Headlines

Video: ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಲಿನ ಕ್ಯಾನ್ ತಲೆಗೆ ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ – Kannada News | Milk Can Mishap: Man in Rajasthan Gets Head Stuck Inside Container

ಅಲ್ವಾರ್, ಏಪ್ರಿಲ್ 26: ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ತರಹೇವಾರಿ ಹರಸಾಹಸ ಮಾಡುವುದು ಸಾಮಾನ್ಯ. ಆದರೆ, ಅಲ್ವಾರ್‌ನ ಮಾಧೋಗಢ ಗ್ರಾಮದ ಕಲೂರಾಮ್ ರೆಬಾರಿ ಎಂಬ ವ್ಯಕ್ತಿ ಮಾಡಿದ ಉಪಾಯ ಮಾತ್ರ ಆತನನ್ನೇ ಸಂಕಷ್ಟಕ್ಕೆ ದೂಡಿತ್ತು. ತಲೆಯ ಮೇಲೆ ಸಿಲುಕಿಕೊಂಡ ಹಾಲಿನ ಕ್ಯಾನ್‌ನಿಂದಾಗಿ ಎರಡು ಗಂಟೆಗಳ ಕಾಲ ಪರದಾಡಿದ ಘಟನೆ ಈಗ ಬೆಳಕಿಗೆ ಬಂದಿದೆ. ಏಪ್ರಿಲ್ 24ರಂದು ಕಲೂರಾಮ್ ರೆಬಾರಿ ಗೋಧಿ ವಿತರಿಸಲು ಹೋಗುತ್ತಿದ್ದರು. ಅಂದು ಬಿಸಿಲು ವಿಪರೀತವಾಗಿದ್ದರಿಂದ, ತಲೆಗೆ ಬಿಸಿ ತಗುಲಬಾರದೆಂದು ತಮಾಷೆಗಾಗಿ ಅಥವಾ ರಕ್ಷಣೆಗಾಗಿ…

Read More

IPL 2026: ಒಂದೇ ದಿನ ಬರೋಬ್ಬರಿ 16 ಕ್ಯಾಚ್​ಗಳು ಡ್ರಾಪ್..! – Kannada News | IPL 2026: A Comedy of Errors on the Field

ಕ್ರಿಕೆಟ್‌ನಲ್ಲಿ “ಕ್ಯಾಚಸ್ ವಿನ್ ಮ್ಯಾಚಸ್” (Catches win matches) ಎಂಬ ಮಾತಿದೆ. ಈ ಮಾತನ್ನು ಏಪ್ರಿಲ್ 25 ರಂದು ನಡೆದ ಎರಡು ಪಂದ್ಯಗಳು ಅಕ್ಷರಶಃ ನಿಜವಾಗಿಸಿದ್ದಾರೆ. ಈ ಎರಡೂ ಮ್ಯಾಚ್​ಗಳಲ್ಲಿ ಫೀಲ್ಡರ್‌ಗಳು ಮಾಡಿದ ಎಡವಟ್ಟುಗಳಿಂದ ಪಂದ್ಯದ ಫಲಿತಾಂಶ ಬದಲಾಗಿದೆ. ಹೀಗೆ ಇಡೀ ಪಂದ್ಯದ ಗತಿಯನ್ನೇ ಬದಲಿಸಿದ ಆ “ಕೈಚೆಲ್ಲಿದ ಕ್ಯಾಚ್​ಗಳ” ಸಂಪೂರ್ಣ ವಿವರ ಇಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ಪಂದ್ಯ: ಈ ಪಂದ್ಯದಲ್ಲಿ ಪಂಜಾಬ್ ತಂಡ 265 ರನ್‌ಗಳ ಬೃಹತ್ ಗುರಿಯನ್ನು…

Read More

‘ಟಾಕ್ಸಿಕ್’ ಟೀಸರ್​ನಲ್ಲಿ ಅಂಥ ದೃಶ್ಯ ಇದೆ ಎಂದು ಟೀಕಿಸಿದವರಿಗೆ ಉತ್ತರ ನೀಡಿದ ಯಶ್ – Kannada News | Yash talks about bold scenes in Toxic teaser and Geethu Mohandas in CinemaCon

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಯಶ್ ಅವರು ವಿದೇಶದಲ್ಲಿ ಸಂದರ್ಶನ ನೀಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ‘ಟಾಕ್ಸಿಕ್’ (Toxic) ಚಿತ್ರದ ಟೀಸರ್​ನಲ್ಲಿ ಇರುವ ಕೆಲವು ಬೋಲ್ಡ್ ದೃಶ್ಯಗಳ ಬಗ್ಗೆ ಜನರಿಂದ ವ್ಯಕ್ತವಾದ ಟೀಕೆಗಳಿಗೆ ಯಶ್ ಈಗ ಉತ್ತರ ನೀಡಿದ್ದಾರೆ. ಆ ಮೂಲಕ ಅವರು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಅಮೆರಿಕದಲ್ಲಿ ನಡೆದ ‘ಸಿನಿಮಾಕಾನ್’ ಈವೆಂಟ್​ನಲ್ಲಿ ಪಾಲ್ಗೊಂಡಿದ್ದ…

Read More

70 ವರ್ಷದ ವ್ಯಕ್ತಿಯಿಂದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ – Kannada News | Gujarat Case: Elderly Man Held Over Alleged Assault of Disabled Woman

ಮಹಿಸಾಗರ್, ಏಪ್ರಿಲ್ 26: ಸಂಬಂಧಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಘಟನೆಯೊಂದು ಜಿಲ್ಲೆಯ ಲುನಾವಾಡ ಪಟ್ಟಣದಲ್ಲಿ ವರದಿಯಾಗಿದೆ. 26 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಆಕೆಯ 70 ವರ್ಷದ ಸಂಬಂಧಿಕನೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಯು ಸಂತ್ರಸ್ತೆಯ ನೆರೆಮನೆಯವನಾಗಿದ್ದು, ಸಂಬಂಧದಲ್ಲಿ ಚಿಕ್ಕಪ್ಪ ಅಥವಾ ದೊಡ್ಡಪ್ಪನಾಗಬೇಕಿತ್ತು. ಘಟನೆ ನಡೆದ ದಿನ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಆರೋಪಿ, ತನ್ನ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾನೆ. ನಂತರ ಆಕೆಯನ್ನು…

Read More

ಬರೋಬ್ಬರಿ 986 ರನ್​ಗಳು… ಐಪಿಎಲ್​ನಲ್ಲಿ ಹೊಸ ಇತಿಹಾಸ – Kannada News | 983 Runs, One Day: IPL Hits a New High

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ಪಂಜಾಬ್ ಕಿಂಗ್ಸ್ (PBKS)​, ಡೆಲ್ಲಿ ಕ್ಯಾಪಿಟಲ್ಸ್ (DC), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು. ಅದು ಸಹ ರನ್​ ರಾಶಿ ಪೇರಿಸುವ ಮೂಲಕ ಎಂಬುದು ವಿಶೇಷ. Source link

Read More

Karun Nair: ಕರುಣ್ ನಾಯರ್​ನಿಂದ ಒಂದಲ್ಲ ಎರಡು ಕ್ಯಾಚ್ ಡ್ರಾಪ್: ಕೆಎಲ್ ರಾಹುಲ್ ಸ್ಫೋಟಕ ಆಟ ವ್ಯರ್ಥ – Kannada News | Karun Nair dropped two catches of Shreyas Iyer KL Rahul’s explosive batting wasted

ಬೆಂಗಳೂರು (ಏ. 26): ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 35ನೇ ಪಂದ್ಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಪಂಜಾಬ್ ಕಿಂಗ್ಸ್ ತಂಡವು 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿತು, ಆದರೆ ಈ ಸೋಲು ಡೆಲ್ಲಿ ಕ್ಯಾಪಿಟಲ್ಸ್‌ನ ಗಾಯಗಳಿಗೆ ಉಪ್ಪು ಸವರಿತು. ಇಲ್ಲಿ ಇಡೀ ಪಂದ್ಯದ ಗತಿಯನ್ನು ಬದಲಾಯಿಸಿದ್ದು ಬ್ಯಾಟಿಂಗ್ ಅಲ್ಲ, ಡೆಲ್ಲಿಯ ಕಳಪೆ ಫೀಲ್ಡಿಂಗ್. ಕರುಣ್ ನಾಯರ್ (Karun Nair) ಈ ಪಂದ್ಯದಲ್ಲಿ ಎರಡು ದೊಡ್ಡ…

Read More

ದೆಹಲಿ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ – Kannada News | Man Found Dead Inside Ladies’ Washroom at Delhi Metro Station

ನವದೆಹಲಿ, ಏಪ್ರಿಲ್ 26: ದೆಹಲಿಯ ಇಂದರ್​ಲೋಕ್ ಮೆಟ್ರೋ(Metro) ನಿಲ್ದಾಣದಲ್ಲಿ ಮಹಿಳಾ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಏಪ್ರಿಲ್ 25ರ ಶನಿವಾರ ಸಂಜೆ ಸುಮಾರು 5.33ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಮೆಟ್ರೋ ನಿಲ್ದಾಣದ ಮಹಿಳೆಯರ ಶೌಚಾಲಯವು ಒಳಗಿನಿಂದ ಲಾಕ್ ಆಗಿದ್ದು, ಅಲ್ಲಿಂದ ತೀವ್ರವಾದ ದುರ್ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಶೌಚಾಲಯದ ಬಾಗಿಲನ್ನು ಒಡೆದು ಒಳಪ್ರವೇಶಿಸಿದೆ. ಬಾಗಿಲು ಒಡೆದಾಗ ಪೊಲೀಸರಿಗೆ ಆಘಾತ ಕಾದಿತ್ತು. ಶೌಚಾಲಯದೊಳಗೆ…

Read More

Bengaluru Air Quality: ಬಳ್ಳಾರಿಯಲ್ಲಿ ಮತ್ತದೇ ಸ್ಥಿತಿ! ಕಳಪೆ ಮಟ್ಟಕ್ಕಿಳೀತು ಏರ್ ಕ್ವಾಲಿಟಿ – Kannada News | Bangalore Air Pollution Crisis: Ballari Air quality gets worse, Bengaluru AQI is slightly better

ಳ್ಳಾರಿಯಲ್ಲಿ ಮತ್ತದೇ ಸ್ಥಿತಿ! ಕಳಪೆ ಮಟ್ಟಕ್ಕಿಳೀತು ಏರ್ ಕ್ವಾಲಿಟಿ Image Credit source: google Gemini ಬೆಂಗಳೂರು, ಏಪ್ರಿಲ್ 26: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಹಲವು ದಿನಗಳಿಂದ ಸುಧಾರಣೆ ಕಂಡಿತ್ತು. ಆದರೆ ಇಂದು ಮೊದಲಿನಂತೆಯೇ ಬಳ್ಳಾರಿಯ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಜೊತೆಗೆ ಉಡುಪಿಯ ಗಾಳಿಯೂ ಉಸಿರಾಟಕ್ಕೆ ಯೋಗ್ಯವಲ್ಲದ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು…

Read More

ಚಾರ್ಮಿನಾರ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ, ತೆಲಂಗಾಣದ ನಾಮಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಘಟನೆ – Kannada News | Blaze Erupts in Charminar Express Coach Near Telangana Station

ಭುವನಗಿರಿ, ಏಪ್ರಿಲ್ 26: ತೆಲಂಗಾಣದ ಅಲೆರ್ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ಚಾರ್ಮಿನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ(Fire) ಕಾಣಿಸಿಕೊಂಡಿದೆ. ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆಯೇ ಬೋಗಿಯೊಂದರಿಂದ ಹೊಗೆ ಹೊರಬಂದಿದ್ದು, ಪ್ರಯಾಣಿಕರು ಭೀತಿಯಿಂದ ಹೊರಗೆ ಓಡಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ರೈಲಿನ ಎಸ್‌5 (S5) ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ರೈಲು ಅಲೆರ್ ನಿಲ್ದಾಣದ ವ್ಯಾಪ್ತಿಯಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು, ತಕ್ಷಣವೇ ಎಚ್ಚೆತ್ತ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಬೋಗಿಯಲ್ಲಿದ್ದ…

Read More

ಬೆಂಗಳೂರಿಗರೇ ಗಮನಿಸಿ: TCS ಮ್ಯಾರಥಾನ್​​ ಹಿನ್ನೆಲೆ ಈ ಪ್ರಮುಖ ರಸ್ತೆಗಳ ಸಂಚಾರದಲ್ಲಿಂದು ಭಾರಿ ಬದಲಾವಣೆ – Kannada News | Bengaluru Traffic Alert: Road Closures and Diversions for TCS 10K Marathon Today

ಬೆಂಗಳೂರು, ಏಪ್ರಿಲ್​​ 26: ನಗರದಲ್ಲಿ ಇಂದು ನಡೆಯುತ್ತಿರುವ TCS ವರ್ಲ್ಡ್ 10K ಮ್ಯಾರಥಾನ್​​ನಲ್ಲಿ 30,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇರುವ ಹಿನ್ನೆಲೆ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ವಿವಿಧ ರಸ್ತೆಗಳಲ್ಲಿ ಸಂಚಾರವನ್ನು ನಿರ್ಭಂಧಿಸಲಾಗಿದೆ. ಮಾರ್ಗ ಬದಲಾವಣೆ ಜೊತೆಎಗೆ ನೋ-ಪಾರ್ಕಿಂಗ್ ನಿಯಮಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಜಾರಿಗೊಳಿಸಿದ್ದಾರೆ. ಮ್ಯಾರಥಾನ್ RSAOI ಮೈದಾನದಿಂದ ಆರಂಭವಾಗಿ ಅಲ್ಲಿಯೇ ಮುಕ್ತಾಯವಾಗಲಿದೆ. ಕಬ್ಬನ್ ರಸ್ತೆ, ಕಾಮರಾಜ್ ರಸ್ತೆ, ರಾಜಭವನ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆ ಮಾರ್ಗಗಳಲ್ಲಿ ಮ್ಯಾರಥಾನ್​​ ನಡೆಯಲಿದ್ದು, ಹಲಸೂರು, ಫ್ರೇಸರ್…

Read More