
ಬೆಂಗಳೂರು, ಮಾರ್ಚ್ 29: ಬಿರು ಬೇಸಿಗೆಯಲ್ಲೇ ಮಳೆ ಅಬ್ಬರಿಸುತ್ತಿದೆ. ರಾಜ್ಯದ ಇಂದು ಕೂಡ ಮಳೆ ಸುರಿದಿದ್ದು, ಮಳೆರಾಯನ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಕೋಲಾರ, ಚಿಕ್ಕಮಗಳೂರು, ಹಾವೇರಿಯಲ್ಲಿ ಮಳೆ ಆಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಧಾರಾಕಾರ ಮಳೆ ಸುರಿದಿದ್ದು ವಾಹನ ಸವಾರರು ಪರದಾಡಿದರು. ದಿಢೀರ್ ಮಳೆಗೆ ಸಿಟಿಮಂದಿ ಹಿಡಿಶಾಪ ಹಾಕಿದ್ದಾರೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.