Brain Teaser: ನೀವು ಗಣಿತದಲ್ಲಿ ಪಂಟರಾಗಿದ್ರೆ ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ

Brain Teaser: ನೀವು ಗಣಿತದಲ್ಲಿ ಪಂಟರಾಗಿದ್ರೆ ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ

ಈಗಂತೂ ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಟ್ರೆಂಡಿಂಗ್‌ನಲ್ಲಿವೆ. ಒಂದಕ್ಕಿಂತ ಒಂದು ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿದ್ದು, ಬಿಡಿಸುವುದು ಕಷ್ಟಕರ. ಆದರೆ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಇಂತಹ ಆಟಗಳನ್ನು ಆಡುವ ಮಜಾನೇ ಬೇರೆ. ಇದೀಗ ಗಣಿತದ ಲೆಕ್ಕವನ್ನು ನೀಡಲಾಗಿದ್ದು, ನೀವು ಲೆಕ್ಕ ಬಿಡಿಸೋದರಲ್ಲಿ ಪಂಟರಾಗಿದ್ದರೆ ಈ ಒಗಟು ಬಿಡಿಸಿ ಸರಿಯಾದ ಉತ್ತರ ಹೇಳಿ.

ಒಗಟಿನ ಪ್ರಶ್ನೆ ಹೀಗಿದೆ ನೋಡಿ

ನೋಡೋದಕ್ಕೆ ಸುಲಭ ಎನಿಸಿದರೂ ಉತ್ತರ ಹುಡುಕುವ ಅಷ್ಟು ಸುಲಭವಲ್ಲ. ಈ ಬ್ರೈನ್ ಟೀಸರ್ ಒಗಟಿನ ಪ್ರಶ್ನೆ ತಲೆಗೆ ಹುಳ ಬಿಟ್ಟಂತಿದೆ. 2+3 = 10, 8+4= 96, 7+2 = 63, 6+5 = 66 ಮತ್ತು 9+5 = ಎಷ್ಟು ಎಂದು ಕಂಡು ಹಿಡಿಯುವುದೇ ಇಲ್ಲಿರುವ ಸವಾಲು. ಆದರೆ ಈ ಲೆಕ್ಕವನ್ನು ಐದು ಸೆಕೆಂಡುಗಳಲ್ಲಿ ಬಿಡಿಸುವ ಸವಾಲು ನೀಡಲಾಗಿದೆ. ನೀವು ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಈಗ ಆರಂಭವಾಗಿದ್ದು, ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್‌; ಈ ಚಿತ್ರದಲ್ಲಿ ಮರೆಮಾಡಲಾಗಿರುವ ಕಪ್ ಕೇಕ್ ಗುರುತಿಸಬಲ್ಲಿರಾ

ಈ ಲೆಕ್ಕ ಬಿಡಿಸಲು ಸಾಧ್ಯವಾಯಿತೇ?

ಮೆದುಳಿಗೆ ಕೈ ಹಾಕುವಂತಿರುವ ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ, ಗಣಿತದಲ್ಲಿ ಪರಿಣಿತರಾಗಿದ್ದವರೂ ಮಾತ್ರ ಸಲೀಸಾಗಿ ಈ ಲೆಕ್ಕ ಬಿಡಿಸುತ್ತಾರೆ. 2+3 = 10, 8+4 = 96, 7+2 = 63, 6+5 = 66 ಮತ್ತು 9+5 =? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ಲವೇ. ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಲೆಕ್ಕದ ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. 2+2=10 ( 2*2+3*2) , 8+4=96 ( 8*8+4*8), 9+5 = (9*9+5*9 ) = 126 ಈ ಲೆಕ್ಕವನ್ನು ಬಿಡಿಸುವ ರೀತಿ ಹೀಗಿದೆ. ಹೀಗಾಗಿ ಈ ಟ್ರಿಕ್ಕಿ ಲೆಕ್ಕದ ಉತ್ತರ 126 ಆಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *