Headlines

Bengaluru Air Quality: ಬೆಂಗಳೂರಿಗರೇ ನೆಮ್ಮದಿಯಾಗಿ ಉಸಿರಾಡಿ! ರಾಜ್ಯದ ವಿವಿಧೆಡೆ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ – Kannada News | Karnataka Air Quality Today: Bengaluru and Major Cities AQI Report

ರಾಜ್ಯದ ವಿವಿಧೆಡೆ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ
Image Credit source: The economic times

ಬೆಂಗಳೂರು, ಜುಲೈ 22: ಮುಂಗಾರು ಮಳೆ ಶುರುವಾಗುವ ಮೊದಲು ಅತ್ಯಂತ ಕಳಪೆ ವಾಯು ಗುಣಮಟ್ಟ (AQI) ನೋಡಿದ್ದ ರಾಜ್ಯ ಇದೀಗ ಕ್ರಮೇಣವಾಗಿ ಸುಧಾರಿಸುತ್ತಿದೆ. ಮಳೆಯ ಕಾರಣದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಕ್ಯೂಐ ಉತ್ತಮವಾಗಿದೆ. ತಾವರಣದಲ್ಲಿದ್ದ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗಿದ್ದು, ಜನಸಾಮಾನ್ಯರಿಗೆ ನಿಟ್ಟುಸಿರು ಬಿಡುವಂತಹ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಹೇಗಿದೆ?

ಇಂದು ಬೆಂಗಳೂರು ನಗರದ ಸರಾಸರಿ AQI ಮಟ್ಟವು 50 ರಿಂದ 59 ರ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಇದನ್ನು ವಾಯು ಗುಣಮಟ್ಟದ ಮಾನದಂಡಗಳ ಪ್ರಕಾರ ಸಾಧಾರಣ ವಿಭಾಗದಲ್ಲಿ ವರ್ಗೀಕರಿಸಲಾಗಿದೆ. ನಗರದಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಮತ್ತು PM10 ಮಟ್ಟವು ಹತೋಟಿಯಲ್ಲಿದ್ದು, ಗಾಳಿಯಲ್ಲಿನ ಆಮ್ಲಜನಕದ ಸಾಂದ್ರತೆ ಉತ್ತಮವಾಗಿದೆ. ಜಯನಗರ, ಬಸವನಗುಡಿ, ಹಾಗೂ ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಗಾಳಿಯ ಶುದ್ಧತೆ ‘ಉತ್ತಮ’ (Good) ಹಂತದಲ್ಲಿದ್ದರೆ, ಬೊಮ್ಮನಹಳ್ಳಿ ಮತ್ತು ಔಟರ್ ರಿಂಗ್ ರೋಡ್ ಭಾಗಗಳಲ್ಲಿ ವಾಹನ ಸಂಚಾರ ದಟ್ಟಣೆಯಿಂದಾಗಿ AQI ಪ್ರಮಾಣ ತುಸು ಹೆಚ್ಚಾಗಿ ದಾಖಲಾಗಿದೆ.

ರಾಜ್ಯದ ಇತರ ನಗರಗಳ ವಾಯು ಪರಿಸ್ಥಿತಿ

ಕರ್ನಾಟಕದ ಇತರ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲೂ ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ.

  • ಚಿಕ್ಕಮಗಳೂರು ಮತ್ತು ಬೆಳಗಾವಿ: 35 – 43 (Good)
  • ಮೈಸೂರು: 40 – 48: (Good)
  • ಹುಬ್ಬಳ್ಳಿ – ಧಾರವಾಡ: 50 – 58 (Moderate)
  • ಮಂಗಳೂರು ಮತ್ತು ಬಳ್ಳಾರಿ: 52 – 62 (Moderate)

ನಗರದಲ್ಲಿ ಗಾಳಿಯ ಗುಣಮಟ್ಟ ಒಟ್ಟಾರೆಯಾಗಿ ತೃಪ್ತಿಕರವಾಗಿದ್ದರೂ, ಆಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವ ಸೂಕ್ಷ್ಮ ಆರೋಗ್ಯದ ವ್ಯಕ್ತಿಗಳು ಮುಂಜಾನೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುವ ವೇಳೆಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *