Headlines

Bangaluru rain: ಬೆಂಗಳೂರಲ್ಲಿ ಧಾರಾಕಾರ ಮಳೆ; ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ! – Kannada News | Bengaluru Heavy Rain: Roads Turn Into Lakes, Motorists Struggle Amid Severe Waterlogging

ಬೆಂಗಳೂರು, ಜೂನ್​​ 14: ನಗರದಲ್ಲಿ (bengaluru) ಕಳೆದೆರಡು ದಿನಗಳಿಂದ ಮಳೆ (Rain) ಚುರುಕುಗೊಂಡಿದೆ. ನಿನ್ನೆ ಸಂಜೆಯೂ ಮಳೆ ದರ್ಶನವಾಗಿದ್ದು, ಇಂದು ಮತ್ತೆ ಮಳೆ ಎಂಟ್ರಿಕೊಟ್ಟಿದೆ. ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಆರಂಭವಾಗಿದೆ. ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ
  • ಮಳೆಯಿಂದ ಟ್ರಾಫಿಕ್ ಜಾಮ್​, ವಾಹನ ಸವಾರರ ಪರದಾಟ
  • ಧಾರಾಕಾರ ಮಳೆಯಿಂದ ಕೆರೆಯಂತಾದ ಹಲವು ರಸ್ತೆಗಳು

ಎಲ್ಲೆಲ್ಲಿ ಮಳೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಶುರುವಾಗಿದೆ. ನಗರದ ಮೆಜೆಸ್ಟಿಕ್, ಟೌನ್ ಹಾಲ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಶಿವಾಜಿನಗರ, ಫ್ರೀಡಂಪಾರ್ಕ್, ಗಾಂಧಿನಗರ, ಚಾಮರಾಜಪೇಟೆ, ಕಾರ್ಪೊರೇಷನ್, ಚಿಕ್ಕಪೇಟೆ, ರಾಜಾಜಿನಗರ, ವಿಜಯನಗರ, ಶಾಂತಿನಗರ ಹಾಗೂ ಮಡಿವಾಳ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂಗಾರು ಚುರುಕು; ಯೆಲ್ಲೋ ಅಲರ್ಟ್​ ಘೋಷಣೆ

ಮಧ್ಯಾಹ್ನವಿದ್ದ ಜಿಟಿ ಜಿಟಿ ಮಳೆ, ಸಂಜೆ ಆಗುತ್ತಿದ್ದಂತೆ ಬಿರುಸು ಪಡೆದುಕೊಂಡಿದ್ದು ಮಹಾನಗರವನ್ನು ಮತ್ತಷ್ಟು ಕೂಲ್ ಮಾಡಿದೆ. ಆದರೆ, ಈ ದಿಢೀರ್ ಮಳೆಯಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೆರೆಯಂತೆ ತುಂಬಿ ತುಳುಕುತ್ತಿರುವ ರಸ್ತೆಗಳು

ಇನ್ನು ಧಾರಾಕಾರ ಮಳೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿವೆ. ರಸ್ತೆಗಳ ಮೇಲೆ ಮೊಣಕಾಲುದ್ದ ನೀರು ನಿಂತಿರುವುದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ದಿಢೀರ್ ಮಳೆಗೆ ಸಿಲುಕಿದ ನೂರಾರು ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವಾರರು ಕೆ.ಆರ್. ಮಾರ್ಕೆಟ್ ಫ್ಲೈಓವರ್ ಕೆಳಗೆ ನಿಂತು ಆಶ್ರಯ ಪಡೆದರು. ಜನಸಾಮಾನ್ಯರು ಛತ್ರಿ ಹಿಡಿದು ಮಳೆಯಲ್ಲೇ ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಮಳೆಯಿಂದಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *