Bengaluru Air Quality: ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ದಿಢೀರ್ ಸುಧಾರಣೆ; ಮಂಗಳೂರಿನ ವಾಯು ಗುಣಮಟ್ಟ ಪಾತಾಳಕ್ಕೆ! – Kannada News | Bangalore Air Pollution Crisis: Bengaluru Air quality is slightly better, Mangaluru’s AQI is unhealthy

ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ದಿಢೀರ್ ಸುಧಾರಣೆ

ಬೆಂಗಳೂರು, ಫೆಬ್ರುವರಿ 06: ಬೆಂಗಳೂರಿನ ವಾಯು ಗುಣಮಟ್ಟ (Bengaluru Air Quality) ದಿನಕ್ಕೊಂದು ರೀತಿ ಬದಲಾಗುತ್ತಿದೆ. ಸಧ್ಯಕ್ಕೆ ನಗರದ ಏರ್ ಕ್ವಾಲಿಟಿಯಲ್ಲಿ ಏಕಾಏಕಿ ಸುಧಾರಣೆ ಕಂದುಬಂದಿದೆ. ಇದರ ಬದಲಾಗಿ ಮಂಗಳೂರಿನ ವಾಯು ಗುಣಮಟ್ಟ 200ರ ಗಡಿ ತಲುಪಿದ್ದು, ಆತಂಕ ಮೂಡಿಸಿದೆ. ಜೊತೆಗೆ ಬಳ್ಳಾರಿ ಮತ್ತು ಶಿವಮೊಗ್ಗದ ಪರಿಸ್ಥಿತಿಯೂ ಹದಗೆಟ್ಟಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 137ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಮೂರು ನಾಲ್ಕು ದಿನಗಳ ಹಿಂದೆ 100ರ ಆಸು ಪಾಸಿದ್ದ ಮಂಗಳೂರಿನ AQI, ಇಂದು 199ಕ್ಕೆ ತಲುಪಿದ್ದು ಆಶ್ಚರ್ಯ ಉಂಟು ಮಾಡಿದೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ಸೂಕ್ಷ್ಮಾಣುಗಳಿಂದಲೂ ಜೀವಕ್ಕೆ ಹಾನಿ

PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –137
  • ಮಂಗಳೂರು-199
  • ಮೈಸೂರು –144
  • ಬೆಳಗಾವಿ – 135
  • ಕಲಬುರ್ಗಿ-152
  • ಶಿವಮೊಗ್ಗ – 166
  • ಬಳ್ಳಾರಿ – 179
  • ಹುಬ್ಬಳ್ಳಿ- 97
  • ಉಡುಪಿ –164
  • ವಿಜಯಪುರ –154

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *