಲ್ ಶಾಟ್ ಹೊಡೆದರು. ಇದನ್ನು ಫ್ಯಾನ್ಸ್ ಮಾತ್ರವಲ್ಲದೆ ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡ ದಂಗಾಗಿ ಹೋದರು. ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಈ ಸಿಕ್ಸ್‌ನ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಜಾಕೋಬ್ ಬೆಥೆಲ್ ಸಿಡಿಸಿದ ಸಿಕ್ಸ್​ನ ವಿಡಿಯೋ:

ಆರ್‌ಸಿಬಿ ತಂಡ ದೆಹಲಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು

ಏಪ್ರಿಲ್ 27 ರಂದು ನಡೆದ ದೆಹಲಿ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡವು ಡಿಸಿ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ತೀರಾ ಕಳಪೆ ಮಟ್ಟದಲ್ಲಿತ್ತು. ಡೆಲ್ಲಿ ತಂಡವು ಕೇವಲ 75 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ 76 ರನ್‌ಗಳ ಗುರಿಯನ್ನು ಬೆನ್ನಟ್ಟಿತು.

DC vs RCB, IPL 2026: ಆರ್‌ಸಿಬಿ ವಿರುದ್ಧದ ಅವಮಾನಕರ ಸೋಲಿನ ನಂತರ ಅಕ್ಷರ್ ಪಟೇಲ್​ರಿಂದ ದೊಡ್ಡ ಹೇಳಿಕೆ

12 ಅಂಕ ಸಂಪಾದಿಸಿದ ಬೆಂಗಳೂರು ತಂಡ

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡುತ್ತಿದೆ. ಅವರು ತಮ್ಮ ಎಂಟು ಪಂದ್ಯಗಳಲ್ಲಿ ಆರನ್ನು ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಕ್ಷೀಣಿಸುತ್ತಿದೆ. ಅಕ್ಷರ್ ಪಡೆ ತಮ್ಮ ಎಂಟು ಪಂದ್ಯಗಳಲ್ಲಿ ಐದರಲ್ಲಿ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ರಿಲೀಸ್ ಆದ ಒಂದೇ ವಾರಕ್ಕೆ ‘ಜನ ನಾಯಗನ್’ ತೆರೆಗೆ? ಯಾಕೀ ನಿರ್ಧಾರ? – Kannada News | Thalapathy Vijay’s ‘Jan Nayagan’: Why Release Just After K.D. Amidst Delays and Leaks?

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 9ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಈವರೆಗೆ ಸಿನಿಮಾದ ರಿಲೀಸ್ ಬಗ್ಗೆ ಅಪ್​​​ಡೇಟ್ ಸಿಕ್ಕಿಲ್ಲ. ಈಗ ‘ಜನ ನಾಯಗನ್’ಗೆ ನಾಲ್ಕು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ವರದಿ ಆಗಿದೆ. ಕೆಲವು ವರದಿಗಳ ಪ್ರಕಾರ ಸಿನಿಮಾ ಮೇ 8ರಂದು ತೆರೆಗೆ ಬರಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಲಿದೆ ಎಂದು ವರದಿ ಆಗಿದೆ. ಈ ವಿಷಯದಲ್ಲಿ ಸಾಕಷ್ಟು ಗೊಂದಲವೂ ಇದೆ.
‘ಕೆವಿಎನ್​’ ಸಂಸ್ಥೆ ‘ಜನ ನಾಯಗನ್’ ಚಿತ್ರ ನಿರ್ಮಾಣ ಮಾಡಿದೆ. ಇದೇ ಸಂಸ್ಥೆ ಬಂಡವಾಳ ಹೂಡಿರುವ ‘ಕೆಡಿ’ ಚಿತ್ರ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಇದಾದ ಒಂದೇ ವಾರಕ್ಕೆ ‘ಜನ ನಾಯಗನ್’ ಸಿನಿಮಾ ತೆರೆಗೆ ಬರಲು ಸಾಧ್ಯವೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.ಈ ಗೊಂದಲಕ್ಕೆ ಶೀಘ್ರವೇ ಉತ್ತರ ಸಿಗಬೇಕಿದೆ.

ದಳಪತಿ ವಿಜಯ್ ಅವರು ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ನೀತಿ ಸಂಹಿತೆ ಜಾರಿ ಇದ್ದ ಹಿನ್ನೆಲೆಯಲ್ಲಿ ‘ಜನ ನಾಯಗನ್’ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಮುಗಿದಿದೆ. ಮೇ 4ರಂದು ಫಲಿತಾಂಶ ಹೊರ ಬರಲಿದೆ. ಈ ಹಿನ್ನೆಲೆಯಲ್ಲಿ ಮೇ 8ನ್ನು ತಂಡ ಆಯ್ಕೆ ಮಾಡಿತೇ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ‘ಜನ ನಾಯಗನ್’ ಸಿನಿಮಾ ಮೇಲಿನ ನಿರೀಕ್ಷೆ ಕೊಂಚ ಮಟ್ಟಿಗೆ ಕಡಿಮೆ ಆಗಿದೆ. ಇದಕ್ಕೆ ಕಾರಣ ಆಗಿರೋದು ಸಿನಿಮಾದ ದೃಶ್ಯಗಳು ಲೀಕ್ ಆಗಿದ್ದು. ಹೀಗಾಗಿ, ಆದಷ್ಟು ಬೇಗ ಸಿನಿಮಾನ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ. ಮೇ 4ರಂದು ತಮಿಳುನಾಡು ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ವಿಜಯ್ ಪಕ್ಷ ಎಷ್ಟು ಸೀಟ್ ಗೆದ್ದಿದೆ ಎಂಬ ವಿಷಯವೂ ಸಿನಿಮಾ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅವರ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಸಿನಿಮಾ ಸೂಪರ್ ಹಿಟ್ ಆಗಬಹುದು.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾಕ್ಕೆ ಅಂದುಕೊಳ್ಳದೆ ಸಿಕ್ತು ‘ಗೋಲ್ಡನ್ ಟೈಮ್?’

ಏಪ್ರಿಲ್ 30ರಂದು ‘ಕೆಡಿ’ ತೆರೆಗೆ ಬರುತ್ತಿದೆ. ಜೂನ್ 4ರಂದು ‘ಟಾಕ್ಸಿಕ್’ ಬರಲಿದೆ. ಒಂದೊಮ್ಮೆ  ಮೇ ಮೊದಲ ವಾರ ಅಥವಾ ಎರಡನೇ ವಾರ ಮಿಸ್ ಆಯಿತು ಎಂದರೆ ಆ ಬಳಿಕ ‘ಜನ ನಾಯಗನ್’ ರಿಲೀಸ್ ಮಾಡಲು ಜುಲೈವರೆಗೂ ಸಾಧ್ಯವಾಗುವುದಿಲ್ಲ. ಹೀಗಾಗಿ, ತಂಡದವರು ಮೇ 8 ಎಂದು ನಿರ್ಧರಿಸಿದರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:08 am, Tue, 28 April 26

Source link

ಬೆಂಕಿ ಅವಘಡ: ಪ್ರಾಣ ಲೆಕ್ಕಿಸದೇ ಪಿಜಿಯಿಂದ ಹಾರಿ ಜೀವ ಉಳಿಸಿಕೊಂಡ ಯುವತಿಯರು, 50 ಮಂದಿ ಜಸ್ಟ್ ಮಿಸ್ – Kannada News | Bengaluru: 50 PG Girls Narrowly Escape After Banner Warehouse Catches Fire in Nandini Layout; Dramatic CCTV Footage Emerges

ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ರಾಜಕುಮಾರ್ ಸ್ಮಾರಕದ ಸಮೀಪದ ಬ್ಯಾನರ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 50 ಯುವತಿಯರು ಅಪಾಯದಿಂದ ಪಾರಾಗಿದ್ದು, ಭಾರಿ ದುರಂತ ತಪ್ಪಿದೆ. ಬೆಂಕಿ ಗೋದಾಮಿಗೆ ಹತ್ತಿಕೊಂಡು ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಪಿಜಿ ಕಟ್ಟಡಕ್ಕೂ ವ್ಯಾಪಿಸಲು ಶುರುವಾಗಿತ್ತು. ಬೆಂಕಿ ಹೊತ್ತಿಕೊಳ್ಳುವುದನ್ನು ಗಮನಿಸಿದ ತಕ್ಷಣ, ಪಿಜಿಯಲ್ಲಿ ವಾಸವಿದ್ದ ಯುವತಿಯರು ಪ್ರಾಣದ ಹಂಗು ತೊರೆದು ಕಟ್ಟಡದಿಂದ ಹೊರಗೆ ಜಿಗಿದು ಓಡಿದ್ದಾರೆ. ಕೆಲವರು ಜೀವ ಉಳಿಸಿಕೊಳ್ಳಲು ಜಿಗಿದು ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿಯರು ಚೀರಾಡುತ್ತಾ ಕಟ್ಟಡದಿಂದ ಹೊರಬರುವುದು ಸ್ಪಷ್ಟವಾಗಿ ದಾಖಲಾಗಿದೆ ಸಿಸಿಟಿವಿ ದೃಶ್ಯಾವಳಿ ಸಹಿತ ವರದಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಮೂಹಿಕ ವಿವಾಹದಲ್ಲಿ ಅನಿರೀಕ್ಷಿತ ಅತಿಥಿಯಾಗಿ ಬಂದ ಬಿರುಗಾಳಿ, ಸಪ್ತಪದಿ ತುಳಿಯುವುದ ಬಿಟ್ಟು ಓಡಿಹೋದ 36 ಜೋಡಿಗಳು – Kannada News | Rajasthan: Sudden Storm Disrupts Mass Wedding, Couples Rush to Safety

ಜೈಪುರ, ಏಪ್ರಿಲ್ 28: ಸಾಮೂಹಿಕ ವಿವಾಹ ಸಮಾರಂಭದ ವೇಳೆ ಬಿರುಗಾಳಿ ಬೀಸಿ ನವ ಜೋಡಿಗಳು ಹೆದರಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಬೇಸಿಗೆಯ ಆರಂಭದ ಬಿಸಿಲಿಗೆ ತತ್ತರಿಸಿದ್ದ ರಾಜಸ್ಥಾನದ ಟೋಂಕ್‌ನಲ್ಲಿ ಗುಡುಗು ಸಹಿತ ಮಳೆ ಎಲ್ಲರಿಗೂ ಸಂತೋಷ ನೀಡಬೇಕಿತ್ತು. ಆದರೆ, ಧಾಕಡ್ ಸಮುದಾಯ ಆಯೋಜಿಸಿದ್ದ 36 ಜೋಡಿಗಳ ಸಾಮೂಹಿಕ ವಿವಾಹದ ಮಂಟಪದಲ್ಲಿ ಬಿರುಗಾಳಿ, ಮಳೆ ಭೀಕರ ಅನಾಹುತವನ್ನೇ ಸೃಷ್ಟಿಸಿತ್ತು. ಹೂವಿನ ಅಲಂಕಾರ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದ ವಧು-ವರರು ಮತ್ತು ಅವರ ಸಂಬಂಧಿಕರಿಂದ ಮೈದಾನ ತುಂಬಿ ತುಳುಕುತ್ತಿತ್ತು. ಬಿರುಗಾಳಿಯ ವೇಗ ಎಷ್ಟಿತ್ತೆಂದರೆ, ಬೃಹತ್ ಟೆಂಟ್​ಗಳು ಕಿತ್ತು ಗಾಳಿಯಲ್ಲಿ ಹಾರತೊಡಗಿದ್ದವು. ಮದುವೆಗಾಗಿ ತಂದಿದ್ದ ಉಡುಗೊರೆಗಳು, ಪಾತ್ರೆ ಪದಾರ್ಥಗಳು ಮತ್ತು ಮಂಟಪದ ಸಾಮಗ್ರಿಗಳು ಹತ್ತಿರದ ಹೊಲಗಳಿಗೆ ಚೆಲ್ಲಾಪಿಲ್ಲಿಯಾಗಿ ಹೋದವು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

DC vs RCB, IPL 2026: ಆರ್‌ಸಿಬಿ ವಿರುದ್ಧದ ಅವಮಾನಕರ ಸೋಲಿನ ನಂತರ ಅಕ್ಷರ್ ಪಟೇಲ್​ರಿಂದ ದೊಡ್ಡ ಹೇಳಿಕೆ – Kannada News | Axar Patel Post Match Presentation statement after loss against Royal Challengers Bengaluru

ಬೆಂಗಳೂರು (ಏ. 28): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 39 ನೇ ಪಂದ್ಯದಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧ 75 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‌ಗಳಿಂದ ಸೋತಿತು. ಈ ಹೀನಾಯ ಸೋಲಿನ ನಂತರ, ಏನಾಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ನಾಯಕ ಅಕ್ಷರ್ ಪಟೇಲ್ ಹೇಳಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಟ್ಟ ಆರಂಭವನ್ನು ಪಡೆದು ಕೇವಲ 16.3 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ, ಆರ್‌ಸಿಬಿ ಕೇವಲ 6.3 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.

ಪಂದ್ಯ ಸೋತ ನಂತರ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, “ಏನಾಯಿತು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಆದರೆ ಕ್ರಿಕೆಟ್‌ನಲ್ಲಿ ನೀವು ಪ್ರತಿದಿನ ಜಾಗರೂಕರಾಗಿರಬೇಕು. ಮುಂದಿನ ಪಂದ್ಯಕ್ಕೆ ತಯಾರಿ ಮಾಡುವಾಗ, ನೀವು ಅದನ್ನು ಮರೆತು ಮುಂದುವರಿಯಬೇಕು ಎಂದು ಹೇಳಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ದೆಲ್ಲಿ

ಈ ಋತುವಿನಲ್ಲಿ ಡಿಸಿ ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿತು. ನಂತರ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದ ಸೋಲನ್ನು ಅನುಭವಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಕೊನೆಯ ಆರು ಪಂದ್ಯಗಳಲ್ಲಿ ಐದನ್ನು ಸೋತಿದೆ. ಜಿಟಿ ವಿರುದ್ಧದ ಪಂದ್ಯದ ನಂತರ ತಂಡದ ಅದೃಷ್ಟ ಬದಲಾಗಿದೆಯೇ ಎಂದು ಕೇಳಿದಾಗ, “ಹೌದು, ನಾನು ಇಂದಿನ ಬಗ್ಗೆ ಮಾತನಾಡುತ್ತಿದ್ದರೆ, ನೀವು ಹಾಗೆ ಭಾವಿಸಬಹುದು, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಾವು ಆ ಕ್ಯಾಚ್ ತೆಗೆದುಕೊಂಡಿದ್ದರೆ ಅಥವಾ ಆ ರನ್ ಪೂರ್ಣಗೊಳಿಸಿದ್ದರೆ, ಬಹುಶಃ ಆವೇಗ ಮುಂದುವರಿಯುತ್ತಿತ್ತು ಎಂದು ನೀವು ಭಾವಿಸಬಹುದು. ಆದರೆ ಈ ವಿಷಯಗಳು ಸಂಭವಿಸುತ್ತವೆ” ಎಂದು ಅಕ್ಷರ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಅಕ್ಷರ್, “ಐಪಿಎಲ್ ತುಂಬಾ ಕಠಿಣ ಪಂದ್ಯಾವಳಿ. ಎಲ್ಲವೂ ಸರಾಗವಾಗಿ ನಡೆಯುತ್ತದೆ ಎಂದು ನೀವು ಒಂದು ದಿನವೂ ಯೋಚಿಸಲು ಸಾಧ್ಯವಿಲ್ಲ. ನೀವು ಪ್ರತಿ ಬಾರಿಯೂ ಹೊರಗೆ ಬಂದು ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಹೌದು, ಆವೇಗ ಮುಖ್ಯ, ಆದರೆ ನೀವು ಇದು ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತಲೇ ಇರಬಾರದು. ನಿಮ್ಮ ಮುಂದೆ ಏನಿದೆ ಎಂಬುದರ ಮೇಲೆ ಗಮನಹರಿಸುವುದು ಉತ್ತಮ” ಎಂಬುದು ಅಕ್ಷರ್ ಮಾತು.

RCB Playoffs Scenario: ದಾಖಲೆಯ ಗೆಲುವಿನೊಂದಿಗೆ ಪ್ಲೇಆಫ್‌ಗೆ ಹತ್ತಿರವಾದ ಆರ್‌ಸಿಬಿ: ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಈ ಸೋಲಿನಿಂದ ದೆಹಲಿ ತಂಡ ಹೇಗೆ ಚೇತರಿಸಿಕೊಳ್ಳುತ್ತದೆ?

ಈ ಪಂದ್ಯದಿಂದ ಮುಂದುವರಿಯುವ ಬಗ್ಗೆ ಮಾತನಾಡಿದ ಅಕ್ಷರ್, “ನಾವು ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ನೀವು ನಕಾರಾತ್ಮಕವಾಗಿ ಯೋಚಿಸಿದರೆ, ನೀವು ಪಂದ್ಯವನ್ನು ಕಳೆದುಕೊಳ್ಳುತ್ತೀರಿ. ನೀವು ಸಕಾರಾತ್ಮಕವಾಗಿ ಯೋಚಿಸಿದರೆ, ನೀವು ಉತ್ತಮ ಪ್ರದರ್ಶನ ನೀಡುತ್ತೀರಿ. ಆದ್ದರಿಂದ ನಾವು ಇದನ್ನು ಮರೆತು ಮುಂದುವರಿಯಬೇಕು. ನಾನು ತಂಡಕ್ಕೂ ಅದನ್ನೇ ಹೇಳುತ್ತೇನೆ: ಒಂದು ಕೆಟ್ಟ ಪಂದ್ಯ ಎಂದರೆ ನೀವು ಪರಸ್ಪರ ಬೆರಳು ತೋರಿಸಲು ಅಥವಾ ಬ್ಯಾಟ್ಸ್‌ಮನ್‌ಗಳನ್ನು ದೂಷಿಸಲು ಪ್ರಾರಂಭಿಸಬೇಕು ಎಂದಲ್ಲ. ನಾವು ಸಕಾರಾತ್ಮಕವಾಗಿರಬೇಕು ಸರಿಯಾದ ಮನಸ್ಥಿತಿಯನ್ನು ಕಾಪಾಡಿಕೊಳ್ಳಬೇಕು.”

“ಆರ್​ಸಿಬಿ ತಂಡದಲ್ಲಿರುವವರು ವಿಶ್ವ ದರ್ಜೆಯ ಬೌಲರ್‌ಗಳು ಮತ್ತು ಚೆಂಡನ್ನು ಎಲ್ಲಿ ಬೇಕಾದರೂ ಸ್ವಿಂಗ್ ಮಾಡಬಹುದು; ಅವರು ಪ್ರತಿಯೊಂದು ಮೈದಾನದಲ್ಲೂ ಅದನ್ನು ಮಾಡಿದ್ದಾರೆ. ಆದರೆ ನಮ್ಮ ಆರಂಭಿಕರು ಅಥವಾ ನಮ್ಮ ಯಾವುದೇ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮೊದಲ ಕೆಲವು ಓವರ್‌ಗಳಲ್ಲಿ ಉತ್ತಮವಾಗಿ ಆಡಿದ್ದರೆ, ಅದು ವ್ಯತ್ಯಾಸವನ್ನುಂಟುಮಾಡಬಹುದಿತ್ತು. ಆದರೆ ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.” ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​​ಸಿಬಿ ಅದ್ಭುತವ ವಿನ್ ಬಳಿಕ ಕೊಹ್ಲಿ ನಗು ನೋಡಿ – Kannada News | After Fabolous Win Virat Kohli Sweet Smile Video Goes viral

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​​ಸಿಬಿ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ ಅದ್ಭುತ ಗೆಲುವು ಸಾಧಿಸಿದೆ. ಕೇವಲ 76 ರನ್​​ಗಳ ಟಾರ್ಗೆಟ್​​ ಅನ್ನು 6.3 ಓವರ್​​ಗಳಲ್ಲಿ ತಂಡ ಪೂರ್ಣಗೊಳಿಸಿದೆ. ವಿನ್ ಆದ ಬಳಿಕ ಕೊಹ್ಲಿ ಅವರ ಮುದ್ದಾದ ನಗುವಿನ ವಿಡಿಯೋ ವೈರಲ್ ಆಗಿದೆ. ಅವರು ಮೈದಾನದಲ್ಲಿ ತುಂಬಾನೇ ಅಗ್ರೆಷನ್ ತೋರಿಸುತ್ತಾರೆ. ಅದೇ ರೀತಿ ಅವರ ಮುದ್ದಾದ ನಗುವಿನ ವಿಡಿಯೋ ಕೂಡ ವೈರಲ್ ಆಗುತ್ತದೆ. ವಿಡಿಯೋ ಮೇಲ್ಭಾಗದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ, ಇಬ್ಬರು ಸಾವು, ಆರು ಮಂದಿಗೆ ಗಾಯ – Kannada News | Bus Fire in Hansi Turns Fatal, Multiple Injured

ಹರಿಯಾಣ, ಏಪ್ರಿಲ್ 28: ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ ಹೊತ್ತಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಿವಾನಿ-ಹನ್ಸಿ ರಸ್ತೆಯಲ್ಲಿ ಖಾಸಗಿ ಬಸ್‌ನಲ್ಲಿ ಮಿಲ್ಕ್‌ಪುರ್ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಬಸ್ ಭಿವಾನಿಯಿಂದ ಹನ್ಸಿ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.ಹೆಚ್ಚಿನ ಪ್ರಯಾಣಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಇಬ್ಬರು ಒಳಗೆ ಸಿಲುಕಿಕೊಂಡಿದ್ದಾರೆ. ಗಾಯಾಳುಗಳು ಪ್ರಸ್ತುತ ಹನ್ಸಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಸಿಲಿನ ಬೇಗೆಗೆ ಕೋಲ್ಡ್ ಬಿಯರ್​ಗೆ ಭಾರಿ ಬೇಡಿಕೆ! ಬೆಂಗಳೂರಿನಲ್ಲಿ ಸ್ಟಾಕ್ ಕೊರತೆ – Kannada News | Bengaluru Heatwave: Beer Sales Surge by 50 percent as Drinkers Ditch Hard Liquor; Supply Shortage Hits City

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರತಾಪ ಹೆಚ್ಚುತ್ತಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಈ ಬೇಸಿಗೆಯ ಹೊಡೆತಕ್ಕೆ ಮದ್ಯಪ್ರಿಯರು ಆಯ್ಕೆಯನ್ನು ಬದಲಿಸಿಕೊಂಡಿದ್ದು, ಹಾರ್ಡ್ ಡ್ರಿಂಕ್ಸ್ ಅಥವಾ ಮದ್ಯ (Liquor) ಬದಿಗಿಟ್ಟು ಚಿಲ್ಡ್ ಬಿಯರ್ (Chilled Beer) ಮೊರೆ ಹೋಗಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ (Beer Sales) ಶೇ 50 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ (Beer Supply Shortage) ಆಗದಿರುವುದು ಮದ್ಯ ಮಾರಾಟಗಾರರ ಆತಂಕಕ್ಕೆ ಕಾರಣವಾಗಿದೆ.

ಬಿಯರ್ ಹವಾ, ಐಎಂಎಲ್ ಡೌನ್

ಬೆಂಗಳೂರಿನಲ್ಲಿ ತಾಪಮಾನವು ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಜನರು ತಂಪು ಪಾನೀಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ವಿಚಾರಕ್ಕೆ ಬಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಐಎಂಎಲ್ (IML) ಅಥವಾ ಹಾರ್ಡ್ ಡ್ರಿಂಕ್ಸ್ ವ್ಯಾಪಾರವು ಶೇ 20 ರಷ್ಟು ಕುಸಿತ ಕಂಡಿದೆ. ಇದಕ್ಕೆ ವಿರುದ್ಧವಾಗಿ ಬಿಯರ್ ಮಾರಾಟ ದುಪ್ಪಟ್ಟಾಗಿದೆ. ಈ ಹಿಂದೆ ದಿನಕ್ಕೆ 100 ಬಿಯರ್ ಬಾಟಲಿಗಳು ಮಾರಾಟವಾಗುತ್ತಿದ್ದ ಮಳಿಗೆಗಳಲ್ಲಿ ಈಗ 200ಕ್ಕೂ ಹೆಚ್ಚು ಬಿಯರ್ ಬಾಟಲಿಗಳು ಖಾಲಿಯಾಗುತ್ತಿವೆ.

ಬಿಯರ್ ಪೂರೈಕೆಯಲ್ಲಿ ಸಮಸ್ಯೆ

ಬಿಯರ್ ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದರೂ, ಮದ್ಯದಂಗಡಿಗಳಿಗೆ ಸರಿಯಾದ ಸಮಯಕ್ಕೆ ಸ್ಟಾಕ್ ತಲುಪುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ. ‘ಬಿಸಿಲಿನಿಂದಾಗಿ ಜನರು ಹಾಟ್ ಡ್ರಿಂಕ್ಸ್ ಬಿಟ್ಟು ಬಿಯರ್ ಕೇಳುತ್ತಿದ್ದಾರೆ, ಆದರೆ ಸಪ್ಲೈ ಸರಿಯಾಗಿಲ್ಲದಿದ್ದರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ’ ಎಂದು ಮದ್ಯ ಮಾರಾಟಗಾರರಾದ ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ. ಇತ್ತ ಮದ್ಯಪ್ರಿಯರು ಕೂಡ ‘ಬಿಸಿಲಿನ ತಾಪಕ್ಕೆ ದಿನಕ್ಕೆರಡು ಚಿಲ್ಡ್ ಬಿಯರ್ ಕುಡಿದರಷ್ಟೇ ಸಮಾಧಾನ’ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ 5ನೇ ಬಾರಿ ಶಾಕ್: ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ!

ಒಟ್ಟಾರೆಯಾಗಿ, ಈ ಬಾರಿಯ ಕಡು ಬೇಸಿಗೆಯು ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದರೂ, ರಾಜ್ಯ ಸರ್ಕಾರದ ಖಜಾನೆಗೆ ಮಾತ್ರ ಬಿಯರ್ ಮಾರಾಟದ ಮೂಲಕ ಭರ್ಜರಿ ಆದಾಯವನ್ನು ತಂದುಕೊಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link