ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್ನಲ್ಲಿ ಪ್ರಹ್ಲಾದ ಜೋಷಿ – Kannada News | Indian economy accelerated while world slowed down, says Pralhad Joshi
ನವದೆಹಲಿ, ಜನವರಿ 20: ಜಗತ್ತಿನ ಆರ್ಥಿಕತೆ ಹಿನ್ನಡೆ ಅನುಭವಿಸುತ್ತಿರುವ ಹೊತ್ತಿನಲ್ಲೂ ಭಾರತವು ತನ್ನ ಬೆಳವಣಿಗೆಯ ವೇಗ ಹೆಚ್ಚಿಸಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ. ಸ್ವಿಟ್ಜರ್ಲ್ಯಾಂಡ್ನ ಡಾವೋಸ್ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ (WEF Summit 2026, Davos) ಪ್ರಹ್ಲಾದ್ ಜೋಷಿ ಮಾತನಾಡುತ್ತಾ, ಭಾರತದ ಆರ್ಥಿಕ ವ್ಯವಸ್ಥೆ ಸುದೃಢವಾಗಿರುವುದನ್ನು ಎತ್ತಿತೋರಿಸಿದ್ದಾರೆ. ‘ಜಾಗತಿಕ ಸರಬರಾಜು ಸರಪಳಿಗಳಿಗೆ ಧಕ್ಕೆಯಾದಾಗ ಭಾರತವು ದೂರದೃಷ್ಟಿಯೊಂದಿಗೆ ತನ್ನ ಅಡಿಪಾಯಗಳನ್ನು ಭದ್ರಗೊಳಿಸುವ ಮೂಲಕ ಮತ್ತು ತನ್ನ…